ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಭೆ

ಸಭೆ ನಡೆಸಲು ಬೇಕಾದ ಕೆಳಕಾಣಿಸಿದ ಎಲ್ಲಾ ಸಲಕರಣೆಗಳ ವ್ಯವಸ್ಥೆ ಮುಂಚಿತವಾಗಿ ಮಾಡಿಕೊಂಡು ನಿಗಧಿ ಪಡಿಸಿದ ದಿನಾಂಕದಂದು ನಿಗಧಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತಾಂಡಾವನ್ನು ತಲುಪುವುದು.

ಸಭೆ ನಡೆಸಲು (ಸಾಕ್ಷ್ಯಚಿತ್ರ ಪ್ರದರ್ಶನ) ಬೇಕಾದ ಕೆಳಕಾಣಿಸಿದ ಎಲ್ಲಾ ಸಲಕರಣೆಗಳ ವ್ಯವಸ್ಥೆ ಮುಂಚಿತವಾಗಿ ಮಾಡಿಕೊಂಡು ನಿಗಧಿ ಪಡಿಸಿದ ದಿನಾಂಕದಂದು ನಿಗಧಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತಾಂಡಾವನ್ನು ತಲುಪುವುದು.

 • ಲ್ಯಾಪ್ ಟಾಪ್
 • ಸಾಕ್ಷ್ಯಚಿತ್ರ ಪದರ್ಶನಕ್ಕಾಗಿ ಬಿಳಿ ಪರದೆ (ಸ್ಕ್ರೀನ್)
 • ಎಲ್.ಸಿ.ಡಿ ಪ್ರೋಜೆಕ್ಟರ್
 • ಸಾಕ್ಷ್ಯಚಿತ್ರದ ಡಿ.ವಿ.ಡಿಗಳು
 • ಜನರೇಟರ್ ಅಥವಾ ಪವರ್ ಬ್ಯಾಕ್ ಆಪ್ ಬ್ಯಾಟರಿ
 • ಸಗಾಣಿಕೆಗೆ ವಾಹನ
 • ಧ್ವನಿ ವರ್ಧಕ
 • ತಾಂಡಾದ ಮಾಹಿತಿ ಸಂಗ್ರಹಣಾ ನಮೂನೆ.
 • ಪ್ರತಿ ತಾಂಡಾದಲ್ಲಿ ಭಾಗವಹಿಸುವವರ ಹೆಸರು ಮತ್ತು ಸÀಹಿಗಾಗಿ ವಹಿ
 • ಪ್ರತಿ ಸಭೆಯಲ್ಲಿ ಭಾಗವಹಿಸಿದವರ ಭಾವಚಿತ್ರ ತೆಗೆಯಲು ಕ್ಯಾಮರ
 • ಕಾರ್ಯಕ್ರಮದ 2 ಬ್ಯಾನರ್ಸ್
 • ಸಾಕ್ಷ್ಯಚಿತ್ರ ಪ್ರದರ್ಶನಕ್ಕಾಗಿ ನುರಿತ ತಾಂತ್ರಿಕ ಸಿಬ್ಬಂದ

ಸಭೆಯ ಕಾರ್ಯಕಲಾಪ:-

 • ಸಂಸ್ಥೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಪರಸ್ಪರ ಸಹಭಾಗಿತ್ವದಲ್ಲಿ ಸಭೆ ನಡೆಸುವುದು.
 • ಸಭೆ ನಡೆಸುವ ದಿನಾಂಕದಂದು ಅರಿವು ಕಾರ್ಯಕ್ರಮದ ಒಂದು ಬ್ಯಾನರ್ ವನ್ನು ಸಭಾಂಗಣದ ಹೊರಗೆ ಹಾಗೂ ಮತ್ತೊಂದು ಬ್ಯಾನರ್ ಸಭಾಂಗಣದ ವೇದಿಕೆಗೆ ಹಾಕುವುದು.
 • ಸಂಪನ್ಮೂಲ ವ್ಯಕ್ತಿಯು ತಾಂಡಾದ ಸಂಕ್ಷಿಪ್ತ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಸಂಗ್ರಹಿಸುವುದು.
 • ಸಭೆಯಲ್ಲಿ ಎಲ್ಲರು ವ್ಯವಸ್ಥಿತವಾಗಿ ಮತ್ತು ಶಾಂತವಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವುದು.
 • ತಾಂಡಾದ ನಾಯಕ್, ಡಾವೂ, ಕಾರಭಾರಿ, ತಾಂಡಾದ ಚುನಾಯಿತಿ ಪ್ರತಿನಿಧಿಗಳು ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡುವುದು.
 • ಸಭೆಗೆ ಅಗಮಿಸುವವರ ಹೆಸರು ಮತ್ತು ಸಹಿಯನ್ನು ವಹಿಯಲ್ಲಿ ಪಡೆಯುವುದು.
 • ಸಭೆಯನ್ನು ಸಂಜೆ 5.00 ರಿಂದ ಪ್ರಾರಂಬಿಸಿ 3-4 ಗಂಟೆಗಳ ಕಾಲ ಈ ಕೆಳಗಿನಂತೆ ನಡೆಸುವುದು.
 • ಸಭೆಯನ್ನು ಸ್ವಾಗತಿಸುವುದರ ಮೂಲಕ ಪ್ರಾರಂಭಿಸುವುದು.
 • ಸಂಪನ್ಮೂಲ ವ್ಯಕ್ತಿಯಿಂದ ಅರಿವು ಕಾರ್ಯಕ್ರಮ ಕುರಿತು ಪ್ರಸ್ತಾವಿಕ ನುಡಿಗಳು.
 • ಕಂದಾಯ ಗ್ರಾಮಗಳಾಗಿರದ ತಾಂಡಾಗಳಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತಿಸಿಕೊಳ್ಳುವ ವಿಧಾನ ಕುರಿತ ಮಾಹಿತಿ ನೀಡಿ ವಿವರದ ಕಾಗದ ನೀಡುವುದು.
 • ಅರಣ್ಯ ಪ್ರದೇಶದ ತಾಂಡಾಗಳಲ್ಲಿ ಮಾತ್ರ ಅರಣ್ಯ ಹಕ್ಕು ಕಾಯ್ದೆ 2006ರ ಅನ್ವಯ ತಾಂಡಾದಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸುವ ಕುರಿತು ಮಾಹಿತಿ ನೀಡಿ ಸಂಬಂಧಿಸಿದ ವಿವರದ ಬುಕ್ ಲೇಟ್ ನೀಡುವುದು.
 • ರಾತ್ರಿ ಸಮಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ (ಕೆಳಕಾಣಿಸಿದ 5 ಸಾಕ್ಷ್ಯಿಚಿತ್ರಗಳಲ್ಲಿ ಕನಿಷ್ಠ 3 ಸಾಕ್ಷ್ಯಚಿತ್ರಗಳ ಪ್ರದರ್ಶನ
 • ತಾಂಡಾ ವಿಕಾಸ ಸಮಿತಿಯ ರಚನೆ ಮತ್ತು ಕಾರ್ಯವಿಧಾನ
 • ನಿಗಮ ಮತ್ತು ಸರ್ಕಾರದ ಮೂಲಸೌಕರ್ಯ ಯೋಜನೆಗಳ ಪರಿಚಯ
 • ಮಧ್ಯಪಾನ, ಧೂಮಪಾನ ಇತ್ಯಾಧಿ ದುಷ್ಚಟಗಳಿಂದಾಗುವ ದುಷ್ಯಪರಿಣಾಮಗಳು
 • ಮಾದರಿ ತಾಂಡಾ ಪರಿಕಲ್ಪನೆ ಮತ್ತು ಅನುಷ್ಠಾನ
 • ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮ ಹಾಗೂ ಅರಣ್ಯ ಹಕ್ಕು ಸಮಿತಿ ರಚನೆ-

ಕಾರ್ಯವಿಧಾನ

 • ಪ್ರತಿ ಸಾಕ್ಷ್ಯಚಿತ್ರ ಪ್ರದರ್ಶನದ ನಂತರ ಚರ್ಚೆ/ಸಮಾಲೋಚನೆ
 • ವಂದನಾರ್ಪಣೆ
 • ಮೇಲ್ಕಾಣಿಸಿದ ಮಾದರಿಯಲ್ಲಿ ಸಂಸ್ಥೆಯ ಸಿಬ್ಬಂದಿ ಸಹಯೋಗದಲ್ಲಿ ಒಂದು ತಾಂಡಾ ಗುಚ್ಚದ ಸಭೆಗಳು ನಡೆಯುತ್ತೀರುವಾಗ ಮತ್ತೊಂದು ತಾಂಡಾ ಗುಚ್ಚದ ಐದು ತಾಂಡಾಗಳ ಪೂರ್ವಬಾವಿ ಸಿದ್ದತೆ ಮಾಡಿಕೊಂಡು ದಿನಕ್ಕೆ ಒಂದರಂತೆ ಸಭೆ ನಡೆಸಿ ಸಂಸ್ಥೆಗೆ ವಹಿಸಿರುವ ಎಲ್ಲಾ ತಾಂಡಾಗಳ ಕಾರ್ಯಕ್ರಮವನ್ನು 45 ದಿವಸಗಳ ಒಳಗಾಗಿ ಪೂರ್ಣಗೊಳಿಸಬೇಕು.

ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

3.09756097561
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top