অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯನ್ನು, ಮಹಿಳ ಮತ್ತು ಮಕ್ಕಳ ಅಭಿವೃದ್ದಿಗೆ ಬೇಕಾಗಿದ್ದ ಉತ್ತೇಜನ ಮತ್ತು ಶೀಘ್ರಗತಿ ನೀಡಲು, 1985 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಅಂಗವಾಗಿ ಸ್ಥಾಪಿಸಲಾಯಿತು. ದಿನಾಂಕ 30.01. 2006 ರಿಂದ ಈ ಇಲಾಖೆಯನ್ನು ಸಚಿವಾಲಯವನ್ನಾಗಿ ಮೇಲ್ದರ್ಜೆಗೆ ಶ್ರೇಣಿಕರಿಸಲಾಯಿತು.

ಈ ಸಚಿವಾಲಯದ ಅತಿ ಮೂಖ್ಯ ಜವಾಬ್ದಾರಿಯೆಂದರೆ ಮಹಿಲ್ಳಾ ಮತ್ತು ಮಕ್ಕಳ ಸಮಗ್ರ ಅಭಿವೃದ್ದಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗಾಗಿ ಮುಖ್ಯ ಕೃತಿಯಾಗಿರುವ ಈ ಸಚಿವಾಲಯವು ಯೋಜನೆಗಳನ್ನು, ನೀತಿಗಳನ್ನು, ಕಾರ್ಯಕ್ರಮಗಳನ್ನು ನಿರೂಪಿಸುವುದು/ತಿದ್ದು ಪಡಿಸುವುದು, ಮಹಿಳೆಯರ ಮಕ್ಕಳ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರಯತ್ನಗಳಿಗೆ ಮಾರ್ಗದರ್ಶನ ಹಾಗೂ ಸಂಯೋಜನೆಯನ್ನು ನೀಡುವುದು. ಈ ಕ್ಷೇತ್ರದಲ್ಲಿ ಮುಖ್ಯ ಪಾತ್ರ ವಹಿಸುವುದಲ್ಲದೇ, ಸಚಿವಾಲಯವೂ ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ಕೆಲವು ನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಕಲ್ಯಾಣ ಹಾಗೂ ಲಿಂಗತ್ವ ಸೂಕ್ಷ್ಮತೆಯನ್ನು ಮೂಡಿಸುವ ಅಂಶಗಳನ್ನು ಈ ಕಾರ್ಯಕ್ರಮ ಒಳಗೊಂಡಿದೆ. ಈ ಕಾರ್ಯಕ್ರಮಗಳು, ಅರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ, ಇತ್ಯಾದಿ, ಕ್ಷೇತ್ರಗಳಲ್ಲಿನ ಇತರೆ ಸಾಮಾನ್ಯ ಅಭಿವೃದ್ದಿ ಕಾರ್ಯಕ್ರಮಗಳಿಗೆ ಪುರವಣಿ ಹಾಗೂ ಪೂರಕ ಪಾತ್ರವನ್ನು ವಹಿಸುತ್ತದೆ. ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಶಕ್ತರಾಗಿ ರಾಷ್ಟ್ರೀಯ ಅಭಿವೃದ್ದಿಯಲ್ಲಿ ಪುರುಷರೊಂದಿಗೆ ಸಮಾನ ಪಾಳುದಾರರನ್ನಾಗಿಸುವುದೇ ಈ ಕಾರ್ಯಕ್ರಮಗಳ ಮೂಖ್ಯ ಉದ್ದೇಶವಾಗಿದೆ.

ನೀತಿಗಳು

ಮಕ್ಕಳ  ಸಮಗ್ರ ಅಭಿವೃದ್ದಿಗಾಗಿ ಸಚಿವಾಲಯವು ಪ್ರಪಂಚದ ಅತಿ ದೊಡ್ಡ ಹಾಗೂ ಏಕೈಕ ಕಾರ್ಯಕ್ರಮವಾದ ಸಮಗ್ರ ಶಿಶು ಅಭಿವೃದ್ದಿ ಸೇವೆಗಳ ( ಐ. ಸಿ. ಡಿ. ಎಸ್)ನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯಡಿಯಲ್ಲಿ ಹಲವಾರು ಸೇವಾ ಅಂಶಗಳಾದ ಪೂರಕ ಪೋಷಣೆ, ಚುಚುಮದ್ದು, ಅರೋಗ್ಯ ತಪಾಸಣೆ ಮತ್ತು ರೆಫರಲ್ ಸೇವೆಗಳು, ಶಾಲಾ ಪೂರ್ವ ಅನೌಪಚಾರಿಕ ಶಿಕ್ಷಣ, ಇತ್ಯಾದಿಗಳನ್ನು ಒಳಗೊಂಡಿದೆ. ಮಹಿಳೆಯರ ಸಶಕ್ತೆಗಾಗಿ ಸಮಗ್ರ ಯೋಜನೆಯಾದ ' ಸ್ವಯಂಸಿದ್ದ ' ವನ್ನು ಸಹ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ. ಹಲವು ಕ್ಷೇತ್ರಿಯ ಕಾರ್ಯಕ್ರಮಗಳ ಪರಿಣಾಮಕಾರಿ ಸಂಯೋಜನೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಚಿವಾಲಯದ ಹಲವು ಕಾರ್ಯಕ್ರಮಗಳನ್ನು ಸರ್ಕಾರೇತರ ಸಂಸ್ಥೆಗಳ ಮೂಲಕ ಅನಿಷ್ಠಾನಗೊಳಿಸುತ್ತಿದೆ. ಸರ್ಕಾರೇತರ ಸಂಸ್ಥೆಗಳ ಹೆಚ್ಚಿನ ಹಾಗೂ ಪರಿಣಾಮಾಕಾರಿ ಭಾಗವಹಿಸುವಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಚಿವಾಲಯವು ತೆಗೆದುಕೊಂಡಿರುವ ನೀತಿ ನಿರೂಪಣಾ ಕ್ರಮಗಳೆಂದರೆ ಐ.ಸಿ.ಡಿ ಎಸ್ ನ ಸಾರ್ವತ್ರೀಕರಣ ಮತ್ತು ಕಿಶೋರಿ ಶಕ್ತಿ ಯೋಜನೆ, ಹದಿಹರೆಯದ ಹುಡುಗಿಯರಿಗಾಗಿ ಪೋಷಣೆ ಕಾರ್ಯಕ್ರಮ, ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಆಯೋಗದ ಸ್ಥಾಪನೆ, ಮತ್ತು ಕೌಟುಂಬಿಕ ದೌರ್ಜನ್ಯದ ವಿರುದ್ದ ಮಹಿಳೆಯರನ್ನು ಸಂರಕ್ಷಿಸಲು ಕಾಯ್ದೆಯ ಅನುಷ್ಠಾನ.

ಸಂಸ್ಥೆ

ರಾಜ್ಯ ಸಚಿವರಾದ ( ಐ.ಸಿ ) ಶ್ರೀಮತಿ . ಕ್ರಿಷ್ಣ ತೀರಥ್ ರವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದ ಮುಖ್ಯಸ್ಥರಾಗಿದ್ದು, ಶ್ರೀ. ಡಿ. ಸಿಕ್ರಿ ರವರು ಕಾರ್ಯದರ್ಶಿಗಳಾಗಿದ್ದಾರೆ.ಶ್ರೀ ಸುದೀರ್  ಕುಮಾರ್ ರವರು ಮಹಿಳ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದ ಹೆಚ್ಚಿವರಿ ಕಾರ್ಯದರ್ಶಿಗಳಾಗಿದ್ದಾರೆ. ಏಳು ಅಧಿಕಾರಿಗಳ ಮೂಲಕ ಸಚಿವಾಲಯವು ತನ್ನ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುತ್ತಿದೆ.

ಸಚಿವಾಲಯದ ಅಡಿಯಲ್ಲಿ ಆರು ಸ್ವಯಂಶಾಸನದ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಅವುಗಳೆಂದರೆ-

ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ದಿ ಸಂಸ್ಥೆ ( ನ್ಯಾಷನಲ್  ಇನ್ ಸ್ಟಿಟ್ಯೂಟ್ ಆಫ್ ಪಬ್ಲಿಕ್ ಕೊಆಪರೇಶನ್ ಅಂಡ್ ಚೈಲ್ಡ್ ಡೆವಲಪ್ಮೆಂಟ್ )- ನಿಪ್ಸೆಡ್

ರಾಷ್ಟ್ರೀಯ ಮಹಿಳಾ ಆಯೋಗ ( ಎನ್. ಸಿ. ಡಬ್ಲ್ಯೂ)

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ( ಎನ್.ಸಿ.ಪಿ.ಸಿ.ಆರ್  )

ದತ್ತು ಸ್ವೀಕಾರ ಸಂಪನ್ಮೂಲ ಸಂಸ್ಥೆ ( ಸಿ. ಎ. ಆರ್. ಎ )

ಕೇಂದ್ರೀಯ ಸಾಮಾಜಿಕ ಕಲ್ಯಾಣ ಮಂಡಳಿ ( ಸಿ. ಎಸ್. ಡಬ್ಲ್ಯೂ.ಬಿ )

. ರಾಷ್ಟ್ರೀಯ ಮಹಿಳಾ ಕೋಶ  ( ಆರ್. ಎಂ. ಕೆ )

ನಿಪ್ಸೆಡ್ ಮತ್ತು ಆರ್. ಎಂ. ಕೆ ಯು ಸಂಸ್ಥೆಗಳ ನೊಂದಾಣಿ ಕಾಯ್ದೆ 1860 ರ ಅಡಿಯಲ್ಲಿ ನೊಂದಾಣಿ ಮಾಡಿಸಲಾಗಿರುವ , ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವ. ಸಿ.ಎಸ್.ಡಬ್ಲ್ಯೂ, ಒಂದು ಔದಾರ್ಯ ಕಂಪನಿಯಾಗಿದ್ದು. ಭಾರತಿಯ ಕಂಪನಿಗಳ ಕಾಯ್ದೆ 1956 ರ ಸೆಕ್ಷನ್ 25 ರ ಅಡಿಯಲ್ಲಿ ನೊಂದಾಯಿಸಲಾಗಿದೆ. ಈ ಸಂಸ್ಥೆಗಳು ಅನುದಾನವನ್ನು ಸಂಪೂರ್ಣವಾಗಿ ಭಾರತದ ಕೇಂದ್ರ ಸರ್ಕಾರದಿಂದ ಪಡೆಯುತ್ತಿದ್ದು, ಇಲಾಖೆಗೆ ತನ್ನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಸಹಕಾರ ನೀಡುತ್ತವೆ. ಅಲ್ಲದೆ ಇಲಾಕೆಯ ಕೆಲವೊಂದು ಕಾರ್ಯಕ್ರಮಗಳನ್ನು/ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಕೂಡ ಸಹಕರಿಸುತ್ತವೆ ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸಲು 1992 ರಲ್ಲಿ ಉನ್ನತ ಮಟ್ಟದ ಕಾಯ್ದೆಬದ್ಧ ಅಂಗವಾಗಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸ್ಥಾಪಿಸಲಾಯಿತು. ಈ ರೀತಿಯಾಗಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವನ್ನು ಮಾರ್ಚ್ 2007 ರಲ್ಲಿ ಸ್ಥಾಪಿಸಲಾಗಿದ್ದು, ಇದು ಕೂಡ ರಾಷ್ಟ್ರ ಮಟ್ಟದ ಕಾಯ್ದೆಬದ್ಧ ಅಂಗವಾಗಿದೆ.

ಸಚಿವಾಲಯಕ್ಕೆ ವಹಿಸಲಾಗಿರುವ ವಿಷಯಗಳು

ಕೌಟುಂಬಿಕ ಕಲ್ಯಾಣ

ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಹಾಗೂ ಈ ವಿಷಯಕ್ಕೆ ಸಂಬಂದಿಸಿದಂತೆ ಇತರೆ ಸಚಿವಾಲಯಗಳ ಮತ್ತು ಸಂಸ್ಥೆಗಳ ಚಟುವಟಿಕೆಗಳೊಂದಿಗೆ ಸಂಯೋಜನೆ.

ಮಹಿಳಾ ಮತ್ತು ಮಕ್ಕಳ ಮಾನವ ಸಾಗಾಣಿಕೆ ಕುರಿತು ಯುನೈಟೈಡ್ ನೇಶನ್ಸ್ ಅರ್ಗನೈಜೇಶನ್ಸ್  ಗೆ ವರದಿ.

ಪೂರ್ವ ಪ್ರಾಥಮಿಕ ಶಿಕ್ಷಣದೊಂದಿಗೆ ಶಾಲಾ ಮಕ್ಕಳ ಆರೈಕೆ.

ರಾಷ್ಟ್ರೀಯ ಪೋಷಣಾ ನೀತಿ, ಪೋಷಣೆಗಾಗಿ ರಾಷ್ಟ್ರೀಯ ಕಾರ್ಯ ಯೋಜನೆ ಮತ್ತು ರಾಷ್ಟ್ರೀಯ ಪೋಷಣಾ ಅಭಿಯಾನ.

ಈ ಇಲಾಖೆಗೆ ಮೀಸಲಾಗಿರುವ ವಿಷಯಗಳಿಗೆ ದೇಣಿಗೆಗಳು.

ಈ ಇಲಾಖೆಗೆ ಮೀಸಲಾಗಿರುವ ವಿಷಯಗಳಿಗೆ ಸಂಬಂದಿಸಿದಂತೆ ಸ್ವಯಂಪ್ರೇರಿತ ಕ್ರಮಗಳ ಪ್ರೋತ್ಸಾಹ ಮತ್ತು ಅಭಿವೃದ್ದಿ.

ಈ ಕಾಯ್ದೆಗಳ ಅನುಷ್ಠಾನ -

ಇಮ್ಮಾರಲ್ ಟ್ರಾಫಿಕ್  ಇನ್ ವಿಮೆನ್ ಆಂಡ್ ಗರ್ಲ್  ಆಕ್ಟ್ . 1956 ( 1956 ರ ವರೆಗೆ ತಿದ್ದುಪಡಿ )

. ದ ಇಂಡಿಸೆಂಟ್ ರೆಪ್ರಜಂಟೇಶನ್ ಆಫ್ ವಿಮೆನ್ ( ಪ್ರಿವೆಂಶನ್ ) ಆಕ್ಟ್ , 1986 ( 1986 ರ 60 ರಂತೆ ).

. ದ ಡೌರಿ ಪ್ರಾಹಿಬಿಶನ್ ಆಕ್ಟ್ 1961 ( 1961 ರ 28 ರಂತೆ

ದ ಕಮೀಶನ್ ಆಫ್ ಸತಿ ( ಪ್ರಿವೆಂಶನ್ ) ಆಕ್ಟ್, 1987 ( 1988 ರ 3 ರಂತೆ ), ಈ ಕಾಯ್ದೆಗಳ ಅಡಿಯಲ್ಲಿ ಮಾಡುಲಾಗುವ ಅಪರಾಧಗಳ ವಿರುದ್ದ ಕ್ರಿಮಿನಲ್ ಜಸ್ಟೀಸ್ ನ ಅನುಷ್ಠಾನವನ್ನು ಹೊರತುಪಡಿಸಿ.

ಶಿಶುಗಳಿಗೆ ಪೂರಕ ಹಾಲು, ಫೀಡಿಂಗ್ ಬಾಟಲ್ ಗಳು ಮತ್ತು  ಶಿಶು ಆಹಾರ  ( ಉತ್ಪಾದನೆ, ಪೂರೈಕೆ ಹಾಗೂ ವಿತರಣೆಯ ನಿಯಂತ್ರಣ ) ಕಾಯ್ದೆ, 1992 ( 1992 ರ 41 ರಂತೆ ) ಯ ಅನುಷ್ಠಾನ.

ಕೊ ಆಪರೇಟಿವ್ ಫಾರ್ ಅಸಿಸ್ಟೆಂಟ್ ಆಂಡ್ ರಿಲೀಫ್ ಎವ್ರಿವೇರ್ ( ಕೇರ್ ) ಚಟುವಟಿಕೆಗಳ ಸಂಯೋಜನೆ.

ಲಿಂಗತ್ವ ಸೂಕ್ಷ್ಮತೆಯ ದತ್ತಾಂಶದ ಅಭಿವೃದ್ದಿ ಒಳಗೊಂಡಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಕಲ್ಯಾಣಕ್ಕೆ ಸಂಬಂದಿಸಿದ ಯೋಜನೆ, ಸಂಶೋದನೆ, ಮೌಲ್ಯ ಮಾಪನೆ, ಮೇಲ್ವಿಚಾರಣೆ, ಯೋಜನಾ ತಯಾರಿ, ಟಿಪ್ಪಣಿ ಮತ್ತು ತರಬೇತಿ.

ಯುನೈಟೈಡ್ ನೇಶನ್ಸ್ ಚಿಲ್ಡ್ರನ್ ಫಂಡ್ ( ಯುನಿಸೆಫ್ )

ಕೇಂದ್ರೀಯ ಸಾಮಾಜಿಕ ಕಲ್ಯಾಣ ಮಂಡಳಿ ( ಸಿ.ಎಫ್.ಡಬ್ಲ್ಯೂ.ಬಿ).

ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ದಿ ಸಂಸ್ಥೆ ( ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಪಬ್ಲಿಕ್ ಕೊಆಪರೇಶನ್ ಆಂಡ್ ಚೈಲ್ಡ್ ಡೆವಲಪ್ಮೆಂಟ್) - ನಿಪ್ಸೆಡ್.

ಆಹಾರ ಮತ್ತು ಪೋಷಣಾ ಮಂಡಳಿ.

ಆಹಾರ ಮತ್ತು ಪೋಷಣಾ ಮಂಡಳಿ ( ಎಫ್. ಎನ್.ಬಿ)

ಪೂರಕ ಮತ್ತು ಸಂರಕ್ಷಿತ ಆಹಾರಗಳ ಅಭಿವೃದ್ದಿ ಮತ್ತು ಖ್ಯಾತಿ.

ಪೋಷಣೆಯ ವಿಸ್ತೀರ್ಣ.

ಮಹಿಳೆಯರ ಸಶಕ್ತತೆ ಮತ್ತು ಲಿಂಗ ಸಮಾನತೆ.

ರಾಷ್ಟ್ರೀಯ ಮಹಿಳಾ ಆಯೋಗ

ರಾಷ್ಟ್ರೀಯ ಮಹಿಳಾ ಕೋಶ (ಆರ್.ಎಂ.ಕೆ)

ದ ಜುವಿನೈಲ್ ಜಸ್ಟೀಸ್  ( ಕೇರ್ ಆಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ) ಆಕ್ಟ್ , 2000 ( 2000 ರ 56 ರಂತೆ ).

ಬಾಲಾಪರಾಧಿಗಳ ಪರೀಕ್ಷಾರ್ಥ ಅವಧಿ.

ದತ್ತು ಸ್ವೀಕಾರ ಕೇಂದ್ರೀಯ ದತ್ತು ಸ್ವೀಕಾರ ಸಂಪನ್ಮೂಲ ಸಂಸ್ಥೆ ಮತ್ತು ಮಕ್ಕಳ ಸಹಾಯವಾಣಿ ( ಚೈಲ್ಡ್ ಲೇನ್ ).

ದ ಚಿಲ್ಡ್ರನ್ ಆಕ್ಟ್, 1960( 1960 ರ 60 ರಂತೆ ).

ಬಾಲ್ಯ ವಿವಾಹ ತಡೆಗಟ್ಟುವ ಕಾಯ್ದೆ, 1929( 929 ರ 19 ರಂತೆ )

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate