অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಗುವಿನ ಹಕ್ಕುಗಳು

ಭಾರತದಲ್ಲಿನ 300 ದಶಲಕ್ಷ ಮಕ್ಕಳಲ್ಲಿ ಬಹುತೇಕ ಮಕ್ಕಳು ತಮ್ಮ ಶಾರೀರಕ ಹಾಗೂ ಬೌದ್ಧಿಕ ಅಭಿವೃದ್ಧಿಗೆ ತಡೆಯೊಡ್ಡುವ ಸಾಮಾಜಿಕ ಮತ್ತು ಆರ್ಥಿಕ ಪರಿಸರದಲ್ಲಿ ಜೀವಿಸುತ್ತಿದ್ದಾರೆ ಎಂಬುದು ವಾಸ್ತವ. ಭವಿಷ್ಯದ ವಿಚಾರಪೂರಿತ, ಸದೃಢ ಭಾರತವನ್ನು ನಿರ್ಮಾಣ ಮಾಡಲು ಮಕ್ಕಳ ಇಂತಹ ಅಗತ್ಯಗಳಿಗೆ ಸ್ಪಂದಿಸಲು ನಾವೆಲ್ಲಾ ಸಿದ್ಧರಾಗಬೇಕಾದುದು ಸದ್ಯದ ಆವಶ್ಯಕತೆಯಾಗಿದೆ.


ಭಾರತದಲ್ಲಿ ಸ್ವಾತಂತ್ರ್ಯೋತ್ತರ ದಶಕಗಳು ಮಕ್ಕಳ ಅಗತ್ಯಗಳ ಸಂವೈಧಾನಿಕ ನೀಡಿಕೆಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಕಾಯಿದೆ ರಚನೆಗಳ ಮೂಲಕ ಸರ್ಕಾರದ ಬದ್ಧತೆಯ ಸ್ಪಷ್ಟ ಅಭಿವ್ಯಕ್ತಿಯನ್ನು ಕಂಡಿದೆ. ಈ ಶತಮಾನದ ಹಿಂದಿನ ದಶಕದಲ್ಲಿ ನಾಟಕೀಯ ತಾಂತ್ರಿಕ ಅಭಿವೃದ್ದಿಯು, ಮಕ್ಕಳನ್ನು ಉದ್ದೇಶಿಸಿದ, ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ ಮತ್ತು ಇತರ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವಕಾಶಗಳ ನವೀನ ಆಯಾಮವನ್ನೇ ತೆರೆದಿಟ್ಟಿದೆ.

ಭಾರತದಲ್ಲಿ, ಮಕ್ಕಳನ್ನೇ ಉದ್ದೇಶಿಸಿದ, ಅವರ ಸಮಸ್ಯೆಗಳಿಗೆ ಗಮನ ಕೇಂದ್ರೀಕರಿಸಿದ ಕಾರ್ಯಗಳಿಗಾಗಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳೆಲ್ಲಾ ಈಗ ಕೈಜೋಡಿಸಿವೆ. ಇದರಲ್ಲಿ ಮಕ್ಕಳು ಮತ್ತು ದುಡಿಮೆಗೆ ಸಂಬಂಧಿಸಿದ ವಿಷಯಗಳು, ಬಾಲದುಡಿಮೆಯ ಸವಾಲುಗಳನ್ನು ಪರಿಹರಿಸುವುದು, ಹೆಣ್ಣು ಶಿಶುವಿಗೆ ತೋರುವ ತಾರತಮ್ಯದ ನಿವಾರಣೆ, ಬೀದಿ ಮಕ್ಕಳನ್ನು ಮೇಲೆತ್ತುವುದು, ವಿಕಲ ಚೇತನ ಮಕ್ಕಳ ವಿಶೇಷ ಅಗತ್ಯಗಳನ್ನು ಗುರುತಿಸಿ ಪೂರೈಸುವುದು ಮತ್ತು ಅವರ ಮೂಲಭೂತ ಹಕ್ಕಾದ ಶಿಕ್ಷಣವು ಪ್ರತೀ ಮಗುವಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲಾ ಸೇರಿವೆ.

ಮಕ್ಕಳ ಹಕ್ಕುಗಳು ಸುಧಾರಿಸಿವೆ

ಖಮ್ಮಂ ಮತ್ತು ದಾಂತೆ ವಾಡಗಳಲ್ಲಿ ಮಕ್ಕಳ ಹಕ್ಕುಗಳು ಸುಧಾರಿಸಿವೆ.

ಆಂಧ್ರ ಪ್ರದೇಶ ಮತ್ತು ಚತ್ತೀಸ್‌ಗಡ ರಾಜ್ಯಗಳ ಅರಾಜಕತೆಯಿಂದ ಕೂಡಿದ ಖಮ್ಮಂ ಮತ್ತು ದಾಂಟೆವಾಡ ಜಿಲ್ಲೆಳಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ಶಿಫಾರಸ್ಸಿಗೆ ಅನುಗುಣವಾಗಿ ಆಂಧ್ರಪ್ರದೇಶ ಸರ್ಕಾರವು ಅಪೌಷ್ಟಿಕತೆ ನಿವಾರಿಸಲು ಅಂಗನವಾಡಿಗಳನ್ನು ರಚಿಸಿರುವುದು ಕಂಡುಬಂದಿತು. ಮತ್ತು ಆಶಾ(ASHA) ಮಾನ್ಯತೆ ಪಡೆದ ಸಾಮಾಜಿಕ ಚಳುವಳಿಗಾರರನ್ನು ನೇಮಿಸಿದೆ ಅವರು ಮಕ್ಕಳ ಅರೋಗ್ಯ ಮತ್ತು ನಿರೋಧತೆಯ ಅನುಷ್ಠಾನವನ್ನು ಗಮಿನಿಸುವರು. ವಸತಿ ಸೇತು ಬಂಧ ಕಾರ್ಯಕ್ರಮಗಳು ( RBC) ಗಳು ಶಾಲೆ ಬಿಟ್ಟ ಮಕ್ಕಳನ್ನು( ಚತ್ತೀಸ ಗಡದಲ್ಲಿ ನಿರ್ವಸತಿಗರಾದ) ಶಾಲೆಗೆ ಮರಳಿತರಲು ಅನುಕೂಲ ವಾಗುವುದು.

 

ಖಮ್ಮಂಗೆ ಫೆಬ್ರವರಿಯಲ್ಲಿ ನೀಡಿದ ಅನುಪಾಲನಾ ಭೇಟಿಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ(NCPCR) ತಂಡವು ಅಪೌಷ್ಟಿಕತೆಯು ಇಳಿಮುಖವಾಗಿರುವುದನ್ನು ಗಮನಿಸಿತು. ಪರ್ಯಾಯ ಕಲಿಕಾ ಕೇಂದ್ರಗಳು ಮತ್ತು ಸೇತು ಬಂಧ ಕಾರ್ಯಕ್ರಮಗಳು (RBC) ಮಕ್ಕಳನ್ನು ಅವರ ದುಡಿತದಿಂದ ವಿಮುಕ್ತಿಗೊಳಿಸಿದವು. ಮತ್ತು ಹೆಚ್ಚಿನ ಪ್ರಮಾಣದ ಮಕ್ಕಳು ನಿರೋಧತೆ ಶಕ್ತಿಯನ್ನು ಗಳಿಸಿಕೊಂಡಿದ್ದರು.
ಹಾಗಿದ್ದರೂ, ತಂಡವು ಆರೋಗ್ಯ ಕಾರ್ಯಕರ್ತರ ಮೇಲ್ವಿಚಾರಣೆಗ ಮತ್ತು ಅವರನ್ನು ಸಕ್ರಮಗೊಳಿಸುವ ಅಗತ್ಯವನ್ನು ಗಮನಿಸಿದರು. ಹದಿಹರೆಯದ ಹುಡುಗಿಯರೂ ಇನ್ನೂ ಶಾಲೆಯ ಹೊರಗಿರುವುದು ತಿಳಿಯಿತು. ಮತದಾರರ ಗುರುತಿನ ಚೀಟಿ ಮತ್ತು ರೇಷನ್‌ ಕಾರ್ಡ ಇಲ್ಲದಿರುವುದು ನಿರ್ವಸಿತರಾದ ಅವರ ಅಭದ್ರತೆಯನ್ನು ಹೆಚ್ಚಿಸಿತ್ತು. ಅಲ್ಲದೆ ತೀವ್ರವಾದ ನೀರಿನ ಕೊರತೆಯು ಆರೋಗ್ಯ ಮತ್ತು ಪೌಷ್ಟಿಕತೆಯ ಸುಧಾರಣೆಯ ಹಿನ್ನಡೆಗೆ ಕಾರಣ ವಾಗಿದ್ದವು.

ದಾಂಟೆವಾಡದ ಸುಕ್ ವಲಯವನ್ನು ಭೇಟಿ ಮಾಡಿದಾಗ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ(NCPCR) ತಂಡವು ಸಮುದಾಯದ ಬಾಲ ಅಧಿಕಾರ ಸುರಕ್ಷಾ ಸಮಿತಿಗಳನ್ನು (BASS) ರಚಿಸಿ ಅಲ್ಲಿನ ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗೆ ಅಥವ RBCs ಗಳಿಗೆ ಕಳುಹಿಸಲು ಪ್ರಚೋದನೆ ನೀಡುವಂತೆ ಮಾಡಲಾಯಿತು ಬಾಲ ಅಧಿಕಾರ ಸುರಕ್ಷಾ ಸಮಿತಿಗಳ ಕೆಲವು ಸದಸ್ಯರನ್ನು ಶಂಕಿತರೆಂದು ಆಪಾದನೆಗೆ ಒಳಗಾದವರನ್ನು ಆಯ್ದು ಕೊಂಡು ಅವರ ಬಿಡುಗಡೆಯಾದ ಮೇಲೆ ಅವರ ಮಕ್ಕಳನ್ನು ಶಾಲೆಗೆ ಸೇರಿಸಲು ಉತ್ತೇಜಿಸಲಾಯಿತು. ಆ ಪ್ರದೇಶದಲ್ಲಿ ಶಿಕ್ಷಣಕ್ಕೆ ಬೇಡಿಕೆಯು ಹೆಚ್ಚಾದುದರಿಂದ ಸರ್ಕಾರವು 500 ಸ್ಥಾನಗಳಿರುವ ಆಶ್ರಮ ಶಾಲೆಗಳನ್ನು ಮತ್ತು ವಿದ್ಯಾರ್ಥಿ ನಿಲಯಗಳನ್ನು 8 ನೆ ತರಗತಿಗಿಂತ ಹೆಚ್ಚಿನ ಶಿಕ್ಷಣ ಪಡೆಯಲು ಮಕ್ಕಳ ಅನುಕೂಲಕ್ಕಾಗಿ ಸ್ಥಾಪಿಸಲಾಯಿತು.
(BASS) ಸಮುದಾಯದ ಬಾಲ ಅಧಿಕಾರ ಸುರಕ್ಷಾ ಸಮಿತಿಗಳ ಸದಸ್ಯರು ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಅತಿ ಹೆಚ್ಚಿನ ದೃಢ ನಿರ್ಧಾರ ಪ್ರಕಟಿಸಿದರು. ಹೈದ್ರಾಬಾದಿಗೆ ಸಾಗಿಸಲಾಗಿದ್ದ 6 ಮಕ್ಕಳನ್ನು BASS ಸದಸ್ಯರು ಪತ್ತೆ ಹಚ್ಚಿದರು.ತಾವೆ ವಂತಿಗೆ ಹಾಕಿ ನಗರಕ್ಕೆ ಹೋಗಿ ಅಲ್ಲಿನ ಎಂ ವಿ ಫೌಂಡೇಷನ್‌ ಎಂಬ ಸರಕಾರೇತರ ಸಂಸ್ಥೆಯ ಸಹಾಯದಿಂದ ಅವರನ್ನು ವಾಪಸ್ಸು ಕರೆತಂದರು. ಸದಸ್ಯರ ಸತತ ಮೇಲ್ವಚಾರಣೆಯಿಂದಾಗಿ ಗ್ರಾಮಗಳಲ್ಲಿ ಎಲ್ಲ ಮಕ್ಕಳೂ ಪೂರ್ಣವಾಗಿ ಶಾಲೆಗೆ ಹಾಜರಾಗುತ್ತಿರುವರು. ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಅವರಿಗೆ ಸಹಾಯ ಮಾಡಲಾಗುತ್ತಿದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate