ಮನುಷ್ಯನ ಚಾಕುಚಕ್ಯತೆಯನ್ನು ಅವರ ಶಾರೀರಿಕ ಆಕೃತಿಯಿಂದ ಅಳೆಯುವುದು ಸರಿಯಲ್ಲ ಅಂಗವೈಕಲ್ಯವು ಮನುಷ್ಯನ ಪ್ರತಿಭೆಯನ್ನು ಕಡಿಮೆ ಮಾಡುವುದಿಲ್ಲ. ವಿಕಲಾಂಗರೂ ವಿವಿಧಕೌಶಲ್ಯಗಳನ್ನು ಹೊಂದಿದ್ದು, ಅವಕಾಶ ದೊರೆತಲ್ಲಿ ವಿಶ್ವದ ಪ್ರಮುಖರಲ್ಲೊಬ್ಬಾರಾಗುವುದು ಸೂಜಿಗವೇನಲ್ಲ. ಆದ್ದರಿಂದ ವಿಕಲಾಂಗರಿಗೆ ಸಮನಾದ ಅವಕಾಶವನ್ನು ಒದಗಿಸಿಕೊಟ್ಟು ಅವರೂ ಕೂಡ ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಮಾನ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ದಿಶೆಯಲ್ಲಿ ಈ ದಿನ ನಮ್ಮ ಸಮಾಜವು ಸಜ್ಜಾಗಬೇಕಾಗಿದೆ.
ಕರ್ನಾಟಕದಲ್ಲಿ 2001 ಜನಗಣತಿ ಪ್ರಕಾರ 9,40,643 ಅಂಗವೈಕಲ್ಯ ಹೊಂದಿದ ವ್ಯಕ್ತಿಗಳು ಇದ್ದಾರೆ. ಇವರಲ್ಲಿ 6,61,139 ವಿಕಲಾಂಗರು ಗ್ರಾಮಾಂತರ ಪ್ರದೇಶದಲ್ಲಿಯೂ ಹಾಗೂ 2,79,904 ಜನರು ನಗರ ಪ್ರದೇಶದಲ್ಲೂ ವಾಸಿಸುತ್ತಿದ್ದಾರೆ. ಸುಮರು 4,73,844 ವಿಕಲಾಂಗ ಜನರು ವಿದ್ಯಾವಂತರಾಗಿದ್ದು, ನಮ್ಮ ರಾಜ್ಯದ ಒಟ್ಟು ವಿಕಲಾಂಗ ಜನ ಸಂಖ್ಯೆಯ ಶೇಕಡ 51.40 ರಷ್ಟಿದೆ. ಈ ಜನಸಂಖ್ಯೆಯಲ್ಲಿ ಹೆಚ್ಚಿನ ವಿಕಲಾಂಗರು ಬಡತನದ ರೇಖೆಗಿಂತ ಕೆಳಗಿರುವವರಾಗಿರುತ್ತಾರೆ. ಸೌಲಭ್ಯಗಳ ಕೊರತೆಯಿಂದಾಗಿ ಅಂಗವಿಕಲ ವ್ಯಕ್ತಿಗಳು ಸರಿಯಾದ ವಿದ್ಯಾಭ್ಯಾಸ, ತರಬೇತಿ ಮತ್ತು ಉದ್ಯೋಗವನ್ನು ಪಡೆಯುವಲ್ಲಿ ಅವಕಾಶ ವಂಚಿತರಾಗಿರುತ್ತಾರೆ. ಇವರಲ್ಲಿ ನಿರುದ್ಯೋಗವು ಹೆಚ್ಚಾಗಿದ್ದು ಅಂಗವಿಕಲ ವ್ಯಕ್ತಿಗಳನ್ನು ಇನ್ನೂ ಹೆಚ್ಚಿನ ಬಹು ವಿಧದ ವಿಕಲತೆಗಳಿಗೆ ದಾರಿಮಾಡಿಕೊಡುತ್ತದೆ. ಆದ್ದರಿಂದ ವಿಕಲಾಂಗ ವ್ಯಕ್ತಿಗಳಿಗೆ ಅವಕಾಶವನ್ನು ಕಲ್ಪಿಸಿ ಉತ್ತಮವಾದ ವಿದ್ಯಾಭಾಸ ಮತ್ತು ಕೌಶಲ್ಯಗಳಿಂದ ಸಶಕ್ತರಾಗಿಸಿದಲ್ಲಿ ಅವರು ಸಾಮಾನ್ಯರಂತೆ ಜೀವನವನ್ನುನಡೆಸ ಬಹುದು. ಇದಕ್ಕಾಗಿ ಅವರಿಗೆ ಉತ್ತಮಸೌಲಭ್ಯಗಳನ್ನು ಅವರ ಚಾಲನೆಗೆ ಅಡೆತಡೆಗಳಿಲ್ಲದ ವಾತಾವರಣವನ್ನು ಕಲ್ಪಿಸಿಕೊಡಬೇಕಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಕರ್ನಾಟಕ ಸರ್ಕಾರವು ಈ ನಿಟ್ಟಿನಲ್ಲಿ ಶತಮಾನದ ಹಿಂದೆಯೇ ಇದನ್ನು ಗುರುತಿಸಿ ಸಾಕಷ್ಟು ಸೌಲಭ್ಯಗಳನ್ನು ನೀಡಲುಕ್ರಮವನ್ನು ತೆಗೆದುಕೊಂಡಿದೆ.ವಿಕಲಾಂಗರ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿದೆ.ವಿಕಲಾಂಗ ವ್ಯಕ್ತಿಗಳ ಅಗತ್ಯತೆಗಳನ್ನು ಕಂಡುಕೊಂಡು ಅವರ ಸೇವೆಗಾಗಿ 1988 ರಲ್ಲಿ ಪ್ರತ್ಯೇಕ ಇಲಾಕೆಯನ್ನುತೆರೆದಿದೆ.2003ರಲ್ಲಿ ಇದರೊಂದಿಗೆ ಹಿರಿಯ ನಾಗರಿಕರ ಕಲ್ಯಾಣವನ್ನು ಇಲಾಖೆಗೆವಹಿಸಿಕೊಟ್ಟಿದೆ.ಸರ್ಕಾರದೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಈ ಮೇಲಿನ ಜನರ ಕಲ್ಯಾಣಾಕ್ಕಾಗಿ ಕೈಗೊಡಿಸಿ ಒಮ್ಮತದಿಂದ ಸೇವೆಯನ್ನುನೀಡುತ್ತಾ ಬಂದಿದೆ.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ , ಬೆಂಗಳೂರು
ಪೋಡಿಯಂ ಬ್ಲಾಕ್ , ವಿಶ್ವೇಶ್ವರಯ್ಯ ಕೇಂದ್ರ,
ಡಾ||ಬಿ.ಆರ್.ಅಂಬೇಡ್ಕರ್ ವೀದಿ , ಬೆಂಗಳೂರು-560 001
ದೂರವಾಣಿ ಸಂಖ್ಯೆ : 080-22860907, 22866046 , 22866066
ಫ್ಯಾಕ್ಸ್ : 080-22868347
ಇ-ಮೇಲ್ ವಿಳಾಸ : dir-dwdsc-ka@nic.in
ಕೊನೆಯ ಮಾರ್ಪಾಟು : 5/24/2020
ವಿಕಲಚೇತನರಿಗಾಗಿ ಶೈಕ್ಷಣಿಕ ಯೋಜನೆಗಳು
ಅಂಗವಿಕಲರ ರಾಜ್ಯ ನೀತಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ