ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಉದ್ಯೋಗ ಯೋಜನೆ

ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ

ಸ್ವಯಂ ಉದ್ಯೋಗ ಯೋಜನೆ

 • . ನಿರುದ್ಯೋಗಿಗಳಿಗೆ ರೂ. 1.00 ಲಕ್ಷಕ್ಕೆ ಒಳಪಟ್ಟ ಯೋಜನೆಗಳು
 • ಹೈನುಗಾರಿಕೆ, ಸಣ್ಣ ವ್ಯಾಪಾರ, ದಿನಸಿ ಅಂಗಡಿ, ಸೈಕಲ್ ಶಾಪ್, ಸಣ್ಣ ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳಿಗೆ ಬ್ಯಾಂಕುಗಳ ಸಹಯೋಗದೊಂದಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವುದು.
 • ಘಟಕದ ವೆಚ್ಚದ ಶೇ.50 ಭಾಗ/ಗರಿಷ್ಠ ರೂ.35,000/- ಪ್ರತಿ ಫಲಾನುಭವಿಗೆ ಸಹಾಯ ಧನ’
 • ಘಟಕ ಪ್ರಾರಂಬಿಸಲು ಸಾಲ ಸೌಲಭ್ಯಗಳನ್ನು ಬ್ಯಾಂಕುಗಳ ಮೂಲಕ ಕಲ್ಪಿಸಲಾಗುತ್ತದೆ.

ನಿರುದ್ಯೋಗಿಗಳಿಗೆ ರೂ. 1.00 ಲಕ್ಷಕ್ಕೆ ಮೇಲ್ಪಟ್ಟ ಯೋಜನೆಗಳು

 • ಸಣ್ಣ ಕೈಗಾರಿಕೆ, ಟಾಟಾ ಇಂಡಿಕಾ, ಆಟೋರಿಕ್ಷಾ, ಟ್ರಾಕ್ಟ್‍ರ್ ಮತ್ತು ಟ್ರೈಲರ್, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ವ್ಯಾಪಾರ, ವಕೀಲರ ಕಛೇರಿ, ಬ್ಯೂಟಿ ಪಾರ್ಲರ್, ರೆಡಿಮೇಡ್ ಗಾರ್ಮೆಂಟ್ಸ್, ಡಿ.ಟಿ.ಪಿ. ಸೆಂಟರ್, ಮಿನಿಡೈರಿ ಇತ್ಯಾದಿ.
 • ಘಟಕದ ವೆಚ್ಚದ ಶೇ. 33 ಭಾಗ/ಗರಿಷ್ಠ ರೂ. 1.00 ಪ್ರತಿ ಫಲಾನುಭವಿಗೆ ಸಹಾಯ ಧನ’
 • ಘಟಕ ಪ್ರಾರಂಬಿಸಲು ಸಾಲ ಸೌಲಭ್ಯಗಳನ್ನು ಬ್ಯಾಂಕುಗಳ ಮೂಲಕ ಕಲ್ಪಿಸಲಾಗುತ್ತದೆ.

ಮೈಕ್ರೋ ಕ್ರೆಡಿಟ್ ಯೋಜನೆ

ಮಹಿಳಾ ಕಿಸಾನ್ ಯೋಜನೆ:-

ಮಹಿಳಾ ಕಿಸಾನ್ ಯೋಜನೆ 40,000 ಕ್ಕಿಂತ ಕಡಿಮೆ ಆದಾಯ ಇರುವ ಸಣ್ಣ ಮತ್ತು ಅತೀ ಸಣ್ಣ ಪರಿಶಿಷ್ಟ ಜಾತಿಯ ಮಹಿಳಾ ರೈತರಿಗೆ ನಿಗಮದಿಂದ ಬೇಸಾಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ.50,000/- ಮಂಜೂರು ಮಾಡಿ ಅದರಲ್ಲಿ ನಿಗಮದಿಂದ ಗರಿಷ್ಠ ಸಹಯ ಧನ 10,000/- ಬೀಜ ಧನ 10,000/- ಮತ್ತು 30,000=00 ಸಾಲ ರೂಪದಲ್ಲಿ ಶೇಕಡ 50ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ.

ಭೂ ಒಡೆತನ ಯೋಜನೆ

ಪರಿಶಿಷ್ಟ ಜಾತಿಗೆ ಸೇರಿದ ಭೂ ರಹಿತಿ ಕೃಷಿ ಕಾರ್ಮಿಕ ಕುಟುಂಬದ ಮಹಿಳೆಯೂ ಮಾತ್ರ ಭೂ ಖರೀದಿಸಲು ಘಟಕ ವೆಚ್ಚ ಗರಿಷ್ಠ ರೂ. 10 ಲಕ್ಷದ ವರೆಗೆ ಇದ್ದು. ಸೇ.50ರ ಭಾಗ ಸಹಾಯ ಧನ ಹಾಗೂ ಶೇ. 50ರ ಭಾಗ ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡಲಾಗುವುದು.

ವಾಸ ಸ್ಥಳದಿಂದ 5.00 ಕಿ.ಮೀ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಕನಿಷ್ಠ 2.00 ಎಕರೆ ಕೃಷಿ/ 1.00 ಎಕರೆ ತರಿ /1/2, ಎಕರೆ ಬಾಗಾಯ್ತು ಕಡಿಮೆ ಇಲ್ಲದಂತೆ ಒದಗಿಸಲಾಗುವುದು, ಸಾಲದ ಕಂತು 10 ವರ್ಷಗಳಾಗಿರುತ್ತದೆ.

ಗಂಗಾ ಕಲ್ಯಾಣ ಯೋಜನೆ

 • ವೈಯಕ್ತಿಕ ನೀರಾವರಿ ಕೊಳೆವೆ ಬಾವಿ ಯೋಜನೆ:-
 • ಎಕರೆಯಿಂದ 5.00 ಎಕರೆ ವರೆಗೆ ಭೂಮಿ ಹೊಂದಿರುವ ಪರಿಶಿಷ್ಟ ಜಾತಿಗೆ ಸೇರಿದ ಸಣ್ಣ ರೈತರಿಗೆ ನೀರಾವರಿ ಸೌಲಬ್ಯಕ್ಕಾಗಿ ಕೊಳೆವೆ ಬಾವಿ ಕೊರೆಸಿ ಪಂಪ್‍ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಲಾಗುವುದು.
 • ಘಟಕ ವೆಚ್ಚ ರೂ. 2.00 ಲಕ್ಷವಿದ್ದು, ಇದರಲ್ಲಿ ರೂ.1.50 ಲಕ್ಷ ಸಹಾಯ ಧನ ಉಳಿದ ರೂ. 50 ಸಾವಿರ ಸಾಲವಾಗಿದ್ದು ಶೇ. 6 ರ ಬಡ್ಡಿ ದರದಲ್ಲಿ 8 ವರ್ಷ ಅವಧಿಯಲ್ಲಿ ತೀರಿಸಬೇಕು.
 • ಸಾಮೂಹಿಕ ನೀರಾವರಿ /ಏತ ನೀರಾವರಿ ಯೋಜನೆ:-
 • ಸನ್ಣ ರೈತರಿಗೆ 2 ರಿಂದ 3 ಫಲಾಪೇಕ್ಷಿಗಳ 8 ರಿಂದ 15 ಎಕರೆ ಜಮೀನಿನಲ್ಲಿ 2 ರಿಂದ 3 ಕೊಳವೆ ಬಾವಿಗಳನ್ನು ಕೊರೆದು ಪಂಪ್ ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಲಾಗುವುದು. ಪೂರ್ಣ ವೆಚ್ಚ ಸಹಾಯ ಧನವಾಗಿರುತ್ತದೆ.
 • ಸಣ್ಣ ರೈತರಿಗೆ ಏತ ನೀರಾವರಿ ಯೋಜನೆಯಡಿಯ ಘಟಕದಲ್ಲಿ 3 ರಿಂದ 8 ಫಲಾನುಭವಿಗಳು ಇರುತ್ತಾರೆ. ಘಟಕದ ವೆಚ್ಚ 8.00 ಎಕರೆಗೆ ರೂ. 2.53 ಲಕ್ಷ ಮತ್ತು 15.00 ಎಕರೆಗೆ ರೂ. 3.59 ಲಕ್ಷ ಸಹಾಯ ಧನವಿರುತ್ತದೆ.
 • ಅರ್ಹತೆ:- 18 ವರ್ಷ ಮೇಲ್ಪಟ್ಟು, ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರಬೇಕು.
 • ಹೆಚ್ಚಿನ ಮಾಹಿತಿಗಾಗಿ ಡಾ. ಬಇ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೇಂದ್ರ ಕಛೇರಿ ಮತ್ತು ಜಿಲ್ಲಾ ಕಛೇರಿಗಳಲ್ಲಿ ಸಂಪರ್ಕಿಸುವುದು.

ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

3.27205882353
ಚಿದಾನಂದ. ಚಿತ್ರದುರ್ಗ Jun 17, 2017 03:01 PM

ನನು ಬಿಎ ಪದವಿ ಪಡೆದಿರುತ್ತೇನೆ. ಸರ್ಕಾರ ಎಲ್ಲರಿಗೂ ಉದ್ಯೋಗ ಖಾತ್ರಿ ಮಾಡುವುದಿಲ್ಲ ಸ್ವಯಂ ಉದ್ಯೋಗ ತರಬೇತಿ ಸರಿಯಾಗಿ ನೀಡಿ &ಚಿತ್ರದುರ್ಗ ಜಿಲ್ಲೆಯ ಖಾಸಗಿ ಕಂಪೆನಿಗಳು ನೀಡಿ

ಕನಕಪ್ಪ.ಎಮ್.ಕೆ Jun 01, 2017 09:30 AM

ನಾನು ಸತತ ಐದು ವರ್ಷಗಳಿಂದ ಅಂಬೇಡ್ಕರ ಅಭಿವೃದ್ದಿ ನಿಗಮದಲ್ಲಿ ಹೈನುಗಾರಿಕೆ ಹಾಗೂ ಪಶು ಭಾಗ್ಯ ಯೋಜನೆಗಳಿಗೆ ಅರ್ಜಿ ಹಾಕುತ್ತಾ ಬಂದಿದ್ದೇನೆ
ಮತ್ತು ಮಾನ್ಯ ಶಾಸಕರ ಮನೆಗೆ ಅಲೆದು ಕಾಲಲ್ಲಿ ಇರುವ ಚಪ್ಪಲ್ಲಿ ಸವೇದವೆ ವಿನಹ ನನಗೆ ಯೋಜನೆ
ದಕ್ಕಲಿಲ್ಲ ಕೇಳಿದರೆ ಪಿಯಗೆ ಹೆಳತಾರೆ ಪಿಯ ಆಗ ಮಾತ್ರ ಆಯಿತು ಅಂತಾರೆ ಆ ಮೇಲೆ ನಮ್ಮ ಹೆಸರು
ಇರೋದೆ ಇಲ್ಲ
ಯಾರಿಗೆ ಸರ್ ಈ ಯೋಜನೆ ಇರೋದು ನಾನು ಪರಿಶಿಷ್ಟ ಜಾತಿಯವನು ನಿಗಮ ಕೆಳುವ ಎಲ್ಲಾ ದಾಖಲೆನೂ ನನ್ನ ಹತ್ತಿರ ಇರುತ್ತವೆ ಆದರು ವರ್ಷ ನನ್ನ ಅರ್ಜಿ ರದ್ದು ಮಾಡುತ್ತಾರೆ ಕಚೇರಿಗೆ ಹೋಗಿ ಕೆಳಿದರೆ ನಾವೇನು ಮಾಡಾಕ ಆಗಲ್ಲ ಶಾಸಕರನ್ನ ಕೇಳಿ
ಅಂತಾರೆ ಹಿಂಗಾದರೆ ಹೇಗೆ ಸರ್ ಯೋಜನೆ ಹಾಗೂ ನಮ್ಮಂತವರ ಗತಿ ನನಗೆನೂ ಯಾವ ಆಸ್ತಿನೂ ಇಲ್ಲ ಎನೂ ಇಲ್ಲ

Malkappa h Apr 23, 2017 09:53 PM

Nimma yojane vallidu but adu badavajanakke muttavante ella and bankinailli salavanne kododilla adake nive poortiagi duddu nive kodabeku

ಈಶ್ವರ ದೊಡಮನಿ Mar 05, 2017 10:45 PM

ನಿಮ್ಮ ಯೋಜನೆಗಳು ಪ್ರಮುಖ ವ್ಯಕ್ತಿಗಳಿಗೆ ಮಾತ್ರ ಸೀಮಿತ ಬಡವರಿಗಲ್ಲ

ಸುಕುಮಾರ್ Feb 10, 2017 08:58 AM

ಪರಿಶಿಷ್ಟ ಜಾತಿಯವರಿಗೆ ಕೊಳವೆ ಬಾವಿಗಾಗಿ ಸಿಗುವ ಸಾಲಗಳ ಮಾಹಿತಿ ಮತ್ತು ಅರ್ಜಿ ಹಾಕುವ ವಿವರಗಳನ್ನು ದಯಮಾಡಿ ತಿಳಿಸಿ.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top