অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಕಲಾಂಗರು

ಜನಗಣತಿ

೨೨೦೦೧ರ ಜನಗಣತಿಯ ಪ್ರಕಾರ ಭಾರತ ದೇಶದಲ್ಲಿ ೨.೧೯ ಕೋಟಿ ಜನರು ವಿಕಲಂಗರಿದ್ದು, ಇವರು ಒಟ್ಟು ಜನಸಂಖ್ಯೆಯ ಶೇ ೨.೧೩ರ ಭಾಗವಾಗಿರುತ್ತಾರೆ. ಈ ವಿಕಲಾಂಗರಲ್ಲಿ ದೃಷ್ಠಿದೋಷ, ಶ್ರವಣ ದೋಷ, ವಾಕ್‌ದೋಷ, ಚಲನಾಶಕ್ತಿಯ ದೋಷ, ಮತ್ತು ಮಾನಸಿಕ ಅಸ್ವಸ್ಥತೆಯಿರುವವರು ಇದ್ದಾರೆ. ಒಟ್ಟು ವಿಕಲಾಂಗ ಜನತೆಯಲ್ಲಿ ಶೇ ೭೫% ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾಋಎ. ಶೇ ೪೯% ವಿಕಲಾಂಗ ಜನರು ಅಕ್ಷರಸ್ಥರು, ಮತ್ತು ಕೇವಲ ಶೇ ೩೯% ಜನರು ಉದ್ಯೋಗಸ್ಥರಾಗಿದ್ದಾರೆ. ಈ ಹಿಂದೆ ಇದ್ದ ವೈದ್ಯಕೀಯ ಪುನರ್ವಸತಿಯನ್ನು ಸಾಮಾಜಿಕ ಪುನರ್ವಸತಿಗೆ ಒತ್ತುಕೊಟ್ಟು ಬದಲಾಯಿಸಲಾಗಿದೆ.

  • ೨೦೦೧ರ ಜನಗಣತಿಯ ಪ್ರಕಾರ ವಿಕಲಾಂಗರ ಬಗ್ಗೆ ಮಾಹಿತಿ
  • ಚಲನಾಶಕ್ತಿ - ಶೇ ೨೮%
  • ದೃಷ್ಠಿ - ಶೇ ೪೯%
  • ಶ್ರವಣ - ಶೇ ೬%
  • ಮಾತನಾಡುವುದು - ಶೇ ೭೦%
  • ಮಾನಸಿಕ ಅಸ್ವಸ್ಥತೆ - ೧೦%
  • ಮೂಲ : ೨೦೦೧ರ ಜನಗಣತಿ
  • ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್.ಎಸ್.ಎಸ್.ಬಿ.)೨೦೦೨ರ ಪ್ರಕಾರ ವಿಕಲಾಂಗರ ಬಗ್ಗೆ ಮಾಹಿತಿ
  • ಚಲನಾ ಶಕ್ತಿ - ೫೧%
  • ದೃಷ್ಠಿ - ೧೪%
  • ಶ್ರವಣ - ೧೫%
  • ವಾಕ್ - ೧೦%

ಮಾನಸಿಕ ಅಸ್ವಸ್ಥತೆ - ೧೦% ಮೂಲ: ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (೨೦೦೨)

ಸಾಮಾಜಿಕ ನ್ಯಾಯ ಮತ್ತು ಸಶಕ್ತತೆ (ಸಬಲೀಕರಣ) ಸಚಿವಶಾಖೆಯ ವಿಕಲಾಂಗ ವಿಭಾಗವು ವಿಕಲಾಂಗರನ್ನು ಸಶಕ್ತರನ್ನಾಗಿ ಮಾಡುವಲ್ಲಿ ಉತ್ತೇಜನ/ಬೆಂಬಲ ನೀಡುತ್ತದೆ. ೨೦೦೧ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನತೆಯಲ್ಲಿ ೨.೧೯ ಕೋಟಿ ಮತ್ತು ಶೇ ೨.೩% ರಷ್ಟನ್ನು ಪ್ರತಿನಿಧಿಸುತ್ತಾರೆ.

ಭಾರತೀಯ ಸಂವಿಧಾನ

ಭಾರತದ ಸಂವಿಧಾನವು ಎಲ್ಲ ವಿಕಲಾಂಗರಿಗೂ ಸ್ವಾತಂತ್ರ್ಯ, ನ್ಯಾಯ ಮತ್ತು ಗೌರವವನ್ನು ಖಚಿತಗೊಳಿಸುತ್ತದೆ. ಭಾರತದ ಸಂವಿಧಾನದ ಅನುಬಂಧ ವಿಷಯಗಳು ರಾಜ್ಯ ಸರ್ಕಾರಗಳ ಮೇಲೆ ವಿಕಲಾಂಗರಿಗೆ ಸಬಲೀಕರಣವನ್ನು ಹೊಂದುವಂತೆ ಮಾಡುವ ನೇರ ಜವಾಬ್ದಾರಿಯನ್ನು ಕೊಟ್ಟಿದೆ. ಆದ್ದರಿಂದ ವಿಕಲಾಂಗರ ಸಶಕ್ತತೆಯ ಜವಾಬ್ದಾರಿಯು ರಾಜ್ಯ ಸರ್ಕಾರದ ಮೇಲಿದೆ. ಭಾರತದ ಕೇಂದ್ರ ಪಟ್ಟಿಯ, ಅನುಚ್ಛೇಧ-೨೫೩, ಅಂಶ ೧೩ರಲ್ಲಿ ವಿಕಲಾಂಗರಿಗೆ, ಸಮಾನ ಅವಕಾಶ, ಮತ್ತು ದೇಶ ನಿರ್ಮಾಣದಲ್ಲಿ ಸಂಪೂರ್ಣ ಭಾಗವಹಿಸುವಿಕೆಯನ್ನು ಖಚಿತಗೊಳಿಸಲು ವಿಕಲಾಂಗರ ಕಾಯ್ದೆ, ೧೯೯೫ (ಸಮಾನ ಅವಕಾಶ ಹಕ್ಕುಗಳ ಸಂರಕ್ಷಣೆ ಮತ್ತು ಸಂಪೂರ್ಣ ಭಾಗವಹಿಸುವಿಕೆ)ಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಬಿಟ್ಟು ದೇಶದಾದ್ಯಂತ ಜಾರಿಯಲ್ಲಿದೆ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ವಿಕಲಾಂಗರ ಕಾಯ್ದೆ ೧೯೯೮ನ್ನು ಜಾರಿಗೊಳಿಸಿದೆ. ಈ ಕಾಯ್ದೆಯನ್ನು ತಕ್ಕಂತಹ ಸಚಿವ ಶಾಖೆಗಳೊಂದಿಗೆ ಎಂದರೆ; ಕೇಂದ್ರ ಸರ್ಕಾರದ ಸಚಿವ ಶಾಖೆಗಳು, ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶದ, ರಾಜ್ಯಸರ್ಕಾರದ ಹೊಣೆ ಹೊತ್ತ ಸಂಸ್ಥೆಗಳು, ಸ್ಥಳೀಯ ಅಧಿಕಾರಿಗಳು ಮತ್ತು ಸಮರ್ಪಕವಾದ ಅಧಿಕಾರಿಗಳ ಸಹಯೋಗದೊಂದಿಗೆ, ವಿವಿಧ ಮಾರ್ಗಗಳೊಂದಿಗೆ ಕಾಯ್ದೆಯ ವಿವಿಧ ವಿವಿಧ ಅಂಶಗಳನ್ನು ಜಾರಿಗೊಳಿಸಲಾಗುತ್ತದೆ. ಏಷ್ಯಾ ಫೆಸಿಫಿಕ್ ಪ್ರಾಂತ್ಯದ ವಿಕಲಾಂಗರ ಸಂಪೂರ್ಣ ಭಾಗವಹಿಸುವಿಕೆ ಮತ್ತು ಸಮಾನತೆಯ ಪ್ರಮಾಣಕ್ಕೆ ಭಾರತವು ಒಪ್ಪಂದಕ್ಕೆ ಸಹಿಹಾಕಿದೆ. ಇದಲ್ಲದೆ, ಭಾರತವು ವಿಕಲಾಂಗರಿಗೆ ತಡೆಮುಕ್ತ ಒಳಗೊಂಡ ಮತ್ತು ಹಕ್ಕು ನಿರ್ಮಿತ ಸಮಾಜಕ್ಕೆ ಕ್ರಮ ತೆಗೆದುಕೊಂಡಿರುವ ಬಿವಾಕೊ ಮಿಲಿಯಮ್ ಫ್ರೇಮ್ ವರ್ಕ್ ಒಪ್ಪಂದಕ್ಕೆ ಕೂಡ ಸಹಿ ಹಾಕಿದೆ. ವಿಕಲಾಂಗರ ಸಂರಕ್ಷಣೆ ಹಕ್ಕುಗಳ ಅಭಿವೃದ್ಧಿ ಮತ್ತು ಗೌರವವನ್ನು ಕಾಪಾಡುವ ೩೦ ಮಾರ್ಚ್ ೨೦೦೭ರ ಸಂಯುಕ್ತ ರಾಷ್ಟ್ರಗಳ ಒಪ್ಪಂದಕ್ಕೆ ಸಹಿ ಹಾಕಿದೆ ಭಾರತವು ಅಕ್ಟೋಬರ್ ೧, ೨೦೦೮ರ ಸಂಯುಕ್ತ ರಾಷ್ಟ್ರಗಳ ಒಪ್ಪಂದವನ್ನು ಅನುಮೋದಿಸಿದೆ.

ಸರ್ಕಾರದ ಯೋಜನೆಗಳು

ವಿಕಲಾಂಗರಿಗೆ ಸಲಕರಣೆಯನ್ನು ಖರೀದಿಸುವುದು (ಅಳವಡಿಸುವುದು (ಎಡಿಐಪಿ ಯೋಜನೆ) ಈ ಯೋಜನೆಯ ಪ್ರಮುಖ ಉದ್ದೇಶವು ಅಗತ್ಯವಿರುವ ವಿಕಲಾಂಗರಿಗೆ, ಬಾಳಿಕೆ ಬರುವಂತಹ, ಅತ್ಯಾಧುನಿಕವಾದ, ಮತ್ತು ವೈಜ್ಞಾನಿಕವಾಗಿ ತಯಾರಾದ ಸಲಕರಣೆಗಳನ್ನು ಒದಗಿಸಿ, ವಿಕಲಾಂಗರಿಗೆ (ಅವರ ವಿಕಲಾಂಗತೆಯನ್ನು ಕಡಿಮೆಗೊಳಿಸಿ, ಆರ್ಥಿಕ ಸಾಮರ್ಥ್ಯತೆಯನ್ನು ವೃದ್ಧಿಸುವುದು. ಭೌತಿಕ ಸಾಮಾಜಿಕ ಮತ್ತು ಮಾನಸಿಕವಾಗಿ ಪುನರ್ವಸತಿಗೊಳಿಸುವುದು. ಸಾಧನ ಮತ್ತು ಉಪಕರಣೆಗಳನ್ನು ಐಎಸ್‌ಪಿ ಯೋಜನೆಯ ಮುಖಾಂತರ ಸರಬರಾಜು ಮಾಡಲಾಗುತ್ತದೆ. ಐಡಿಐಪಿ ಯೋಜನೆಯಡಿ ನೆರವಿನ ಪ್ರಮಾಣ ಮತ್ತು ಆದಾಯ ಮಿತಿಯು ಕೆಳಕಂಡಂತಿದೆ.

  1. ಒಟ್ಟು ಆದಾಯ - ನೆರವಿನ ಮೊತ್ತ್ತ ತಿಂಗಳಿಗೆ ರೂ. ೬,೫೦೦/-ರ ವರೆವಿಗೆ
  2. ಸಾಧನ ಮತ್ತು ಉಪಕರಣಗಳ ಪೂರ್ತಿ ವೆಚ್ಚ.
  3. ತಿಂಗಳಿಗೆ ರೂ. ೬,೫೦೧/- ರಿಂದ ರೂ. ೧೦,೦೦೦/- ರವರೆವಿಗೆ
  4. ಶೇ ೫೦% ರಷ್ಟು ಉಪಕರಣಗಳ/ಸಾಧನಗಳ ವೆಚ್ಚ.

ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳಾದ ಸರ್ಕಾರೇತರ ಸಂಸ್ಥೆಗಳು, ಸಚಿವಶಾಖೆಯಡಿ ಬರುವ ರಾಷ್ಟ್ರೀಯ ಸಂಸ್ಥೆಗಳು ಮತ್ತು ಎಎಲ್‌ಐಎಮ್‌ಸಿಬಿ (ಂಐIಒಅಔ ಚಿ PSU)

ವಿಕಲಾಂಗರಿಗೆ ರಾಷ್ಟ್ರೀಯ ವಿಧ್ಯಾರ್ಥಿ ವೇತನ

ವಿಕಲಾಂಗರಿಗೆ ರಾಷ್ಟ್ರೀಯ ವಿಧ್ಯಾರ್ಥಿ ವೇತನದ ಯೋಜನೆಯಡಿ ಪ್ರತಿವರ್ಷ ಹೊಸ ೫೦೦ ವಿಧ್ಯಾರ್ಥಿಗಳನ್ನು ಒಂದು ವರ್ಷಕ್ಕೂ ಮೇಲ್ಪಟ್ಟ ಅವಧಿಯ ಮೆಟ್ರಿಕ್ ನಂತರದ ಉದ್ಯೋಗ ಕಲ್ಪಿಸುವ ಮತ್ತು ತಾಂತ್ರಿಕ ಶ್ರೇಣಿಯ ಶಿಕ್ಷಣ ಗಳಿಗಾಗಿ ನೀಡಲಾಗುತ್ತದೆ. ಅದಾಗ್ಯೂ ಸೆರೆಬ್ರಲ್ ಪಾಲ್ಸಿ, ಬುದ್ಧಿಮಾಂದ್ಯತೆ, ಬಹುವಿಧದ ಬುದ್ಧಿ ಮಾಂದ್ಯತೆ, ಉಗ್ರವಾದ ಕಿವಿಯ ಹಾನಿ/ಮಾಂದ್ಯತೆಯುಳ್ಳ ವಿಧ್ಯಾರ್ಥಿಗಳಿಗೆ ೯ನೇ ತರಗತಿಯ ನಂತರದ ಅಧ್ಯಯನವನ್ನು ಮುಂದುವರೆಸಲು ಅವಕಾಶ ಮಾಡಿಕೊಡುವುದಕ್ಕಾಗಿ ವಿಧ್ಯಾರ್ಥಿವೇತನವನ್ನು ಕೊಡಲಾಗುತ್ತದೆ. ಸಚಿವ ಶಾಖೆಯಿಂದ ಜೂನ್ ತಿಂಗಳಲ್ಲಿ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ರಾಷ್ಟ್ರೀಯ/ಪ್ರಾಂತೀಯ, ಮುಖ್ಯವಾದ ದಿನಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟಣೆ ಕೊಡಲಾಗುತ್ತದೆ. ರಾಜ್ಯಸರ್ಕಾರ/ಕೇಂದ್ರಾಡಳಿತ ಪ್ರದೇಶಗಳಲ್ಲೂ ಕೂಡ ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಕೋರಲಾಗುತ್ತದೆ.

ಶೇ ೪೦% ಅಥವಾ ಇದಕ್ಕೂ ಹೆಚ್ಚು ವಿಕಲಾಂಗತೆ ಹೊಂದಿದ್ದು, ಇವರ ಕುಟುಂಬದ ಆದಾಯವು ರೂ. ೧೫,೦೦೦/- ಮೀರದಿರುವ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ದೊರೆಯುತ್ತದೆ. ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕತೆ ಅಥವಾ ವೃತ್ತಿಪರ ಶ್ರೇಣಿಯ ಶಿಕ್ಷಣ ವನ್ನು ಕಲಿಯುತ್ತಿರುವ ವಿಧ್ಯಾರ್ಥಿನಿಲಯದಲ್ಲಿ ವಾಸಿಸುತ್ತಿರುವ ವಿಧ್ಯಾರ್ಥಿಗಳಿಗೆ ಮಾಸಿಕ ರೂ. ೧,೦೦೦/- ಹಾಗೂ ವಸತಿನಿಲಯದಲ್ಲಿ ವಾಸಮಾಡದ ವಿಧ್ಯಾರ್ಥಿಗಳಿಗೆ ಮಾಸಿಕ ರೂ ೭೦೦/- ಗಳನ್ನು ವೃತ್ತಿಪರ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳನ್ನು ತೆಗೆದುಕೊಳ್ಳಲು ಕೊಡಲಾಗುತ್ತದೆ.

ವಿದ್ಯಾರ್ಥಿವೇತನವಲ್ಲದೆ ಆಯಾ ವರ್ಷದ ಕೋರ್ಸಿನ ಶುಲ್ಕ ರೂ. ೧೦,೦೦೦/- ಗಳ ವೆಚ್ಚ ತುಂಬಿಕೊಡಲಾಗುತ್ತದೆ.ಈ ಯೋಜನೆಯಡಿ, ಅಂಧ ಮತ್ತು ಕಿವುಡ ವಿಧ್ಯಾರ್ಥಿಗಳಿಗೆ ವೃತ್ತಿಪರ ಪದವಿ/ಸ್ನಾತಕೋತ್ತರ ಪದವಿಯನ್ನು ಪೂರೈಸಲು ತಂತ್ರಾಂಶ/ಮೃದೂಪಕರಣ (ಸಾಫ್ಟ್‌ವೇರ್) ಗಳಿಗೆ ಮತ್ತು ಸೆರೆಬ್ರಲ್ ಪಾಲ್ಸಿ ವಿಧ್ಯಾರ್ಥಿಗಳಿಗೂ ಸಾಪ್ಟ್‌ವೇರ್ (ಮೃದೂಪಕರಣ) ಸೌಕರ್ಯ ಪಡೆಯಲು ಹಣಕಾಸು ನೆರವನ್ನು ನೀಡಲಾಗುತ್ತದೆ.

ರಾಷ್ಟ್ರೀಯ ಸಂಸ್ಥೆ / ಅಗ್ರ ಮಟ್ಟದ ಸಂಸ್ಥೆಗಳು ವಿಕಲಾಂಗರನ್ನು ಸಶಕ್ತಗೊಳಿಸುವ ಕಾಯ್ದೆಗೆ ಹೊಂದಿಕೆಯಾಗುವಂತೆ ಮತ್ತು ವಿಕಲಾಂಗರಿಗಿರುವ ಬಹುವಿಧದ ಸಮಸ್ಯೆಗಳಿಗೆ ಸ್ಪಂದಿಸುವಂತೆ, ಕೆಳಕಂಡ ರಾಷ್ಟ್ರೀಯ ಸಂಸ್ಥೆಗಳು / ಅಗ್ರಮಟ್ಟದ ಸಂಸ್ಥೆಗಳನ್ನು ಪ್ರಮುಖ ವಿಕಲಾಂಗ ಪ್ರದೇಶ (ಕ್ಷೇತ್ರ)ಗಳಲ್ಲಿ ಸ್ಥಾಪಿಸಲಾಗಿದೆ.

  1. ರಾಷ್ಟ್ರೀಯ ಅಂಧ / ದೃಷ್ಠಿದೋಷ ಸಂಸ್ಥೆ, ಡೆಹ್ರಾಡೂನ್.
  2. ರಾಷ್ಟ್ರೀಯ ಅಸ್ಥಿವಿಕಲಾಂಗ ಸಂಸ್ಥೆ, ಕಲ್ಕತ್ತಾ
  3. ಅಲಿಯವರ್ ಜಂಗ್ ರಾಷ್ಟ್ರೀಯ ಶ್ರವಣಮಾಂದ್ಯ ಸಂಸ್ಥೆ, ಮುಂಬೈ
  4. ಬುದ್ಧಿಮಾಂದ್ಯ ರಾಷ್ಟ್ರೀಯ ಸಂಸ್ಥೆ, ಸಿಕಂದರಾಬಾದ್.
  5. ರಾಷ್ಟ್ರೀಯ ಪುನರ್ವಸತಿ ತರಬೇತಿ ಮತ್ತು ಅಧ್ಯಯನ ಸಂಸ್ಥೆ, ಕಟಕ್.
  6. ದೈಹಿಕ ವಿಕಲಾಂಗರ ಸಂಸ್ಥೆ, ನವದೆಹಲಿ.
  7. ರಾಷ್ಟ್ರೀಯ ಬಹುವಿಧದ ವಿಕಲಾಂಗರ ಸಬಲೀಕರಣ ಸಂಸ್ಥೆ, ಚೆನೈ.
ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 3/6/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate