অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಹಕಾರಿ ಇಲಾಖೆ

ಸಹಕಾರಿ ಇಲಾಖೆ

ಸಹಕಾರಿ ಇಲಾಖೆ:-

  1. ಯಶಸ್ವಿನಿ ಯೋಜನೆ
  2. ರೈತರ ಆರೋಗ್ಯ ರಕ್ಷಣೆಗಾಗಿ “ಎಲ್ಲಾರು ಒಬ್ಬರಿಗಾಗಿ, ಒಬ್ಬ ಎಲ್ಲಾರಿಗಾಗಿ” ಎಂಬಾ ಸಹಕಾರಿ ತತ್ವದ ಅಡಿಯಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರಿ ಕೃಷಿ ಪತ್ತಿನ/ಕೃಷಿಯೇತರ ಸಹಕಾರಿ ಸಂಘಗಳ ವಿವಿದ್ದೋದೇಶ/ಹಾಲು ಉತ್ಪಾದಕರ, ಇತ್ಯಾದಿ ಯಾವುದಾದರೊಂದು ಸಹಕಾರಿ ಸಂಘದಲ್ಲಿ ರೈತ ಸದಸ್ಯರಾಗಿ ಆರು ತಿಂಗಳಾಗಿದಲ್ಲಿ ಅವರು ತಮ್ಮೊಂದಿಗೆ ತಮ್ಮ ಕುಟುಂಬದ ಸದಸ್ಯರನ್ನು ಯಶಸ್ವಿ ಯೋಜನೆಯಲ್ಲಿ ನೊಂದಾಯಿಸಕೊಳ್ಳಬೇಕು. ಹೀಗೆ ನೊಂದಾಯಿಸಿಕೊಂಡು ವಾರ್ಷಿಕ ವಂತಿಗೆ ಪಾವತಿಸಿದವರಿಗೆ ಟ್ರಸ್ಟ್‍ನಿಂದ ಗುರುತಿಸಲಾದ 805 ಶಸ್ತ್ರಚಿಕಿತ್ಸೆಗಳನ್ನು ಗುರುತಿಸಿದ ನೆಟ್‍ವರ್ಕ್ ಆಸ್ಪತ್ರÉಯಲ್ಲಿ ಒಂದು ವರ್ಷದಲ್ಲಿ ಪ್ರತಿ ಸದಸ್ಯರು ಒಂದು ಬಾರಿಗೆ ಒಂದು ಲಕ್ಷದವರೆಗೆ ಅನೇಕ ಬಾರಿ ದಾಖಲದಲ್ಲಿ ಗರಿಷ್ಟ 2 ಲಕ್ಷದವರೆಗೆ ಶಸ್ತ್ರಚಿಕಿತ್ಸೆ ಪಡೆಯಬಹುದು.

  3. ಬಡ್ಡಿ ರಹಿತ ಸಾಲವನ್ನು ಸಹಕಾರಿ ಸಂಘಗಳ ಸದಸ್ಯರಿಗೆ ವಿತರಿಸಲಾಗುತ್ತದೆ.
    • ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ

    ಈ ಇಲಾಖೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತದೆ. ಇದರ ಉದ್ದೇಶ ಜೀವನ ಭದ್ರತೆಗಾಗಿ ಗ್ರಾಮೀಣ ಕುಟುಂಬದ ವಯಸ್ಕ ಸದಸ್ಯರಿಗೆ ವರ್ಷದಲ್ಲಿ ನೂರಾ ಐವತ್ತು ದಿನಗಳ ಕೌಶಲ್ಯ ರಹಿತ ಉದ್ಯೋಗ ಒದಗಿಸುವುದಾಗಿದೆ.ವಯಸ್ಕರು ಉದ್ಯೋಗಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ ನೊಂದಾಯಿಸಿಕೊಂಡು ಉದ್ಯೋಗ ಕಾರ್ಡ್‍ನ್ನು ಪಡೆದುಕೊಳ್ಳಬೇಕು. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ಮೂಲಕ ಈ ಕೆಳಗಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

    • ಮನೆಗೊಂದು ಶೌಚಾಲಯ
    • ಸಂಜೀವಿನಿ - ಜೀವನೋಪಾಯ ಅಭಿಯಾನ
    • ಶುದ್ಧ ಕುಡಿಯುವ ನೀರಿನ ಘಟಕಗಳು
    • ಕೃಷಿಕ ಮಹಿಳಾ ಸಶಕ್ತೀಕರಣ
    • ನಮ್ಮ ಹೊಲ ನಮ್ಮ ದಾರಿ
    • ನಮ್ಮೂರ ಕೆರೆ
    • ನಮ್ಮ ಹಳ್ಳಿ ನಮ್ಮ ನೀರು
    • ರೈತರ ಕಣ
    • ಕುರಿ ದನದ ದೊಡ್ಡಿ
    • ರೈತರ ಭೂ ಅಭಿವೃದ್ಧಿ
    • ಆಟದ ಮೈದಾನ
    • ಸ್ಮಶಾನ ಅಭಿವೃದ್ಧಿ
    • ರಾಜೀವಗಾಂಧಿ ಚೈತನ್ಯ ಯೋಜನೆ
    • ರಾಜೀವಗಾಂಧಿ ಸೇವಾ ಕೇಂದ್ರ

    ಪಶು ಸಂಗೋಪನೆ:-

    • ಹೈನುಗಾರಿಕೆಗೆ ಪ್ರೋತ್ಸಾಹ
    • ಹಸುಗಳಿಗೆ ವಿಮೆ ಸೌಲಭ್ಯ

    ಕೈಗಾರಿಕೆ:-

    • ಗೃಹಪಯೋಗಿ ಕೈಗಾರಿಕೆಗಳಿಗೆ ತರಬೇತಿ
    • ಕೌಶಲ್ಯ ತರಬೇತಿ

    ವಸತಿ ಇಲಾಖೆ:-

    • ಆಶ್ರಯ ಯೋಜನೆ
    • ಬಸವ, ರಾಜೀವ್, ಇಂದಿರಾ ಆವಾಸ್ ವಸತಿ ಯೋಜನೆಗಳು
    • ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ:-
    • ಯುವ ಚೇತನ ಮತ್ತು ಯುವ ಪ್ರೇರಣ ತರಬೇತಿ
    • ವ್ಯಕ್ತಿತ,್ವ ನಾಯಕತ್ವ ತರಬೇತಿ ಶಿಬಿರಗಳು.

    ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

ಕೊನೆಯ ಮಾರ್ಪಾಟು : 7/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate