ಮಹಿಳೆಯರಿಗೆ ರಾಷ್ಟ್ರೀಯ ಜಮೆ ನಿಧಿ ಅಥವಾ ರಾಷ್ಟ್ರೀಯ ಮಹಿಳಾ ಕೋಶಯನ್ನು ಒಂದು ಸ್ವತಂತ್ರ ನೋಂದಾಯಿತ ಸೊಸೈಟಿಯಾಗಿ ಮಾರ್ಚ್ 1993 ರಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ಥಾಪಿಸಲಾಯಿತು. ಆರಂಭದಲ್ಲಿ ಇದರ ಮೂಲ ಸಂಗ್ರಹ ಮೊತ್ತ ಕೇವಲ ರೂ 310000000 ಯಾಗಿದ್ದು, ಯಾವುದೇ ಬ್ಯಾಂಕ್ ಕ್ಷೇತ್ರವನ್ನು ಬದಲಿಸುವ್ ಉದ್ದೇಶ ಇದಕ್ಕೆ ಇರಲಿಲ್ಲ . ಬದಲಾಗಿ ಬ್ಯಾಂಕ್ ವ್ಯವಸ್ಥೆ ನೀಡುವ ಸೌಲಭ್ಯಗಳ ಮತ್ತು ಬಡ ಜನರ ಅವಶ್ಯಕತೆಗಳ ನಡುವಿನ ಅಂತರವನ್ನು ಭರಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಯಿತು.
ಇದರ ಮುಖ್ಯ ಉದ್ದೇಶಗಳು
ಆದಾಯ ಸೃಷ್ಠಿಗಾಗಿ ಅಸ್ತಿ ನಿರ್ಮಾಣಕಾಗಿ ಬಡ ಮಹಿಳೆಯರಿಗೆ ಸಣ್ಣ ಸಾಲ (ಮೈಕ್ರೋ- ಕ್ರೆಡಿಟ್ ) ನೀಡಿ ಅವರ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು.
- ಅನೌಪಚಾರಿಕವೆನಿಸುವ ಬಟವಾಡೆ ವ್ಯವಸ್ಥೆಯನ್ನು ಸ್ವೀಕರಿಸುವುದು. ಈ ವ್ಯವಸ್ಥೆಯ ಗ್ರಾಹಕ ಸ್ನೇಹಿಯಾಗಿ, ಸುಲಭ ಮತ್ತು ಕಡಿಮೆ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಇದು ಶೀಘ್ರದಲ್ಲಿ ಮತ್ತು ಪದೇ-ಪದೇ ಬಟವಾಡೆ ಮಾಡುವುದಲ್ಲದೆ, ಮಾರ್ಗ ನಮ್ಯವಾಗಿರುವುದು. ಇದು ಮಿತವ್ಯಯ ಮತ್ತು ಉಳಿತಾಯವನ್ನು ಜೋಡಿಸುತ್ತದೆ. ಅಲ್ಲದೆ ಇದರಲ್ಲಿ ಸಾಲ ಕೇಳುವವರಿಗೆ ಮತ್ತು ಸಾಲ ನೀಡುವವರಿಗೆ ವ್ಯವಹಾರದ ವೆಚ್ಚ ಕಡಿಮೆಯಾಗಿರುತ್ತದೆ.
- ಮಹಿಳಾ ಉಳಿತಾಯ ಸಂಘಗಳ ಸಂಘಟನೆಗಳಲ್ಲಿ ಪಾಲುದಾರಿಕೆ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ , ಇದನ್ನು ಬೇರೆಡೆ ಕೊಂಡೊಯ್ಯುವುದು ಹಾಗೂ ಸಾಲವನ್ನು ಪರಿಣಾಮಕಾರಿಯಾಗಿ ಬಳಸಿಕೋಳ್ಳುವುದು.
- ಸಂಘಟನೆಯ ಪರಿಕಲ್ಪನೆಯನ್ನು ಬಳಸುವುದು ಮತ್ತು ಮಹಿಳಾ ಸಶಕ್ತತೆ ಅವರ ಸಮಾಜೋ ಆರ್ಥಿಕ ಬದಲಾವಣೆ ಮತ್ತು ಅಭಿವೃದ್ಧಿಯ ಸಾಧನವಾಗಿ ಸಾಲ ನೀಡುವುದು.
- ಭಾರತ ಸರ್ಕಾರ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳೊಂದಿಗೆ, ಸಾಲ ನೀಡುವ ಸಂಸ್ಥೆಗಳೊಂದಿಗೆ, ಕೈಗಾರಿಕ ಹಾಗೂ ವಾಣಿಜ್ಯ ಸಂಸ್ಥೆಗಳೊಂದಿಗೆ, ಸರ್ಕಾರೇತರ ಸಂಸ್ಥೆಗಳೊಂದಿಗೆ ಮತ್ತು ಇತರರೊಂದಿಗೆ ಸಹಕಾರ ನೀಡಿ ಕೋಶದ ಉದ್ದೇಶಗಳನ್ನು ಪ್ರೋತ್ಸಾಹಿಸಿಲು ಇವರುಗಳ ಸಹಕಾರ ಕೋರುವುದು
- ಬಡ ಮಹಿಳೆಯರಿಗೆ ಕಿರು- ಸಾಲ ನೀಡುವ ಸೂಚಿಸಿರುವ ಸರ್ಕಾರಿ ಮತ್ತು ಸರ್ಕಾರೇತ ಕ್ಷೇತ್ರದ ಸಂಸ್ಥೆಗಳೊಂದಿಗೆ ಮಾಹಿತಿ ಮತ್ತು ಅನುಭವ ಹಂಚಿಕೆ.
- ಕೋಶದ ಗುರಿ ಉದ್ದೇಶಗಳನ್ನು ಈಡೇರಿಸು ಅನುದಾನ, ಸಾಲ, ಇತ್ಯಾದಿಗಳನ್ನು ಸ್ವೀಕರಿಸುವುದು
- ಕೋಶಕ್ಕೆ ಮೂರು ಮುಖ್ಯ ಪಾತ್ರಗಳಿವೆ
- ಒಟ್ಟು ವ್ಯಾಪಾರದ ಪಾತ್ರ
- ಕಿರು ಸಾಲ ನೀಡುವ ಮಧ್ಯವರ್ತಿ ಸಂಸ್ಥೆಗಳಿಗೆ ಸರ್ಕಾರದಿಂದ ಮತ್ತು ಇತರೆ ದಾನಿಗಳಿಂದ ಬರುವ ಅನುದಾನವನ್ನು ನೀಡಲು ಉನ್ನತ ಮಟ್ಟದ ಒಟ್ಟು ವ್ಯಾಪಾರ ಸಂಸ್ಥೆಯಾಗಿ ಇದು ಪಾತ್ರವಹಿಸುತ್ತದೆ.
- [(ಈ ವರೆಗೆ ಕೋಶಕ್ಕೆ ಇತರೆ ಸರ್ಕಾರದಿಂದ ಕೇವಲ ಒಂದು ಬಾರಿ ಅನುದಾನ ಸಿಕ್ಕಿರುವುದು ಮತ್ತು ಇದಲ್ಲದೆ ಕೋಶಕ್ಕೆ ಇತರೆ ಮೂಲಗಳಿಂದ ಹೆಚ್ಚಿನ ಪಡೆಯುವ ಅವಶ್ಯಕತೆ ಬಂದಿರುವುದಿಲ್ಲ]
- ಮಾರುಕಟ್ಟೆ ಅಭಿವೃದ್ಧಿ ಪಾತ್ರ
- ಉತ್ತೇಜಕಗಳು, ತಂತ್ರಜ್ಞಾನದ ವರ್ಗಾವಣೆ, ಸಿಬ್ಬಂದಿಯ ತರಬೇತಿ ಮತ್ತು ಇತರೆ ಹಣಕಾಸು ರಹಿತ ಸೇವೆಗಳ ಮೂಲಕ ಹೊಸ ಮತ್ತು ಅನುಭವವಿಲ್ಲದ ಐ ಎ ಎಂ ಓಗಳಿಗೆ ಸಂಸ್ಥೆ ಕಟ್ಟಲು ಸಹಕಾರ ನೀಡಿ ಕಿರು ಸಾಲಾ ಮಾರುಕಟ್ಟೆಯ ಪೂರೈಕೆಯನ್ನು ಅಭಿವೃದ್ಧಿಗೊಳಿಸುತ್ತದೆ.
- ಕೋಶ ಅರ್ಥೈಸಿಕೊಂಡಂತೆ ಸುಸಜ್ಜಿತ ಕಿರುಸಾಲ ವ್ಯವಸ್ಥೆಯ ಮೂಲಕ ಇದು ಒಟ್ಟು ಮಾರುಕಟ್ಟೆಯ ಪಾತ್ರಕ್ಕೆ ಮೌಲ್ಯವರ್ಧನೆ ಮಾಡಿಕೊಳ್ಳುವುದು - ಇದು ಈಗಾಗಲೇ ಇರುವ ಐ.ಎಂ.ಓಗಳ ಸಂಖ್ಯೆ ಮತ್ತು ಇವುಗಳ ಸಂರಕ್ಷಣೆಯಾ ಮೇಲೆ ನಿರ್ಭರಿತವಾಗಿದೆ ಐ.ಎಂ.ಓಗಳ ಸಂಸ್ಥೆ ನಿರ್ಮಾಣದ ಪ್ರಯತ್ನವನ್ನು ಅನುದಾಗಳಂತೆ ಸಹಾಯಗಳು ಕೂಡ ಹೆಚ್ಚಿಸುತ್ತವೆ. ಅನುದಾನಗಳ ಹೆಚ್ಚಿನ ಮತ್ತು ಅಕಾಲಿಕ ಪೂರೈಕೆಯಿಂದ ಐ.ಎಂ.ಓಗಳ ಸಂಸ್ಥೆ ನಿರ್ಮಾಣದ ಯಾವುದೇ ಹೆಚ್ಚೇ ಪರಿಣಾಕಾರಿಯಾಗುವುದಿಲ್ಲ.
- ಕಾರ್ಯಕತ್ರೃತ್ವ ಪಾತ್ರ
- ಅಭಿವೃದ್ಧಿಯ ಹಾಗೂ ಕಿರು-ಸಾಲ ನೀತಿಯ ಮೇಲೆ ಪರಿಣಾಮ ಬೀರಿ ಹೆಚ್ಚಿನ ಪರಿಣಾಮಕಾರಿ ನೀತಿಗಳನ್ನು ರಚಿಸಲು ಮತ್ತು ಭಾರತದಲ್ಲಿ ಕಿರು-ಸಾಲ ಚಟುವಟಿಕೆಗಳನ್ನು ಹೆಚ್ಚಿಸುವ ನ್ಯಾಯಬದ್ಧ ವಾತಾವರಣವನ್ನು ನಿರ್ಮಿಸುವ ಆರ್.ಎಂ.ಕೆಯು ಕಾರ್ಯ ಕತ್ರೃತ್ವ ಪಾತ್ರ ವಹಿಸುತ್ತದೆ. ಆರ್.ಎಂ.ಕೆ ನಿರ್ಮಾತ ಹಾಗೂ ಸರ್ಕಾರದ ಪ್ರತಿನಿಧಿಯಾಗಿರುವುದರಿಂದ ಈ ಕ್ಷೇತ್ರದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/20/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.