ಸಮರ್ಥನೀಯ ಆರ್ಥಿಕ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ ಮತ್ತು ದೊಡ್ಡ ಪ್ರಮಾಣದ ಉದ್ಯೋಗ ಅವಕಾಶಗಳನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಗಳಿಗೆ ಪೋಷಣೆಗೆ ಒಂದು ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಂತೆ ಪ್ರೇರಿಪಿಸುತ್ತದೆ. ಈ ಉಪಕ್ರಮದ ಮೂಲಕ ಸರ್ಕಾರವು ನವ ಉದ್ಯಮಿಗಳಲ್ಲಿ ನಾವೀನ್ಯತೆ ಮತ್ತು ಹೊಸ ವಿನ್ಯಾಸ, ಆವಿಷ್ಕಾರ ಗಳನ್ನು ಬೆಳೆಸುವ ಗುರಿ ಹೊಂದಿದೆ.
ಈ ಉಪಕ್ರಮದ ಉದ್ದೇಶಗಳನ್ನು ಪೂರೈಸಲು ಅಗತ್ಯವಾದ ಎಲ್ಲಾ ಕ್ರಿಯಾತ್ಮಕ ಅಂಶಗಳನ್ನು ಭಾರತ ಸರ್ಕಾರವು ಘೋಷಿಸಿದೆ. ಈ ಕ್ರಿಯಾತ್ಮಕ ಅಂಶಗಳು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗೆ ವೇಗ ವರ್ಧನ ಕಾರಿ ಯಾಗುವುದೆಂದು ನಿರೀಕ್ಷಿಸಲಾಗಿದೆ.
ಕ್ರಿಯಾತ್ಮಕ ಯೋಜನೆಯನ್ನು ಕೆಳಗಿನ ಪ್ರದೇಶಗಳಲ್ಲಿ ವಿಂಗಡಿಸಲಾಗಿದೆ
ಸರಳೀಕರಣ ಮತ್ತು ಕೈಜೋಡಿಸುವಿಕೆ
ಸ್ವದೃಢೀಕರಣ ಆಧರಿಸಿ ಅನುಸರಣೆ ಆಡಳಿತ
ನವ ಉದ್ಯಮಿಗಳಿಗೆ 9 ಕಾರ್ಮಿಕ ಮತ್ತು ಪರಿಸರ ಕಾನೂನುಗಳ ಮುಖಾಂತರ (ಆರಂಭಿಕ ಮೊಬೈಲ್ ಅಪ್ಲಿಕೇಶನ್ ಮೂಲಕ) ಸ್ವಯಂ ಪ್ರಮಾಣೀಕರಿಸಲು ಅವಕಾಶವಿದೆ. ಕಾರ್ಮಿಕ ಕಾನೂನುಗಳ ಕುರಿತಾದ ಸಂದರ್ಭದಲ್ಲಿ 3 ವರ್ಷಗಳ ಕಾಲ ಯಾವುದೇ ತನಿಖೆಗಳನ್ನು ನಡೆಸಲಾಗುವುದಿಲ್ಲ. ನವ ಉದ್ಯಮಗಳ ಮೇಲೆ ಕಾನೂನಿನ ಉಲ್ಲಂಘನೆಯ ಕುರಿತಾಗಿ ನಂಬಲರ್ಹ ಮೂಲ ಗಳಿಂದ ದೂರುಬಂದರೆ ಮಾತ್ರ ಪರಿಶೀಲನೆ ಮಾಡಬಹುದು. ಪರಿಶೀಲಿಸುವ ಸಂಧರ್ಭದಲ್ಲಿ ಕನಿಷ್ಠ ಒಂದು ಮಟ್ಟದ ಹಿರಿಯ ಪರಿಶೀಲಿಸುವ ಅಧಿಕಾರಿಯವರಿಂದ ಅನುಮೋದನೆ ಪಡೆಯುವ ಅಗತ್ಯವಿರುತ್ತದೆ. ಪರಿಸರ ಕಾನೂನುಗಳ ಬಗ್ಗೆ , 'ಬಿಳಿ ವರ್ಗ' ಅಡಿಯಲ್ಲಿ ಇರುವ ಉದ್ಯಮಗಳು (ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವ್ಯಾಖ್ಯಾನಿಸಲಾದ) ಮೇಲೆ ಯಾವುದೇ ರೀತಿಯ ದೂರು ಬಂದಂತಹ ಸಂದರ್ಭಗಳಲ್ಲಿ ಮಾತ್ರ ಯಾದೃಚ್ಛಿಕವಾಗಿ ತಪಾಸಣೆ ಮಾಡಲಾಗುತ್ತದೆ.
ಸ್ಟಾರ್ಟ್ ಅಪ್ ಇಂಡಿಯಾ ಹಬ್
ನವ ಉದ್ಯಮಗಳಿಗೆ ಏಕ ಗವಾಕ್ಷಿ ಯಡಿ ಆರಂಭಿಕ ಪರಿಸರ ಸಂಪರ್ಕ ಮತ್ತು ಹಣಕಾಸು ಜ್ಞಾನ ವಿನಿಮಯ ಮಾಡಿಕೊಳ್ಳುವಬಗ್ಗೆ
ರೋಲಿಂಗ್ ಔಟ್ ಆಫ್ ಮೊಬೈಲ್ ಅಪ್ಲಿಕೇಶನ್ ಮತ್ತು ಪೋರ್ಟಲ್ :
ವಿವಿಧ ಮಧ್ಯಸ್ಥಗಾರರ ನಡುವೆ ಎಲ್ಲಾ ವ್ಯಾಪಾರ ಅಗತ್ಯಗಳನ್ನು ಮತ್ತು ಮಾಹಿತಿ ವಿನಿಮಯ ಸರ್ಕಾರಿ ಮತ್ತು ನಿಯಂತ್ರಣ ಸಂಸ್ಥೆಗಳು ಪರಸ್ಪರ ಉದ್ಯಮಗಳಿಗೆ ಒಂದೇ ವೇದಿಕೆಯಲ್ಲಿ ಪೂರೈಸುವುದು
ಕಡಿಮೆ ವೆಚ್ಚದಲ್ಲಿ ಕಾನೂನು ಬೆಂಬಲ ಮತ್ತು ವೇಗದ ಟ್ರ್ಯಾಕಿಂಗ್ ಮತ್ತು ಪೇಟೆಂಟ್ ಎಕ್ಸಾಮಿನೇಷನ್
ಕೊನೆಯ ಮಾರ್ಪಾಟು : 2/18/2020
ಡಿಜಿಟಲ್ ಭಾರತವನ್ನು ಹೇಗೆ ಪಡೆಯಬಹುದು : ಡಿಜಿಟಲ್ ಭಾರತದ ಸ...