ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆ ಯಾಗಿದೆ "ಅನಿಧಿತರಿಗೆ ನಿಧಿ" ಒದಗಿಸುವುದರ ಮೂಲಕ ಉದ್ಯಮಗಳು, ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ಉತ್ತಮ ಮುನ್ನುಡಿಯಾಗಿದೆ.ಇದು ಸಣ್ಣ ಮತ್ತು ಅತಿಸಣ್ಣ ಉದ್ಯಮದಾರರಿಗೆ ಕೃಷಿಯೇತರ ಆದಾಯದ ಚಟುವಟಿಕೆಗಳಿಗೆ ಪಿಎಸ್ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್,ವಿದೇಶಿ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು (MFI) ಮತ್ತು ನಾನ್ ಬ್ಯಾಂಕಿಂಗ್ ಹಣಕಾಸು ಕಂಪನಿಗಳು (NBFC) ಇವುಗಳ ಮೂಲಕ ಹತ್ತು ಲಕ್ಷ ರೂಪಾಯಿ ವರಿಗೆ ಸಾಲಪಡೆಯಲು ಎಡೆಮಾಡಿಕೊಡುತ್ತದೆ. ಈ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು 8 ನೇ ಏಪ್ರಿಲ್, 2015 ರಂದು ಬಿಡುಗಡೆ ಮಾಡಿದರು
ಯಾವುದೇ ಭಾರತೀಯ ನಾಗರಿಕ ಕೃಷಿಯೇತರ ಆದಾಯದ ಚಟುವಟಿಕೆಗೆ ಉದಾಹಣೆಗೆ ಉತ್ಪಾದನೆ, ಪರಿಷ್ಕರಣೆ, ವ್ಯಾಪಾರ ಅಥವಾ ಸೇವಾವಲಯ ಇವುಗಳಲ್ಲಿ ತೊಡಗಲು ಇಚ್ಛಿಸಿ ರೂ 10 ಲಕ್ಷದ ವರೆಗೆ ಸಾಲಪಡೆಯಲು ಬಯಸಿದಲ್ಲಿ ಬ್ಯಾಂಕ್, MFI, ಅಥವಾ NBFC ಸಂಪರ್ಕಿಸಿ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ & ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್ (ಮುದ್ರಾ) ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಸಾಲ ಪಡೆಯಬಹುದು.
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ, ಈ ಕೆಳಗಿನ ಸಾಲ ಯೋಜನೆಗಳು ಲಭ್ಯವಿರುತ್ತದೆ
ಶಿಶು: ರೂ . 50,000/- ವರೆಗೆ ಒಳಗೊಂಡ ಸಾಲ
ಕಿಶೋರ್: - ರೂ 50,000 /- ದಿಂದ ರೂ 5 ಲಕ್ಷ ವರೆಗೆ ಸಾಲ
ತರುಣ್: ರೂ 5 ಲಕ್ಷ ದಿಂದ ರೂ. 10 ಲಕ್ಷ ವರೆಗೆ ಸಾಲ
ಉಲ್ಲೇಖಿತ 'ಶಿಶು', 'ಕಿಶೋರ್' ಮತ್ತು 'ತರುಣ್' ಹೆಸರುಗಳು ಫಲಾನುಭವಿಗಳ / ವಾಣಿಜ್ಯೋದ್ಯಮಿ ಗಳ ಬೆಳವಣಿಗೆ / ಅಭಿವೃದ್ಧಿ ಮತ್ತು ಹಣಕಾಸು ಅಗತ್ಯಗಳನ್ನು ಹಂತ ಹಂತ ವಾಗಿ ಪ್ರತಿನಿಧಿಸುತ್ತದೆ.
ಶೇಕಡ ಅರವತ್ತರಷ್ಟು ಆದ್ಯತೆಯು 'ಶಿಶು' ಫಲಾನುಭವಿಗಳಿಗೆ ಮತ್ತು ಒಳಿದ ವರ್ಗಗಳಿಗೆ ನಂತರದ ಆದ್ಯತೆ ಯನ್ನು ನೀಡಲಾಗುವುದು. PMMY ಅಡಿಯಲ್ಲಿ ನೀಡಿದ ಸಾಲಕ್ಕೆ ಯಾವುದೇ ಸಬ್ಸಿಡಿ ಇರುವುದಿಲ್ಲ, ಆದಾಗ್ಯೂ, ಸಾಲ ಪ್ರಸ್ತಾಪವು ಕೆಲವು ಸರ್ಕಾರಿ ಯೋಜನೆ ಲಿಂಕ್ ಆಗಿದ್ದ ವೇಳೆ, ಅದರಲ್ಲಿ ಸರ್ಕಾರದ ಬಂಡವಾಳ ಸಬ್ಸಿಡಿ ಒದಗಿಸುವ ಆಯ್ಕೆ ಇದ್ದರೆ , ಆ ಸಮಯದಲ್ಲಿ PMMY ಅಡಿಯಲ್ಲಿ ಅರ್ಹತೆಯನ್ನು ಪಡೆದಿರುತ್ತದೆ
ನಿರ್ದಿಷ್ಟ ವ್ಯಾಪಾರ ಚಟುವಟಿಕೆಗಳು, ನಿರ್ಧಿಷ್ಟ ಕ್ಷೇತ್ರದಲ್ಲಿ ಚಟುವಟಿಕೆ ಅಗತ್ಯಗಳನ್ನು ಪೂರೈಸಲು ಫಲಾನುಭವಿಗಳಿಗೆ ಬೇಕಾದ ಅಗತ್ಯತೆ ಕಡೆಗೆ ಗಮನ ಹರಿಸಲಾಗುತ್ತದೆ. ಮೊದಲಿಗೆ ಹೆಚ್ಚಿನ ಸಾಂದ್ರತೆಯ ಆಧಾರದ ಮೇಲೆ ಕೆಲವು ಚಟುವಟಿಕೆಗಳು / ಕ್ಷೇತ್ರಗಳಲ್ಲಿ ವ್ಯವಹಾರಗಳಿಗೆ, ಯೋಜನೆಗಳನ್ನು ಸೂಚಿಸಲಾಗುತ್ತದೆ
ಸಾರಿಗೆ ವಲಯ / ಚಟುವಟಿಕೆ - ಇದು ಆಟೋ ರಿಕ್ಷಾ, ಸಣ್ಣ ಸರಕುಗಳು ಸಾರಿಗೆ ವಾಹನ, 3 ಚಕ್ರ ವಾಹನ, ಇ-ರಿಕ್ಷಾ, ಕಾರು, ಟ್ಯಾಕ್ಸಿ, ಇತ್ಯಾದಿ ಸರಕು ಮತ್ತು ಸಾರಿಗೆ ವಾಹನಗಳ ಖರೀದಿಯನ್ನು ಬೆಂಬಲಿಸುತ್ತದೆ
ಸಮುದಾಯ, ಸಾಮಾಜಿಕ ಮತ್ತು ವೈಯಕ್ತಿಕ ಸೇವೆ ಚಟುವಟಿಕೆಗಳು:
ಸಲೂನ್, ಬ್ಯೂಟಿಪಾರ್ಲರ್ ಗಳು,ವ್ಯಾಯಾಮಶಾಲೆ, ಅಂಗಡಿಗಳು, ಹೊಲಿಗೆ ಅಂಗಡಿಗಳು, ಡ್ರೈ ಕ್ಲೀನಿಂಗ್, ಸೈಕಲ್ ಮತ್ತು ಮೋಟರ್ ರಿಪೇರಿ ಮಾಡುವ ಅಂಗಡಿ, DTP ಮತ್ತು ಜೆರಾಕ್ಸ್ , ಮೆಡಿಸಿನ್ ಅಂಗಡಿಗಳು, ಕೊರಿಯರ್ ಏಜೆಂಟ್ಸ್, ಇತ್ಯಾದಿಗಳಿಗೆ
ಹಪ್ಪಳ ತಯಾರಿಕೆ, ಅಚಾರ್ ತಯಾರಿಕೆ, ಜಾಮ್ / ಜೆಲ್ಲಿ ತಯಾರಿಕೆ, ಗ್ರಾಮೀಣ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಸಂರಕ್ಷಣೆ, ಸಿಹಿ ಅಂಗಡಿಗಳು, ಸಣ್ಣ ಸೇವೆ ಆಹಾರ ಮಳಿಗೆಗಳು ಮತ್ತು ಅಡುಗೆ / ಕ್ಯಾಂಟೀನ್ ಸೇವೆಗಳು, ಶೀತಲ ಸರಪಳಿ ವಾಹನಗಳು ಶೀತ ಉಗ್ರಾಣಗಳ ಚಟುವಟಿಕೆ, ಐಸ್ ತಯಾರಿಕೆ ಘಟಕಗಳು, ಐಸ್ ಕ್ರೀಮ್ ಮಾಡುವ ಘಟಕಗಳು, ಬಿಸ್ಕತ್ತು, ಬ್ರೆಡ್ ಮತ್ತು ಬನ್ ತಯಾರಿಕೆ, ಇತ್ಯಾದಿ ಗಳಿಗೆ ಬೆಂಬಲ ಒದಗಿಸುವುದಾಗಿದೆ
ಕೈಮಗ್ಗ, ಮಗ್ಗ, ಚಿಕನ್ ಕೆಲಸ, ಜರಿ ಮತ್ತು ಝರ್ದೋಝಿ ಕೆಲಸ, ಸಾಂಪ್ರದಾಯಿಕ ಕಸೂತಿ ಮತ್ತು ಕೈ ಕೆಲಸ, ಸಾಂಪ್ರದಾಯಿಕ ಬಣ್ಣ ಮತ್ತು ಮುದ್ರಣ, ಉಡುಪು ವಿನ್ಯಾಸ, ಹೆಣಿಗೆ, ಹತ್ತಿ ಬೆಸೆಯುವುದು, ಗಣಕೀಕೃತ ಕಸೂತಿ, ಹೊಲಿಗೆ ಮತ್ತು ಜವಳಿ ಉಡುಪು, ಮತ್ತು ಅದಕ್ಕೆ ಸಂಭದಪಟ್ಟ ಉತ್ಪನ್ನಗಳ ಚಟುವಟಿಕೆ, ಚೀಲಗಳು, ವಾಹನ ಭಾಗಗಳು, ಸಜ್ಜುಗೊಳಿಸುವ ಭಾಗಗಳು, ಇತ್ಯಾದಿ ಜವಾಬ್ದಾರಿ ಗಳನ್ನು ಬೆಂಬಲಿಸುತ್ತವೆ
ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ನೆರವು ಪಡೆಯಲು ಬಯಸುವವರು, ತಮ್ಮ ಪ್ರದೇಶದಲ್ಲಿರುವ ಪಿಎಸ್ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್ಗಳ ವಿದೇಶಿ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ - ಹಣಕಾಸು ಸಂಸ್ಥೆಗಳು ಯಾವುದೇ ಸ್ಥಳೀಯ ಶಾಖೆಗೆ ಸಂಪರ್ಕಿಸಬೇಕು ಸಂಸ್ಥೆಗಳು (MFI) ಮತ್ತು ನಾನ್ ಬ್ಯಾಂಕಿಂಗ್ ಹಣಕಾಸು ಕಂಪನಿಗಳು (NBFC). ನೆರವು ಸ್ಯಾಂಕ್ಷನ್ ಆಯಾ ಸಾಲ ಸಂಸ್ಥೆಯಲ್ಲಿ ಅರ್ಹತಾ ರೂಢಿಗಳನ್ನು ಪ್ರಕಾರ ಗಳ ವಿವರಣೆ ಯನ್ನು ನೀಡಲಾಗುವದು
ಕೊನೆಯ ಮಾರ್ಪಾಟು : 7/25/2020