ಭಾರತದಲ್ಲಿ ೨/೩ ರಷ್ಟು ವೃದ್ಧ ಪುರುಷರು ಮತ್ತು ಶೇ ೯೦-೯೫% ರಷ್ಟು ವೃದ್ಧ ಮಹಿಳೆಯರು ಅನಕ್ಷರಸ್ಥರಾಗಿದ್ದು, ಬಹುಪಾಲು ಮಹಿಳೆಯರು ಒಬ್ಬಂಟಿಗರಾಗಿದ್ದಾರೆ. ಅದ್ದರಿಂದ ಆರ್ಥಿಕ ಅವಲಂಬನೆಯು ಅಧಿಕವಾಗಿದೆ. ೨೦೦೧ನೇ ಇಸವಿಯ ಹೊತ್ತಿಗೆ ೧.೮ ಲಕ್ಷ ವೃದ್ಧ ಪುರುಷರು ಮತ್ತು ೩.೫ ಮಿಲಿಯನ್ ವೃದ್ಧ ಮಹಿಳೆಯರಿಗೆ ಉದ್ಯೋಗದ ಅವಶ್ಯಕತೆ ಇದೆ ಎಂದು ಅಂದಾಜು ಮಾಡಲಾಗಿದೆ. ಈ ಸಂಖ್ಯೆಯನ್ನು ಪ್ರಸ್ತುತ ಉದ್ಯೋಗದಲ್ಲಿರುವ ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ ಗುರುತಿಸಲಾಗಿದೆ.