অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ

ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ

1973ರ [ಕರ್ನಾಟಕ] ಅಧಿನಿಯಮ ಸಂಖ್ಯೆ 18

(1973ರ ಜುಲೈ ಇಪ್ಪತ್ಮೂರನೇ ದಿನದಂದು [ಕರ್ನಾಟಕ]೧ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

[ಕರ್ನಾಟಕ] ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ, 1972

(1973ರ ಜುಲೈ ಹದಿನೆಂಟನೇ ದಿನದಂದು ರಾಷ್ಟ್ರಪತಿಯವರ ಅನುಮತಿ ಪಡೆದಿದೆ)

ರಾಜ್ಯದಲ್ಲಿರುವ ದುರ್ಬಲ ವರ್ಗಗಳ ಜನರಿಗೆ ಮನೆ ನಿವೇಶನಗಳನ್ನು ಮಂಜೂರು ಮಾಡುವುದಕ್ಕಾಗಿ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಉಪಬಂಧ ಕಲ್ಪಿಸುವ ಅಧಿನಿಯಮ.

ರಾಜ್ಯದಲ್ಲಿರುವ ದುರ್ಬಲ ವರ್ಗಗಳ ಜನರಿಗೆ ಮನೆ ನಿವೇಶನಗಳನ್ನು ಮಂಜೂರು ಮಾಡುವ ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕಾಗಿ ಮತ್ತು ಅದಕ್ಕೆ ಸಂಬಂಧಿಸಿದ ಉದ್ದೇಶಗಳಿಗಾಗಿ ಉಪಬಂಧ ಕಲ್ಪಿಸುವುದು ವಿಹಿತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಇಪ್ಪತ್ಮೂರನೇ ವರ್ಷದಲ್ಲಿ[ಕರ್ನಾಟಕ] ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:Š

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಚಿಕ್ಕ ಹೆಸರು ಮತ್ತು ಪ್ರಾರಂಭ.-

(1) ಈ ಅಧಿನಿಯಮವನ್ನು [ಕರ್ನಾಟಕ] ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ, 1972 ಎಂದು ಕರೆಯತಕ್ಕುದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

(2) ಇದು ಕೂಡಲೇ ಜಾರಿಗೆ ಬರತಕ್ಕುದು.

ಪರಿಭಾಷೆಗಳು.-

ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,Š

(1) ``ಡೆಪ್ಯುಟಿ ಕಮಿಷನರ್'' ಎಂಬುದು ಈ ಅಧಿನಿಯಮದ ಮೇರೆಗೆ ಡೆಪ್ಯುಟಿ ಕಮಿಷನರ್‍ರವರ ಪ್ರಕಾರ್ಯಗಳನ್ನು ನೆರವೇರಿಸಲು ರಾಜ್ಯ ಸರ್ಕಾರವು ವಿಶೇಷವಾಗಿ ನೇಮಕಮಾಡಿದ ಯಾರೇ ಅಧಿಕಾರಿಯನ್ನು ಒಳಗೊಳ್ಳುತ್ತದೆ;

(2) ``ಅಧಿಸೂಚನೆ'' ಎಂದರೆ ಅಧಿಕøತ ರಾಜ್ಯಪತ್ರದಲ್ಲಿ ಪ್ರಕಟವಾದ ಅಧಿಸೂಚನೆ;

(3) ``ದುರ್ಬಲ ವರ್ಗಗಳ ಜನರು'' ಎಂದರೆ ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಗಳು, ಭೂರಹಿತ ಕಾರ್ಮಿಕರು ಮತ್ತು ರಾಜ್ಯ ಸರ್ಕಾರವು, ಅವರ ಆರ್ಥಿಕ ಹಿಂದುಳಿದಿರುವಿಕೆಯನ್ನು ಗಮದಲ್ಲಿಟ್ಟುಕೊಂಡು ಅಧಿಸೂಚನೆ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ವ್ಯಕ್ತಿಗಳ ಇತರ ವರ್ಗ ಅಥವಾ ವರ್ಗಗಳು;

(4) ``ಭೂಮಿ'' ಎಂಬ ಪದಾವಳಿಯು ಮತ್ತು ``ಆಸಕ್ತ ವ್ಯಕ್ತಿ'' ಎಂಬ ಪದಾವಳಿಯು ಅನುಕ್ರಮವಾಗಿ, ಭೂಸ್ವಾಧೀನ ([ಕರ್ನಾಟಕ]ವ್ಯಾಪ್ತಿ ಮತ್ತು ತಿದ್ದುಪಡಿ) ಅಧಿನಿಯಮ, 1961ರ ಮೂಲಕ ತಿದ್ದುಪಡಿ ಮಾಡಿದಂತೆ ಭೂಸ್ವಾಧೀನ ಅಧಿನಿಯಮ, 1894 (1894ರ ಕೇಂದ್ರ ಅಧಿನಿಯಮ

1) ರಲ್ಲಿ ಅವುಗಳಿಗೆ ನೀಡಲಾಗಿರುವ ಅರ್ಥಗಳನ್ನು ಹೊಂದಿರತಕ್ಕುದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ಭೂಸ್ವಾಧೀನ.-

(1) ಯಾವುದೇ ಕಾಲದಲ್ಲಿ, ರಾಜ್ಯ ಸರ್ಕಾರದ ಅಭಿಪ್ರಾಯದಲ್ಲಿ, ಮನೆ ಇಲ್ಲದ

ದುರ್ಬಲ ವರ್ಗಗಳ ಜನರಿಗೆ ಮನೆ ನಿವೇಶನಗಳನ್ನು ಒದಗಿಸುವ ಉದ್ದೇಶಕ್ಕಾಗಿ ಯಾವುದೇ

ಭೂಮಿಯು ಅಗತ್ಯವಾದರೆ, ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, ಅಂಥ ಭೂಮಿಯನ್ನು

ಸ್ವಾಧೀನ ಪಡಿಸಿಕೊಳ್ಳುವ ತನ್ನ ಉದ್ದೇಶದ ನೋಟೀಸನ್ನು ನೀಡಬಹುದು.

(2) (1)ನೇ ಉಪŠಪ್ರಕರಣದ ಮೇರೆಗೆ ಅಧಿಸೂಚನೆಯ ಪ್ರಕಟಣೆಯ ಅನಂತರ, ರಾಜ್ಯ

ಸರ್ಕಾರವು, ಮಾಲೀಕನ ಮೇಲೆ ಅಥವಾ ಮಾಲೀಕನು ಅನುಭೋಗದಾರನಾಗಿಲ್ಲದಿರುವಲ್ಲಿ, ಭೂಮಿಯ

ಅನುಭೋಗದಾರನ ಮೇಲೆ, ಅದರಲ್ಲಿ ಹಿತಾಸಕ್ತಿಯುಳ್ಳವರೆಂದು ತಿಳಿಯಲಾಗಿರುವ ಅಥವಾ

ನಂಬಲಾಗಿರುವಂಥ ಎಲ್ಲ ವ್ಯಕ್ತಿಗಳ ಮೇಲೆ, ನೋಟೀಸನ್ನು ಜಾರಿ ಮಾಡಿ ಹಾಗೆ ನೋಟೀಸು

ಜಾರಿಯಾದ ದಿನಾಂಕದಿಂದ ಮೂವತ್ತು ದಿನಗಳ ಒಳಗೆ, ಭೂಮಿಯನ್ನು ಏಕೆ

ಸ್ವಾಧೀನಪಡಿಸಿಕೊಳ್ಳಬಾರದು ಎಂಬುದಕ್ಕೆ ಕಾರಣ ತೋರಿಸುವಂತೆ ತಿಳಿಸತಕ್ಕುದು.

(3) ಭೂಮಿಯ ಮಾಲೀಕ ಮತ್ತು ಅದರಲ್ಲಿ ಹಿತಾಸಕ್ತಿಯುಳ್ಳ ಯಾವನೇ ಇತರ ವ್ಯಕ್ತಿ, ಏನಾದರೂ

ಕಾರಣವನ್ನು ತೋರಿಸಿದ್ದರೆ, ಅದನ್ನು ಪರಿಗಣಿಸಿದ ತರುವಾಯ ಮತ್ತು ಅಂಥ ಮಾಲೀಕ ಮತ್ತು ವ್ಯಕ್ತಿಗೆ

ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ತರುವಾಯ, ರಾಜ್ಯ ಸರ್ಕಾರವು, ತಾನು

ಸೂಕ್ತವೆಂದು ಭಾವಿಸುವಂಥ ಆದೇಶಗಳನ್ನು ಮಾಡಬಹುದು.

(4) (3)ನೇ ಉಪŠಪ್ರಕರಣದ ಮೇರೆಗೆ ಆದೇಶಗಳನ್ನು ಮಾಡಿದ ತರುವಾಯ ರಾಜ್ಯ ಸರ್ಕಾರಕ್ಕೆ,

ಯಾವುದೇ ಭೂಮಿಯನ್ನು (1)ನೇ ಉಪŠಪ್ರಕರಣದ ಮೇರೆಗೆ ಹೊರಡಿಸಿದ ಅಧಿಸೂಚನೆಯಲ್ಲಿ

ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ಮನವರಿಕೆಯಾದಲ್ಲಿ

ಅಧಿಸೂಚನೆಯ ಮೂಲಕ ಆ ಬಗ್ಗೆ ಒಂದು ಘೋಷಣೆಯನ್ನು ಮಾಡತಕ್ಕುದು.

(5) (4)ನೇ ಉಪŠಪ್ರಕರಣದ ಮೇರೆಗೆ ಅಧಿಕøತ ರಾಜ್ಯಪತ್ರದಲ್ಲಿ ಘೋಷಣೆಯನ್ನು ಪ್ರಕಟಿಸಿದ

ತರುವಾಯ, ಭೂಮಿಯು ಎಲ್ಲ ಪೂರ್ವಾಧಿಗಳಿಂದ ಮುಕ್ತವಾಗಿ ರಾಜ್ಯಸರ್ಕಾರದಲ್ಲಿ ಸಂಪೂರ್ಣವಾಗಿ

ನಿಹಿತವಾಗತಕ್ಕುದು.

(6) (5)ನೇ ಉಪŠಪ್ರಕರಣದ ಮೇರೆಗೆ ರಾಜ್ಯಸರ್ಕಾರದಲ್ಲಿ ಯಾವುದೇ ಭೂಮಿ

ನಿಹಿತವಾಗಿರುವಲ್ಲಿ, ರಾಜ್ಯ ಸರ್ಕಾರವು, ಲಿಖಿತ ನೋಟೀಸಿನ ಮೂಲಕ, ಭೂಮಿಯ ಸ್ವಾಧೀನತೆ

ಹೊಂದಿರಬಹುದಾದ ಯಾರೇ ವ್ಯಕ್ತಿಗೆ, ಅದರ ಸ್ವಾಧೀನತೆಯನ್ನು ರಾಜ್ಯಸರ್ಕಾರಕ್ಕೆ ಅಥವಾ

ರಾಜ್ಯಸರ್ಕಾರವು ಈ ಬಗ್ಗೆ ಕ್ರಮಬದ್ಧವಾಗಿ ಅಧಿಕøತಗೊಳಿಸಿದ ಯಾರೇ ವ್ಯಕ್ತಿಗೆ, ನೋಟೀಸ್ ನೀಡಿದ

ಮೂವತ್ತು ದಿನಗಳ ಒಳಗೆ ಬಿಟ್ಟುಕೊಡುವಂತೆ ಅಥವಾ ವಶಾವಣೆ ಮಾಡುವಂತೆ ಆದೇಶಿಸಬಹುದು.

(7) ಯಾರೇ ವ್ಯಕ್ತಿಯು, (6)ನೇ ಉಪŠಪ್ರಕರಣದ ಮೇರೆಗೆ ಮಾಡಿದ ಒಂದು ಆದೇಶವನ್ನು

ಪಾಲಿಸಲು ನಿರಾಕರಿಸಿದರೆ ಅಥವಾ ವಿಫಲನಾದರೆ, ರಾಜ್ಯ ಸರ್ಕಾರವು ಅಥವಾ ರಾಜ್ಯ ಸರ್ಕಾರವು ಈ

ಬಗ್ಗೆ ಅಧಿಕøತಗೊಳಿಸಿದ ಯಾರೇ ಅಧಿಕಾರಿಯು ಭೂಮಿಯ ಸ್ವಾಧೀನತೆಯನ್ನು ತೆಗೆದುಕೊಳ್ಳಬಹುದು

ಮತ್ತು ಆ ಉದ್ದೇಶಕ್ಕಾಗಿ ಅಗತ್ಯವಾಗಬಹುದಾದಂಥ ಬಲವನ್ನು ಬಳಸಬಹುದು.

ಸಂದಾಯವಾಗಬೇಕಾದ ಮೊಬಲಗು.-

(1) ರಾಜ್ಯ ಸರ್ಕಾರವು, ಈ ಅಧಿನಿಯಮದ ಮೇರೆಗೆ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಂಡಲ್ಲಿ, ರಾಜ್ಯ ಸರ್ಕಾರವು ಅಂಥ ಸ್ವಾಧೀನಕ್ಕೆ ಈ

ಪ್ರಕರಣದ ಉಪಬಂಧಗಳಿಗನುಸಾರವಾಗಿ ಮೊಬಲಗನ್ನು ಸಂದಾಯ ಮಾಡತಕ್ಕುದು.

(2) ರಾಜ್ಯ ಸರ್ಕಾರದ ಮತ್ತು ಯಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆಯೋ ಆ

ವ್ಯಕ್ತಿಯ ನಡುವಣ ಒಪ್ಪಂದದಿಂದ ಮೊಬಲಗು ನಿರ್ಧಾರವಾಗಿರುವಲ್ಲಿ ಅಂಥ ಒಪ್ಪಂದದ

ಅನುಸಾರವಾಗಿ ಅದನ್ನು ಸಂದಾಯ ಮಾಡತಕ್ಕುದು.

(3) ಅಂಥ ಯಾವ ಒಪ್ಪಂದಕ್ಕೆ ಬರಲಾಗದಿದ್ದಲ್ಲಿ ರಾಜ್ಯ ಸರ್ಕಾರವು, ಆ ಪ್ರಕರಣವನ್ನು ಡೆಪ್ಯೂಟಿ

ಕವಿೂಷನರ್‍ಗೆ, ಸಂದಾಯ ಮಾಡುವ ಮೊಬಲಗನ್ನು ಮತ್ತು ಅಂಥ ಮೊಬಲಗನ್ನು ಪಾವತಿಸತಕ್ಕ

ವ್ಯಕ್ತಿಯನ್ನು ಅಥವಾ ವ್ಯಕ್ತಿಗಳನ್ನು ನಿರ್ಧರಿಸುವುದಕ್ಕಾಗಿ ಉಲ್ಲೇಖಿಸತಕ್ಕುದು.

(4) (3)ನೇ ಉಪŠಪ್ರಕರಣದ ಮೇರೆಗೆ ಉಲ್ಲೇಖವನ್ನು ಸ್ವೀಕರಿಸಿದ ಮೇಲೆ, ಡೆಪ್ಯೂಟಿ ಕಮಿಷನರು,

ಅಂಥ ಭೂಮಿಯ ಮಾಲೀಕನ ಅಥವಾ ಅನುಭೋಗದಾರನ ಮತ್ತು ಅದರಲ್ಲಿ ಹಿತಾಸಕ್ತಿಯುಳ್ಳವನೆಂದು

ತಿಳಿಯಲಾಗುವ ಅಥವಾ ನಂಬಲಾಗುವ ಎಲ್ಲಾ ವ್ಯಕ್ತಿಗಳಿಗೆ, ತನ್ನ ಮುಂದೆ ಹಾಜರಾಗುವಂತೆ ಮತ್ತು

ಸದರಿ ಭೂಮಿಯಲ್ಲಿನ ಅವರವರ ಹಿತಾಸಕ್ತಿಗಳ ಬಗ್ಗೆ ಹೇಳಿಕೆ ನೀಡುವಂತೆ ನೋಟೀಸನ್ನು

ನೀಡತಕ್ಕುದು.

1894ರ ಕೇಂದ್ರ ಅಧಿನಿಯಮ ಸಂ 1ರ ಅನ್ವಯ.-

ಭೂ ಸ್ವಾಧೀನ ([ಕರ್ನಾಟಕ] ವ್ಯಾಪ್ತಿ ಮತ್ತು ತಿದ್ದುಪಡಿ) ಅಧಿನಿಯಮ, 1961 ರಿಂದ ತಿದ್ದುಪಡಿಯಾದ ಭೂ ಸ್ವಾಧೀನ ಅಧಿನಿಯಮ, 1894

(1894 ರ ಕೇಂದ್ರ ಅಧಿನಿಯಮ ಸಂ 1)ರ ಉಪಬಂಧಗಳು, ಡೆಪ್ಯೂಟಿ ಕಮಿಷನರ್ ಮಾಡುವ ವಿಚಾರಣೆಗೆ ಹಾಗೂ ಕೊಡುವ ಐತೀರ್ಪಿಗೆ, ನ್ಯಾಯಾಲಯಕ್ಕೆ ಮಾಡುವ ಉಲ್ಲೇಖಕ್ಕೆ, ಈ ಅಧಿನಿಯಮದ ಮೇರೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಗಳ ಸಂಬಂಧದಲ್ಲಿ ಮೊಬಲಗನ್ನು ಭಾಗ

ಮಾಡುವುದಕ್ಕೆ ಮತ್ತು ಮೊಬಲಗಿನ ಪಾವತಿಗೆ ಸಂಬಂಧಿಸಿದಂತೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕುದು.

1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.

ರಾಜ್ಯ ಸರ್ಕಾರದಿಂದ ಅಧಿಕಾರಗಳ ಪ್ರತ್ಯಾಯೋಜನೆ.Š

ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಮತ್ತು ನಿರ್ಬಂಧಗಳಿಗೆ ಒಳಪಟ್ಟು, 7ನೇ ಪ್ರಕರಣದ ಮೇರೆಗೆ, ತನ್ನ ಯಾವುವೇ ಅಧಿಕಾರಗಳನ್ನು ತನ್ನ ಅಧಿಕಾರಿಗಳ ಪೈಕಿ ಯಾರೇ ಅಧಿಕಾರಿಗೆ ಪ್ರತ್ಯಾಯೋಜಿಸಬಹುದು.

ನಿಯಮಗಳು.Š

(1) ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ, ನಿಯಮಗಳನ್ನು ರಚಿಸಬಹುದು.

(2) ಈ ಅಧಿನಿಯಮದ ಮೇರೆಗೆ ರಚಿಸಿದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ

ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ, ಅದು

ಅಧಿವೇಶನದಲ್ಲಿರುವಾಗ ಒಂದು ಅಧಿವೇಶನದಲ್ಲಿ ಅಥವಾ ಎರಡು ಅಥವಾ ಅದಕ್ಕೂ ಹೆಚ್ಚಿನ ಅನುಕ್ರಮ

ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತು ದಿನಗಳ ಅವಧಿಯವರೆಗೆ ಇಡತಕ್ಕದ್ದು

ಮತ್ತು ಸದರಿ ಅಧಿವೇಶನದ ಅಥವಾ ಅನುಕ್ರಮ ಅಧಿವೇಶನಗಳ ನಿಕಟ ತರುವಾಯದ ಅಧಿವೇಶನವು

ಮುಗಿಯುವುದಕ್ಕೆ ಮುಂಚೆ ಆ ನಿಯಮದಲ್ಲಿ ಯಾವುದೇ ಮಾರ್ಪಾಟು ಮಾಡಬೇಕೆಂದು ಎರಡೂ

ಸದನಗಳು ಒಪ್ಪಿದರೆ, ರಾಜ್ಯ ಸರ್ಕಾರವು, ಆ ಮಾರ್ಪಾಟು ಅಥವಾ ರದ್ದಿಯಾತಿಯನ್ನು ಅಧಿಕøತ

ರಾಜ್ಯಪತ್ರದಲ್ಲಿ ಅಧಿಸೂಚಿತ ದಿನಾಂಕದಿಂದ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿ

ಯಾಗತಕ್ಕುದು ಅಥವಾ ಸಂದರ್ಭಾನುಸಾರ ಪರಿಣಾಮಕಾರಿಯಾಗತಕ್ಕುದಲ್ಲ. ಆದಾಗ್ಯೂ, ಯಾವುದೇ

ಅಂಥ ಮಾರ್ಪಾಟು ಅಥವಾ ರದ್ದಿಯಾತಿಯು ಆ ನಿಯಮದ ಮೇರೆಗೆ ಆ ಹಿಂದೆ ಮಾಡಿದ

ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕವನ್ನುಂಟುಮಾಡತಕ್ಕುದಲ್ಲ.

ಅಧಿಸೂಚನೆಗಳು

ಸಂಖ್ಯೆ: ಡಿಪಿಸಿ 221 ಡಿಆರ್‍ಎಚ್ 73 (iii), ದಿನಾಂಕ 10ನೇ ಅಕ್ಟೋಬರ್, 1973.

ಕರ್ನಾಟಕ ವಿಶೇಷ ರಾಜ್ಯಪತ್ರ, ದಿನಾಂಕ: 10Š10Š1973

ಎಸ್.ಒ. 1805.Š ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ, 1972 (1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 2ನೇ ಪ್ರಕರಣದ (3)ನೇ ಉಪ ಪ್ರಕರಣದ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಸದರಿ ಉಪ ಪ್ರಕರಣದ ಉದ್ದೇಶಗಳಿಗಾಗಿ ಈ ಮುಂದಿನ ವ್ಯಕ್ತಿಗಳ ಇತರೆ ವರ್ಗವನ್ನು ನಿರ್ದಿಷ್ಟಪಡಿಸಿದೆ, ಎಂದರೆ:Š ರೂ. 1,200Šಗಳಿಗೆ ಮಿÁರದ ವಾರ್ಷಿಕ ವರಮಾನವಿರುವ ವ್ಯಕ್ತಿಗಳು.

ಅಧಿಸೂಚನೆ

ಸಂಖ್ಯೆ: ಡಿಪಿಸಿ 221 ಡಿಆರ್‍ಎಚ್ 73 (i), ದಿನಾಂಕ: 10ನೇ ಅಕ್ಟೋಬರ್, 1973

ಕರ್ನಾಟಕ ವಿಶೇಷ ರಾಜ್ಯಪತ್ರ, ದಿನಾಂಕ: 10Š10Š1973

ಎಸ್.ಒ. 1803.Š ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ, 1972 (1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 6ನೇ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಸದರಿ ಅಧಿನಿಯಮದ ಮೇರೆಗೆ ಇರುವ ರಾಜ್ಯ ಸರ್ಕಾರದ ಈ ಮುಂದಿನ ಅಧಿಕಾರಗಳನ್ನು ಕಂದಾಯ ಉಪ ವಿಭಾಗಗಳ ಪ್ರಭಾರ ಹೊಂದಿರುವ ಅಸಿಸ್ಟೆಂಟ್ ಕಮಿÁಷನರ್ ಗಳಿಗೆ ಪ್ರತ್ಯಾಯೋಜಿಸಿದೆ, ಎಂದರೆ:Š

1. 3ನೇ ಪ್ರಕರಣದ (2)ನೇ ಉಪ ಪ್ರಕರಣ.- (ಭೂಮಿಯ ಮಾಲೀಕನ ಅಥವಾ

ಅನುಭೋಗದಾರನ ಮೇಲೆ ಮತ್ತು ಅದರಲ್ಲಿ ಹಿತಾಸಕ್ತಿಯುಳ್ಳವರೆಂದು ತಿಳಿಯಲಾಗುವ ಅಥವಾ

ನಂಬಲಾಗುವ ಎಲ್ಲ ವ್ಯಕ್ತಿಗಳ ಮೇಲೆ ಕಾರಣ ತೋರಿಸಲು ನೋಟೀಸನ್ನು ಜಾರಿ ಮಾಡಲು ಅಧಿಕಾರ).

2. 3ನೇ ಪ್ರಕರಣದ (3)ನೇ ಉಪ ಪ್ರಕರಣ.- (ಅಹವಾಲನ್ನು ಹೇಳಿಕೊಳ್ಳುವ ಅವಕಾಶವನ್ನು

ಮಾಲೀಕನಿಗೆ ಅಥವಾ ಇತರ ವ್ಯಕ್ತಿಗಳಿಗೆ ನೀಡುವ ಅಧಿಕಾರ ಮಾತ್ರ).

3. 3ನೇ ಪ್ರಕರಣದ (6)ನೇ ಉಪ ಪ್ರಕರಣ.- (ಅದರ ಸ್ವಾಧೀನ ಹೊಂದಿರುವ ಯಾವುದೇ ವ್ಯಕ್ತಿಗೆ

ಆದೇಶಿಸಿ ಲಿಖಿತದಲ್ಲಿ ನೋಟೀಸು ಜಾರಿ ಮಾಡಲು ಅಧಿಕಾರ).

4. 3ನೇ ಪ್ರಕರಣದ (7)ನೇ ಉಪ ಪ್ರಕರಣ.- (ಅಗತ್ಯವಾದರೆ, ಬಲ ಪ್ರಯೋಗ ಮಾಡಿ

ಭೂಮಿಯ ಸ್ವಾಧೀನವನ್ನು ಪಡೆಯಲು ಅಧಿಕಾರ).

5. 4ನೇ ಪ್ರಕರಣದ (1)ನೇ ಉಪ ಪ್ರಕರಣ.- (ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ

ಸ್ವಾಧೀನಕ್ಕಾಗಿ ಮೊಬಲಗನ್ನು ಸಂದಾಯ ಮಾಡಲು ಅಧಿಕಾರ).

6. 4ನೇ ಪ್ರಕರಣದ (2)ನೇ ಉಪ ಪ್ರಕರಣ.- (ಭೂಮಿಯ ಸ್ವಾಧೀನಕ್ಕಾಗಿ

ಸಂದಾಯಮಾಡಬೇಕಾದ ಮೊಬಲಗನ್ನು ಒಪ್ಪಂದದ ಮೂಲಕ ನಿರ್ಧರಿಸಲು ಅಧಿಕಾರ).

ಅಧಿಸೂಚನೆ

ಸಂಖ್ಯೆ: ಡಿಪಿಸಿ 221 ಡಿಆರ್‍ಎಚ್ 73 (i), ದಿನಾಂಕ 11ನೇ ಜುಲೈ, 1974

ಕರ್ನಾಟಕ ವಿಶೇಷ ರಾಜ್ಯಪತ್ರ, ದಿನಾಂಕ: 25Š7Š1974

ಎಸ್‍ಜಿ 1206.- ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ

ಅಧಿನಿಯಮ, 1972 (1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 6ನೇ ಪ್ರಕರಣದಿಂದ

ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಸದರಿ ಅಧಿನಿಯಮದ ಮೇರೆಗೆ,

ರಾಜ್ಯ ಸರ್ಕಾರದ ಕೆಲವು ಅಧಿಕಾರಗಳನ್ನು ಕಂದಾಯ ಉಪ ವಿಭಾಗಗಳ ಅಸಿಸ್ಟೆಂಟ್

ಕಮಿÁಷನರ್‍ಗಳಿಗೆ ಪ್ರತ್ಯಾಯೋಜಿಸಲು ಈ ಮೂಲಕ ದಿನಾಂಕ 10.10.1973ರ ರಾಜ್ಯಪತ್ರ ವಿಶೇಷ

ಸಂಚಿಕೆಯ ivŠ2ಸಿ (ii) ಭಾಗದಲ್ಲಿ ಪ್ರಕಟವಾದ ದಿನಾಂಕ 10.10.1973ರ ಅಧಿಸೂಚನೆ ಸಂಖ್ಯೆ ಎಸ್‍ಒ

1803 ಡಿಪಿಸಿ 221 ಡಿಆರ್‍ಎಚ್ 73(i)ಕ್ಕೆ ಈ ಮುಂದಿನ ತಿದ್ದುಪಡಿಗಳನ್ನು ಮಾಡುತ್ತದೆ, ಎಂದರೆ:Š

ಸದರಿ ಅಧಿಸೂಚನೆಯಲ್ಲಿ ಕ್ರಮ ಸಂಖ್ಯೆ 6ನ್ನು ಮತ್ತು ಇದಕ್ಕೆ ಸಂಬಂಧಿಸಿದ ನಮೂದುಗಳನ್ನು

ಬಿಟ್ಟುಬಿಡತಕ್ಕುದು.

ಅಧಿಸೂಚನೆ

ಸಂಖ್ಯೆ. ಡಿಪಿಸಿ 221 ಡಿಎಚ್‍ಆರ್ 73(ii), ದಿನಾಂಕ: 11Š7Š1974. ಕರ್ನಾಟಕ ವಿಶೇಷ ರಾಜ್ಯಪತ್ರ,

ದಿನಾಂಕ: 25Š7Š1974.

ಎಸ್.ಒ. 1207.- ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ,

1972 (1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 6ನೇ ಪ್ರಕರಣದಿಂದ ಪ್ರದತ್ತವಾದ

ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಸದರಿ ಅಧಿನಿಯಮದ ಮೇರೆಗೆ, ತನ್ನ ಈ

ಮುಂದಿನ ಅಧಿಕಾರಗಳನ್ನು ಕ್ಷೇತ್ರಾಭಿವೃದ್ಧಿ ಅಧಿಕಾರಿಗೆ ಈ ಮೂಲಕ ವಹಿಸಿಕೊಡುತ್ತದೆ, ಎಂದರೆ,-

4ನೇ ಪ್ರಕರಣದ (2)ನೇ ಉಪ ಪ್ರಕರಣ: ಭೂಸ್ವಾಧೀನಕ್ಕೆ ಸಂದಾಯ ಮಾಡಬೇಕಾದ ಮೊತ್ತವನ್ನು

ಒಪ್ಪಂದದ ಮೂಲಕ ನಿರ್ಧರಿಸುವ ಅಧಿಕಾರ.

ಅಧಿಸೂಚನೆ

ಸಂಖ್ಯೆ. ಎಫ್‍ಡಿ 2406 ಎಚ್‍ಎಲ್‍ಎ 74, ಬೆಂಗಳೂರು, ದಿನಾಂಕ: 10ನೇ ಜನೆವರಿ 1975.

ಕರ್ನಾಟಕ ವಿಶೇಷ ರಾಜ್ಯಪತ್ರ, ದಿನಾಂಕ: 15Š1Š1975.

ಎಸ್.ಒ. 303.Š ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ

ಅಧಿನಿಯಮ, 1972 (1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 6ನೇ ಪ್ರಕರಣದಿಂದ

ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ,Š

(1) 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ರಾಜ್ಯ ಸರ್ಕಾರದ ಅಧಿಕಾರವನ್ನು ಜಿಲ್ಲೆಯ

ಜಿಲ್ಲಾಧಿಕಾರಿಗೆ ಪ್ರತ್ಯಾಯೋಜಿಸುತ್ತದೆ.

(2) 3ನೇ ಪ್ರಕರಣದ (3)ನೇ ಉಪ ಪ್ರಕರಣದ ಮೇರೆಗೆ ಆದೇಶಗಳನ್ನು ನೀಡುವ ರಾಜ್ಯ ಸರ್ಕಾರದ

ಅಧಿಕಾರವನ್ನು ಮತ್ತು 3ನೇ ಪ್ರಕರಣದ (4)ನೇ ಉಪ ಪ್ರಕರಣದ ಮೇರೆಗೆ ಇರುವ ಅಧಿಕಾರವನ್ನು:Š

(ಎ) 3ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ನೀಡಿದ ನೋಟೀಸಿಗೆ ಭೂಮಿಯ

ಮಾಲೀಕನು ಅಥವಾ ಯಾವನೇ ವ್ಯಕ್ತಿಯು, ಯಾವ ಕಾಣವನ್ನೂ ತೋರದಿರುವ ಸಂದರ್ಭಗಳಲ್ಲಿ

ಜಿಲ್ಲೆಯ ಜಿಲ್ಲಾಧಿಕಾರಿಗೆ ಪ್ರತ್ಯಾಯೋಜಿಸುತ್ತದೆ;

(ಬಿ) 3ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ನೀಡಿದ ನೋಟೀಸಿಗೆ ಭೂಮಿಯ

ಮಾಲೀಕನು ಅಥವಾ ಯಾವನೇ ಇತರ ವ್ಯಕ್ತಿಯು ಕಾರಣವನ್ನು ತೋರಿರುವ ಸಂದರ್ಭಗಳಲ್ಲಿ ಜಿಲ್ಲೆಯ

ವಿಭಾಗಾಧಿಕಾರಿಗೆ ಪ್ರತ್ಯಾಯೋಜಿಸುತ್ತದೆ.

ಅಧಿಸೂಚನೆ

ಸಂಖ್ಯೆ: ಎಫ್‍ಡಿ 2406 ಎಚ್‍ಎಲ್‍ಎ 1974, ಬೆಂಗಳೂರು, ದಿನಾಂಕ 23ನೇ ಜೂನ್, 1975

ಕರ್ನಾಟಕ ವಿಶೇಷ ರಾಜ್ಯಪತ್ರ, ದಿನಾಂಕ: 25Š6Š1975.

ಎಸ್.ಒ. 1739.Š ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ,

1972 (1973 ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 6ನೇ ಪ್ರಕರಣದಿಂದ ಪ್ರದತ್ತವಾದ

ಅಧಿಕಾರಗಳನ್ನು ಚಲಾಯಿಸಿ ಮತ್ತು ದಿನಾಂಕ 10, ಜನವರಿ, 1975ರ ಅಧಿಸೂಚನೆ ಸಂಖ್ಯೆ ಎಫ್‍ಡಿ

2406 ಎಚ್‍ಎಲ್‍ಎ 74ನ್ನು ರದ್ದುಗೊಳಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಸರ್ಕಾರದ ಅಧಿಕಾರಗಳನ್ನು,Š

1. ಸದರಿ ಅಧಿನಿಯಮದ 3ನೇ ಪ್ರಕರಣದ (1), (2) ಮತ್ತು (4)ನೇ ಉಪ ಪ್ರಕರಣದ ಮೇರೆಗೆ,

ಜಿಲ್ಲೆಯ ಜಿಲ್ಲಾಧಿಕಾರಿಗೆ; ಮತ್ತು

2. ಸದರಿ ಅಧಿನಿಯಮದ 4ನೇ ಪ್ರಕರಣದ (3)ನೇ ಉಪಪ್ರಕರಣದ ಮೇರೆಗೆ ಕಂದಾಯ ಉಪ

ವಿಭಾಗದ ಪ್ರಭಾರ ಹೊಂದಿರುವ ಉಪŠವಿಭಾಗಾಧಿಕಾರಿಗೆ

Š ಪ್ರತ್ಯಾಯೋಜಿಸುತ್ತದೆ.

ಅಧಿಸೂಚನೆ

ಸಂಖ್ಯೆ: ಎಫ್‍ಡಿ 2406 ಎಚ್‍ಎಲ್‍ಎ 74, ಬೆಂಗಳೂರು, ದಿನಾಂಕ 23ನೇ ಜೂನ್, 1975

ಕರ್ನಾಟಕ ವಿಶೇಷ ರಾಜ್ಯಪತ್ರ ದಿನಾಂಕ: 25Š6Š1975

ಎಸ್.ಒ. 1740.Š ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ

ಅಧಿನಿಯಮ, 1972 (1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 2ನೇ ಪ್ರಕರಣದ (1)ನೇ

ಖಂಡದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಸದರಿ ಅಧಿನಿಯಮದ

4ನೇ ಪ್ರಕರಣದ (4)ನೇ ಉಪ ಪ್ರಕರಣದ ಮೇರೆಗೆ ಜಿಲ್ಲಾಧಿಕಾರಿಯ ಕಾರ್ಯವನ್ನು ನೆರವೇರಿಸಲು

ಕಂದಾಯ ಉಪವಿಭಾಗಗಳ ಪ್ರಭಾರ ಹೊಂದಿರುವ ಉಪŠವಿಭಾಗಾಧಿಕಾರಿಯನ್ನು ವಿಶೇಷವಾಗಿ ಈ

ಮೂಲಕ ನೇಮಿಸುತ್ತದೆ.

ಅಧಿಸೂಚನೆ

ಸಂಖ್ಯೆ: ಎಫ್‍ಡಿ 2406 ಎಚ್‍ಎಲ್‍ಎ 74, ಬೆಂಗಳೂರು, ದಿನಾಂಕ 13ನೇ ಏಪ್ರಿಲ್, 1976

ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ, 1972

(1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 6ನೇ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು

ಚಲಾಯಿಸಿ ಮತ್ತು ವಿಷಯದ ಮೇಲಿನ ಹಿಂದಿನ ಆದೇಶಗಳನ್ನು ಮಾರ್ಪಾಟು ಮಾಡಿ, ಕರ್ನಾಟಕ

ಸರ್ಕಾರವು, ಈ ಮೂಲಕ ರಾಜ್ಯ ಸರ್ಕಾರದ ಅಧಿಕಾರಗಳನ್ನು,Š

(i) 3ನೇ ಪ್ರಕರಣದ (1) ಮತ್ತು (4)ನೇ ಉಪ ಪ್ರಕರಣಗಳ ಮೇರೆಗೆ ಮತ್ತು ಸದರಿ 3ನೇ

ಪ್ರಕರಣದ (3)ನೇ ಉಪ ಪ್ರಕರಣದ ಮೇರೆಗೆ ಆದೇಶ ಹೊರಡಿಸುವ ಅಧಿಕಾರವನ್ನು ಮಾತ್ರ ಜಿಲ್ಲೆಯ

ಜಿಲ್ಲಾಧಿಕಾರಿಗೆ; ಮತ್ತು

(ii) ಸದರಿ ಅಧಿನಿಯಮದ 3ನೇ ಪ್ರಕರಣದ (3)ನೇ ಉಪ ಪ್ರಕರಣದ ಮತ್ತು 4ನೇ

ಪ್ರಕರಣದ (3)ನೇ ಉಪ ಪ್ರಕರಣದ (ಆದೇಶಗಳನ್ನು ಕೊಡುವ ಅಧಿಕಾರಗಳನ್ನು ಹೊರತುಪಡಿಸಿ)

ಮೇರೆಗೆ ಕಂದಾಯ ಉಪವಿಭಾಗ ಹೊಂದಿರುವ ಉಪ ವಿಭಾಗಾಧಿಕಾರಿಗಳಿಗೆ Šಪ್ರತ್ಯಾಯೋಜಿಸುತ್ತದೆ.

ಅಧಿಸೂಚನೆ

ಸಂಖ್ಯೆ: ಎಫ್‍ಡಿ 66 ಎಚ್‍ಎಲ್‍ಎ 76, ಬೆಂಗಳೂರು, ದಿನಾಂಕ 14ನೇ ಜೂನ್, 1976

ಕರ್ನಾಟಕ ವಿಶೇಷ ರಾಜ್ಯಪತ್ರ ದಿನಾಂಕ: 24Š6Š1976

ಎಸ್.ಒ. 1637.Š ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ

ಅಧಿನಿಯಮ, 1972 (1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 5ನೇ ಪ್ರಕರಣದಿಂದ

ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮತ್ತು ದಿನಾಂಕ ಜೂನ್ 23, 1975ರ ಅಧಿಸೂಚನೆ ಸಂಖ್ಯೆ

ಎಫ್‍ಡಿ 2406 ಎಚ್‍ಎಲ್‍ಎ 74ನ್ನು ಭಾಗಶಃ ಮಾರ್ಪಾಡು ಮಾಡಿ, ಸರ್ಕಾರವು ಸದರಿ

ಅಧಿನಿಯಮದ 4ನೇ ಪ್ರಕರಣದ (3)ನೇ ಉಪ ಪ್ರಕರಣದ ಮೇರೆಗೆ,Š

(1) ರಾಮನಗರಂ ಮತ್ತು ದೊಡ್ಡಬಳ್ಳಾಪುರ ಕಂದಾಯ ಉಪ ವಿಭಾಗಗಳ

ಉಪŠವಿಭಾಗಾಧಿಕಾರಿಗಳನ್ನು ಹೊರತುಪಡಿಸಿ, ಕಂದಾಯ ಉಪ ವಿಭಾಗಗಳ ಪ್ರಭಾರ ಹೊಂದಿರುವ

ಉಪŠವಿಭಾಗಾಧಿಕಾರಿಗಳಿಗೆ;

(2) ರಾಮನಗರಂ ಕಂದಾಯ ಉಪ ವಿಭಾಗಕ್ಕೆ ಸಂಬಂಧಿಸಿದಂತೆ, ವಿಶೇಷ ಭೂಸ್ವಾಧೀನಾಧಿಕಾರಿ,

ರೈಲ್ವೇ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವøದ್ಧಿ ಮಂಡಲಿ, ಬೆಂಗಳೂರು ಇವರಿಗೆ; ಮತ್ತು

(3) ದೊಡ್ಡಬಳ್ಳಾಪುರ ಕಂದಾಯ ಉಪ ವಿಭಾಗಕ್ಕೆ ಸಂಬಂಧಿಸಿದಂತೆ, ವಿಶೇಷ ಭೂಸ್ವಾಧೀನಾಧಿಕಾರಿ,

ಬೆಂಗಳೂರು ಇವರಿಗೆ.

ಅಧಿಸೂಚನೆ

ಸಂಖ್ಯೆ: ಎಚ್‍ಯುಡಿ 20 ಎಚ್‍ಎಸ್‍ಯು 79, ಬೆಂಗಳೂರು, ದಿನಾಂಕ 4/9ನೇ ಅಕ್ಟೋಬರ್, 1979

ಕರ್ನಾಟಕ ವಿಶೇಷ ರಾಜ್ಯಪತ್ರ, ದಿನಾಂಕ: 9Š10Š1979

ಎಸ್.ಒ. 2593.- ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ,

1972 (1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 2ನೇ ಪ್ರಕರಣದ (3)ನೇ ಉಪ ಪ್ರಕರಣದಿಂದ

ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮತ್ತು ದಿನಾಂಕ 10ನೇ ಅಕ್ಟೋಬರ್, 1973ರ ಅಧಿಸೂಚನೆ

ಸಂಖ್ಯೆ ಡಿಪಿಸಿ 221, ಡಿಆರ್‍ಎಚ್ 73(iii) ನ್ನು ರದ್ದುಗೊಳಿಸಿ, ಕರ್ನಾಟಕ ಸರ್ಕಾರವು, ವ್ಯಕ್ತಿಗಳ ಇತರ

ವರ್ಗಗಳನ್ನು ಈ ಮೂಲಕ ನಿರ್ದಿಷ್ಟಪಡಿಸುತ್ತದೆ, ಎಂದರೆ:Š

(i) ಪುರಸಭೆಯ ಪ್ರದೇಶಗಳಲ್ಲಿ ರೂ. 4,800ಕ್ಕೆ ಮಿÁರದ ವಾರ್ಷಿಕ ಆದಾಯವಿರುವ ವ್ಯಕ್ತಿಗಳು;

(ii) ಗ್ರಾಮಿÁಣ ಪ್ರದೇಶದಲ್ಲಿ ರೂ 2,000ಕ್ಕೆ ಮಿÁರದ ವಾರ್ಷಿಕ ಆದಾಯವಿರುವ ವ್ಯಕ್ತಿಗಳು.

ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ

ನಿಯಮಗಳು, 1973

ನಿಯಮಗಳ ಅನುಕ್ರಮಣಿಕೆ

ನಿಯಮಗಳು

1. ಹೆಸರು ಮತ್ತು ಪ್ರಾರಂಭ

2. ಪರಿಭಾಷೆಗಳು

3. ಸ್ವಾಧೀನ ವ್ಯವಹಾರಗಳ ಪ್ರಾರಂಭ

4. ನೋಟೀಸನ್ನು ಹೊರಡಿಸುವುದು

5. ಆಕ್ಷೇಪಣೆಗಳ ವಿವರಣೆ

6. ಆಕ್ಷೇಪಣೆಗಳ ವಿಚಾರಣೆ

7. ಪ್ಲೀಡರುಗಳು ಹಾಜರಾಗುವುದು

8. ಅಸಿಸ್ಟೆಂಟ್ ಕವಿೂಷನರು ಸರ್ಕಾರಕ್ಕೆ ವರದಿ ಸಲ್ಲಿಸುವುದು

9. ಆಕ್ಷೇಪಣೆಗಳ ಪರ್ಯಾಲೋಚನೆ ಮತ್ತು ಅಂತಿಮ ಅಧಿಸೂಚನೆಯನ್ನು ಹೊರಡಿಸುವುದು

10. ಇತರ ನಮೂನೆಗಳು

ನಮೂನೆಗಳು.

ಅಧಿಸೂಚನೆ

[ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ನಿಯಮಗಳು,1973]

ಸಂಖ್ಯೆ. ಡಿಪಿಸಿ 221 ಡಿಎಚ್ ಆರ್ 73 (ii) ದಿನಾಂಕ 10ನೇ ಅಕ್ಟೋಬರ್, 1973.

ತಿದ್ದುಪಡಿಯಾದಂತೆ)

1. 10-10-1973ನೇ ದಿನಾಂಕದ ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಅಧಿಸೂಚನೆ ಸಂಖ್ಯೆ ಡಿಪಿಸಿ 221 ಡಿಎಚ್‍ಆರ್ 73 (ii),

ದಿನಾಂಕ: 10-10-1973.

ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂ ಸ್ವಾಧೀನ ಅಧಿನಿಯಮ, 1972

(1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 7ನೇ ಪ್ರಕರಣದ (1)ನೇ ಉಪŠಪ್ರಕರಣದ ಮೂಲಕ

ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕೆಳಕಂಡ ನಿಯಮಗಳನ್ನು ಈ

ಮೂಲಕ ರಚಿಸುತ್ತದೆ, ಎಂದರೆ:Š

ಹೆಸರು ಮತ್ತು ಪ್ರಾರಂಭ.Š

(1) ಈ ನಿಯಮಗಳನ್ನು ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂ ಸ್ವಾಧೀನ ನಿಯಮಗಳು, 1973 ಎಂದು ಕರೆಯತಕ್ಕುದು.

(2) ಇವು ಕೂಡಲೇ ಜಾರಿಗೆ ಬರತಕ್ಕುದು.

ಪರಿಭಾಷೆಗಳು.Š

(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,Š

(ಎ) ``ಅಧಿನಿಯಮ'' ಎಂದರೆ ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ

ಅಧಿನಿಯಮ, 1972(1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18);

(ಬಿ) ``ನಮೂನೆ'' ಎಂದರೆ ಈ ನಿಯಮಗಳಿಗೆ ಅನುಬಂಧಿಸಿದ ನಮೂನೆ;

(ಸಿ) ``ಪ್ರಕರಣ'' ಎಂದರೆ ಈ ಅಧಿನಿಯಮದ ಪ್ರಕರಣ.

(2) ಈ ನಿಯಮಗಳಲ್ಲಿ ಬಳಸಿದ, ಆದರೆ ಪರಿಭಾಷಿಸಿಲ್ಲದ ಪದಗಳು ಮತ್ತು ಪದಾವಳಿಗಳು ಅಧಿನಿಯಮದಲ್ಲಿ ಅವುಗಳಿಗೆ ಗೊತ್ತುಪಡಿಸಿದ ಅದೇ ಅರ್ಥಗಳನ್ನು ಕ್ರಮವಾಗಿ ಹೊಂದಿರತಕ್ಕುದು.

ಸ್ವಾಧೀನ ವ್ಯವಹರಣೆಗಳ ಪ್ರಾರಂಭ.-

[(1) ಮನೆಯಿಲ್ಲದ ದುರ್ಬಲ ವರ್ಗದ ಜನರಿಗೆ ಮನೆ ನಿವೇಶನಗಳನ್ನು ಮಂಜೂರು ಮಾಡುವ ಸಾರ್ವಜನಿಕ ಉದ್ದೇಶಕ್ಕಾಗಿ ಯಾವುದೇ ಭೂಮಿ

ಅಗತ್ಯವಾದಲ್ಲಿ, ನಗರ ಪಾಲಿಕೆಯ ಕವಿೂಷನರು ಅಥವಾ ಸಂದರ್ಭಾನುಸಾರ ನಗರದ ಅಥವಾ

ಪುರಸಭೆಯ ಪರಿಮಿತಿಗಳ ಒಳಗಿನ ಯಾವುದೇ ಪ್ರದೇಶದ ಸಂಬಂಧದಲ್ಲಿ ನಗರ ಪಾಲಿಕೆ ಸಭೆಯ

ಕವಿೂಷನರು ಅಥವಾ ಪುರಸಭೆಯ ಕಮಿಷನರು ಅಥವಾ ಮುಖ್ಯಾಧಿಕಾರಿಯು ಅಥವಾ ಗ್ರಾಮಿÁಣ

ಪ್ರದೇಶಗಳ ಸಂಬಂಧದಲ್ಲಿ ಕ್ಷೇತ್ರಾಭಿವøದ್ಧಿ ಅಧಿಕಾರಿಯು, ಭೂಮಿ ಇರುವ ಸ್ಥಳ, (ಅಂದರೆ ನಗರ

ಅಥವಾ ಪಟ್ಟಣ, ಗ್ರಾಮ, ತಾಲ್ಲೂಕು ಮತ್ತು ಜಿಲ್ಲೆ) ನಿವೇಶನ ಸಂಖ್ಯೆ ಅಥವಾ ಪ್ಲಾಟ್ ಸಂಖ್ಯೆ ಅಥವಾ

ಸರ್ವೆ ನಂಬರು, ಅಂದಾಜು ವಿಸ್ತಾರ, ಕರನಿರ್ಧರಣೆ ಅಥವಾ ಅಂದಾಜು ಮೌಲ್ಯ, ಖಾತೆದಾರರ,

ಅನುಭವದಾರರ ಅಥವಾ ಅನುಭೋಗದಾರರ ಹೆಸರುಗಳು, ಯೋಜನೆ ಅಥವಾ ಕಚ್ಚಾ ನಕಾಶೆ ಮತ್ತು

ಅಂಥ ಭೂಮಿಯ ಮೇಲೆ ಯಾವುದಾದರೂ ಪೂರ್ವಾಧಿಗಳಿದ್ದರೆ, ಅವುಗಳೆಲ್ಲದರ ವಿವರಗಳನ್ನು

ಒದಗಿಸುವ ವರದಿಯನ್ನು ಉಪ ವಿಭಾಗದ ಅಸಿಸ್ಟೆಂಟ್ ಕಮಿÁಷನರಿಗೆ ನೀಡತಕ್ಕುದು.]

1. ಅಧಿಸೂಚನೆ ಸಂಖ್ಯೆ ಎಚ್‍ಯುಡಿ 12 ಎಲ್‍ಆರ್‍ಬಿ 78, ದಿನಾಂಕ: 8-9-1980 ಜಿಎಸ್‍ಆರ್ 267 (ವಿಶೇಷಾಂಕ) ಕೆ.ಜಿ.ಡಿ. 10-9-

1980ರ ಮೂಲಕ ಪ್ರತಿಯೋಜಿಸಲಾಗಿದೆ.

(2)[ಸಂದರ್ಭಾನುಸಾರ ಕವಿೂಷನರಿಂದ ಅಥವಾ ಕ್ಷೇತ್ರಾಭಿವøದ್ಧಿ ಅಧಿಕಾರಿಯಿಂದ ಅಥವಾ

ಮುಖ್ಯಾಧಿಕಾರಿಯಿಂದ] ವರದಿಯನ್ನು ಸ್ವೀಕರಿಸಿದ ಮೇಲೆ, ಅಸಿಸ್ಟೆಂಟ್ ಕವಿೂಷನರು ಪ್ರಸ್ತಾವನೆಗಳನ್ನು

3(1)ನೇ ಪ್ರಕರಣದ ಮೇರೆಗೆ `ಎ' ನಮೂನೆಯಲ್ಲಿ ಹೊರಡಿಸಬೇಕಾದ ಅಧಿಸೂಚನೆಯ ಕರಡಿನ

ಜೊತೆಗೆ ನೇರವಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕುದು.

1. 10-10-1973ನೇ ದಿನಾಂಕದ ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಅಧಿಸೂಚನೆ ಸಂಖ್ಯೆ ಡಿಪಿಸಿ 221 ಡಿಎಚ್‍ಆರ್ 73 (ii),

ದಿನಾಂಕ: 10-10-1973.

ನೋಟೀಸನ್ನು ಹೊರಡಿಸುವುದು.Š 3ನೇ ಪ್ರಕರಣದ

(1)ನೇ ಉಪŠಪ್ರಕರಣದ ಮೇರೆಗೆ ಅಧಿಸೂಚನೆಯನ್ನು ಪ್ರಕಟಿಸಿದ ತರುವಾಯ ಕೂಡಲೇ ಅಸಿಸ್ಟೆಂಟ್ ಕವಿೂಷನರು, ಭೂಮಿಯ

ಮಾಲೀಕನಿಗೆ ಅಥವಾ ಅನುಭೋಗದಾರನಿಗೆ ಮತ್ತು ಅದರಲ್ಲಿ ಹಿತಾಸಕ್ತಿಯುಳ್ಳವನೆಂದು

ತಿಳಿಯಲಾಗುವಂಥ ಅಥವಾ ನಂಬಲಾಗುವಂಥ ಎಲ್ಲ ವ್ಯಕ್ತಿಗಳಿಗೆ, ನೋಟೀಸನ್ನು ನೀಡಿದ

ದಿನಾಂಕದಿಂದ ಮೂವತ್ತು ದಿನಗಳ ಒಳಗೆ ಭೂಮಿಯನ್ನು ಏಕೆ ಸ್ವಾಧೀನಪಡಿಸಿಕೊಳ್ಳಬಾರದು

ಎಂಬುದಕ್ಕೆ ಕಾರಣ ತೋರಿಸುವುದಕ್ಕಾಗಿ `ಬಿ' ನಮೂನೆಯಲ್ಲಿ ಒಂದು ನೋಟೀಸನ್ನು ನೀಡುವಂತೆ

ಮಾಡತಕ್ಕುದು. ನೋಟೀಸನ್ನು, ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾವಿಸಲಾದ ಭೂಮಿಯು ಇರುವ ಸ್ಥಳದ

ಅನುಕೂಲಕರ ಸ್ಥಳದಲ್ಲಿ ಪ್ರಕಟಿಸತಕ್ಕುದು ಮತ್ತು ದರ ಪ್ರತಿಗಳನ್ನು ಭೂಮಿ ಇರುವ ಸ್ಥಳದ ಅಧಿಕಾರ

ವ್ಯಾಪ್ತಿಯಲ್ಲಿ ಬರುವ [ಸಂಬಂಧಪಟ್ಟ,Š

(i)ನಗರಪಾಲಿಕೆಯ ಕಚೇರಿಯ;

(ii)ಪುರಸಭೆಯ ಕಚೇರಿಯ;

(iii) ಅಸಿಸ್ಟೆಂಟ್ ಕವಿೂಷನರ್‍ರವರ ಕಚೇರಿಯ;

(iv)ತಾಲೂಕು ಕಚೇರಿಯ;

(v)ಕ್ಷೇತ್ರಾಭಿವøದ್ಧಿ ಕಚೇರಿಯ; ಮತ್ತು

(vi)ಗ್ರಾಮ ಪಂಚಾಯತಿಯ ಕಚೇರಿ ಅಥವಾ ಚಾವಡಿಯ

Šಸೂಚನಾಫಲಕಗಳಲ್ಲಿ ಅಂಟಿಸತಕ್ಕುದು.]

1. 10-10-1973ನೇ ದಿನಾಂಕದ ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಅಧಿಸೂಚನೆ ಸಂಖ್ಯೆ ಡಿಪಿಸಿ 221 ಡಿಎಚ್‍ಆರ್ 73 (ii),

ದಿನಾಂಕ: 10-10-1973.

ಆಕ್ಷೇಪಣೆಗಳ ವಿವರಣೆ.Š

ಆಕ್ಷೇಪಣೆಗಳ ವಿವರಣೆಯು (ಅಂದರೆ, ಕಾರಣ ತೋರಿಸುವಂತೆ ಕೇಳಿದ ನೋಟೀಸಿಗೆ ಕೊಟ್ಟ ಉತ್ತರ) ಇತರ ವಿಷಯಗಳ ಜೊತೆಗೆ ಆಕ್ಷೇಪಣಕಾರನು ಭೂಮಿಯಲ್ಲಿ ಹೇಗೆ ಹಿತಾಸಕ್ತಿಯುಳ್ಳವನಾಗಿದ್ದಾನೆ ಎಂಬುದನ್ನು ತಿಳಿಸತಕ್ಕುದು ಮತ್ತು ಆಕ್ಷೇಪಣೆಗೆ ಕಾರಣಗಳನ್ನು ನಿರೂಪಿಸತಕ್ಕುದು.

ಆಕ್ಷೇಪಣೆಗಳ ವಿಚಾರಣೆ.Š

(1) 3ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ, ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ದಿನಾಂಕಗಳ ತರುವಾಯ ಅಥವಾ ಭೂಮಿಯಲ್ಲಿ ಹಿತಾಸಕ್ತಿ

ಹೊಂದಿರದ ವ್ಯಕ್ತಿಯು ಆಕ್ಷೇಪಣೆಗಳ ವಿವರಣೆಯನ್ನು ದಾಖಲು ಮಾಡಿದರೆ, ಅದನ್ನು ಕ್ಷಿಪ್ರ ವಿಚಾರಣೆಯ ಮೂಲಕ ತಿರಸ್ಕರಿಸತಕ್ಕುದು.

(2) (3)ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ಹೊರಡಿಸಲಾದ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದಂದು ಅಥವಾ ಅದಕ್ಕೂ ಮೊದಲು ಭೂಮಿಯಲ್ಲಿ ಹಿತಾಸಕ್ತಿ ಹೊಂದಿರುವ ವ್ಯಕ್ತಿಯಿಂದ ಯಾವುದೇ ಆಕ್ಷೇಪಣೆಯನ್ನು ಸ್ವೀಕರಿಸಿದರೆ, ಅಸಿಸ್ಟೆಂಟ್ ಕವಿೂಷನರು, ಆಕ್ಷೇಪಣೆಗಳ

ವಿಚಾರಣೆಗಾಗಿ ದಿನಾಂಕವನ್ನು ನಿಗದಿಪಡಿಸತಕ್ಕುದು ಮತ್ತು ಅದರ ನೋಟೀಸನ್ನು ಆಕ್ಷೇಪಣೆಕಾರರಿಗೆ ನೀಡತಕ್ಕುದು. ಆಕ್ಷೇಪಣೆಗಳ ಪ್ರತಿಗಳನ್ನು ಕೂಡ [ಸಂದರ್ಭಾನುಸಾರ ಕಮಿÁಷನರಿಗೆ ಅಥವಾ ಕ್ಷೇತ್ರಾಭಿವøದ್ಧಿ ಅಧಿಕಾರಿಗೆ][ಅಥವಾ ಮುಖ್ಯಾಧಿಕಾರಿಗೆ] ಕಳುಹಿಸಬಹುದು ಮತ್ತು ಅವರು ಆಕ್ಷೇಪಣೆಗಳಿಗೆ ಉತ್ತರದ ರೂಪದಲ್ಲಿ ವಿವರಣೆಯನ್ನು ಸಲ್ಲಿಸಬಹುದು.

1. 10-10-1973ನೇ ದಿನಾಂಕದ ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಅಧಿಸೂಚನೆ ಸಂಖ್ಯೆ ಡಿಪಿಸಿ 221 ಡಿಎಚ್‍ಆರ್ 73 (ii),

ದಿನಾಂಕ: 10-10-1973

2. ಅಧಿಸೂಚನೆ ಸಂಖ್ಯೆ ಎಚ್‍ಯುಡಿ 12 ಎಲ್‍ಆರ್‍ಬಿ 78, ದಿನಾಂಕ: 8-9-1980. ಜಿಎಸ್‍ಆರ್ 267 (ವಿಶೇಷಾಂಕ) ಕೆ.ಜಿ.ಡಿ 10-9-

1980ರ ಮೂಲಕ ಪ್ರತಿಯೋಜಿಸಲಾಗಿದೆ.

(3) ವಿಚಾರಣೆಗಾಗಿ ನಿಗದಿಪಡಿಸಿದ ದಿನಾಂಕದಂದು ಅಥವಾ ತಾನು ವಿಚಾರಣೆಯನ್ನು ಮುಂದಕ್ಕೆ

ಹಾಕಬಹುದಾದ ಯಾವುದೇ ಇತರ ದಿನಾಂಕದಂದು, ಅಸಿಸ್ಟೆಂಟ್ ಕವಿೂಷನರು, ಆಕ್ಷೇಪಣಾಕಾರನ

ಅಥವಾ ಅವನ ನ್ಯಾಯವಾದಿಯ ಅಹವಾಲನ್ನು [ಘಿಘಿಘಿ] ಕೇಳತಕ್ಕುದು ಮತ್ತು ಆಕ್ಷೇಪಣೆಗಳಿಗೆ

ಸಮರ್ಥನೆಗಾಗಿ ಹಾಜರುಪಡಿಸಬಹುದಾದ ಯಾವುದೇ ಸಾಕ್ಷ ್ಯವನ್ನು ದಾಖಲಿಸತಕ್ಕುದು. 2

[ಕಮಿÁಷನರ್ ಅಥವಾ ಕ್ಷೇತ್ರಾಭಿವøದ್ಧಿ ಅಧಿಕಾರಿಯು] [ಅಥವಾ ಮುಖ್ಯಾಧಿಕಾರಿ ಅಥವಾ ಅವರ

ಪ್ರತಿನಿಧಿಯೂ ಕೂಡ ವಿಚಾರಣೆಯಲ್ಲಿ ಭಾಗವಹಿಸಬಹುದು.]

1. ಅಧಿಸೂಚನೆ ಸಂಖ್ಯೆ ಎಚ್‍ಯುಡಿ 175 ಎಚ್‍ಎಲ್‍ಎ 76, ದಿನಾಂಕ: 4-4-1978ರ ಮೂಲಕ 4-4-1978ರಿಂದ ಜಾರಿಗೆ ಬರುವಂತೆ

ಬಿಟ್ಟುಬಿಡಲಾಗಿದೆ. (ಜಿಎಸ್‍ಆರ್ 106)

2. ಅಧಿಸೂಚನೆ ಸಂಖ್ಯೆ ಎಚ್‍ಯುಡಿ 175 ಎಚ್‍ಎಲ್‍ಎ 76, ದಿನಾಂಕ: 4-4-1978. ಜಿಎಸ್‍ಆರ್ 106 ಮೂಲಕ 4-4-1978ರಿಂದ

ಜಾರಿಗೆ ಬರುವಂತೆ ಸೇರಿಸಲಾಗಿದೆ.

3. ಜಿಎಸ್‍ಆರ್ 267 ಅಧಿಸೂಚನೆ ಸಂಖ್ಯೆ ಎಚ್‍ಯುಡಿ 12 ಎಲ್‍ಆರ್‍ಬಿ, ದಿನಾಂಕ: 8-9-1980ರ ಮೂಲಕ ಕ್ಷೇತ್ರಾಭಿವೃದ್ಧಿ ಅಧಿಕಾರಿ

ಅಥವಾ ಮುಖ್ಯಾಧಿಕಾರಿ ಎಂಬ ಪದಗಳನ್ನು 10-9-1980ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ಪ್ಲೀಡ್‍ರ್‍ಗಳು ಹಾಜರಾಗುವುದು.Š

ಅಡ್ವೋಕೇಟ್‍ರುಗಳು ಅಥವಾ ಪ್ಲೀಡರ್‍ಗಳ ಹೊರತು, ಇತರ ಏಜೆಂಟರುಗಳಿಗೆ 6ನೇ ನಿಯಮದ ಮೇರೆಗಿನ ಯಾವುದೇ ವಿಚಾರಣೆಯಲ್ಲಿ , ಹಿತಾಸಕ್ತಿಯುಳ್ಳ

ವ್ಯಕ್ತಿಗಳ ಪರವಾಗಿ ಹಾಜರಾಲು ಅವಕಾಶ ನೀಡತಕ್ಕುದಲ್ಲ.

 

ಅಸಿಸ್ಟೆಂಟ್ ಕಮಿÁಷನರು ಸರ್ಕಾರಕ್ಕೆ ವರದಿ ಸಲ್ಲಿಸುವುದು.Š

ವಿಚಾರಣೆ ಮುಕ್ತಾಯಗೊಂಡ ಮೇಲೆ, ಅಸಿಸ್ಟೆಂಟ್ ಕಮಿÁಷನರು [ಆಕ್ಷೇಪಣೆಗಳನ್ನು [ಮತ್ತು 6ನೇ ನಿಯಮದ (2)ನೇ ಉಪ

ನಿಯಮದ ಮೇರೆಗೆ ಸಲ್ಲಿಸಿದ ಹೇಳಿಕೆಗಳನ್ನು] ಹಾಗೂ ದಾಖಲು ಮಾಡಿದ ಸಾಕ್ಷ ್ಯಗಳನ್ನು ಪರ್ಯಾಲೋಚಿಸತಕ್ಕುದು] [ಮತ್ತು ಸಾಧ್ಯವಾದಷ್ಟು ಬೇಗನೆ ಪ್ರತಿಯೊಂದು ಆಕ್ಷೇಪಣೆಯ ಬಗ್ಗೆ ಅದು ಅಂಗೀಕಾರಾರ್ಹವೇ ಅಥವಾ ಅಂಗೀಕಾರರ್ಹವಲ್ಲವೆ ಎಂಬುದನ್ನು ಕುರಿತ ತನ್ನ ವರದಿಯನ್ನು ಹಾಗೂ ಶಿಫಾರಸ್ಸುಗಳನ್ನು 3ನೇ ಪ್ರಕರಣದ (3)ನೇ ಉಪ ಪ್ರಕರಣದ ಮೇರೆಗೆ ರಾಜ್ಯ ಸರ್ಕಾರದ ಆದೇಶಗಳಿಗಾಗಿ ಸಲ್ಲಿಸತಕ್ಕುದು.

1. ಅಧಿಸೂಚನೆ ಸಂಖ್ಯೆ ಎಚ್‍ಯುಡಿ 175 ಎಚ್‍ಎಲ್‍ಎ 76, ದಿನಾಂಕ: 4-4-1978. ಜಿಎಸ್‍ಆರ್ 106ರ ಮೂಲಕ 4-4-1978ರಿಂದ

ಜಾರಿಗೆ ಬರುವಂತೆ ಸೇರಿಸಲಾಗಿದೆ.

2. ಜಿಎಸ್‍ಆರ್ 267 ಅಧಿಸೂಚನೆ ಸಂಖ್ಯೆ ಎಚ್‍ಯುಡಿ 12 ಎಲ್‍ಆರ್‍ಬಿ, ದಿನಾಂಕ: 8-9-1980ರ ಮೂಲಕ ಕ್ಷೇತ್ರಾಭಿವೃದ್ಧಿ ಅಧಿಕಾರಿ

ಅಥವಾ ಮುಖ್ಯಾಧಿಕಾರಿ ಎಂಬ ಪದಗಳನ್ನು 10-9-1980ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.

ಆಕ್ಷೇಪಣೆಗಳ ಪರ್ಯಾಲೋಚನೆ ಮತ್ತು ಅಂತಿಮ ಅಧಿಸೂಚನೆಯನ್ನು ಹೊರಡಿಸುವುದು.Š

ಆಕ್ಷೇಪಣೆಗಳನ್ನು ಪರ್ಯಾಲೋಚಿಸಿದ ಮತ್ತು ಅಸಿಸ್ಟೆಂಟ್ ಕಮಿÁಷನರ್‍ರವರು ವರದಿಯನ್ನು ಸಲ್ಲಿಸಿದ

ತರುವಾಯ ರಾಜ್ಯ ಸರ್ಕಾರವು,Š

(ಎ) ಭೂಮಿಯನ್ನು, 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ಹೊರಡಿಸಿದ

ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಗಳಿಗಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ನಿರ್ಧರಿಸಿದರೆ,

ಅದು ಅಧಿಸೂಚನೆಯ ಮೂಲಕ, 3ನೇ ಪ್ರಕರಣದ (4)ನೇ ಉಪ ಪ್ರಕರಣದ ಮೇರೆಗೆ `ಸಿ'

ನಮೂನೆಯಲ್ಲಿ ಘೋಷಣೆಯೊಂದನ್ನು ಮಾಡತಕ್ಕುದು;

(ಬಿ) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದೆಂದು ನಿರ್ಧರಿಸಿದರೆ, ಅದು, 3ನೇ ಪ್ರಕರಣದ

(1)ನೇ ಉಪ ಪ್ರಕರಣದ ಮೇಲೆ ಹೊರಡಿಸಿದ ಅಧಿಸೂಚನೆಯನ್ನು ರದ್ದುಗೊಳಿಸುವ

ಅಧಿಸೂಚನೆಯೊಂದನ್ನು ಪ್ರಕಟಿಸತಕ್ಕುದು.

ಇತರ ನಮೂನೆಗಳು.Š

3ನೇ ಪ್ರಕರಣದ 6ನೇ ಉಪ ಪ್ರಕರಣದ ಮೇರೆಗಿನ ನೋಟೀಸು `ಡಿ' ನಮೂನೆಯಲ್ಲಿರತಕ್ಕುದು.

ನಮೂನೆ `ಎ'

(3(2) ನಿಯಮವನ್ನು ನೋಡಿ)

ಕರ್ನಾಟಕ ಸರ್ಕಾರವು ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿಗಳು, ಮನೆಯಿಲ್ಲದ

ದುರ್ಬಲ ವರ್ಗಗಳ ಜನರಿಗೆ ಮನೆ ನಿವೇಶನಗಳನ್ನು ಮಂಜೂರು ಮಾಡುವ ಸಾರ್ವಜನಿಕ

ಉದ್ದೇಶಕ್ಕಾಗಿ ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟಿರುವುದರಿಂದ;

ಈಗ, ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ, 1972

(1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ

ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಸದರಿ ಭೂಮಿಗಳನ್ನು

ಸ್ವಾಧೀನಪಡಿಸಿಕೊಳ್ಳುವ ತನ್ನ ಉದ್ದೇಶದ ನೋಟೀಸನ್ನು ಈ ಮೂಲಕ ನೀಡುತ್ತದೆ.

1. ಅಧಿಸೂಚನೆ ಸಂಖ್ಯೆ ಜಿಎಸ್‍ಆರ್ 319, ದಿನಾಂಕ: 12-12-1973ರ ಮೂಲಕ 12-12-1973ರಿಂದ ಜಾರಿಗೆ ಬಿಟ್ಟುಬಿಡಲಾಗಿದೆ.

ಸದರಿ ಭೂಮಿಯಲ್ಲಿ ಹಿತಾಸಕ್ತಿಯುಳ್ಳ ಎಲ್ಲ ವ್ಯಕ್ತಿಗಳಿಗೆ, ಸದರಿ ಸ್ವಾಧೀನದ ಉದ್ದೇಶಗಳಿಗಾಗಿ ಅಂಥ

ಭೂಮಿಗಳನ್ನು ಪ್ರವೇಶಿಸುವ ಯಾರೇ ವ್ಯಕ್ತಿಗೆ ಅಡ್ಡಿಮಾಡದಂತೆ ಅಥವಾ ಹಸ್ತಕ್ಷೇಪ ಮಾಡದಂತೆ ಈ

ಮೂಲಕ ಎಚ್ಚರಿಕೆ ಕೊಡಲಾಗಿದೆ. ಈ ಅಧಿಸೂಚನೆಯ ಪ್ರಕಟಣೆಯ ದಿನಾಂಕದ ತರುವಾಯ. . . .

ಉಪ ವಿಭಾಗದ ಅಸಿಸ್ಟೆಂಟ್ ಕಮಿÁಷನರ್‍ರವರ ಮಂಜೂರಾತಿ ಇಲ್ಲದೆ, ಸದರಿ ಭೂಮಿಗಳನ್ನು

ಮಾರಾಟ, ಗುತ್ತಿಗೆ, ಅಡಮಾನ, ವಿನಿಮಯ ಅಥವಾ ಬೇರೆ ರೀತಿಯಲ್ಲಿ ವಿಲೆ ಮಾಡುವುದಕ್ಕಾಗಿರುವ

ಯಾವುದೇ ಕರಾರನ್ನು ಅಥವಾ ಅದರಲ್ಲಿ ಮಾಡಿದ ಯಾವುದೇ ವೆಚ್ಚ ಅಥವಾ ಸುಧಾರಣೆಗಳನ್ನು

ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ, 1972 (1973ರ 18)ರ

15ನೇ ಪ್ರಕರಣದ ಜೊತೆ ಓದಿಕೊಂಡ, ಕರ್ನಾಟಕ ಅಧಿನಿಯಮ, 1961ರ 17ರಂತೆ ತಿದ್ದುಪಡಿ ಮಾಡಿದ,

ಭೂಸ್ವಾಧೀನ ಅಧಿನಿಯಮ, 1894 (1894ರ ಕೇಂದ್ರ ಅಧಿನಿಯಮ 1)ರ 4ನೇ ಪ್ರಕರಣದ (7ನೇ

ಖಂಡ) ಮೇರೆಗೆ ಅಂತಿಮವಾಗಿ ಸ್ವಾಧೀನಪಡಿಸಿಕೊಳ್ಳಬಹುದಾದಂಥ ಭೂಮಿಯ ಭಾಗಗಳಿಗಾಗಿ

ಮೊಬಲಗನ್ನು ನಿರ್ಧರಿಸುವ ಅಧಿಕಾರಿಯು ಉಪೇಕ್ಷಿಸುತ್ತಾರೆ. ಭೂಮಿಯ ಒಂದು ನಕ್ಷೆಯನ್ನು

ಉಪ ವಿಭಾಗದ ಅಸಿಸ್ಟೆಂಟ್ ಕಮಿÁಷನರ್‍ರವರ ಕಚೇರಿಯಲ್ಲಿ ಇಡಲಾಗಿರುತ್ತದೆ.

ಅನುಸೂಚಿ

ಜಿಲ್ಲೆ                               ತಾಲೂಕು                              ಹೋಬಳಿ                      ಗ್ರಾಮ

ಕ್ರ.ಸಂ. ಸರ್ವೇ  ಭೂಮಿಯ  ವಿಸ್ತೀರ್ಣ   ಫುಟ್   ಒಟ್ಟು   ಖಾತೆದಾರನ   ಅನುಭವದಾರನ         ಎಲ್ಲೆಗಳು               ಸ್ವಾಧೀನ

ನಂ    ವಿವರಗಳು             ಖರಾಬ್  ವಿಸ್ತೀರ್ಣ  ಹೆಸರು           ಹೆಸರು                              ಪಡಿಸಿಕೊಂಡಿರುವುದು

ಪೂರ್ವ ಪಶ್ಟಿಮ     ಉತ್ತರ   ದಕ್ಷಿಣ    ಅಂದಾಜು   ಕರನಿರ್ಧರಣೆ     ಷರಾ

ಸರ್ವೇ ಸರ್ವೇ      ಸರ್ವೇ    ಸರ್ವೇ  ವಿಸ್ತರಣೆ

ನಂಬರ್  ನಂಬರ್     ನಂಬರ್  ನಂಬರ್

ನಮೂನೆ `ಬಿ'

(ನಿಯಮ 4ನ್ನು ನೋಡಿ)

ಕರ್ನಾಟಕ ಸರ್ಕಾರವು, ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂ ಸ್ವಾಧೀನ

ಅಧಿನಿಯಮ, 1972(1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 3ನೇ ಪ್ರಕರಣದ (1)ನೇ ಉಪ

ಪ್ರಕರಣದ ಮೇರೆಗೆ ಇದಕ್ಕೆ ಲಗತ್ತಿಸಿದ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿಗಳ ಸ್ವಾಧೀನದ ತನ್ನ

ಉದ್ದೇಶದ ನೋಟೀಸನ್ನು ದಿನಾಂಕ--------------ರ ಅಧಿಸೂಚನೆ ಸಂಖ್ಯೆ ---------------

ಮೂಲಕ,------------------ದಿನಾಂಕದ ಕರ್ನಾಟಕ ರಾಜ್ಯ ಪತ್ರದ--------ಭಾಗದಲ್ಲಿ ಪ್ರಕಟಿಸಿರುವುದರಿಂದ;

ಈಗ, ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ ಪ್ರಕರಣದ ಉಪಬಂಧಗಳ

ಅನುಸಾರವಾಗಿ, ಈ ನೋಟೀಸನ್ನು ನೀವು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳ ಒಳಗೆ,

ಅನುಸೂಚಿಯ ಭೂಮಿಯನ್ನು ಏಕೆ ಸ್ವಾಧೀನಪಡಿಸಿಕೊಳ್ಳಬಾರದು ಎಂಬುದಕ್ಕೆ ಕಾರಣ ತೋರಿಸಲು

ನಿಮ್ಮನ್ನು ಈ ಮೂಲಕ ಕೋರಲಾಗಿದೆ. ಮೇಲೆ ಹೇಳಿದ ದಿನಾಂಕದಂದು ಅಥವಾ ಅದಕ್ಕೂ ಮೊದಲು

ಯಾವ ಉತ್ತರವನ್ನೂ ಸ್ವೀಕರಿಸದಿದ್ದರೆ, ನಿಮ್ಮ ಯಾವುದೇ ಆಕ್ಷೇಪ ಇಲ್ಲವೆಂದು ಭಾವಿಸಲಾಗುತ್ತದೆ

ಮತ್ತು ನಿಮಗೆ ಮುಂದೆ ಯಾವುದೇ ನೋಟೀಸನ್ನು ನೀಡದೆಯೇ ಅಧಿನಿಯಮದ ಮೇರೆಗೆ ಮುಂದಿನ

ವ್ಯವಹರಣೆಗಳನ್ನು ಕೈಗೊಳ್ಳಲಾಗುತ್ತದೆ.

 

ನಮೂನೆ `ಸಿ'

(ನಿಯಮ 9ನ್ನು ನೋಡಿ)

ಅಧಿಸೂಚನೆ (ಘೋಷಣೆ)

 

ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ, 1972ರ

(1973ರ ಕರ್ನಾಟಕ ಅಧಿನಿಯಮ 18) (ಇದರಲ್ಲಿ ಇನ್ನು ಮುಂದೆ ಸದರಿ ಅಧಿನಿಯಮ ಎಂದು

ಉಲ್ಲೇಖಿಸಲಾಗಿದೆ) 3ನೇ ಪ್ರಕರಣದ (1)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು

ಚಲಾಯಿಸಿ ಹೊರಡಿಸಿದ ಮತ್ತು ದಿನಾಂಕ--------------ರ ರಾಜ್ಯಪತ್ರದ--------------ಭಾಗದ--------------ಪುಟದಲ್ಲಿ

ಪ್ರಕಟವಾದ ದಿನಾಂಕ--------------ರ ಅಧಿಸೂಚನೆ ಸಂಖ್ಯೆ ಡಿಪಿಸಿ ಡಿಎಲ್‍ಎ 73ರ ಮೂಲಕ (ಇದರಲ್ಲಿ

ಇನ್ನು ಮುಂದೆ ಸದರಿ ಅಧಿಸೂಚನೆ ಎಂದು ಉಲ್ಲೇಖಿಸಲಾಗಿದೆ) ಕರ್ನಾಟಕ ಸರ್ಕಾರವು, ಸದರಿ

ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಗಳಿಗಾಗಿ ಅದರಲ್ಲಿ ನಿರ್ದಿಷ್ಟಪಡಿಸಿದ ಭೂಮಿಗಳನ್ನು

ಸ್ವಾಧೀನಪಡಿಸಿಕೊಳ್ಳುವ ತನ್ನ ಉದ್ದೇಶವನ್ನು ಅಧಿಸೂಚಿಸಿರುವುದರಿಂದ;

ಮತ್ತು ಸದರಿ ಅಧಿನಿಯಮದ 3ನೇ ಪ್ರಕರಣದ (3)ನೇ ಉಪ ಪ್ರಕರಣದ ಮೇರೆಗೆ

ಆದೇಶಗಳನ್ನು ಹೊರಡಿಸಿರುವುದರಿಂದ;

ಮತ್ತು, ಕರ್ನಾಟಕ ಸರ್ಕಾರಕ್ಕೆ ಸದರಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಕೆಳಗಿನ

ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿಗಳನ್ನು ಸದರಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ

ಉದ್ದೇಶಗಳಿಗಾಗಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ಮನದಟ್ಟಾಗಿರುವುದರಿಂದ;

ಈಗ ಸದರಿ ಅಧಿನಿಯಮದ 3ನೇ ಪ್ರಕರಣದ (4)ನೇ ಉಪ ಪ್ರಕರಣದಿಂದ ಪ್ರದತ್ತವಾದ

ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಕೆಳಗಿನ ಅನುಸೂಚಿಯಲ್ಲಿ

ನಿರ್ದಿಷ್ಟಪಡಿಸಿದ ಭೂಮಿಗಳನ್ನು ಸದರಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ

ಸ್ವಾಧೀನಪಡಿಸಿಕೊಳ್ಳತಕ್ಕುದು ಎಂದು ಘೋಷಿಸಿದೆ.

 

ಅನುಸೂಚಿ

ಕ್ರ.ಸಂ.     ಸರ್ವೇ     ಭೂಮಿಯ      ಖಾತೆದಾರ, ಅನುಭವ

ಸಂಖ್ಯೆ     ನಂಬರ್     ವಿವರಣೆ         ದಾರ ಅಥವಾ ಗೇಣಿ

ದಾರನ ಹೆಸರು                 ಎಲ್ಲೆಗಳು                      ಅವಶ್ಯವಿರುವ   ಕರನಿರ್ಧರಣೆ

ಅಂದಾಜು

ವಿಸ್ತೀರ್ಣ

____________________________

ಉತ್ತರ     ಪೂರ್ವ     ದಕ್ಷಿಣ     ಪಶ್ಚಿಮ

ಸರ್ವೇ      ಸರ್ವೇ     ಸರ್ವೇ    ಸರ್ವೇ

ನಂಬರ್    ನಂಬರ್   ನಂಬರ್   ನಂಬರ್

ನಮೂನೆ `ಡಿ'

(ನಿಯಮ 10ನ್ನು ನೋಡಿ)

ಸೂಚನೆ

ಕರ್ನಾಟಕ ಸರ್ಕಾರವು, ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ

ಅಧಿನಿಯಮ, 1972(1973ರ ಕರ್ನಾಟಕ ಅಧಿನಿಯಮ ಸಂಖ್ಯೆ 18)ರ 3ನೇ ಪ್ರಕರಣದ (4)ನೇ ಉಪ

ಪ್ರಕರಣದ ಮೇರೆಗೆ, ದಿನಾಂಕ--------------ರ ಕರ್ನಾಟಕ ರಾಜ್ಯ ಪತ್ರದ --------------ಭಾಗದಲ್ಲಿ ಪ್ರಕಟವಾದ

ದಿನಾಂಕ--------------ರ ತನ್ನ ಅಧಿಸೂಚನೆ ಸಂಖ್ಯೆ --------------ರ ಮೂಲಕ ಅನುಸೂಚಿಯ ಭೂಮಿಯನ್ನು

ಅದರಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳತಕ್ಕದ್ದು ಎಂದು ಘೋಷಿಸಿರುವುದರಿಂದ;

ಸದರಿ ಅಧಿನಿಯಮದ 3ನೇ ಪ್ರಕರಣದ (5)ನೇ ಉಪ ಪ್ರಕರಣದ ಉಪಬಂಧಗಳಿಂದಾಗಿ,

ಅನುಸೂಚಿಯ ಭೂಮಿಯು, ಎಲ್ಲ ಪೂರ್ವಾಧಿಗಳಿಂದ ಮುಕ್ತವಾಗಿ ಕರ್ನಾಟಕ ಸರ್ಕಾರದಲ್ಲಿ

ಸಂಪೂರ್ಣವಾಗಿ ನಿಹಿತವಾಗಿರುವುದರಿಂದ;

ಈಗ, ಅಧಿಸೂಚನೆಯ 3ನೇ ಪ್ರಕರಣದ (6)ನೇ ಉಪ ಪ್ರಕರಣದ ಉಪಬಂಧಗಳ ಅನುಸಾರ,

ನೀವು ಈ ನೋಟೀಸನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳ ಒಳಗೆ, ನೀವು ಅನುಸೂಚಿಯ

ಭೂಮಿಯ ಸ್ವಾಧೀನವನ್ನು ಕೆಳಗೆ ಸಹಿ ಮಾಡಿರುವವರಿಗೆ ಬಿಟ್ಟುಕೊಡತಕ್ಕುದು ಅಥವಾ ವಶಾವಣೆ

ಮಾಡತಕ್ಕುದು ಎಂದು ನೋಟೀಸು ನೀಡಲಾಗಿದೆ. ನೀವು ಈ ನೋಟೀಸನ್ನು ಪಾಲಿಸಲು ನಿರಾಕರಿಸಿದರೆ

ಅಥವಾ ವಿಫಲರಾದರೆ, ಸದರಿ ಅಧಿನಿಯಮದ 3ನೇ ಪ್ರಕರಣದ (7)ನೇ ಉಪ ಪ್ರಕರಣದ ಮೇರೆಗೆ

ಅನುಸೂಚಿ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತದೆ.

ಕೊನೆಯ ಮಾರ್ಪಾಟು : 10/14/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate