ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಜಿಎಸ್‍ಟಿ

ಮೇಲಿಂದ ಮೇಲೆ ಕೇಳಲಾದ ಪ್ರಶ್ನೆಗಳು

ಅಸ್ತಿತ್ವದಲ್ಲಿರುವ ತೆರಿಗೆ ಸಂದಾಯದಾರರು ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸುವಿಕೆಗಾಗಿ:
ಭಾಗ-ಎ:- ಸಾಮಾನ್ಯ ಮಾಹಿತಿ

ಅಸ್ತಿತ್ವದಲ್ಲಿರುವ ತೆರಿಗೆ ಸಂದಾಯದಾರ ಎಂದರೆ ಯಾರು

ಅಸ್ತಿತ್ವದಲ್ಲಿರುವ ತೆರಿಗೆ ಸಂದಾಯದಾರ ಎಂದರೆ ಕೆಳಕಂಡಂತೆ ನಿರ್ಧಿಷ್ಟಪಡಿಸಲಾದ ಯಾವುದೇ ಅಧಿನಿಯಮಗಳ ಅಡಿಯಲ್ಲಿ ಈಗಾಗಲೇ ನೋಂದಾಯಿತವಾಗಿರುವ ಒಂದು ಘಟಕ (ಎಂಟಿಟಿ):-
 • ಎ. ಕೇಂದ್ರ ಅಬಕಾರಿ
 • ಬಿ. ಸೇವಾ ತೆರಿಗೆ
 • ಸಿ. ರಾಜ್ಯ ಮಾರಾಟ ತೆರಿಗೆ/ವ್ಯಾಟ್ (ಪ್ರತ್ಯೇಕವಾದ ಮದ್ಯ ಪಾನೀಯ ವರ್ತಕರು ವ್ಯಾಟ್
ಅಡಿಯಲ್ಲಿ ನೋಂದಾಯಿತರಾಗಿದ್ದರೆ ಅವರನ್ನು ಹೊರತು ಪಡಿಸಿದಂತೆ)
 • ಡಿ. ಪ್ರವೇಶ ತೆರಿಗೆ
 • ಇ. ವಿಲಾಸಿ ತೆರಿಗೆ
ಎಫ್. ಮನರಂeನೆ ತೆರಿಗೆ (ಸ್ಥಳೀಯ ಸಂಸ್ಥೆಗಳಿಂದ ವಿಧಿಸಲ್ಪಡುವುದನ್ನು ಹೊರತುಪಡಿಸಿ)

ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನ ಅಡಿಯಲ್ಲಿನ “ನೋಂದಾಯಿಸುವಿಕೆ” ಪದದ ಅರ್ಥ ಏನು

ಜಿಎಸ್‍ಟಿ ಅಡಿಯಲ್ಲಿ “ನೋಂದಾಯಿಸುವಿಕೆ” ಎಂದರೆ, ಅಸ್ತಿತ್ವದಲ್ಲಿರುವ ತೆರಿಗೆ ಸಂದಾಯದಾರರ ದತ್ತಾಂಶವನ್ನು sಸಿಂಧುಗೊಳಿಸುವುದು ಮತ್ತು ಉಳಿದ ಮುಖ್ಯ sಸ್ಥಳಗಳನ್ನು ತುಂಬುವುದು.

ನಾನು ಜಿಎಸ್‍ಟಿಗಾಗಿ ನೋಂದಾಯಿಸಿಕೊಳ್ಳುವುದು ಅಗತ್ಯವಿದೆಯೇ

ಪ್ರಶ್ನೆ 1ರಲ್ಲಿ ನಿರ್ಧಿಷ್ಟಪಡಿಸಲಾದ ಯಾವುದೇ ಅಧಿನಿಯಮಗಳ ಅಡಿಯಲ್ಲಿನೋಂದಾಯಿತರಾಗಿ ಅಸ್ತಿತ್ವದಲ್ಲಿರುವಎಲ್ಲಾ ತೆರಿಗೆ ಸಂದಾಯದಾರರು ಜಿಎಸ್‍ಟಿಗೆ ಸ್ಥಿತ್ಯಂತರಗೊಳ್ಳುತ್ತಾರೆ. ಜಿಎಸ್‍ಟಿಗಾಗಿ ನೋಂದಾಯಿಸಿಕೊಳ್ಳುವುದು, ಜಿಎಸ್‍ಟಿ ಅವಧಿಗೆ ಸರಾಗವಾದ ಸ್ಥಿತ್ಯಂತರವನ್ನು ಖಾತರಿಗೊಳಿಸಿತ್ತದೆ. ಹಲವಾರು ತೆರಿಗೆ ಪ್ರಾಧಿಕಾರಗಳ ಬಳಿ ಇರುವ ದತ್ತಾಂಶಗಳು ಅಪೂರ್ಣವಾದವು, ಅದಕ್ಕಾಗಿ ಹೊಸದಾಗಿ ನೋಂದಾಯಿಸಿಕೊಳ್ಳುವುದನ್ನು ಯೋಜಿಸಲಾಗಿದೆ. ಈ ದಿನಗಳಲ್ಲಿ ತೆರಿಗೆ ಶಾಸನಗಳ ಅಡಿಯಲ್ಲಿ ದತ್ತಾಂಶಗಳನ್ನು ಅಪ್‍ಡೇಟ್ ಮಾಡುವುದು ಪಾಲನಾ ನಿಯಮವಾಗಿರುವಂತಹ ಯಾವುದೇ ತಿದ್ದುಪಡಿ ಪ್ರಕ್ರಿಯೆಯನ್ನು ಆಶ್ರಯಿಸದೆ, ಇತ್ತೀಚಿನ ದತ್ತಾಂಶವು ಜಿಎಸ್‍ಟಿ ದತ್ತಾಂಶ ಸಂಗ್ರಹದಲ್ಲಿ ಲಭ್ಯವಿರುವುದನ್ನು ಇದು ಖಾತರಿಪಡಿಸುತ್ತದೆ.

ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಬಳಕೆದಾರನಂತೆ ನಾನು ಸ್ವಯಂ ಆಗಿ ಏಕೆ ನೋಂದಾಯಿಸಿಕೊಳ್ಳಬೇಕು

ಕಾಗದದ ಆಧಾರಿತ ನೋಂದಾಯಿಸುವಿಕೆಗೆ ಅನುಮತಿಸದೇ ಇರುವುದರಿಂದ, ಈ ಉದ್ದೇಶಕ್ಕಾಗಿ ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನ್ನು ಸೃಷ್ಟಿಸಲಾಗಿದೆ. ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ಗೆ ನೀವು ಬಳಕೆದಾರನಂತೆ ನೋಂದಾಯಿಸಿಕೊಳ್ಳುವುದು ಅಗತ್ಯವಿರುತ್ತದೆ, ಇದರಿಂದಾಗಿ ವಿವರಪಟ್ಟಿ ಸಲ್ಲಿಕೆ, ತೆರಿಗೆ ಸಂದಾಯ ಮುಂತಾದ ಜಿಎಸ್‍ಟಿ ಅನುಸರಣಾ ಅಗತ್ಯತೆಗಳಿಗಾಗಿ ಜಿಎಸ್‍ಟಿ ನೋಂದಣಿದಾರನಾಗಿ ನೀವು ಸಮರ್ಥಗೊಳ್ಳಬಹುದು.

ನಾನು ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವುದು ಅಗತ್ಯವಿರುವುದು ಯಾವಾಗ

ಪ್ರಶ್ನೆ 1ರಲ್ಲಿ ನಿರ್ಧಿಷ್ಟಪಡಿಸಲಾದ ಯಾವುದೇ ಅಧಿನಿಯಮಗಳ ಅಡಿಯಲ್ಲಿ ನೋಂದಾಯಿತವಾಗಿರುವ ತೆರಿಗೆಸಂದಾಯದಾರರು ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವುದು ಅಗತ್ಯವಿರುತ್ತದೆ. ರಾಜ್ಯ ವ್ಯಾಟ್ ಮತ್ತು ಕೇಂದ್ರ ಅಬಕಾರಿ ಇಲಾಖೆಗಳು ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಸೂಚಿಸಿರಲಾಗಿರುವ
ಯೋಜನೆಯ ಪ್ರಕಾರ ಜನವರಿ 1, 2017ರಿಂದ (ಕರ್ನಾಟಕದಲ್ಲಿ) ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವುದನ್ನು ಪ್ರಾರಂಭಿಸಬಹುದು. ಸೇವಾ ತೆರಿಗೆಯ ಅಡಿಯಲ್ಲಿನೋಂದಾಯಿತವಾಗಿರುವ ತೆರಿಗೆ ಸಂದಾಯದಾರರು ನಂತರದ ದಿನಾಂಕದಲ್ಲಿ ನೋಂದಾಯಿಸಿಕೊಳ್ಳಬಹುದು, ಅದಕ್ಕಾಗಿ ಪ್ರತ್ಯೇಕವಾಗಿ
ಮಾಹಿತಿ ಕಳುಹಿಸಲಾಗುತ್ತದೆ.

ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಪರಿಭಾವಿತ ನೋಂದಾಯಿಸಿಕೊಳ್ಳುವಿಕೆಯ ಯಾವುದಾದರು ಪರಿಕಲ್ಪನೆ ಇದಯೇ

ಇಲ್ಲ. ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಪರಿಭಾವಿತ ನೋಂದಾಯಿಸಿಕೊಳ್ಳುವಿಕೆಯು ಇರುವುದಿಲ್ಲ. ಪ್ರಶ್ನೆ 1ರಲ್ಲಿ ನಿರ್ಧಿಷ್ಟಪಡಿಸಲಾದ ಯಾವುದೇ ಅಧಿನಿಯಮಗಳ ಅಡಿಯಲ್ಲಿ ನೋಂದಾಯಿತವಾಗಿರುವ ಎಲ್ಲಾ ತೆರಿಗೆ ಸಂದಾಯದಾರರು ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ಗೆ ಭೇಟಿ ನೀಡುವುದು ಮತ್ತು ಅವರುಗಳೇ ನೋಂದಾಯಿಸಿಕೊಳ್ಳುವುದನ್ನು ನಿರೀಕ್ಷಿಸಲಾಗುತ್ತದೆ.

ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವುದಕ್ಕೆ ಯಾವುದೇ ಶುಲ್ಕ/ಚಾರ್ಜನ್ನು ವಿಧಿಸಲಾಗುತ್ತದೆಯೇ

ಇಲ್ಲ. ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವುದಕ್ಕೆ ಯಾವುದೇ ಶುಲ್ಕ/ಚಾರ್ಜನ್ನು ವಿಧಿಸಲಾಗುವುದಿಲ್ಲ.

ಪ್ರಶ್ನೆ 1ರಲ್ಲಿ ನಿರ್ಧಿಷ್ಟಪಡಿಸಲಾದ ಕೇಂದ್ರ/ರಾಜ್ಯ/ಕೇಂ.ಪ್ರ. ತೆರಿಗೆ ಅಧಿನಿಯಮಗಳ ಅಡಿಯಲ್ಲಿನ ನೋಂದಾಯಿತವಾಗಿರುವ ತೆರಿಗೆ ಸಂದಾಯದಾರರಿಗಾಗಿ ನೋಂದಾಯಿಸಿಕೊಳ್ಳುವಿಕೆಯ ಪ್ರಕ್ರಿಯೆಯು ಬೇರೆಯದಾಗಿರುತ್ತದೆಯೇ

ಇಲ್ಲ. ಕೇಂದ್ರ/ರಾಜ್ಯ/ಕೇಂ.ಪ್ರ. ತೆರಿಗೆ ಅಧಿನಿಯಮಗಳ ಅಡಿಯಲ್ಲಿ ನೋಂದಾಯಿತವಾಗಿರುವ ಎಲ್ಲಾ ತೆರಿಗೆ ಸಂದಾಯದಾರರಿಗೆ ನೋಂದಾಯಿಸಿಕೊಳ್ಳುವಿಕೆಯ ಪ್ರಕ್ರಿಯೆಯು ಒಂದೇ ಆಗಿರುತ್ತದೆ.

ತೆರಿಗೆ ಸಂದಾಯದಾರರು ಕೇಂದ್ರ ಮತ್ತು ರಾಜ್ಯ ಪ್ರಾಧಿಕಾರಗಳ ಜೊತೆಯಲ್ಲಿ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವುದು ಅಗತ್ಯವಿದೆಯೇ

ಇಲ್ಲ. ಜಿಎಸ್‍ಟಿ ಅಡಿಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಚಿಸುವ ಯಾವುದೇ ವ್ಯಕ್ತಿಯು, ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಜಿಎಸ್‍ಟಿ ಅಡಿಯಲಿ ನೋಂದಾಯಿಸಿಕೊಳ್ಳುವಿಕೆಯ ಪ್ರಕ್ರಿಯೆಯು ಕೇಂದ್ರ ಜಿಎಸ್‍ಟಿ ಮತ್ತು ರಾಜ್ಯ ಜಿಎಸ್‍ಟಿಗಳೆರಡಕ್ಕೂ ಒಂದೇ ಆಗಿರುತ್ತದೆ.

ತಾತ್ಕಾಲಿಕ ಐಡಿಯ ನಮೂನೆ ಯಾವುದು

ನಾನು ಜಿಎಸ್‍ಟಿ ಯೊಂದಿಗೆ ನೋಂದಾಯಿಸಿಕೊಳ್ಳುವ ಮುನ್ನ ನನ್ನೊಂದಿಗೆ ಸಿದ್ದವಾಗಿ ಲಭ್ಯವಿರಬೇಕಾದ ಮಾಹಿತಿ ಯಾವುದು
ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವ ಮುನ್ನ, ನಿಮ್ಮೊಂದಿಗೆ ಕೆಳಕಂಡ ಮಾಹಿತಿಗಳು/ದಾಖಲೆಗಳು ಇರುವುದನ್ನು ನೀವು ಖಾತರಿಪಡಿಸಿಕೊಳ್ಳಬೇಕು.
 • ಕೇಂದ್ರ/ರಾಜ್ಯ ಪ್ರಾಧಿಕಾರಗಳಿಂದ ಸ್ವೀಕರಿಸಲಾದ ತಾತ್ಕಾಲಿಕ ಐಡಿ
 • ಕೇಂದ್ರ/ರಾಜ್ಯ ಪ್ರಾಧಿಕಾರಗಳಿಂದ ಸ್ವೀಕರಿಸಲಾದ ಪಾಸ್‍ವರ್ಡ್
 • ಸಿಂಧುವಾದ ಇ-ಮೇಲ್ ವಿಳಾಸ
 • ಸಿಂಧುವಾದ ಮೊಬೈಲ್ ಸಂಖ್ಯೆ
 • ಬ್ಯಾಂಕಿನ ಖಾತೆ ಸಂಖ್ಯೆ
 • ಬ್ಯಾಂಕಿನ ಐಎಫ್‍ಎಸ್‍ಸಿ.
ದಾಖಲೆಗಳು
ಎ. ವ್ಯವಹಾರ ಸಂರಚನೆಯ ದಾಖಲೆ
I. ಪಾಲುದಾರಿಕೆಯ ಉದ್ದಿಮೆಯ ಸಂದರ್ಭದಲ್ಲಿ: ಪಾಲುದಾರಿಕೆ ಉದ್ದಿಮೆಯ ಪಾಲುದಾರಿಕೆ ಪತ್ರ(ಡೀಡ್) (1 ಎಂ.ಬಿ ಗರಿಷ್ಠ ಗಾತ್ರದಲ್ಲಿನ ಪಿಡಿಎಫ್ ಮತ್ತು ಜೆಪಿಇಜಿ ನಮೂನೆ)
II. ಇತರೆ ಸಂದರ್ಭದಲ್ಲಿ: ವ್ಯವಹಾರ ಅಸ್ತಿತ್ವದ ನೋಂದಣಿ ಪ್ರಮಾಣ ಪತ್ರ (1 ಎಂ.ಬಿ ಗರಿಷ್ಠ ಗಾತ್ರದಲ್ಲಿನ ಪಿಡಿಎಫ್ ಮತ್ತು ಜೆಪಿಇಜಿ ನಮೂನೆ)
 • ಪ್ರವರ್ತಕರ/ಪಾಲುದಾರರ/ಹೆಚ್‍ಯುಎಫ್‍ನ ಕರ್ತನ ಪೋಟೊ (100 ಕೆಬಿ ಗರಿಷ್ಠ ಗಾತ್ರದಲ್ಲಿನ ಜೆಪಿಇಜಿ ನಮೂನೆ)
 • ಅಧಿಕೃತ ಸಹಿದಾರನ ನೇಮಕಾತಿಯ ದಾಖಲೆ(1 ಎಂ.ಬಿ ಗರಿಷ್ಠ ಗಾತ್ರದಲ್ಲಿನ ಪಿಡಿಎಫ್ ಮತ್ತು ಜೆಪಿಇಜಿ ನಮೂನೆ)
 • ಅಧಿಕೃತ ಸಹಿದಾರನ ಪೋಟೊ (100 ಕೆಬಿ ಗರಿಷ್ಠ ಗಾತ್ರದಲ್ಲಿನ ಜೆಪಿಇಜಿ ನಮೂನೆ)
 • ಬ್ಯಾಂಕ್ ಪಾಸಬುಕ್‍ನ ಪ್ರಾರಂಭಿಕ ಪುಟ/ಖಾತೆ ಸಂಖ್ಯೆ, ಶಾಖೆಯ ವಿಳಾಸ, ಖಾತೆದಾರನವಿಳಾಸ ಮತ್ತು
ವಹಿವಾಟಿನ ಕೆಲವು ವಿವರಗಳನ್ನು ಒಳಗೊಂಡಿರುವ ವಿವರಪತ್ರ. (1 ಎಂ.ಬಿ ಗರಿಷ್ಠ ಗಾತ್ರದಲ್ಲಿನ
ಪಿಡಿಎಫ್ ಮತ್ತು ಜೆಪಿಇಜಿ ನಮೂನೆ)
ಭಾಗ-ಬಿ: ಸಿಸ್ಟಂನ ನಿರ್ಧಿಷ್ಟ ಮಾಹಿತಿ

ಪ್ರಥಮ ಬಾರಿಗೆ ಲಾಗಿನ್ ಆಗುವಾಗ ನಾನು ಯಾವ ಪಾಸ್‍ವರ್ಡ್‍ನ್ನು ಒದಗಿಸುವುದು ಅಗತ್ಯವಿರುತ್ತದೆ. ನಾನು ರಾಜ್ಯ ನೋಂದಣಿದಾರನಾಗಿ ಲಾಗಿನ್ ಆಗುವಾಗ ಬಳಸಿದ ಯೂಸರ್‍ನೇಮ್ ಮತ್ತು ಪಾಸ್‍ವರ್ಡ್‍ನ್ನೇ ಬಳಸಬಹುದೇ

ಪ್ರಥಮ ಬಾರಿಗೆ ಲಾಗಿನ್ ಆಗುವುದಕ್ಕಾಗಿ, ರಾಜ್ಯ ವ್ಯಾಟ್ / ಕೇಂದ್ರ ಅಬಕಾರಿ ಇಲಾಖೆಗಳಿಂದ ನೀವು ಸ್ವೀಕರಿಸಿದಯೂಸರ್‍ನೇಮ್ ಮತ್ತು ಪಾಸ್‍ವರ್ಡ್‍ನ್ನೇ ಒದಗಿಸುವ ಅವಶ್ಯಕವಿರುತ್ತದೆ. ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವಾಗ ನಿಮ್ಮಿಂದ ಸೃಷ್ಟಿಸಲ್ಪಟ್ಟ ಯೂಸರ್‍ನೇಮ್ ಮತ್ತು ಪಾಸ್‍ವರ್ಡ್‍ನ್ನು ತರುವಾಯದ ಲಾಗಿನ್‍ಗಾಗಿ ನೀವು ಬಳಸುವುದು ಅಗತ್ಯವಿರುತ್ತದೆ.

ಪ್ರಥಮ ಲಾಗಿನ್‍ನ ನಂತರ ಯಾವ ಬಳಕೆದಾರರ ಐಡಿಯನ್ನು ನಾನು ಆಯ್ಕೆ ಮಾಡಬೇಕು

ನೀವು ನಿಮ್ಮ ಆಯ್ಕೆಯ ಯಾವುದಾದರು ಬಳಕೆದಾರರ ಐಡಿಯನ್ನು ಆಯ್ಕೆ ಮಾಡಿಕೊಳ್ಳಬಹುದು, ಅದು ನೀವು ನೋಂದಾಯಿಸಿಕೊಳ್ಳುವಾಗ ದತ್ತಾಂಶ ಸಂಗ್ರಹದಲ್ಲಿದ್ದರೆ ಮಾತ್ರ.

ನಾನು ಜಿಎಸಟಿಯೊಂದಿಗೆ ನೋಂದಾಯಿಸಿಕೊಳ್ಳುವುದಕ್ಕಾಗಿ ಯಾವುದೇ ಯೂಸರ್‍ನೇಮ್ ಮತ್ತು ಪಾಸ್‍ವರ್ಡ್‍ನ್ನು ಸ್ವೀಕರಿಸಲಿಲ್ಲ. ಈಗ ನಾನು ಏನು ಮಾಡಲಿ

ನೀವು ಯಾವುದೇ ಯೂಸರ್‍ನೇಮ್ ಮತ್ತು ಪಾಸ್‍ವರ್ಡ್‍ನ್ನು ಸ್ವೀಕರಿಸಿರದ ಸಂದರ್ಭದಲ್ಲಿ, ನೀವು ನಿಮ್ಮ ಕ್ಷೇತ್ರವ್ಯಾಪ್ತಿಯ ರಾಜ್ಯ / ಕೇಂದ್ರಪ್ರಾಧಿಕಾರವನ್ನು ಸಂಪರ್ಕಿಸಬಹುದು.

ಜಿಎಸಟಿಯೊಂದಿಗೆ ನೋಂದಾಯಿಸಿಕೊಳ್ಳುವ ಸಮಯದಲ್ಲಿ ನಾನು ತೆರಿಗೆ ವೃತ್ತಿಪರರ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬಹುದೇ

ಇಲ್ಲ. ನೀವು ವೃತ್ತಿಪರರ ಅಥವಾ ಇನ್ನಿತರರ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡುವಾಗಿಲ್ಲ. ನೀವು ನಿಮ್ಮಿಂದ ನೇಮಕಾತಿ ಮಾಡಲ್ಪಟ್ಟಿರುವ ಪ್ರಾಥಮಿಕ ಅಧಿಕೃತ ಸಹಿದಾರರ ಅಥವಾ ನಿಮ್ಮದೇ ಆದ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಲೇ ಬೇಕು. ತೆರಿಗೆ ವೃತ್ತಿಪರರಿಗೆ ಜಿಎಸ್‍ಟಿ ಸಿಸ್ಟಂನಿಂದ ಪ್ರತ್ಯೇಕವಾಗಿ ಯೂಸರ್‍ನೇಮ್ ಮತ್ತು ಪಾಸ್‍ವರ್ಡ್‍ನ್ನು ನೀಡಲಾಗುತ್ತದೆ ಮತ್ತು ಆ ಉದ್ದೇಶಕ್ಕಾಗಿ ಅವರು ಅವರ ಯೂಸರ್‍ನೇಮ್ ಮತ್ತು ಪಾಸ್‍ವರ್ಡ್‍ನ್ನು ಒದಗಿಸ¨ಹುದು.

ಪ್ರಾಥಮಿಕ ಅಧಿಕೃತ ಸಹಿದಾರರು ಯಾರಾಗಬಹುದು

ಪ್ರಾಥಮಿಕ ಅಧಿಕೃತ ಸಹಿದಾರ ಎನ್ನುವವನು ತೆರಿಗೆ ಸಂದಾಯದಾರನ ಪರವಾಗಿ ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿಕ್ರಿಯೆಯನ್ನು ನಿರ್ವಹಿಸಲು ಪ್ರಾಥಮಿಕವಾಗಿ ಜವಾಬ್ದಾರನಾದ ವ್ಯಕ್ತಿ. ತೆರಿಗೆ ಸಂದಾಯದಾರನಿಗೆ ಸಂಬಂಧಿಸಿದ ಎಲ್ಲಾ ಸಂವಹನಗಳನ್ನು ಅವನಿಗೆ ಕಳುಹಿಸಲಾಗುತ್ತದೆ. ಉದಾ:- ಮಾಲಿಕತ್ವದ ಸಂದರ್ಭದಲ್ಲಿ, ಸ್ವತಃ ಮಾಲೀಕ ಅಥವಾ ಆತನಿಂದ ಅಧಿಕರಣಗೊಂಡ ಯಾವುದೇ ವ್ಯಕ್ತಿ, ಪಾಲುದಾರಿಕೆಯ ಸಂದರ್ಭದಲ್ಲಿ, ಅಧಿಕರಣಗೊಂಡ ಯಾವುದೇ ಪಾಲುದಾರ ಅಥವಾ ಅಧಿಕರಣಗೊಂಡ ಯಾವುದೇ ವ್ಯಕ್ತಿ, ಕಂಪನಿ/ಎಲ್‍ಎಲ್‍ಪಿ, ಸೊಸೈಟಿ, ಟ್ರಸ್ಟ್, ಸಂದರ್ಭದಲ್ಲಿ, ಮಂಡಳಿ ಅಥವಾ ಆಡಳಿತ ಮಂಡಳಿಯಿಂದ-ಅಧಿಕರಣಗೊಳ್ಳಲ್ಪಟ್ಟ ವ್ಯಕ್ತಿಯು ಪ್ರಾಥಮಿಕ ಅಧಿಕೃತ ಸಹಿದಾರನಂತೆ ವರ್ತಿಸಬಹುದು. ಅಧಿಕರಣದ ಪ್ರತಿಯನ್ನು ಅಪ್‍ಲೋಡ್ ಮಾಡುವುದು ಅಗತ್ಯವಿರುತ್ತದೆ.
ಒಂದೇ ವ್ಯವಹಾರದ ಅಸ್ತಿತ್ವಕ್ಕಾಗಿ ಬಹು ಅಧಿಕೃತ ಸಹಿದಾರರಿರುವ ಸಂದರ್ಭದಲ್ಲಿ, ಒಬ್ಬ ಅಧಿಕೃತ ಸಹಿದಾರನನ್ನು ಪ್ರಾಥಮಿಕ ಅಧಿಕೃತ ಸಹಿದಾರನನ್ನಾಗಿ ಹೆಸರಿಸಬೇಕು ಮತ್ತು ಆ ವ್ಯಕ್ತಿಯ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುವಿಕೆಯ ಸಮಯದಲ್ಲಿ ಒದಗಿಸತಕ್ಕದ್ದು. ಒಂದು ವ್ಯವಹಾರದ ಅಸ್ತಿತ್ವಕ್ಕಾಗಿ ಒಬ್ಬನೇ ಅಧಿಕೃತ ಸಹಿದಾರನಿರುವ ಸಂದರ್ಭದಲ್ಲಿ, ಆ ವ್ಯವಹಾರದ ಅಸ್ತಿತ್ವದ ಪ್ರಾಥಮಿಕ ಅಧಿಕೃತ ಸಹಿದಾರ ಎಂದು ಭಾವಿಸತಕ್ಕದ್ದು.

ಓಟಿಪಿ ಎಲ್ಲಿಯವರೆಗೆ ಸಿಂಧುವಾಗಿರುತ್ತದೆ

ನಿಮ್ಮ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಗೆ ಕಳುಹಿಸಿದ ಓಟಿಪಿ 10 ನಿಮಿಷದವರೆಗೆ ಸಿಂಧುವಾಗಿರುತ್ತದೆ. 10 ನಿಮಿಷದ ನಂತರ ಸಿಂದುತ್ವ ಮುಗಿದು ಹೋಗುತ್ತದೆ.

ನಾನು ನನ್ನ ಮೊಬೈಲ್‍ನಲ್ಲಿ ಓಟಿಪಿಯನ್ನು ಸ್ವೀಕರಿಸಿಲ್ಲ, ನಾನು ಈಗ ಏನು ಮಾಡಲಿ

ನಿಮ್ಮ ಓಟಿಪಿಯನ್ನು ಎಸ್‍ಎಂಎಸ್ ಮೂಲಕ ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿನ ನೊಂದಾಯಿತ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. 10 ನಿಮಿಷದ ಒಳಗಾಗಿ ನೀವು ಓಟಿಪಿಯನ್ನು ಸ್ವೀಕರಿಸದಿದ್ದರೆ, ರಿಸೆಂಡ್ ಓಟಿಪಿ ಬಟನ್ ಅನ್ನು ಒತ್ತುವುದರ ಮೂಲಕ ಪುನಃ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಮಾಡಿಕೊಳ್ಳಬಹುದು.

ರಿಸೆಂಡ್ ಓಟಿಪಿ ಬಟನ್ ಅನ್ನು ಒತ್ತಿದ ನಂತರವೂ ನಾನು ಓಟಿಪಿಯನ್ನು ಸ್ವೀಕರಿಸಿಲ್ಲವಾದರೆ ಏನು ಮಾಡಬೇಕು

ರಿಸೆಂಡ್ ಓಟಿಪಿ ಬಟನ್ ಅನ್ನು ಒತ್ತಿದ ನಂತರವೂ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಓಟಿಪಿಯನ್ನು ನೀವು ಸ್ವೀಕರಿಸಿಲ್ಲವಾದರೆ, ನೀವು ಒದಗಿಸಿರುವ ಮೊಬೈಲ್ ಸಂಖ್ಯೆ ಸರಿಯಿದೆಯೇ ಎನ್ನುವುದನ್ನು ದಯವಿಟ್ಟು ಪರಿಶೀಲಿಸಿ. ರಿಸೆಂಡ್ ಓಟಿಪಿ ಬಟನ್ ಅನ್ನು ಒತ್ತಿದ ನಂತರವೂ ನಿಮ್ಮ ಇ-ಮೇಲ್ ವಿಳಾಸಕ್ಕೆ ಎಸ್‍ಎಂಎಸ್ ಮೂಲಕ ಓಟಿಪಿಯನ್ನು ನೀವು ಸ್ವೀಕರಿಸಿಲ್ಲವಾದರೆ, ನೀವು ನಮೂದಿಸಿರುವ ಇ-ಮೇಲ್ ವಿಳಾಸ ಸರಿಯಿದೆಯೇ ಮತ್ತು ಅಂತರ್ಜಾಲ ಮತ್ತು ಮೊಬೈಲ್ ನೆಟ್‍ವರ್ಕ್ ಇದೆಯೇ ಎನ್ನುವುದನ್ನು ದಯವಿಟ್ಟು ಪರಿಶೀಲಿಸಿ.

ಇ-ಮೇಲ್ ಮತ್ತು ಮೊಬೈಲ್‍ಗೆ ಎರಡು ಒಂದು ಬಾರಿಯ ಪಾಸ್‍ವರ್ಡ್‍ಗಳನ್ನು (ಓಟಿಪಿಗಳು) ನಾನು ಏಕೆ ಸ್ವೀಕರಿಸಿದ್ದೇನೆ

ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಗೆ ಪ್ರತ್ಯೇಕವಾದ ಓಟಿಪಿಗಳನ್ನು ಸಿಂದುತ್ವಗೊಳಿಸುವುದಕ್ಕಾಗಿ ಕಳುಹಿಸಿರಲಾಗಿರುತ್ತದೆ. ಹೀಗಾಗಿ ಎರಡು ಪ್ರತ್ಯೇಕವಾದ ಓಟಿಪಿಗಳನ್ನು ಕಳುಹಿಸಿರಲಾಗಿರುತ್ತದೆ.

ನಾನು ನನ್ನ ಮೊಬೈಲ್‍ನಲ್ಲಿ ಓಟಿಪಿಯನ್ನು ಸ್ವೀಕರಿಸಿದ್ದೇನೆ. ಅದೇ ಓಟಿಪಿಯನ್ನು ನಾನು ಓಟಿಪಿ ಪರಿಶೀಲನಾ ಪುಟದಲ್ಲಿನ ಇ-ಮೇಲ್ ಓಟಿಪಿ ಮತ್ತು ಮೊಬೈಲ್ ಓಟಿಪಿಯಲ್ಲಿ ನಮೂದಿಸಿದ್ದೇನೆ. ಈ ಓಟಿಪಿಗಳು ಬಿನ್ನವಾದವುಗಳೇ

ನೀವು ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಗೆ ಎರಡು ಬಿನ್ನವಾದ ಎರಡು ಒಂದು ಬಾರಿಯ ಪಾಸ್‍ವರ್ಡ್‍ಗಳನ್ನು (ಓಟಿಪಿಗಳು) ಸ್ವೀಕರಿಸಿರಲೇಬೇಕು. ನಿಮ್ಮ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಗೆ ಸ್ವೀಕರಿಸಲಾಗಿರುವ ಓಟಿಪಿಗಳನ್ನು ಅನುಕ್ರಮವಾಗಿ ಇ-ಮೇಲ್ ಓಟಿಪಿ ಜಾಗದಲ್ಲಿ ಮತ್ತು ಮೊಬೈಲ್ ಓಟಿಪಿ ಜಾಗದಲ್ಲಿ ನಮೂದಿಸಿ. ನೀವು ಒಂದೇ ಓಟಿಪಿಯನ್ನು ಇ-ಮೇಲ್ ಮೊಬೈಲ್ ಓಟಿಪಿ ಜಾಗಗಳೆರಡರಲ್ಲಿ ನಮೂದಿಸಿದರೆ, ನಿಮ್ಮ ಸಿಂಧುತ್ವವು ದೋಷದ ಸಂದೇಶದೊಂದಿಗೆ ವಿಫಲಗೊಳ್ಳುತ್ತದೆ.

ಜಿಎಸ್‍ಟಿಯೊಂದಿಗೆ ನೋಂದಾಯಿಸುವಿಕೆಯಾಗುವಾಗ ನೋಂದಾಯಿಸುವಿಕೆಯ ಅರ್ಜಿಯಲ್ಲಿ ಯಾವ ವಿವರಗಳು ಮೊದಲೇ ಭರ್ತಿಯಾಗಿರುತ್ತವೆ

ಅಸ್ತಿತ್ವದಲ್ಲಿರುವ ನಿಮ್ಮ ದತ್ತಾಂಶಗಳ ಆಧಾರದಲ್ಲಿ ಕೆಳಕಂಡ ವಿವರಗಳು ನೋಂದಾಯಿಸುವಿಕೆಯ ಅರ್ಜಿಯಲ್ಲಿ
ಸ್ವಯಂ-ಜನ್ಯಗೊಳ್ಳುತ್ತವೆ.
 • ವ್ಯವಹಾರದ ಪ್ಯಾನ್
 • ವ್ಯವಹಾರದ ಕಾನೂನು ಸಮ್ಮತ ಹೆಸರು
 • ರಾಜ್ಯ

ನೋಂದಾಯಿಸುವಿಕೆಯ ಅರ್ಜಿಯಲ್ಲಿನ ಜಾಗಗಳ ಸಮೀಪದಲ್ಲಿ ಕಾಣಿಸಿಕೊಳ್ಳುವ ಕೆಂಪು ಬಣ್ಣದ ನಕ್ಷತ್ರ ಚಿಹ್ನೆ (*) ಏನನ್ನು ಸೂಚಿಸುತ್ತದೆ

ಕೆಂಪು ಬಣ್ಣದ ನಕ್ಷತ್ರ ಚಿಹ್ನೆ (*) ಕಡ್ಡಾಯದ ಜಾಗವಾಗಿರುತ್ತದೆ. ನೋಂದಾಯಿಸುವಿಕೆಯ ಅರ್ಜಿಯಲ್ಲಿಮುಂದಿನ ಭಾಗಕ್ಕೆ ಹೋಗಲು ಕೆಂಪು ಬಣ್ಣದ ನಕ್ಷತ್ರ ಚಿಹ್ನೆ (*)ಯಿಂದ  ಗುರುತು ಮಾಡಿರುವ ಯಾವುದೇ ಜಾಗವನ್ನು ತುಂಬುವುದು ಅವಶ್ಯಕವಿರುತ್ತದೆ.

ನೋಂದಾಯಿಸುವಿಕೆಯ ಅರ್ಜಿಯಲ್ಲಿ ನನ್ನ ಕಾನೂನು ಸಮ್ಮತ ಹೆಸರು, ರಾಜ್ಯದ ಹೆಸರು ಮತ್ತು ಪ್ಯಾನ್ ಅನ್ನು ಬದಲಾವಣೆ ಮಾಡಬಹುದೇ

ನೋಂದಾಯಿಸುವಿಕೆಯ ಅರ್ಜಿಯಲ್ಲಿಕಾಣಿಸಿಕೊಳ್ಳುವ ಕಾನೂನು ಸಮ್ಮತ ಹೆಸರು, ರಾಜ್ಯದ ಹೆಸರು ಮತ್ತು ಪ್ಯಾನ್ ಅನ್ನು ನೀವು ಬದಲಾವಣೆ ಮಾಡುವಾಗಿಲ್ಲ. ಈ ಮಾಹಿತಿಗಳು ರಾಜ್ಯ ಅಥವಾ ಸಂದರ್ಭಾನುಸಾರ ಕೇಂದ್ರದ ತೆರಿಗೆ ಸಿಸ್ಟಂನಿಂದ ವಲಸೆಗೊಂಡಿರುತ್ತವೆ.

ನನ್ನ ರಾಜ್ಯದ ಕ್ಷೇತ್ರವ್ಯಾಪ್ತಿಯನ್ನು ಹೇಗೆ ಕಂಡುಹಿಡಿಯುವುದು

ನಿಮ್ಮ ರಾಜ್ಯದ ಕ್ಷೇತ್ರವ್ಯಾಪ್ತಿಯನ್ನು ಕಂಡುಹಿಡಿಯಲು, ನಿಮ್ಮ ವ್ಯಾಟ್ ನೋಂದಣಿ ಪ್ರಮಾಣ ಪತ್ರವನ್ನು ಪರಿಶೀಲಿಸಿ.

ನನ್ನ ವಾರ್ಡು/ವೃತ್ತ/ಸೆಕ್ಟರ್ ಸಂಖ್ಯೆಯನ್ನು ಹೇಗೆ ಕಂಡುಹಿಡಿಯುವುದು

ನಿಮ್ಮ ವಾರ್ಡು/ವೃತ್ತ/ಸೆಕ್ಟರ್ ಸಂಖ್ಯೆಯನ್ನು ಕಂಡುಹಿಡಿಯಲು, ನಿಮ್ಮ ವ್ಯಾಟ್ ನೋಂದಣಿ ಪ್ರಮಾಣ ಪತ್ರವನ್ನು ಪರಿಶೀಲಿಸಿ. ನೀವು ಎಲ್ಲಿ ನೋಂದಣಿಯಾಗಿದ್ದೀರೋ ಅದೇ ವಾರ್ಡು/ವೃತ್ತ/ಸೆಕ್ಟರ್ ಸಂಖ್ಯೆ.

ನನ್ನ ಕೇಂದ್ರದ ಕ್ಷೇತ್ರವ್ಯಾಪ್ತಿಯನ್ನು ಹೇಗೆ ಕಂಡುಹಿಡಿಯುವುದು

 

ನೀವು ಕೇಂದ್ರ ಅಬಕಾರಿಯೊಂದಿಗೆ ನೋಂದಣಿಯಾಗಿದ್ದಲ್ಲಿ, ನಿಮ್ಮ ಕೇಂದ್ರದಕ್ಷೇತ್ರವ್ಯಾಪ್ತಿಯನ್ನು ಕಂಡುಹಿಡಿಯಲು,ನಿಮ್ಮ ನೋಂದಣಿ ಪ್ರಮಾಣ ಪತ್ರವನ್ನು ಪರಿಶೀಲಿಸಿ. ನೀವು ಕೇವಲ ವ್ಯಾಟ್ ನೋಂದಾಯಿತ ವರ್ತಕರಾಗಿದ್ದಲ್ಲಿ, ನಿಮ್ಮ ಪ್ರಧಾನ ವ್ಯವಹಾರ ಸ್ಥಳದ ವಿಳಾಸ ಆಧಾರದಲ್ಲಿ ನಿಮ್ಮ ಕೇಂದ್ರದಕ್ಷೇತ್ರವ್ಯಾಪ್ತಿಯನ್ನು ಕಂಡುಹಿಡಿಯುವುದು ಅಗತ್ಯವಾಗಿರುತ್ತದೆ.

ನನಗೆ ಯಾವುದೇ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಸಾದ್ಯವಾಗುತ್ತಿಲ್ಲ. ಏಕೆ

ನೀವು ಮೊದಲು ನಿಮ್ಮ ಅಂತರ್ಜಾಲದ ಸಂಪರ್ಕವನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ದಾಖಲೆಗಳು 1 ಎಂ.ಬಿ ಗರಿಷ್ಠ ಗಾತ್ರದಲ್ಲಿನ ಪಿಡಿಎಫ್ ಅಥವಾ ಜೆಪಿಇಜಿ ನಮೂನೆಯದ್ದಾಗಿರವುದುನ್ನು ಖಾತರಿ ಪಡಿಸಿಕೊಳ್ಳಿ. ಪೋಟೋಗೆ ಸಂಬಂಧಿಸಿದ್ದಲ್ಲಿ, ನಮೂನೆಯು ಜೆಪಿಇಜಿಯದ್ದಾಗಿರಬೇಕು, ಮತ್ತು ಗರಿಷ್ಠ ಗಾತ್ರ 100 ಕೆಬಿಗೆ ಮಾತ್ರ ಅನುಮತಿಸಲಾಗುತ್ತದೆ.

ನಾನು ನಮೂನೆಯನ್ನು ತುಂಬುವಾಗ ವ್ವವಹಾರದ ವಿವರಗಳ ಪುಟದಲ್ಲಿ ಎಲ್ಲಾ ವಿವರಗಳನ್ನು ತುಂಬಿದ್ದೇನೆ. ಈಗ ಎಲ್ಲಾ ಜಾಗಗಳು ಖಾಲಿಯಾಗಿ ಕಾಣಿಸಿಕೊಳ್ಳುತ್ತಿವೆ. ಏಕೆ

ನೀವು ಎಲ್ಲಾ ವಿವರಗಳನ್ನು ತುಂಬಿದ ನಂತರ ಪ್ರತಿಯೊಂದು ಪುಟವನ್ನು ಸೇವ್ ಮಾಡುವುದು ಅಗತ್ಯವಿರುತ್ತದೆ. ವಿವರಗಳನ್ನು ಸೇವ್ ಮಾಡಲು ಪುಟದ ಕೆಳಭಾಗದಲ್ಲಿರುವ ಸೇವ್ & ಕಂಟಿನ್ಯೂ ಬಟನ್ ಅನ್ನು ಒತ್ತಿ ಮತ್ತು ಆನಂತರ ಇತರೇ ಟ್ಯಾಬ್‍ನಲ್ಲಿರುವ ವಿವರಗಳನ್ನು ನಮೂದಿಸಲು ಮುಂದುವರೆಯಿರಿ.

ಡಿನ್ ಎಂದರೆ ಏನು

ಡಿನ್ ಎನ್ನುವುದು ಕಾರ್ಪೊರೇಟ್ ವ್ಯವಹಾರಗಳ ಮಂತ್ರಾಲಯದಿಂದ ನೀಡಲ್ಪಟ್ಟ ಕಂಪನಿಯ ನಿರ್ದೇಶಕರ ಗುರುತಿಸುವಿಕೆಯ ಸಂಖ್ಯೆಯನ್ನು ಸೂಚಿಸುತ್ತದೆ. ನಿಮ್ಮ ಡಿನ್ ಅನ್ನು ತಿಳಿಯಲು, ಕಾರ್ಪೊರೇಟ್ ವ್ಯವಹಾರಗಳ ಮಂತ್ರಾಲಯದಿಂದ ನೀಡಲಾಗಿರುವ ನಿಮ್ಮ ಡಿನ್ ಮಂಜೂರಾತಿಯ ಪತ್ರವನ್ನು ಪರಿಶೀಲಿಸಿ ಅಥವಾ ಎಂಸಿಎ ಪೋರ್ಟಲ್ ಆದ

ನಾನು ನನ್ನ ಆಧಾರ್ ಸಂಖ್ಯೆಯನ್ನು ಹೊಂದಿಲ್ಲ. ಆಧಾರ್ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆಯೇ

 

ನೋಂದಾಯಿಸುವಿಕೆಯ ಅರ್ಜಿಯನ್ನು ಸಲ್ಲಿಸುವುದಕ್ಕಾಗಿ ಆಧಾರ್ ಸಂಖ್ಯೆಯು ಕಡ್ಡಾಯವಾಗಿರುವುದಿಲ್ಲ. ಆದಾಗ್ಯೂ ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನಿಮ್ಮ ನೋಂದಾಯಿಸುವಿಕೆಯ ಅರ್ಜಿಯನ್ನು ಸಲ್ಲಿಸುವಾಗ, ನಿಮ್ಮ ಡಿಎಸ್‍ಸಿ ಅಥವಾ ಆಧಾರ್ ಆಧಾರಿತ ಇ-ಸಹಿಯ ಅಗತ್ಯವಿರುತ್ತದೆ.

ವ್ಯವಹಾರದ ಪ್ರಧಾನ ಸ್ಥಳ ಎಂದರೆ ಏನು

ವ್ಯವಹಾರದ ಪ್ರಧಾನ ಸ್ಥಳ ಎಂದರೆ ತೆರಿಗೆ ಸಂದಾಯದಾರರ ವ್ಯವಹಾರವು ಕಾರ್ಯ ನಿರ್ವಹಿಸಲ್ಪಡುವ ರಾಜ್ಯದೊಳಗಿನ ಪ್ರಾಥಮಿಕ ಸ್ಥಾನವಾಗಿರುತ್ತದೆ. ವ್ಯವಹಾರದ ಪ್ರಧಾನ ಸ್ಥಳ ಎನ್ನುವುದು, ಸಾಮಾನ್ಯವಾಗಿ ವ್ಯವಹಾರದ ಲೆಕ್ಕಪತ್ರಗಳ ಪುಸ್ತಕಗಳು ಇಡುವಂತಹ ಸ್ಥಳ ಮತ್ತು ಉದ್ದಿಮೆಯ ಮುಖ್ಯಸ್ಥ ಅಥವಾ ಕೊನೆ ಪಕ್ಷ ಉನ್ನತ ಆಡಳಿತ ಮಂಡಳಿ ಆಗಾಗ್ಗೆ ಇರುವ ಸ್ಥಾನ.

ವ್ಯವಹಾರದ ಹೆಚ್ಚುವರಿ ಸ್ಥಳ ಎಂದರೆ ಏನು

ವ್ಯವಹಾರದ ಹೆಚ್ಚುವರಿ ಸ್ಥಳ ಎಂದರೆ ತೆರಿಗೆ ಸಂದಾಯದಾರ ರಾಜ್ಯದೊಳಗೆ ವ್ಯವಹಾರದ ಪ್ರಧಾನ ಸ್ಥಳಕ್ಕೆ ಹೆಚ್ಚುವರಿಯಾಗಿ ವ್ಯವಹಾರ ಸಂಬಂಧಿ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿರುವ ವ್ಯವಹಾರದ ಸ್ಥಳವಾಗಿರುತ್ತದೆ.

ಹೆಚ್‍ಎಸ್‍ಎನ್ ಕೋಡ್ ಮತ್ತು ಎಸ್‍ಎಎಸಿ ಕೋಡ್ ಎಂದರೆ ಏನು

ಹೆಚ್‍ಎಸ್‍ಎನ್ ಎನ್ನುವುದು ಹಾರ್ಮೊನೈಸಡ್ ಸಿಸ್ಟಂ ಆಫ್ ನೋಮೆನ್‍ಕ್ಲೇಚರ್‍ನ ಸಂಕ್ಷಿಪ್ತ ರೂಪ, ಇದು ಸರಕುಗಳ ವರ್ಗಾವಣೆಯಲ್ಲಿ ಏಕರೂಪತೆಯನ್ನು ನಿರ್ವಹಿಸುವ ಸಲುವಾಗಿ ಅಂತರರಾಷ್ಟ್ರೀಯವಾಗಿ ಮನ್ನಣೆಗೊಂಡಿರುವ ಉತ್ಪನ್ನಗಳ ಕೋಡಿಂಗ್ ವ್ಯವಸ್ಥೆಯಾಗಿದೆ ಸರ್ವೀಸ್ ಅಕೌಂಟಿಂಗ್ ಕೋಡ್‍ಗಳು (ಎಸ್‍ಎಎಸಿ) ಎನ್ನುವುದು ಸೇವೆಗಳನ್ನು ಗುರುತಿಸುವುದಕ್ಕಾಗಿ ಕೇಂದ್ರ ಅಬಕಾರಿ ಮತ್ತು ಸೀಮಾಸುಂಕಗಳ ಮಂಡಳಿಯಿಂದ (ಅಃಇಅ) ಅಳವಡಿಸಿಕೊಳ್ಳಲ್ಪಟ್ಟಿರುವುದಾಗಿದೆ.

ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವಾಗ ನಾನು ಒದಗಿಸಬೇಕಾಗಿರುವ ಬ್ಯಾಂಕಿನ ಖಾತೆ ಯಾವುದು

ವ್ಯವಹಾರದ ವಹಿವಾಟನ್ನು ನಡೆಸಿಕೊಂಡು ಹೋಗುವ ಉದ್ದೇಶಕ್ಕಾಗಿ ಉಪಯೋಗಿಸಲಾಗುವ ಬ್ಯಾಂಕಿನ ಖಾತೆಯನ್ನು ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವಾಗ ಕಡ್ಡಾಯವಾಗಿ ಒದಗಿಸಬೇಕಾಗಿರುತ್ತದೆ.

ನನ್ನ ಬಳಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕಿನ ಖಾತೆಗಳಿವೆ. ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವಾಗ ನಾನು ಅವುಗಳೆಲ್ಲವನ್ನೂ ಸೇರಿಸಬಹುದೇ

ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವಾಗ ನೀವು ಗರಿಷ್ಠ 10 ಬ್ಯಾಂಕಿನ ಖಾತೆಗಳನ್ನು ಸೇರಿಸಬಹುದು.

ನೋಂದಾಯಿಸುವಿಕೆಗಾಗಿ ಡಿಎಸ್‍ಸಿ ಕಡ್ಡಾಯವೇ

ಕಂಪನಿಗಳು, ವಿದೇಶಿ ಕಂಪನಿಗಳು, ಮಿತ ಹೊಣೆಗಾರಿಕೆಯ ಪಾಲುದಾರಿಕೆ (ಎಲ್‍ಎಲ್‍ಪಿಗಳು) ಮತ್ತು ವಿದೇಶಿ ಮಿತ ಹೊಣೆಗಾರಿಕೆಯ ಪಾಲುದಾರಿಕೆ (ಎಫ್‍ಎಲ್‍ಎಲ್‍ಪಿಗಳು)ಗಳಿಂದ ನೋಂದಾಯಿಸುವಿಕೆಗಾಗಿ ಡಿಎಸ್‍ಸಿ ಕಡ್ಡಾಯವಾಗಿರುತ್ತದೆ. ಇತರೇ ತೆರಿಗೆ ಸಂದಾಯದಾರರಿಗೆ ಡಿಎಸ್‍ಸಿ ಐಚ್ಛಿಕವಾಗಿರುತ್ತದೆ.

ನನ್ನ ಡಿಎಸ್‍ಸಿ, ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿತವಾಗಿಲ್ಲ. ನಾನು ನನ್ನ ನೋಂದಾಯಿಸುವಿಕೆಯ ಅರ್ಜಿಯನ್ನು ಡಿಎಸ್‍ಸಿಯೊಂದಿಗೆ ಸಲ್ಲಿಸಲು ಸಾಧ್ಯವಿದಯೇ?

ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನಿಮ್ಮ ಡಿಎಸ್‍ಸಿ, ನೋಂದಾಯಿತವಾಗಿಲ್ಲದಿದ್ದರೆ, ನೀವು ನೋಂದಾಯಿಸುವಿಕೆಯ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿನಲ್ಲಿ “ರಿಜಿಸ್ಟ್ರರ್ ಯುವರ್ ಡಿಎಸ್‍ಸಿ” ಎನ್ನುವುದನ್ನು ಒತ್ತುವುದರ ಮೂಲಕ ಡಿಎಸ್‍ಸಿ ಯನ್ನು ನೋಂದಾಯಿಸಿಕೊಳ್ಳುವುದು ನಿಮಗೆ ಅಗತ್ಯವಿರುತ್ತದೆ.

ನಾನು ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನನ್ನ ಡಿಎಸ್‍ಸಿಯನ್ನು ಹೇಗೆ ನೋಂದಾಯಿಸಿಕೊಳ್ಳಲಿ

ನೀವು ಸಿಂಧುವಾದ ಡಿಎಸ್‍ಸಿಯನ್ನು ಹೊಂದಿದ್ದರೆ, ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ಗೆ ಭೇಟಿ ನೀಡಬಹುದು ಮತ್ತು “ರಿಜಿಸ್ಟ್ರರ್ ಯುವರ್ ಡಿಎಸ್‍ಸಿ” ಲಿಂಕ್ ಮೇಲೆ ಒತ್ತಿರಿ. ಡಿಎಸ್‍ಸಿಯನ್ನು ಹೊಂದಿರುವವನ ಪ್ಯಾನ್, ಸಿಬಿಡಿಟಿಯ ದತ್ತಾಂಶ ಸಂಗ್ರಹದಲ್ಲಿನ ಪ್ಯಾನ್‍ಗೆ ಹೊಂದಾಣಿಕೆಯಾಗಬೇಕು. ಸಿಂದುತ್ವಗೊಳಿಸುವಿಕೆಯ ನಂತರ ಬಳಕೆದಾರ ಸರ್ಟಿಪಿಕೇಟ್ ಲಿಂಕ್‍ನ್ನು ನೋಂದಣಿಯಾಗಲು ಆಯ್ಕೆ ಮಾಡಬೇಕು. ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ವರ್ಗ-2 ಅಥವಾ ವರ್ಗ-3 ಡಿಎಸ್‍ಸಿ ಮಾತ್ರ ನೋಂದಣಿ ಮಾಡಬಹುದು.

ಇ-ಸಹಿ ಎಂದರೆ ಏನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ

ಇ-ಸಹಿ ಎನ್ನುವುದು ವಿದ್ಯುನ್ಮಾನ ಸಹಿಯನ್ನು ಸೂಚಿಸುತ್ತದೆ. ಇ-ಸಹಿ ಎನ್ನುವುದು ಆಧಾರ್ ಹೊಂದಿರುವವನಿಗೆ ಒಂದು ದಾಖಲೆಯನ್ನು ಅಂಕಿಚಿಹ್ನೆಯ ರೂಪದಲ್ಲಿ ಸಹಿ ಮಾಡಲು ಸಹಾಯ ಮಾಡುವ ಆನ್‍ಲೈನ್ ವಿದ್ಯುನ್ಮಾನ ಸಹಿ ಸೇವೆಯಾಗಿರುತ್ತದೆ. ಒಂದು ವೇಳೆ ಅರ್ಜಿದಾರನು ಇ-ಸಹಿಯ ಸೇವೆಯನ್ನು ಬಳಸಿಕೊಂಡು ವಿದ್ಯುನ್ಮಾನ ಸಹಿಯನ್ನು ಮಾಡಲು ಆಯ್ಕೆ ಮಾಡಿಕೊಂಡರೆ, ಕೆಳಕಂಡ ಕ್ರಿಯೆಗಳು ನಿರ್ವಹಿಸಲ್ಪಡುತ್ತವೆ.
 • ಆಧಾರ್‍ನ ಸಿಂಧುಗೊಳಿಸುವಿಕೆಯ ನಂತರ, ಜಿಎಸ್‍ಟಿ ಸಿಸ್ಟಂ ಪೋರ್ಟಲ್ UIಆಂI ಸಿಸ್ಟಂಗೆ ಒಂದು ಬಾರಿಯ ಪಾಸ್‍ವರ್ಡ್ (ಓಟಿಪಿ) ಯನ್ನು ಕಳಹಿಸುವಂತೆ ಕೋರಿಕೆಯನ್ನು ಸಲ್ಲಿಸುತ್ತದೆ.
 • ಸಿಸ್ಟಂ, ಆಧಾರ್‍ಗೆ ಪ್ರತಿಯಾಗಿ ನೋಂದಣಿಯಾಗಿರುವ ಇ-ಮೇಲ್ ವಿಳಾಸ ಮತ್ತು ಮೊಬೈಲ್
ಸಂಖ್ಯೆಗೆ ಓಟಿಪಿಯನ್ನು ಕಳಹಿಸುತ್ತದೆ.
 • ಸಿಸ್ಟಂ, ಬಳಕೆದಾರನನ್ನು ಓಟಿಪಿಯನ್ನು ನಮೂದಿಸುವಂತೆ ಪ್ರೇರೇಪಿಸುತ್ತದೆ.
 • ಬಳಕೆದಾರನು ಓಟಿಪಿಯನ್ನು ನಮೂದಿಸಿ ದಾಖಲೆಯನ್ನು ಸಲ್ಲಿಸುತ್ತಾನೆ. ಇ-ಸಹಿಯ ಪ್ರಕ್ರಿಯೆಯು
 • ಪೂರ್ಣಗೊಳ್ಳುತ್ತದೆ.

ನೋಂದಾಯಿಸುವಿಕೆಗಾಗಿ ಅರ್ಜಿ ಸಲ್ಲಿಕೆಯ ಮೇಲೆ ಯಾವುದಾದರೂ ಚಾರ್ಜುಗಳು ಅನ್ವಯವಾಗುತ್ತವೆಯೇ

ಇಲ್ಲ. ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸುವಿಕೆಗಾಗಿ ಅರ್ಜಿ ಸಲ್ಲಿಕೆಯ ಮೇಲೆ ಯಾವುದೇ ಚಾರ್ಜುಗಳು ಅನ್ವಯವಾಗುವುದಿಲ್ಲ.

ಎಆರ್‍ಎನ್ ಎಂದರೆ ಏನು

ಎಆರ್‍ಎನ್ ಎಂದರೆ ಇ-ಸಹಿ ಅಥವಾ ಅಂಕಿಚಿಹ್ನೆ (ಡಿಎಸ್‍ಸಿ) ಸಹಿಯೊಂದಿಗಿನ ನೋಂದಾಯಿಸುವಿಕೆಅರ್ಜಿ ಸಲ್ಲಿಕೆಯ ನಂತರ ವರ್ಧನೆಗೊಳ್ಳುವ ಅರ್ಜಿಯ ಉಲ್ಲೇಖ ಸಂಖ್ಯೆ (ಅಪ್ಲಿಕೇಷನ್ ರೆಫರೆನ್ಸ್ ನಂಬರ್). ಇದು ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಪ್ರತಿಯೊಂದು ವಹಿವಾಟು ಪೂರ್ಣಗೊಂಡ ನಂತರ ನೀಡಲಾಗುವ ವಿಶಿಷ್ಟ ಸಂಖ್ಯೆ. ಜಿಎಸ್‍ಟಿಎನ್‍ನೊಡನೆ ಮುಂದಿನ ಸಂವಹನಕ್ಕಾಗಿ ಎಆರ್‍ಎನ್ ಅನ್ನು ಬಳಕೆ ಮಾಡಿಕೊಳ್ಳಬಹುದು.

ಎಆರ್‍ಎನ್ ನಮೂನೆ ಯಾವುದು

ನಾನು ಕೇಂದ್ರ ಅಬಕಾರಿ/ಸೇವಾ ತೆರಿಗೆ ಮತ್ತು ರಾಜ್ಯ ವ್ಯಾಟ್ ಶಾಸನಗಳ ಅಡಿಯಲ್ಲಿ ಒಬ್ಬ ನೋಂದಾಯಿತತೆರಿಗೆ ಸಂದಾಯದಾರ. ಮಾದರಿ ಜಿಎಸ್‍ಟಿ ಕಾನೂನಿನ ಅಡಿಯಲ್ಲಿ ನಿಯಮಿಸಲಾದ ಅರ್ಜಿಯ ಪ್ರಕಾರಜಿಎಸ್‍ಟಿಎನ್‍ನಿಂದ ಕೋರಲಾದ ವಿವರಗಳನ್ನು ಯಶಸ್ವಿಯಾಗಿ ಸಲ್ಲಿಸಿರುತ್ತೇನೆ. ನಂತರ ಏನಾಗುವುದು

ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ನೋಂದಾಯಿಸುವಿ ಕೆಅರ್ಜಿಯ ಯಶಸ್ವಿ ಸಲ್ಲಿಕೆಯ ನಂತರ ಅರ್ಜಿಯ ಉಲ್ಲೇಖ ಸಂಖ್ಯೆ (ಅಪ್ಲಿಕೇಷನ್ ರೆಫರೆನ್ಸ್ ನಂಬರ್) ವರ್ಧನೆಗೊಳ್ಳುತ್ತದೆ. ಈ ಎಆರ್‍ಎನ್ ಅನ್ನು ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಹಿಂಬಾಲಿಸಲು ಬಳಕೆ ಮಾಡಿಕೊಳ್ಳಬಹುದು.

ನಾನು ಅರ್ಜಿಯ ಉಲ್ಲೇಖ ಸಂಖ್ಯೆ (ಅಪ್ಲಿಕೇಷನ್ ರೆಫರೆನ್ಸ್ ನಂಬರ್)ಅನ್ನು ಇದುವರೆವಿಗೂ ಸ್ವೀಕರಿಸಿಲ್ಲ. ನಾನು ಈಗ ಏನು ಮಾಡುವುದು

ಅರ್ಜಿ ಸಲ್ಲಿಸಿದ15 ನಿಮಿಷದೊಳಗಾಗಿ ಎಆರ್‍ಎನ್ ಅನ್ನು ಸ್ವೀಕರಿಸಿರದಿದ್ದಲ್ಲಿ, ಮುಂದಿನ ಕ್ರಮಕ್ಕಾಗಿ ವಿವರವಾದ ಸೂಚನೆಗಳೊಂದಿಗೆಒಂದು ಇ-ಮೇಲ್ ಅನ್ನು ಕಳುಹಿಸಲಾಗುತ್ತದೆ.

ವಿವರಗಳನ್ನು ನಮೂದಿಸುವಾಗ, ಅಂತರ್ಜಾಲದ ಸಂಪರ್ಕ ಕಳೆದು ಹೋಗಿದೆ. ಸೇವ್ ಮಾಡಲಾದ ನೋಂದಾಯಿಸುವಿಕೆಯ ನಮೂನೆಯನ್ನು ನಾನು ಹೇಗೆ ಪುನರ್‍ಪಡೆಯಲಿ

ಸೇವ್ ಮಾಡಲಾದ ನೋಂದಾಯಿಸುವಿಕೆಯ ನಮೂನೆಯನ್ನು ಪುನರ್‍ಪಡೆಯಲು, ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಪರಿಚಯ ಪತ್ರದೊಂದಿಗೆ ಲಾಗಿನ್ ಆಗಿ, ಡ್ಯಾಷ್‍ಬೋರ್ಡ್> ಮೈ ಸೇವಡ್ ಅಪ್ಲಿಕೇಷನ್ ಮೆನು ಗೆ ಹೋಗಿ. ಎಡಿಟ್ ಬಟನ್ ಅನ್ನು ಸೇವ್ ಮಾಡಲಾದ ನೋಂದಾಯಿಸುವಿಕೆಯ ನಮೂನೆಯನ್ನು ಪುನರ್‍ಪಡೆಯಲು ಒತ್ತಿ.

ಪ್ಯಾನ್ ಸಿಂಧುಗೊಳಿಸುವಿಕೆಯಲ್ಲಿ ಹೊಂದಾಣಿಕೆಯಿಲ್ಲ ಎನ್ನುವ ಒಂದು ಇ-ಮೇಲ್ ಅನ್ನು ಪಡೆದಿದ್ದೇನೆ. ನಾನು ಈಗ ಏನು ಮಾಡಬೇಕು

ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಲಾಗಿನ್ ಆಗಿ ಮತ್ತು ಪ್ಯಾನ್ ಪ್ರಕಾರ ವಿವರಗಳನ್ನು ತುಂಬಿ ಮತ್ತು
ನೋಂದಾಯಿಸುವಿಕೆಯ ಅರ್ಜಿಯನ್ನು ಪುನರ್ ಸಲ್ಲಿಕೆ ಮಾಡಿ.

ನನ್ನ ಡಿಎಸ್‍ಸಿ ಕಾಲ ಮುಗಿದು ಹೋಗಿದೆ/ಹಿಂತೆಗೆದುಕೊಳ್ಳಲಾಗಿದೆ. ನಾನು ಈಗ ಏನು ಮಾಡಬೇಕು

ನೀವು ಜಿಎಸ್‍ಟಿಯೊಂದಿಗೆ ನಿಮ್ಮ ಸಿಂಧುವಾದ ಡಿಎಸ್‍ಸಿಯನ್ನು ಪುನರ್-ನೋಂದಣಿ ಮಾಡಿಕೊಳ್ಳುವುದು ಅಗತ್ಯವಿರುತ್ತದೆ. ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಪರಿಚಯ ಪತ್ರದೊಂದಿಗೆ ಲಾಗಿನ್ ಆಗಿ, ಡ್ಯಾಷ್‍ಬೋರ್ಡ್> ರಿಜಿಸ್ಟರ್>ಅಪ್‍ಡೇಟ್ ಡಿಎಸ್‍ಸಿ ಮೆನುಗೆ ಹೋಗಿ. ಹಿಂಪಡೆಯುವಿಕೆಯ ಸಂದರ್ಭದಲ್ಲಿ, ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಬೇರೊಂದು ಸಿಂಧುವಾದ ಡಿಎಸ್‍ಸಿಯನ್ನು ನೋಂದಣಿ ಮಾಡಬೇಕಾಗುತ್ತದೆ.

ಯಾವುದಾದರೂ ಸಹಾಯಕ ಕೇಂದ್ರದ ಸೌಲಭ್ಯವಿದಯೇ

ಹೌದು, ಸಹಾಯಕ ಕೇಂದ್ರದ ಸೌಲಭ್ಯವಿದೆ ಮತ್ತು ಇದು ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಕಾಣಸಿಗುತ್ತದೆ. ಭಾಗ-ಸಿ:- ಗೊತ್ತುಪಡಿಸಿದ ದಿನಾಂಕದ ನಂತರದ ಚಟುವಟಿಕೆಗಳು

ನೋಂದಾಯಿಸುವಿಕೆ ಅರ್ಜಿಯು ತಿರಸ್ಕøತವಾಗುತ್ತದೆಯೇ

ಹೌದು, ನೀವು ತಪ್ಪಾದ ಅಥವಾ ಸುಳ್ಳಾದ ಅಥವಾ ಸರಿಯಿಲ್ಲದ ದಾಖಲೆಗಳನ್ನು ನಿಮ್ಮ ಡಿಎಸ್‍ಸಿ ಅಥವಾ ಇ-ಸಹಿಯೊಂದಿಗೆ ಒದಗಿಸಿದ/ಅಪ್‍ಲೋಡ್ ಮಾಡಿದ ಸಂದರ್ಭದಲ್ಲಿ ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿನ ನಿಮ್ಮ ನೋಂದಾಯಿಸುವಿಕೆ ಅರ್ಜಿಯು ತಿರಸ್ಕøತವಾಗುತ್ತದೆ. ಆದಾಗ್ಯೂ, ಅರ್ಜಿದಾರನಿಗೆ ಅಹವಾಲನ್ನು ಹೇಳಿಕೊಳ್ಳಲು ಸಾಕಷ್ಟು ಅವಕಾಶವನ್ನು ಒದಗಿಸಲಾಗುತ್ತದೆ, ಅಲ್ಲಿ ತೆರಿಗೆ ಸಂದಾಯದಾರನು ಅವನ/ಅವಳ

ನಿಲುವುಗಳನ್ನು ಪ್ರಸ್ತುತಪಡಿಸಬಹುದು.

ನಾನು ನೋಂದಾಯಿಸುವಿಕೆ ಅರ್ಜಿಯನ್ನು ಸಲ್ಲಿಸಿದ ನಂತರ, ತಿದ್ದುಪಡಿ ಮಾಡಬಹುದೇ ಗೊತ್ತುಪಡಿಸಲಾದ ದಿನಾಂಕದ ತರುವಾಯ ನೀವು ನೋಂದಾಯಿಸುವಿಕೆ ಅರ್ಜಿಗೆ ತಿದ್ದುಪಡಿ ಮಾಡಬಹುದು. ನಾನು ನೋಂದಾಯಿಸುವಿಕೆ ಸಮಯದಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಬದಲಾಯಿಸಬಹುದೇ?

ನೀವು ನೋಂದಾಯಿಸುವಿಕೆ ಸಮಯದಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಗೊತ್ತುಪಡಿಸಲಾದ ದಿನಾಂಕದ ತರುವಾಯ ತಿದ್ದುಪಡಿ ಪ್ರಕ್ರಿಯೆಯ ಮೂಲಕ ಬದಲಾಯಿಸಬಹುದು.ನಾನು ತಾತ್ಕಾಲಿಕ ನೋಂದಣಿ ಪ್ರಮಾಣ ಪತ್ರವನ್ನು ಯಾವಾಗ ಪಡೆಯುತ್ತೇನೆ

ನೀವು ನೋಂದಾಯಿಸುವಿಕೆ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ್ದಲ್ಲಿ, ಗೊತ್ತುಪಡಿಸಲಾದ ದಿನಾಂಕದಂದು ಅದು
ನಿಮ್ಮ ಡ್ಯಾಷ್‍ಬೋರ್ಡ್‍ನಲ್ಲಿ ಲಭ್ಯವಿರುತ್ತದೆ.

ನಾನು ಅಂತಿಮ ನೋಂದಣಿ ಪ್ರಮಾಣ ಪತ್ರವನ್ನು ಯಾವಾಗ ಪಡೆಯುತ್ತೇನೆ

ಗೊತ್ತುಪಡಿಸಲಾದ ದಿನಾಂಕದ ನಂತರ ಸಂಬಂಧಿಸಿದ ಕ್ಷೇತ್ರವ್ಯಾಪ್ತಿಯ ಕೇಂದ್ರ/ರಾಜ್ಯದ ಯುಕ್ತ ಅಧಿಕಾರಿ(ಗಳು)ಯಿಂದ ದಾಖಲೆಗಳು (6 ತಿಂಗಳ ಒಳಗಾಗಿ) ಪರಿಶೀಲಿಸಲ್ಪಟ್ಟ ನಂತರ ನಿಮಗೆ ಅಂತಿಮ ನೋಂದಣಿ ಪ್ರಮಾಣ ಪತ್ರವನ್ನು ಒದಗಿಸಲಾಗುತ್ತದೆ.

ಒಂದೇ ಪ್ಯಾನ್ ಅಡಿಯಲ್ಲಿ ಒಂದು ರಾಜ್ಯದಲ್ಲಿ ನಾನು ಬಹುವಿಧದ ವ್ಯವಹಾರಗಳನ್ನು ಹೊಂದಿದ್ದೇನೆ. ನಾನು

ಜಿಎಸ್‍ಟಿಯೊಂದಿಗೆ ಪ್ರತಿಯೊಂದು ವ್ಯವಹಾರಕ್ಕೂ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬೇಕೇ? ಒಂದು ರಾಜ್ಯದಲ್ಲಿ ಒಂದು ಪ್ಯಾನ್ ಒಂದು ಜಿಎಸ್‍ಟಿ ನೋಂದಣಿಗೆ ಮಾತ್ರ ಅನುಮತಿಸುವುದರಿಂದ, ನೀವು ಒಂದು ವ್ಯವಹಾರದ ಅಸ್ತಿತ್ವವನ್ನು ಮೊದಲು ನೊಂದಣಿ ಮಾಡಿಕೊಳ್ಳಬಹುದು. ರಾಜ್ಯದೊಳಗಿನ ಉಳಿದ ವ್ಯವಹಾರ ಲಂಬತಲಗಳಿಗಾಗಿ  ದಯವಿಟ್ಟು ನಿಮ್ಮ ಕ್ಷೇತ್ರವ್ಯಾಪ್ತಿಯ ಪ್ರಾಧಿಕಾರದೊಂದಿಗೆ ಸಂಪರ್ಕದಲ್ಲಿರಿ.

ಐಎಸ್‍ಡಿ ನೋಂದಣಿ ಎಂದರೆ ಏನು

ಐಎಸ್‍ಡಿ ಎನ್ನುವುದು ಹೂಡುವಳಿ ಸೇವಾ ಹಂಚಿಕೆದಾರ (ಇನ್‍ಪುಟ್ ಸರ್ವೀಸ್ ಡಿಸ್ಟ್ರುಬ್ಯೂಟರ್)ನನ್ನು ಸೂಚಿಸುತ್ತದೆ. ಒಬ್ಬ ಹೂಡುವಳಿ ಸೇವಾ ಹಂಚಿಕೆದಾರ ಎಂದರೆ, ಕೇಂದ್ರ ಕಛೇರಿಯಲ್ಲಿ ಸ್ವೀಕರಿಸಲಾದ ಸೇವೆಗಳ ತೆರಿಗೆ ಬೆಲೆಪಟ್ಟಿಗೆ ಸಂಬಂಧಿಸಿದಂತೆ ಜಮೆಯನ್ನು ಹಂಚಿಕೆ ಮಾಡುವವನು. ಇಲ್ಲಿ ತೆರಿಗೆ ಬೆಲೆಪಟ್ಟಿ ಎಂದರೆ ಮಾದರಿ ಸರಕುಗಳು ಮತ್ತು ಸೇವೆಗಳ ಅಧಿನಿಯಮದ ಪ್ರಕರಣ 28ರ ಅಡಿಯಲ್ಲಿ ನೀಡಲಾದ ಬೆಲೆಪಟ್ಟಿ, ನೀವು ಅಸ್ತಿತ್ವದಲ್ಲಿರುವ ಒಬ್ಬ ಐಎಸ್‍ಡಿ ತೆರಿಗೆಸಂದಾಯದಾರನಾಗಿದ್ದರೆ, ನೀವು ಯಾವ ರಾಜ್ಯದಲ್ಲಿ ನೋಂದಣಿಯನ್ನು ಅಪೇಕ್ಷಿಸುತ್ತೀರೋ, ಆ ರಾಜ್ಯಕ್ಕಾಗಿ ಜಿಎಸ್‍ಟಿ ಸಿಸ್ಟಂ ಪೋರ್ಟಲ್‍ನಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ನೀವು ಕೇಂದ್ರ ಕ್ಷೇತ್ರವ್ಯಾಪ್ತಿಯ ಪ್ರಾಧಿಕಾರಕ್ಕೆ ತಿಳಿಸುವುದು ಅಗತ್ಯವಿರುತ್ತದೆ.

ಮೂಲ : ಕೇಂದ್ರ ಆಬಕಾರಿ ಮತ್ತು ಸಿಮಾ ಸುಂಕ ಮಂಡಳಿ

2.94117647059
ಸುನೀಲ್ ಗೌಡ Jun 19, 2017 01:04 PM

ಉಪಯುಕ್ತ ಮಾಹಿತಿ ನೀಡಿದ್ದೀರ ಧನ್ಯವಾದಗಳು. ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಸರಳ ಕನ್ನಡದಲ್ಲಿ ಮಾಹಿತಿ ಹಾಕಿ.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top