অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ.

ಪ್ರಕರಣಗಳ ಅನುಕ್ರಮಣಿಕೆ

ಪ್ರಕರಣಗಳು:

1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ

2. ಪರಿಭಾಷೆಗಳು

3. ಅಧಿನಿಯಮದ ಅನ್ವಯ

4. ಕೆಲವು ಅನುದಾನಗಳ ರದ್ದಿಯಾತಿ ಮತ್ತು ಆ ಬಗೆಗಿನ ನಷ್ಟಪರಿಹಾರದ ಸಂದಾಯ

5. ನಿಯಮ ರಚನಾಧಿಕಾರ

6. ಇತ್ಯರ್ಥವಾಗದೆ ಇರುವ ವಿಷಯಗಳ ವಿಲೇವಾರಿ

7. ನಿರಸನ

ಅನುಸೂಚಿ.

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

1967ರ ಅಧಿನಿಯಮ 15.- ಹೈದರಾಬಾದ್ ನಗದು ಅನುದಾನಗಳ ರದ್ದಿಯಾತಿ ಅಧಿನಿಯಮ, 1952ರ

3ನೇ ಪ್ರಕರಣದ ಮೇರೆಗೆ ಆ ಅಧಿನಿಯಮದ ಅನುಸೂಚಿಯ ಭಾಗ `ಎ' ನಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲ ನಗದು

ಅನುದಾನಗಳನ್ನು, 1952ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿತ್ತು ಮತ್ತು ಆ ಅನುಸೂಚಿಯ

ಭಾಗ-`ಸಿ' ನಲ್ಲಿ ನಿರ್ದಿಷ್ಟಪಡಿಸಲಾದ ನಗದು ಅನುದಾನಗಳನ್ನು 1954ರ ಜುಲೈ 1 ರಿಂದ ನಿಲ್ಲಿಸಲಾಗಿತ್ತು. ಈ

ಅಧಿನಿಯಮದ ಸಿಂಧುತ್ವವನ್ನು ಹೈದರಾಬಾದ್ ಉಚ್ಚ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿತ್ತು ಮತ್ತು ಉಚ್ಚ

ನ್ಯಾಯಾಲಯವು ನಷ್ಟ ಪರಿಹಾರವನ್ನು ಸಂದಾಯ ಮಾಡದೆ ನಗದು ಅನುದಾನಗಳನ್ನು ರದ್ದುಪಡಿಸುವುದು

ಕಾನೂನು ಬಾಹಿರವೆಂದು ಮತ್ತು ಅಧಿನಿಯಮದ 3ನೇ ಪ್ರಕರಣದ ಮೇರೆಗೆ ನಿಲ್ಲಿಸಲಾಗಿದ್ದ ``ರುಸುಂ'' ಗಳನ್ನು

ಪಡೆಯಲು ಅರ್ಜಿದಾರರು ಹಕ್ಕುಳ್ಳವರೆಂದು ಎತ್ತಿ ಹಿಡಿಯಿತು. ಹೈದರಾಬಾದ್ ಸರ್ಕಾರವು ಉಚ್ಚ ನ್ಯಾಯಾಲಯದ

ಆದೇಶಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅಪೀಲು ಹಾಕಿತು, ಆದರೆ ಅಪೀಲನ್ನು ಆಂದ್ರ ಪ್ರದೇಶ

ಸರ್ಕಾರವು ಆ ತರುವಾಯ ಹಿಂತೆಗೆದುಕೊಂಡಿತು. ನಗದು ಅನುದಾನಗಳ ರದ್ದಿಯಾತಿ ಮತ್ತು ರದ್ದಿಯಾತಿಗೆ

ಸಂಬಂಧಿಸಿದಂತೆ ನಷ್ಟ ಪರಿಹಾರದ ಸಂದಾಯಕ್ಕೆ ವ್ಯವಸ್ಥೆ ಮಾಡುವ ಸಲುವಾಗಿ, ಆಂಧ್ರ ಪ್ರದೇಶದ ವಿಧಾನ

ಮಂಡಲವು, ಆಂಧ್ರ ಪ್ರದೇಶ (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1959ನ್ನು ಅಂಗೀಕರಿಸಿತು.

ಮಹಾರಾಷ್ಟ್ರ ಸರ್ಕಾರವೂ ಸಹ ನಗದು ಅನುದಾನಗಳ ರದ್ದಿಯಾತಿಗಾಗಿ ಮತ್ತು ನಷ್ಟ ಪರಿಹಾರದ ಸಂದಾಯಕ್ಕಾಗಿ

ಕಾನೂನು ರಚನೆ ಮಾಡಲು ಕ್ರಮಕೈಗೊಳ್ಳುತ್ತದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ ನಗದು


ಅನುದಾನಗಳ

ಪದ್ಧತಿಯನ್ನು ರದ್ದುಪಡಿಸಲು ಕಾನೂನು ರಚನೆಯು ಅವಶ್ಯಕವೆಂದು ಪರಿಗಣಿಸಲಾಯಿತು.

ಆದ್ದರಿಂದ ವಿಧೇಯಕ.

(ದಿನಾಂಕ 26.7.1967ರಂದು ಕರ್ನಾಟಕ ರಾಜ ಪತ್ರ (ವಿಶೇಷ ಸಂಚಿಕೆ)ದ ಭಾಗ-Iಗಿ-2ಎ, ಸಂಖ್ಯೆ 155,

ಪುಟ 7 ರಲ್ಲಿ ಪ್ರಕಟಿಸಲಾಗಿದೆ).

1967ರ 1

[ಕರ್ನಾಟಕ]1

ಅಧಿನಿಯಮ ಸಂಖ್ಯೆ 15

(1967ರ ಡಿಸೆಂಬರ್ ಇಪ್ಪತ್ತೊಂದನೇ ದಿನಾಂಕದಂದು 1

[ಕರ್ನಾಟಕ ರಾಜ್ಯಪತ್ರ]1 ದಲ್ಲಿ ಮೊದಲು ಪ್ರಕಟವಾಗಿದೆ.)

(1967ರ ಡಿಸೆಂಬರ್ ಹನ್ನೊಂದನೇ ದಿನಾಂಕದಂದು ರಾಷ್ಟ್ರಪತಿಯವರ ಅನುಮತಿಯನ್ನು ಪಡೆದಿದೆ.) 1

[ಕರ್ನಾಟಕ]1 (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1967.

1

[ಕರ್ನಾಟಕ ರಾಜ್ಯ]1 ದ 1

[ಗುಲ್ಬರ್ಗಾ ಪ್ರದೇಶ]1 ದ ಕೆಲವು ವರ್ಗಗಳ ನಗದು ಅನುದಾನಗಳನ್ನು

ನಿಲ್ಲಿಸಲು ಒಂದು ಅಧಿನಿಯಮ.

1

[ಕರ್ನಾಟಕ ರಾಜ್ಯ]1 ದ

1

[

ಗುಲ್ಬರ್ಗಾ ಪ್ರದೇಶದ]1 ಕೆಲವು ವರ್ಗಗಳ ನಗದು ಅನುದಾನಗಳನ್ನು

ನಿಲ್ಲಿಸುವುದು ಯುಕ್ತವಾಗಿರುವುದರಿಂದ;

ಇದು, ಭಾರತ ಗಣರಾಜ್ಯದ ಹದಿನೆಂಟನೇ ವರ್ಷದಲ್ಲಿ 1

[ಕರ್ನಾಟಕ]1 ರಾಜ್ಯ ವಿಧಾನ ಮಂಡಲದಿಂದ

ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು, ಎಂದರೆ:-

1. ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973ರ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.


ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.-

(1) ಈ ಅಧಿನಿಯಮವನ್ನು 11

[ಕರ್ನಾಟಕ]1 (ನಗದು

ಅನುದಾನಗಳ ರದ್ದಿಯಾತಿ) ಅಧಿನಿಯಮ, 1967 ಎಂದು ಕರೆಯತಕ್ಕದ್ದು.

(2) ಇದು 1

[ಕರ್ನಾಟಕ ರಾಜ್ಯ]1

ದ 1

[ಗುಲ್ಬರ್ಗಾ ಪ್ರದೇಶ]1

ಕ್ಕೆ ವ್ಯಾಪ್ತವಾಗುತ್ತದೆ.

1. ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973ರ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(3) ಇದು ಕೂಡಲೇ ಜಾರಿಗೆ ಬರತಕ್ಕದ್ದು.


ಪರಿಭಾಷೆಗಳು.-

ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(ಎ) ``ಸರ್ಕಾರ'' ಎಂದರೆ ರಾಜ್ಯ ಸರ್ಕಾರ;

(ಬಿ) ``ಧರ್ಮಾದಾಯ ಸಂಸ್ಥೆ'' ಎಂದರೆ, ಧರ್ಮಾರ್ಥ, ಧರ್ಮಾದಾಯ ಅಥವಾ ಲೋಕೋಪಕಾರಿ

ಉದ್ದೇಶಗಳಿಗಾಗಿ ಸಾಮಾನ್ಯವಾಗಿ ಸಾರ್ವಜನಿಕರ ಅಥವಾ ಅದರ ಯಾವುದೇ ಸಮುದಾಯ ಅಥವಾ ಭಾಗಕ್ಕೆ

ಸಮರ್ಪಿತವಾದ ಅಥವಾ ಅವರ ಸೌಲಭ್ಯಕ್ಕಾಗಿ ಇರುವ ಅಥವಾ ಅವರು ರೂಢಿಗತವಾಗಿ ಆಚರಿಸಿಕೊಂಡು ಬಂದ

ಮತ್ತು ಒಂದು ನಿರ್ದಿಷ್ಟ ಸ್ಥಳ ಹಾಗೂ ಪರಿಚಿತ ವಿಳಾಸವನ್ನು ಹೊಂದಿರುವ ಯಾವುದೇ ಧರ್ಮಾದಾಯ ಸಂಸ್ಥೆ;

(ಸಿ) ``ನಿಯಮಿಸಲಾದುದು'' ಎಂದರೆ, ಈ ಅಧಿನಿಯಮದ ಮೇರೆಗೆ ರಚಿಸಲಾದ ನಿಯಮಗಳಿಂದ

ನಿಯಮಿಸಲಾದುದು;

(ಡಿ) ``ಧಾರ್ಮಿಕ ಸಂಸ್ಥೆ '' ಎಂದರೆ, ಸಾರ್ವಜನಿಕ ಪೂಜಾ ಸ್ಥಳವಾಗಿ, ಸಾಮಾನ್ಯವಾಗಿ ಸಾರ್ವಜನಿಕರ ಅಥವಾ

ಅದರ ಯಾವುದೇ ಸಮುದಾಯ ಅಥವಾ ಭಾಗಕ್ಕೆ ಸಮರ್ಪಿತವಾದ ಅಥವಾ ರೂಢಿಗತವಾಗಿ ಆಚರಿಸಿಕೊಂಡು

ಬಂದ ಮತ್ತು ಒಂದು ನಿರ್ದಿಷ್ಟ ಸ್ಥಳ ಹಾಗೂ ಪರಿಚಿತ ವಿಳಾಸವನ್ನು ಹೊಂದಿರುವ ಯಾವುದೇ ಧಾರ್ಮಿಕ

(ಮಂದಿರ, ಪುಣ್ಯಕ್ಷೇತ್ರ, ಮಸೀದಿ ಅಥವಾ ಅಂಥ ಯಾವುದೇ ಇತರ) ಸಂಸ್ಥೆ.


ಅಧಿನಿಯಮದ ಅನ್ವಯ.-

(1) ಈ ಅಧಿನಿಯಮವು (2)ನೇ ಉಪ ಪ್ರಕರಣದಲ್ಲಿ ನಮೂದಿಸಿದವುಗಳನ್ನು

ಹೊರತುಪಡಿಸಿ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ಯಾವುದೇ ನಗದು ಅನುದಾನಕ್ಕೆ ಅನ್ವಯವಾಗತಕ್ಕದ್ದು.

(2) ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಯಾವುದೇ ಧಾರ್ಮಿಕ ಅಥವಾ ಧರ್ಮಾದಾಯ

ಸಂಸ್ಥೆಯ ಹೆಸರಿನಲ್ಲಿ ಅಥವಾ ಅದರ ಬೆಂಬಲಕ್ಕಾಗಿ ನೀಡಲಾದಂಥ ಅಥವಾ ಯಾವುದೇ ಧಾರ್ಮಿಕ ಅಥವಾ

ಧರ್ಮಾದಾಯ ಸಂಸ್ಥೆಗೆ ಸಂಬಂಧಿಸಿದ ಸಾರ್ವಜನಿಕ ಸ್ವರೂಪದ ಸೇವೆ ಅಥವಾ ಧರ್ಮಾರ್ಥವಾಗಿರುವಂಥ

ಯಾವುದೇ ಸೇವೆ ಅಥವಾ ಧರ್ಮಕಾರ್ಯವನ್ನು ಆಚರಿಸಲು ಯಾರೇ ವ್ಯಕ್ತಿಗೆ ನೀಡಲಾದಂಥ ಯಾವುದೇ ನಗದು

ಅನುದಾನಕ್ಕೆ ಅನ್ವಯಿಸತಕ್ಕದ್ದಲ್ಲ:

ಪರಂತು, ಈ ಉಪ ಪ್ರಕರಣದಲ್ಲಿ ನಮೂದಿಸಲಾದ ನಗದು ಅನುದಾನವನ್ನು ಸಂಸ್ಥೆಯು ಅಸ್ತಿತ್ವದಲ್ಲಿ

ಇರುವವರೆಗೆ ಮಾತ್ರ ಸಂಬಂಧಿಸಿದ ಸಂಸ್ಥೆ ಅಥವಾ ವ್ಯಕ್ತಿಗೆ ಸಂದಾಯ ಮಾಡತಕ್ಕದ್ದು.

(3) ಹೈದರಾಬಾದ್ ಪ್ರದೇಶದಲ್ಲಿ ಜಾರಿಯಲ್ಲಿರುವ, ಹೈದರಾಬಾದ್ ಅತಿಯಾತ್ ವಿಚಾರಣೆಗಳ ಅಧಿನಿಯಮ,

1952 (1952ರ ಹೈದರಾಬಾದ್ ಅಧಿನಿಯಮ ಘಿ) ರ 5ನೇ ಪ್ರಕರಣದ ಉಪಬಂಧಗಳು, ಆ ಅಧಿನಿಯಮದ

ಮೇರೆಗೆ ಅತಿಯಾತ್ ಅನುದಾನಗಳನ್ನು ಅನ್ವಯಿಸುವಂತೆಯೇ ಈ ಅಧಿನಿಯಮದ ಮೂಲಕ ಮುಂದುವರೆಸಲಾದ

ನಗದು ಅನುದಾನಗಳಿಗೂ ಅನ್ವಯವಾಗತಕ್ಕದ್ದೆಂದು ಸಂದೇಹಗಳ ನಿವಾರಣೆಗಾಗಿ ಈ ಮೂಲಕ ಘೋಷಿಸಲಾಗಿದೆ.

(4) ಸರ್ಕಾರವು, ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸುವ ಮೂಲಕ, ಅನುಸೂಚಿಯಲ್ಲಿರುವ ಯಾವುದೇ

ನಮೂದುಗಳನ್ನು ಬದಲಾಯಿಸಬಹುದು, ಅವುಗಳಿಗೆ ಸೇರಿಸಬಹುದು ಅಥವಾ ಅವುಗಳಲ್ಲಿ ಯಾವುದನ್ನಾದರು

ಬಿಟ್ಟುಬಿಡಬಹುದು.


ಕೆಲವು ಅನುದಾನಗಳ ರದ್ದಿಯಾತಿ ಮತ್ತು ಆ ಬಗೆಗಿನ ನಷ್ಟ ಪರಿಹಾರದ ಸಂದಾಯ.-

(1) ಯಾವುದೇ ಕಾನೂನು, ರೂಢಿ, ಆಚರಣೆ, ಸನ್ನದು ಅಥವಾ ನ್ಯಾಯಾಲಯದ ಅಥವಾ ಇತರ ಪ್ರಾಧಿಕಾರದ ಡಿಕ್ರಿ ಅಥವಾ ಆದೇಶದಲ್ಲಿ ಏನೇ ಒಳಗೊಂಡಿದ್ದರೂ, ಮತ್ತು (2)ನೇ ಉಪ ಪ್ರಕರಣದ ಉಪಬಂಧಗಳಿಗೊಳಪಟ್ಟು,-

(ಎ) 1952ರ ಜುಲೈ 30ನೇ ದಿನಾಂಕದಿಂದ ಜಾರಿಯಲ್ಲಿ ಬರುವಂತೆ ಅನುಸೂಚಿಯ ಭಾಗ ಎ ಯಲ್ಲಿ

ನಿರ್ದಿಷ್ಟಪಡಿಸಿದ ನಗದು ಅನುದಾನಗಳ ಸಂದರ್ಭದಲ್ಲಿ ; ಮತ್ತು

(ಬಿ) 1954ರ ಜುಲೈ 1ನೇ ದಿನಾಂಕದಿಂದ ಜಾರಿಯಲ್ಲಿ ಬರುವಂತೆ ಅನುಸೂಚಿಯ ಭಾಗ ಬಿ ಮತ್ತು ಭಾಗ ಸಿ

ನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನಗಳ ಸಂದರ್ಭದಲ್ಲಿ

-1952ರ ಏಪ್ರಿಲ್ 1ನೇ ದಿನಾಂಕದಿಂದ ಪ್ರಾರಂಭವಾಗುವ ವರ್ಷದ ಅವಧಿಯಲ್ಲಿ ಸಂದಾಯ

ಮಾಡಬೇಕಾಗಿದ್ದು ಅಥವಾ ಜಾರಿಗೊಳಿಸಬೇಕಾಗಿದ್ದು, ಅನುಸೂಚಿಯ ಭಾಗI ರಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲ

ನಗದು ಅನುದಾನಗಳು ಮತ್ತು 1954ರ ಏಪ್ರಿಲ್ 1ನೇ ದಿನಾಂಕದಿಂದ ಪ್ರಾರಂಭವಾಗುವ ವರ್ಷದ ಅವಧಿಯಲ್ಲಿ

ಅಥವಾ ಆ ತರುವಾಯದ ಯಾವುದೇ ವರ್ಷದಲ್ಲಿ ಸಂದಾಯ ಮಾಡಬೇಕಾಗಿದ್ದು ಅಥವಾ ಜಾರಿಗೊಳಿಸಬೇಕಾಗಿದ್ದು,

ಅನುಸೂಚಿಯ ಭಾಗ ಬಿ ಮತ್ತು ಭಾಗ ಸಿ ಯಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲ ನಗದು ಅನುದಾನಗಳು

ಮುಂದುವರೆಯತಕ್ಕದ್ದಲ್ಲ ಅಥವಾ ಜಾರಿಯಲ್ಲಿರುವುದು ನಿಂತು ಹೋಗತಕ್ಕದ್ದು.

(2) (1)ನೇ ಉಪ ಪ್ರಕರಣದ ಮೇರೆಗೆ ನಗದು ಅನುದಾನದ ಅನುದಾನಿತನಿಗೆ ಈ ಮುಂದಿನಂತೆ ನಷ್ಟ

ಪರಿಹಾರವನ್ನು ಸಂದಾಯ ಮಾಡತಕ್ಕದ್ದು:-

(i) ಅನುಸೂಚಿಯ ಭಾಗ ಎ ನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನದ ಸಂದರ್ಭದಲ್ಲಿ,

ಅನುದಾನಿತನಿಗೆ ಸಂದಾಯ ಮಾಡಬೇಕಾದ ವಾರ್ಷಿಕ ಮೊಬಲಿಗಿನ ನಾಲ್ಕು ಪಟ್ಟಿಗೆ ಸಮನಾದ

ಮೊತ್ತ;

(ii) ಅನುಸೂಚಿಯ ಭಾಗ ಬಿ ನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನದ ಸಂದರ್ಭದಲ್ಲಿ ,

ಅನುದಾನಿತನಿಗೆ ಸಂದಾಯ ಮಾಡಬೇಕಾದ ವಾರ್ಷಿಕ ಮೊಬಲಗಿನ ಆರು ಪಟ್ಟಿಗೆ ಸಮನಾದ

ಮೊತ್ತ; ಮತ್ತು

(iii) ಅನುಸೂಚಿಯ ಭಾಗ ಸಿ ನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನದ ಸಂದರ್ಭದಲ್ಲಿ,

ಅನುದಾನಿತನಿಗೆ ಸಂದಾಯ ಮಾಡಬೇಕಾದ ವಾರ್ಷಿಕ ಮೊಬಲಗಿನ ನಾಲ್ಕು ಪಟ್ಟಿಗೆ ಸಮನಾದ

ಮೊತ್ತ:

ಪರಂತು, ಈ ಕೆಳಗಿನ ಕೋಷ್ಟಕದ (1)ನೇ ಅಂಕಣದಲ್ಲಿ ನಿರ್ದಿಷ್ಟ ಪಡಿಸಿದ ಸಂದರ್ಭಗಳ ಪೈಕಿ

ಪ್ರತಿಯೊಂದು ಸಂದರ್ಭದಲ್ಲಿ, ಭಾಗ ಸಿ ನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನವನ್ನು, (2)ನೇ ಅಂಕಣದಲ್ಲಿ

ನಮೂದಿಸಲಾದ ಅವಧಿಯಲ್ಲಿ, ಪ್ರತಿಯೊಂದು ಸಂದರ್ಭದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳಿಗೊಳಪಟ್ಟು

ಮುಂದುವರಿಸತಕ್ಕದ್ದು, ಎಂದರೆ:-

ಕೋಷ್ಟಕ

(1) (2)

(1) ಅನುದಾನಿತನು ಪುರುಷನಾಗಿರಲಿ ಅಥವಾ ಮಹಿಳೆಯಾಗಿರಲಿ

1954ರ ಏಪ್ರಿಲ್ 1 ರಂದು ಅವರ ವಯಸ್ಸು 60 ವರ್ಷಗಳಿಗಿಂತ

ಕಡಿಮೆ ಇಲ್ಲದಿದ್ದಲ್ಲಿ.

(2)ಅನುದಾನಿತನ ಮರಣದ ದಿನಾಂಕದವರೆಗೆ.

(2) ಅನುದಾನಿತನ ವಯಸ್ಸು 1954 ರಲ್ಲಿ ಏಪ್ರಿಲ್ 1ನೇ ದಿನದಂದು

60 ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ,-

(i) ಪುರುಷ ಅಥವಾ ಅವಿವಾಹಿತ ಮಹಿಳೆಯ

ಸಂದರ್ಭದಲ್ಲಿ, ಅನುದಾನಿತನು ಕುರುಡ, ಕಿವುಡ, ಮೂಕ,

ಚಿತ್ತಭ್ರಮೆಗೊಳಗಾದವನು, ಹೆಳವ ಅಥವಾ ಪಾಶ್ರ್ವವಾಯು

ಪೀಡಿತನಾಗಿದ್ದು ಜೀವನೋಪಾಯ ನಡೆಸಲು ಅಸಮರ್ಥನಾಗಿದ್ದರೆ;

ರದ್ದಾದ ದಿನಾಂಕದಿಂದ ಅನುದಾನಿತನ ಮರಣದ ದಿನಾಂಕದವರೆಗೆ.

(ii) ವಿಧವೆಯಾದಲ್ಲಿ ಅವಳು ವಿಧವೆಯಾಗಿ ಇರುವವರೆಗೆ.

(3) ಅನುದಾನಿತನು ಅಪ್ರಾಪ್ತ ವಯಸ್ಕನಾಗಿದ್ದಲ್ಲಿ,-

(i) ಪುರುಷನ ಸಂದರ್ಭದಲ್ಲಿ, ಅಂಥ ನಗದು ಅನುದಾನವು

ಅವನ ವರಮಾನದ ಏಕಮಾತ್ರ ಮೂಲವಾಗಿದ್ದರೆ

ರದ್ದಾದ ದಿನಾಂಕದಿಂದ 18 ವರ್ಷಗಳು ತುಂಬುವ

ದಿನಾಂಕದವರೆಗೆ.

(ii) ಮಹಿಳೆಯಾಗಿದ್ದಲ್ಲಿ. ರದ್ದಾದ ದಿನಾಂಕದಿಂದ ವಿವಾಹವಾದ ದಿನಾಂಕದವರೆಗೆ ಅಥವಾ

18 ವರ್ಷಗಳು ತುಂಬುವ ದಿನಾಂಕದವರೆಗೆ ಇವುಗಳಲ್ಲಿ ಯಾವುದು

ಮೊದಲೋ, ಆವರೆಗೆ.

(3) 18 ವರ್ಷ ವಯಸ್ಸು ತುಂಬುವ ಮುಂಚೆ ಅಪ್ರಾಪ್ತ ವಯಸ್ಕ ಪುರುಷನು ಅಥವಾ ವಿವಾಹವಾಗುವ

ಮುಂಚೆ ಅಪ್ರಾಪ್ತ ವಯಸ್ಕ ಮಹಿಳೆಯು ಸ್ವೀಕರಿಸುವ ನಗದು ಅನುದಾನದ ಮೊಬಲಗು, ನಗದು ಅನುದಾನದ

ವಾರ್ಷಿಕ ಮೊಬಲಗು ನಾಲ್ಕು ಪಟ್ಟಿಗಿಂತ ಕಡಿಮೆ ಇದ್ದರೆ ಆಗ ಆ ಕೊರತೆಯನ್ನು ಪುರುಷ ಅಪ್ರಾಪ್ತ ವಯಸ್ಕನಿಗೆ

18 ವರ್ಷಗಳ ವಯಸ್ಸು ತುಂಬಿದಾಗ ಮತ್ತು ಮಹಿಳಾ ಅಪ್ರಾಪ್ತ ವಯಸ್ಸಿನವಳಿಗೆ 18 ವರ್ಷಗಳ ವಯಸ್ಸು

ತುಂಬಿದಾಗ ಅಥವಾ ಅವಳು ವಿವಾಹವಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಆಗ ತುಂಬಿಕೊಡತಕ್ಕದ್ದು.

(4) ಈ ಅಧಿನಿಯಮವು ಅನ್ವಯಿಸುವ ನಗದು ಅನುದಾನವು ಯಾವುದೇ ಸೇವೆಯನ್ನು ಸಲ್ಲಿಸುವುದಕ್ಕೆ

ಒಳಪಟ್ಟಿರುವಲ್ಲಿ, ಅನುದಾನ ಪಡೆದವನ ಅನುದಾನವನ್ನು ನಿಲ್ಲಿಸಲಾದ ದಿನಾಂಕದಿಂದ ಜಾರಿಯಲ್ಲಿ ಬರುವಂತೆ ಆ

ಸೇವೆ ಸಲ್ಲಿಸುವ ಬದ್ಧತೆಯಿಂದ ಬಿಡುಗಡೆ ಹೊಂದಿರತಕ್ಕದ್ದು.

(5) ಅನುಸೂಚಿಯ ಭಾಗ ಎ ಮತ್ತು ಭಾಗ ಸಿ ಯಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನಗಳಿಗೆ

ಸಂಬಂಧಿಸಿದಂತೆ, (2)ನೇ ಉಪಪ್ರಕರಣದ ಮೇರೆಗೆ ಸಂದಾಯ ಮಾಡಬೇಕಾದ ನಷ್ಟ ಪರಿಹಾರವನ್ನು,

ನಿಯಮಿಸಬಹುದಾದ ರೀತಿಯಲ್ಲಿ ಮತ್ತು ಕಂತುಗಳಲ್ಲಿ ಅನುದಾನಿತನಿಗೆ ಸಂದಾಯ ಮಾಡತಕ್ಕದ್ದು; ಮತ್ತು

ಅನುಸೂಚಿಯ ಭಾಗ ಬಿ ಯಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನಕ್ಕೆ ಸಂಬಂಧಿಸಿದಂತೆ ಸಂದಾಯ

ಮಾಡಬೇಕಾದ ನಷ್ಟ ಪರಿಹಾರವನ್ನು ಪೂರ್ಣವಾಗಿಯಾಗಲಿ ಅಥವಾ ಹನ್ನೆರಡಕ್ಕೆ ಮೀರದ ವಾರ್ಷಿಕ

ಕಂತುಗಳಲ್ಲಿಯಾಗಲಿ ಅವನಿಗೆ ಸಂದಾಯ ಮಾಡತಕ್ಕದ್ದು.


ನಿಯಮಗಳ ರಚನಾಧಿಕಾರ.-

(1) ಸರ್ಕಾರವು ರಾಜಪತ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸುವ ಮೂಲಕ ಈ ಅಧಿನಿಯಮದ ಎಲ್ಲ ಉದ್ದೇಶಗಳನ್ನು ಅಥವಾ ಯಾವುದೇ ಉದ್ದೇಶವನ್ನು ನೆರವೇರಿಸಲು ನಿಯಮಗಳನ್ನು ರಚಿಸಬಹುದು.

(2) ಈ ಪ್ರಕರಣದ ಮೇರೆಗೆ ರಚಿಸಲಾದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ತರುವಾಯ

ಸಾಧ್ಯವಾದಷ್ಟು ಬೇಗನೆ, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಒಂದು ಅಧಿವೇಶನ ಅಥವಾ

ಎರಡು ನಿರಂತರ ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತು ದಿನಗಳ ಅವಧಿಯವರೆಗೆ ಅದು

ಅಧಿವೇಶನದಲ್ಲಿರುವಾಗ ಮಂಡಿಸತಕ್ಕದ್ದು ಮತ್ತು ಹಾಗೆ ಮಂಡಿಸಲಾದ ಅಧಿವೇಶನ ಅಥವಾ ನಿಕಟೋತ್ತರ

ಅಧಿವೇಶನಗಳು ಮುಕ್ತಾಯವಾಗುವ ಮೊದಲು, ಉಭಯ ಸದನಗಳು ಆ ನಿಯಮದಲ್ಲಿ ಯಾವುದೇ ಮಾರ್ಪಾಡು

ಮಾಡಬೇಕೆಂದು ಒಪ್ಪಿದರೆ ಅಥವಾ ಆ ನಿಯಮವನ್ನು ಮಾಡಕೂಡದೆಂದು ಒಪ್ಪಿದರೆ, ಆ ತರುವಾಯ, ನಿಯಮವು

ಅಂಥ ಮಾರ್ಪಾಟಾದ ರೂಪದಲ್ಲಿ ಮಾತ್ರವೇ ಪರಿಣಾಮಕಾರಿಯಾಗತಕ್ಕದ್ದು ಅಥವಾ ಸಂದರ್ಭನುಸಾರ,

ಪರಿಣಾಮಕಾರಿಯಾಗತಕ್ಕದ್ದಲ್ಲ; ಆದಾಗ್ಯೂ, ಅಂಥ ಯಾವುದೇ ಮಾರ್ಪಾಡು ಅಥವಾ ರದ್ದಿಯಾತಿಯು ಆ

ನಿಯಮದ ಅಡಿಯಲ್ಲಿ ಈ ಹಿಂದೆ ಮಾಡಿದ ಯಾವುದೇ ಕøತ್ಯದ ಸಿಂಧುತ್ವಕ್ಕೆ ಬಾಧಕ ಉಂಟುಮಾಡತಕ್ಕದ್ದಲ್ಲ.


ಇತ್ಯರ್ಥವಾಗದೆ ಇರುವ ವಿಷಯಗಳ ವಿಲೇವಾರಿ.-

ನಗದು ಅನುದಾನಗಳಿಗೆ ಸಂಬಂಧಿಸಿದಂತೆ, ಈ

ಅಧಿನಿಯಮದ ಪ್ರಾರಂಭದ ದಿನಾಂಕದಂದು ಯಾವುದೇ ಪ್ರಾಧಿಕಾರದ ಮುಂದೆ ಇತ್ಯರ್ಥವಾಗದೆ ಬಾಕಿಯಿದ್ದ ಎಲ್ಲ

ಕ್ಲೇಮುಗಳು ಮತ್ತು ಎಲ್ಲ ವ್ಯವಹರಣೆಗಳನ್ನು, ಯಾವುದೇ ಕಾನೂನು, ಒಪ್ಪಂದ, ನ್ಯಾಯಾಲಯದ ತೀರ್ಮಾನ

ಅಥವಾ ಆದೇಶದಲ್ಲಿ ಏನೇ ಇದ್ದರೂ, ಈ ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ವ್ಯವಹರಿಸತಕ್ಕದ್ದು

ಮತ್ತು ವಿಲೆಮಾಡತಕ್ಕದ್ದು.


ನಿರಸನ.-

ಹೈದರಾಬಾದ್ (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1952 (1952ರ

ಹೈದರಾಬಾದ್ ಅಧಿನಿಯಮ, ಘಿಘಿಘಿIII)ನ್ನು ಈ ಮೂಲಕ ನಿರಸನಗೊಳಿಸಲಾಗಿದೆ.

ಅನುಸೂಚಿ

(ಭಾಗ ಎ)

(1) ಸರ್ದೇಶ್‍ಮುಖ್‍ರು,

(2) ಸರ್ದೇಶ್‍ಪಾಂಡ್ಯೆಗಳು,

(3) ದೇಶ್‍ಮುಖ್‍ರು,

(4) ದೇಶಪಾಂಡ್ಯೆಗಳು,

(5) ದಾಸ್ತಬಂದ್ರಾರು (ಮಿರಸಿ-ದಾಸ್ತ್ ಬಂದ್ರಾಗಳೂ ಸೇರಿದಂತೆ),

1

[(6) ಚೌಧರಿ,

(7) ಶೆಟ್ಟಿಗಿರಿ]1

-ಇವರಿಗೆ ಸಂದಾಯ ಮಾಡಬೇಕಾದ ರುಸುಂಗಳು.

1. ಅಧಿಸೂಚನೆ ಸಂಖ್ಯೆ. ಆರ್‍ಡಿ 26 ಐಎನ್‍ಎಂ 81 ದಿನಾಂಕ 09.02.1988ರ ಮೂಲಕ ಸೇರಿಸಲಾಗಿದೆ. ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯ ಭಾಗದಲ್ಲಿದೆ.

(ಭಾಗ ಬಿ)

ಜಾಗೀರ್ ನಿವøತ್ತಿ ವೇತನವೂ ಒಳಗೊಂಡಂತೆ ಮನ್ಸಾಬ್ ಮಾವಿಜ ಜಾಗೀರು,

ಮನ್ಸಾಬ್ ಮಾವಿಜ (ಕ್ವಾರ್ಜ),

ಮನ್ಸಾಬ್ ಮಾವಿಜ ಅರಸಿ ,

ಮನ್ಸಾಬ್ ಮಾವಿಜ ಅಬ್ಕಾರಿ,

ಮನ್ಸಾಬ್ ಮಾವಿಜ ಸೇರ್,

ಮನ್ಸಾಬ್ ಮಾವಿಜ ಆಸ್ಲ, ಕುತುಬ್, ದುಕಾನ್, ಸಫಾಯಿ,

ಮನ್ಸಬ್ ಇಮ್ತಿಯಾಸಿ,

ಮನ್ಸಬ್ ನಜಮ್ ಮಹವಾರ್‍ಗಳು,

ಜಾಗೀರ್‍ಗಳ ಬದಲಿಗೆ ನೀಡಿದ ಮಹಾವಾರತ್ ವಾಲಾಜಾಹಿ.

(ಭಾಗ ಸಿ)

ಸಾಮಾನ್ಯ ಮನ್ಸಬ್, ರೈಯೆತಿ, ಖಾಸ್ ಮತ್ತು ಮುತಾಫೆರಿಕಾ ಮುಹ್‍ವಾರ್ಸ್, ಮಾಶ್, ಯೋಮಿಯ,

ಮಮೂಲ್, ಸಲಿಯಾನ್ಸ್, ಖಸ್ತೂಮ್ಸ್ ಮುಖಾಸಾಸ್ ಮತ್ತು ಅಗ್ರಹಾರ, ಮಾಹ್ ವಾರತ್ (ಜಾಗೀರ್ ಗಳ ಬದಲಿಗೆ

ನೀಡಿದವುಗಳನ್ನು ಹೊರತುಪಡಿಸಿ) ತಹೀರ್ ಶಿರಸ್ತದಾರಿ, ವಿಖಾಯ್ ನಿಗಾರಿ.


* * * * *


ಅಧಿಸೂಚನೆ

ಬೆಂಗಳೂರು ದಿನಾಂಕ 9ನೇ ಫೆಬ್ರವರಿ, 1988, [ಸಂ ಆರ್ ಡಿ 26 ಐಎನ್ ಎಂ 81]

ಎಸ್. ಓ. 654.- ಕರ್ನಾಟಕ (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1967 (1967ರ

ಕರ್ನಾಟಕ ಅಧಿನಿಯಮ 15) ಇದರ 3ನೇ ಪ್ರಕರಣದ (4) ನೇ ಉಪ ಪ್ರಕರಣದಿಂದ ಪ್ರದತ್ತವಾದ

ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಸದರಿ ಅಧಿನಿಯಮದ ಅನುಸೂಚಿಯ (ಭಾಗ

ಎ)ಗೆ ಈ ಮುಂದಿನ ತಿದ್ದುಪಡಿ ಮಾಡಿದೆ, ಎಂದರೆ:-

ಕರ್ನಾಟಕ (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1967 (1967ರ ಕರ್ನಾಟಕ ಅಧಿನಿಯಮ

15) ಇದರ ಅನುಸೂಚಿಯ (ಭಾಗ ಎ) ಯ (5)ನೇ ಬಾಬಿನ ತರುವಾಯ ಮುಂದಿನ ಬಾಬುಗಳನ್ನು ಸೇರಿಸತಕ್ಕದ್ದು,

ಎಂದರೆ:-

``(6) ಚೌಧರಿ,

(7) ಶೆಟ್ಟಿಗಿರಿ'',

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಕೆ.ನಾಗರತ್ನಮಣಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ.

(ದಿನಾಂಕ 28.4.1988ರ ಕರ್ನಾಟಕ ರಾಜಪತ್ರ (ವಿಶೇಷ ಸಂಚಿಕೆ) ಭಾಗ Iಗಿ 2 ಸಿ (ii) ಸಂಖ್ಯೆ 278 ರಲ್ಲಿ

ಪ್ರಕಟಿಸಲಾಗಿದೆ).

The above translation of the Karnataka (Abolition of Cash Grants) Act, 1967

(Karnataka Act 15 of 1967) shall be authoritative text in the Kannada Language under

section 5A of the Karnataka Official Language Act, 1963 (Karnataka Act 26 of 1963).

GOVERNER OF KARNATAKA

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು

ಅವರ ಹೆಸರಿನಲ್ಲಿ,

ಜಿ.ಕೆ. ಬೋರೇಗೌಡ

ಸರ್ಕಾರದ ಕಾರ್ಯದರ್ಶಿ,

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.

ಪ್ರಕರಣಗಳ ಅನುಕ್ರಮಣಿಕೆ ಪ್ರಕರಣಗಳು: 1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ 2. ಪರಿಭಾಷೆಗಳು 3. ಅಧಿನಿಯಮದ ಅನ್ವಯ 4. ಕೆಲವು ಅನುದಾನಗಳ ರದ್ದಿಯಾತಿ ಮತ್ತು ಆ ಬಗೆಗಿನ ನಷ್ಟಪರಿಹಾರದ ಸಂದಾಯ 5. ನಿಯಮ ರಚನಾಧಿಕಾರ 6. ಇತ್ಯರ್ಥವಾಗದೆ ಇರುವ ವಿಷಯಗಳ ವಿಲೇವಾರಿ 7. ನಿರಸನ ಅನುಸೂಚಿ.ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ 1967ರ ಅಧಿನಿಯಮ 15.- ಹೈದರಾಬಾದ್ ನಗದು ಅನುದಾನಗಳ ರದ್ದಿಯಾತಿ ಅಧಿನಿಯಮ, 1952ರ3ನೇ ಪ್ರಕರಣದ ಮೇರೆಗೆ ಆ ಅಧಿನಿಯಮದ ಅನುಸೂಚಿಯ ಭಾಗ `ಎ' ನಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲ ನಗದುಅನುದಾನಗಳನ್ನು, 1952ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿತ್ತು ಮತ್ತು ಆ ಅನುಸೂಚಿಯಭಾಗ-`ಸಿ' ನಲ್ಲಿ ನಿರ್ದಿಷ್ಟಪಡಿಸಲಾದ ನಗದು ಅನುದಾನಗಳನ್ನು 1954ರ ಜುಲೈ 1 ರಿಂದ ನಿಲ್ಲಿಸಲಾಗಿತ್ತು. ಈಅಧಿನಿಯಮದ ಸಿಂಧುತ್ವವನ್ನು ಹೈದರಾಬಾದ್ ಉಚ್ಚ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿತ್ತು ಮತ್ತು ಉಚ್ಚನ್ಯಾಯಾಲಯವು ನಷ್ಟ ಪರಿಹಾರವನ್ನು ಸಂದಾಯ ಮಾಡದೆ ನಗದು ಅನುದಾನಗಳನ್ನು ರದ್ದುಪಡಿಸುವುದುಕಾನೂನು ಬಾಹಿರವೆಂದು ಮತ್ತು ಅಧಿನಿಯಮದ 3ನೇ ಪ್ರಕರಣದ ಮೇರೆಗೆ ನಿಲ್ಲಿಸಲಾಗಿದ್ದ ``ರುಸುಂ'' ಗಳನ್ನುಪಡೆಯಲು ಅರ್ಜಿದಾರರು ಹಕ್ಕುಳ್ಳವರೆಂದು ಎತ್ತಿ ಹಿಡಿಯಿತು. ಹೈದರಾಬಾದ್ ಸರ್ಕಾರವು ಉಚ್ಚ ನ್ಯಾಯಾಲಯದಆದೇಶಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅಪೀಲು ಹಾಕಿತು, ಆದರೆ ಅಪೀಲನ್ನು ಆಂದ್ರ ಪ್ರದೇಶಸರ್ಕಾರವು ಆ ತರುವಾಯ ಹಿಂತೆಗೆದುಕೊಂಡಿತು. ನಗದು ಅನುದಾನಗಳ ರದ್ದಿಯಾತಿ ಮತ್ತು ರದ್ದಿಯಾತಿಗೆಸಂಬಂಧಿಸಿದಂತೆ ನಷ್ಟ ಪರಿಹಾರದ ಸಂದಾಯಕ್ಕೆ ವ್ಯವಸ್ಥೆ ಮಾಡುವ ಸಲುವಾಗಿ, ಆಂಧ್ರ ಪ್ರದೇಶದ ವಿಧಾನಮಂಡಲವು, ಆಂಧ್ರ ಪ್ರದೇಶ (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1959ನ್ನು ಅಂಗೀಕರಿಸಿತು.ಮಹಾರಾಷ್ಟ್ರ ಸರ್ಕಾರವೂ ಸಹ ನಗದು ಅನುದಾನಗಳ ರದ್ದಿಯಾತಿಗಾಗಿ ಮತ್ತು ನಷ್ಟ ಪರಿಹಾರದ ಸಂದಾಯಕ್ಕಾಗಿಕಾನೂನು ರಚನೆ ಮಾಡಲು ಕ್ರಮಕೈಗೊಳ್ಳುತ್ತದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ ನಗದು ಅನುದಾನಗಳಪದ್ಧತಿಯನ್ನು ರದ್ದುಪಡಿಸಲು ಕಾನೂನು ರಚನೆಯು ಅವಶ್ಯಕವೆಂದು ಪರಿಗಣಿಸಲಾಯಿತು. ಆದ್ದರಿಂದ ವಿಧೇಯಕ. (ದಿನಾಂಕ 26.7.1967ರಂದು ಕರ್ನಾಟಕ ರಾಜ ಪತ್ರ (ವಿಶೇಷ ಸಂಚಿಕೆ)ದ ಭಾಗ-Iಗಿ-2ಎ, ಸಂಖ್ಯೆ 155,ಪುಟ 7 ರಲ್ಲಿ ಪ್ರಕಟಿಸಲಾಗಿದೆ). 1967ರ 1[ಕರ್ನಾಟಕ]1 ಅಧಿನಿಯಮ ಸಂಖ್ಯೆ 15(1967ರ ಡಿಸೆಂಬರ್ ಇಪ್ಪತ್ತೊಂದನೇ ದಿನಾಂಕದಂದು 1[ಕರ್ನಾಟಕ ರಾಜ್ಯಪತ್ರ]1 ದಲ್ಲಿ ಮೊದಲು ಪ್ರಕಟವಾಗಿದೆ.)(1967ರ ಡಿಸೆಂಬರ್ ಹನ್ನೊಂದನೇ ದಿನಾಂಕದಂದು ರಾಷ್ಟ್ರಪತಿಯವರ ಅನುಮತಿಯನ್ನು ಪಡೆದಿದೆ.) 1[ಕರ್ನಾಟಕ]1 (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1967.1[ಕರ್ನಾಟಕ ರಾಜ್ಯ]1 ದ 1[ಗುಲ್ಬರ್ಗಾ ಪ್ರದೇಶ]1 ದ ಕೆಲವು ವರ್ಗಗಳ ನಗದು ಅನುದಾನಗಳನ್ನುನಿಲ್ಲಿಸಲು ಒಂದು ಅಧಿನಿಯಮ.1[ಕರ್ನಾಟಕ ರಾಜ್ಯ]1 ದ1[ಗುಲ್ಬರ್ಗಾ ಪ್ರದೇಶದ]1 ಕೆಲವು ವರ್ಗಗಳ ನಗದು ಅನುದಾನಗಳನ್ನುನಿಲ್ಲಿಸುವುದು ಯುಕ್ತವಾಗಿರುವುದರಿಂದ; ಇದು, ಭಾರತ ಗಣರಾಜ್ಯದ ಹದಿನೆಂಟನೇ ವರ್ಷದಲ್ಲಿ 1[ಕರ್ನಾಟಕ]1 ರಾಜ್ಯ ವಿಧಾನ ಮಂಡಲದಿಂದಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು, ಎಂದರೆ:-1. ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973ರ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ. 1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು 11[ಕರ್ನಾಟಕ]1 (ನಗದುಅನುದಾನಗಳ ರದ್ದಿಯಾತಿ) ಅಧಿನಿಯಮ, 1967 ಎಂದು ಕರೆಯತಕ್ಕದ್ದು. (2) ಇದು 1[ಕರ್ನಾಟಕ ರಾಜ್ಯ]1ದ 1[ಗುಲ್ಬರ್ಗಾ ಪ್ರದೇಶ]1ಕ್ಕೆ ವ್ಯಾಪ್ತವಾಗುತ್ತದೆ.1. ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973ರ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ. (3) ಇದು ಕೂಡಲೇ ಜಾರಿಗೆ ಬರತಕ್ಕದ್ದು.2. ಪರಿಭಾಷೆಗಳು.- ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,- (ಎ) ``ಸರ್ಕಾರ'' ಎಂದರೆ ರಾಜ್ಯ ಸರ್ಕಾರ; (ಬಿ) ``ಧರ್ಮಾದಾಯ ಸಂಸ್ಥೆ'' ಎಂದರೆ, ಧರ್ಮಾರ್ಥ, ಧರ್ಮಾದಾಯ ಅಥವಾ ಲೋಕೋಪಕಾರಿಉದ್ದೇಶಗಳಿಗಾಗಿ ಸಾಮಾನ್ಯವಾಗಿ ಸಾರ್ವಜನಿಕರ ಅಥವಾ ಅದರ ಯಾವುದೇ ಸಮುದಾಯ ಅಥವಾ ಭಾಗಕ್ಕೆಸಮರ್ಪಿತವಾದ ಅಥವಾ ಅವರ ಸೌಲಭ್ಯಕ್ಕಾಗಿ ಇರುವ ಅಥವಾ ಅವರು ರೂಢಿಗತವಾಗಿ ಆಚರಿಸಿಕೊಂಡು ಬಂದಮತ್ತು ಒಂದು ನಿರ್ದಿಷ್ಟ ಸ್ಥಳ ಹಾಗೂ ಪರಿಚಿತ ವಿಳಾಸವನ್ನು ಹೊಂದಿರುವ ಯಾವುದೇ ಧರ್ಮಾದಾಯ ಸಂಸ್ಥೆ; (ಸಿ) ``ನಿಯಮಿಸಲಾದುದು'' ಎಂದರೆ, ಈ ಅಧಿನಿಯಮದ ಮೇರೆಗೆ ರಚಿಸಲಾದ ನಿಯಮಗಳಿಂದನಿಯಮಿಸಲಾದುದು; (ಡಿ) ``ಧಾರ್ಮಿಕ ಸಂಸ್ಥೆ '' ಎಂದರೆ, ಸಾರ್ವಜನಿಕ ಪೂಜಾ ಸ್ಥಳವಾಗಿ, ಸಾಮಾನ್ಯವಾಗಿ ಸಾರ್ವಜನಿಕರ ಅಥವಾಅದರ ಯಾವುದೇ ಸಮುದಾಯ ಅಥವಾ ಭಾಗಕ್ಕೆ ಸಮರ್ಪಿತವಾದ ಅಥವಾ ರೂಢಿಗತವಾಗಿ ಆಚರಿಸಿಕೊಂಡುಬಂದ ಮತ್ತು ಒಂದು ನಿರ್ದಿಷ್ಟ ಸ್ಥಳ ಹಾಗೂ ಪರಿಚಿತ ವಿಳಾಸವನ್ನು ಹೊಂದಿರುವ ಯಾವುದೇ ಧಾರ್ಮಿಕ(ಮಂದಿರ, ಪುಣ್ಯಕ್ಷೇತ್ರ, ಮಸೀದಿ ಅಥವಾ ಅಂಥ ಯಾವುದೇ ಇತರ) ಸಂಸ್ಥೆ.3. ಅಧಿನಿಯಮದ ಅನ್ವಯ.- (1) ಈ ಅಧಿನಿಯಮವು (2)ನೇ ಉಪ ಪ್ರಕರಣದಲ್ಲಿ ನಮೂದಿಸಿದವುಗಳನ್ನುಹೊರತುಪಡಿಸಿ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ಯಾವುದೇ ನಗದು ಅನುದಾನಕ್ಕೆ ಅನ್ವಯವಾಗತಕ್ಕದ್ದು. (2) ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಯಾವುದೇ ಧಾರ್ಮಿಕ ಅಥವಾ ಧರ್ಮಾದಾಯಸಂಸ್ಥೆಯ ಹೆಸರಿನಲ್ಲಿ ಅಥವಾ ಅದರ ಬೆಂಬಲಕ್ಕಾಗಿ ನೀಡಲಾದಂಥ ಅಥವಾ ಯಾವುದೇ ಧಾರ್ಮಿಕ ಅಥವಾಧರ್ಮಾದಾಯ ಸಂಸ್ಥೆಗೆ ಸಂಬಂಧಿಸಿದ ಸಾರ್ವಜನಿಕ ಸ್ವರೂಪದ ಸೇವೆ ಅಥವಾ ಧರ್ಮಾರ್ಥವಾಗಿರುವಂಥಯಾವುದೇ ಸೇವೆ ಅಥವಾ ಧರ್ಮಕಾರ್ಯವನ್ನು ಆಚರಿಸಲು ಯಾರೇ ವ್ಯಕ್ತಿಗೆ ನೀಡಲಾದಂಥ ಯಾವುದೇ ನಗದುಅನುದಾನಕ್ಕೆ ಅನ್ವಯಿಸತಕ್ಕದ್ದಲ್ಲ: ಪರಂತು, ಈ ಉಪ ಪ್ರಕರಣದಲ್ಲಿ ನಮೂದಿಸಲಾದ ನಗದು ಅನುದಾನವನ್ನು ಸಂಸ್ಥೆಯು ಅಸ್ತಿತ್ವದಲ್ಲಿಇರುವವರೆಗೆ ಮಾತ್ರ ಸಂಬಂಧಿಸಿದ ಸಂಸ್ಥೆ ಅಥವಾ ವ್ಯಕ್ತಿಗೆ ಸಂದಾಯ ಮಾಡತಕ್ಕದ್ದು.  (3) ಹೈದರಾಬಾದ್ ಪ್ರದೇಶದಲ್ಲಿ ಜಾರಿಯಲ್ಲಿರುವ, ಹೈದರಾಬಾದ್ ಅತಿಯಾತ್ ವಿಚಾರಣೆಗಳ ಅಧಿನಿಯಮ,1952 (1952ರ ಹೈದರಾಬಾದ್ ಅಧಿನಿಯಮ ಘಿ) ರ 5ನೇ ಪ್ರಕರಣದ ಉಪಬಂಧಗಳು, ಆ ಅಧಿನಿಯಮದಮೇರೆಗೆ ಅತಿಯಾತ್ ಅನುದಾನಗಳನ್ನು ಅನ್ವಯಿಸುವಂತೆಯೇ ಈ ಅಧಿನಿಯಮದ ಮೂಲಕ ಮುಂದುವರೆಸಲಾದನಗದು ಅನುದಾನಗಳಿಗೂ ಅನ್ವಯವಾಗತಕ್ಕದ್ದೆಂದು ಸಂದೇಹಗಳ ನಿವಾರಣೆಗಾಗಿ ಈ ಮೂಲಕ ಘೋಷಿಸಲಾಗಿದೆ. (4) ಸರ್ಕಾರವು, ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸುವ ಮೂಲಕ, ಅನುಸೂಚಿಯಲ್ಲಿರುವ ಯಾವುದೇನಮೂದುಗಳನ್ನು ಬದಲಾಯಿಸಬಹುದು, ಅವುಗಳಿಗೆ ಸೇರಿಸಬಹುದು ಅಥವಾ ಅವುಗಳಲ್ಲಿ ಯಾವುದನ್ನಾದರುಬಿಟ್ಟುಬಿಡಬಹುದು.4. ಕೆಲವು ಅನುದಾನಗಳ ರದ್ದಿಯಾತಿ ಮತ್ತು ಆ ಬಗೆಗಿನ ನಷ್ಟ ಪರಿಹಾರದ ಸಂದಾಯ.- (1) ಯಾವುದೇಕಾನೂನು, ರೂಢಿ, ಆಚರಣೆ, ಸನ್ನದು ಅಥವಾ ನ್ಯಾಯಾಲಯದ ಅಥವಾ ಇತರ ಪ್ರಾಧಿಕಾರದ ಡಿಕ್ರಿ ಅಥವಾಆದೇಶದಲ್ಲಿ ಏನೇ ಒಳಗೊಂಡಿದ್ದರೂ, ಮತ್ತು (2)ನೇ ಉಪ ಪ್ರಕರಣದ ಉಪಬಂಧಗಳಿಗೊಳಪಟ್ಟು,- (ಎ) 1952ರ ಜುಲೈ 30ನೇ ದಿನಾಂಕದಿಂದ ಜಾರಿಯಲ್ಲಿ ಬರುವಂತೆ ಅನುಸೂಚಿಯ ಭಾಗ ಎ ಯಲ್ಲಿನಿರ್ದಿಷ್ಟಪಡಿಸಿದ ನಗದು ಅನುದಾನಗಳ ಸಂದರ್ಭದಲ್ಲಿ ; ಮತ್ತು (ಬಿ) 1954ರ ಜುಲೈ 1ನೇ ದಿನಾಂಕದಿಂದ ಜಾರಿಯಲ್ಲಿ ಬರುವಂತೆ ಅನುಸೂಚಿಯ ಭಾಗ ಬಿ ಮತ್ತು ಭಾಗ ಸಿನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನಗಳ ಸಂದರ್ಭದಲ್ಲಿ -1952ರ ಏಪ್ರಿಲ್ 1ನೇ ದಿನಾಂಕದಿಂದ ಪ್ರಾರಂಭವಾಗುವ ವರ್ಷದ ಅವಧಿಯಲ್ಲಿ ಸಂದಾಯಮಾಡಬೇಕಾಗಿದ್ದು ಅಥವಾ ಜಾರಿಗೊಳಿಸಬೇಕಾಗಿದ್ದು, ಅನುಸೂಚಿಯ ಭಾಗI ರಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲನಗದು ಅನುದಾನಗಳು ಮತ್ತು 1954ರ ಏಪ್ರಿಲ್ 1ನೇ ದಿನಾಂಕದಿಂದ ಪ್ರಾರಂಭವಾಗುವ ವರ್ಷದ ಅವಧಿಯಲ್ಲಿಅಥವಾ ಆ ತರುವಾಯದ ಯಾವುದೇ ವರ್ಷದಲ್ಲಿ ಸಂದಾಯ ಮಾಡಬೇಕಾಗಿದ್ದು ಅಥವಾ ಜಾರಿಗೊಳಿಸಬೇಕಾಗಿದ್ದು,ಅನುಸೂಚಿಯ ಭಾಗ ಬಿ ಮತ್ತು ಭಾಗ ಸಿ ಯಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲ ನಗದು ಅನುದಾನಗಳುಮುಂದುವರೆಯತಕ್ಕದ್ದಲ್ಲ ಅಥವಾ ಜಾರಿಯಲ್ಲಿರುವುದು ನಿಂತು ಹೋಗತಕ್ಕದ್ದು. (2) (1)ನೇ ಉಪ ಪ್ರಕರಣದ ಮೇರೆಗೆ ನಗದು ಅನುದಾನದ ಅನುದಾನಿತನಿಗೆ ಈ ಮುಂದಿನಂತೆ ನಷ್ಟಪರಿಹಾರವನ್ನು ಸಂದಾಯ ಮಾಡತಕ್ಕದ್ದು:-(i) ಅನುಸೂಚಿಯ ಭಾಗ ಎ ನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನದ ಸಂದರ್ಭದಲ್ಲಿ,ಅನುದಾನಿತನಿಗೆ ಸಂದಾಯ ಮಾಡಬೇಕಾದ ವಾರ್ಷಿಕ ಮೊಬಲಿಗಿನ ನಾಲ್ಕು ಪಟ್ಟಿಗೆ ಸಮನಾದಮೊತ್ತ;(ii) ಅನುಸೂಚಿಯ ಭಾಗ ಬಿ ನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನದ ಸಂದರ್ಭದಲ್ಲಿ ,ಅನುದಾನಿತನಿಗೆ ಸಂದಾಯ ಮಾಡಬೇಕಾದ ವಾರ್ಷಿಕ ಮೊಬಲಗಿನ ಆರು ಪಟ್ಟಿಗೆ ಸಮನಾದಮೊತ್ತ; ಮತ್ತು(iii) ಅನುಸೂಚಿಯ ಭಾಗ ಸಿ ನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನದ ಸಂದರ್ಭದಲ್ಲಿ,ಅನುದಾನಿತನಿಗೆ ಸಂದಾಯ ಮಾಡಬೇಕಾದ ವಾರ್ಷಿಕ ಮೊಬಲಗಿನ ನಾಲ್ಕು ಪಟ್ಟಿಗೆ ಸಮನಾದಮೊತ್ತ: ಪರಂತು, ಈ ಕೆಳಗಿನ ಕೋಷ್ಟಕದ (1)ನೇ ಅಂಕಣದಲ್ಲಿ ನಿರ್ದಿಷ್ಟ ಪಡಿಸಿದ ಸಂದರ್ಭಗಳ ಪೈಕಿಪ್ರತಿಯೊಂದು ಸಂದರ್ಭದಲ್ಲಿ, ಭಾಗ ಸಿ ನಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನವನ್ನು, (2)ನೇ ಅಂಕಣದಲ್ಲಿನಮೂದಿಸಲಾದ ಅವಧಿಯಲ್ಲಿ, ಪ್ರತಿಯೊಂದು ಸಂದರ್ಭದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳಿಗೊಳಪಟ್ಟುಮುಂದುವರಿಸತಕ್ಕದ್ದು, ಎಂದರೆ:- ಕೋಷ್ಟಕ(1) (2)(1) ಅನುದಾನಿತನು ಪುರುಷನಾಗಿರಲಿ ಅಥವಾ ಮಹಿಳೆಯಾಗಿರಲಿ1954ರ ಏಪ್ರಿಲ್ 1 ರಂದು ಅವರ ವಯಸ್ಸು 60 ವರ್ಷಗಳಿಗಿಂತಕಡಿಮೆ ಇಲ್ಲದಿದ್ದಲ್ಲಿ.(2)ಅನುದಾನಿತನ ಮರಣದ ದಿನಾಂಕದವರೆಗೆ.(2) ಅನುದಾನಿತನ ವಯಸ್ಸು 1954 ರಲ್ಲಿ ಏಪ್ರಿಲ್ 1ನೇ ದಿನದಂದು60 ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ,- (i) ಪುರುಷ ಅಥವಾ ಅವಿವಾಹಿತ ಮಹಿಳೆಯಸಂದರ್ಭದಲ್ಲಿ, ಅನುದಾನಿತನು ಕುರುಡ, ಕಿವುಡ, ಮೂಕ,ಚಿತ್ತಭ್ರಮೆಗೊಳಗಾದವನು, ಹೆಳವ ಅಥವಾ ಪಾಶ್ರ್ವವಾಯುಪೀಡಿತನಾಗಿದ್ದು ಜೀವನೋಪಾಯ ನಡೆಸಲು ಅಸಮರ್ಥನಾಗಿದ್ದರೆ;ರದ್ದಾದ ದಿನಾಂಕದಿಂದ ಅನುದಾನಿತನ ಮರಣದ ದಿನಾಂಕದವರೆಗೆ. (ii) ವಿಧವೆಯಾದಲ್ಲಿ ಅವಳು ವಿಧವೆಯಾಗಿ ಇರುವವರೆಗೆ.(3) ಅನುದಾನಿತನು ಅಪ್ರಾಪ್ತ ವಯಸ್ಕನಾಗಿದ್ದಲ್ಲಿ,- (i) ಪುರುಷನ ಸಂದರ್ಭದಲ್ಲಿ, ಅಂಥ ನಗದು ಅನುದಾನವುಅವನ ವರಮಾನದ ಏಕಮಾತ್ರ ಮೂಲವಾಗಿದ್ದರೆರದ್ದಾದ ದಿನಾಂಕದಿಂದ 18 ವರ್ಷಗಳು ತುಂಬುವದಿನಾಂಕದವರೆಗೆ. (ii) ಮಹಿಳೆಯಾಗಿದ್ದಲ್ಲಿ. ರದ್ದಾದ ದಿನಾಂಕದಿಂದ ವಿವಾಹವಾದ ದಿನಾಂಕದವರೆಗೆ ಅಥವಾ18 ವರ್ಷಗಳು ತುಂಬುವ ದಿನಾಂಕದವರೆಗೆ ಇವುಗಳಲ್ಲಿ ಯಾವುದುಮೊದಲೋ, ಆವರೆಗೆ.

(3) 18 ವರ್ಷ ವಯಸ್ಸು ತುಂಬುವ ಮುಂಚೆ ಅಪ್ರಾಪ್ತ ವಯಸ್ಕ ಪುರುಷನು ಅಥವಾ ವಿವಾಹವಾಗುವಮುಂಚೆ ಅಪ್ರಾಪ್ತ ವಯಸ್ಕ ಮಹಿಳೆಯು ಸ್ವೀಕರಿಸುವ ನಗದು ಅನುದಾನದ ಮೊಬಲಗು, ನಗದು ಅನುದಾನದವಾರ್ಷಿಕ ಮೊಬಲಗು ನಾಲ್ಕು ಪಟ್ಟಿಗಿಂತ ಕಡಿಮೆ ಇದ್ದರೆ ಆಗ ಆ ಕೊರತೆಯನ್ನು ಪುರುಷ ಅಪ್ರಾಪ್ತ ವಯಸ್ಕನಿಗೆ18 ವರ್ಷಗಳ ವಯಸ್ಸು ತುಂಬಿದಾಗ ಮತ್ತು ಮಹಿಳಾ ಅಪ್ರಾಪ್ತ ವಯಸ್ಸಿನವಳಿಗೆ 18 ವರ್ಷಗಳ ವಯಸ್ಸುತುಂಬಿದಾಗ ಅಥವಾ ಅವಳು ವಿವಾಹವಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಆಗ ತುಂಬಿಕೊಡತಕ್ಕದ್ದು. (4) ಈ ಅಧಿನಿಯಮವು ಅನ್ವಯಿಸುವ ನಗದು ಅನುದಾನವು ಯಾವುದೇ ಸೇವೆಯನ್ನು ಸಲ್ಲಿಸುವುದಕ್ಕೆಒಳಪಟ್ಟಿರುವಲ್ಲಿ, ಅನುದಾನ ಪಡೆದವನ ಅನುದಾನವನ್ನು ನಿಲ್ಲಿಸಲಾದ ದಿನಾಂಕದಿಂದ ಜಾರಿಯಲ್ಲಿ ಬರುವಂತೆ ಆಸೇವೆ ಸಲ್ಲಿಸುವ ಬದ್ಧತೆಯಿಂದ ಬಿಡುಗಡೆ ಹೊಂದಿರತಕ್ಕದ್ದು. (5) ಅನುಸೂಚಿಯ ಭಾಗ ಎ ಮತ್ತು ಭಾಗ ಸಿ ಯಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನಗಳಿಗೆಸಂಬಂಧಿಸಿದಂತೆ, (2)ನೇ ಉಪಪ್ರಕರಣದ ಮೇರೆಗೆ ಸಂದಾಯ ಮಾಡಬೇಕಾದ ನಷ್ಟ ಪರಿಹಾರವನ್ನು,ನಿಯಮಿಸಬಹುದಾದ ರೀತಿಯಲ್ಲಿ ಮತ್ತು ಕಂತುಗಳಲ್ಲಿ ಅನುದಾನಿತನಿಗೆ ಸಂದಾಯ ಮಾಡತಕ್ಕದ್ದು; ಮತ್ತುಅನುಸೂಚಿಯ ಭಾಗ ಬಿ ಯಲ್ಲಿ ನಿರ್ದಿಷ್ಟಪಡಿಸಿದ ನಗದು ಅನುದಾನಕ್ಕೆ ಸಂಬಂಧಿಸಿದಂತೆ ಸಂದಾಯಮಾಡಬೇಕಾದ ನಷ್ಟ ಪರಿಹಾರವನ್ನು ಪೂರ್ಣವಾಗಿಯಾಗಲಿ ಅಥವಾ ಹನ್ನೆರಡಕ್ಕೆ ಮೀರದ ವಾರ್ಷಿಕಕಂತುಗಳಲ್ಲಿಯಾಗಲಿ ಅವನಿಗೆ ಸಂದಾಯ ಮಾಡತಕ್ಕದ್ದು.5. ನಿಯಮಗಳ ರಚನಾಧಿಕಾರ.- (1) ಸರ್ಕಾರವು ರಾಜಪತ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸುವ ಮೂಲಕಈ ಅಧಿನಿಯಮದ ಎಲ್ಲ ಉದ್ದೇಶಗಳನ್ನು ಅಥವಾ ಯಾವುದೇ ಉದ್ದೇಶವನ್ನು ನೆರವೇರಿಸಲು ನಿಯಮಗಳನ್ನುರಚಿಸಬಹುದು. (2) ಈ ಪ್ರಕರಣದ ಮೇರೆಗೆ ರಚಿಸಲಾದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ತರುವಾಯಸಾಧ್ಯವಾದಷ್ಟು ಬೇಗನೆ, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಒಂದು ಅಧಿವೇಶನ ಅಥವಾಎರಡು ನಿರಂತರ ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತು ದಿನಗಳ ಅವಧಿಯವರೆಗೆ ಅದುಅಧಿವೇಶನದಲ್ಲಿರುವಾಗ ಮಂಡಿಸತಕ್ಕದ್ದು ಮತ್ತು ಹಾಗೆ ಮಂಡಿಸಲಾದ ಅಧಿವೇಶನ ಅಥವಾ ನಿಕಟೋತ್ತರಅಧಿವೇಶನಗಳು ಮುಕ್ತಾಯವಾಗುವ ಮೊದಲು, ಉಭಯ ಸದನಗಳು ಆ ನಿಯಮದಲ್ಲಿ ಯಾವುದೇ ಮಾರ್ಪಾಡುಮಾಡಬೇಕೆಂದು ಒಪ್ಪಿದರೆ ಅಥವಾ ಆ ನಿಯಮವನ್ನು ಮಾಡಕೂಡದೆಂದು ಒಪ್ಪಿದರೆ, ಆ ತರುವಾಯ, ನಿಯಮವುಅಂಥ ಮಾರ್ಪಾಟಾದ ರೂಪದಲ್ಲಿ ಮಾತ್ರವೇ ಪರಿಣಾಮಕಾರಿಯಾಗತಕ್ಕದ್ದು ಅಥವಾ ಸಂದರ್ಭನುಸಾರ, ಪರಿಣಾಮಕಾರಿಯಾಗತಕ್ಕದ್ದಲ್ಲ; ಆದಾಗ್ಯೂ, ಅಂಥ ಯಾವುದೇ ಮಾರ್ಪಾಡು ಅಥವಾ ರದ್ದಿಯಾತಿಯು ಆನಿಯಮದ ಅಡಿಯಲ್ಲಿ ಈ ಹಿಂದೆ ಮಾಡಿದ ಯಾವುದೇ ಕøತ್ಯದ ಸಿಂಧುತ್ವಕ್ಕೆ ಬಾಧಕ ಉಂಟುಮಾಡತಕ್ಕದ್ದಲ್ಲ. 6. ಇತ್ಯರ್ಥವಾಗದೆ ಇರುವ ವಿಷಯಗಳ ವಿಲೇವಾರಿ.- ನಗದು ಅನುದಾನಗಳಿಗೆ ಸಂಬಂಧಿಸಿದಂತೆ, ಈಅಧಿನಿಯಮದ ಪ್ರಾರಂಭದ ದಿನಾಂಕದಂದು ಯಾವುದೇ ಪ್ರಾಧಿಕಾರದ ಮುಂದೆ ಇತ್ಯರ್ಥವಾಗದೆ ಬಾಕಿಯಿದ್ದ ಎಲ್ಲಕ್ಲೇಮುಗಳು ಮತ್ತು ಎಲ್ಲ ವ್ಯವಹರಣೆಗಳನ್ನು, ಯಾವುದೇ ಕಾನೂನು, ಒಪ್ಪಂದ, ನ್ಯಾಯಾಲಯದ ತೀರ್ಮಾನಅಥವಾ ಆದೇಶದಲ್ಲಿ ಏನೇ ಇದ್ದರೂ, ಈ ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ವ್ಯವಹರಿಸತಕ್ಕದ್ದುಮತ್ತು ವಿಲೆಮಾಡತಕ್ಕದ್ದು.7. ನಿರಸನ.- ಹೈದರಾಬಾದ್ (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1952 (1952ರಹೈದರಾಬಾದ್ ಅಧಿನಿಯಮ, ಘಿಘಿಘಿIII)ನ್ನು ಈ ಮೂಲಕ ನಿರಸನಗೊಳಿಸಲಾಗಿದೆ.ಅನುಸೂಚಿ(ಭಾಗ ಎ)(1) ಸರ್ದೇಶ್‍ಮುಖ್‍ರು, (2) ಸರ್ದೇಶ್‍ಪಾಂಡ್ಯೆಗಳು, (3) ದೇಶ್‍ಮುಖ್‍ರು, (4) ದೇಶಪಾಂಡ್ಯೆಗಳು, (5) ದಾಸ್ತಬಂದ್ರಾರು (ಮಿರಸಿ-ದಾಸ್ತ್ ಬಂದ್ರಾಗಳೂ ಸೇರಿದಂತೆ),1[(6) ಚೌಧರಿ, (7) ಶೆಟ್ಟಿಗಿರಿ]1 -ಇವರಿಗೆ ಸಂದಾಯ ಮಾಡಬೇಕಾದ ರುಸುಂಗಳು.1. ಅಧಿಸೂಚನೆ ಸಂಖ್ಯೆ. ಆರ್‍ಡಿ 26 ಐಎನ್‍ಎಂ 81 ದಿನಾಂಕ 09.02.1988ರ ಮೂಲಕ ಸೇರಿಸಲಾಗಿದೆ. ಅಧಿಸೂಚನೆಯ ಪಾಠವು ಅಧಿನಿಯಮದ ಕೊನೆಯ ಭಾಗದಲ್ಲಿದೆ.(ಭಾಗ ಬಿ)ಜಾಗೀರ್ ನಿವøತ್ತಿ ವೇತನವೂ ಒಳಗೊಂಡಂತೆ ಮನ್ಸಾಬ್ ಮಾವಿಜ ಜಾಗೀರು,ಮನ್ಸಾಬ್ ಮಾವಿಜ (ಕ್ವಾರ್ಜ),ಮನ್ಸಾಬ್ ಮಾವಿಜ ಅರಸಿ ,ಮನ್ಸಾಬ್ ಮಾವಿಜ ಅಬ್ಕಾರಿ,ಮನ್ಸಾಬ್ ಮಾವಿಜ ಸೇರ್,ಮನ್ಸಾಬ್ ಮಾವಿಜ ಆಸ್ಲ, ಕುತುಬ್, ದುಕಾನ್, ಸಫಾಯಿ,ಮನ್ಸಬ್ ಇಮ್ತಿಯಾಸಿ,ಮನ್ಸಬ್ ನಜಮ್ ಮಹವಾರ್‍ಗಳು,ಜಾಗೀರ್‍ಗಳ ಬದಲಿಗೆ ನೀಡಿದ ಮಹಾವಾರತ್ ವಾಲಾಜಾಹಿ.(ಭಾಗ ಸಿ) ಸಾಮಾನ್ಯ ಮನ್ಸಬ್, ರೈಯೆತಿ, ಖಾಸ್ ಮತ್ತು ಮುತಾಫೆರಿಕಾ ಮುಹ್‍ವಾರ್ಸ್, ಮಾಶ್, ಯೋಮಿಯ,ಮಮೂಲ್, ಸಲಿಯಾನ್ಸ್, ಖಸ್ತೂಮ್ಸ್ ಮುಖಾಸಾಸ್ ಮತ್ತು ಅಗ್ರಹಾರ, ಮಾಹ್ ವಾರತ್ (ಜಾಗೀರ್ ಗಳ ಬದಲಿಗೆನೀಡಿದವುಗಳನ್ನು ಹೊರತುಪಡಿಸಿ) ತಹೀರ್ ಶಿರಸ್ತದಾರಿ, ವಿಖಾಯ್ ನಿಗಾರಿ.* * * * * ಅಧಿಸೂಚನೆಬೆಂಗಳೂರು ದಿನಾಂಕ 9ನೇ ಫೆಬ್ರವರಿ, 1988, [ಸಂ ಆರ್ ಡಿ 26 ಐಎನ್ ಎಂ 81] ಎಸ್. ಓ. 654.- ಕರ್ನಾಟಕ (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1967 (1967ರಕರ್ನಾಟಕ ಅಧಿನಿಯಮ 15) ಇದರ 3ನೇ ಪ್ರಕರಣದ (4) ನೇ ಉಪ ಪ್ರಕರಣದಿಂದ ಪ್ರದತ್ತವಾದಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಸದರಿ ಅಧಿನಿಯಮದ ಅನುಸೂಚಿಯ (ಭಾಗಎ)ಗೆ ಈ ಮುಂದಿನ ತಿದ್ದುಪಡಿ ಮಾಡಿದೆ, ಎಂದರೆ:- ಕರ್ನಾಟಕ (ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1967 (1967ರ ಕರ್ನಾಟಕ ಅಧಿನಿಯಮ15) ಇದರ ಅನುಸೂಚಿಯ (ಭಾಗ ಎ) ಯ (5)ನೇ ಬಾಬಿನ ತರುವಾಯ ಮುಂದಿನ ಬಾಬುಗಳನ್ನು ಸೇರಿಸತಕ್ಕದ್ದು,ಎಂದರೆ:- ``(6) ಚೌಧರಿ, (7) ಶೆಟ್ಟಿಗಿರಿ'', ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಡಿ.ಕೆ.ನಾಗರತ್ನಮಣಿ,ಸರ್ಕಾರದ ಅಧೀನ ಕಾರ್ಯದರ್ಶಿ,ಕಂದಾಯ ಇಲಾಖೆ.(ದಿನಾಂಕ 28.4.1988ರ ಕರ್ನಾಟಕ ರಾಜಪತ್ರ (ವಿಶೇಷ ಸಂಚಿಕೆ) ಭಾಗ Iಗಿ 2 ಸಿ (ii) ಸಂಖ್ಯೆ 278 ರಲ್ಲಿಪ್ರಕಟಿಸಲಾಗಿದೆ).The above translation of the Karnataka (Abolition of Cash Grants) Act, 1967(Karnataka Act 15 of 1967) shall be authoritative text in the Kannada Language undersection 5A of the Karnataka Official Language Act, 1963 (Karnataka Act 26 of 1963). GOVERNER OF KARNATAKA ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಜಿ.ಕೆ. ಬೋರೇಗೌಡ ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate