ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕಾರ್ಯ ವಿಧಾನ

ಅರಣ್ಯ ಹಕ್ಕು ಮಾನ್ಯ ಮಾಡುವ ಕಾರ್ಯದಲ್ಲಿ ಅರಣ್ಯ ಹಕ್ಕು ಸಮಿತಿಯು ಮಹತ್ವದ ಪಾತ್ರ ವಹಿಸಬೇಕಾಗಿರುವುದರಿಂದ ಅದರ ರಚನೆ ಮತ್ತು ಕಾರ್ಯ ವಿಧಾನವನ್ನು ಅರ್ಥೈಸಿಕೊಂಡು ಈ ಕೆಳಗೆ ವಿವರಿಸಿರುವಂತೆ ತ್ವರಿತವಾಗಿ ಕಾರ್ಯೋನ್ಮುಖರಾಗ ಬೇಕು.

ಅರಣ್ಯ ಹಕ್ಕು ಸಮಿತಿಯ ರಚನೆ ಮತ್ತು ಕಾರ್ಯ ವಿಧಾನ:-

ಅರಣ್ಯ ಹಕ್ಕು ಮಾನ್ಯ ಮಾಡುವ ಕಾರ್ಯದಲ್ಲಿ ಅರಣ್ಯ ಹಕ್ಕು ಸಮಿತಿಯು ಮಹತ್ವದ ಪಾತ್ರ ವಹಿಸಬೇಕಾಗಿರುವುದರಿಂದ ಅದರ ರಚನೆ ಮತ್ತು ಕಾರ್ಯ ವಿಧಾನವನ್ನು ಅರ್ಥೈಸಿಕೊಂಡು ಈ ಕೆಳಗೆ ವಿವರಿಸಿರುವಂತೆ ತ್ವರಿತವಾಗಿ ಕಾರ್ಯೋನ್ಮುಖರಾಗ ಬೇಕು.

 1. ಅರಣ್ಯ ಹಕ್ಕು ಸಮಿತಿಯ ರಚನೆ:- ಅರಣ್ಯ ಕಾರ್ಯಾಚರಣೆಗಳಿಗಾಗಿ ಅರಣ್ಯದ ಒಳಗೆ ಸ್ಥಾಪಿಸಿರುವ ಗ್ರಾಮ ಅಥವಾ ಅರಣ್ಯ ಮೀಸಲು ಗ್ರಾಮಗಳಾಗಿ ಪರಿವರ್ತನೆಯಾಗಿರುವ ವಾಸದ ಪ್ರದೇಶ ಅಥವಾ ಅರಣ್ಯ ಪ್ರದೇಶದಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿರುವ ಅಥವಾ ಇತರೆ ಬಳಕೆಗಾಗಿ ಸರ್ಕಾರವು ಅನುಮತಿ ನೀಡಿರುವ ಭೂಮಿಗಳನ್ನು ಹೊಂದಿರುವ ಸ್ಥಳಗಳಿಗೆ ಅರಣ್ಯ ಗ್ರಾಮಗಳೆಂದು ಕರೆಯಲಾಗುತ್ತದೆ.
 2. ಗ್ರಾಮ ಪಂಚಾಯ್ತಿ ಕಾರ್ಯದರ್ಶಿ/ ಅಭಿವೃದ್ದಿ ಅಧಿಕಾರಿಯು ಗ್ರಾಮ ಸಭೆಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿ ಗ್ರಾಮ ಸಭೆಯನ್ನು ಕರೆಯುವುದು. ಮೇಲೆ ತಿಳಿಸಿದಂತೆ ಅರಣ್ಯ ಗ್ರಾಮಗಳಾಗಿ ಪರಿಗಣಿಸಲಾದ ಗ್ರಾಮಗಳಲ್ಲಿ ಗ್ರಾಮದ ಎಲ್ಲಾ ವಯಸ್ಕ ಸದಸ್ಯರ ಸಭೆ ಕರೆದು ಅರಣ್ಯ ಹಕ್ಕು ಸಮಿತಿಯನ್ನು ರಚನೆ ಮಾಡಬೇಕು. ಗ್ರಾಮ ಸಭೆಯ ಕೋರಂ ಗ್ರಾಮದ ವಯಸ್ಕ ಜನಸಂಖ್ಯೆಯ 2/3 ರಷ್ಟು ಹಾಜರಿರತಕ್ಕದ್ದು.

  ಅರಣ್ಯ ಹಕ್ಕು ಸಮಿತಿಯ ಸದಸ್ಯರನ್ನು ಆಯ್ಕೆ ಮಾಡುವಾಗ ಮಹಿಳೆಯರಿಗೆ ಪ್ರಾತಿನಿಧ್ಯತೆ ನೀಡಬೇಕು. ಗ್ರಾಮದಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಎಲ್ಲಾ ವಿವಿದ ಜನಸಂಖ್ಯೆ ಇದ್ದಾಗ ಅನುಸೂಚಿತ ಬುಡಕಟ್ಟು ಕೃಷಿ ಪೂರ್ವ ಸಮುದಾಯದ ಸದಸ್ಯರು ಸಾಕಷ್ಟು ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಅರಣ್ಯ ಹಕ್ಕು ಕ್ಲೇಮುದಾರರು ಸದಸ್ಯರಾಗಿದ್ದಲ್ಲಿ ಕ್ಲೇಮು ಪರಿಶೀಲನಾ ಕಾರ್ಯದಲ್ಲಿ ಅವರಿಗೆ ಅವಕಾಶ ನೀಡಬಾರದು. ಆಯ್ಕೆಯಾದ ಸದಸ್ಯರ ಪಟ್ಟಿಯನ್ನು  ನಮೂನೆ-2 ರ ಮಾದರಿಯಲ್ಲಿ ಸಿದ್ದಪಡಿಸಬೇಕು.

 3. ಅರಣ್ಯ ಹಕ್ಕು ಸಮಿತಿಯ ಕಾರ್ಯ ವಿಧಾನ:- ಅರಣ್ಯ ಹಕ್ಕು ಸಮಿತಿಯು ಗ್ರಾಮ ಸಭೆಯ ಪ್ರತಿನಿಧಿಯಾಗಿ ಈ ಕೆಳಗಿನಂತೆ ಕಾರ್ಯ ನಿರ್ವಹಿಸಬೇಕು.
 1. ಮೊದಲನೇ ಹಂತದ ಕಾರ್ಯಗಳು :-
  • ಅರಣ್ಯ ಹಕ್ಕು ಸಮಿತಿಯು ಅರಣ್ಯ ಹಕ್ಕು ಸಮಿತಿಯ ಠರಾವು ಪುಸ್ತಕ, ಸಭಾ ಹಾಜರಾತಿ ಪುಸ್ತಕ, ಸಭೆಯ ನೋಟಿಸ್ ಕಡತ, ಕ್ಲೇಮ್‍ದಾರರ ಅರ್ಜಿಗಳ ಕಡತ, ಕ್ಲೇಮ್‍ದಾರರ ಪಟ್ಟಿಗಳ ವಹಿ, ಕ್ಲೇಮ್‍ದಾರರು ನೀಡುವ ಸಾಕ್ಷ್ಯಾಧಾರಗಳು ಇತ್ಯಾಧಿ ದಾಖಲೆಗಳನ್ನು ಕಾಯ್ದಿರಿಸಿ ನಿರ್ವಹಿಸಬೇಕು.
  • ಅರಣ್ಯ ಹಕ್ಕು ಸಮಿತಿಯು ಅರಣ್ಯ ಹಕ್ಕು ಕ್ಲೇಮ್‍ದಾರರು ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ನಿಗಧಿಪಡಿಸಿ, ಸದರಿ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸುವಂತೆ ನೋಟಿಸ್ ಅಥವಾ ಡಂಗೂರ ಸಾರುವುದರ ಮೂಲಕ ಪ್ರಚಾರಗೊಳಿಸಬೇಕು.
  • ನಿಗಧಿಪಡಿಸಿದ ದಿನಾಂಕದ ವರೆಗೆ ಬಂದ ಎಲ್ಲಾ ಕ್ಲೇಮುದಾರರ ಅರ್ಜಿಗಳನ್ನು ನಿರ್ಧಿಷ್ಟಪಡಿಸಿದ ನಮೂನೆ, ಕ್ಲೇಮುಗಳ ಸಾಕ್ಷ್ಯಾದಾರಗಳನ್ನು ಅರಣ್ಯ ಹಕ್ಕು ಸಮಿತಿಯು ಸ್ವೀಕರಿಸಿ ಕಡತದಲ್ಲಿ ಇಟ್ಟಿಕೊಳ್ಳುವುದು ಹಾಗೂ ಪ್ರತಿಯೊಬ್ಬ ಕ್ಲೇಮುದಾರರಿಗೆ ಲಿಖಿತ ಸ್ವೀಕೃತಿಯನ್ನು ನಮೂನೆ-3 ರಂತೆ ನೀಡತಕ್ಕದ್ದು,
  • ಸ್ವೀಕರಿಸಿದ ಕ್ಲೇಮುದಾರರ ಅರ್ಜಿಗಳನ್ನು ನಮೂನೆ-4ರ ಮಾದರಿಯ ವಹಿ(ರಿಜಿಸ್ಟರ್) ಯಲ್ಲಿ ಕ್ಲೇಮುದಾರರ ಪಟ್ಟಿಯನ್ನು ಸಿದ್ದಪಡಿಸಬೇಕು.
  • ಕ್ಲೇಮುಗಳ ಪಟ್ಟಿಯನ್ನು ಸಿದ್ದಪಡಿಸುವ ಹಂತದಲ್ಲಿ ಯಾರಾದರೂ ಕ್ಲೇಮುದಾರರು ನಿಯಮಾನುಸಾರ ಸಹಿಯನ್ನು ಹಾಕದಿದ್ದಲ್ಲಿ ಅಥವಾ ಕ್ಲೇಮು ಅರ್ಜಿಯನ್ನು ಸರಿಯಾಗಿ ತುಂಬದಿದ್ದಲ್ಲಿ ಅಥವಾ ಸೂಕ್ತ ದಾಖಲೆಯನ್ನು ಮತ್ತು ಸಾಕ್ಷ್ಯವನ್ನು ಒದಗಿಸದಿದ್ದಲ್ಲಿ ಅದನ್ನು ಕ್ಲೇಮುದಾರರ ಗಮನಕ್ಕೆ ತರಬೇಕು ಮತ್ತು ಸೂಕ್ತ ಮಾಹಿತಿ/ ದಾಖಲೆಯನ್ನು ಒದಗಿಸುವಂತೆ ತಿಳಿಸಬೇಕು.
  • ಕ್ಲೇಮುದಾರರು ಅರ್ಜಿ ಸಲ್ಲಿಸಿದ ಅರಣ್ಯ ಭೂಮಿಯನ್ನು ಗುರುತಿಸಲು/ ಪರಿಶೀಲಿಸಲು ಬೇಕಾಗುವ ಅಗತ್ಯ ಗ್ರಾಮ ನಕಾಶೆ ಮತ್ತು ಪಹಣಿಯ ಪ್ರತಿಗಳನ್ನು ತಹಶೀಲ್ದಾರರ ಕಛೇರಿಯಲ್ಲಿ ಹಾಗೂ ಅರಣ್ಯ ನಕಾಶೆಯು (ಖಈಔ, ಆಅಈ, Pಈ) ವಿಭಾಗೀಯ ಅರಣ್ಯ ಕಛೇರಿಯಲ್ಲಿ ಅರಣ್ಯ ಹಕ್ಕು ಸಮಿತಿಯು ಪಡೆಯಬೇಕು.
  • ಎರಡನೇ ಹಂತದ ಕಾರ್ಯಗಳು:-
  • ಕ್ಲೇಮುಗಳ ಪರಿಶೀಲನೆಗೆ ಸಂಬಂಧಿಸಿದಂತೆ ಅರಣ್ಯ ಹಕ್ಕು ಸಮಿತಿಯ ಸಭೆಯ ದಿನಾಂಕ, ಸ್ಥಳ ಮತ್ತು ವೇಳೆಯನ್ನು ನಿಗಧಿಪಡಿಸಿ ಏಳು ದಿವಸಗಳ ಮುಂಚಿತವಾಗಿಯೇ ಸದಸ್ಯರಿಗೆ ನೋಟಿಸ್ ತಲುಪಿಸಿ ಸಭೆ ನಡೆಸಬೇಕು ಹಾಗೂ ಸಭೆಯಲ್ಲಿ ಸದಸ್ಯರೆಲ್ಲರೂ ಹಾಜರಿರುವುದನ್ನು ಖಾತರಿಪಡಿಸಿಕೊಳ್ಳುವುದು.

  • ಸಭೆಯ ಪೂರ್ವದಲ್ಲಿ ತಯಾರಿಸಿದ ಕ್ಲೇಮುಗಳ ಪಟ್ಟಿಯನ್ನು ಸದಸ್ಯರಿಗೆ ಹಂಚಿ ಪರಿಶೀಲನೆ ಹಾಗೂ ಚರ್ಚೆಗೆ ಅವಕಾಶ ಮಾಡಿಕೊಡುವುದು.
  • ಕ್ಲೇಮುಗಳ ಸ್ಥಳ ಪರಿಶೀಲನೆಗಾಗಿ ಭೇಟಿ ನೀಡುವ ದಿನಾಂಕ ಮತ್ತು ವೇಳೆಯನ್ನು ಚರ್ಚಿಸಿ ನಿಗಧಿಪಡಿಸುವುದು.
  • ಕ್ಲೇಮುದಾರರ ಸಂಖ್ಯೆ ಹೆಚ್ಚಾಗಿದ್ದಲ್ಲಿ, ಅವರನ್ನು ಗುಂಪುಗಳನ್ನಾಗಿ ಮಾಡಿ, ಪ್ರತಿ ಗುಂಪಿಗೆ ಪರಿಶೀಲನಾ ದಿನಾಂಕ ಹಾಗೂ ಸಮಯ ನಿಗಧಿಪಡಿಸಿ ಕ್ಲೇಮುದಾರರು, ಸದಸ್ಯರು, ಅರಣ್ಯ ಹಕ್ಕು ಸಮಿತಿ ಇಲಾಖೆ ಮತ್ತು ಕಂದಾಯ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಿಗೆ  ನೋಟಿಸ್ ನೀಡಬೇಕು..
  • ಕ್ಲೇಮುಗಳ ಪಟ್ಟಿಯನ್ನು ತಯಾರಿಸುವಾಗ ಒಂದೇ ಜಾಗಕ್ಕೆ ಒಂದಕ್ಕಿಂತ ಹೆಚ್ಚು ಜನರು ಅರ್ಜಿ ಸಲ್ಲಿಸಿದಂತಹ ವಿವಾದಿತ ಪ್ರಕರಣಗಳಿದ್ದಲ್ಲಿ ಅವರ ಅಭಿಪ್ರಾಯಗಳನ್ನು ಪಡೆಯಲು ಎಲ್ಲಾ ಕ್ಲೇಮುದಾರರಿಗೆ ಒಂದೇ ದಿನಾಂಕ ಹಾಗೂ ಸಮಯವನ್ನು ನಿಗಧಿಪಡಿಸಬಹುದು.
  • ಕ್ಲೇಮುಗಳ ಸ್ಥಳ (ಕ್ಷೇತ್ರ) ಪರಿಶೀಲನಾ ದಿನಾಂಕ ಮತ್ತು ಅದಕ್ಕೆ ಸಂಬಂಧಿಸಿದ ನೋಟಿಸನ್ನು ನೀಡುವ ದಿನಾಂಕದ ಮದ್ಯ ಕನಿಷ್ಟ ಹತ್ತರಿಂದ ಹದಿನೈದು ದಿನಗಳ ಅಂತರವಿರುವುದನ್ನು ಖಚಿತಪಡಿಸಿಕೊಳ್ಳುವುದು.
  • ಸಭೆಯ ಮುಕ್ತಾಯದ ಪೂರ್ವದಲ್ಲಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಎಲ್ಲರಿಗೂ ಮನವರಿಕೆ ಮಾಡಿ ಸಭೆಯಲ್ಲಿ ಭಾಗವಹಿಸಿದ ಸದಸ್ಯರೆಲ್ಲರ ಸಹಿಯನ್ನು ಹಾಜರಾತಿ ಪುಸ್ತಕ ಮತ್ತು ಠರಾವು ಪುಸ್ತಕದಲ್ಲಿ ಮಾಡಿಸಿಕೊಳ್ಳಬೇಕು.
  • ಅರಣ್ಯ ಹಕ್ಕು ಸಮಿತಿಯೂ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಎಲ್ಲಾ ಕ್ಲೇಮುದಾರರಿಗೆ/ ಸದಸ್ಯರಿಗೆ ತಿಳಿಸುವುದು.
  • ಉಪ ವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಕ್ಲೇಮು ಪರಿಶೀಲನಾ ದಿನಾಂಕ ಮತ್ತು ವೇಳೆಯನ್ನು ಲಿಖಿತವಾಗಿ ತಿಳಿಸುವುದು.
  • ಉಪ ವಿಭಾಗೀಯ ಮಟ್ಟದ ಸಮಿತಿಗೆ ಕಳುಹಿಸಿದ ಪತ್ರದ ನಕಲನ್ನು ದಾಖಲೆಗಳ ಕಡತದಲ್ಲಿ ಇಟ್ಟುಕೊಳ್ಳುವುದು.
  • ಮೂರನೇ ಹಂತದ ಕಾರ್ಯಗಳು:-
  • ಅರ್ಜಿದಾರರ ಕ್ಲೇಮುಗಳ ಪರಿಶೀಲನೆಗೆ ಸ್ಥಳ ಭೇಟಿ, ಮತ್ತು ನಕಾಶೆ ತಯಾರಿಸುವುದು.

  • ಕ್ಷೇತ್ರ ಪರಿಶೀಲನೆಗೆ ಹೊರಡುವ ಮೊದಲು, ಸಂಬಂಧಿಸಿದ ಎಲ್ಲಾ ದಾಖಲೆಗಳು ಅಂದರೆ ಕ್ಲೇಮು ಅರ್ಜಿಗಳು, ಕ್ಲೇಮುಗಳ ಕ್ರೋಢೀಕೃತ ವರದಿ, ಗ್ರಾಮ ನಕಾಶೆ, ಅರಣ್ಯ ನಕಾಶೆ, ಪಹಣಿ ಪತ್ರಿಕೆ, ಬಿಳಿಹಾಳೆ/ನೋಟ್ ಬುಕ್, ಪೆನ್ನು ಮತ್ತು ಪೆನ್ಸಿಲ್, ಮಾರ್ಕರ್ ಪೆನ್ ಇತ್ಯಾಧಿಗಳು ಪರಿಶೀಲನಾ ತಂಡದವರು ತೆಗೆದುಕೊಂಡು ಹೋಗುವುದು.
  • ಸ್ಥಳ ಪರಿಶೀಲನಾ ಭೇಟಿ ನೀಡುವ ಸಂದರ್ಭದಲ್ಲಿ ನೋಟಿಸ್‍ನ್ನು ಕಳುಹಿಸಿದ ಎಲ್ಲಾ ಕ್ಲೇಮುದಾರರು, ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿರುವುದನ್ನು ಖಚಿತಪಡಿಸಿಕೊಳ್ಳುವುದು.
  • ಕ್ಲೇಮ್‍ಗಳಿಗೆ ಸಂಬಂಧಿಸಿದ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ, ಕ್ಲೇಮ್‍ನ ಸ್ವರೂಪವನ್ನು ಪರಿಶೀಲಿಸಿ ನಕಾಶೆಗಳ ಸಹಾಯದಿಂದ ಕ್ಲೇಮ್ ಮಾಡಿದ ಭೂಮಿ ಅರಣ್ಯ ಪ್ರದೇಶದಲ್ಲಿದೆಯೇ ಎನ್ನುವುದನ್ನು ನಿರ್ಧರಿಸಿಕೊಳ್ಳಬೇಕು ಹಾಗೂ ಅಲ್ಲಿ ಕಂಡಿದ್ದನ್ನು ದಾಖಲಿಸಬೇಕು ಉದಾಹರಣೆಗೆ:- ಕ್ಲೇಮಿನ ಭೌತಿಕ ಲಕ್ಷಣಗಳು ಅಂದರೆ ಭೂಮಿ ಸುಧಾರಣೆ - ಭೂಮಿಯನ್ನು ಸಮತಟ್ಟುಗೊಳಿಸಿದ್ದು, ನೀರು ಸಂಗ್ರಹಣಾ ವ್ಯವಸ್ಥೆಗಳು, ಬಾವಿಗಳು, ಸ್ಮಶಾನ ಭೂಮಿ, ಪವಿತ್ರ ಸ್ಥಳಗಳು ಇತ್ಯಾಧಿಗಳನ್ನು ದಾಖಲಿಸಬೇಕು.  ಇವು ಬಹಳ ಮುಖ್ಯವಾಗಿದ್ದು, ಕ್ಲೇಮುದಾರನ ಪರವಾಗಿ ಇವು ಸಾಕ್ಷಿಗಳಾಗಿ ಕೆಲಸ ಮಾಡುತ್ತವೆ.
 2. ಕ್ಲೇಮು ಮಾಡಿದ ಪ್ರದೇಶ, ಕ್ಲೇಮ್ ಅರ್ಜಿಯಲ್ಲಿ ನಮೂಧಿಸಿದ ಪ್ರದೇಶಕ್ಕೆ ಹೊಂದಾಣಿಕೆಯಾಗದಿದ್ದಲ್ಲಿ, ಅದನ್ನು ಕ್ಲೇಮುದಾರರ ಗಮನಕ್ಕೆ ತಂದು ವಾಸ್ತವಿಕತೆಯನ್ನು ಆಧರಿಸಿ ಸೂಕ್ತ ಬದಲಾವಣೆ ಮಾಡುವುದು.
 3. ಖುದ್ದು ಪರಿಶೀಲನೆಯ ಸಂದರ್ಭದಲ್ಲಿ, ಕ್ಲೇಮುದಾರರು, ಹೆಚ್ಚುವರಿ ಸಾಕ್ಷಿ, ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳನ್ನು  ನೀಡಿದ್ದಲ್ಲಿ ಪರಿಶೀಲಿಸಿ ಖಚಿತ ಪಡಿಸಿಕೊಳ್ಳುವುದು.
 4. ಗುರುತಿಸುವಂತಹ ಪ್ರಮುಖ ಭೂ ಗುರುತುಗಳನ್ನು ನಮೂಧಿಸಿ ಪ್ರತಿಯೊಂದು ಕ್ಲೇಮಿನ ಪ್ರದೇಶವನ್ನು ತೋರಿಸುವ ನಕ್ಷೆಯನ್ನು ಸಿದ್ದಪಡಿಸಬೇಕು. (ಉದಾ:- ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಇತ್ಯಾಧಿ).
 5. ನಕ್ಷೆಯನ್ನು ಸಿದ್ದಪಡಿಸಿದ ನಂತರ, ಇದರ ಮೇಲೆ ಕ್ಲೇಮುದಾರರ ಹೆಸರು ಅಥವಾ ಅವರನ್ನು ಸೂಚಿಸುವ ಸಂಖ್ಯೆಯನ್ನು ಬರೆಯತಕ್ಕದ್ದು ಮತ್ತು ಅದನ್ನೂ ಕ್ಲೇಮು ಅರ್ಜಿಯಲ್ಲಿ ನಮೂಧಿಸಬೇಕು.  ಇದರಿಂದ ನಕಾಶೆಯನ್ನು ಕ್ಲೇಮು ಅರ್ಜಿಗೆ ಸೇರಿಸುವುದಕ್ಕೆ ಅನುಕೂಲವಾಗುತ್ತದೆ.
 6. ಖುದ್ದು ಸ್ಥಳ ಪರಿಶೀಲನೆ ಭೇಟಿ ಸಮಯದಲ್ಲಿ ಪ್ರತಿ ಕ್ಲೇಮಿನ ಸ್ಥಳ ಪರಿಶೀಲನಾ ವರದಿಯನ್ನು ನಮೂನೆ-5ರಂತೆ ಸಿದ್ದಪಡಿಸುವುದು.
 7. ನಾಲ್ಕನೇ ಮತ್ತು ಅಂತಿಮ ಹಂತದ ಕಾರ್ಯಗಳು:-
 8. ಕ್ಷೇತ್ರ (ಸ್ಥಳ) ಪರಿಶೀಲನಾ ಭೇಟಿ ಪೂರ್ಣಗೊಳಿಸಿದ ನಂತರ ಅಂತಿಮ ನಕ್ಷೆ ಮತ್ತು ಪರಿಶೀಲನಾ ವರದಿಯನ್ನು ಸಿದ್ದಪಡಿಸುವುದು.

  • ಕ್ಷೇತ್ರ ಪರಿಶೀಲನೆಯ ಸಂದರ್ಭದಲ್ಲಿ ಗಮನಿಸಲಾದ ಅಂಶಗಳು, ಕಂಡು ಕೊಂಡ ವಾಸ್ತವಗಳನ್ನು ಅಂತಿಮಗೊಳಿಸಿ, ದಾಖಲಿಸಿ, ಇವುಗಳನ್ನು ಕ್ರೂಢೀಕೃತ ಪಟ್ಟಿಯ ಷರಾ ಕಾಲಂನಲ್ಲಿ ಅಥವಾ ಕ್ಲೇಮುದಾರರ ರಿಜಿಸ್ಟರ್‍ನಲ್ಲಿ ಅಥವಾ ಒಂದು ಪ್ರತೇಕವಾದ ಹಾಳೆಯಲ್ಲಿ ದಾಖಲಿಸಬಹುದು.
  • ಕ್ಷೇತ್ರ ಪರಿಶೀಲನೆಯ ಮುಗಿದ ನಂತರ, ಪ್ರತಿಯೊಬ್ಬ ಕ್ಲೇಮುದಾರರು ಕ್ಲೇಮ್                ಮಾಡಿದ ಪ್ರದೇಶ - ಅದರ ನಿರ್ಧಿಷ್ಟ ಸ್ಥಳ, ಒಟ್ಟು ಪ್ರದೇಶ, ಕ್ಲೇಮುದಾರನ ಹೆಸರು ಇವುಗಳನ್ನೊಳಗೊಂಡ ಒಂದು ಕಚ್ಚಾ ನಕ್ಷೆಯನ್ನು ಅರಣ್ಯ ಹಕ್ಕು ಸಮಿತಿಯ ಕಾರ್ಯದರ್ಶಿ ಸಿದ್ದಪಡಿಸಬೇಕು.
  • ಸಿದ್ದಪಡಿಸಿದ ನಕ್ಷೆಯಲ್ಲಿ ನಮೂಧಿಸಿದ ಪ್ರದೇಶ ಸಂಖ್ಯೆಯನ್ನು ಕ್ಲೇಮುದಾರರ ಹೆಸರಿನ ಮುಂದೆ ಬರೆದು ವರದಿಯನ್ನು ಅರಣ್ಯ ಹಕ್ಕು ಸಮಿತಿಯ ಕಾರ್ಯದರ್ಶಿಗಳು ಸಿದ್ದಪಡಿಸುವುದು.
  • ಅರಣ್ಯ ಹಕ್ಕು ಸಮಿತಿಯ ಸಭೆ ಕರೆದು, ಸಿದ್ದಪಡಿಸಿದ ವರದಿಯನ್ನು ಸಭೆಯ ಪರಿಶೀಲನೆಗೆ ಮಂಡಿಸಿ, ಸಭೆಯಲ್ಲಿ ಪ್ರತಿ ಕ್ಲೇಮಿನ ಅಂತಿಮ ವರದಿಯನ್ನು ನಮೂನೆ-6ರಲ್ಲಿ ತಯಾರಿಸುವುದು.
  • ಅರಣ್ಯ ಹಕ್ಕುಗಳ ಮಾನ್ಯ ಮಾಡುವ ಬಗ್ಗೆ ಗ್ರಾಮ ಸಭೆಯಲ್ಲಿ ಕ್ಲೇಮುದಾರರ ಸಂಬಂಧ ಸಿದ್ದಪಡಿಸಿದ ಅಂತಿಮ ವರದಿಯ ಬಗ್ಗೆ ಚರ್ಚಿಸಿ ಪ್ರತಿಯೊಂದು ಕ್ಲೇಮಿನ ಬಗ್ಗೆ ತೀರ್ಮಾನ ತೆಗೆದುಕೊಂಡು ಅರಣ್ಯ ಹಕ್ಕು ಮಾನ್ಯ ಮಾಡಲು ನಮೂನೆ-7ರಲ್ಲಿ ಶಿಫಾರಸ್ಸಿನೊಂದಿಗೆ ವರದಿಯನ್ನು ಉಪ ವಿಭಾಗೀಯ ಅರಣ್ಯ ಹಕ್ಕು ಸಮಿತಿಗೆ ಕಳುಹಿಸಬೇಕು.
  • ಅರಣ್ಯ ಹಕ್ಕು ಸಮಿತಿಯು ಮಾನ್ಯ ಮಾಡದೇ ಇರುವ ಕ್ಲೇಮುದಾರರು ಸಮಿತಿಯ ತೀರ್ಮಾನ ದಿನಾಂಕದಿಂದ 60 ದಿವಸದೊಳಗಾಗಿ ಉಪ ವಿಭಾಗೀಯ ಅರಣ್ಯ ಹಕ್ಕು ಸಮಿತಿಗೆ ಅಪೀಲು ಮಾಡಿಕೊಳ್ಳುವ ಹಕ್ಕು ಹೊಂದಿರುತ್ತಾರೆ.

  ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

3.02409638554
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top