ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅರಣ್ಯ ಹಕ್ಕು ಕಾಯ್ದೆ

ಅರಣ್ಯ ಹಕ್ಕು ಕಾಯ್ದೆ 2006 ರ ಸಂಕ್ಷಿಪ್ತ ಮಾರ್ಗಸೂಚಿ

 1. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಮಾನ್ಯ ಮಾಡುವ ಹಕ್ಕುಗಳು:-
 2. ಪರಿಶಿಷ್ಟ ಬುಡಕಟ್ಟಿನ ಸಮುದಾಯ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಈ ಕೆಳಗಿನಂತೆ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡಲಾಗುತ್ತದೆ.

  1. ಜೀನವ ನಿರ್ವಹಣೆಗಾಗಿ ಭೂಮಿಯನ್ನು ಹೊಂದುವ ಹಕ್ಕು (ಕಲಮು 3 (1) (ಎ));
  2. ಜಲಚರ ಉತ್ಪನ್ನಗಳು ಜಾನುವಾರುಗಳನ್ನು ಮೇಯಿಸುವ ಹಾಗೂ ಸಾಂಪ್ರದಾಯಿಕ        ಸಂಪನ್ಮೂಲಗಳನ್ನು ಹೊಂದುವ ಹಕ್ಕು;
  3. ವಿವಾಧಿತ ಮತ್ತು ಗುತ್ತಿಗೆ ಅರಣ್ಯ ಭೂಮಿಯ ಮೇಲಿನ ಹಕ್ಕು (ಕಲಮು 3 (1) (ಜಿ));
  4. ಅರಣ್ಯ ಭೂಮಿಗಳ ಸಂಬಂಧದಲ್ಲಿ ರಾಜ್ಯ ಸರ್ಕಾರ/ ಸ್ಥಳೀಯ ಸಂಸ್ಥೆಗಳು ನೀಡುವ  ಪಟ್ಟಾ, ಗುತ್ತಿಗೆ ಅಥವಾ ಮಂಜೂರಾತಿಗಳನ್ನು ಹಕ್ಕುಗಳಾಗಿ ಪರಿವರ್ತಿಸುವ ಅವಕಾಶ;
  5. ಅರಣ್ಯಗಳಲ್ಲಿನ ಎಲ್ಲಾ ಅರಣ್ಯ ಗ್ರಾಮಗಳು, ಹಳೆಯ ನೆಲಸು ಪ್ರದೇಶಗಳು ಮೋಜಣಿ ಮಾಡದ ಗ್ರಾಮಗಳು ಮತ್ತು ಇತರೇ ಗ್ರಾಮಗಳನ್ನೂ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಹಕ್ಕು (ಕಲಮು (3) (1) (ರ)).
  6. ಮಾನ್ಯ ಮಾಡಲಾಗಿರುವ ಅರಣ್ಯ ಹಕ್ಕು ಪಡೆಯುವ ವಿಧಾನ :-

  ಮಾನ್ಯ ಮಾಡಲಾಗಿರುವ ಮೇಲ್ಕಾಣಿಸಿದ ಅರಣ್ಯ ಹಕ್ಕುಗಳನ್ನು ಪಡೆಯುವ ವಿಧಾನಗಳು ಈ ಕೆಳಗಿನಂತಿವೆ.

  • ಭಾರತ ಸರ್ಕಾರದ ಅಧಿನಿಯಮ 2006 ಮತ್ತು ನಿಯಮಗಳು 2008 ಹಾಗೂ ನಿಯಮಗಳ ತಿದ್ದುಪಡಿ 2012ರ ಪ್ರಕಾರ ಪರಿಶಿಷ್ಟ ಪಂಗಡ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳು ದಿನಾಂಕ:13.12.2005 ಕ್ಕೆ ಮುಂಚೆ ಅರಣ್ಯದಲ್ಲಿ ವಾಸ ಅಥವಾ ಜೀವನೋಪಾಯಕ್ಕಾಗಿ ಅರಣ್ಯ ಪ್ರದೇಶಗಳ ಮೇಲೆ ಅವಲಂಬಿತರಾದವರು ಅರಣ್ಯ ಹಕ್ಕುಗಳ ಮಾನ್ಯತೆ ಪಡೆಯಲು ಅರ್ಹರಾಗಿರುತ್ತಾರೆ.
  • ಅರಣ್ಯ ವಾಸಿಗಳ ವೈಯಕ್ತಿಕ ಅರಣ್ಯ ಹಕ್ಕುಗಳನ್ನು ಕ್ಲೇಮ್ ಮಾಡುವವರು ಮನವಿಯನ್ನು ನಿಗಧಿತ ನಮೂನೆ -1ಎ, ನಮೂನೆ-1ಬಿ, ನಮೂನೆ-1ಸಿ ಗಳನ್ನು ಭರ್ತಿ ಮಾಡಿ ಅರಣ್ಯ ಹಕ್ಕುಗಳ ಸಮಿತಿಗೆ ಸಲ್ಲಿಸಿ, ಸ್ವೀಕೃತಿ ಪಡೆದುಕೊಳ್ಳಬೇಕು.
  • ಸಾಮೂಹಿಕ ಅರಣ್ಯ ಹಕ್ಕುಗಳ ಕ್ಲೇಮ್ ಮಾಡುವವರು ಮನವಿಯನ್ನು ನಿಗಧಿತ ನಮೂನೆ-1ಡಿ ರಲ್ಲಿ ಭರ್ತಿ ಮಾಡಿ ಅರಣ್ಯ ಹಕ್ಕುಗಳ ಸಮಿತಿಗೆ ಸಲ್ಲಿಸಿ, ಸ್ವೀಕೃತಿ ಪಡೆದುಕೊಳ್ಳಬೇಕು.
  • ಗ್ರಾಮ ಸಭೆಯಲ್ಲಿ ರಚಿಸಲಾದ ಅರಣ್ಯ ಹಕ್ಕು ಸಮಿತಿಯು ಗ್ರಾಮದ ಅರಣ್ಯ ವಾಸಿಗಳು ಸಲ್ಲಿಸಿದ ವೈಯಕ್ತಿಕ ಅಥವಾ ಸಾಮೂಹಿಕ ಕ್ಲೇಮ್‍ಗಳ ಅರ್ಜಿಗಳನ್ನು ಸ್ವೀಕರಿಸುವ, ಪಟ್ಟಿ ತಯಾರಿಸುವ, ಸಭೆ ಕರೆದು ಪರಿಶೀಲಿಸುವ, ಕ್ಷೇತ್ರ ಭೇಟಿ ನೀಡಿ ಪರಿಶೀಲನೆ ಮಾಡುವ ಮತ್ತು ಅಂತಿಮವಾಗಿ ಕ್ಲೇಮುದಾರರ ಹಕ್ಕು ಮಾನ್ಯ ಮಾಡುವ ಅಥವಾ ತಿರಸ್ಕರಿಸುವ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿರ್ವಹಿಸುತ್ತದೆ.
  • ಸರ್ಕಾರದಿಂದ ರಚಿಸಲಾದ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಉಪ ವಿಭಾಗೀಯ ಅರಣ್ಯ ಹಕ್ಕು ಸಮಿತಿಯು ಗ್ರಾಮ ಅರಣ್ಯ ಹಕ್ಕು ಸಮಿತಿ ಸಲ್ಲಿಸಿದ ಅರಣ್ಯ ಹಕ್ಕು ಕ್ಲೇಮ್ಸ್‍ಗಳನ್ನು ಪರಿಶೀಲಿಸಿ ಅನುಮೋದಿಸುವ ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿದೆ. ಅನುಮೋದನೆ ಮಾಡಿದ ಕ್ಲೇಮ್ಸ್‍ಗಳನ್ನು ಮಾನ್ಯ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಕಳುಹಿಸಬೇಕು.
  • ಜಿಲ್ಲಾ ಮಟ್ಟದ ಅರಣ್ಯ ಹಕ್ಕುಗಳ ಸಮಿತಿಯು ಸ್ವೀಕರಿಸುವ ಅರಣ್ಯ ಹಕ್ಕು ಕ್ಲೇಮ್ಸ್‍ಗಳನ್ನು ಸಭೆಯಲ್ಲಿ ಪರಿಶೀಲಿಸಿ ಮಾನ್ಯ ಮಾಡುವ ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿರುತ್ತದೆ.  ಈ ಸಮಿತಿಯಲ್ಲಿ ಅರಣ್ಯ ಹಕ್ಕು ಮಾನ್ಯತೆ ಪಡೆದ ಕ್ಲೇಮ್‍ದಾರರಿಗೆ ಉಪಭೋಗದ ಪಟ್ಟಾ ನೀಡಲಾಗುತ್ತದೆ. ಅರಣ್ಯ ಹಕ್ಕು ಕ್ಲೇಮ್‍ಗಳನ್ನು ಯಾವುದೇ ಹಂತದಲ್ಲಿ ತಿರಸ್ಕರಿಸಿದ್ದಲ್ಲಿ ಕ್ಲೇಮ್‍ದಾರರು ಪುನರ್ ಪರಿಶೀಲನೆಗೆ ಮನವಿ ಸಲ್ಲಿಸುವ ಹಕ್ಕು ಹೊಂದಿರುತ್ತಾರೆ.

  ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

3.05681818182
Anonymous Nov 13, 2019 09:12 AM

ಅರಣ್ಯದೋಳಗಡೆ ಕುಡಿಯುವ ನಿರಿಗೆ
ಕೊಳವೆ ಬಾವಿ ಕೊರೆಯಲು ಅವಕಾಶವಿದೆಯೆ?

ಕೃಷ್ಣಮೂರ್ತಿ ಇರುಳಿಗ,ರಾಮನಗರ Aug 27, 2019 08:52 AM

ಅರಣ್ಯ ಹಕ್ಕು ಕಾಯ್ದೆ ಯನ್ನು ಸರಿಯಾಗಿ ಓದಿ,

ಸೋಮಶೇಖರ Jul 15, 2016 08:24 PM

ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರು ಬಗರ್ ಹುಕಂಗೆ ಅರ್ಹರೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top