ಅಂಗವಿಕಲ ವ್ಯಕ್ತಿಗಳ ಅಧಿನಿಯಮ 1995ರ ಉದ್ದೇಶಗಳನ್ನು ಜಾರಿಗೆ ತರಲು ಈ ಆದೇಶದ ಅನುಬಂಧಕ್ಕೆ ಲಗತ್ತಿಸಿರುವಂತೆ ಕರ್ನಾಟಕ ರಾಜ್ಯ ಅಂಗವಿಕಲತೆಯ ಕಾರ್ಯನೀತಿಯನ್ನು ಜಾರಿಗೊಳಿಸಲು ಸರ್ಕಾರ ಮಂಜೂತಿ ನೀಡಲಾಗಿದೆ.
ಅಂಗವಿಕಲ ವ್ಯಕ್ತಿಗಳ ಅಧಿನಿಯಮದಲ್ಲಿ ನಮೂದಿಸಿದಂತೆ ಮುಖ್ಯವಾಹಿನಿ ಶಾಲೆಗಳೆಲ್ಲಿ ದಾಖಲಿಸಿ ಅಂಗವಿಕಲ ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದು, ಹಾಗೂ ವ್ಯಾಪಕ ಶಿಕ್ಷಣ ಯೋಜನೆಯನ್ನು ಜಾರಿಗೆ ತರುವುದು,ಉದ್ಯೋಗ ಸೃಜಿಸುವ ಸರ್ಕಾರದ ಏಜೆನ್ಸಿಗಳನ್ನು ವಿಶೇಷ ಕೇಂದ್ರ ಬಿಂದು ಆಗಿಟ್ಟುಕೊಂಡು ಅಂಗವಿಕಲ ವ್ಯಕ್ಷಿಗಳಿಗೆ ಸ್ವಯಂ ಉದ್ಯೋಗ ಉತ್ತೇಜಿಸುವುದು ಮತ್ತು ಅಂಗವಿಕಲ ಉದ್ಯಮದಾರರುಗಳಿಗೆ ವಿವಿಧ ಸರ್ಕಾರದ ಏಜೆನ್ಸಿ ಹಾಗೂ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವುದು.
ಪುನರ್ ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಹಾಗೂ ಉಸ್ತುವಾರಿ ಮಾಡುವುದು (ರಾಜ್ಯ ಹಾಗೂ ಕೇಂದ್ರ ಸರ್ಕಾರದಡಿಯಲ್ಲಿರುವ ಯೋಜನೆಗಳು.
ಅಂಗವಿಕಲರ ರಾಜ್ಯ ನೀತಿಯನ್ವಯ ಎಲ್ಲಾ ಇಲಾಖೆಗಳು ಅಂಗವಿಕಲರ ಅಧಿನಿಯಮ 1995ರನ್ಗಯ ಅಂಗವಿಕಲರಿಗೆ ವಾರ್ಷಿಕ ಕ್ರಿಯಾ ಯೋಜನೆ ಹಾಗೂ ಪಂಚವಾರ್ಷಿಕ ಮುನ್ನೋಟ ಯೋಜನೆ ತಯಾರಿಸತಕ್ಕದ್ದು ಹಾಗೂ ಇದಕ್ಕಾಗಿ ಯೋಜನಾ ಮತ್ತು ಆರ್ಥಿಕ ಇಲಾಖೆಗಳು ಅನುದಾನ ಹಂಚಿಕೆ ಮಾಡತಕ್ಕದು.
ರಾಜ್ಯ ಕಾರ್ಯನೀತಿಯ ಅನುಚ್ಛೇದ 41ರ ನಿರ್ದೇಶಕ ತತ್ವಗಳು, ಇನ್ನಿತರವುಗಳ ಜೆತೆಗೆ ೬೨೦ಗವಿಕಲ ವ್ಯಕ್ತಿಗಳ ಕಲ್ಯಾಣಕ್ಕಾಗಿ ರಾಜ್ಯ ಪರಿಣಾಮಕಾರಿಯಾಧ ಆವಕಾಶಗಳನ್ನು ಕಲ್ಪಿಸಲು ಆದೇಶಿಸುತ್ತದೆ.
ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇಕಡ 5 ರಿಂದ 6 ರಷ್ಟ ಅಂಗವಿಕಲತೆಯುಳ್ಳವ್ಯಕ್ತಿಗಳಿರುತ್ತಾರೆ, ಅಲಗವಿಕಲ
ವ್ಯಕ್ತಿಗಳ ಅಧಿನಿಯಮ 1995 ರಡಿಯಲ್ಲಿ ಅಂಗವಿಕಲ ವ್ಯಕ್ತಿಗಳನ್ನು ನಮ್ಮ ರಾಜ್ಯದ ಮುಖ್ಯವಾಹಿನಿಯಲ್ಲಿ ಸಮನ್ವಯಗೊಳಿಸಲು ಪುನರ್ವಸತಿ, ಕ್ಷಣ, ಆರ್ಥಿಕ ಅವಕಾಶ ತಡೆರಹಿತವಾತಾವರಣ ಹಾಗೂ ಇತರ ಅವಲಂಬನಾ ಸೇವೆಗಳನ್ನು ರಾಜ್ಯವ ಕಲ್ಲಿಸಬೇಕಾಗಿದೆ
ಎಲ್ಲಾ ಸಂಬಂಧಪಟ್ಟ ಇಲಾಖೆ ಮತ್ತು ಏಜೆನ್ಸಿಗಳಲ್ಲಿ ಅಧಿನಿಯಮದ ಉಪಬಂಧಗಳನ್ನು ಪೂರ್ಣ ರೂಪದಲ್ಲಿ ಕಾರ್ಯಗತಗೊಳಿಸುವದು ಹಾಗೂ ಅಂಗವಿಕಲರ ಅಧಿನಿಯಮ 1995ರ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಈ ಕರ್ನಾಟಕ ರಾಜ್ಯದಲ್ಲಿ ಅಂಗವಿಕಲತೆ ಕಾರ್ಯನೀತಿಯನ್ನು ರಚಿಸಲಾಗುತ್ತಿದೆ
ಸಚಿವಾಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೋಡಲ್ ಇಲಾಖೆಯಾಗಿದ್ದ ರಾಜ್ಯ ಅಂಗವಿಕಲರ ಆಯುಕ್ತರ ಕಛೇರಿಯು ಅಂಗವಿಕಲರ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಕ್ರಮ ತೆಗೆದುಕೊಳ್ಳುವುದು ಹಾಗೂ ಅಂಗವಿಕಲರಿಗಾಗಿ ಇರುವ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಸಮನ್ವಯಗೊಳಿಸುವುದು ಹಾಗೂ ಮೇಲ್ವಿಚಾರಣೆ ಮಾಡುವುದು.
ಹೆಚ್ಚಿನ ಮಾಹಿತಿಗಾಗಿ :
ಕೊನೆಯ ಮಾರ್ಪಾಟು : 10/25/2019