অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ಋಣಪರಿಹಾರ ಅಧಿನಿಯಮ

ಕರ್ನಾಟಕ ಋಣಪರಿಹಾರ ಅಧಿನಿಯಮ, 1976

(ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ 22, 2006ರ ಭಾಗ IVಎ ಯಲ್ಲಿ 1060 ರಿಂದ 1065ರ ವರೆಗಿನ ಪುಟಗಳಲ್ಲಿ ಪ್ರಕಟವಾಗಿದೆ.)


ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

1976ರ ಅಧಿನಿಯಮ 25.- ಸರ್ಕಾರ ಮತ್ತು ಸಾಂಸ್ಥಿಕ ಏಜೆನ್ಸಿಗಳನ್ನು ಹೊರತುಪಡಿಸಿ ಇತರ ಮೂಲಗಳಿಂದ ತೆಗೆದುಕೊಳ್ಳುವ ನಗರ ಮತ್ತು ಗ್ರಾಮೀಣ ಪ್ರದೇಶದ ಋಣದ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಗಂಭೀರ ಮಟ್ಟವನ್ನು ತಲುಪಿವೆ ಎಂದು ಪರಿಭಾವಿಸಲಾಗಿದೆ. ಇದಕ್ಕೆ ಹಣದ ಮಾರುಕಟ್ಟೆಯ ಬಿಕ್ಕಟ್ಟೂ ಒಂದು ಕಾರಣವಾಗಿದೆ. ದುಬಾರಿ ಬಡ್ಡಿ ದರಗಳನ್ನು ವಿಧಿಸಲಾಗುತ್ತಿದೆ ಮತ್ತು ದುವ್ರ್ಯವಹಾರಗಳನ್ನು ನಡೆಸಲಾಗುತ್ತಿದೆ. ಸಣ್ಣ ಹಿಡುವಳಿಯ ರೈತರು, ಭೂರಹಿತ ಕøಷಿ ಕಾರ್ಮಿಕರು ಮತ್ತು ಸಮುದಾಯದ ದುರ್ಬಲ ವರ್ಗದರೆಲ್ಲರೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಸದರಿ ವರ್ಗಗಳಿಗೆ ಸೂಕ್ತವಾದ ಪರಿಹಾರ ಒದಗಿಸುವುದು ಅಗತ್ಯವೆಂದು ರಾಜ್ಯ ಸರ್ಕಾರವು ಪರಿಗಣಿಸಿದೆ. ಪ್ರಧಾನ ಮಂತ್ರಿಗಳು ಘೋಷಿಸಿರುವ 20 ಅಂಶಗಳ ಕಾರ್ಯಕ್ರಮಗಳಿಗೆ ಇದು ಸುಸಂಗತವಾಗಿದೆ. ಆದ್ದರಿಂದ, ಮೇಲೆ ಉಲ್ಲೇಖಿಸಿದ ವರ್ಗಗಳು ಹೊಂದಿರುವ ಋಣಗಳು ಸಂದಾಯವಾಗಿವೆ ಎಂದು ಘೋಷಿಸಲು ಕರ್ನಾಟಕ ಋಣ ಪರಿಹಾರ ಅಧ್ಯಾದೇಶ, 1975ನ್ನು ಹೊರಡಿಸಲಾಗಿದೆ. ಈ ವಿಧೇಯಕವನ್ನು ಸದರಿ ಅಧ್ಯಾದೇಶಕ್ಕೆ ಬದಲಾಗಿ ಮಂಡಿಸಲಾಗಿದೆ. (ದಿನಾಂಕ 22.1.1976ರ ಕರ್ನಾಟಕ ರಾಜ್ಯಪತ್ರದ ಭಾಗ - IV-2ಎ ನಲ್ಲಿ ಪುಟ 54ರಲ್ಲಿ ಪ್ರಕಟಿಸಲಾಗಿದೆ.)

1976ರ ತಿದ್ದುಪಡಿ ಮಾಡುವ ಅಧಿನಿಯಮ 63.- ಋಣ ಪರಿಹಾರ ಅಧಿನಿಯಮದ ಜಾರಿಯಿಂದಾಗಿ, ಉಪ ವಿಭಾಗೀಯ ದಂಡಾಧಿಕಾರಿಗಳ ಕೆಲಸ ಕಾರ್ಯಗಳು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿದ್ದು, ಎಲ್ಲ ಔಪಚಾರಿಕ ಕ್ರಮಗಳ ಪಾಲನೆಯ ತರುವಾಯ ಅರ್ಜಿಗಳನ್ನು ವಿಲೆ ಮಾಡುವ ಕೆಲಸವು ಅವರಿಗೆ ಅತ್ಯಂತ ಕಷ್ಟಕರವೆನಿಸುತ್ತಿದೆ. ಆದ್ದರಿಂದ, ಪರಿಹಾರ ನೀಡುವುದಷ್ಟೇ ಅಲ್ಲದೆ ಪ್ರಕರಣಗಳ ತ್ವರಿತ ವಿಲೇವಾರಿಯನ್ನೂ ತನ್ಮೂಲಕ ದುರ್ಬಲ ವರ್ಗಗಳಿಗೆ ಈ ಅಧಿನಿಯಮದ ಸೌಲಭ್ಯಗಳು ದೊರಕುವುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯವೆಂದು ಅನಿಸಿದ್ದರಿಂದ ಅಧಿನಿಯಮದ ಅನುಷ್ಠಾನದಲ್ಲಿ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳುವುದು ಅವಶ್ಯವೆಂದು ಕಂಡುಬಂದಿತು. ಆದ್ದರಿಂದ, ರಾಜ್ಯ ಸರ್ಕಾರದಿಂದ ಅಧಿಕøತಗೊಳಿಸಬಹುದಾದಂತೆ ಕಾರ್ಯನಿರ್ವಾಹಕ ದಂಡಾಧಿಕಾರಿಯು ಅಧಿನಿಯಮವನ್ನು ಜಾರಿಗೆ ತರಲು ಮತ್ತು ಅಧಿನಿಯಮದ ಉಪಬಂಧಗಳ ಅಡಿ ದುರ್ಬಲ ವರ್ಗಗಳಿಗೆ ದೊರೆಯಬಹುದಾದ ಪರಿಹಾರಗಳನ್ನು ಅವರಿಗೆ ಒದಗಿಸಲು ಅಧಿಕಾರ ನೀಡಲಾಗಿದೆ.

1976ರ ಕರ್ನಾಟಕ ಅಧಿನಿಯಮ ಸಂಖ್ಯೆ 25

(1976ರ ಮಾರ್ಚ್ ಹದಿಮೂರನೇ ದಿನದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

ಕರ್ನಾಟಕ ಋಣ ಪರಿಹಾರ ಅಧಿನಿಯಮ, 1976

(1976ರ ಮಾರ್ಚ್ ಹನ್ನೆರಡನೇ ದಿನದಂದು ರಾಷ್ಟ್ರಪತಿಯವರ ಸಮ್ಮತಿ ಪಡೆದಿದೆ)

(1976ರ ಅಧಿನಿಯಮ 63ರ ಮೂಲಕ ತಿದ್ದುಪಡಿಯಾದಂತೆ)

ಕರ್ನಾಟಕ ರಾಜ್ಯದಲ್ಲಿರುವ ಸಣ್ಣ ರೈತರು, ಭೂ ರಹಿತ ಕøಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಜನರಿಗೆ ಋಣ ಪರಿಹಾರ ಒದಗಿಸುವ ಒಂದು ಅಧಿನಿಯಮ ;

ಕರ್ನಾಟಕ ರಾಜ್ಯದಲ್ಲಿನ ಸಣ್ಣ ರೈತರು, ಭೂ ರಹಿತ ಕøಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಜನರಿಗೆ ಋಣ ಪರಿಹಾರ ಒದಗಿಸುವುದು ವಿಹಿತವಾಗಿರುವುದರಿಂದ; ಇದು ಭಾರತ ಗಣರಾಜ್ಯದ ಇಪ್ಪತ್ತೇಳನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು, ಎಂದರೆ: -

ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.-

(1) ಈ ಅಧಿನಿಯಮವನ್ನು ಕರ್ನಾಟಕ ಋಣ ಪರಿಹಾರ ಅಧಿನಿಯಮ, 1976 ಎಂದು ಕರೆಯತಕ್ಕದ್ದು.

(2) ಇದು ಇಡೀ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗತಕ್ಕದ್ದು.

(3) 3, 4, 7 ಮತ್ತು 8ನೇ ಪ್ರಕರಣಗಳು 1975ರ ಅಕ್ಟೋಬರ್ ಇಪ್ಪತ್ತೊಂದನೇ ದಿನದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು, 5 ಮತ್ತು 6ನೇ ಪ್ರಕರಣಗಳು, 1975ರ ನವೆಂಬರ್ ಹನ್ನೊಂದನೇ ದಿನದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು ಮತ್ತು 9ನೇ ಪ್ರಕರಣವು, 1975ರ ನವೆಂಬರ್ ಇಪ್ಪತ್ತೆಂಟನೇ ದಿನದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

ಘೋಷಣೆ.-

ಈ ಅಧಿನಿಯಮವು ಭಾರತ ಸಂವಿಧಾನದ 46ನೇ ಅನುಚ್ಫೇದದಲ್ಲಿ ನಿರ್ದಿಷ್ಟಪಡಿಸಿರುವ ತತ್ವಗಳನ್ನು ಅನುಸರಿಸುವ ಸಲುವಾಗಿ ರಾಜ್ಯದ ಕಾರ್ಯನೀತಿಯನ್ನು ಜಾರಿಗೊಳಿಸುವುದಕ್ಕಾಗಿ ಎಂದು ಈ ಮೂಲಕ ಘೋಷಿಸಲಾಗಿದೆ.

ವ್ಯಾಖ್ಯೆಗಳು.-

ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(ಎ) ``ಕøಷಿ'' ಎಂದರೆ, ಈ ಮುಂದಿನವುಗಳನ್ನು ಒಳಗೊಳ್ಳುತ್ತದೆ: -

(i) ತೋಟಗಾರಿಕೆ ;

(ii) ದವಸಧಾನ್ಯ, ಹುಲ್ಲು ಅಥವಾ ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಸುವುದು;

(iii) ಹೈನುಗಾರಿಕೆ ;

(iv) ಕೋಳಿ ಸಾಕಣೆ ;

(v) ಜಾನುವಾರು ತಳಿವರ್ಧನೆ ;

(vi) ಹುಲ್ಲುಗಾವಲು. ಆದರೆ, ಇದು ಮರ ಕತ್ತರಿಸುವುದನ್ನು ಮಾತ್ರ ಒಳಗೊಳ್ಳುವುದಿಲ್ಲ ;

(ಬಿ) ``ಋಣ'' ಎಂದರೆ ಡಿಕ್ರಿಯಾಗಿರಲಿ ಅಥವಾ ಇಲ್ಲದಿರಲಿ ನಗದು ಅಥವಾ ವಸ್ತು ರೂಪದಲ್ಲಿನ ಯಾವುದೇ ಸಾಲ ಮತ್ತು ಒಟ್ಟಾರೆ ಇದು ಋಣ ಎಂದು ಹೇಳಲಾಗುವ ಯಾವುದೇ ಮೊತ್ತವನ್ನು ಒಳಗೊಳ್ಳುತ್ತದೆ, ಆದರೆ, ಇದು ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಧಳೀಯ ಪ್ರಾಧಿಕಾರಕ್ಕೆ ಬಾಕಿಯಿರುವ ತೆರಿಗೆಗಳ ಬಾಕಿಯನ್ನು ಒಳಗೊಳ್ಳುವುದಿಲ್ಲ;

(ಸಿ) ``ಋಣಿ'' ಎಂದರೆ,-

(i) ಒಬ್ಬ ಸಣ್ಣ ರೈತ ; ಅಥವಾ

(ii) ಒಬ್ಬ ಭೂರಹಿತ ಕøಷಿ ಕಾರ್ಮಿಕ ; ಅಥವಾ

(iii) ದುರ್ಬಲ ವರ್ಗಕ್ಕೆ ಸೇರಿದ ಒಬ್ಬ ವ್ಯಕ್ತಿ ;

(ಡಿ) ``ಭೂ ರಹಿತ ಕøಷಿ ಕಾರ್ಮಿಕ'' ಎಂದರೆ, ಯಾವುದೇ ಭೂಮಿಯನ್ನು ಹೊಂದಿಲ್ಲದ ಮತ್ತು ಜಮೀನಿನಲ್ಲಿ ದೈಹಿಕ ಶ್ರಮ ದುಡಿಮೆಯು ಮುಖ್ಯವಾದ ಜೀವನಾಧಾರವಾಗಿರುವ ಒಬ್ಬ ವ್ಯಕ್ತಿ ;

(ಇ) ``ಸಣ್ಣ ರೈತ'' ಎಂದರೆ, ಒಂದು ಘಟಕಕ್ಕಿಂತ ಹೆಚ್ಚಿಲ್ಲದಂತೆ ಜಮೀನನ್ನು, ಅದರ ಮಾಲೀಕನಾಗಿ, ಗುತ್ತಿಗೆದಾರನಾಗಿ ಅಥವಾ ಅಡಮಾನದಾರನಾಗಿ ಅಥವಾ ಭಾಗಶ: ಒಂದು ಅನುಭವದಲ್ಲಿ ಮತ್ತು ಭಾಗಶ: ಇನ್ನೊಂದರಲ್ಲಿ ತನ್ನ ಸ್ವಾಧೀನದಲ್ಲಿ ಹೊಂದಿರುವ ಮತ್ತು ಕøಷಿಯಿಂದಲ್ಲದೆ ಬೇರೆ ಯಾವ ಮೂಲದಿಂದಲೂ ಆದಾಯವಿಲ್ಲದ ಒಬ್ಬ ವ್ಯಕ್ತಿ;

ವಿವರಣೆ:- ಒಬ್ಬ ವ್ಯಕ್ತಿಯು, (ಎಫ್) ಖಂಡದಲ್ಲಿ ಉಲ್ಲೇಖಿಸಲಾದ ಒಂದಕ್ಕಿಂತ ಹೆಚ್ಚು ವರ್ಗಗಳ ಭೂಮಿಯನ್ನು ಹೊಂದಿದ್ದಲ್ಲಿ, ಅವನು ಹೊಂದಿರುವ ಭೂಮಿಯ ವಿಸ್ತೀರ್ಣವನ್ನು, ಈ ಮುಂದಿನ ಸೂತ್ರಕ್ಕನುಸಾರವಾಗಿ ನಿರ್ಧರಿಸತಕ್ಕದು,್ದ ಎಂದರೆ :-

ನೀರಾವರಿ ಸೌಲಭ್ಯವಿಲ್ಲದ ಎರಡು ಹೆಕ್ಟೇರ್ ಭೂಮಿ = ಒಂದೂ ಕಾಲು ಹೆಕ್ಟೇರ್ ಮಳೆ ಆಧಾರಿತ ತರಿ ಭೂಮಿ ಒಂದು ನೀರಾವರಿ ಬೆಳೆ ಬೆಳೆಯಲು ಸೌಲಭ್ಯವನ್ನು ಹೊಂದಿರುವ ಅರ್ಧ ಹೆಕ್ಟೇರ್ ಭೂಮಿ = ಪ್ಲಾಂಟೇಷನ್ ಬೆಳೆಗಳು ಅಥವಾ ದ್ರಾಕ್ಷಿ ಅಥವಾ ತೆಂಗು ಅಥವಾ ಅಡಿಕೆ ಬೆಳೆಯುವುದಕ್ಕಾಗಿ ಅಥವಾ ನೀರಾವರಿ ಮೂಲಕ ಹಿಪ್ಪುನೇರಳೆ ಬೆಳೆಯುವುದಕ್ಕಾಗಿ ಬಳಸಲಾದ ಅರ್ಧ ಹೆಕ್ಟೇರ್ ಭೂಮಿ = ನಿರಂತರ ನೀರಾವರಿ ಸೌಲಭ್ಯಗಳನ್ನು ಹೊಂದಿರುವ ಅಥವಾ ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ನೀರಾವರಿ ಬೆಳೆ ಬೆಳೆಯುವುದಕ್ಕಾಗಿ ಸೌಲಭ್ಯಗಳನ್ನು ಹೊಂದಿರುವ ಕಾಲು ಹೆಕ್ಟೇರ್ ಭೂಮಿ;

(ಎಫ್) ``ಘಟಕ'' ಎಂದರೆ,-

(i) ನೀರಾವರಿ ಸೌಲಭ್ಯವಿಲ್ಲದ ಎರಡು ಹೆಕ್ಟೇರ್ ಭೂಮಿ ; ಅಥವಾ

(ii) ಒಂದೂ ಕಾಲು ಹೆಕ್ಟೇರು ಮಳೆಯಾಧಾರಿತ ತರಿ ಭೂಮಿ ; ಅಥವಾ

(iii) ಒಂದು ನೀರಾವರಿ ಬೆಳೆ ಬೆಳೆಯಲು ಸೌಕರ್ಯವಿರುವ ಅರ್ಧ ಹೆಕ್ಟೇರು ಭೂಮಿ ;

(iv) ಪ್ಲಾಂಟೇಷನ್ ಬೆಳೆಗಳು ಅಥವಾ ದ್ರಾಕ್ಷಿ ಅಥವಾ ತೆಂಗು ಅಥವಾ ಅಡಿಕೆ ಬೆಳೆಯಲು ಬಳಸುವ ಅರ್ಧ ಹೆಕ್ಟೇರು ಭೂಮಿ; ಅಥವಾ

(v) ನೀರಾವರಿ ಮೂಲಕ ಹಿಪ್ಪುನೇರಳೆ ಬೆಳೆಯಲು ಬಳಸಲಾದ ಅರ್ಧ ಹೆಕ್ಟೇರು ಭೂಮಿ ; ಅಥವಾ

(vi) ನಿರಂತರ ನೀರಾವರಿ ಸೌಲಭ್ಯಗಳನ್ನು ಹೊಂದಿರುವ ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ನೀರಾವರಿ ಬೆಳೆ ಬೆಳೆಯಲು ಸೌಲಭ್ಯಗಳಿರುವ ಕಾಲು ಹೆಕ್ಟೇರು ಭೂಮಿ ;

ವಿವರಣೆ.- ಈ ಖಂಡದಲ್ಲಿ ``ಪ್ಲಾಂಟೇಷನ್ ಬೆಳೆ'' ಎಂದರೆ, ಏಲಕ್ಕಿ, ಕಾಫಿ, ರಬ್ಬರು ಮತ್ತು ಟೀ;

(ಜಿ) ``ದುರ್ಬಲ ವರ್ಗಗಳ ಜನ'' ಎಂದರೆ, ಸಣ್ಣ ರೈತರಲ್ಲದ ಅಥವಾ ಭೂರಹಿತ ಕøಷಿ ಕಾರ್ಮಿಕರಲ್ಲದ ಯಾರ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದ ಎರಡು ಸಾವಿರದ ನಾಲ್ಕು ನೂರು ರೂಪಾಯಿಗಳನ್ನು ಮೀರುವುದಿಲ್ಲವೋ ಆ ವ್ಯಕ್ತಿಗಳು.

ಋಣದಿಂದ ಮುಕ್ತಿ.-

ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಅಥವಾ ಯಾವುದೇ ಅಂಥ ಕಾನೂನಿನ ಬಲದಿಂದ ಜಾರಿಯಲ್ಲಿರುವ ಯಾವುದೇ ಕರಾರು ಅಥವಾ ಲಿಖಿತದಲ್ಲಿ ಏನೇ ಇದ್ದರೂ, ಮತ್ತು ಈ ಅಧಿನಿಯಮದಲ್ಲಿ ವ್ಯಕ್ತವಾಗಿ ಉಪಬಂಧಿಸಿದುದನ್ನುಳಿದು ಈ ಪ್ರಕರಣದ ಪ್ರಾರಂಭದ ದಿನಾಂಕದಿಂದ ಜಾರಿಗೆ ಬರುವಂತೆ,-

(ಎ) ಈ ಪ್ರಕರಣವು ಪ್ರಾರಂಭವಾಗುವುದಕ್ಕೆ ಮೊದಲು ಋಣಿಯು ಸಾಲ ಕೊಡುವವನಿಗೆ ಸಂದಾಯ ಮಾಡಬೇಕಾದ ಬಡ್ಡಿ ಹಣ ಯಾವುದಾದರೂ ಇದ್ದರೆ, ಅದನ್ನೂ ಒಳಗೊಂಡಂತೆ ನೀಡಿರುವ ಪ್ರತಿಯೊಂದು ಋಣವನ್ನು ಪೂರ್ಣವಾಗಿ ತೀರಿಸಲಾಗಿದೆ ಎಂದು ಭಾವಿಸತಕ್ಕದ್ದು ;

(ಬಿ) ಯಾವುದೇ ಸಿವಿಲ್ ನ್ಯಾಯಾಲಯವು, ಬಡ್ಡಿ ಯಾವುದಾದರೂ ಇದ್ದರೆ, ಅದನ್ನೂ ಒಳಗೊಂಡಂತೆ ಅಂಥ ಋಣದ ಯಾವುದೇ ಮೊಬಲಗಿನ ವಸೂಲಿಗಾಗಿ ಋಣಿಯ ವಿರುದ್ಧದ ಯಾವುದೇ ದಾವೆ ಅಥವಾ ವ್ಯವಹರಣೆಯನ್ನು ಪುರಸ್ಕರಿಸತಕ್ಕದ್ದಲ್ಲ :

ಆದರೆ, ದಾವೆ ಅಥವಾ ವ್ಯವಹರಣೆಯನ್ನು ಋಣಿಯ ಮತ್ತು ಯಾರೇ ಇತರ ವ್ಯಕ್ತಿಯ ವಿರುದ್ಧ ಜಂಟಿಯಾಗಿ ಹೂಡಿದ್ದಲ್ಲಿ, ಈ ಪ್ರಕರಣದಲ್ಲಿರುವುದು ಯಾವುದೂ, ಅಂಥ ಇತರ ವ್ಯಕ್ತಿಗೆ ಸಂಬಂಧಪಡುವಷ್ಟರ ಮಟ್ಟಿಗೆ ಆ ದಾವೆ ಅಥವಾ ವ್ಯವಹರಣೆಯ ಊರ್ಜಿತತೆಗೆ ಅನ್ವಯವಾಗತಕ್ಕದ್ದಲ್ಲ.

(ಸಿ) ಯಾವುದೇ ಅಂಥ ಋಣದ ವಸೂಲಿಗಾಗಿ ಯಾರೇ ಋಣಿಯ ವಿರುದ್ಧ ಸದರಿ ದಿನಾಂಕದಿಂದ ಇತ್ಯರ್ಥದಲ್ಲಿರುವ ಎಲ್ಲ ದಾವೆಗಳು ಮತ್ತು ವ್ಯವಹರಣೆಗಳು, (ಮೇಲ್ಮನವಿಗಳು, ಪರಿಷ್ಕರಣೆಗಳು, ಜಫ್ತಿಗಳು ಅಥವಾ ಅಮಲ್ಜಾರಿಯೂ ಸೇರಿ) ಕೊನೆಗೊಳ್ಳತಕ್ಕದ್ದು : ಆದರೆ, ಈ ಖಂಡದಲ್ಲಿರುವುದು ಯಾವುದೂ ,-

(i) ಈ ಪ್ರಕರಣವು ಪ್ರಾರಂಭವಾಗವುದಕ್ಕೆ ಮುಂಚೆ ಹೊಂದಿದ್ದ ಮತ್ತು ಕೊನೆಗಾಣಿಸಿದ ಯಾವುದೇ ಚರಾಸ್ತಿಯ;

(ii) ಅಂಥ ಪ್ರಾರಂಭಕ್ಕೆ ಮುಂಚೆ ಸ್ಥಿರೀಕರಿಸಲಾದ ಯಾವುದೇ ಸ್ಧಿರಾಸ್ತಿಯ - ಮಾರಾಟಕ್ಕೆ ಅನ್ವಯವಾಗತಕ್ಕದ್ದಲ್ಲ.

(ಡಿ) ಯಾವುದೇ ಅಂಥ ಋಣದ ಸಂಬಂಧದಲ್ಲಿ ಸಿವಿಲ್ ನ್ಯಾಯಾಲಯದಿಂದ ಋಣಿಯ ವಿರುದ್ಧ ಹಣಕ್ಕಾಗಿ ಹೊರಡಿಸಲಾದ ಯಾವುದೇ ಡಿಕ್ರಿಯ ಅಮಲ್ಜಾರಿಯಲ್ಲಿ ಸಿವಿಲ್ ಕಾರಾಗøಹದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರತಿಯೊಬ್ಬ ಋಣಿಯನ್ನು ಬಿಡುಗಡೆ ಮಾಡತಕ್ಕದ್ದು ;

(ಇ) ಋಣಿಯು ಅಡಮಾನ ಮಾಡಿದ ಪ್ರತಿಯೊಂದು ಚರ ಸ್ವತ್ತು ಅಂಥ ಋಣಿಯ ಹೆಸರಿನಲ್ಲಿ ಬಿಡುಗಡೆಯಾಗತಕ್ಕದ್ದು ಮತ್ತು ಸಾಲ ನೀಡಿದವನು ಅದನ್ನು ಕೂಡಲೇ ಋಣಿಗೆ ಹಿಂದಿರುಗಿಸಲು ಬದ್ಧನಾಗಿರತಕ್ಕದ್ದು. ಮತ್ತು ಹಾಗೆ ಮಾಡಲು ಸಾಲ ನೀಡಿದವನು ತಪ್ಪಿದರೆ, ಋಣಿಯು, ಅವನು ವಾಸವಾಗಿರುವ ಸ್ಧಳದ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿರುವ ಉಪವಿಭಾಗೀಯ ದಂಡಾಧಿಕಾರಿಗೆ [ಅಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಇತರ ಕಾರ್ಯನಿರ್ವಾಹಕ ದಂಡಾಧಿಕಾರಿಗೆ]

ಅರ್ಜಿ ಸಲ್ಲಿಸಿದ ಮೇಲೆ ಅದನ್ನು ವಾಪಸ್ಸು ಪಡೆಯಲು ಹಕ್ಕುಳ್ಳವನಾಗತಕ್ಕದ್ದು;

1. 1976ರ ಅಧಿನಿಯಮ 63ರ ಮೂಲಕ 27.10.1976 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. (ಎಫ್) ಸಾಲ ನೀಡುವವನ ಹೆಸರಿನಲ್ಲಿ ಋಣಿಯು ಬರೆದುಕೊಟ್ಟ ಪ್ರತಿಯೊಂದು ಅಡಮಾನ ಪತ್ರವು ವಿಮೋಚನೆಗೊಳ್ಳತಕ್ಕದ್ದು ಮತ್ತು ಅಡಮಾನ ಮಾಡಿದ ಸ್ವತ್ತನ್ನು ಅಂಥ ಋಣಿಯ ಹೆಸರಿನಲ್ಲಿ ಬಿಡುಗಡೆ ಮಾಡತಕ್ಕದ್ದು ಮತ್ತು ಸಾಲ ನೀಡುವವನು ಹಾಗೆ ಮಾಡಲು ತಪ್ಪಿದಲ್ಲಿ, ಅಡಮಾನದ ಸ್ವತ್ತು ಇರುವ ಸ್ಧಳದ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿರುವ ಉಪವಿಭಾಗೀಯ ದಂಡಾಧಿಕಾರಿಯು [ಅಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರದಿಂದ ಅಧಿಕಾರ ಪಡೆದ ಯಾರೇ ಇತರ ಕಾರ್ಯನಿರ್ವಾಹಕ ದಂಡಾಧಿಕಾರಿಯು]

ತಾನಾಗಿಯೇ ಅಥವಾ ಋಣಿಯ ಅರ್ಜಿಯ ಮೇಲೆ ಮತ್ತು ಅವನು ಸೂಕ್ತವೆಂದು ಭಾವಿಸಬಹುದಾದಂಥ ವಿಚಾರಣೆ ನಡೆಸಿದ ನಂತರ, ಋಣಿಗೆ ಸ್ವತ್ತಿನ ಸ್ವಾಧೀನತೆ ನೀಡತಕ್ಕದ್ದು.

1976ರ ಅಧಿನಿಯಮ 63ರ ಮೂಲಕ 27.10.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ವಿವರಣೆ:- ಈ ಪ್ರಕರಣದಲ್ಲಿರುವುದು ಯಾವುದೂ, ಈ ಪ್ರಕರಣವು ಪ್ರಾರಂಭವಾಗುವುದಕ್ಕೆ ಮುಂಚೆ ಋಣಿಯು ಈಗಾಗಲೇ ಮರುಸಂದಾಯ ಮಾಡಿರುವ ಅಥವಾ ಅವನಿಂದ ವಸೂಲು ಮಾಡಿರುವ ಯಾವುದೇ ಋಣದ ಯಾವುದೇ ಭಾಗದ ಮರುಪಾವತಿಗಾಗಿ ಯಾರೇ ಋಣಿಯನ್ನು ಹಕ್ಕುಳ್ಳವನನ್ನಾಗಿ ಮಾಡುವುದೆಂದು ಅರ್ಥೈಸತಕ್ಕದ್ದಲ್ಲ.

ಲೇಣಿದಾರರು ವಿವರ ಪತ್ರವನ್ನು ಸಲ್ಲಿಸುವುದು, ಇತ್ಯಾದಿ.-

(1) 4ನೇ ಪ್ರಕರಣದ (ಇ) ಖಂಡದಲ್ಲಿ ಉಲ್ಲೇಖಿಸಲಾದ ಪ್ರತಿಯೊಬ್ಬ ಲೇಣಿದಾರನು, 1975ರ ನವೆಂಬರ್ ತಿಂಗಳ ಹನ್ನೊಂದನೇ ದಿನದಿಂದ ನಲವತ್ತೈದು ದಿನಗಳೊಳಗಾಗಿ ಅವನಲ್ಲಿ ವಸ್ತುಗಳನ್ನು ಒತ್ತೆ ಇಟ್ಟಿರುವ ಎಲ್ಲ ಋಣಿಗಳ ಹೆಸರುಗಳು, ಒತ್ತೆ ಇಟ್ಟಿರುವ ವಸ್ತುಗಳ ಸ್ವರೂಪ ಮತ್ತು ಅವುಗಳ ವಿವರಗಳು, ಮುಂಗಡ ನೀಡಿರುವ ಮೊತ್ತ, ಮತ್ತು 1975ರ ಅಕ್ಟೋಬರ್ 21ರಂದು ಇರುವ ಬಾಕಿ, ಮತ್ತು ನಿಯಮಿಸಬಹುದಾದಂಥ ಇತರ ವಿವರಗಳನ್ನು ಒಳಗೊಂಡ ಒಂದು ವಿವರ ಪತ್ರವನ್ನು, ಅಂಥ ಲೇಣಿದಾರನು ಸಾಮಾನ್ಯವಾಗಿ ವ್ಯವಹಾರ ನಡೆಸುವ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿರುವ ಉಪ ವಿಭಾಗೀಯ ದಂಡಾಧಿಕಾರಿಗೆ [ಅಥವಾ ರಾಜ್ಯ ಸರ್ಕಾರವು ಈ ಸಂಬಂಧದಲ್ಲಿ ಅಧಿಕೃತಗೊಳಿಸಿದ ಯಾರೇ ಇತರ ಕಾರ್ಯನಿರ್ವಾಹಕ ದಂಡಾಧಿಕಾರಿಗೆ, (ಇನ್ನು ಮುಂದೆ ಕಾರ್ಯನಿರ್ವಾಹಕ ದಂಡಾಧಿಕಾರಿ ಎಂದು ಕರೆಯಲಾಗುವ)]1 ಸಲ್ಲಿಸತಕ್ಕದ್ದು.

1976ರ ಅಧಿನಿಯಮ 63ರ ಮೂಲಕ 27.10.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ಅಂಥ ವಿವರ ಪತ್ರವನ್ನು ಸ್ವೀಕರಿಸಿದ ನಂತರ ಮತ್ತು ಕರ್ನಾಟಕ ಭೂಕಂದಾಯ ಅಧಿನಿಯಮ, 1964ರಲ್ಲಿ ಉಪಬಂಧಿಸಲಾದ ರೀತಿಯಲ್ಲಿ ಅವನು ಅವಶ್ಯವೆಂದು ಪರಿಗಣಿಸುವ ಕ್ಷಿಪ್ರ ವಿಚಾರಣೆಯನ್ನು ನಡೆಸಿದ ನಂತರ, ಉಪವಿಭಾಗೀಯ ದಂಡಾಧಿಕಾರಿಯು [ಅಥವಾ ಸಂದರ್ಭಾನುಸಾರ ಕಾರ್ಯನಿರ್ವಾಹಕ ದಂಡಾಧಿಕಾರಿಯು]

1 ಆದೇಶದ ಮೂಲಕ, ಯಾವ ಋಣಿಗಳು 4ನೇ ಪ್ರಕರಣದ ಅಡಿಯಲ್ಲಿ ಪರಿಹಾರಕ್ಕೆ ಹಕ್ಕು ಹೊಂದಿದ್ದಾರೆ ಎಂಬುದನ್ನು ನಿರ್ಧರಿಸತಕ್ಕದ್ದು ಮತ್ತು ಅಂಥ ಋಣಿಗಳು ಒತ್ತೆ ಇಟ್ಟಿರುವ ವಸ್ತುಗಳನ್ನು, ಆದೇಶದಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದಂದು ಅಥವಾ ಅದಕ್ಕೂ ಮುಂಚೆ ಹಾಜರುಪಡಿಸುವಂತೆ ಲೇಣಿದಾರನಿಗೆ ನಿರ್ದೇಶಿಸತಕ್ಕದ್ದು. 1976ರ ಅಧಿನಿಯಮ 63ರ ಮೂಲಕ 27.10.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

)ನೇ ಉಪಪ್ರಕರಣದ ಮೇರೆಗೆ ಲೇಣಿದಾರನು, ಆ ಆದೇಶದಲ್ಲಿ ನಿರ್ದೇಶಿಸಿದಂತೆ ವಸ್ತುವನ್ನುಹಾಜರುಪಡಿಸಲು ತಪ್ಪಿದಲ್ಲಿ, ಉಪ ವಿಭಾಗೀಯ ದಂಡಾಧಿಕಾರಿಯು 1

[ಅಥವಾ ಸಂದರ್ಭಾನುಸಾರ ಕಾರ್ಯನಿರ್ವಾಹಕ ದಂಡಾಧಿಕಾರಿಯು]

ಲೇಣೆದಾರನಿಂದ ವಸ್ತುಗಳ ಸ್ವಾಧೀನತೆಯನ್ನು ತೆಗೆದುಕೊಳ್ಳಬಹುದು ಮತ್ತು ಈ ಉದ್ದೇಶಕ್ಕಾಗಿ ಅವನು ಶೋಧನೆ ಮತ್ತು ಜಫ್ತಿಯ ಸಂಬಂಧದಲ್ಲಿ 1973ರ ದಂಡ ಪ್ರಕ್ರಿಯಾ ಸಂಹಿತೆಯ ಮೇರೆಗೆ ಅವನಲ್ಲಿ ನಿಹಿತವಾಗಿರುವಂಥಹವೇ ಅಧಿಕಾರಗಳನ್ನು ಚಲಾಯಿಸತಕ್ಕದ್ದು .

1976ರ ಅಧಿನಿಯಮ 63ರ ಮೂಲಕ 27.10.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ಒತ್ತೆ ಇಡಲಾದ ವಸ್ತುವನ್ನು ಹಾಜರುಪಡಿಸಿದ ಅಥವಾ ವಾಪಸು ಪಡೆದ ತರುವಾಯ ಉಪವಿಭಾಗೀಯ ದಂಡಾಧಿಕಾರಿಯು [ಅಥವಾ ಸಂದರ್ಭಾನುಸಾರ ಕಾರ್ಯನಿರ್ವಾಹಕ ದಂಡಾಧಿಕಾರಿಯು] ವಸ್ತುವನ್ನು ಋಣಿಗೆ ಒಪ್ಪಿಸತಕ್ಕದ್ದು. 1976ರ ಅಧಿನಿಯಮ 63ರ ಮೂಲಕ 27.10.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(5) 4ನೇ ಪ್ರಕರಣದ (ಎಫ್) ಖಂಡದಲ್ಲಿ ಉಲ್ಲೇಖಿಸಲಾದ ಪ್ರತಿಯೊಬ್ಬ ಲೇಣಿದಾರನು, 1976ರ ಮಾರ್ಚ್ ಮೊದಲ ದಿನದಿಂದ 45 ದಿನಗಳೊಳಗಾಗಿ, ಅವನಲ್ಲಿ ಸ್ವತ್ತುಗಳನ್ನು ಅಡಮಾನ ಮಾಡಿರುವ ಎಲ್ಲ ಋಣಿಗಳ ಹೆಸರುಗಳು, ಅಂಥ ಸ್ವತ್ತುಗಳ ಪೂರ್ಣ ವಿವರಗಳು, ನೀಡಿರುವ ಮೊತ್ತ ಮತ್ತು 1975ರ ಅಕ್ಟೋಬರ್ 21ರಂದು ಇರುವ ಬಾಕಿ ಮತ್ತು ನಿಯಮಿಸಬಹುದಾದಂಥ ಇತರ ವಿವರಗಳನ್ನು ಒಳಗೊಂಡಿರುವ ವಿವರ ಪತ್ರವನ್ನು ಅಂಥ ಲೇಣಿದಾರನು ಸಾಮಾನ್ಯವಾಗಿ ವಾಸವಾಗಿರುವ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿ ಇರುವ ಉಪವಿಭಾಗೀಯ ದಂಡಾಧಿಕಾರಿ, [ಅಥವಾ ಸಂದರ್ಭಾನುಸಾರ ಕಾರ್ಯನಿರ್ವಾಹಕ ದಂಡಾಧಿಕಾರಿ]

ಗೆ ಒದಗಿಸತಕ್ಕದ್ದು. ಅಂಥ ವಿವರ ಪತ್ರವನ್ನು ಸ್ವೀಕರಿಸಿದ ನಂತರ, ಉಪವಿಭಾಗೀಯ ದಂಡಾಧಿಕಾರಿಯು  [ಅಥವಾ ಸಂದರ್ಭಾನುಸಾರ ಕಾರ್ಯನಿರ್ವಾಹಕ ದಂಡಾಧಿಕಾರಿ] ಆದೇಶದ ಮೂಲಕ, ಯಾವ ಋಣಿಗಳು 4ನೇ ಪ್ರಕರಣದ ಅಡಿಯಲ್ಲಿ ಪರಿಹಾರಕ್ಕೆ ಹಕ್ಕುಳ್ಳವರಾಗಿದ್ದಾರೆ ಎಂಬುದನ್ನು ನಿರ್ಧರಿಸತಕ್ಕದ್ದು ಮತ್ತು ಲೇಣಿದಾರನು ಅಡಮಾನ ಪತ್ರದ ಮೇಲೆ ವಿಮೋಚನೆಯ ಹಿಂಬರಹವನ್ನು ಮಾಡುವಂತೆ ಮತ್ತು ಅದನ್ನು ಋಣಿಗೆ ಒಪ್ಪಿಸುವಂತೆ ನಿರ್ದೇಶಿಸತಕ್ಕದ್ದು. ಅಂಥ ಸ್ವತ್ತು ಲೇಣಿದಾರನ ಸ್ವಾಧೀನದಲ್ಲಿರುವಲ್ಲಿ ಅವನು ಅದನ್ನು ಋಣಿಗೆ ಒಪ್ಪಿಸತಕ್ಕದ್ದು. ಲೇಣಿದಾರನು ಹಾಗೆ ಮಾಡಲು ತಪ್ಪಿದಲ್ಲಿ, ಉಪವಿಭಾಗ ದಂಡಾಧಿಕಾರಿಯು [ಅಥವಾ ಸಂದರ್ಭಾನುಸಾರ ಕಾರ್ಯ ನಿರ್ವಾಹಕ ದಂಡಾಧಿಕಾರಿಯು]

ವಿಮೋಚನೆ ಮಾಡಿದ ಸಂಗತಿಯನ್ನು ಸ್ವತ: ದಾಖಲಿಸತಕ್ಕದ್ದು ಮತ್ತು ಆ ಬಗ್ಗೆ ಋಣಿಗೆ ಒಂದು ಪ್ರಮಾಣ ಪತ್ರ ನೀಡತಕ್ಕದ್ದು ಮತ್ತು ಅವಶ್ಯವಾಗಬಹುದಾದಂಥ ಬಲವನ್ನು ಬಳಸಿ ಸ್ವತ್ತಿನ ಸ್ವಾಧೀನತೆಯನ್ನು ಋಣಿಗೆ ಒಪ್ಪಿಸತಕ್ಕದ್ದು. 1976ರ ಅಧಿನಿಯಮ 63ರ ಮೂಲಕ 27.10.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(6) ಈ ಪ್ರಕರಣದ ಮೇರೆಗೆ ಉಪವಿಭಾಗೀಯ ದಂಡಾಧಿಕಾರಿಯ [ಅಥವಾ ಸಂದರ್ಭಾನುಸಾರ ಕಾರ್ಯನಿರ್ವಾಹಕ ದಂಡಾಧಿಕಾರಿಯ] 1 ಪ್ರತಿಯೊಂದು ಆದೇಶವು ಅಂತಿಮವಾಗಿರತಕ್ಕದ್ದು. 1976ರ ಅಧಿನಿಯಮ 63ರ ಮೂಲಕ 27.10.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(7) ಈ ಪ್ರಕರಣದ ಮೇರೆಗಿನ ವ್ಯವಹರಣೆಯಲ್ಲಿ ಯಾರೇ ನ್ಯಾಯವಾದಿಯು ಉಪವಿಭಾಗೀಯ ದಂಡಾಧಿಕಾರಿಯ [ಅಥವಾ ಸಂದರ್ಭಾನುಸಾರ ಕಾರ್ಯನಿರ್ವಾಹಕ ದಂಡಾಧಿಕಾರಿಯ] ಮುಂದೆ ಹಾಜರಾಗಲು ಅನುಮತಿಸತಕ್ಕದ್ದಲ್ಲ. 1976ರ ಅಧಿನಿಯಮ 63ರ ಮೂಲಕ 27.10.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(8) )ನೇ ಉಪಪ್ರಕರಣದ ಮೇರೆಗಿನ ಪ್ರಶ್ನೆಯ ನಿರ್ಧರಣೆ ಇತ್ಯರ್ಥದಲ್ಲಿರುವಾಗ, ಯಾರೇ ಲೇಣಿದಾರನು ಒತ್ತೆ ಇಡಲಾದ ವಸ್ತುಗಳನ್ನು ಮಾರಾಟ ಮಾಡತಕ್ಕದ್ದಲ್ಲ ಅಥವಾ ವಿಲೆ ಮಾಡತಕ್ಕದ್ದಲ್ಲ.

(9) ಹಿಂದಿನ ಉಪಪ್ರಕರಣದಲ್ಲಿ ಏನೇ ಇದ್ದರೂ, ಉಪವಿಭಾಗೀಯ ದಂಡಾಧಿಕಾರಿಯು [ಅಥವಾ ಸಂದರ್ಭಾನುಸಾರ ಕಾರ್ಯನಿರ್ವಾಹಕ ದಂಡಾಧಿಕಾರಿಯು] ಋಣಿಯು ಸಲ್ಲಿಸಿದ ಅರ್ಜಿಯ ಮೇಲೆ ಅಥವಾ ಅನ್ಯಥಾ ಲೇಣಿದಾರನ ಯಾವುದೇ ಆವರಣವನ್ನು ಪ್ರವೇಶಿಸಬಹುದು ಮತ್ತು ಋಣಿಗಳು ಒತ್ತೆ ಇಟ್ಟಿರುವ ವಸ್ತುಗಳನ್ನು ಶೋಧಿಸಬಹುದು ಮತ್ತು ಜಫ್ತಿ ಮಾಡಬಹುದು ಮತ್ತು ಅವುಗಳ ಸುರಕ್ಷಿತ ರಕ್ಷಣೆಗಾಗಿ ವ್ಯವಸ್ಧೆಮಾಡಬಹುದು. ಆ ನಂತರ ಅವರು ಹಾಗೆ ಜಪ್ತಿಮಾಡಿದ ಯಾವ ವಸ್ತುಗಳನ್ನು ಋಣಿಗಳಿಗೆ ಬಿಡುಗಡೆ ಮಾಡಬೇಕಾಗಿದೆ ಎಂಬುದನ್ನು ನಿರ್ಧರಿಸಲು ಮುಂದುವರೆಯತಕ್ಕದ್ದು ಮತ್ತು ತದನುಸಾರವಾಗಿ ಆದೇಶಗಳನ್ನು ಹೊರಡಿಸತಕ್ಕದ್ದು. 1976ರ ಅಧಿನಿಯಮ 63ರ ಮೂಲಕ 27.10.1976ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

ದಂಡನೆ.-

(1) ವಿವರ ಪತ್ರವನ್ನು ಒದಗಿಸಲು ಅಥವಾ 5ನೇ ಪ್ರಕರಣದ ಮೇರೆಗೆ ಮಾಡಿದ ಆದೇಶಗಳನ್ನು ಪಾಲಿಸಲು ತಪ್ಪುವ ಅಥವಾ 5ನೇ ಪ್ರಕರಣದ ಉಪಬಂಧಗಳನ್ನು ಅನ್ಯಥಾ ಉಲ್ಲಂಘಿಸುವ ಯಾರೇ ವ್ಯಕ್ತಿಯು, ಮೂರು ತಿಂಗಳಿಗಿಂತ ಕಡಿಮೆ ಇಲ್ಲದ ಆದರೆ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಅವಧಿಯ ಸೆರೆಮನೆವಾಸ ಶಿಕ್ಷೆಗೆ ಮತ್ತು ಒಂದು ಸಾವಿರ ರೂಪಾಯಿಗಳಿಗಿಂತ ಕಡಿಮೆ ಇಲ್ಲದ, ಆದರೆ ಐದುಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಗೆ ಗುರಿಯಾಗತಕ್ಕದ್ದು.

(2) (1)ನೇ ಉಪಪ್ರಕರಣದ ಮೇರೆಗೆ ದಂಡನೀಯವಾದ ಪ್ರತಿಯೊಂದು ಅಪರಾಧವು ನ್ಯಾಯ ವಿಚಾರಣೆಗೆ ಒಳಪಟ್ಟಿರತಕ್ಕದ್ದು.

ರುಜುವಾತಿನ ಹೊಣೆ.-

ಯಾವುದೇ ಕಾನೂನಿನಲ್ಲಿ, ಯಾವುದೇ ದಾವೆಯಲ್ಲಿ ಅಥವಾ ಯಾವುದೇ ವ್ಯವಹರಣೆಯಲ್ಲಿ ಏನೇ ಒಳಗೊಂಡಿದ್ದರೂ, ಋಣಿಯು ಈ ಅಧಿನಿಯಮದ ಸಂರಕ್ಷಣೆಗೆ ಹಕ್ಕುಳ್ಳವನಲ್ಲವೆಂದು ರುಜುವಾತುಪಡಿಸುವ ಹೊಣೆ ಲೇಣಿದಾರನ ಮೇಲಿರತಕ್ಕದ್ದು.

ಕೆಲವು ಋಣಗಳು ಮತ್ತು ಹೊಣೆಗಾರಿಕೆಗಳು ಬಾಧಿತಗೊಳ್ಳದಿರುವುದು.-

ಈ ಅಧಿನಿಯಮದಲ್ಲಿರುವ ಯಾವುದೂ, ಸಣ್ಣ ರೈತರ, ಭೂರಹಿತ ಕøಷಿ ಕಾರ್ಮಿಕರ ಮತ್ತು ದುರ್ಬಲ ವರ್ಗದ ಜನರ ಈ ಮುಂದಿನ ವರ್ಗಗಳ ಋಣಗಳು ಮತ್ತು ಹೊಣೆಗಾರಿಕೆಗಳಿಗೆ ಬಾಧಕವುಂಟುಮಾಡತಕ್ಕದ್ದಲ್ಲ:-

(ಎ) ಅಂಥ ಋಣಿಗಳಿಗೆ ಬಿಟ್ಟುಕೊಟ್ಟ ಯಾವುದೇ ಸ್ವತ್ತಿನ ಸಂಬಂಧದಲ್ಲಿ ಬಾಕಿ ಇರುವ ಯಾವುದೇ ಬಾಡಿಗೆ;

(ಬಿ) ಕಂತು ಖರೀದಿ ಒಪ್ಪಂದದ ಅಡಿಯಲ್ಲಿ ಬಾಕಿ ಇರುವ ಯಾವುದೇ ಮೊಬಲಗು ;

(ಸಿ) ಭೂಕಂದಾಯದ ಬಾಕಿಯಂತೆ ವಸೂಲಿಯಾಗಬೇಕಾದ ಯಾವುದೇ ಮೊಬಲಗು ;

(ಡಿ) ನಂಬಿಕೆದ್ರೋಹ ಅಥವಾ ಯಾವುದೇ ಹಿಂಸೆಯಿಂದ ಉಂಟಾಗುವ ಯಾವುದೇ ಹೊಣೆಗಾರಿಕೆ;

(ಇ) ಸಲ್ಲಿಸಲಾದ ಸೇವೆಗೆ ಸಂಬಳ ಅಥವಾ ಅನ್ಯಥಾ ಬಾಕಿ ಇರುವ ಮಜೂರಿಗಳು ಅಥವಾ ಪರಿಶ್ರಮಧನದ ಸಂಬಂಧದಲ್ಲಿ ಯಾವುದೇ ಹೊಣೆಗಾರಿಕೆ ; (ಎಫ್) ನ್ಯಾಯಾಲಯದ ಡಿಕ್ರಿಯ ಮೇರೆಗಿರಲಿ ಅಥವಾ ಅನ್ಯಥಾ ಆಗಲಿ ಜೀವನಾಂಶದ ಸಂಬಂಧದಲ್ಲಿ ಯಾವುದೇ ಹೊಣೆಗಾರಿಕೆ ;

(ಜಿ) ಈ ಮುಂದಿನವುಗಳಿಗೆ ಬಾಕಿ ಇರುವ ಋಣ ,-

(i) ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ ;

(ii) ಯಾವುದೇ ಸ್ಧಳೀಯ ಪ್ರಾಧಿಕಾರ;

(iii) ಕರ್ನಾಟಕ ಕøಷಿ ಸಾಲ ಕಾರ್ಯಾಚರಣೆಗಳು ಮತ್ತು ಸಂಕೀರ್ಣ ಉಪಬಂಧಗಳ ಅಧಿನಿಯಮ,

1974ರಲ್ಲಿ (1975ರ ಕರ್ನಾಟಕ ಅಧಿನಿಯುಮ ಸಂ.2) ವ್ಯಾಖ್ಯೆಗೊಳಿಸಲಾದಂಥ ಒಂದು ಸಾಲ ಏಜನ್ಸಿ;

(iv) ಕಂಪನಿಗಳ ಅಧಿನಿಯಮ, 1956ರ ಅರ್ಥವ್ಯಾಪ್ತಿಯೊಳಗೆ ಬರುವ ಯಾವುದೇ ಸರ್ಕಾರಿ ಕಂಪನಿ ;

(v) ಭಾರತೀಯ ಜೀವ ವಿಮಾ ನಿಗಮ ;

(vi) ಒಂದು ಸಹಕಾರ ಸಂಘ ; ಮತ್ತು (ಹೆಚ್) ಅಂಥ ಋಣಿಯು ಖರೀದಿಸಿದ ಸರಕುಗಳ ಬೆಲೆಯನ್ನು ಪ್ರತಿನಿಧಿಸುವ ಯಾವುದೇ ಋಣ.

ನಿಯಮ ರಚನಾಧಿಕಾರ.-

ರಾಜ್ಯ ಸರ್ಕಾರವು, ಈ ಅಧಿನಿಯಮದ ಉದ್ದೇಶಗಳನ್ನು ಈಡೇರಿಸಲು ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ನಿಯಮಗಳನ್ನು ರಚಿಸಬಹುದು.

ಕರ್ನಾಟಕ ಅಧ್ಯಾದೇಶಗಳ ಸಂ. 1975ರ 15, 1975ರ 19 ಮತ್ತು 1975ರ 21- ಇವುಗಳ ನಿರಸನ.-

(1) ಕರ್ನಾಟಕ ಋಣ ಪರಿಹಾರ ಅಧ್ಯಾದೇಶ, 1975 (1975ರ ಕರ್ನಾಟಕ ಅಧ್ಯಾದೇಶ ಸಂ. 15), ಕರ್ನಾಟಕ ಋಣ ಪರಿಹಾರ (ತಿದ್ದುಪಡಿ) ಅಧ್ಯಾದೇಶ, 1975 [1975ರ ಕರ್ನಾಟಕ ಅಧ್ಯಾದೇಶ ಸಂ.19) ಮತ್ತು ಕರ್ನಾಟಕ ಋಣ ಪರಿಹಾರ (ಎರಡನೇ ತಿದ್ದುಪಡಿ)1 ಅಧ್ಯಾದೇಶ, 1975 (1975ರ ಕರ್ನಾಟಕ ಅಧ್ಯಾದೇಶ ಸಂ. 21) ಇವುಗಳನ್ನು ಈ ಮೂಲಕ ನಿರಸನಗೊಳಿಸಲಾಗಿದೆ.

(2) ಹಾಗೆ ನಿರಸಿತವಾಗಿದ್ದರೂ, ಸದರಿ ಅಧ್ಯಾದೇಶಗಳ ಮೇರೆಗೆ ಮಾಡಿದ ಯಾವುದೇ ಕಾರ್ಯವನ್ನು ಅಥವಾ ಕೈಗೊಂಡ ಯಾವುದೇ ಕ್ರಮವನ್ನು ಈ ಅಧಿನಿಯಮದ ಸಂವಾದಿ ಉಪಬಂಧಗಳ ಮೇರೆಗೆ ಮಾಡಲಾಗಿದೆ ಅಥವಾ ಕೈಗೊಳ್ಳಲಾಗಿದೆ ಎಂದು ಭಾವಿಸತಕ್ಕದ್ದು.

ಕೊನೆಯ ಮಾರ್ಪಾಟು : 7/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate