অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮುಟ್ಟಿನ ದೋಷಗಳು

ಅನೇಕ ಬಗೆಯ ಮುಟ್ಟಿನ ದೋಷಗಳಿವೆ. ಅತಿ ಕಡಿಮೆ ಮುಟ್ಟಿನಿಂದ ಹಿಡಿದು ಅತಿ ದೀರ್ಘ ಅವಧಿಯಸ್ರಾವದ ಮತ್ತು ತೀವ್ರನಾರೋಗ್ಯವು ಅಗಬಹುದು. ಕೆಳಗಿನ ಮುಟ್ಟುದೋಷಗಳ ಪಟ್ಟಿಯುಬೇರೆ ಬೇರೆ ಹಂತದಮುಟ್ಟಿನ ದೋಷಗಳನ್ನು ಗುರುತಿಸಲು ನಿಮಗೆ ಸಹಾಯವಾಗುವುದು.

ಡೈಸ್ಮೆನೊರಾ

ಡೈಸ್ಮೆನೊರಾ ನೋವಿನಿಂದ ಕೂಡಿದ ಸೆಳೆತದ ಋತುಸ್ರಾವ.ಇದರಲ್ಲಿ ಎರಡುವಿಧ. ಪ್ರಾಥಮಿಕ ಡೈಸ್ಮೆನೊರಾ ಮತ್ತು ಅನುಷಂಗಿಕ ಡೈಸ್ಮೆನೊರಾ . ಪ್ರಾಥಮಿಕ ಡೈಸ್ಮೆನೊರಿಲ್ ಮುಟ್ಟಿನ ಕಾಲದ ನೋವು ಪ್ರಾಥಮಿಕ ಡೈಸ್ಮೆನೊರಾ ಸರ್ವೆ ಸಾಮಾನ್ಯವಾಗಿ ಮುಟ್ಟಿನ ಅವಧಿಯ ಸ್ತ್ರಿ ರೋಗ. ಇದರಿಂದ ಕಿಬ್ಬೊಟ್ಟೆಯಲ್ಲಿ ಮುಟ್ಟಿನ ಅವಧಿಯಲ್ಲಿ ಇದರಿಂದ ಕಿಬ್ಬೊಟ್ಟೆಯಲ್ಲಿ ನೋವು ಋಉತುಸ್ರಾವ ಪ್ರಾರಂಭವಾದೊಡನೆ ಕಾಣಿಸಿಕೊಳ್ಳುವುದು. ಬೇರೆ ಯಾವದೆ ಪೆಲ್ವಿಕ್ ರೋಗವಿಲ್ಲದಿದ್ದರೂ ಕೂಡ ನೋವಿರುವುದು.ಇದನ್ನು ಅನುಷಂಗಿಕ ಡೈಸ್ಮೆನೊರಾ ಭಿನ್ನ ಎಂದು ಗುರುತಿಸಬೇಕು.. ಡೈಸ್ಮೆನೊರಾದಿಂದ ನೋವಿನೀಮದ ಕೂಡಿದ ಮುಟ್ಟು ಇರುವುದು.ಇದಕ್ಕೆ ಎಂಡೋಮೆಟ್ರಿಯೋಸಿಸ್ ಕಾರಣ ವಿರಬಹುದು.

ಸಂಭಾವ್ಯತೆ ಶೇ. ೨೦ರಷ್ಟಿದೆ. ತೀವ್ರಸ್ವರೂಪದ ಡೈಸ್ಮೆನೊರಾದ ಜತೆ ಇನ್ನೂ ಅನೇಕ ಅಪಾಯಕಾರಿ ಅಂಶಗಳಿವೆ. ದೀರ್ಘ ಋತುಸ್ರಾವ, ಧೂಮಪಾನ, ಸ್ಥೂಲಕಾಯ ಮತ್ತು ಮದ್ಯಪಾನದಿಂದ ಈ ಅಪಾಯ ಹೆಚ್ಚುತ್ತದೆ. ತೂಕ ಇಳಿಸಿಕೊಳ್ಳುವ ಪ್ರಯತ್ನವೂ ಕೂಡ ಋತುಸ್ರಾವದಲ್ಲಿ ನೋವು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ನೋವಿನ ಸ್ವರೂಪದ ಮೇಲೆ ದೈಹಿಕ ಚಟುವಟಿಕೆಯು ಯಾವುದೇ ಪರಿಣಾಮ ಬೀರುವುದಿಲ್ಲ.ಮಗುವಾದ ನಂತರ ನೋವು ಕಡಿಮೆಯಾಗುತ್ತದೆ ಎಂಬ ನಂಬಿಕೆಯನ್ನು ಬೆಂಬಲಿಸುವ ಯಾವುದೇ ಅಧ್ಯಯನದಿಂದ ಹೊರಬಿದ್ದಿಲ್ಲ. ಅನಷಮಗಿಕ ಡೈಸ್ಮೆನೊರಾ ಎಂದರೆ ಅತಿಯಾದ ಪ್ರೊಸ್ಟೊ ಗ್ಲಾಂಡಿನ್ ಗಳು ಮತ್ತು ಅತಿಯಾದ ಗರ್ಭಾಶಯದ ಸಂಕುಚನ ಅಥವ ಇನ್ನಾವುದೋ ರೋಗದಿಂದ ಆಗುವ ನೋವು.

ಅಮೆನೊರಯಾ

ಅಮೆನೊರಯಾ ಎಂದರೆ ಋತುಚಕ್ರ ಆಗದೆ ಇರುವುದು. ಅದರಲ್ಲಿ ಎರಡು ವಿಧ. ಪ್ರಾಥಮಿಕ ಅಮೆನೊರಯಾ ಮತ್ತು ಅನುಷಂಗಿಕ ಅಮೆನೊರಯಾ . ಪ್ರಾಥಮಿಕ ಅಮೆನೊರಯಾ ಎಂದರೆ ಅ ಮಹಿಳೆಗೆ ಋತು ಚಕ್ರ ಪ್ರಾರಮಬ ವಾಗದೆ ಇರುವುದು.ಅನಷಂಗಿಕ ಅಮೆನೊರಯಾ ಎಂದರೆ ಋತು ಚಕ್ರವು ಕನಿಷ್ಟ ಆರು ತಿಂಗಳಾದರೂ ಆಗದೆ ಇರುವುದು. ಅನುಷಂಗಿಕ ಅಮೆನೊರಯಾ ವು ಗರ್ಭಧಾರಣೆಯ ಕಾರಣದಿಂದ ಆಗಿರಬಹುದು.

ಮೆನೊರ ಜಿಯಾ

ಮೆನೊರ ಜಿಯಾ ಅಥವ ಅತಿಯಾದ ದೀರ್ಘ ಕಾಲದ ಋತುಸ್ರಾವ ವಾಗುವುದು.ಇದನ್ನು ಹೈಪರ್ ಮೆನೊರಜಿಯಾ ಎಂದು ಕರೆಯುವರು. ಇದು ಸಾಧಾರಣವಾಗಿ ಆಗುವ ಹೆಚ್ಚಿನ ಋತುಸ್ರಾವ ವಲ್ಲ. ಇದು ಇದು ಅತಿ ಹೆಚ್ಚಿನ ಸ್ರಾವ ಮತ್ತು ಏಳುದಿನಗಳಿಗಿಂತ ಹೆಚ್ಚಾಗಿ ಆದಾಗ ಮಾತ್ರ ರೋಗವಿದೆ ಎನ್ನಬಹುದು. ಮೆನೊರ ಜಿಯಾದಲ್ಲಿ ಋಉತುಸ್ರಾವದಜತೆಗೆ ದೊಡ್ಡದಾದ ರಕ್ತದ ಗರಣೆ ಇರಬಹುದು.. ಇದು ಹಾರ್ಮೋನುಗಳ ಅಸಮತೋಲನೆಯಿಂದ ಅಥವ ಗರ್ಭಾಶಯದಲ್ಲಿನ ಗಡ್ಡೆಗಳಿಂದದಾಗಿ ಬರಬಹುದು.

ಎಂಡೊಮೆಟ್ರಿಯಲ್ ಕ್ಯಾನ್ಸರ್

ಎಂಡೊಮೆಟ್ರಿಯಲ್ ಕ್ಯಾನ್ಸರ್ ಗರ್ಭಾಶಯದ ಗೋಡೆಯ ಪೊರೆಗೆ ಬರುವುದು. ಸಾಧಾರಣವಾಗಿ , ಎಂಡೊಮೆಟ್ರಿಯಲ್ ಕ್ಯಾನ್ಸರ್ ಬಂದಾಗ ಯೊನಿಯಿಂದ ಹೆಚ್ಚು ರಕ್ತಸ್ರಾವ ಆಗುತ್ತದೆ. ಇದು ಗಂಭೀರವಾದ ಕಾಯಿಲೆ.ಇದನ್ನು ಬೇಗ ಪತ್ತೆ ಮಾಡಿದರೆ ಯಶಸ್ವಿಯಾಗಿ ಚಿಕಿತ್ಸೆ ಮಾಡಬಹುದು. ಇದು 50 ದ ಮೇಲಿರುವ ಮಹಿಳೆಯರಿಗೆ ಮತ್ತು ಎಸ್ಟ್ರೊಜಿನ್ ಮಟ್ಟ ಹೆಚ್ಚಿರುವ ವರಿಗೆ ಬರುವ ಸಂಭವ ಹೆಚ್ಚು.

ಗಡ್ಡೆಗಳು

ಗಡ್ಡೆಗಳು ಗರ್ಭಾಶಯದ ಸ್ನಾಯು ಭಿತ್ತಿಯ ಮೇಲೆ ಆಗಬಹುದು.. ಅವುಗಳ ಗಾತ್ರ ಬೆರೆ ಬೇರೆ ಯಾಗಿರಬಹುದು. ಅತಿಚಿಕ್ಕದು ಅಥವ ದೊಡ್ಡದಾಗಿಯು ಇರಬಹುದು. ಕೆಲವು ಮಹಿಳೆಯರಿಗೆ ಇವುಇರುವ ಲಕ್ಷಣಗಳೇ ಕಾಣುವುದಿಲ್ಲ.ಇತರರಿಗೆ ಅತಿಯಾದ ಮತ್ತು ದೀರ್ಘಕಾಲದ ಸ್ರಾವ ಆಗಬಹುದು. ಇವು ಕಿಬ್ಬೊಟ್ಟೆಯ ನೋವಿಗೂ , ಸಂಭೋಗಸಮಯದ ನೋವಿಗೂ ಕಾರಣ ವಾಗುವವು. ಪದೆ ಪದೇ ಮೂತ್ರವಿಸರ್ಜನೆಯ ಅಗತ್ಯ , ದೊಡ್ಡ ಕರುಳಿನಲ್ಲಿ ಉತ್ತಡ ಮತ್ತು ಮಲಬದ್ದತೆ ಆಗಬುದು.ವಿಸರ್ಜನೆ . ಮಹಿಳೆಯರಿಗೆ 35 ವರ್ಷವಾದ ಮೆಲೆ ಅಥವ ಅತಿ ಹೆಚ್ಚಾದ ಹೆರಿಗೆಯಾದವರಿಗೆ ಈ ಗಡ್ಡೆಗಳು ಬರುವ ಹೆಚ್ಚು ಆತಂಕ ವಿದೆ.

ಪೆಲ್ವಿಕ್ ಉರಿಯೂತದ ರೋಗ

ಪೆಲ್ವಿಕ್ ಉರಿಯೂತದ ರೋಗವು (ಅಥವ ಪಿ ಯ ಡಿ )ಮಹಿಳೆಯ ಸಂತಾನೊತ್ಪತ್ತಿ ಅಂಗಗಳಲ್ಲಿ ಯವುದೇ ಭಾಗಗಕ್ಕೆ ಉಂಟಾಗುವ ಸೋಂಕಿನಿಂದ ಬರುವುದು. ದುರ್ವಾಸನೆಯಿಂದ ಕೂಡಿದ ಸ್ರಾವ ಇದರ ಲಕ್ಷಣ .ಇದರ ಜತೆ ಅನಿಯಮಿತ ಋತುಸ್ರಾವದ ಅವಧಿ ಅಥವ ಸಂಭೋಗ ಸಮಯದಲ್ಲಿ ನೋವು ಇರಬಹುದು.ಇದಕ್ಕೆ ಕಾರಣ ವಾಗುವುದು ಲೈಂಗಿಕವಾಗಿ ಹರಡುವ ರೋಗದ ಸಂಪರ್ಕಕ್ಕೆ ಬರುವುದು ಇದು ಬಹಳ ಗಂಭೀರವಾದ ಅನಾರೋಗ್ಯ ಇದರಿಂದ ಫೆಲೋಪಿಯನ್ ನಾಳಗಳು ಹಾನಿಗೀಡಾಗಬಹುದು.ಮತ್ತು ಮುಂದೆ ಗರ್ಭಧಾರಣೆಯಾಗುವುದನ್ನು ತಡೆಯಬಹುದು

ಮುಟ್ಟಿನಪೂರ್ವದ ಸಿಂಡ್ರೊಮು

ಮುಟ್ಟಿನಪೂರ್ವದ ಸಿಂಡ್ರೊಮು ಮುಟ್ಟಾಗುವ ಅವಧಿಗೆಎಲರಿಂದ ಹದಿನೈದು ದಿನ ಮೊದಲೆ ನೋವು ಕಾಣಿಸಿಕೊಳ್ಳುವುದು. ಕೆಲವು ಸಲ ನಂತರವೂ ಮುಂದುವರಿಯಬಹುದು.ಅನೇಕ ಮಹೀಲೆಯರಿಗೆ ಇದು ತುಸು ಮಟ್ಟಿಗೆ ಅನುಭವಕ್ಕೆ ಬರುವುದು.ಆದರೆ ಕೆಲವರಿಗೆ ಆ ಸಮಯದಲ್ಲಿ ತೀವ್ರವಾದ ನೋವು ಅಥವ ಭಾವನಾತ್ಮಕ ಸಮಸ್ಯೆ ತಲೆದೋರಬಹುದು.

ಬೇಗ ಆಗುವ ಮುಟ್ಟಿನ ಸಮಸ್ಯೆ ಪತ್ತೆಮಾಡುವುದು

ಬೇಗ ಆಗುವ ಮುಟ್ಟಿನ ಸಮಸ್ಯೆ ಪತ್ತೆಮಾಡಲು ವೈದ್ಯರು ಪರೀಕ್ಷೆಗಳ ಸರಣಿಯನ್ನೆ ಮಾಡಬೆಕಾಗುವುದು. ಇವುಗಳಲ್ಲಿ ಪೆಲ್ವಿಕ್ ಪರೀಕ್ಷೆ , ರಕ್ತ ಪರೀಕ್ಷೆ ಮತ್ತು ಅಲ್ಟ್ರಾ ಸೌಂಡ್ ಪರಿಕ್ಷೆಗಳು ಸೇರಿರುತ್ತವೆ. ಮೊದಲ ಸಲ ಬಂದ ಅಥವ ದೀರ್ಘಕಾಲವಿರದ ನೋವು ಬೇಗ ಪತ್ತೆ ಯಾಗದೆ ಇರಬಹುದು. ಅಥವ ತೀವ್ರವಾಗುವರೆಗೆ ಗೊತ್ತಾಗುವುದಿಲ್ಲ..

ಮುಟ್ಟಿನ ಸಮಸ್ಯೆಗೆ ಹೇಗೆ ಚಿಕಿತ್ಸೆ ಮಾಡಬೇಕು

ಮುಟ್ಟಿನ ಸಮಸ್ಯೆಗೆ ನೀಡುವ ಚಿಕಿತ್ಸೆಯು ಸ್ರಾವದ ತಿಔರತೆ ಮತ್ತು ಅದು ಆಗುತ್ತಿರುವ ಅವಧಿಯನ್ನು ಅವಲಂಬಿಸಿದೆ. ಚಿಕ್ ಪುಟ್ಟ್ ಸಮಸ್ಯೆಗಳಿಗೆ ಅಥವ ಆರು ತಿಮಗಳ ಒಳಗಿನವಾದರೆ , ನಿಮ್ಮ ವಯದ್ಯರು ಜೀವನ ಶೈಲಿಯ ಬದಲಾವಣೆಗೆ ಮತ್ತು ಇತರ ಸ್ವ ಸಹಾಯ ಪರಿಹಾರ ಪಡೆಯಲು ಸಲಹೆ ಮಾಡುವರು. ಅವು ಕೆಳಗಿನಂತಿವೆ:

 

  • ನಿಯಮಿತ ವ್ಯಯಾಮ
  • ಸಮತೂಕದ ಆಹಾರದ ಸೇವನೆ
  • ಆಹಾರ ಕ್ರಮದಲ್ಲಿ ಕಬ್ಬಿಣಾಂಶ, ಕ್ಯಾಲ್ಷಿಯಂ, ವಿಟಮಿನ್ ಬಿ ಸೇರ್ಪಡೆ ( ಅಥವ ಪೂರಕಗಳನ್ನು ತೆಗೆದುಕೊಳ್ಳಿ)
  • ಮುಟ್ಟಿನ ನೋವಿಗೆ ಪೆರಸಿಟಮಾಲ್ ತೆಗೆದುಕೊಳ್ಳಿ
  • ಬಿಸಿನೀರಿನ ಬಾಟಲಿ ಬಳಸಿ.

ಮುಟ್ಟಿನ ಸಮಸ್ಯೆಗೆ ಪರ್ಯಾಯ ಚಿಕಿತ್ಸೆಗಲನ್ನು ಬಳಸಬಹುದು. ಅವು ಗಳು ಈ ರೀತಿಇವೆ :

  • ಮುಟ್ಟಿನ ಸಮಸ್ಯೆಗಳಿಗಾಗಿಯೆನಿರ್ಧಿಷ್ಟವಾಗಿ ಸಿದ್ಧ ಪಡಿಸಿದ ಗಿಡ ಮೂಲಿಕೆಯ ಪೂರಕಗಳನ್ನು ತೆಗೆದುಕೊಳ್ಳಿ.;
  • ಮುಟ್ಟಿನ ನೋವಿಗೆ ಚಮೊಮೈಲ್ ಅಥವ ಶೂಂಟಿಯ ಚಹಾ ತೆಗೆದುಕೊಳ್ಳಿ
  • ಸೆಳೆತ ನಿರೋಧಕಗಳಾದ ವೈಲ್ಡ ಯಾಮ್ ಅಥವ ಮದರ್ ವಾರ್ಟ ಸೆವಿಸಿ;
  • ಹೊಟ್ಟೆಯಮೆಲೆ ಲ್ಯಾವಂಡರ್ ಎಣ್ಣೆ ಸವರಿ;
  • ರಾಸ್ಪ ಬರಿ ಎಲೆಯ ಟೀ ಕುಡಿಯಿರಿ.;
  • ಜಿನ್ ಕಗೊ ಪೂರಕ ಬಳಸಿ;
  • ಮುಟ್ಟಿನ ಸಮಸ್ಯಗಗಾಗಿ ಕೆ ಹೂವುಗಳಿಂದ ತಯಾರಿಸಿದ ಪರಿಹಾರ ಪಡೆಯಿರಿ. ನೀವಿಕೊಳ್ಳಿ;
  • ಆಕ್ಯು ಪಂಕ್ಚರ್ ಚಿಕಿತ್ಸೆ ಮಾಡಿಸಿಕೊಳ್ಳಿ.

ಮುಟ್ಟಿನ ಸಮಸ್ಯೆಯು ತೀವ್ರವಾದರೆ ಅಥವ ಮುಂದುವರೆದರೆ ಅದಕ್ಕೆ ಚಿಕಿತ್ಸೆ ಮಾಡಲು ನಿಮ್ಮ ವೈದ್ಯರು ಕೆಳಗೆ ಕಾನಿಸಿದ ಔಷಧಿಗಳನ್ನು ಕೊಡಬಹುದು :

  • ಉರಿಯೂತ ನಿರೋಧಕ ಔಷಧಿಯಿಂದ ಚಿಕಿತ್ಸೆ ಮಾಡಬಹುದು.
  • ಹಾರ್ಮೋನು ರಿಪ್ಲೇಸ್ಮೆಂಟ್ ಚಿಕಿತ್ಸೆ
  • ಮುಟ್ಟ್ನ್ನುಸಕ್ರಮ ಗೊಳಿಸಲು ಸಮತಾನ ನಿಯಂತ್ಣ ಗುಳಿಗೆ ನೀಡಬಹುದು

ಗಂಭೀರ ಸಮಸ್ಯೆಗಳಾದ ಗಡ್ಡೆಗಳು ಅಥವ ಕ್ಯಾನ್ಸರ್ ಕಂಡುಬಂದರೆ ಸಸ್ತ್ರ ಚಿಕಿತ್ಸೆಯ ಅಗತ್ಯ ಬೀಳಬಹುದು. ಬಹುತೇಕ ಮುಟ್ಟಿನ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ.ಅದರಬಗ್ಗೆ ಚಿಂತೆ ಮಾಡಬೆಕಾಗಿಲ್ಲ. ಋಉತು ಚಕ್ರವನ್ನು ಅನೇಕ ಅಂಶಗಳು ವ್ಯತ್ಯಾಸ ಮಾಡಬಹುದು.ದೇಹವು ಮುಟ್ಟಿಗೆ ಹೊಂದಿಕೊಳ್ಳುವವರೆಗ ಬೇಗ ಮುಟ್ಟಾಗಬಹುದು. ಆದರೂ ನಿಮಗೆ ಅನುಮನ ಬಂದರೆ ವೈದ್ಯರನ್ನು ಕೇಳುವುದು ಉತ್ತಮ.ವಿಶೇಷವಾಗಿ ಬಹುದಿನದ ವರೆಗ ಸ್ರಾವವಾದರೆ, ಅಧಿಕವಾಗಿ ಸ್ರಾವವಾದರೆ,,ರಕ್ತದ ಗರಣೆಗಳು ಕಂಡುಬಂದರೆ, ಸಮಸ್ಯೆಯು ನಿರಂತರವಾದರೆ ಕಮಡಿತ ವೈದ್ಯರ ಸಲಹೆ ಪಡೆಯಿರಿ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate