ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ

ಕೆಳಕಾಣಿಸಿದ ಕೋರ್ಸ್‍ಗಳಲ್ಲಿ ವಿದ್ಯಾಬ್ಯಾಸ ಮಾಡಿ ಪರೀಕ್ಷೆಯಲ್ಲಿ 1 ರಿಂದ 5 ರ್ಯಾಂಕುಗಳನ್ನು ಗಳಿಸಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಪ್ರೋತ್ಸಾಹ ಧನ ಮಂಜೂರು ಮಾಡಲಾಗುವುದು.

 1. ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ:-
  • ಕೆಳಕಾಣಿಸಿದ ಕೋರ್ಸ್‍ಗಳಲ್ಲಿ ವಿದ್ಯಾಬ್ಯಾಸ ಮಾಡಿ ಪರೀಕ್ಷೆಯಲ್ಲಿ 1 ರಿಂದ 5 ರ್ಯಾಂಕುಗಳನ್ನು ಗಳಿಸಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಪ್ರೋತ್ಸಾಹ ಧನ ಮಂಜೂರು ಮಾಡಲಾಗುವುದು.
 2. ದ್ವಿತೀಯ ಪಿಯುಸಿ 10,000/-
 3. ವಿವಿದ ವಿಶ್ವವಿದ್ಯಾನಿಲಯಗಳ ಪದವಿ ಕೋರ್ಸ್ (ಬಿ.ಎ, ಬಿ.ಕಾಮ್, ಬಿಎಸ್ಸ್ಸಿ)     20,000/-
 4. ವಿವಿದ ವಿಶ್ವವಿದ್ಯಾನಿಲಯಗಳ ಸ್ನಾತಕ್ಕೋತ್ತರ ಪದವಿಯಲ್ಲಿ ಪ್ರತಿ ಕೋರ್ಸ್       25,000/-
 5. ವಿವಿದ ವಿಶ್ವವಿದ್ಯಾನಿಲಯಗಳ  ತಾಂತ್ರಿಕ ಪದವಿ ಇಂಜಿನಿಯರಿಂಗ್, ಬಿ.ಡಿ.ಎಸ್,
 6. ಇಂಡಿಯನ್ ಮೆಡಿಸನ್, ಕೃಷಿ, ಪಶು ವೈದ್ಯಕೀಯ  -  ಪ್ರತಿ ಕೋರ್ಸ್    25,000/-
 7. ಎಂ.ಬಿ.ಬಿ.ಎಸ್ ಕೋರ್ಸ್      25,000/-
  • ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಯು ಮೇಲ್ಕಾಣಿಸಿದ ಕೋರ್ಸ್ ಪರೀಕ್ಷೆಯಲ್ಲಿ 1 ರಿಂದ 5 ನೇ ರ್ಯಾಂಕ್ ಪಡೆದಿರಬೇಕು.
  • ವಿಧಾನ:- ನಿಗಧಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ. ಜಿಲ್ಲಾ ಸಮಾಜ ಕಲ್ಯಾಣಧಿಕಾರಿಗಳಿಗೆ ಸಲ;ಲಿಸಬೇಕು.
  • ದಾಖಲೆಗಳು:- ರ್ಯಾಂಕ್ ಪಡೆದ ಪ್ರಮಾಣ ಪತ್ರ, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಮತ್ತು ಅದಾಯ ಪ್ರಮಾಣ ಪತ್ರಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸುವುದು. ಸಂಬಂಧಿಸಿದ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸುವುದು.
 8. ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಧನ ಸಹಾಯ:-
  • ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ವಾರ್ಷಿಕ ರೂ.3.50 ಲಕ್ಷದಂತೆ ಅಥವಾ ವ್ಯಾಸಂಗದ ಅವಧಿಗೆ ಒಟ್ಟು ಗರಿಷ್ಠ ರೂ.10.00 ಲಕ್ಷಗಳಿಗೆ ಧನ ಸಹಾಯ ನೀಡಲಾಗುತ್ತದೆ.  ಇದರಲ್ಲಿ ವಿಮಾನ ಶುಲ್ಕವು ಒಳಗೊಂಡಿರುತ್ತದೆ.
  • ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಪೋಷಕರ ವಾರ್ಷಿಕ ಆದಾಯ ರೂ.2.00 ಲಕ್ಷ ಮೀರಿರಬಾರದು.
  • ವಿಧಾನ:- ನಿಗಧಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು.
  • ದಾಖಲೆಗಳು:- ಅಂಕಪಟ್ಟಿ, ಜಾತಿ ಪ್ರಮಾನ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳ ಪ್ರತಿ ಮತ್ತು ವಿಧೇಶಿ ವಿಶ್ವವಿದ್ಯಾನಿಲಯಗಳಲ್ಲಿ ಆಯ್ಕೆಗೊಂಡ ಪತ್ರ ಅರ್ಜಿಯೊಂದಿಗೆ ಲಗತ್ತಿಸುವುದು.
 9. ಕಾನೂನು ಪಧವೀದರರಿಗೆ ಸಹಾಯ:-
  • ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಕಾನೂನು ಪಧವೀದರರು ಸ್ವತಂತ್ರವಾಗಿ ವಕೀಲ ವೃತ್ತಿಯನ್ನು ಕೈಗೊಳ್ಳಲು ವಕೀಲರ ಸಂಘದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಗ್ರಂಥಗಳನ್ನು ಖರೀದಿಸಲು ಇತ್ಯಾಧಿಗಳಿಗೆ ರೂ.5000/- ದನ ಸಹಾಯ ಜಿಲ್ಲಾ/ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಗೆ ಅರ್ಜಿ ಸಲ್ಲಿಸುವುದು.
  • ಪರಿಶಿಷ್ಟ ಜಾತಿಗೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ಹೆಚ್ಚಿನ ಜ್ಞಾನ ಗಳಿಸಿಕೊಳ್ಳಲು ನೆರವಾಗುವಂತೆ 4 ವರ್ಷದ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರೂ.2000/- ರಂತೆ ಶಿಷ್ಯ ವೇತನ ನೀಡಲಾಗುತ್ತದೆ.
  • ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ ಕಾನೂನು ಪದವೀದರರಾಗಿ 2 ವರ್ಷ ಅಥವಾ 35 ವರ್ಷಗಳು ಮೀರಿರಬಾರದು.
 10. ಅದ್ಯಯನ ಪ್ರವಾಸಕ್ಕೆ ನೆರವು :- ಅದ್ಯಯನ ಪ್ರವಾಸಕ್ಕಾಗಿ ರೂ.1600/- ಮೀರದಂತೆ ಸಹಾಯ ಧನದ ನೆರವು ನೀಡಲಾಗುವುದು.
  • ಅರ್ಹತೆ:- ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
  • ವಿಧಾನ:- ನಿಗಧಿತ ಅರ್ಜಿಯನ್ನು ಭರ್ತಿ ಮಾಡಿ, ವಿದ್ಯಾ ಸಂಸ್ಥೆಯ ಮುಖ್ಯಸ್ಥರ ಮೂಲಕ ಸಂಬಂದಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮಂಜೂರಾತಿಗಾಗಿ ಕಳುಹಿಸುವುದು.
  • ದಾಖಲೆಗಳು:- ವಿದ್ಯಾ ಸಂಸ್ಥೆಯ ಮುಖ್ಯಸ್ಥರ ದೃಡೀರರಿಸಿದ ಅಧ್ಯಯನದ ಪ್ರವಾಸ ವಿವರಗಳನ್ನು ಲಗತ್ತಿಸುವುದು.
 11. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳನ್ನು ಪೂರೈಸುವುದು :-
  • ಇಂಜಿನಿಯರಿಂಗ್ ಅಥವಾ ಡಿಪ್ಲೋಮಾ ತರಗತಿಯಲ್ಲಿ ದಾಖಲಾದ ಪರಿಶಿಷ್ಟ ಜಾತಿಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳ ಪಟ್ಟಿಯನ್ನು ತರಿಸಿಕೊಂಡು, ತಲಾ ರೂ.700/-ಗಳ ವೆಚ್ಚದಲ್ಲಿ ಡ್ರಾಯಿಂಗ್ ಬೋರ್ಡ್, ಕ್ಯಾಲ್ಕ್ಯುಲೇಟರ್ ಮುಂತಾದ ಸಲಕರಣೆಗಳನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಾಲೇಜು ಮುಖ್ಯಸ್ಥರ ಮೂಲಕ ಒದಗಿಸುವರು.
 12. ಪುಸ್ತಕ ಭಂಡಾರ:-
  • ವೈದ್ಯಕೀಯ, ತಾಂತ್ರಿಕ, ಕೃಷಿ ವಿಜ್ಞಾನ ಮತ್ತು ಪಶು ವಿಜ್ಞಾನದ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಮಾತ್ರ ಪುಸ್ತಕ ಭಂಡಾರ/ ಪುಸ್ತಕ ಬ್ಯಾಂಕ್ ತೆರೆಯಲಾಗಿದೆ.
 13. ಪರೀಕ್ಷಾ ಪೂರ್ವ ತರಬೇತಿ ಕೇಂದ್ರ:-
  • ಉದ್ಯೋಗವಕಾಶಕ್ಕಾಗಿ ಇರುವ ವಿವಿದ ಸ್ಪರ್ದಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲು ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದೆ.  ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್, ಬ್ಯಾಂಕಿಂಗ್ ಮತ್ತು ರೈಲ್ವೆ ಇತರೆ ನೇಮಕಾತಿ ಪ್ರಾಧಿಕಾರದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆ ಮಾಡಿ, ತರಬೇತಿ ನೀಡಲಾಗುತ್ತದೆ.  ಅಪೇಕ್ಷಿತ ಆಕಾಂಕ್ಷೆಯುಳ್ಳ ಅಭ್ಯರ್ಥಿಗಳು ಸಂಬಂದಿಸಿದ, ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಪ್ರಾಂಶುಪಾಲರು, ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಅಂಬೇಡ್ಕರ್ ಭವನ, ಮಿಲ್ಲರ್ಸ್ ರಸ್ತೆ, ಬೆಂಗಳೂರು ಇವರನ್ನು ಸಂಪರ್ಕಿಸುವುದು.

ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

2.92307692308
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top