ಎಲ್ಲ ಬಸಿರುಗಳು ಸಾಮಾನ್ಯವಾಗಿ ಇರಬೇಕಾದ ಒಂಬತ್ತು ತಿಂಗಳು( ನಲವತ್ತು ವಾರಗಳು) ಮಗುವಿಗೆ ಜನ್ಮ ನೀಡುವ ಮೊದಲು. ಪೂರೈಸುವುದಿಲ್ಲ. ಕೆಲವು ಸಲ ಗರ್ಭಧಾರಣೆಯು ತನಗೆ ತಾನೆ ಕೊನೆಯಾಗುತ್ತದೆ. ಅದನ್ನೆ ಸ್ವಯಂ ಗರ್ಭಸ್ರಾವ ಎನ್ನುವರು. ಈ ರೀತಿಯ ಗರ್ಭಸ್ರಾವವು ಸಾಮಾನ್ಯವಾಗಿ ೨೬ನೇ ವಾರದೊಳಗೆ ಆಗುವುದು. ಆಗ ಮಗು ಬದುಕುವ ಅವಕಾಶ ಬಹು ಕಡಿಮೆ. ಭ್ರೂಣವು ಬೆಳವಣಿಗೆಯನ್ನು ಮುಂದುವರಿಸಿದರೆ ಕೆಲವು ಸಲ ಶಸ್ತ್ರಕ್ರಿಯೆಯಿಂದ ಅದನ್ನು ತೆಗೆದು ಹಾಕಬೇಕಾಗಬಹುದು. ಆಗ ಅದನ್ನು ಪ್ರಚೋದಿತ ಗರ್ಭಪಾತ ಎನ್ನುವರು.
ಪ್ರತಿ ನೂರು ಗರ್ಭಧಾರಣೆಯಲ್ಲಿ ಹತ್ತರಿಂದ ಇಪ್ಪತ್ತರವರೆಗೆ ಗರ್ಭಪಾತದಲ್ಲಿ ಕೊನೆಳ್ಳುವವು. ಮಗುವು ಉಳಿಯಲು ಅವಕಾಶವಿಲ್ಲದಾಗ ಗರ್ಭಪಾತ ಅನಿವಾರ್ಯ. ಬಹಳಷ್ಟು ಗರ್ಭಪಾತಗಳು ಬಸಿರಿನ ಹನ್ನೆರಡು ವಾರದಲ್ಲೆ ಅಗುತ್ತವೆ.
ಗರ್ಭಸ್ರಾವಕ್ಕೆ ಕಾರಣ ವೇನು? ಗರ್ಭಸ್ರಾವಕ್ಕೆ ಸರ್ವೆ ಸಾಮಾನ್ಯ ಕಾರಣವೆಂದರೆ ಫಲಿತ ಅಂಡಾಣು ತೊಂದರೆಗೆ ಈಡಾಗಿರುವುದು. ಆ ಅಂಡಾಣು ಹಾಗೆ ಉಳಿದು ಅಭಿವೃದ್ದಿಯಾದರೆ ತೀವ್ರ ಅಸಹಜತೆ ಹೊಂದಿದ ಮಗು ಜನಿಸಬಹುದು. ಅದಕ್ಕೆ ವಿಕೃತ ಅಂಗಾಂಗಗಳು ಇರಬಹುದು. ಇಲ್ಲವೆ ಕೆಲವು ಅಂಗಗಳೇ ಇಲ್ಲದಿರಬಹುದು. ಆದ್ದರಿಂದ ಗರ್ಭಸ್ರಾವವು ವಿಕೃತ ಮಗುವಿನ ಜನನವನ್ನು ತಡೆಗಟ್ಟುವ ನೈಸರ್ಗಿಕ ವಿಧಾನವಾಗಿದೆ ಎನ್ನಬಹುದು.
ಮಹಿಳೆಯು ತೀವ್ರವಾದ ಕಾಯಿಲೆಯಿಂದ ನರಳುತ್ತಿದ್ದರೆ, ಮಲೇರಿಯಾ, ಸಿಫಲಿಸ್ನಂತಹ ರೋಗ ಪೀಡಿತಳಾಗಿದ್ದರೆ, ಜನನಾಂಗದ ದೊಷಹೊಂದಿದ್ದರೆ ಗರ್ಭಸ್ರಾವ ಆಗಬಹುದು. ಫಲಿತ ಅಂಡಾಣುವು ಗರ್ಭಾಶಯದೊಳಗೆ ಹೋಗದೆ ಬೇರೆ ಎಲ್ಲಾದರೂ ಹೋದರೆ, ಸಾಧಾರಣವಾಗಿ ಫೆಲೋಪಿಯನ್ ನಾಳಗಳಲ್ಲೇ ನೆಲಸಿದರೆ ಅಂಥಹ ಸಂದರ್ಭದಲ್ಲಿ ಗರ್ಭಸ್ರಾವ ಆಗುವುದು ಖಂಡಿತ. ಅಲ್ಲದೆ ಅದು ಅಪಾಯಕಾರಿಯೂ ಆಗಬಹುದು.
ಗರ್ಭಸ್ರಾವವು ಮುಖ್ಯವಾಗಿ ಎರಡು ಚಿಹ್ನೆಗಳನ್ನು ಹೊಂದಿರುವುದು. ಯೋನಿಯಿಂದ ರಕ್ತ ಸ್ರಾವ ಮತ್ತು ಕಿಬ್ಬೊಟ್ಟೆಯ ನೋವು. ರಕ್ತ ಸ್ರಾವವು ಮೊದಲಲ್ಲಿ ಬಹು ಕಡಿಮೆ ಪ್ರಮಾಣದಲ್ಲಿರುವುದು. ಕ್ರಮೇಣ ಅಧಿಕವಾಗುತ್ತಾ ಹೋಗಿ ಕೊನೆಗೆ ಗಡ್ಡೆಗಳು ಹೊರ ಬರಬಹುದು ವಿಶೇಷವಾಗಿ ಬಸಿರಿನ ಮೊದಲ ಹಂತದಲ್ಲಿ ಗರ್ಭಪಾತವಾಗಿದೆ ಎಂದು ಅರಿಯುವುದು ಬಹುಕಷ್ಟ. ಮಾಸಿಕ ಋತುಸಸ್ರಾವದ ಸಮಯದಲ್ಲಿನಂತೆ ರಕ್ತ ಹೋಗುವುದು ಮತ್ತು ಕಿಬ್ಬೊಟ್ಟೆ ನೋವು ಬರುವುದು ಆದುದರಿಂದ ಗರ್ಭಧಾರಣೆಯಾಗಿದೆ ಎಂಬ ವಿಷಯವೇ ಗೊತ್ತಿಲ್ಲದಾಗಲಂತೂ ಗರ್ಭಪಾತವಾಗಿರುವುದು ತಿಳಿಯುವುದು ತುಸು ಕಠಿಣ.
ಗರ್ಭಸ್ರಾವವು ಸಂಪೂರ್ಣವಾಗಿ ಆಗಿದೆ ಎನ್ನಲು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣದ ಎಲ್ಲ ಅಂಗಾಂಶಗಳು ಮಾಸದ ಸಮೇತ ಯೋನಿಯ ಮೂಲಕ ಹೊರಬರಬೇಕು. ಪೂರ್ಣ ಗರ್ಭಸ್ರಾವವಾಗಿದ್ದರೆ ರಕ್ತ ಸ್ರಾವವು ಕೆಲವೇ ದಿನಗಳನ್ನವಲ್ಲಿ ನಿಂತು ಹೋಗುವುದು. ಈ ಸಂದರ್ಭದಲ್ಲಿ ಮಹಿಳೆಗೆ ಪೂರ್ಣ ವಿಶ್ರಾಂತಿ ಅವಶ್ಯಕ. ಭಾರವನ್ನು ಎತ್ತಬಾರದು, ಎರಡು ಮೂರು ವಾರದ ವರೆಗೆ ವ್ಯಾಯಾಮ ಮಾಡಬಾರದು, ಸ್ವಚ್ಚತೆಗೆ ಗಮನ ಕೊಡಬೇಕು. ಹಾಗೂ ಲೈಂಗಿಕ ಸಂಪರ್ಕದಿಂದ ದೂರ ಉಳಿಯಬೇಕು.
ಅಸಂಪೂರ್ಣ ಗರ್ಭಸ್ರಾವ:ಭ್ರೂಣದ ಕೆಲ ಅಂಗಾಂಶಗಳು ಮಾಸದ ಕೆಲ ಭಾಗ ಗರ್ಭಾಶಯದಲ್ಲಿಯೇ ಉಳಿದರೆ ಅದನ್ನು ಅಸಂಪೂರ್ಣ ಗರ್ಭಸ್ರಾವ ಎನ್ನುವರು. ಗರ್ಭ ಧಾರಣೆಯಾದ ಹತ್ತರಿಂದ ಇಪ್ಪತ್ತು ವಾರದೊಳಗೆ ರಕ್ತಸ್ರಾವ ಆದರೆ ಅದು ಬಹುತೇಕ ಅಸಂಪೂರ್ಣ ಗರ್ಭಸ್ರಾವವಾಗಿರುವುದು. ಇದಾದ ಮೇಲೆ ರಕ್ತಸ್ರಾವ ನಿಲ್ಲುವುದೇಇಲ್ಲ. ಸತ್ತ ಜೀವಕೋಶಗಳು, ಅಂಗಾಂಶಗಳು ಗರ್ಭಾಶಯದೊಳಗೆ ಉಳಿದು ಸೋಂಕಿಗೆ ಕಾರಣವಾಗಬಹುದು. ಅದರಿಂದ ಸಾಧಾರಣವಾಗಿ ಜ್ವರ ಮತ್ತು ಹೊಟ್ಟೆನೋವು ಬರುವುದು. ಗರ್ಭಸ್ರಾವವು ಅಸಂಪೂರ್ಣವಾಗಿದ್ದರೆ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರಿಂದ, ಆಸ್ಪತ್ರೆಯಲ್ಲಿ, ಇಲ್ಲವೇ ಕ್ಲಿನಿಕನಲ್ಲಿ ಗರ್ಭಾಶಯವನ್ನು ಪೂರ್ಣವಾಗಿ ಖಾಲಿ ಮಾಡಿಸಬೇಕು. ಅಸಂಪೂರ್ಣ ಗರ್ಭಸ್ರಾವವು ಗರ್ಭಾಶಯದ ಸೋಂಕಿಗೆ ಕಾರಣವಾಗಿ ಅದರಿಂದ ಜ್ವರ ಮತ್ತು ಜನನಾಂಗದ ನೋವು ಬರಬಹುದು. ಅದು ಸುಲಭವಾಗಿ ಉಪಶಮನ ವಾಗುವುದಿಲ್ಲ. ಗರ್ಭಾಯಶಯದ ಸೋಂಕಿಗೆ ಸರಿಯಾದ ಚಿಕಿತ್ಸೆ ಕೊಡಿಸದಿದ್ದರೆ ಫಿಲೋಪಿಯನ್ ನಾಳಗಳ ಮೇಲೆ ಗಾಯದ ಕಲೆ ಉಳಿದು ಮುಂದೆ ಅದು ಬಂಜೆತನಕ್ಕೆ ಕಾರಣವಾಗಬಹುದು. ಗರ್ಭಸ್ರಾವದ ನಂತರ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಗರ್ಭಸ್ರಾವದನಂತರ ಅದರಲ್ಲೂ ಅಸಂಪೂರ್ಣ ಗರ್ಭಸ್ರಾವದ ನಂತರ ಆ ಮಹಿಳೆಯು ಗರ್ಭಧಾರಣೆಯನ್ನು ಹಲವಾರು ತಿಂಗಳ ಕಾಲ ಮುಂದೂಡಲೇ ಬೇಕು.
ಪದೇ ಪದೇ ಆಗುವ ಗರ್ಭಸ್ರಾವ: ಕೆಲವು ಮಹಿಳೆಯರಿಗೆ ಸತತ ಗರ್ಭಸ್ರಾವ ಆಗುತ್ತಲೇ ಇರುತ್ತದೆ. ಗರ್ಭಧಾರಣೆಯ ಮೊದಮೊದಲಲ್ಲಿ ಒಂದೆರಡು ಸಾರಿ ಸ್ರಾವ ಆದರೆ ಗಾಬರಿ ಪಡಬೇಕಿಲ್ಲ. ಅವರಿಗೆ ಧೈರ್ಯ ತುಂಬಬೇಕು. ಆದರೆ ಗರ್ಭಧಾರಣೆಯಾದ ಎರಡು ಮೂರು ತಿಂಗಳ ನಂತರ ಮೂರು ನಾಲಕ್ಕು ಸಾರಿ ಸ್ರಾವ ಆದರೆ ಅದಕ್ಕೆ ಕಾರಣ ಕಂಡುಹಿಡಿಯಲು ಆ ಮಹಿಳೆ ವೈದ್ಯಕೀಯ ಪರಿಕ್ಷೆಗೆ ಹೋಗಬೇಕು.
ಪ್ರಚೋದಿತ ಗರ್ಭಸ್ರಾವ: ಗರ್ಭಸ್ರಾವವು ಕಾರಣವಿಲ್ಲದೆ ಆದರೆ, ಅದನ್ನು ಸ್ವಯಂ ಗರ್ಭಸ್ರಾವಎನ್ನುವರು. ಅದು ತನ್ನಿಂದ ತಾನೆ ಆದ ಗರ್ಭಸ್ರಾವ. ಕೆಲವು ಸಲ ಮಹಿಳೆಯೇ ಗರ್ಭಧಾರಣೆಯನ್ನು ಕೊನೆಗೊಳಿಸ ಬೇಕಾಗಬಹುದು. ಅದನ್ನು ಪ್ರಚೋದಿತ ಗರ್ಭಪಾತ ಎನ್ನುವರು. ಈ ಪ್ರಕ್ರಿಯೆಯನ್ನು ಗರ್ಭಧಾರಣೆಯ ಮೊದಲ ಹಂತದಲ್ಲೇ ಸಾಧಾರಣವಾಗಿ ಮಾಡುವರು ಅಂದರೆ ಮೂರು ತಿಂಗಳ ಒಳಗೆ ಮಾಡುವರು ಮಹಿಳೆಗೆ ನೋವು ನಿವಾರಕ ಇಂಜೆಕ್ಷನ್ ನೀಡುವರು. ನಂತರ ವೈದ್ಯರು ಯೋನಿಯಲ್ಲಿ ಉಪಕರಣ ಒಂದನ್ನು ತೂರಿಸಿ ಗರ್ಭಾಶಯವನ್ನು ಸ್ವಚ್ಛಗೊಳಿಸುವರು ಈ ಶಸ್ತ್ರ ಕ್ರಿಯೆಯು ಸಾಧಾರಣವಾಗಿ ೧೫ ನಿಮಿಷದ ಅವಧಿಯಲ್ಲಿ ಮುಗಿಯುವುದು. ಶಸ್ತ್ರ ಕ್ರಿಯೆಯನ್ನು ತರಬೇತಿ ಪಡೆದ ವೈದ್ಯರು ಸೂಕ್ತ ಉಪಕರಣಗಳನ್ನು ಉಪಯೋಗಿಸಿ ಶುಭ್ರ ವಾತಾವರಣದಲ್ಲಿ ಮಾಡಿದರೆ ಇದು ಅಂಥಹ ಅಪಾಯಕಾರಿಯೇನೂ ಅಲ್ಲ. ಗರ್ಭಪಾತವನ್ನು ಪ್ರಚೋದಿಸಲು ಅಸುರಕ್ಷಿತ ವಿಧಾನವನ್ನು ಉಪಯೋಗಿಸಿದರೆ ಮಹಿಳೆಯ ಜನನಾಂಗದಲ್ಲಿ ತೀವ್ರ ಸೋಂಕು ತಗಲುವ ಸಾಧ್ಯತೆ ಇದೆ. ಮಹಿಳೆಗೆ ಪ್ರಚೋದಿತ ಗರ್ಭಪಾತದ ನಂತರ ಯಾವುದೆ ಕಾರಣಕ್ಕೂ ಚಳಿ, ಜ್ವರ, ಹೊಟ್ಟೆನೋವು, ಸೊಂಟನೋವು, ಸೆಳೆತ, ಯೋನಿಯಲ್ಲಿ ತಡೆರಹಿತ ರಕ್ತಸ್ರಾವ ಬರಬಾರದು. ಆರು ವಾರ ಅಥವ ಅದಕ್ಕಿಂತ ಹೆಚ್ಚುಕಾಲ ಮಾಸಿಕ ಋತುಸ್ರಾವದ ಲಕ್ಷಣಗಳು ಗೋಚರವಾದರೆ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಬೇಕು. ತಡಮಾಡಿದರೆ ಮರಣ ಸಂಭವಿಸಬಹುದು.
ಶಾಸನ:
ರಾಷ್ಟ್ರೀಯ ಜನಸಂಖ್ಯಾನೀತಿ ೨೦೦೦ ರ ಪ್ರಕಾರ ಜನ ಸಂಖ್ಯೆಯ ಸ್ಥಿರತೆಯ ಅಜೆಂಡಾವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಗತ್ಯವಾದ ಒತ್ತಡವನ್ನು ಭಯ ರಹಿತವಾಗಿ ಹಾಕಲು ಸೂಕ್ತವಾದ, ಪರಿಪೂರ್ಣವಾದ ಶಾಸನ ಹೊಂದಿರುವುದು ಅತಿ ಮುಖ್ಯವಾಗಿದೆ. ಹಾಗಿದ್ದರೂ ಎರಡು ನಿರ್ಧಿಷ್ಟ ಉದ್ದೇಶಕ್ಕಾಗಿಯೇ ಎರಡು ಶಾಸನುಗಳು ಜಾರಿಯಲ್ಲಿವೆ. ಅವು ಈ ಕೆಳಗಿನಂತೆ ಇವೆ. ಪ್ರಿನಾಟಲ್ ಡಯಾಗ್ನಸ್ಟಿಕ್ ತಂತ್ರಗಳು ( ನಿಯಂತ್ರಣ ಮತ್ತು ತಡೆ ನಿಯಮ)೧೯೯೪:ಆಗ ರೂಪಿಸಿದ ನಿಯಮ ಹಾಗೂ ಕಾನೂನುಗಳು ಜನವರಿ ೧ , ೧೯೯೬ ರಿಂದ ಜಾರಿಗೆ ಬಂದವು. ಈ ಕಾನೂನು ವಿಕೃತ ಭ್ರೂಣವನ್ನು ತಾಯ್ತಂದೆಯರು ಪತ್ತೆ ಹಚ್ಚುವ ತಂತ್ರಜ್ಙಾನವನ್ನು ಬಳಸಲು ಅಗತ್ಯವಾದ ಶರತ್ತುಗಳು ಮತ್ತು ಯಾವ ಸಂದರ್ಭದಲ್ಲಿ ಬಳಸಬಹುದು ಎಂಬುದನ್ನು ತಿಳಿಸುವ ಶರತ್ತುಗಳನ್ನು ನಿಗದಿಪಡಿಸಿದೆ. ಇದು ಭ್ರೂಣದ ಲಿಂಗ ಪತ್ತೆಯನ್ನು ನಿಷೇಧಿಸುತ್ತದೆ. ಈ ಕಾನೂನಿನ ಉಲ್ಲಂಘನೆಯು ಶಿಕ್ಷೆಯನ್ನು ನಿಗದಿ ಪಡಿಸುತ್ತದೆ.ಪ್ರಸವ ಪೂರ್ವ ಪತ್ತೆ ತಂತ್ರಜ್ಙಾನಗಳು ( ತಡೆ ಮತ್ತು ದುರ್ಬಳಕೆಯ ನಿಯಂತ್ರಣ ಕಾಯಿದೆಯು ಒಂದು ಪ್ರಗತಿಪರ ಕಾನೂನು. ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಅದು ಸಾಮಾನ್ಯವಾಗಿ ಪ್ರಸವ ಪೂರ್ವ ಲಿಂಗ ಪತ್ತೆಯ ನಂತರ ಜರುಗುವುದು.
ವೈದ್ಯಕೀಯಗರ್ಭ ಪಾತ ಶಾಸನ ( ಎಂ.ಟಿ.ಪಿ)
ದೂರಗಾಮಿ ಸಿಕ್ವೇಲು:
ತಾಯಿಯ ಆರೋಗ್ಯ /ವೈದ್ಯಕೀಯ ಸ್ಥಿತಿ: ತಾಯಿಯು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಲ್ಲವೆ ಗರ್ಭ ಮುಂದುವರೆದರೆ ಅವಳಿಗೆ ಸಮಸ್ಯೆ ಆಗುವುದಾದರೆ, ಅಥವಾ ಅವಳಿಗೆ ಪ್ರಾಣಾಪಾಯದ ಭಯವಿದ್ದರೆ, ಇಲ್ಲವೆ ತಾಯಿಯ ದೈಹಿಕ ಮತ್ತು ಮಾನಸಿಕ ಅರೊಗ್ಯಕ್ಕೆ ಮಾರಕವಾಗುವಂತಿದ್ದರೆ ಅವಕಾಶವಿದೆ. Eugenic : ಹುಟ್ಟುವ ಮಗುವು ವೈರಲ್ ಸೊಂಕಿನಿಂದ ದೈಹಿಕ ಅಥವಾ ಮಾನಸಿಕ ನ್ಯೂನತೆ ಹೊಂದಬಹುದಾಗಿದ್ದರೆ ಔಷಧಿ ಸೇವನೆಯ ಪರಿಣಾಮವಾಗಿ, ಗರ್ಭಸ್ಥವಾಗಿರುವಾಗ ಕ್ಷ ಕಿರಣಕ್ಕೆ, ವಿಕಿರಣಕ್ಕೆ ಒಡ್ಡಿರುವುದರಿಂದ, ರಕ್ತದ ಹೊಂದಾಣಿಕೆ ಇಲ್ಲದಿದ್ದರೆ, ಹುಚ್ಚು, ಮಾನಸಿಕ ಅಸ್ವಸ್ಥತೆ ಇರುವಾಗ.ಮಾನವಿಯ ನೆಲೆಯಲ್ಲಿ ಗರ್ಭಧಾರಣೆಯು ಅತ್ಯಾಚಾರದ ಫಲವಾಗಿರುವಾಗ, ಕುಟುಂಬ ನಿಯಂತ್ರಣ ಸಾಧನಗಳು ವಿಫಲವಾದಾಗ, ಮಹಿಳೆಯ ಕೋರಿಕೆಯ ಮೇರೆಗೆ , ಹೀಗೆ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ಗರ್ಭಪಾತಕ್ಕೆ ಅವಕಾಶವಿದೆ.ಈ ಶಾಸನದ ಪ್ರಕಾರ ನೊಂದಾಯಿತ ವೈದ್ಯರು, ಪ್ರಸವ ಕಾರ್ಯದಲ್ಲಿ ತರಬೇತಿ ಹಾಗೂ ಅನುಭವ ಇರುವವರು ಮಾತ್ರ MTP ಮಾಡಬಹುದು. ಗರ್ಭವು ಹನ್ನೆರಡು ವಾರಗಲಳಿಗಿಂತ ಕಡಿಮೆ ಇದ್ದರೆ ವೈದ್ಯರು ಇನ್ನೊಬ್ಬ ವೈದ್ಯರ ಸಲಹೆ ಪಡೆಯದೆ ಮಾಡಬಹುದು. ಗರ್ಭವು ೧೨ ವಾರ ಮಿರಿದ್ದರೆ ಇಬ್ಬರು ವೈದ್ಯರು ಸೇರಿ ಗರ್ಭಪಾತದ ಅಗತ್ಯದ ಬಗ್ಗೆ ನಿರ್ಧರಿಸಬೇಕಾಗುವುದು. ನಂತರ ಗರ್ಭಪಾತವನ್ನು ಇಬ್ಬರಲ್ಲಿ ಒಬ್ಬರು ಮಾಡಬಹುದಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಗರ್ಭವು ೨೦ ವಾರ ದಾಟಿದ್ದರೆ ಒಬ್ಬರೇ ವೈದ್ಯರಿದ್ದರೂ ಇನ್ನೊಬ್ಬರಿಗಾಗಿ ಕಾಯದೆ MTP ನ್ನು ಆಸ್ಪತ್ರೆ ಅಥವಾ ಕ್ಲಿನಿಕನಲ್ಲಿ ಮಾಡಬಹುದಾಗಿದೆ. ಮಹಿಳೆಯ ಒಪ್ಪಿಗೆಯನ್ನು ಬರಹದಲ್ಲಿ ಪಡೆಯುವುದು ಅತಿ ಮುಖ್ಯ. ಮಹಿಳೆಯು ಅಪ್ರಾಪ್ತ ವಯಸ್ಕಳಾಗಿದ್ದರೆ ಅಥವಾ ಮಾತನಾಡಲಾಗದ ಸ್ಥಿತಿಯಲ್ಲಿದ್ದರೆ ಅವಳ ಪೋಷಕರ ಒಪ್ಪಿಗೆಯನ್ನು ಬರಹದಲ್ಲಿ ಪಡೆಯಬೇಕು.ಗರ್ಭಪಾತ ಕಾನೂನು (MTP) 1971ರ ಪ್ರಕಾರ ಈ ಕಾರ್ಯದ ರಹಸ್ಯತೆಯನ್ನು ಕಾಪಾಡುವುದು ಅಗತ್ಯ. ಈ ಕ್ರಮಕ್ಕೆ ಒಳಗಾದವರಿಗೆ ಇದರ ಪರಿಣಾಮವಾಗಿ ಆಗಬಹುದಾದ ಯಾವುದೆ ಸಮಸ್ಯೆ, ತೊಂದರೆಗಾಗಿ ಕಾನೂನಿನ ಕ್ರಮವನ್ನು ತೆಗೆದುಕೊಂಡರೆ ಅದರ ವಿರುದ್ಧ ವೈದ್ಯರಿಗೆ ರಕ್ಷಣೆ ಇದೆ. ಆದರೆ ಯಾವುದೆ ನಿಯಮವನ್ನು ವೈದ್ಯರು ಉಲ್ಲಂಘಿಸಿದರೆ ಅವರು ಶಿಕ್ಷೆಗೆ ಗುರಿಯಗಬೇಕಾಗುತ್ತದೆ ಮತ್ತು ಜತೆಯಲ್ಲಿ ೧೦೦೦ರೂ ದಂಡವನ್ನು ತೆರಬೇಕಾಗುತ್ತದೆ.ವೈದ್ಯಕೀಯ ಗರ್ಭಪಾತವು ವೈದ್ಯಕೀಯ ಹಾಗೂ ಸಾಮಾಜಿಕ ಕಾರಣಗಳಿಗಾಗಿ ಆಗಿದ್ದರೆ ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದೆ. ಆದರೆ ಅದು ಬಯಸದ ಮಗುವಿನ ಅದರಲ್ಲೂ ಹೆಣ್ಣು ಮಗುವಿನ ತಡೆಗಾಗಿ ಮಾಡಿದರೆ ಅದು ನೀತಿ ಬಾಹಿರ, ಸಮಾಜ ವಿರೋಧಿ ಕೆಲಸ. ಅದನ್ನು ನಿರುತ್ತೇಜನ ಮಾಡಬೇಕು. ಸತತ ಗರ್ಭಪಾತವು ತಾಯಿಯ ಆರೋಗ್ಯಕ್ಕೆ ಮಾರಕ. ಅದರಿಂದ ತೀವ್ರ ಅನಾರೋಗ್ಯ ಮತ್ತು ಸಾವು ಸಂಭವಿಸಬಹುದು. ಮಹಿಳೆಯರಿಗೆ ಈ ಅಂಶಗಳನ್ನು ಮನದಟ್ಟು ಮಾಡಬೇಕು ಮತ್ತು ಸಂತಾನ ನಿಯಂತ್ರಣ ಸಾಧನಗಳನ್ನು ಬಳಸಲು ಪ್ರೋತ್ಸಾಹಿಸಬೇಕು.
ಎಂ.ಟಿ.ಪಿ ಕಾನೂನನ್ನು 1975ರಲ್ಲಿ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿಯು ಈ ಕೆಳಗಿನಂತಿದೆ.
೧) ನೊಂದಾಯಿತ ವೈದ್ಯರಾಗಿರಬೇಕು. ಇಪ್ಪತ್ತು ಎಂ.ಟಿ.ಪಿ ಯಲ್ಲಿ ಸಹಾಯಕರಾಗಿ ಕೆಲಸಮಾಡಿರಬೇಕು. ೨) ವೈದ್ಯರು ಪ್ರಸೂತಿ ವಿಭಾಗದಲ್ಲಿ ಆರು ತಿಂಗಳು ಹೌಸಮನ್ ಆಗಿ ಕೆಲಸ ಮಾಡಿರಬೇಕು. ೩) ಒ. ಬ.ಸಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ೪) ವೈದ್ಯರು ೧೯೭೧ ಕಾನೂನು ಬರುವ ಮೊದಲೆ ಪದವಿ ಪಡೆದಿದ್ದರೆ ಸ್ತ್ರೀ ಮತ್ತು ಪ್ರಸೂತಿ ವಿಭಾಗದಲ್ಲಿ ೩ ವರ್ಷ ಅನುಭವ ಇರಬೇಕು. ೫) ಅವರು ೧೯೭೧ಕಾನೂನು ಜಾರಿಯಾದ ನಂತರ ಪದವಿ ಪಡೆದವರಾಗಿದ್ದರೆ ಒಂದು ವರ್ಷ ಅನುಭವ ಇರಬೇಕು.
೧೯೭೧ ರ ಎಮ್ ಟಿ ಪಿ ಕಾನೂನಿಗೆ ೧೯೭೫ ರಲ್ಲಿ ತಿದ್ದುಪಡಿ ಬಂದ ನಂತರ, ಸೇವಾ ಅರ್ಹತೆಯನ್ನು ನಿಗದಿಪಡಿಸಿದರೂ ಗುಡ್ಡಗಾಡು ಪ್ರದೇಶದಲ್ಲಿ ಮತ್ತು ಬುಡಕಟ್ಟುವರ್ಗಗಳಲ್ಲಿ, ಕೆಲವು ಸಲ ನಗರ ಪ್ರದೇಶಗಳಲ್ಲೂಕೂಡ ಕಾನೂನಿನ ಪ್ರಕಾರ ಅರ್ಹತೆ ಇಲ್ಲದವರೂ, ಕುಶಲತೆ ಇಲ್ಲದವರು ಮಾಡುತ್ತಿದ್ದಾರೆ.
ಇದಕ್ಕೆ ಕಾರಣವಾದ ಪ್ರಮುಖ ಅಂಶಗಳನ್ನು ಈ ಕೆಳಗೆ ಗುರುತಿಸಲಾಗಿದೆ: ಅ) ಗುಡ್ಡಗಾಡು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಅರ್ಹತೆ ಪಡೆದ ವೈದ್ಯರ, ಸುರಕ್ಷಿತ ಗರ್ಭಪಾತ ಕ್ಲಿನಿಕ್ ಗಳ ಕೊರತೆ ಅಲ್ಲಿಗೆ ಹೋಗಲು ಅಗತ್ಯವಾದ ಹಣಕಾಸಿನ ಅಭಾವ.
ಬ) ಸುರಕ್ಷಿತ ಗರ್ಭಪಾತಕ್ಕೆ ಇರುವ ಸೇವಾ ಅವಕಾಶಗಳ ಮಾಹಿತಿ ಇಲ್ಲದೆ ಇರುವುದು.
ಕ) ಸರ್ಕಾರಿ ಆಸ್ಪತ್ರೆ ಅಥವಾ ಕ್ಲಿನಿಕನಲ್ಲಿ ಗೌಪ್ಯತೆ ಮತ್ತು ವೈಯಕ್ತಿಕತೆ ಕಾಪಾಡುವ ವಾತಾವರಣ ಇಲ್ಲದೆ ಇರುವುದು
ಡ) ಮದುವೆ ಆಗದವರಿಗೆ ಮತ್ತು ವಿಧವೆಯರಿಗೆ ಆಸ್ಪತ್ರೆಗೆ ಹೋಗಲು ಹಿಂಜರಿಕೆ
ಗರ್ಭಪಾತಕ್ಕೆ ಮೊದಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು
ಮಹಿಳೆಯು ಗರ್ಭಧರಿಸಿದ್ದಾಳೆ ಎಂಬುದನ್ನು ಖಚಿತ ಪಡಿಸಿಕೊಳ್ಳುವದು ನಂತರ ಅದರ ಅವಧಿಯ ನಿರ್ಧಾರಣೆ ಮತ್ತು ಗರ್ಭಕೋಶದೊಳಗೇ ಗರ್ಭ ಫಲಿತವಾಗಿದೆ ಎಂಬುದನ್ನು ನಿರ್ಧರಿಸುವುದು ಮೊದಲ ಹೆಜ್ಜೆ. ಪ್ರಚೋದಿತ ಗರ್ಭಪಾತದಿಂದ ಉಂಟಾಗುವ ಅಪಾಯವು ಮೊದಲ ಹಂತದಲ್ಲಿ ಸೂಕ್ತವಾಗಿ ಕ್ರಮ ತೆಗೆದುಕೊಂಡರೆ ಅತಿ ಕಡಿಮೆ. ಆದರೆ ಗರ್ಭದ ಅವಧಿ ಹೆಚ್ಚಿದಂತೆ ಅಪಾಯವು ಹೆಚ್ಚಾಗುವುದು. ಆದ್ದರಿಂದ ಗರ್ಭಧಾರಣೆಯಾಗಿ ಎಷ್ಟು ತಿಂಗಳಾಗಿದೆ ಎಂದು ನಿರ್ಧರಿಸುವುದು ಅತಿ ಮುಖ್ಯ. ಅದಕ್ಕಾಗಿ ಗರ್ಭಪಾತಕ್ಕೆ ಸೂಕ್ತವಾದ ವಿಧಾನ ಅನುಸರಿಸಬೇಕು. ಪ್ರತಿ ಹೆರಿಗೆ ಕೇಂದ್ರಗಳಲ್ಲಿ ತರಬೇತಿ ಪಡೆದ ಸಿಬ್ಬಂದಿ ಇರಬೇಕು. ಮಹಿಳೆಯ ಗರ್ಭದ ಇತಿಹಾಸ ದಾಖಲಿಸಲು ಪೆಲ್ವಿಕ್ ಹಾಗೂ ಒಳ ಭಾಗದ ಪರೀಕ್ಷೆಮಾಡಲು ವೈದ್ಯರು ಜ್ಞಾನ ಹೊಂದಿರಬೇಕು. ಸೂಕ್ತ ಸಿಬ್ಬಂದಿ ಮತ್ತು ಉಪಕರಣ ಹೊಂದಿಲ್ಲದ ಆರೋಗ್ಯ ಕೇಂದ್ರಗಳು ತಮ್ಮಲ್ಲಿ ಬಂದವರನ್ನು ಹ್ತತ್ತಿರದ ಸೇವಾಕೇಂದ್ರಗಳಿಗೆ ಕಳುಹಿಸಬೇಕು. ಸಿಬ್ಬಂದಿಯು ಅಗತ್ಯವಾದ ಆಪ್ತ ಸಲಹೆ ನೀಡಬಲ್ಲ, ಮಾರ್ಗದರ್ಶನ ನೀಡುವ ಅನುಭವಿ ಆಗಿರಬೇಕು.ದೈಹಿಕ ಪರೀಕ್ಷೆ ಮಾಡುವಾಗ ಆರೋಗ್ಯ ಕಾರ್ಯಕರ್ತರು ಗರ್ಭಾಶಯದ ಸ್ಥಾನವನ್ನು ಖಚಿತ ಪಡಿಸಿಕೊಳ್ಳಬೇಕು ಅದು ಜತೆಗೆ ಲೈಂಗಿಕವಾಗಿ ಹರಡುವ ರೋಗ ಇಲ್ಲವೆಂಬುದರ ಬಗ್ಗೆ ಖಚಿತ ಪಡಿಸಿ ಕೊಳ್ಳಬೇಕು ಜನನಾಂಗನಾಳದ ಸೋಂಕು ಅಲ್ಲದೆ ಮಲೇರಿಯಾ, ಅನಿಮಿಯಾಗಳ ಬಗ್ಗೆ ತಪಾಸಣೆ ಮಾಡಬೇಕು. ಹಾಗೇನಾದರೂ ಕಂಡುಬಂದಲ್ಲಿ ಹೆಚ್ಚುವರಿ ಸೇವೆಗಾಗಿ, ಚಿಕೆತ್ಸೆಗಾಗಿ, ಹೆಚ್ಚಿನ ವೈದ್ಯಕೀಯ ಗಮನಕ್ಕಾಗಿ ಕಳುಹಿಸಬೇಕು. ಗಂಭೀರವಾದ ಸರ್ವಿಕಲ್ ದೋಷಗಳು ಗಮನಕ್ಕೆ ಬಂದರೆ ಆ ಮಹಿಳೆಯನ್ನು ಸೂಕ್ತ ತಪಾಸಣೆ ಸೌಲಭ್ಯವಿರುವ ಕಡೆ ಮುಂದಿನ ತಪಾಸಣೆಗಾಗಿ ಶಿಫಾರಸು ಮಾಡಬೇಕು. ಅಲ್ಟ್ರಾ ಸೌಂಡ ಸ್ಕ್ಯಾನಿಂಗ್:
ಮೊದಲ ಹಂತದಲ್ಲಿ ಗರ್ಭಪಾತವಾದರೆ ಅಲ್ಟ್ರಾಸೌಂಡ ಸ್ಕ್ಯಾನಿಂಗ್ ಅಗತ್ಯವಿಲ್ಲ. ಅಲ್ಟ್ರಾಸೌಂಡ ಸ್ಕ್ಯಾನಿಂಗ್ ಸೌಲಭ್ಯವಿದ್ದಾಗ ೬ ವಾರ ಅಥವ ಅದಕ್ಕಿಂತ ಹೆಚ್ಚಿನ ಅವಧಿಯ ಗರ್ಭಾಧಾರಣೆಯಾದರೆ ಎಕ್ಟೋಪಿಕ್ ಗರ್ಭಗಳ ಪತ್ತೆ ಮಾಡಬಹುದು. ಸೇವೆ ಒದಗಿಸುವ ಕೆಲವರು ಈ ತಂತ್ರಜ್ಞಾನವು ಮುಂದುವರೆದ ಗರ್ಭಾವಸ್ಥೆಯಲ್ಲಿ ಗರ್ಭಪಾತದ ಪೂರ್ವದಲ್ಲಿ ಇಲ್ಲವೆ ನಂತರ ಇದರ ಸಹಾಯ ಪಡೆಯುವರು. ಅಲ್ಟ್ರಾಸೌಂಡ ಸ್ಕ್ಯಾನಿಂಗ್ ಮಾಡುವಾಗ ಆ ಕ್ಷೇತ್ರವು ಪ್ರತ್ಯೇಕವಾಗಿರಬೇಕು. ಸ್ಕ್ಯಾನ್ ಮಾಡುವಾಗ –ಜತೆ ಇರುವ ಮಹೀಳೆಯರು ಇರುವ ಸ್ಥಳದಿಂದ ದೂರ ಇರಬೇಕು. ಪೂರ್ವಪ್ರಸವ ಪರಿಸ್ಥಿತಿಗಳು: ಗರ್ಭಧಾರಣೆಯನ್ನು ಹಾಗೂ ಅದರ ಅವಧಿಯನ್ನು ಖಚಿತ ಪಡಿಸಿಕೊಳ್ಳುವುದರ ಜತೆ ಆರೋಗ್ಯ ಕಾರ್ಯಕರ್ತರು ಗರ್ಭಿಣಿಯ ಪೂರ್ಣ ವೈದ್ಯಕೀಯ ಹಿನ್ನೆಲೆಯನ್ನು ಪಡೆಯಬೇಕು. ಗರ್ಭಸ್ರಾವದ ಮೇಲೆ ಪರಿಣಾಮಗಳನ್ನು ಬೀರುವ ಅಂಶಗಳನ್ನು ಗುರುತಿಸಬೇಕು. ಈಗಗಾಲೇ ಆ ಮಹಿಳೆ ಸೇವಿಸುತ್ತಿರುವ ಔಷಧಿಗಳು, ಈ ಪ್ರ ಕ್ರಿಯೆಯಲ್ಲಿ ನೀಡುತ್ತಿರುವ ಔಷಧಿಗಳ ಮೇಲೆ ಅವುಗಳ ಪರಿಣಾಮದ ಮಾಹಿತಿ ಹೊಂದಿರಬೇಕು.
ವೈದ್ಯಕೀಯ ದೃಷ್ಟಿಯಿಂದ ಇವರಿಗೆ ಶಸ್ತ್ರಕ್ರಿಯೆ ನೆಡೆಸುವಾಗ ಎಚ್.ಐ.ವಿ ಇಲ್ಲದಿದ್ದರೆ ತೆಗೆದುಕೊಳ್ಳುವ ವಿಶೇಷ ಮುನ್ನೆಚ್ಚರಿಕೆಯನ್ನು ಗರ್ಭಪಾತದ ಸಮಯದಲ್ಲೂ ತೆಗೆದು ಕೊಳ್ಳಬೇಕು. ಆ ಮಹಿಳೆ ಎಚ್.ಐ.ವಿ + ಎಂದು ಖಚಿತ ಪಟ್ಟರೆ ಅವಳಿಗೆ ವಿಶೇಷ ಆಪ್ತಸಲಹೆ ಅಗತ್ಯವಾಗಬಹುದು.
ಜನನಾಂಗನಾಳ ಸೋಂಕು
ಗರ್ಭಪಾತದ ಸಮಯದಲ್ಲಿ ಜನನಾಂಗದ ಕೆಳ ನಾಳದಲ್ಲಿ ಸೋಂಕು ಇದ್ದರೆ ಗರ್ಭಪಾತದ ನಂತರ ಅದು ತುಸು ಅಪಾಯಕಾರಿ. ಪ್ರಕಿಯೆಯ ನಂತರದ ಅವಧಿಯಲ್ಲಿ ಆಂಟಿಬಯೋಟಿಕ್ ಗಳ ಸಾಮಾನ್ಯವಾದ ಬಳಕೆ ಸೋಂಕನ್ನು ಅರ್ಧ ಕಡಿಮೆಗೊಳಿಸುತ್ತದೆ. ಹಾಗಿದ್ದರೂ ಸೂಕ್ತ ಆಂಟಿಬಯೊಟಿಕ್‌ಗಳು ಲಭ್ಯವಿಲ್ಲದಿದ್ದರೆ ಗರ್ಭಪಾತವನ್ನು ಮಾಡಬಹುದು. ಆದರೂ ಬಹು ನಿಖರವಾದ, ಸ್ವಚ್ಛವಾದ ಮತ್ತು ಪೂತಿನಾಶಕ ಪ್ರಕ್ರಿಯೆಯಿಂದ ನಂತರದ ಸೋಂಕಿನ ತಡೆ ಬಹುಪಾಲು ಸಾಧ್ಯ.
ಸೋಂಕಿನ ಚಿಹ್ನೆಯನ್ನು ಪರೀಕ್ಷೆಯ ಸಮಯದಲ್ಲಿ ಕಂಡರೆ ಮೊದಲು ಆಂಟಿಬಾಡಿಗಳ ಚಿಕೆತ್ಸೆ ನೀಡಬೇಕು. ನಂತರ ಗರ್ಭಪಾತದ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಪ್ರಯೋಗಾಲಯದಲ್ಲಿ RTI ಪರೀಕ್ಷೆಗೆ ಒಳಗಾಗಿದ್ದರೆ ಸೋಂಕಿನ ಚಿಹ್ನೆ ಎದ್ದು ಕಾಣದಿದ್ದರೆ ಪರೀಕ್ಷಾ ಪಲಿತಾಂಶಕ್ಕಾಗಿ ಕಾಯುತ್ತಾ ಗರ್ಭಪಾತವನ್ನು ಮುಂದೂಡುವ ಅಗತ್ಯವಿಲ್ಲ.
ಎಕ್ಟೋಪಿಕ್ ಗರ್ಭಧಾರಣೆ ಫಲಿತ ಅಂಡಾಣುವು ಗರ್ಭಾಶಯದ ಕುಹರದ ಹೊರಗೆ ನೆಲೆ ನಿಂತರೆ ಅದು ಅಸಹಜ ಸ್ಥಿತಿಯಲ್ಲಿ ಬೆಳೆಯತೊಡಗುತ್ತದೆ. ಅದನ್ನು ಎಕ್ಟೊಪಿಕ್ ಗರ್ಭ ಎನ್ನುವರು. ಎಕ್ಟೋಪಿಕ್ ಗರ್ಭಧಾರಣೆಯು ಸಾಮಾನ್ಯವಾಗಿ ಫೆಲೊಪಿಯನ್ ನಾಳದಲ್ಲಿ ಅಂಡಾಶಯದಲ್ಲಿ ಡಗ್ಲಾಸ್ ಸಂಚಿಯಲ್ಲಿ (ಗರ್ಭಾಶಯದ ಹಿಂದಿನ ಜಾಗ) ಆಗುವುದು.
ಎಕ್ಟೊಪಿಕ್ ಗರ್ಭ ಆದಾಗ ಪ್ರಾಣಕ್ಕೆ ಕುತ್ತು ಬರಬಹುದು. ಗರ್ಭಾಶಯದ ಬಸಿರಿನ ಚಿಹ್ನಗಳು ಹಲವು. ಗರ್ಭಾಶಯದ ಗಾತ್ರವು ಇರಬೇಕಾದುದಕ್ಕಿಂತ ಚಿಕ್ಕದಿರುವುದು, ಕೆಳ ಹೊಟ್ಟೆಯ ನೋವು, ವಿಶೇಷವಾಗಿ ರಕ್ತಸ್ರಾವ ಹಾಗೂ ಇತರೆ, ತಲೆ ತಿರುಗುವುದು ಎಚ್ಚರ ತಪ್ಪುವುದು ಅಡ್ನೆಕ್ಸಲ್ ಮಾಸ್‌ಗಳಿರುತ್ತವೆ.
ಎಕ್ಟೊಪಿಕ್ ಗರ್ಭಧಾರಣೆಯ ಅನುಮಾನ ಬಂದರೆ ಅದರ ಇರವನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ನಂತರ ತಕ್ಷಣ ಚಿಕೆತ್ಸೆಯನ್ನು ಪ್ರಾರಂಭಿಸಬೇಕು. ಅಥವಾ ಆ ಮಹಿಳೆಯನ್ನು ರೋಗ ಪತ್ತೆ ಮತ್ತು ಚಿಕಿತ್ಸೆಯ ಸೌಲಭ್ಯವಿರುವ ಕಡೆಗೆ ವರ್ಗಾಯಿಸಬೇಕು.
ಸರರ್ವಿಕಲ್ ಸೈಟಾಲಜಿ
ಗರ್ಭಪಾತದ ಮನವಿಯು ಮಹಿಳೆಯ ಸರ್ವಿಕಲ್ ಸೈಟಾಲಜಿಯ ಅಂದಾಜು ಮಾಡಲು ಅವಕಾಶ ನೀಡುತ್ತದೆ. ವೀಶೆಷವಾಗಿ ಸರ್ವಿಕಲ್ ಕ್ಯಾನ್ಸರ್ ಮತ್ತು ಗುಹ್ಯರೋಗದ ಸೋಂಕಿನ ಲಕ್ಷಣವಿದ್ದರೆ ಇದು ಅಗತ್ಯ. ಆದರೆ ಈ ಸೇವೆಯು ಗರ್ಭಪಾತಕ್ಕೆ ಪೂರ್ವ ಶರತ್ತಾಗಬಾರದು. ಅಲ್ಲದೆ ಇದು ಸುರಕ್ಷಿತ ಗರ್ಭಪಾತಕ್ಕೆ ಅಗತ್ಯವೂ ಅಲ್ಲ.
ಮಾಹಿತಿ ಮತ್ತು ಆಪ್ತಸಲಹೆ ಉತ್ತಮ ಗುಣಮಟ್ಟದ ಗರ್ಭಪಾತಕ್ಕೆ ಮಾಹಿತಿಯನ್ನು ಹೊಂದುವ ಅವಕಾಶ ಅತಿ ಮುಖ್ಯವಾದುದು. ಮಾಹಿತಿಯು ಪೂರ್ಣವಾಗಿರಬೇಕು ಮತ್ತು ನಿಖರವಾಗಿರಬೇಕು. ಸುಲಭವಾಗಿ ದೊರೆಯಬೇಕು. ಅದನ್ನು ಮಹಿಳೆಯ ವೈಯಕ್ತಿಕತೆ ಮತ್ತು ಗೌಪ್ಯತೆಯನ್ನು ಗೌರವಿಸುವ ರೀತಿಯಲ್ಲಿ ಒದಗಿಸಬೇಕು.ನಿರ್ಧಾರ ತೆಗೆದುಕೊಳ್ಳಲು ಆಪ್ತ ಸಲಹೆಮಹಿಳೆಯು ತನ್ನ ಅಭಿಪ್ರಾಯವನ್ನು ಪರಿಶೀಲಿಸಲು ಮತ್ತು ಯಾವುದೇ ಒತ್ತಡವಿಲ್ಲದೆ ನಿರ್ಧಾರತೆಗೆದುಕೊಳ್ಳಲು ಆಪ್ತ ಸಲಹೆಯು ಅತಿ ಮುಖ್ಯವಾಗಿ ಸಹಕಾರಿಯಾಗಿದೆ. ಆಪ್ತ ಸಲಹೆಯನ್ನು ಸ್ವಯಂಇಚ್ಛೆಯಿಂದ,congenitalಮತ್ತು ತರಬೇತಿ ಪಡೆದವರಿಂದ ಒದಗಿಸಬೇಕು. ಮಹಿಳೆಯು ಗರ್ಭಪಾತವನ್ನು ಆಯ್ಕೆ ಮಾಡಿಕೊಂಡರೆ ಆರೋಗ್ಯ ಕಾರ್ಯಕರ್ತರು ಅದಕ್ಕೆ ಸಂಬಂಧಿಸಿದ ಕಾನೂನಿನ ಅಂಶಗಳನ್ನು ವಿವರಿಸಬೇಕು. ಮಹಿಳೆಗೆ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯ ನೀಡಬೇಕು. ಯೋಚಿಸಿದ ನಂತರ ಕ್ಲಿನಕ್‌ಗೆ ಬರಲು ಅವಕಾಶ ನೀಡಬೇಕು. ಆದರೆ ಗರ್ಭವು ಬಲಿಯುವ ಮೊದಲೇ ಮಾಡಿಸಿಕೊಂಡರೆ ಇರುವ ಸುರಕ್ಷಿತೆ ಮತ್ತು ಪರಿಣಾಮಕಾರಿ ಫಲಿತಾಂಶದ ಬಗ್ಗೆ ಅವರಿಗೆ ಮನದಟ್ಟು ಮಾಡಬೇಕು. ಆರೋಗ್ಯ ಕಾರ್ಯಕರ್ತರು ಮಹಿಳೆಗೆ ವಿವಾಹಿತ ಹದಿಹರೆಯದವರು, ಗರ್ಭಧಾರಣೆಯನ್ನು ಮುಂದೂಡುವ ಅವಕಾಶ ಇಲ್ಲವೆ ಮಗುವನ್ನು ದತ್ತು ಪಡೆವ ಸೌಲಭ್ಯದ ಬಗ್ಗೆ ಅವಶ್ಯಕತೆಗೆ ಅನುಗುಣವಾಗಿ ಮಾಹಿತಿ ನೀಡಬೇಕು.ಕೆಲವು ಸಂದರ್ಭದಲ್ಲಿ ಮಹಿಳೆಯು ತನ್ನ ಸಂಗಾತಿಯ ಒತ್ತಡಕ್ಕೆ ಒಳಗಾಗಬಹುದು. ಅವಿವಾಹಿತ ಹದಿಹರೆಯದವರು,HIV ಸೋಂಕಿತರು ವಿಶೇಷವಾಗಿ ಈ ಒತ್ತಡಕ್ಕೆ ಒಳಗಾಗುತ್ತಾರೆ. HIV ಸೋಂಕಿತ ಮಹಿಳೆಯರಿಗೆ ಗರ್ಭಧಾರಣೆಯಿಂದ ಅವರ ಆರೋಗ್ಯಕ್ಕೆ ಆಗುವ ಅಪಾಯ ಮತ್ತು ಹುಟ್ಟುವ ಮಗುವಿಗೆ ಸೋಂಕು ತಗಲುವ ಸಾಧ್ಯತೆಯ ಬಗ್ಗೆ ತಿಳಿವಳಿಕೆ, ಅವರಿಗೆ ಲಭ್ಯವಿರುವ ಚಿಕಿತ್ಸಾ ಸೌಲಭ್ಯದ ವಿವರ ನೀಡಬೇಕು. ಆಗ ಅವರು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳುವರು. ಆಗ ಅವರು ಗರ್ಭವನ್ನು ಮುಂದುವರಿಸಬೇಕೆ ಇಲ್ಲವೆ ತೆಗೆಸಿ ಹಾಕಬೇಕೆ ಎಂಬುದರ ಬಗ್ಗೆ ಎಚ್ಚರಿಕೆಯಿಂದ ನಿರ್ಣಯ ತೆಗೆದುಕೊಳ್ಳಬಹುದು. ಸಿಬ್ಬಂದಿಯು ಆ ಮಹಿಳೆಯು ಲೈಂಗಿಕ ಹಿಂಸೆಗೆ ಇಲ್ಲವೆ ದುರ್ಬಳಕೆಗೆ ಬಲಿಯಾಗಿರುವ ಮಹಿಳೆ ಆಗಿದ್ದರೆ, ಇಲ್ಲವೇ ಹಾಗೆ ಆಗಿರುವ ಅನುಮಾನ ಬಂದರೆ ಅವರನ್ನು ವಿಶೇಷ ಆಪ್ತಸಲಹೆ ಮತ್ತು ಚಿಕೆತ್ಸೆಗೆ ಕಳುಹಿಸಬಹುದು. ವ್ಯವಸ್ಥಾಪಕರು ತಮ್ಮ ಸಿಬ್ಬಂದಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳ ಮಾಹಿತಿಯನ್ನು ತಿಳಿದು ಕೊಂಡಿರುವುದನ್ನು ಖಚಿತ ಪಡಿಸಿಕೊಳ್ಳಬೇಕು.ಗರ್ಭಪಾತ ಪ್ರಕ್ರಿಯೆಯಗಳ ಮಾಹಿತಿ: ಮಹಿಳೆಯು ಪ್ರಕ್ರಿಯೆಗಳ ಬಗ್ಗೆಕನಿಷ್ಠ ಪಕ್ಷ, ಕೆಳಗಿನ ಮಾಹಿತಿಯನ್ನು ಒದಗಿಸಲೇಬೇಕು
ಗರ್ಭಪಾತದ ವಿಧಾನಗಳಲ್ಲಿ ಆಯ್ಕೆಯ ಅವಕಾಶವಿದ್ದರೆ, ಆ ಸೇವೆಗಳನ್ನು ಒದಗಿಸುವವರಿಗೆ ತರಬೇತಿ ನೀಡಬೇಕು. ಅವರು ಮಹಿಳೆಗೆ ಹೊಂದುವ ಸೂಕ್ತ ವಿಧಾನದ ಮಾಹಿತಿಯನ್ನು, ಅವಳ ಗರ್ಭಧಾರಣೆಯ ಅವಧಿ, ಆರೋಗ್ಯ ಸ್ಥಿತಿ ಮತ್ತು ಸಂಭವನೀಯ ಅಪಾಯಗಳ ಮಾಹಿತಿಕೊಡಬೇಕು.
ಜನನ ನಿಯಂತ್ರಣ ಮಾಹಿತಿ ಮತ್ತು ಸೇವೆ ಗರ್ಭಪಾತ ಸೇವೆಯಲ್ಲಿ ಜನನನಿಯಂತ್ರಣ ಸಾಧನಗಳ ಮಾಹಿತಿ ಮತ್ತು ಸೇವೆಯು ಅವಿಭಾಜ್ಯ ಅಂಗವಾಗಿದೆ.ಇದರಿಂದ ಭವಿಷ್ಯದಲ್ಲಿ ಉದ್ದೇಶವಿಲ್ಲದೆ ಉಂಟಾಗಬಹುದಾದ ಗರ್ಭಧಾರಣೆಯನ್ನು ತಡೆಗಟ್ಟಬಹುದು. ಪ್ರತಿ ಮಹಿಳೆಗೂ ಗರ್ಭಪಾತವಾದ ೧೫ ದಿನದೊಳಗೆ ಅಂಡಾಣುವು ಉತ್ಪತ್ತಿಯಾಗುವುದೆಂಬುದನ್ನು ತಿಳಿಸಬೇಕು. ಅವಳು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಗರ್ಭಧಾರಣೆಯ ಸಂಭವ ಇದೆ. ಅದಕ್ಕಾಗಿ ಅವಳಿಗೆ ಹೊಂದುವ ಸಂತಾನ ನಿಯಂತ್ರಣ ಸಾಧನವನ್ನು ಉಪಯೋಗಿಸಲು ಸಲಹೆ ನೀಡಬೇಕು. ಸಾಧನವನ್ನು ಉಪಯೋಗಿಸಿದ ಮೇಲೂ ಗರ್ಭಧಾರಣೆ ಆದರೆ, ಮಹಿಳೆಯು ಗರ್ಭಪಾತ ಬಯಸಿದರೆ, ಅವಳು ಬಳಸಿದ ವಿಧಾನ ದಲ್ಲಿನ ಲೋಪದ ಬಗ್ಗೆ ಚರ್ಚಿಸಬೇಕು ಮತ್ತು ಸರಿಯಾಗಿ ಉಪಯೋಗಿಸುವ ವಿಧಾನವನ್ನು ತಿಳಿಸಬೇಕು. ಹಾಗೂ ಬೇರೆ ವಿಧಾನವನ್ನು ಅನುಸರಿಸಲು ಹೇಳಬೇಕು. ಆದರೂ ಅಂತಿಮ ತೀರ್ಮಾನವು ಅವಳದೇ ಆಗಿರಬೇಕು. ಅವಳಿಗೆ ಗರ್ಭಪಾತದ ಸೇವೆಯನ್ನು ಒದಗಿಸುವಾಗ ಸಂತಾನ ನಿಯಂತ್ರಣ ಸಾಧನಗಳನ್ನು ಮುಂದೆ ಕಡ್ಡಾಯವಾಗಿ ಉಪಯೋಗಿಸಲೇ ಬೇಕೇಂಬ ಪೂರ್ವ ಶರತ್ತು ಹಾಕಬಾರದು.
ಗರ್ಭಪಾತ ಸಮಸ್ಯೆಗಳ ನಿರ್ವಹಣೆ
ಸೂಕ್ತ ತರಬೇತಿಯಿರುವ ಸಿಬ್ಬಂದಿ ಮಾಡುವ ಗರ್ಭಪಾತಗಳಲ್ಲಿ ಸಮಸ್ಯೆಗಳು ಅತಿ ವಿರಳ ಆದರೂ ಗರ್ಭಪಾತ ಮಾಡಿಸಲು ಬಳಸುವ ಪ್ರತಿಯೊಂದು ಸ್ಥಳವೂ ಅಗತ್ಯ ಸಲಕರಣೆಗಳಿಂದ ಸುಸಜ್ಜಿತವಾಗಿರಬೇಕು. ಗರ್ಭಪಾತದ ನಂತರದ ಸಮಸ್ಯೆಗಳನ್ನು ಗುರುತಿಸುವ ಚಿಕಿತ್ಸೆ ನೀಡುವ, ಅಗತ್ಯವಾದರೆ ಸರಿಯಾದ, ಸೂಕ್ತವಾದ ಉಪಚಾರಕ್ಕೆ ಕಳುಹಿಸುವ ತಿಳುವಳಿಕೆ ಇರಬೇಕು. ದಿನದ ೨೪ ಗಂಟೆಯೂ ತೀವ್ರ ನಿಗಾವಹಿಸುವ ಸೌಲಭ್ಯ ಮತ್ತು ಕುಶಲತೆ ಇರಬೇಕು. ಗರ್ಭಪಾತವನ್ನು ಗರ್ಭಸ್ರಾವದ ರೀತಿಯಲ್ಲಿಯೇ ಎಚ್ಚರಿಕೆಯಿಂದ ನಿಗಾವಹಿಸಬೇಕು.
ತರಬೇತಿ ಪಡೆದ ಸಿಬ್ಬಂದಿ ಮಾಡುವ ವ್ಯಾಕ್ಯೂಮ್ ಅಸ್ಪಿರೇಷನ್ ವಿಧಾನದಲ್ಲಿ ಅಪೂರ್ಣ ಗರ್ಭಪಾತವಾಗುವ ಸಂಭವ ಬಹಳ ಅಪರೂಪ. ಇದು ಔಷಧಿ ಸೇವಿಸಿ ಗರ್ಭಪಾತಕ್ಕೆ ಎಳಸಿದಾಗ ಹೆಚ್ಚು ಪ್ರಮಾಣದಲ್ಲಿ ಕಾಣುವುದು. ಯೋನಿ ರಕ್ತ ಸ್ರಾವ, ಹೊಟ್ಟೆನೊವು, ಸೋಂಕು ಸಾಧಾರಣವಾಗಿ ಕಾಣುವುದು. ಗರ್ಭಧಾರಣೆಗೆ ಅನುಗುಣವಾಗಿ ಅಂಗಾಂಶಗಳು ಕಣ್ಣಿಗೆ ಕಂಡುಬರದಿದ್ದರೆ ಅಪೂರ್ಣ ಎನ್ನಬಹುದು. ಆರೋಗ್ಯ ರಕ್ಷಣೆ ಸೌಲಭ್ಯ ನೀಡುವ ಎಲ್ಲ ಸಿಬ್ಬಂದಿಯೂ ಅಸಂಪೂರ್ಣ ಗರ್ಭಪಾತವನ್ನು ನಿರ್ವಹಿಸುವಲ್ಲಿ ಪೂರ್ಣ ತರಬೇತಿ ಪಡೆದಿರಬೇಕು. ಗರ್ಭಾಶಯವನ್ನು ಉಪಕರಣಗಳ ಸಹಾಯದಿಂದ ಸ್ವಚ್ಛಗೊಳಿಸಬೇಕು. ಹೆಚ್ಚಿನ ರಕ್ತಸ್ರಾವ, ಸೋಂಕು ಸಾಮಾನ್ಯ. ಶಸ್ತ್ರಕ್ರಿಯೆಯ ಸಮಯದಲ್ಲಿ ಗರ್ಭಪಾತವಾದಾಗ ಗರ್ಭಧಾರಣೆಯ ಅವಧಿಗೆ ಅನುಗುಣವಾಗಿ ಅಂಗಾಂಶಗಳು ಕಣ್ಣಿಗೆ ಬೀಳದಿದ್ದರೆ ಅದು ಅಪೂರ್ಣ ಗರ್ಭಪಾತ ಎಂದು ನಿರ್ಧರಿಸಬಹುದು. ಆರೋಗ್ಯ ರಕ್ಷಣಾ ಸೇವಾ ಸಿಬ್ಬಂದಿ ಎಲ್ಲರೂ ಅಪೂರ್ಣ ಗರ್ಭಪಾತದ ಚಿಕಿತ್ಸೆ ಮತ್ತು ನಿರ್ವಹಣೆಯಲ್ಲಿ ತರಬೇತಿ ಹೊಂದಿರಬೇಕು. ಪುನಃ ಗರ್ಭಾಶಯವನ್ನು ಉಪಕರಣಗಳ ಸಹಾಯದಿಂದ ಸ್ವಚ್ಛಗೊಳಿಸಬೇಕು ಹೆಚ್ಚಿನ ರಕ್ತಸ್ರಾವ ಮತ್ತು ಸೋಂಕು ತಗುಲಿದರೆ ವಿಶೇಷ ನಿಗಾ ವಹಿಸಬೇಕು. ವಿಫಲ ಗರ್ಭಪಾತಶಸ್ತ್ರ ಕ್ರಿಯೆ ಅಥವಾ ಔಷಧ ಬಳಸಿ ಗರ್ಭಪಾತವಾದ ಎರಡು ಸಂದರ್ಭದಲ್ಲೂ ವಿಫಲ ಗರ್ಭಪಾತವಾಗಬಹುದು.ಅವರು ಪುನಃ ಪರೀಕ್ಷೆಗೆ ಬಂದಾಗ ಗರ್ಭ ಹಾಗೆಯೇ ಮುಂದುವರಿದುದು ಕಂಡುಬಂದರೆ ವ್ಯಾಕ್ಯೂಮ್ ಆಸ್ಪಿರೇಷನ್ ಅಥವಾ ಮೂರ ತಿಂಗಳು ಕಳೆದ ನಂತರದD&C ಮಾಡಬೇಕಾಗುವುದು.
ತೀವ್ರ ರಕ್ತ ಸ್ರಾವ ಹೆಮೊರೇಜ್ಭ್ರೂಣದ ಚೂರುಗಳು ಒಳಗೆ ಉಳಿದರೆ ತೀವ್ರ ರಕ್ತಸ್ರಾವವಾಗುವುದು. ಗಾಯ, ಸರವಿಕ್ಸಗೆ ಮತ್ತು ಗರ್ಭಾಶಯದಲ್ಲಿ ರಂದ್ರ ಆಗಬಹುದು. ಕಾರಣವನ್ನು ಗಮನಿಸಿ ಸೂಕ್ತ ಶಸ್ತ್ರಚಿಕಿತ್ಸೆ ಮಾಡಬೇಕಾಗುವುದು. ಗರ್ಭಾಶಯವನ್ನು ಪುನಃ ತೊಳೆಯುವುದು, ಗರ್ಭಾಶಯವನ್ನು ಬಲಗೊಳಿಸಲು ಔಷಧಿ ನೀಡುವುದು, ರಕ್ತನಾಳದೊಳಗೆ ದ್ರವ ಸೇರಿಸುವುದರಿಂದ ನೋವುಶಮನ ವಾಗುವುದು. ಅತಿ ಗಂಭೀರ ಸಂದರ್ಭದಲ್ಲಿ ರಕ್ತ ಪೂರಣ ಮಾಡಬೇಕು. ಲೆಪ್ರೋಸ್ಕೋಪಿ ಅಥವಾ ಲೆಪ್ರೋಟಮಿ ಶೋಧನೆ ಅಗತ್ಯ ಬೀಳಬಹುದು. ರಕ್ತಸ್ರಾವ ಹೆಚ್ಚಾದರೆ ಮರುಕಳಿಸಿದರೆ ಅದನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಆಕ್ಸಿತೋಸಿನ್ ಬಳಸಬೇಕು. ಎಲ್ಲ ಭಾಗಗಳು ಸುಸ್ಥಿರವಾಗಬೇಕು. ಇಲ್ಲವಾದರೆ ಆ ಮಹಿಳೆಯನ್ನು ಪರಿಣಿತರಲ್ಲಿಗೆ ಶೀಘ್ರವಾಗಿ ಕಳುಹಿಸಬೇಕು. ಸೋಂಕು ಗರ್ಭಪಾತದಲ್ಲಿ ಸೋಂಕು ಆಗುವುದು ವಿರಳ. ಸೋಂಕು ಆದರೆ, ಜ್ವರ, ಚಳಿ, ದುರ್ವಾಸನೆಯಿಂದ ಕೂಡಿದ ಯೋನಿ ಹಾಗೂ ಸರ್ವಿಕಲ್ ಡಿಸ್ಚಾರ್ಜ್, ಹೊಟ್ಟೆ, ಕಿಬ್ಬೊಟ್ಟೆ ನೋವು, ಯೋನಿಯಲ್ಲಿ ಸತತ ರಕ್ತ ಸ್ರಾವ, ಕಲೆಗಳು, ಏರಿದ ಬಿಳಿ ರಕ್ತಕಣಗಳ ಸಂಖ್ಯೆ, ಮೃದುವಾಗುವ ಗರ್ಭಾಶಯ ಸೋಂಕಿನ ಮುಖ್ಯ ಲ ಕ್ಷಣಗಳು. ಆಗ ಆಂಟಿಬಯೋಟಿಕ್ ಕೊಡಬೇಕು. ಗರ್ಭಾಶಯದಲ್ಲಿ ಉಳಿದಿರುವ ಭ್ರೂಣದ ತುಣುಕುಗಳು ಸೋಂಕಿಗೆ ಬಹುತೇಕ ಕಾರಣವಾಗಿರುತ್ತವೆ. ಗರ್ಭಾಶಯವನ್ನು ಇನ್ನೊಂದು ಸಲ ಪೂರ್ಣವಾಗಿ ಖಾಲಿಮಾಡುವುದೆ ಉತ್ತಮ. ಅವರು ತೀವ್ರ ಸೋಂಕಿನಿಂದ ಬಳಲಿದರೆ ಆಸ್ಪತ್ರೆಗೆ ದಾಖಲಾಗಬೇಕು. ಅವರಿಗೆ Prophylactic ಆಂಟಿ ಬಯೋಟಿಕ್ ನೀಡುವುದು ಗರ್ಭಪಾತದ ನಂತರದ ಸೋಂಕಿನ ನಿವಾರಣೆಗೆ ಅಗತ್ಯ.ಯುಟ್ರೈನ್ ರಂದ್ರಗಳು
ಇವು ಸಾಧಾರಣವಾಗಿ ಗಮನಕ್ಕೆಬಾರದೆ ಹೊರಗಿನ ಸಹಾಯವಿಲ್ಲದೆ ತಾವೆ ಗುಣವಾಗುವವು. ಮೊದಲ ತ್ರೈಮಾಸಿಕದಲ್ಲಿ ಗರ್ಭಪಾತವಾದ ೭೦೦ ಮಹಿಳೆಯರರಲ್ಲಿ ೧೪ ಮಂದಿ ಲೆಪ್ರೊಸ್ಕೋಪಿಕ ಚಿಕೆತ್ಸೆಗೆ ಒಳಗಾದರು. ಅವರಲ್ಲಿ ೧೨ ಜನಕ್ಕೆ ರಂದ್ರಗಳು ಅತಿ ಚಿಕ್ಕವಾಗಿದ್ದವು. ಲೆಪ್ರೊಸ್ಕೋಪಿ ಮಾಡದಿದ್ದರೆ ಅದು ಗೊತ್ತೆ ಆಗುತ್ತಿರಲಿಲ್ಲ. ಲೆಪ್ರೊಸ್ಕೋಪಿಯು ಅಗತ್ಯವಿದ್ದರೆ ರೋಗ ಪತ್ತೆಗೆ ಸಹಾಯ ಮಾಡುತ್ತದೆ. ಇದರಿಂದ ರೋಗಿಯ ಆರೋಗ್ಯದ ಬಗ್ಗೆ ಅನುಮಾನ ಬಂದರೆ ಬೋವೆಲ್, ರಕ್ತನಾಳ, ಇತರೆ ಅಂಗಾಂಶಗಳ ಹಾನಿಯನ್ನು ದುರಸ್ತಿ ಮಾಡಲು ಲೆಪರೊಟೆಮಿ ಅಗತ್ಯವೆನಿಸುವುದಿಲ್ಲ. ಅರಿವಳಿಕೆ ಮತ್ತು ಸಂಬಂಧಿಸಿದ ಸಮಸ್ಯೆಗಳು ಪೂರ್ಣ ಅರಿವಳಿಕೆಗಿಂತ ಸ್ಥಳೀಯ ಅರಿವಳಿಕೆಯು ಸುರಕ್ಷಿತ. ಮೊದಲ ತ್ರೈಮಸಿಕದಲ್ಲಿನ ಶೂನ್ಯ ಆಸ್ಪಿರೇಷನ್, ಡಯಲಿಟೇಷನ್ ಮತ್ತು ಎರಡನೆ ತ್ರೈಮಾಸಿಕದ ವ್ಯಾಕ್ಯೂಮ್ ಆಸ್ಪಿರೇಷನ್ ಸಮಯದಲ್ಲಿ ಪೂರ್ಣ ಅರಿವಳಿಕೆ ಉಪಯೋಗಿಸಸುವಾಗ ಸಿಬ್ಬಂದಿಯು ಸ್ನಾಯು ಸೆಳೆತದ ನಿರ್ವಹಣೆ ಮಾಡಿ ಸುಸ್ಥಿರತೆ ಕಾಪಾಡುವ ತರಬೇತಿ ಪಡೆದಿರಬೇಕು. ಹೃದಯ ಮತ್ತು ಉಸಿರಾಟದ ತೊಂದರೆ ಬಂದರೆ ನಿಭಾಯಿಸುವ ಸ್ಥಿತಿಯಲ್ಲಿ ಇರಬೇಕು. ನಾರ್ಕೋಟಿಕಲ್ ರಿಏಜಂಟ್‌ಗಳು ಸದಾ ದೊರಕುವಂತಿರಬೇಕು
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/2/2020
ಮಗು ಚೆನ್ನಾಗಿ ಬೆಳೆಯುತ್ತಿದೆಯೇ, ಅದರಲ್ಲಿ ಯಾವುದೇ ಅಸಹಜತೆ...
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಗರ್ಭಿಣಿಯಲ್ಲಿ ಸೋಂಕುರೋಗಗಳು ಹರಡುವ ಬಗೆ,ಮಗುವಿಗಿರುವ ಅಪಾಯ...