ಬೀದರ್ ಜಿಲ್ಲೆಯ ಬಿದ್ರಿ ಕಲೆಯಕುರಿತು ದಿನಾಂಕ 09.05.2017ರಂದು ಕರ್ನಾಟಕಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಒದಗಿಸಿದ ಟಿಪ್ಪಣಿ.
- ಕರ್ನಾಟಕದ ಪ್ರಾಚೀನ ಕಲೆಗಳಲ್ಲಿ ಬಿದ್ರಿ ಕಲೆಯು ಪ್ರಮುಖವಾದುದು. ಪ್ರಾರಂಭದಲ್ಲಿಇದನ್ನು “ಕ್ವಾಟೆ ಮಣ್ಣಿನ ಕಲೆ” ಎಂದುಕರೆಯಲಾಗುತ್ತಿದೆ. ಐತಿಹಾಸಿಕವಾಗಿ ಬಹುಮನಿ ಸುಲ್ತಾನರಕಾಲದಲ್ಲಿ ಈ ಕಲೆ ಪ್ರಸಿದ್ಧಿಗೆ ಬಂತು.
- ಪರ್ಷಿಯಾದೇಶದಿಂದ ಬಂದ ಸೂಫಿಸಂತಖ್ವಾಜಾ ಮೊಹಿದ್ದೀನನ ಕಿಸ್ತಿಯ ಅನುಯಾಯಿಗಳು ಈ ಕಲೆಯನ್ನು ಭಾರತಕ್ಕೆತಂದರೆಂದು ಹೇಳಲಾಗಿದೆ. ಗುಲಬರ್ಗಾದ ಬಹುಮನಿ ಸುಲ್ತಾನ ಅಲ್ಲಾವುದ್ದೀನ್ ಸುಲ್ತಾನನು ಅಬ್ದುಲ್ಲಾ ಬಿನ್ ಖೈಸರ್ ಎಂಬ ಇರಾನ್‍ಕಲಾವಿದನನ್ನುತನ್ನಅರಮನೆಯನ್ನುಅಲಂಕರಿಸಲು ಕರೆಸಿ ಕೊಂಡಿದ್ದನು. ಅಲ್ಲಿಂದ ಈ ಕಲೆ ಬೀದರ್ ಮತ್ತು ಗುಲಬರ್ಗಾ ಭಾಗದಲ್ಲಿ ಪ್ರಸಿದ್ದಿ ಪಡೆಯಿತು. ಕೊನೆಗೆ ಬೀದರ್ ಮತ್ತುಇತರಕಡೆಗೆ ಈ ಕಲೆ ಹೆಚ್ಚು ಪ್ರಸಿದ್ಧಿಗೆ ಬಂತು. ಹೈದರಾಬಾದ್ ನಿಜಾಮ ಸಹ ಈ ಕಲೆಗೆ ಪ್ರೋತ್ಸಾಹ ನೀಡಿದ್ದಾನೆ.
- 1886ರಲ್ಲಿ ಇಂಗ್ಲೆಂಡಿನಲ್ಲಿ ‘ಬಿದ್ರಿ ಕಲೆಯ’ ಪ್ರದರ್ಶನವನ್ನುಏರ್ಪಡಿಸಲಾಗಿತ್ತು.
- ಬಿದ್ರಿ ಕಲೆಯ ಕಲಾಕೃತಿಗಳನ್ನು ತಾಮ್ರ ಮತ್ತು ಸತು ಲೋಹಗಳ ಸಮ್ಮಿಶ್ರಣದಲ್ಲಿತಯಾರಿಸಲಾಗುತ್ತದೆ. ಬಿದ್ರಿ ಕಲೆಯಲ್ಲಿಕಲಾಕೃತಿಯ ಸಿದ್ಧತೆಯಲ್ಲಿ ಎಂಟು ಹಂತಗಳಿವೆಯೆಂದು ಹೇಳಲಾಗಿದೆ. ಇದೊಂದುತಾಂತ್ರಿಕತೆ ಮತ್ತು ಸೂಕ್ಷ್ಮ ನೈಪುಣ್ಯತೆಯನ್ನು ಬಯಸುವಕಲೆಯಾಗಿರುತ್ತದೆ. ವಿಶೇಷವಾಗಿ ಮುಸ್ಲೀಂ ಅರಸರು ಈ ಕಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ.
- ಮುಸ್ಲಿಂ ಮತ್ತು ವೀರಶೈವ ಸಮುದಾಯದವರು ಈ ಕಲೆಯನ್ನು ವಂಶಪಾರಂಪರ್ಯವಾಗಿ ಮುಂದುವರಿಸಿಕೊಂಡು ಬಂದಿರುತ್ತಾರೆ. ಬಿದ್ರಿ ಕಲೆಯಕೇಂದ್ರ ಬಿಂದು ಬೀದರ್‍ಆಗಿದ್ದರೂ, ಹೈದರಾಬಾದ್, ಗೋಲ್ಕೊಂಡ, ಬಿಜಾಪುರ, ಅಹಮ್ಮದ್ ನಗರ, ಅಜ್ಮೀರ್, ಮುಂಬೈ, ಲಕ್ನೋ, ಮುರ್ಷಿದಾಬಾದ್, ಪೂರ್ಣಿಯಾ, ಸೂರತ್, ಜಾಫರ್, ಜೈಪುರ, ಫೈಸಾಬಾದ್, ಬನಾರಸ್, ಕಲ್ಕತ್ತಾ ಮತ್ತು ಗಯಾಗಳಲ್ಲಿ ಬಿದ್ರಿ ಕಲೆಯಉತ್ಪಾದನೆ ಮತ್ತು ಮಾರಾಟವಿತ್ತೆಂದು ಸುಸನ್ ಸ್ಟ್ರಾಂಗ್‍ಅವರಅಧ್ಯಯನದಿಂದ ತಿಳಿಯುತ್ತದೆ.
- ಕರ್ನಾಟಕದ ಈ ಕಲೆ ಒಂದಾನೊಂದುಕಾಲದಲ್ಲಿಇಡೀ ಭಾರತವನ್ನು ವ್ಯಾಪಿಸಿತ್ತು ಎಂಬುದು ಹೆಮ್ಮೆಯ ವಿಚಾರವಾಗಿದೆ. ಇಂತಹ ಕಲೆ ಈಗ ಪ್ರೋತ್ಸಾಹವಿಲ್ಲದೇ ಅಳಿವಿನ ಅಂಚಿನಲ್ಲಿದೆ. ಈ ಕಲೆಯನ್ನುಜನಸಾಮಾನ್ಯರ ಬಳಿ ತರಲುಕರ್ನಾಟಕ ಸರ್ಕಾರದಉನ್ನತ ಶಿಕ್ಷಣ ಇಲಾಖೆಯಆಶಯದಂತೆಕರ್ನಾಟಕಚಿತ್ರಕಲಾ ಪರಿಷತ್ತು ದಿನಾಂಕ 10.05.2017 ರಿಂದ 20.05.2017ರವರೆಗೆ ಬಿದ್ರಿ ಕಲೆಯಕಾರ್ಯಾಗಾರ ಮತ್ತು ಪ್ರದರ್ಶನವನ್ನುಕರ್ನಾಟಕಚಿತ್ರಕಲಾ ಪರಿಷತ್ತಿನಆವರಣದಲ್ಲಿ ಏರ್ಪಡಿಸಿರುತ್ತದೆ.
- ಈ ಕಾರ್ಯಕ್ರಮದಉದ್ಘಾಟನೆಯನ್ನು ದಿನಾಂಕ 10.05.2017ರಂದು ಎಂ.ಇ.ಎಸ್‍ಕಾಲೇಜಿನಅಧ್ಯಕ್ಷರಾದ ಶ್ರೀಮತಿ ವಿಮಲಾ ರಂಗಾಚಾರ್‍ಅವರು ನೆರವೇರಿಸುತ್ತಾರೆ. ಬೀದರ್‍ಜಿಲ್ಲೆಯಜಿಲ್ಲಾಧಿಕಾರಿಯವರಾದಡಾ.ಹೆಚ್.ಆರ್.ಮಹದೇವ್, ಐ.ಎ.ಎಸ್‍ಇವರು ವಿಶೇಷ ಆಹ್ವಾನಿತರಾಗಿರುತ್ತಾರೆ. ಶ್ರೀ ಹರೀಶ್‍ಜೆ.ಪದ್ಮನಾಭ, ಇವರು ಈ ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸುತ್ತಾರೆ.
- ದಿನಾಂಕ 13.05.2017 ಶನಿವಾರದಂದು ಸಂಜೆ ಬೀದರಿನ ವಿಶಿಷ್ಟ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಒಂದಾದ “ಕೋಲಾಟ”ವನ್ನು ಪ್ರದರ್ಶಿಸಲಾಗುತ್ತದೆ. ದಿನಾಂಕ 15.05.2017 ಸೋಮವಾರದಂದು ಬೀದರ್‍ಜಿಲ್ಲೆಯ ಮತ್ತೊಂದು ಸಾಂಸ್ಕøತಿಕಕಾರ್ಯಕ್ರಮ “ಲಂಬಾಣಿ ನೃತ್ಯ”ವನ್ನು ಪ್ರದರ್ಶಿಸಲಾಗುತ್ತದೆ. ಕೊನೆಯದಾಗಿ ದಿನಾಂಕ 17.05.2017 ಬುಧವಾರದಂದು “ಮೊಹರಂಕುಣಿತ’ವನ್ನುಏರ್ಪಡಿಸಲಾಗಿದೆ.
- ದಿನಾಂಕ 19.05.2017ರಂದು ಬಿದ್ರಿಕಲೆಯಕುರಿತು “ವಿಚಾರಸಂಕಿರಣ”ವನ್ನುಏರ್ಪಡಿಸಲಾಗಿದೆ. ಇದರಅಧ್ಯಕ್ಷತೆಯನ್ನು ಕಲಾ ಇತಿಹಾಸಕಾರರಾದಡಾ.ತಾರಾಕಶ್ಯಪ್‍ಇವರು ವಹಿಸುತ್ತಾರೆ. ಡಾ.ಎಸ್.ಸಿ.ಪಾಟೀಲ್, ಶ್ರೀ ರೆಹಮಾನ್ ಪಾಟೀಲ್, ಶ್ರೀ ವಿ.ವಿ.ಎಂ.ಭಾಗಾಯತ್ ಹಾಗೂ ಡಾ.ಆರ್.ಹೆಚ್.ಕುಲಕರ್ಣಿ ಇವರುಗಳು ವಹಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಬೀದರ್‍ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದಡಾ.ಸೆಲ್ವಂ ಮಣಿ, ಐ.ಎ.ಎಸ್, ಇವರುಆಗಮಿಸುತ್ತಾರೆ.
- ದಿನಾಂಕ 20.05.2017 ಶನಿವಾರದಂದು ಬೆಳಗಿನ 10.30 ಗಂಟೆಗೆಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಮತ್ತು ಮಾಹಿತಿತಂತ್ರಜ್ಞಾನ ಸಚಿವರಾದ ಶ್ರೀ ಪ್ರಿಯಾಂಕ್‍ಖರ್ಗೆಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮದಅಧ್ಯಕ್ಷತೆಯನ್ನುಡಾ.ಬಿ.ಎಲ್.ಶಂಕರ್‍ಇವರು ವಹಿಸುತ್ತಾರೆ.
- ಬಿದ್ರಿಕಲೆಯಕಾರ್ಯಾಗಾರ ಮತ್ತು ಪ್ರದರ್ಶನ ಕಲಾ ವಿದ್ಯಾರ್ಥಿಗಳಿಗೆ ದೊರಕಬೇಕೆಂಬುದುಚಿತ್ರಕಲಾ ಪರಿಷತ್ತಿನ ಮತ್ತು ಸರ್ಕಾರದಆಶಯವಾಗಿರುತ್ತದೆ. ಅದಕ್ಕಾಗಿಕರ್ನಾಟಕದ ವಿವಿಧ ಕಲಾ ಕಾಲೇಜುಗಳಿಂದ ಅರುವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಾರೆ.
- ಚಿತ್ರಕಲಾ ಮಹಾವಿದ್ಯಾಲಯದ ಮೂವತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಬಿದ್ರಿ ಕಲೆಯಲ್ಲಿಆಸಕ್ತಿಯಿರುವ ಅನೇಕ ಕಲಾವಿದರು ಸ್ವಯಂಪ್ರೇರಣೆಯಿಂದ ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಾರೆ. ಬೆಂಗಳೂರಿನ ನಾಗರಿಕರಿಗೆ ಹಾಗೂ ಪ್ರವಾಸಿಗರಿಗೆ ಬಿದ್ರಿ ಕಲೆಯ ಬಗ್ಗೆ ತಿಳಿಯಲು, ಅದರ ಸೂಕ್ಷ್ಮತೆಗಳನ್ನು ಅರಿಯಲು ಹಾಗೂ ಬಿದ್ರಿ ಕಲೆಯ ಕಲಾವಸ್ತುಗಳನ್ನು ಖರೀದಿಸಲು ಇದೊಂದು ಸುವರ್ಣಅವಕಾಶವಾಗಿರುತ್ತದೆ.
- ದಿನಾಂಕ 18.05.2017ರಂದು ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ದಿನವಾಗಿರುತ್ತದೆ. ಅದರ ಅಂಗವಾಗಿ ಕರ್ನಾಟಕಚಿತ್ರಕಲಾ ಪರಿಷತ್ತಿನ 13 ಶಾಶ್ವತ ಗ್ಯಾಲರಿಗಳಿಗೆ ಒಂದು ವಾರದ ಕಾಲ ಉಚಿತ ಪ್ರವೇಶವನ್ನು ವ್ಯವಸ್ಥೆ ಮಾಡಲಾಗಿದೆ. ನುರಿತ ಗೈಡ್‍ಗಳು ಈ ಬಗ್ಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಬಿದ್ರಿ ಕಲೆಯಕಾರ್ಯಾಗಾರ ಮತ್ತು ಪ್ರದರ್ಶನವನ್ನುಕೂಡಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯದ ದಿನಾಚರಣೆಯಅಂಗವಾಗಿಯೇ ವ್ಯವಸ್ಥೆ ಮಾಡಲಾಗಿದೆ.
- ದಿನಾಂಕ:13.05.2017ರಂದು ಶ್ರೀ ಈಶ್ವರಖಂಡ್ರೆಯವರು, ಮಾನ್ಯ ಪೌರಡಳಿತ ಮತ್ತು ಬೀದರ್‍ಜಿಲ್ಲಾಉಸ್ತುವಾರಿ ಸಚಿವರು ಬಿದ್ರಿ ಕಲೆಯಛಾಯಚಿತ್ರ ಪ್ರದರ್ಶನವನ್ನು ಪರಿಷತ್ತಿನ ನೆಲಮಹಡಿಗ್ಯಾಲರಿಯಲ್ಲಿಉದ್ಘಾಟಿಸುತ್ತಾರೆ.
- ಬಿದ್ರಿ ಕಲೆಯಕಾರ್ಯಾಗಾರ ಮತ್ತು ಪ್ರದರ್ಶನಕಾರ್ಯಾಗಾರದಲ್ಲಿ ಭಾಗವಹಿಸುವ ಕಲಾವಿದರುಗಳು:
- ಮೊಹಮ್ಮದ್‍ರಫೂಲ್. ಶಿಲ್ಪಗುರು ಪ್ರಶಸ್ತಿ ಮತ್ತುರಾಷ್ಟ್ರೀಯ ಪ್ರಶಸ್ತಿ ವಿಜೇತರು.
- ಸರ್ಫುದ್ದೀನ್. ರಾಜ್ಯ ಪ್ರಶಸ್ತಿ ವಿಜೇತರು.
- ಮೊಹಮ್ಮದ್ ಸಲೀಮುದ್ದೀನ್.
- ರಾಜಕುಮಾರ್,
- ಖಾಜಾ ಮಿಯಾನ್.
- ಮೊಹಮ್ಮದ್ ಮುಖೇನ್.
- ಅಬ್ದುಲ್‍ಖಾದಿರ್. ಇವರ ಮಕ್ಕಳು- ಸುಲ್ತಾನಾ ಬೇಗಂ, ಸಾಯಿ ಬೇಗಂ.
- ಲಕ್ಷ್ಮೀಬಾಯಿ. ರಾಜ್ಯ ಪ್ರಶಸ್ತಿ ವಿಜೇತರು. ಇವರ ಮಗ ಪ್ರಭಾಕರ್.
- ಶಾಂತಲಾಬಾಯಿ, ಸಂಗೀತಾ ಬಾಯಿ, ಮಾರುತಿ.
- ಮೊಹಮ್ಮದ್ ಮೋಯಿನ್.
ದಿನಾಂಕ:10.05.2017ರಿಂದ20.05.2017ರವರೆಗೆ ಬಿದ್ರಿ ಕಲೆಯಕಾರ್ಯಾಗಾರ ಮತ್ತು ಪ್ರದರ್ಶನದಟಿಪ್ಪಣಿ
ಬಿದ್ರಿ ಕಲೆ
ಬಿದ್ರಿ ಕಲೆ ಕರ್ನಾಟಕದ ಪಾರಂಪರಿಕ ಕಲೆಗಳಲ್ಲಿ ಒಂದಾಗಿದೆ. ಸುಮಾರುಕ್ರಿ.ಶ. 14 ನೆಯ ಶತಮಾನದಿಂದ ಬಹಮನಿ ಸುಲ್ತಾನರಿಂದ ಪ್ರವರ್ಧಮಾನಕ್ಕೆ ಮತ್ತು ಪ್ರಸಿದ್ಧಿಗೆ ಬಂದಂತಹ ಈ ಕಲೆಯು ಬೀದರ್ ನಗರದಅನ್ವರ್ಥವನ್ನೆ ಬಳಸಿಕೊಂಡು ಬಿದರಿ-ಬಿದ್ರಿ ಕಲೆಯಾಗಿ ಪ್ರಸಿದ್ಧಿಯಾಗಿದೆ.
ಐಥಾಸಿಕವಾಗಿ ಪರ್ಶಿಯಾ ದೇಶದಲ್ಲಿ ಈ ಮೊದಲೇ ಪ್ರಚಲಿತದಲ್ಲಿದ್ದ ಈ ಕಲೆಯಲ್ಲಿದೈನಂದಿನ ಔಪಯೋಗಿಕ ಪಾತ್ರೆ-ಪವಡೆಗಳು, ಅಲಂಕಾರಿಕ ಪಾತ್ರೆಗಳು, ವಸ್ತುಗಳು, ಅಲ್ಲದೇ ಅತಿಥಿಗಳಿಗೆ ನೀಡಲಾಗುವ ವಿಶಿಷ್ಟಾವಾದ ನೆನಪಿನ ಕಾಣಿಕೆ ವಸ್ತುಗಳನ್ನು ತಯಾರಿಸಲಾಗುತ್ತಿದೆ.ಇಂದು ದೇಶ-ವಿದೇಶಗಳಲ್ಲಿ ಜನಪ್ರಿಯವಾಗಿರುವ ಬಿದ್ರಿ ಕಲೆಯ ವಸ್ತುಗಳು ಐತಿಹಾಸಿಕ ಹಾಗೂ ಕಲಾತ್ಮಕವಾದ ಮಹತ್ವವನ್ನು ಹೊಂದಿವೆ.
ಇತಿಹಾಸ
ಐತಿಹಾಸಿಕವಾಗಿ ಸಾಮಾನ್ಯವಾಗಿಗುಲ್ಬರ್ಗಾದ ಬಹಮನಿ ಸುಲ್ತಾನರ ಕಾಲಕ್ಕೆ ಈಕಲೆಯ ಬೆಳವಣಿಗೆಯನ್ನು ಸಮೀಕರಿಸಲಾಗುತ್ತದೆ. ಆದರೆ ಮೂಲತಹ ಪರ್ಶಿಯ ದೇಶದಿಂದಇಲ್ಲಿಗೆ ಬಂದಿತೆಂದು ನಂಬಲಾಗಿದೆ.ಇದಕ್ಕೆ ಪೂರಕವಾಗಿಖ್ಯಾತ ಸೂಫಿ ಸಂತಖಾಜಾ ಮೊಯಿನುದ್ದೀನ ಚಿಸ್ಥಿಯ ಅನುಯಾಯಿಗಳು ಭಾರತಕ್ಕೆ ಬಂದಾಗ ಭಾರತಕ್ಕೆ ಬಮ್ದಿತೆಂದು ತಿಳಿಯಲಾಗುತ್ತದೆ. ಆದರೆ ಪರ್ಶಿಯಾದ ತುರ್ಕಸ್ಥಾನ(ಟರ್ಕಿ) ದೇಶದಲ್ಲಿಇದರ ಪರಿಕಲ್ಪನೆ ಮತ್ತು ವಿನ್ಯಾಸಗಳು ಅಭಿವೃಸ್ಶಿ ಹೊಂದಿದವೆಂದು ಮತ್ತುಅಲ್ಲಿನ ರೀತಿ-ರೀವಾಜುಗಳನ್ನೇ ಇಲ್ಲಿಯೂಅನುಸರಿಸಲಾಗುತ್ತದೆಂಬುದು ಸರ್ವವಿಧಿತವಾದ ನಂಬಿಕೆಯಾಗಿದೆ.
ಮತ್ತೊಂದುದಾಖಲೆಯ ಪ್ರಕಾರಗುಲ್ಬರ್ಗಾದ ಬಹಮನಿ ಸುಲ್ತಾನ ಅಲ್ಲುದ್ದೀನ್ ಸುಲ್ತಾನ್ ಬಹಮನಿಯು. ಅಬ್ದುಲ್ಲ ಬಿನ್ ಖೈಸರ್ ಎಂಬ ಇರಾಣಿನಕಲಾವಿದನನ್ನುಗುಲ್ಬರ್ಗಾದತನ್ನಅರಮನೆಯಅಲಂಕಾರಕ್ಕೆ ಕರೆಸಿಕೊಂಡಿದ್ದನು.ಸ್ಥಳಿಯ ಕಲಾವಿದರೊಂದಿಗೆ ಅವನು ಬಿದ್ರಿ ಕಲೆಯನ್ನು ಅಭಿವೃದ್ಧಿಪಡಿಸಿದಣೆಂಬುದೂ ಕೂದಾ ಐತಿಹಾಸಿಕ ದಾಖಲೆಯಾಗಿದೆ.
ಸ್ಥಳೀಯವಾದ ಮುಸ್ಲಿಮ್ ಮತ್ತು ಲಿಂಗಾಯತ ಸಮಾಜದಕಲಾವಿದರು ಈ ಕಲೆಯನ್ನು ಹಸ್ತಗತ ಮಾಡಿಕೊಂಡುಅತ್ಯದ್ಭುತವಾದ ಕಲಾಕೃತಿಗಳ ರಚನೆಗಳನ್ನು ಮಾಡಿದ್ದಾರೆ.
ತಾಂತ್ರಿಕತೆ
ಬಿದ್ರಿ ವಸ್ತುಗಳನ್ನು ಕಂಚು ಮತ್ತು ಸತು ಲೋಹಗಳ 1:16ರಅನುಪಾತದ ಮಿಶ್ರಣದಿಂದತಯಾರಿಸಲಾಗುತ್ತದೆ.ಉದ್ದೇಷಿತಆಕಾರದ ವಸ್ತುವನ್ನು ತಯಾರಿಸಿ- ಅಚ್ಚಿನಲ್ಲಿ ಈ ಮಿಶ್ರಣ ಲೋಹವನ್ನು ಕಾಯಿಸಿ ಎರಕ ಹೊಯ್ಯಲಾಗುತ್ತದೆ. ಇದರಿಂದ ಉದ್ದೇಶಿತ ಆಕೃತಿಯ ಮೂಲವಿನ್ಯಾಸಮೊದಲೇ ಸಿದ್ಧವಾಗಿದ್ದು ಅದರ ಪ್ರತಿಗಳನ್ನು ಈ ಎರಕ ಹೊಯ್ಯುವ ವಿಧಾನದಿಂದತಯಾರಿಸಲಾಗುತ್ತದೆ.ತಯಾರಿಕೆಯಲ್ಲಿಸುಮಾರುಎಂಟು ಹಂತದತಾಂತ್ರಿಕತೆಯನ್ನುಅನುಸರಿಸಲಾಗುತ್ತದೆ.ಮುಖ್ಯವಾಗಿ ಅಚ್ಚು ಹಾಕುವುದು, ಉಜ್ಜಿ ನಯಗೊಳಿಸುವುದು, ಉಳಿಯಿಂದ ವಿನ್ಯಾಸಗಳನ್ನು ಕೊರೆಯುತ್ತಾರೆ. ಇವುಗಳಲ್ಲಿ ಶುದ್ಧ ಬೆಳ್ಳಿಯ ತಂತಿಯಿಂದ ವಿನ್ಯಾಸಗಳಲ್ಲಿ ತುಂಬಿ ಗಟ್ಟಿಯಾಗಿ ಒಳಗೆಕೂಡ್ರಿಸುವುದು. ನಂತರದಲ್ಲಿ ನಿರ್ಧಿಷ್ಟವಾದ ಶಾಖದಲ್ಲಿ ಕಾಯಿಸಿ ಬಣ್ಣಗಟ್ಟಿಸುವುದು.ಬಣ್ಣಗಟ್ಟಿಸುವದಕ್ಕೆತಾಮ್ರದ ಸಲ್ಫೇಟನ್ನುಉಪಯೋಗಿಸಲಾಗುತ್ತದೆ.
ಬಿದ್ರಿ ಕಲಾವಸ್ತುಗಳ ಮೈಬಣ್ಣವು ಸಾಮಾನ್ಯವಾಗಿಕಪ್ಪು.ಅದರ ಮೇಲೆ ಸುಂದರವಾದ ಸರಳ ಹೂಬಳ್ಳಿಗಳ -ಆಕೃತಿಗಳ ಚಿತ್ರ-ಚಿತ್ತರಿಸಲಾಗಿರುತ್ತದೆ. ಈ ಚಿತ್ರಗಳಲ್ಲಿಯೇ ಆಳಾವಾಗಿ ಕಂಡರಿಸಿ-ಬೆಳ್ಳಿಯ ಎಳೆಗಳನ್ನು ತುಂಬಿ- ನಂತರ ಸುತ್ತಿಗೆಯಿಂದಗಟ್ಟಿಯಾಗಿ ಬಡಿದು ಮತ್ತಷ್ಟು ಗಟ್ಟಿಗೊಳಿಸಲಾಗುತ್ತದೆ..ಬಿದರಿನ ಮಣ್ಣಿನಗುಣಧರ್ಮವೂಕೂಡ ಬಿದ್ರಿಯ ವಸ್ತುಗಳು ಕಪ್ಪುಗಟ್ಟಲು ಸಾಧ್ಯವಾಗುತ್ತದೆ.ಇದೊಂದುರೀತಿಯಲ್ಲಿ ವಿಶಿಷ್ಟವಾದ ತಾಂತ್ರಿಕತೆಯಾಗಿಅಭಿವೃದ್ಧಿಯಾಗಿದೆ.
ಬಿದ್ರಿಯಕಲಾವಿದರನೇಕರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ರಾಜ್ಯ ಮಟ್ಟದ ಮತ್ತುರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತಕಲಾವಿದರು ಇಂದಿಗೂ ಬಿದರ್ ನಗರದಲ್ಲಿದ್ದಾರೆ.
ಕರ್ನಾಟಕಚಿತ್ರಕಲಾ ಪರಿಷತ್ತು ಈ ಕಲೆಯ ಪುನರುಜ್ಜೀವನ- ಪುನರುತ್ಥಾನ ಕೆಲಸವನ್ನುಕೈಗೊಂಡಿದ್ದು, ಅಲ್ಲಿನಕಲಾವಿದರನ್ನು ಆಹ್ವಾನಿಸಿ ಯುವಕಲಾವಿದರಿಗೆತರಬೇತು ನೀಡುವಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಕರ್ನಾಟಕಚಿತ್ರಕಲಾ ಪರಿಶತ್ತು ಇಂತಹ ಹಲವಾರು ಕಾರ್ಯಕ್ರಮಗಳ್ಖನ್ನು ಕರ್ನಾಟಕ ಸರ್ಕಾರದ ಸಹಾಯದಿಂದಆಯೋಜಿಸುತ್ತ ಬಂದಿದೆ, ಪ್ರಸ್ತುತ ಬಿದ್ರಿ ಕಲೆಯಕಾರ್ಯಾಗಾರವುಅಂತಹಒಂದು ಪ್ರಯತ್ನವಾಗಿದೆ.
ಛಾಯಾಚಿತ್ರ
ಮೂಲ: ಪ್ರೊ.ಎಂ.ಜೆ.ಕಮಲಾಕ್ಷಿ , ಪ್ರಧಾನ ಕಾರ್ಯದರ್ಶಿ,ಕರ್ನಾಟಕಚಿತ್ರಕಲಾ ಪರಿಷತ್,,ಚಿತ್ರಕಲಾ ಮಹಾವಿದ್ಯಾಲಯ,ಬೆಂಗಳೂರು