অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಂದಾಯ ಗ್ರಾಮ

ಕಂದಾಯ ಗ್ರಾಮ

ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳುವ ಮಾರ್ಗಸೂಚಿ

ತಾಂಡಾದ ಜನರು, ತಮ್ಮ ತಮ್ಮ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ  ಪರಿವರ್ತಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳು ಈ ಕೇಳಗಿನಂತಿವೆ.

ಸರ್ಕಾರದ ಕಂದಾಯ ಇಲಾಖೆಯ ಸುತ್ತೋಲೆ ದಿನಾಂಕ: 15.02.1993ರ ಪ್ರಕಾರ ತಾಂಡಾವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕೇಳಗಿನ ಅಳತೆಗೋಲುಗಳನ್ನು ನಿಗಧಿಪಡಿಸಿ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿತ್ತು.

  1. ಕುಟುಂಬಗಳ ಸಂಖ್ಯೆ   :                         60
  2. ಜನಸಂಖ್ಯೆ          :                         300
  3. ಜಮೀನಿನ ವಿಸ್ತೀರ್ಣ   :                        900 ಎಕರೆಗಳು
  4. ಮೂಲ ಗ್ರಾಮಕ್ಕೆ ಹೊಂದಿಕೊಂಡಿರಬಾರದು
  5. ಮಂಡಳ ಪಂಚಾಯಿತಿಗಳಿಂದ ಆಕ್ಷೇಪಣಿ ಇರಬಾರದು

ಈ ಸುತ್ತೋಲೆಯ ಪ್ರಕಾರ ಜಿಲ್ಲಾಧಿಕಾರಿಗಳು ಕಳುಹಿಸಿದ ಪ್ರಸ್ತಾವನೆಗಳನ್ನು ಆಧರಿಸಿ ಸುಮಾರು 371 ತಾಂಡಾಗಳು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಆದರೆ ವಾಸ್ತವಿಕವಾಗಿ ಜಾರಿಗೆ ಬಂದಿರುವುದಿಲ್ಲ. ಆದ್ದರಿಂದ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲ್ಪಟ್ಟ ತಾಂಡಾದ ಜನರು ಸಭೆ ಸೇರಿ ಈ ಬಗ್ಗೆ ಚರ್ಚಿಸಿ ಅರ್ಜಿಯನ್ನು ಬರೆದು ಪತ್ರದೊಂದಿಗೆ ಲಗತ್ತಿಸಿರುವ ನಮೂನೆಯನ್ನು ಗ್ರಾಮಲೆಕ್ಕಿಗರಿಂದ ಭರ್ತಿಮಾಡಿಸಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು.

ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವಲ್ಲಿ ಕಂಡುಬರುತ್ತಿರುವ ಅಡಚಣೆಗಳಿಗೆ ಪರಿಹಾರ ಸೂಚಿಸಲು ನೇಮಕಗೊಂಡ ಶ್ರೀ ನರಸಿಂಹಯ್ಯನವರ ನೇತ್ರುತ್ವದ ತಜ್ಞರ ಸಮಿತಿಯ ವರದಿಯನ್ನು ದಿನಾಂಕ: 28.10.2014 ರಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗಿದೆ.

ಈ ವರದಿಯಲ್ಲಿ ತಾಂಡಾವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕೆಳಕಂಡ ಮಾನದಂಡಗಳನ್ನು ಅನುಸರಿಸಿ ಹೊಸದಾಗಿ ಕಂದಾಯ ಗ್ರಾಮಗಳನ್ನಾಗಿ ರಚಿಸಲು ಸರ್ಕಾರಿ ಆದೇಶ ಹೋರಡಿಸುವಂತೆ ಸರ್ಕಾರಕ್ಕೆ  ಶಿಫಾರಸ್ಸು ಮಾಡಿರುತ್ತದೆ.

  1. ಕುಟುಂಬ ಸಂಖ್ಯೆ 50 ಅಥವಾ ಜನಸಂಖ್ಯೆ 250
  2. ಜಮೀನಿನ ವಿಸ್ತೀರ್ಣ ಸುಮಾರು 100 ಎಕರೆ
  3. ಮೂಲ ಗ್ರಾಮ ಠಾಣಕ್ಕೆ ಹೊಂದಿಕೊಂಡಿರಬಾರದು (ಅಂದಾಜು 1 ಕಿ.ಮಿ ಅಂತರ ಸೂಕ್ತ.)

ಮೇಲ್ಕಾಣಿಸಿದ ಅಂಶಗಳ ಬಗ್ಗೆ ತಾಂಡಾದಲ್ಲಿ ಸಭೆ ಸೇರಿ ತಾಂಡಾವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳುವ ಕುರಿತು ಚರ್ಚಿಸಿ ತಾಂಡಾದಲ್ಲಿ 50 ಕುಟುಂಬಗಳು ವಾಸವಾಗಿದ್ದಲ್ಲಿ ಅಥವಾ ತಾಂಡಾ ಜನಸಂಖ್ಯೆ 250 ಇದ್ದಲ್ಲಿ ಮತ್ತು ತಾಂಡಾವು ಮೂಲ ಗ್ರಾಮದಿಂದ ಸುಮಾರು ಒಂದು ಕಿ.ಮಿ ಅಂತರದಲ್ಲಿದ್ದಲ್ಲಿ ಅಂತಹ ತಾಂಡಾವು  ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಅರ್ಹವಾಗಿರುತ್ತದೆ. ಅಂತಹ ತಾಂಡಾವು ನಿಮಾರ್ಣವಾಗಿರುವ ಜಾಗ/ಸ್ಥಳದ ಬಗ್ಗೆ ಕೇಳಗಿನ ಅಂಶವನ್ನು ಪರಿಶೀಲಿಸಿ. ಯಾವ ವಿದಧ ಜಾಗದಲ್ಲಿ ತಾಂಡಾ ನಿರ್ಮಾಣವಾಗಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ಮತ್ತು ತಾಂಡಾದ ಜಾಗದ ಸರ್ವೆ ನಂ ಮತ್ತು ಪಹಣಿ(ಆರ್‍ಟಿಸಿ)ಯನ್ನು ಸಂಬಂಧಿಸಿದ ಕಛೇರಿಯಿಂದ ಪಡೆದುಕೊಳ್ಳಬೇಕು.

  1. ಅರಣ್ಯ:- (ಸಾಮಾಜಿಕ, ಮೀಸಲು, ಸಿ&ಡಿ ವರ್ಗ ಇತ್ಯಾಧಿ)
  2. ಸರ್ಕಾರಿ ಭೂಮಿ
  3. ಗೋಮಾಳ
  4. ಖಾಸಗಿ ಜಮೀನುಗಳ-(ತಾಂಡಾ ನಿವಾಸಿಗಳ ಮಾಲೀಕತ್ವ ಅಥವಾ ಬೆರೆಯವರ ಮಾಲೀಕತ್ವ)
  5. ಗ್ರಾಮ ಠಾಣದ ಜಾಗವೇ
  • ಅರಣ್ಯ:- (ಸಾಮಾಜಿಕ, ಮೀಸಲು, ಸಿ&ಡಿ ವರ್ಗ ಇತ್ಯಾಧಿ) ಜಾಗದಲ್ಲಿ ತಾಂಡಾವು ನಿರ್ಮಾಣಗೊಂಡಿದಲ್ಲಿ ಆ ಜಾಗದ ವಿವರವನ್ನು ಲಗತ್ತಿಸಿರುವ ನಮೂನೆಯಲ್ಲಿ ಗ್ರಾಮ ಲೆಕ್ಕಿಗರಿಂದ  ಭರ್ತಿಮಾಡಿಸಿ 2006ನೇ ಅಧಿ ನಿಯಮ ಪ್ರಕಾರಣ 3 (1)(ಹೆಚ್) ಮತ್ತು 2008ನೇ ನಿಯಮಗಳನ್ವಯ ಅರಣ್ಯ ಇಲಾಖೆಯ ಮೂಲಕ ಮಂಜೂರು ಮಾಡಿಸಿ ತಾಂಡಾದ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಕೋರಿ ತಹಸೀಲ್ದಾರವರಿಗೆ ಪತ್ರ ಬರೆಯಬೇಕು.
  • ಸರ್ಕಾರ ಜಮೀನು ಅಥವಾ ಗೋಮಾಳ ಅಥವಾ ಗ್ರಾಮ ಠಾಣ ಜಾಗದಲ್ಲಿ ತಾಂಡಾವು ನಿರ್ಮಾಣಗೊಂಡಿದಲ್ಲಿ ಆ ಜಾಗದ ವಿವರವನ್ನು ಲಗತ್ತಿಸಿರುವ ನಮೂನೆಯಲ್ಲಿ ಗ್ರಾಮ ಲೆಕ್ಕಿಗರಿಂದ ಭರ್ತಿಮಾಡಿ ಮಂಜೂರು ಮಾಡಿ ತಾಂಡಾದ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಕೋರಿ ತಹಸೀಲ್ದಾರವರಿಗೆ ಪತ್ರ ಬರೆಯಬೇಕು.
  • ಖಾಸಗಿ ಜಮೀನುಗಳ-(ತಾಂಡಾ ನಿವಾಸಿಗಳ ಮಾಲೀಕತ್ವ ಅಥವಾ ಬೆರೆಯವರ ಮಾಲೀಕತ್ವ) ಜಾಗದಲ್ಲಿ ತಾಂಡಾವು ನಿರ್ಮಾಣಗೊಂಡಿದಲ್ಲಿ ಆ ಜಾಗದ ವಿವರವನ್ನು ಲಗತ್ತಿಸಿರುವ ನಮೂನೆಯಲ್ಲಿ ಗ್ರಾಮ ಲೆಕ್ಕಿಗರಿಂದ ಭರ್ತಿಮಾಡಿಸಿ ಸದರಿ ಜಾಗವನ್ನು ಸ್ವಾಧಿನ ಪಡಿಸಿಕೊಂಡು ತಾಂಡಾದ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಕೋರಿ ತಹಸೀಲ್ದಾರವರಿಗೆ ಪತ್ರ ಬರೆಯಬೇಕು.

 

ತಾಂಡಾ ಅಭಿವೃದ್ಧಿ ನಿಗಮಮವು ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ಎಲ್ಲಾ ರೀತಿಯ ಸಹಾಯ ಒದಗಿಸುತ್ತದೆ. ಆದ್ದರಿಂದ ಈ ಪತ್ರದೊಂದಿಗೆ ಲಗತ್ತಿಸಿರುವ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಅಗತ್ಯವಾದ ನಮೂನೆಯನ್ನು ಗ್ರಾಮಲೆಕ್ಕಿಗರಿಂದ  ಭರ್ತಿಮಾಡಿಸಿ ಒಂದು ಪ್ರತಿಯನ್ನು ವ್ಯವಸ್ಥಾಪಕ ನಿದೇರ್ಶಕರು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ (ವಿಳಾಸ ಕೆಳಕಾಣಿಸಿದೆ) ಇವರಿಗೆ ಮತ್ತು ಒಂದು ಪ್ರತಿಯನ್ನು ಸಂಬಂಧಿಸಿದ ತಹಸೀಲ್ದಾರರವರಿಗೆ ಸಲ್ಲಿಸಬೇಕು.

ಮೇಲ್ಕಾಣಿಸಿದ ಅಂಶಗಳ ಕಡೆಗೆ ತಾಂಡಾದ ನಾಯಕ್, ಡಾವೂ, ಕಾರಬಾರಿ ಇವರು ಗಮನಹರಿಸಿ ಜರುರು ಕ್ರಮವನ್ನು ಕೈಗೊಂಡು ತಮ್ಮ ತಾಂಡಾವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸಬೇಕು.

ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

ಕೊನೆಯ ಮಾರ್ಪಾಟು : 11/29/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate