অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ನೀರು ಪೂರೈಕೆ ಪ್ರದೇಶಾಭಿವದ್ಧಿ ಅಧಿನಿಯಮ

ಕರ್ನಾಟಕ ನೀರು ಪೂರೈಕೆ ಪ್ರದೇಶಾಭಿವದ್ಧಿ ಅಧಿನಿಯಮ

  1. ಚಿಕ್ಕ ಹೆಸರು ಮತ್ತು ಪ್ರಾರಂಭ.
  2. ಪರಿಭಾಷೆಗಳು.
  3. ಪ್ರಾಧಿಕಾರದ ರಚನೆ.-
  4. ಪ್ರಾಧಿಕಾರದ ರಚನೆ.-
  5. ಪ್ರಾಧಿಕಾರದ ಸದಸ್ಯತ್ವಕ್ಕೆ ಅನರ್ಹತೆ.-
  6. ಪದಾವಧಿ ಮತ್ತು ಸೇವಾ ಷರತ್ತುಗಳು.-
  7. ಸದಸ್ಯನನ್ನು ತೆಗೆದು ಹಾಕುವುದು.-
  8. ಆಕಸ್ಮಿಕ ಖಾಲಿ ಸ್ಥಾನಗಳು.-
  9. ಪ್ರಾಧಿಕಾರದ ಸಭೆಗಳು.-
  10. ಪ್ರಾಧಿಕಾರದ ಪ್ರಕಾರ್ಯಗಳು.-
  11. ಆಡಳಿತಗಾರ ಮತ್ತು ಇತರ ಅಧಿಕಾರಿಗಳು.-
  12. ಯೋಜನೆಗಳನ್ನು ಸಿದ್ಧಪಡಿಸುವುದು.-
  13. ಯೋಜನೆಯು ಪೂರ್ಣಗೊಂಡ ನಂತರದ ಕಾರ್ಯವಿಧಾನ.-
  14. ಯೋಜನೆಯ ಮಂಜೂರಾತಿ.-
  15. ಅಧಿಸೂಚನೆಯ ಪರಿಣಾಮಗಳು.-
  16. ಯೋಜನೆಯನ್ನು ಕಾರ್ಯಗತಗೊಳಿಸುವುದು.-
  17. ಸ್ಥಳೀಕರಣದ ತತ್ವಗಳನ್ನು ನಿರ್ದಿಷ್ಟಪಡಿಸಲು ಅಧಿಕಾರ.-
  18. ನೀರಿನ ಲಭ್ಯತೆಗೆ ಅನುಸಾರವಾಗಿ ಬೇರೆ ಬೇರೆ ಬೆಳೆಗಳನ್ನು ಬೆಳೆಯಲು, ಭೂಮಿಯ ವರ್ಗೀಕರಣ.-
  19. ನೀರು ಸರಬರಾಜನ್ನು ನಿಲ್ಲಿಸುವುದು.-
  20. ಅರ್ಹರಲ್ಲದ ವ್ಯಕ್ತಿಗಳಿಗೆ ಭೂ ಅಭಿವøದ್ಧಿಗಾಗಿ ಸಾಲದ ಸೌಲಭ್ಯಗಳು.-
  21. ಭೂ ಅಭಿವøದ್ಧಿಗಾಗಿ ಇರುವ ಅನುಮೋದಿತ ಯೋಜನೆಯ ಅಡಿಯಲ್ಲಿ ಅಡಮಾನ ಮಾಡಿದ ಭೂಮಿಯ ವಿಸ್ತೀರ್ಣ ಅಥವಾ ಚಕ್ಕುಬಂದಿಗಳ ಬದಲಾವಣೆ.-
  22. ಪ್ರಾಧಿಕಾರದ ನಿಧಿಗಳು.-
  23. ಪ್ರಾಧಿಕಾರದ ಬಜೆಟ್.-
  24. ಲೆಕ್ಕಪತ್ರಗಳು ಮತ್ತು ಲೆಕ್ಕ ಪರಿಶೋಧನೆ.-
  25. ವಾರ್ಷಿಕ ವರದಿಗಳು.-
  26. ದಂಡಗಳು.-
  27. ಅನಧಿಕøತವಾಗಿ ನೀರನ್ನು ಬಳಸುತ್ತಿರುವ ವ್ಯಕ್ತಿಯನ್ನು ಕಂಡುಹಿಡಿಯಲಾಗದಿದ್ದಾಗ ಹೊಣೆಗಾರಿಕೆ.-
  28. ಅಪರಾಧಗಳಿಗೆ ದುಷ್ಪ್ರೇರಣೆ.-
  29. ಇತರ ಕಾನೂನುಗಳ ಅಡಿಯಲ್ಲಿ ಶಿಕ್ಷೆಯನ್ನು ಪ್ರತಿಷೇಧಿಸದಿರುವುದು.-
  30. ಈ ಅಧಿನಿಯಮದ ಅಡಿಯಲ್ಲಿನ ಅಪರಾಧಗಳು ಸಂಜ್ಞೆಯವಾಗಿರುವುದು.-
  31. ಅಡ್ಡಿಪಡಿಸುವ ವ್ಯಕ್ತಿಯನ್ನು ಹೊರಹಾಕುವ ಮತ್ತು ವಶಕ್ಕೆ ತೆಗೆದುಕೊಳ್ಳುವ ಅಧಿಕಾರ.-
  32. ಜುಲ್ಮಾನೆಯನ್ನು ಮಾಹಿತಿದಾರನಿಗೆ ಬಹುಮಾನವಾಗಿ ಕೊಡುವುದು.-
  33. ಅಪರಾಧಗಳ ಬಗೆಗಿನ ರಾಜಿ.-
  34. ನೀರು ಪೂರೈಕೆ ಪ್ರದೇಶಗಳಿಗೆ ಹೊಂದಿಕೊಂಡಿರುವ ಜಮೀನಿನ ಭೂ ಹಿಡುವಳಿದಾರರ ಹೊಣೆಗಾರಿಕೆ.-
  35. ಘಟಕಗಳ ರಚನೆ.-
  36. ಪ್ರವೇಶಿಸುವುದು, ಸರ್ವೆ ಮಾಡುವುದು ಮುಂತಾದ ಅಧಿಕಾರ.-
  37. ವಿಧಿಸಬಹುದಾದ ಚಾರ್ಜು.-
  38. ಸೇವೆಗಾಗಿ ಫೀಜುಗಳು.-
  39. ಪ್ರಾಧಿಕಾರದ ಸದಸ್ಯರು ಮತ್ತು ಪ್ರಾಧಿಕಾರದ ಸಿಬ್ಬಂದಿ ಸದಸ್ಯರು ಲೋಕ ನೌಕರರಾಗಿರುವುದು.-
  40. ಸದ್ಭಾವನೆಯಿಂದ ಕೈಗೊಂಡ ಕ್ರಮಕ್ಕೆ ರಕ್ಷಣೆ.-
  41. ಭೂ ಕಂದಾಯದ ಬಾಕಿಯಂತೆ ಬಾಕಿಗಳ ವಸೂಲಿ.-
  42. ಕಂಪನಿಗಳಿಂದ ಅಪರಾಧಗಳು.-
  43. ಸಿವಿಲ್ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಗೆ ಪ್ರತಿಷೇಧ.-
  44. ಸಾಕ್ಷಿದಾರರನ್ನು ಸಮನು ಮಾಡುವ ಮತ್ತು ವಿಚಾರಣೆ ಮಾಡುವ ಅಧಿಕಾರ.-
  45. ಪುನರೀಕ್ಷಣೆ.-
  46. ನಿಯಮ ರಚನಾಧಿಕಾರ.-
  47. ವಿನಿಯಮಗಳು.-
  48. ರಾಜ್ಯ ಸರ್ಕಾರದಿಂದ ನಿರ್ದೇಶನಗಳು.-
  49. ಅಧಿನಿಯಮವು ಇತರ ಕಾನೂನುಗಳ ಮೇಲೆ ಅಧ್ಯಾರೋಹಿ ಪರಿಣಾಮ ಹೊಂದಿರುವುದು.-
  50. ತೊಂದರೆ ನಿವಾರಣಾಧಿಕಾರ.-
  51. 1979ರ ಕರ್ನಾಟಕ ಅಧ್ಯಾದೇಶ ಸಂಖ್ಯೆ 21ರ ನಿರಸನ.-

ಕರ್ನಾಟಕ ನೀರು ಪೂರೈಕೆ ಪ್ರದೇಶಾಭಿವøದ್ಧಿ ಅಧಿನಿಯಮ, 1980

(ಕರ್ನಾಟಕ ರಾಜ್ಯಪತ್ರ, ಗುರುವಾರ ಸೆಪ್ಟೆಂಬರ್ 6, 2007, ಭಾಗ - IVಎ ಯಲ್ಲಿ 1017 ರಿಂದ 1039ರ ವರೆಗಿನ ಪುಟಗಳಲ್ಲಿ ಪ್ರಕಟವಾಗಿದೆ.)

ಪ್ರಕರಣಗಳ ಅನುಕ್ರಮಣಿಕೆ

ಉದ್ದೇಶ ಮತ್ತು ಕಾರಣಗಳ ಹೇಳಿಕೆI

1980ರ ಅಧಿನಿಯಮ 6.- ಸಮಗ್ರ ಅಭಿವೃದ್ಧಿಗಾಗಿ ಮತ್ತು ಭಾರಿ ನೀರಾವರಿ ಯೋಜನೆಗಳಾದ

(1) ತುಂಗಭದ್ರಾ ಯೋಜನೆ (2) ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ (3) ಕಾವೇರಿ ಜಲಾನಯನ ಯೋಜನೆಗಳ (ಕøಷ್ಣರಾಜ ಸಾಗರ, ಕಬಿನಿ, ಹೇಮಾವತಿ ಮತ್ತು ಹಾರಂಗಿ ಯೋಜನೆಗಳನ್ನು ಒಳಗೊಂಡ) ಅಡಿಯಲ್ಲಿ ಸøಜಿಸಲಾದ ನೀರಾವರಿ ಸಾಮಥ್ರ್ಯವನ್ನು ತ್ವರಿತವಾಗಿ ಮತ್ತು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ, ಮೂರು ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರಗಳನ್ನು 1974ರ ಜನವರಿಯಲ್ಲಿ ರಚಿಸಲಾಯಿತು. ತರುವಾಯ, ಕøಷ್ಣಾ ಮೇಲ್ದಂಡೆ ಯೋಜನೆ ಹಾಗೂ ಭದ್ರಾ ಯೋಜನೆಯ ಅಭಿವøದ್ಧಿಗಾಗಿ ಒಂದು ಪ್ರತ್ಯೇಕ ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರವನ್ನ ಅನುಕ್ರಮವಾಗಿ 1977ರ ಸೆಪ್ಟೆಂಬರ್ ತಿಂಗಳಲ್ಲಿ ಮತ್ತು 1979ರ ಡಿಸೆಂಬರ್ ತಿಂಗಳಲ್ಲಿ ರಚಿಸಲಾಯಿತು.

ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರಗಳನ್ನು ಸರ್ಕಾರದ ಆಡಳಿತಾತ್ಮಕ / ಕಾರ್ಯನಿರ್ವಾಹಕ ಆದೇಶಗಳ ಮೂಲಕ ರಚಿಸಲಾಗಿದೆ. ಆದ್ದರಿಂದ ಅವು, ಪ್ರಸ್ತುತ, ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ಸಮನ್ವಯ ಸಾಧಿಸುವ ಮೂಲಕ ನೀರು ಪೂರೈಕೆ ಪ್ರದೇಶಗಳ ಸಮಗ್ರ ಅಭಿವøದ್ಧಿಯನ್ನು ಸಂವರ್ಧಿಸುವ ಪಾತ್ರವನ್ನು ಮಾತ್ರವೇ ನಿರ್ವಹಿಸುತ್ತವೆ.

ನೀರಾವರಿ ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಭೂ ಅಭಿವøದ್ಧಿ ಕಾಮಗಾರಿಯು ಒಂದು ಮುಖ್ಯವಾದ ಅಂಶವಾಗಿದೆ. ಈ ಬಗ್ಗೆ ಒಂದು ಸೂಕ್ತವಾದ ಶಾಸನ ಇಲ್ಲದಿರುವುದರಿಂದ, ಭೂಮಿಯ ವ್ಯವಸ್ಥಿತವಾದ ಹಾಗೂ ವೈಜ್ಞಾನಿಕವಾದ ಅಭಿವøದ್ಧಿಯನ್ನು ಸುನಿಶ್ಚಿತಗೊಳಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಭೂ ಅಭಿವøದ್ಧಿಗಾಗಿ ಸಾಂಸ್ಥಿಕ ಹಣಕಾಸು ನೆರವು ಒದಗಿಸಲು ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ.

ಸಾಂಸ್ಥಿಕ ಹಣಕಾಸು ನೆರವನ್ನು ಉಪಯೋಗಿಸಿಕೊಳ್ಳಬಯಸುವ ಅರ್ಹ ರೈತರು, ಹಣಕಾಸು ಒದಗಿಸುವ ಬ್ಯಾಂಕುಗಳಿಂದ ಸಾಮಾನ್ಯ ಕ್ರಮದಲ್ಲಿ ಸಾಲಗಳನ್ನು ಪಡೆಯುವರು. ಆದರೆ, ಭೂಮಿಗಳ ಸಂಬಂಧದಲ್ಲಿ ಯುಕ್ತವಾದ ಹಕ್ಕುಪತ್ರದ ಕೊರತೆಯ ಕಾರಣದಿಂದಾಗಿ ಮತ್ತು ಇತರ ಕಾರಣಗಳಿಂದಾಗಿ ಸಾಂಸ್ಥಿಕ ಹಣಕಾಸು ನೆರವನ್ನು ಪಡೆಯಲು ಅನರ್ಹರಾದ ವ್ಯಕ್ತಿಗಳು ಸುಮಾರು ಶೇ.20 ರಷ್ಟು ಭೂಮಿಯನ್ನು ಹೊಂದಿರುವುದು ಅಥವಾ ಅರ್ಹರಾಗಿದ್ದೂ ಸಾಲ ಮಾಡಿ ತಮ್ಮ ಭೂಮಿಯನ್ನು ಅಭಿವøದ್ಧಿಗೊಳಿಸಲು ವ್ಯಕ್ತಿಗಳು ಇಚ್ಫಿಸದಿರುವುದು ಕಂಡುಬಂದಿದೆ. ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರವು,

ಅನರ್ಹರಾದ ರೈತರಿಗೆ ಸೇರಿದ ಭೂಮಿಯ ಅಭಿವøದ್ಧಿಗಾಗಿ ಅವಶ್ಯವಿರುವ ಹಣವನ್ನು ಸಾಲವಾಗಿ ಪಡೆಯುವ ಒಂದು ಶಾಸನಬದ್ಧ ನಿಕಾಯವಾಗಬೇಕಾಗಿದೆ. ಆದುದರಿಂದ, ನೀರು ಪೂರೈಕೆ ಪ್ರದೇಶಾಬಿವøದ್ಧಿ ಪ್ರಾಧಿಕಾರಗಳನ್ನು ಶಾಸನಬದ್ಧ ನಿಕಾಯಗಳನ್ನಾಗಿ ಮಾಡುವುದು ಹಾಗೂ ಕಡ್ಡಾಯವಾಗಿ ಭೂ ಅಭಿವøದ್ಧಿಯನ್ನು ಜಾರಿಗೊಳಿಸಲು ಹಾಗೂ ಭೂ ಅಭಿವøದ್ಧಿಗಾಗಿ ಮತ್ತು ಇತರ ಉದ್ದೇಶಗಳಿಗಾಗಿ ಹಣ ಸಾಲ ಪಡೆಯಲು ಹಾಗೂ ನೀಡಲು ಅವುಗಳಿಗೆ ಅಧಿಕಾರ ನೀಡುವುದು ಅವಶ್ಯವೆಂದು ಕಂಡುಬಂದಿದೆ.

ವಿಧೇಯಕದ ವಿಶೇಷ ಅಂಶಗಳನ್ನು ಈ ಮುಂದೆ ಸಂಕ್ಷಿಪ್ತವಾಗಿ ಕೊಡಲಾಗಿದೆ:-

  1. ನೀರು ಪೂರೈಕೆ ಪ್ರದೇಶಗಳ ಸಮಗ್ರ ಅಭಿವøದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು.
  2. ಕ್ಷೇತ್ರ ಕಾಲುವೆಗಳ ಮತ್ತು ಹೊಲ ಬಸಿ ಕಾಲುವೆಗಳ ನಿರ್ಮಾಣ ಮತ್ತು ಕೊಳವೆ ಹೊರಗಂಡಿಗಳ ಅಡಿಯಲ್ಲಿನ ನೀರಾವರಿ ವ್ಯವಸ್ಥೆಯ ಸರಿಯಾದ ನಿರ್ವಹಣೆಯನ್ನು ಖಚಿತ ಪಡಿಸಿಕೊಳ್ಳುವುದು.
  3. ಅನುಮೋದಿತ ಯೋಜನೆಯ ಪ್ರಕಾರ ಭೂ ಹಿಡುವಳಿದಾರರು ಭೂಮಿಯನ್ನು ತಾವೇ ಸ್ವತಃ ಅಭಿವøದ್ಧಿ ಗೊಳಿಸಿಕೊಳ್ಳುವ ಆಯ್ಕೆಯೊಂದಿಗೆ ಕೊಳವೆ ಹೊರಗಂಡಿಯ ಆಧಾರದ ಮೇಲೆ ಕಡ್ಡಾಯ ಮತ್ತು ವ್ಯವಸ್ಥಿತ ಭೂ ಅಭಿವøದ್ಧಿ.
  4. ಭೂ ಹಿಡುವಳಿದಾರರು ಭೂಮಿಯನ್ನು ತಾವೇ ಸ್ವತಃ ಅಭಿವøದ್ಧಿಗೊಳಿಸಿಕೊಳ್ಳುವ ಆಯ್ಕೆಯೊಂದಿಗೆ ಕೊಳವೆ ಹೊರಗಂಡಿಯ ಆಧಾರದ ಮೇಲೆ ಕಡ್ಡಾಯ ಮತ್ತು ವ್ಯವಸ್ಧಿತ ಭೂ ಅಭಿವøದ್ಧಿ .
  5. ನೀರು ಪೂರೈಕೆ ಪ್ರದೇಶಗಳನ್ನು ನಿರ್ದಿಷ್ಟ ಸ್ಥಳಗಳಿಗೆ ಸೀಮಿತಗೊಳಿಸುವುದು ಮತ್ತು ಬೆಳೆ ಪದ್ಧತಿಯನ್ನು ಅನುಷ್ಠಾನಕ್ಕೆ ತರುವುದು.
  6. ವ್ಯವಸ್ಥಿತ ಭೂ ಅಭಿವøದ್ಧಿಗಾಗಿ ಅವಶ್ಯವಿರುವೆಡೆಯಲ್ಲೆಲ್ಲ ಕ್ಷೇತ್ರದ ಚಕ್ಕುಬಂದಿಗಳನ್ನು ಬದಲಾಯಿಸುವುದು.
  7. ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರಕ್ಕೆ ತನ್ನ ಪ್ರಕಾರ್ಯಗಳ ಯುಕ್ತ ನಿರ್ವಹಣೆಗೆ ಅವಶ್ಯವಿರುವ ಹಣವನ್ನು ಸಾಲ ಪಡೆಯಲು ಮತ್ತು ಸಾಲ ನೀಡಲು ಅಧಿಕಾರ ನೀಡುವುದು.
  8. ಕøಷಿ, ರೇಷ್ಮೆಕøಷಿ, ಪಶುಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆ, ಕ್ಷೇತ್ರ ಅರಣ್ಯಪಾಲನೆ, ಸಂಪರ್ಕ ಮತ್ತು ಸಹಕಾರ -ಇವುಗಳ ಸಂಬಂಧದಲ್ಲಿ ಆ ಪ್ರದೇಶದಲ್ಲಿನ ರೈತರ ಸರ್ವತೋಮುಖ ಅಭಿವøದ್ಧಿ.
  9. ಪ್ರಾಧಿಕಾರಕ್ಕಾಗಿ ಒಂದು ನಿಧಿಯನ್ನು ರಚಿಸುವುದು.
  10. ಅಪರಾಧಗಳು ಮತ್ತು ದಂಡಗಳಿಗೆ ಉಪಬಂಧ ಕಲ್ಪಿಸುವುದು.

ಕರ್ನಾಟಕ ವಿಧಾನ ಸಭೆಯು ಅಧಿವೇಶನದಲ್ಲಿಲ್ಲದಿದ್ದುದರಿಂದ ಮತ್ತು ವಿಷಯವು ತುರ್ತುಸ್ವರೂಪ ದ್ದಾಗಿದ್ದುದರಿಂದ ಒಂದು ಅಧ್ಯಾದೇಶವನ್ನು ಹೊರಡಿಸಲಾಯಿತು. ಸದರಿ ಅಧ್ಯಾದೇಶಕ್ಕೆ ಬದಲಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ. (25.2.1980ನೇ ದಿನಾಂಕದ ಕರ್ನಾಟಕ ರಾಜ್ಯಪತ್ರದ (ವಿಶೇಷ ಸಂಚಿಕೆ) ಭಾಗ IV - 2 ಎ ಯಲ್ಲಿ ಸಂಖ್ಯೆ ೧೨೦ ಎಂದು ಪುಟ 31 - 33ರಲ್ಲಿ ಪ್ರಕಟವಾಗಿದೆ.)

1986ರ ತಿದ್ದುಪಡಿ ಮಾಡುವ ಅಧಿನಿಯಮ 44.- ಕರ್ನಾಟಕ ನೀರು ಪೂರೈಕೆ ಪ್ರದೇಶಾಭಿವøದ್ಧಿ ಅಧಿನಿಯಮ,

1980ರ 4ನೇ ಪ್ರಕರಣದ (1)ನೇ ಉಪ ಪ್ರಕರಣದ (ಸಿ) ಖಂಡದ ಪ್ರಕಾರ, ಸರ್ಕಾರದ ಅಪರ ಕಾರ್ಯದರ್ಶಿ, ಯೋಜನಾ ಇಲಾಖೆ (ನೀರು ಪೂರೈಕೆ ಪ್ರದೇಶಾಭಿವøದ್ಧಿ) ಇವರು ಪ್ರಾಧಿಕಾರದ ಸದಸ್ಯರಲ್ಲೊಬ್ಬರಾಗಿರುತ್ತಾರೆ.

ಆದಾಗ್ಯೂ, ಸರ್ಕಾರಿ ಆದೇಶ ಸಂಖ್ಯೆ ಡಿಪಿಎಆರ್ 358 ಎಸ್‍ಜಿಓ 83, ದಿನಾಂಕ 29ನೇ ನವೆಂಬರ್ 1983, ಇದರ ಮೂಲಕ ನೀರು ಪೂರೈಕೆ ಪ್ರದೇಶಾಭಿವøದ್ಧಿಗೆ ಸಂಬಂಧಪಟ್ಟ ವಿಷಯವನ್ನು ಯೋಜನಾ ಇಲಾಖೆಯಿಂದ ಲೋಕೋಪಯೋಗಿ, ನೀರು ಪೂರೈಕೆ ಪ್ರದೇಶಾಭಿವøದ್ಧಿ ಮತ್ತು ವಿದ್ಯುಚ್ಫಕ್ತಿ ಇಲಾಖೆಗೆ ವರ್ಗಾಯಿಸಲಾಯಿತು. ಆದ್ದರಿಂದ, `` ಸರ್ಕಾರದ ಅಪರ ಕಾರ್ಯದರ್ಶಿ (ನೀರು ಪೂರೈಕೆ ಪ್ರದೇಶಾಭಿವøದ್ಧಿ) ಲೋಕೋಪಯೋಗಿ, ನೀರು ಪೂರೈಕೆ ಪ್ರದೇಶಾಭಿವøದ್ಧಿ ಮತ್ತು ವಿದ್ಯುಚ್ಫಕ್ತಿ ಇಲಾಖೆ'' ಎಂಬುದನ್ನು ಪ್ರತಿಯೋಜಿಸಲು 1980ರ ಕರ್ನಾಟಕ ನೀರು ಪೂರೈಕೆ ಪ್ರದೇಶಾಭಿವøದ್ಧಿ ಅಧಿನಿಯಮದ 4ನೇ

ಪ್ರಕರಣದ (1)ನೇ ಉಪ ಪ್ರಕರಣದ (ಸಿ) ಖಂಡವನ್ನು ತಿದ್ದುಪಡಿ ಮಾಡುವುದು ಅವಶ್ಯವಾಗಿದೆ. (ದಿನಾಂಕ 19.8.1986ರ ಕರ್ನಾಟಕ ರಾಜ್ಯಪತ್ರದ (ವಿಶೇಷ ಸಂಚಿಕೆ) ಭಾಗ IV- 2ಎ ಯಲ್ಲಿ ಸಂಖ್ಯೆ 629 ಎಂದು ಪುಟ 3ರಲ್ಲಿ ಪ್ರಕಟಿಸಲಾಗಿದೆ.)

1987ರ ತಿದ್ದುಪಡಿ ಮಾಡುವ ಅಧಿನಿಯಮ 33.- ಸಂಬಂಧಪಟ್ಟ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯದರ್ಶಿಗಳನ್ನು ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಸೇರಿಸಲು 1980ರ ನೀರು ಪೂರೈಕೆ ಪ್ರದೇಶಾಭಿವøದ್ಧಿ ಅಧಿನಿಯಮದ 4ನೇ ಪ್ರಕರಣವನ್ನು ತಿದ್ದುಪಡಿ ಮಾಡುವುದು ಅವಶ್ಯವಾಗಿದೆ. (ಲಾ 53 ಎಲ್‍ಜಿಎನ್ 87ರ ಕಡತದಲ್ಲಿ 1987ರ ವಿ.ಪ. ವಿಧೇಯಕ ಸಂಖ್ಯೆ 4 ರಿಂದ ಪಡೆಯಲಾಗಿದೆ.)

1995ರ ತಿದ್ದುಪಡಿ ಮಾಡುವ ಅಧಿನಿಯಮ 32.- ಈ ಮುಂದಿನ ವ್ಯಕ್ತಿಗಳನ್ನು ಪ್ರಾಧಿಕಾರದ ಸದಸ್ಯರನ್ನಾಗಿ ಸೇರಿಸಲು ಕರ್ನಾಟಕ ನೀರು ಪೂರೈಕೆ ಪ್ರದೇಶಾಭಿವøದ್ಧಿ ಅಧಿನಿಯಮ, 1980ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ:-

(1) ಮುಖ್ಯ ಇಂಜನಿಯರುಗಳ ಜೊತೆಗೆ, ಸಂಬಂಧಪಟ್ಟ ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರದ ಇಂಜನೀಯರ್ಸ್-ಇನ್-ಚೀಫ್‍ಗಳು;

(2) ಕøಷಿ ಇಲಾಖೆಯ ಜಂಟಿ ನಿರ್ದೇಶಕರುಗಳು ಮತ್ತು ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರರುಗಳು, ಕøಷಿ ನಿರ್ದೇಶಕರ ಅಥವಾ ಸಂದರ್ಭಾನುಸಾರ ಸಹಕಾರ ಸಂಘಗಳ ರಿಜಿಸ್ಟ್ರಾರರ ನಾಮನಿರ್ದೇಶಿತ ವ್ಯಕ್ತಿಗಳಾಗಿ ಪ್ರತಿನಿಧಿಸಿ ಪ್ರಾಧಿಕಾರದ ಸಭೆಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಮಾಡುವುದು.

(ಲಾ. 10 ಎಲ್‍ಜಿಎನ್ 94ರ ಕಡತದಲ್ಲಿ 1995ರ ವಿ.ಸ. ವಿಧೇಯಕ ಸಂಖ್ಯೆ 28 ರಿಂದ ಪಡೆಯಲಾಗಿದೆ.)

2003ರ ತಿದ್ದುಪಡಿ ಮಾಡುವ ಅಧಿನಿಯಮ 25.- ಪ್ರತಿವರ್ಷ ಪ್ರಾಧಿಕಾರವು ಸಿದ್ಧಪಡಿಸಿದ ವಾರ್ಷಿಕ ವರದಿಗಳನ್ನು, ಅಧಿನಿಯಮದಲ್ಲಿ ಉಪಬಂಧಿಸಲಾದಂತೆ, ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸಲಾಗುತ್ತಿದೆ. ಆದರೆ, ರಾಜ್ಯ ಲೆಕ್ಕಪತ್ರಗಳ ನಿಯಂತ್ರಕನು ಪರಿಶೋಧಿಸಿದ ಮತ್ತು ಪ್ರಮಾಣೀಕರಿಸಿದ ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರದ ಲೆಕ್ಕ ಪತ್ರಗಳನ್ನು ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸಲು ಯಾವುದೇ ಉಪಬಂಧ ಇಲ್ಲ. ಆದ್ದರಿಂದ, ರಾಜ್ಯ ಸರ್ಕಾರವು ವಾರ್ಷಿಕ ವರದಿಗಳನ್ನು ಸ್ವೀಕರಿಸಿದ ಕೂಡಲೇ, ಅವುಗಳನ್ನು ಪರಿಶೋಧಿತವಾದ ಲೆಕ್ಕ ಪತ್ರಗಳ ಜೊತೆಗೆ ಆದಷ್ಟು ಬೇಗ, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸುವುದಕ್ಕಾಗಿ ಉಪಬಂಧ ಕಲ್ಪಿಸಲು 24ನೇ ಪ್ರಕರಣವನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ. (ವಿಧಾನ ಪರಿಷತ್ ವಿಧೇಯಕ ಸಂಖ್ಯೆ 2003 ರ 2)

1980ರ ಕರ್ನಾಟಕ ಅಧಿನಿಯಮ ಸಂಖ್ಯೆ ೬(1980ರ ಮಾರ್ಚ್ ಇಪ್ಪತ್ತೆ ದಿನದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ.)

ಕರ್ನಾಟಕ ನೀರು ಪೂರೈಕೆ ಪ್ರದೇಶಾಭಿವøದ್ಧಿ ಅಧಿನಿಯಮ, ೧೯೮೦ (1980ರ ಮಾರ್ಚ್ ಹದಿನೆಂಟನೇ ದಿನದಂದು ರಾಷ್ಟ್ರಾಧ್ಯಕ್ಷರ ಅನುಮೋದನೆ ಪಡೆದಿದೆ.)(ಅಧಿನಿಯಮ ಸಂಖ್ಯೆ 1986ರ 44, 1987ರ 33, 1995ರ 32 ಮತ್ತು 2003ರ 25 ಇವುಗಳ ಮೂಲಕ ತಿದ್ದುಪಡಿಯಾದಂತೆ)

ಕರ್ನಾಟಕ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಂದ ಪ್ರಯೋಜನ ಪಡೆದ ಪ್ರದೇಶಗಳ ಅಭಿವøದ್ಧಿಗಾಗಿ ಉಪಬಂಧಗಳನ್ನು ಕಲ್ಪಿಸುವ ಒಂದು ಅಧಿನಿಯಮ; ನೀರಾವರಿ ಯೋಜನೆಗಳಿಂದ ಪ್ರಯೋಜನ ಪಡೆದ ಜಮೀನುಗಳು ಇರುವ ಪ್ರದೇಶಗಳ ಸಮಗ್ರ ಹಾಗೂ ವ್ಯವಸ್ಥಿತ ಅಭಿವøದ್ಧಿಗಾಗಿ ಮತ್ತು ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗಾಗಿ ಉಪಬಂಧ ಕಲ್ಪಿಸುವುದು ಯುಕ್ತವಾಗಿರುವುದರಿಂದ; ಭಾರತ ಗಣರಾಜ್ಯದ ಮೂವತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಇದು ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

ಚಿಕ್ಕ ಹೆಸರು ಮತ್ತು ಪ್ರಾರಂಭ.

(1) ಈ ಅಧಿನಿಯಮವನ್ನು ಕರ್ನಾಟಕ ನೀರು ಪೂರೈಕೆ ಪ್ರದೇಶಾಭಿವøದ್ಧಿ ಅಧಿನಿಯಮ, 1980 ಎಂದು ಕರೆಯತಕ್ಕದ್ದು.

(2) ಇದು 1979ರ ಡಿಸೆಂಬರ್ ಹನ್ನೊಂದರಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

ಪರಿಭಾಷೆಗಳು.

ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(1) ``ಪ್ರಾಧಿಕಾರ'' ಎಂದರೆ 3ನೇ ಪ್ರಕರಣದ ಅಡಿಯಲ್ಲಿ ರಚಿತವಾದ ಒಂದು ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರ;

(2) ``ಕøಷಿ ಕಾರ್ಮಿಕ'' ಎಂದರೆ ಮಾಲಿಕನಾಗಿ ಅಥವಾ ಗೇಣಿದಾರನಾಗಿ ಅಥವಾ ಅಡಮಾನದಾರನಾಗಿ ತನ್ನ ಸ್ವಾಧೀನದಲ್ಲಿ ಯಾವುದೇ ಜಮೀನನ್ನು ಹೊಂದಿಲ್ಲದ ಮತ್ತು ಜಮೀನಿನಲ್ಲಿ ದೈಹಿಕ ಪರಿಶ್ರಮವೇ ಪ್ರಧಾನ ಜೀವನೋಪಾಯವಾಗಿರುವ ಒಬ್ಬ ವ್ಯಕ್ತಿ;

(3) ಒಂದು ಅಥವಾ ಹೆಚ್ಚಿನ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ `` ನೀರು ಪೂರೈಕೆ ಪ್ರದೇಶ'' ಎಂದರೆ ಇತರ ಜಮೀನುಗಳೊಂದಿಗೆ, ಅಂಥ ನೀರಾವರಿ ಯೋಜನೆ ಅಥವಾ ಯೋಜನೆಗಳಿಂದ ಪ್ರಯೋಜನ ಪಡೆದ ಜಮೀನುಗಳನ್ನು ಒಳಗೊಂಡ, ರಾಜ್ಯ ಸರ್ಕಾರವು ಅಧಿಸೂಚಿಸಬಹುದಾದಂಥ ಪ್ರದೇಶ;

(4) ನೀರು ಪೂರೈಕೆ ಪ್ರದೇಶದ ಸಂಬಂಧದಲ್ಲಿ, ``ವ್ಯಾಪಕ ಅಭಿವøದ್ಧಿ'' ಯು,-

(ಎ) ಭೂ ಹಿಡುವಳಿಯ ಕ್ರೋಡೀಕರಣ, ಭೂ ಮೋಜಣಿ ಮತ್ತು ವೈಮಾನಿಕ ಛಾಯಾಚಿತ್ರಗಳ ಮೂಲಕ ನಕ್ಷೆ ತಯಾರಿಕೆಗಾಗಿ ಭೂ ದಾಖಲೆಗಳನ್ನು ತಹಲ್‍ವರೆಗೆ ಸಿದ್ಧಪಡಿಸುವುದು;

(ಬಿ) ಭೂ ಮತ್ತು ಜಲ ಸಂರಕ್ಷಣೆ;

(ಸಿ) ಸಂಬಂಧಪಟ್ಟ ರಚನೆಗಳೊಂದಿಗೆ ಕ್ಷೇತ್ರ ಕಾಲುವೆಗಳ ನಿರ್ಮಾಣ;

(ಡಿ) ಸಂಬಂಧಪಟ್ಟ ರಚನೆಗಳೊಂದಿಗೆ ಕ್ಷೇತ್ರ ಬಸಿ ಕಾಲುವೆಗಳ ನಿರ್ಮಾಣ;

(ಇ) ಇಳಿಜಾರು ಮಾಡುವುದು, ಮಟ್ಟಮಾಡುವುದು; ಒಡ್ಡು ನಿರ್ಮಾಣ ಮಾಡುವುದು, ಮುಂತಾದ ಕೆಲಸಗಳೂ ಸೇರಿದಂತೆ ಭೂಮಿಗೆ ಆಕಾರ ಕೊಡುವುದು;

(ಎಫ್) ಸಮರ್ಥ ಕøಷಿಕ್ಷೇತ್ರ ನಿರ್ವಹಣೆಗಾಗಿ ಹೊಲದ ಗಡಿಗಳ ಮರು ಪಂಕ್ತೀಕರಣ ಮತ್ತು ಭೂಮಿಯ ಭಾಗಗಳನ್ನು ಆಯತಾಕಾರಗೊಳಿಸುವುದು ಮತ್ತು ಕೊಳವೆ ಹೊರಗಂಡಿಯ ಅಥವಾ ಪಕ್ಕದ ಕೊಳವೆ ಹೊರ ಗಂಡಿಯ ಕೆಳಗಿನ ಭೂ ಹಿಡುವಳಿಗಳ ಕ್ರೋಡೀಕರಣ;

(ಜಿ) ನೀರು ಜಿನುಗುವಿಕೆಯನ್ನು ತಡೆಗಟ್ಟಲು ಕ್ಷೇತ್ರ ಕಾಲುವೆಗಳಿಗೆ ಸೂಕ್ತ ಸಾಮಗ್ರಿಯಿಂದ ಅಸ್ತರಿ ಹಾಕುವುದು;

(ಎಚ್) ಸಂಬಂಧಿಸಿದ ರಚನೆಗಳೊಂದಿಗೆ ಆಯಕಟ್ಟು ರಸ್ತೆಗಳನ್ನು ನಿರ್ಮಿಸುವುದು ಮತ್ತು ಮೇಲ್ದರ್ಜೆಗೇರಿಸುವುದು;

(ಐ) ಹೊರ ಗಂಡಿಗೆ ಸಮೀಪ ಹೊಂದಿಕೊಂಡಿರುವ ಪ್ರದೇಶದಲ್ಲಿರುವ ಸಣ್ಣ ಭೂ ಹಿಡುವಳಿಗಳನ್ನು ಮತ್ತು ದೂರದಲ್ಲಿರುವ ದೊಡ್ಡ ಭೂ ಹಿಡುವಳಿಗಳನ್ನು ಗುಂಪುಗೂಡಿಸುವುದು;

(ಜೆ) ನೀರು ಪೆÇೀಲಾಗುವುದನ್ನು ತಪ್ಪಿಸಲು ಮತ್ತು ನೀರು ನಿಲ್ಲುವುದು, ಲವಣತ್ವ, ಕ್ಷಾರತ್ವ ಮುಂತಾದವುಗಳನ್ನು ನಿವಾರಿಸಲು ಇತರ ಪೂರಕ ಕ್ರಮಗಳು;

(ಕೆ) ಬಹು ವಿಧ ಬೆಳೆಗಾಗಿ ಮೇಲ್ಮೈ ಮತ್ತು ಅಂತರ್ಜಲದ ಸಂಯೋಜಕ ಬಳಕೆ ಮತ್ತು ಲಭ್ಯವಿರುವ ಜಲ ಸಂಪನ್ಮೂಲದ ಸಮರ್ಥ ಬಳಕೆ;

(ಎಲ್) ಕøಷಿ, ತೋಟಗಾರಿಕೆ, ರೇಷ್ಮೆ ವ್ಯವಸಾಯ, ಕ್ಷೇತ್ರ ಅರಣ್ಯ ನಿರ್ಮಾಣ, ಪಶುಪಾಲನೆ, ಮೀನುಗಾರಿಕೆ, ಸಂಪರ್ಕ, ಕøಷಿ ಆಧಾರಿತ ಕೈಗಾರಿಕೆ ಮತ್ತು ಸಹಕಾರಿ - ಇವುಗಳಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಫಾರಂಗಳ ಸರ್ವತೋಮುಖ ಅಭಿವøದ್ಧಿ

(5) ``ಸಾಲ ಏಜೆನ್ಸಿ'' ಎಂದರೆ,-

(i) ಬ್ಯಾಂಕಿಂಗ್ ವಿನಿಯಮ ಅಧಿನಿಯಮ, 1949 ರಲ್ಲಿ ಪರಿಭಾಷಿಸಿದ ಒಂದು ಬ್ಯಾಂಕಿಂಗ್ ಕಂಪನಿ;

(ii) ಭಾರತೀಯ ಸ್ಟೇಟ್ ಬ್ಯಾಂಕ್ ಅಧಿನಿಯಮ, 1955ರ ಅಡಿಯಲ್ಲಿ ರಚಿತವಾದ ಭಾರತೀಯ ಸ್ಟೇಟ್ ಬ್ಯಾಂಕ್;

(iii) ಭಾರತೀಯ ಸ್ಟೇಟ್ ಬ್ಯಾಂಕ್ (ಪೂರಕ ಬ್ಯಾಂಕ್‍ಗಳು) ಅಧಿನಿಯಮ, 1959ರಲ್ಲಿ ಪರಿಭಾಷಿಸಲಾದ ಒಂದು ಪೂರಕ ಬ್ಯಾಂಕ್;

(iv) ಬ್ಯಾಂಕಿಂಗ್ ಕಂಪನಿಗಳ (ಉದ್ಯಮಗಳ ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1970ರ ಅಡಿಯಲ್ಲಿ ರಚಿತವಾದ ಒಂದು ಸಂವಾದಿ ಹೊಸ ಬ್ಯಾಂಕ್;

(v) ಕøಷಿ ಮರು ಹಣಕಾಸು ಹೂಡಿಕೆ ಮತ್ತು ಅಭಿವøದ್ಧಿ ನಿಗಮ ಅಧಿನಿಯಮ, 1963ರ ಅಡಿಯಲ್ಲಿ ರಚಿತವಾದ ಕøಷಿ ಮರು ಹಣಕಾಸು ಹೂಡಿಕೆ ಮತ್ತು ಅಭಿವøದ್ಧಿ ನಿಗಮ;

(vi) ಕರ್ನಾಟಕ ಕøಷಿ ಸಾಲ ನೀಡಿಕೆ ಮತ್ತು ಸಂಕೀರ್ಣ ಉಪಬಂಧಗಳ ಅಧಿನಿಯಮ, 1974ರ 2ನೇ ಪ್ರಕರಣದ

(ಸಿ) ಖಂಡದಲ್ಲಿ ಪರಿಭಾಷಿಸಲಾದಂತೆ ಕøಷಿ ಆಧಾರಿತ ಕೈಗಾರಿಕಾ ನಿಗಮ ;

(vii) ಕಂಪನಿಗಳ ಅಧಿನಿಯಮ, 1956ರ ಅಡಿಯಲ್ಲಿ ಒಂದು ನಿಗಮಿತ ಕಂಪನಿಯಾದ ಕøಷಿ ಹಣಕಾಸು ನಿಗಮ ನಿಯಮಿತ; ಮತ್ತು

(viii) ಈ ಅಧಿನಿಯಮದ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಸಾಲ ಏಜೆನ್ಸಿ ಎಂದು ಅಧಿಸೂಚಿಸಿದ ಯಾವುದೇ ಇತರ ಹಣಕಾಸು ಸಂಸ್ಥೆ;

(6) ``ವಿತರಣಾ ವ್ಯವಸ್ಥೆ'' ಯು, ಈ ಮುಂದಿನವುಗಳನ್ನು ಒಳಗೊಳ್ಳುತ್ತದೆ, -

(ಎ) ಎಲ್ಲ ಮುಖ್ಯ ಕಾಲುವೆಗಳು, ಶಾಖಾ ಕಾಲುವೆಗಳು, ವಿತರಣಾ ಕಾಲುವೆಗಳು, ಉಪ ವಿತರಣಾ ಕಾಲುವೆಗಳು ಮತ್ತು ನೀರಾವರಿಗಾಗಿ ನೀರು ಸರಬರಾಜು ಮಾಡುವುದಕ್ಕಾಗಿ ಮತ್ತು ವಿತರಣೆ ಮಾಡುವುದಕ್ಕಾಗಿ ನಿರ್ಮಿಸಲಾದ ಹೊರಗಂಡಿ ಹಾಗೂ ಕ್ಷೇತ್ರ ಕಾಲುವೆಗಳ ನಡುವಿನ ನಾಲೆಗಳು;

(ಬಿ) ನೀರಾವರಿಗಾಗಿ ನೀರು ವಿತರಣೆಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳು, ರಚನೆಗಳು ಮತ್ತು ಸಾಧನ ಸಾಮಗ್ರಿಗಳು;

(ಸಿ) ಕೊಳವೆ ಹೊರ ಗಂಡಿಯ ಅಡಿಯಲ್ಲಿನ ಎಲ್ಲ ಕ್ಷೇತ್ರ ಕಾಲುವೆಗಳು ಮತ್ತು ಫಾರಂ ಕಾಲುವೆಗಳು ಮತ್ತು ಸಂಬಂಧಪಟ್ಟ ರಚನೆಗಳು;

(7) `` ಬಸಿ ಕಾಲುವೆ '' ವ್ಯವಸ್ಥೆಯು, ಈ ಮುಂದಿನವುಗಳನ್ನು ಒಳಗೊಳ್ಳುತ್ತದೆ,-

(ಎ) ನಿರುಪಯುಕ್ತ ಅಥವಾ ಹೆಚ್ಚುವರಿ ನೀರನ್ನು ಹೊರಹಾಕಲು ನೈಸರ್ಗಿಕ ಅಥವಾ ಕøತಕವಾದ ಕಾಲುವೆಗಳು ಮತ್ತು ಅಂಥ ಕಾಲುವೆಗೆ ಸಂಬಂಧಿಸಿದ ಅಥವಾ ಅದಕ್ಕೆ ಸಹಾಯಕವಾದ ಎಲ್ಲ ಕಾಮಗಾರಿಗಳು;

(ಬಿ) ಹೆಚ್ಚುವರಿ ನೀರನ್ನು ಹೊರಹಾಕಲು ಇರುವ ಎಲ್ಲ ಕೂಡು ಬಸಿಕಾಲುವೆಗಳು ಮತ್ತು ಮುಖ್ಯ ಬಸಿ ಕಾಲುವೆಗಳು;

(ಸಿ) ಕೊಳವೆ ಹೊರಗಂಡಿಯ ಕೆಳಗಿನ ಎಲ್ಲ ಕ್ಷೇತ್ರ ಬಸಿಕಾಲುವೆಗಳು ಮತ್ತು ಸಂಬಂಧಪಟ್ಟ ರಚನೆಗಳು;

(8) ``ಕ್ಷೇತ್ರ ಕಾಲುವೆ'' ಎಂದರೆ ಕೊಳವೆ ಹೊರಗಂಡಿಯಿಂದ ನೀರು ಸರಬರಾಜು ಪಡೆಯಲು ಭೂ ಮಾಲೀಕ ಅಥವಾ ಅವನ ಪರವಾಗಿ ಯಾವುದೇ ಇತರ ಏಜೆನ್ಸಿಯು ನಿರ್ವಹಿಸಿರುವ, ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ಅಥವಾ 0.028 ಘನ ಅಡಿಯನ್ನು ಮೀರದ ಸಾಮಥ್ರ್ಯವನ್ನು ಹೊಂದಿರುವ ನಿಯಂತ್ರಿತ ಜಲಮಾರ್ಗ ಅಥವಾ ಹಿಕ್ಕಲು;

(9) ``ಕ್ಷೇತ್ರ ಬಸಿ ಕಾಲುವೆ'' ಎಂದರೆ ಭೂ ಹಿಡುವಳಿದಾರನು ಅಥವಾ ಅವನ ಪರವಾಗಿ ಯಾವುದೇ ಇತರ ಏಜೆನ್ಸಿಯು, ಕೊಳವೆ ಹೊರಗಂಡಿಯ ಕೆಳಗಿನ ಭೂ ಹಿಡುವಳಿಯಿಂದ ನಿರುಪಯುಕ್ತವಾದ ಅಥವಾ ಹೆಚ್ಚುವರಿಯಾದ ನೀರನ್ನು ಹೊರ ಹಾಕಲು, ಅಗೆದು ನಿರ್ವಹಿಸಿರುವ ಒಂದು ನಾಲೆ ;

(10) ``ಅನರ್ಹ ವ್ಯಕ್ತಿ'' ಎಂದರೆ ಸಾಮಾನ್ಯ ಭೂ ಅಭಿವøದ್ಧಿ ಸಾಲಗಳಿಗೆ ಅರ್ಹನಾಗಿರದ ಮತ್ತು ಈ ಮುಂದಿನ ಪ್ರವರ್ಗಗಳಲ್ಲಿ ಒಂದಕ್ಕೆ ಸೇರಿರುವ ವ್ಯಕ್ತಿ , ಎಂದರೆ:-

(i) ಅಂಥ ಭೂಮಿಗಳನ್ನು ಅಡಮಾನ ಮಾಡಲು ಯಾವುದೇ ಸಿಂಧುವಾದ ಹಕ್ಕಿಲ್ಲದೆ ಅಧಿಭೋಗಿಸುತ್ತಿರುವ ರೈತರು;

(ii) ಪೆÇೀಷಕರಿಲ್ಲದಿರುವ ಅಪ್ರಾಪ್ತ ವಯಸ್ಕರು;

(iii) ರೈತರಿಗೆ ಹಸ್ತಾಂತರಿಸದಿರುವ ಸರ್ಕಾರಿ ಜಮೀನುಗಳ ಅಧಿಭೋಗದಲ್ಲಿರುವ ರೈತರು ಅಥವಾ ಸರ್ಕಾರಿ ಜಮೀನನ್ನು ಹಸ್ತಾಂತರಿಸಿದ್ದು, ಆದರೆ ಹಸ್ತಾಂತರಣ ಪಡೆದವನು ಅದನ್ನು ಅಡಮಾನ ಮಾಡಿದ ಸಂದರ್ಭದಲ್ಲಿ ಸರ್ಕಾರವು ಹಿಂದಕ್ಕೆ ಪಡೆದಿರುವಂಥ ಸರ್ಕಾರಿ ಜಮೀನಿನ ಅಧಿಭೋಗದಲ್ಲಿರುವ ರೈತರು ;

(iv) ಹಿಂದೂ ಉತ್ತಾರಾಧಿಕಾರ ಅಧಿನಿಯಮ, 1956 - ಇದು ಜಾರಿಗೆ ಬರುವ ಮೊದಲು, ಸ್ತ್ರೀಯರು ಪರಭಾರೆ ಮಾಡಿದ ಜಮೀನುಗಳನ್ನು ಅಧಿಭೋಗಿಸುತ್ತಿರುವ ರೈತರು;

(v) ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಅಡಿಯಲ್ಲಿ ನಿಗದಿಪಡಿಸಿರುವ ಪರಿಮಿತಿಗಿಂತ ಹೆಚ್ಚು ಜಮೀನು ಹೊಂದಿರುವ ಭೂ ಹಿಡುವಳಿದಾರರು;

(vi) ಹೆಚ್ಚಿನ ಬಂಡವಾಳ ಹೂಡಿಕೆಗಾಗಿ ಯಾವುದೇ ಸಾಲವನ್ನು ಪಡೆಯುವ ಮೊದಲು ಅವಧಿ ಮೀರಿದ ಸಾಲಗಳನ್ನು ತೀರಿಸಬೇಕಾಗಿರುವುದರಿಂದ ಯಾವುದೇ ಸಾಲ ಏಜೆನ್ಸಿಯಿಂದ ಸಾಲವನ್ನು ಪಡೆಯಲು ಅಸಮರ್ಥರಾದ ಭೂ ಹಿಡುವಳಿದಾರರು; ಮತ್ತು

(vii) ಭೂ ಅಭಿವøದ್ಧಿ ಸಾಲಗಳಿಗಾಗಿ ಅರ್ಜಿ ಸಲ್ಲಿಸಲು ಇಚ್ಫಿಸದಿರುವ ರೈತರು.

(11) ``ಕೊಳವೆ ಹೊರಗಂಡಿಯ ಕೆಳಗಿನ ನೀರಾವರಿ ವ್ಯವಸ್ಥೆ'' ಯು ಕ್ಷೇತ್ರ ಕಾಲುವೆಗಳು, ಕ್ಷೇತ್ರ ಬಸಿಕಾಲುವೆಗಳು ಮತ್ತು ಸಂಬಂಧಿಸಿದ ಎಲ್ಲ ರಚನೆಗಳನ್ನೊಳಗೊಂಡ ಆಯಕಟ್ಟು ರಸ್ತೆಗಳನ್ನು ಒಳಗೊಳ್ಳುತ್ತದೆ.

(12) ``ಭೂ ಹಿಡುವಳಿದಾರ'' ಎಂದರೆ ಮಾಲೀಕನಾಗಿಯಾಗಲಿ ಅಥವಾ ಗೇಣಿದಾರನಾಗಿಯಾಗಲಿ ಅಥವಾ ಉಪಗೇಣಿದಾರನಾಗಿಯಾಗಲಿ ಅಥವಾ ಸ್ವಾಧೀನತೆಯಲ್ಲಿರುವ ಅಡಮಾನದಾರನಾಗಿಯಾಗಲಿ ಅಥವಾ ಲೈಸೆನ್ಸುದಾರನಾಗಿ ಅಥವಾ ಅನ್ಯಥಾ ಭೂಮಿಯ ವಾಸ್ತವಿಕ ಸ್ವಾಧೀನತೆಯಲ್ಲಿರುವ ಒಬ್ಬ ವ್ಯಕ್ತಿ ಮತ್ತು ಇದು ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಅಭಿವøದ್ಧಿ ಕಾಮಗಾರಿಯಿಂದ ಸೌಲಭ್ಯವನ್ನು ಪಡೆಯುವ ಸಾಧ್ಯತೆಯುಳ್ಳ ಒಬ್ಬ ವ್ಯಕ್ತಿಯನ್ನು ಒಳಗೊಳ್ಳುತ್ತದೆ ಮತ್ತು ``ಭೂ ಹಿಡುವಳಿ'' ಎಂಬ ಪದಾವಳಿಯನ್ನು ಭೂ ಹಿಡುವಳಿದಾರನು ಹೊಂದಿರುವ ಭೂಮಿ ಎಂದು ಅರ್ಥೈಸತಕ್ಕದ್ದು;

(13) ``ಸದಸ್ಯ'' ಎಂದರೆ ಪ್ರಾಧಿಕಾರದ ಒಬ್ಬ ಸದಸ್ಯ ;

(14) `` ಕೊಳವೆ ಹೊರಗಂಡಿ'' ಎಂದರೆ ಯಾವ ನೀರಾವರಿ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ನಲವತ್ತು ಹೆಕ್ಟೇರನ್ನು ಮೀರದ ವಿಸ್ತೀರ್ಣವುಳ್ಳ ಭೂ ಭಾಗದ ಪರಿಧಿಯೊಳಗೆ ನೀರನ್ನು ಒದಗಿಸಲಾಗುವುದೋ ಆ ನೀರಾವರಿ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರವು ನಿರ್ಮಿಸಿದ ಒಂದು ಗಂಡಿ ಅಥವಾ ಸಾಧನ;

(15) ``ಅನುಸೂಚಿತ ಜಾತಿಗಳು'' ಮತ್ತು ``ಅನುಸೂಚಿತ ಬುಡಕಟ್ಟುಗಳು'' ಎಂಬ ಪದಗಳು ಸಂವಿಧಾನದಲ್ಲಿ ಅವುಗಳಿಗೆ ಕೊಟ್ಟಿರುವಂಥ ಅರ್ಥಗಳನ್ನೇ ಹೊಂದಿರತಕ್ಕದ್ದು;

(16) ``ಸಣ್ಣ ರೈತ'' ಎಂದರೆ ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ರ (1962ರ ಕರ್ನಾಟಕ ಅಧಿನಿಯಮ 10) ಅನುಸೂಚಿಯ `ಎ' ಭಾಗದಲ್ಲಿ ನಿರ್ದಿಷ್ಟಪಡಿಸಿದ `ಎ' ವರ್ಗದ ಎರಡೂವರೆ ಎಕರೆಗಳಿಗಿಂತ ಹೆಚ್ಚಿಲ್ಲದ ಅಥವಾ ಯಾವುದೇ ಇತರ ವರ್ಗದ ಐದು ಎಕರೆಗಿಂತ ಹೆಚ್ಚಿಲ್ಲದ ಜಮೀನನ್ನು ಮಾಲೀಕನಾಗಿಯಾಗಲಿ, ಗೇಣಿದಾರನಾಗಿಯಾಗಲಿ ಅಥವಾ ಅಡಮಾನ ಪಡೆದವನಾಗಿಯಾಗಲಿ ತನ್ನ ಸ್ವಾಧೀನದಲ್ಲಿ ಅಥವಾ ಒಂದು ಸಾಮಥ್ರ್ಯದಲ್ಲಿ ಭಾಗಶಃ ಅಥವಾ ಇನ್ನೊಂದು ಸಾಮಥ್ರ್ಯದಲ್ಲಿ ಭಾಗಶಃ ಹೊಂದಿರುವ ಒಬ್ಬ ವ್ಯಕ್ತಿ .

ಪ್ರಾಧಿಕಾರದ ರಚನೆ.-

(1) ಈ ಅಧಿನಿಯಮವು ಪ್ರಾರಂಭವಾದ ನಂತರ, ಸಾಧ್ಯವಾದಷ್ಟು ಬೇಗನೆ, ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, ಪ್ರತಿಯೊಂದು ನೀರು ಪೂರೈಕೆ ಪ್ರದೇಶಾಭಿವೃದ್ಧಿಗಾಗಿ ಪ್ರಾಧಿಕಾರವನ್ನು ರಚಿಸಬಹುದು.

(2) ಪ್ರಾಧಿಕಾರವು, ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು ಚರ ಮತ್ತು ಸ್ಥಿರ ಸ್ವತ್ತುಗಳೆರಡನ್ನೂ ಆರ್ಜಿಸುವ, ಧಾರಣ ಮಾಡುವ ಮತ್ತು ವಿಲೇ ಮಾಡುವ ಹಾಗೂ ಕರಾರು ಮಾಡಿಕೊಳ್ಳುವ ಅಧಿಕಾರದೊಂದಿಗೆ ಶಾಶ್ವತ ಉತ್ತರಾಧಿಕಾರವನ್ನು ಮತ್ತು ಸಾಮಾನ್ಯ ಮೊಹರನ್ನು ಹೊಂದಿರುವ ``--------- ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರ'' ಎಂಬ ಹೆಸರಿನ ಒಂದು ನಿಗಮಿತ ನಿಕಾಯವಾಗಿರತಕ್ಕದ್ದು ಮತ್ತು ಅದು ಸದರಿ ಹೆಸರಿನಲ್ಲಿ ದಾವೆ ಹೂಡತಕ್ಕದ್ದು ಮತ್ತು ದಾವೆಗೆ ಗುರಿಯಾಗತಕ್ಕದ್ದು.

ಪ್ರಾಧಿಕಾರದ ರಚನೆ.-

(1) ಪ್ರಾಧಿಕಾರವು, ಈ ಮುಂದಿನ ಸದಸ್ಯರುಗಳನ್ನು ಒಳಗೊಂಡಿರತಕ್ಕದ್ದು, ಎಂದರೆ,-

(ಎ) ರಾಜ್ಯ ಸರ್ಕಾರದಿಂದ ನಾಮ ನಿರ್ದೇಶಿತರಾದ ಹತ್ತು ಮಂದಿ ವ್ಯಕ್ತಿಗಳು, ಅವರಲ್ಲಿ ಒಬ್ಬನು ಸಣ್ಣ ರೈತನಾಗಿರತಕ್ಕದ್ದು, ಒಬ್ಬ ವ್ಯಕ್ತಿಯು ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಬುಡಕಟ್ಟುಗಳಿಗೆ ಸೇರಿದವನಾಗಿರತಕ್ಕದ್ದು, ಒಬ್ಬನು ಕøಷಿ ಕಾರ್ಮಿಕನಾಗಿರತಕ್ಕದ್ದು ಮತ್ತು ಒಬ್ಬನು ಗ್ರಾಮೀಣ ಕುಶಲ ಕರ್ಮಿಯಾಗಿರತಕ್ಕದ್ದು;

(ಬಿ) ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಪ್ರತಿನಿಧಿಸಲು ರಾಜ್ಯ ಸರ್ಕಾರದಿಂದ ನಾಮ ನಿರ್ದೇಶಿತನಾದ ಒಬ್ಬ ವ್ಯಕ್ತಿ;

[(ಸಿ) ಸರ್ಕಾರದ ಉಪ ಕಾರ್ಯದರ್ಶಿ (ನೀರು ಪೂರೈಕೆ ಪ್ರದೇಶಾಭಿವøದ್ಧಿ ಪ್ರಾಧಿಕಾರ) ನೀರಾವರಿ ಇಲಾಖೆ;]

1. 1986ರ ಅಧಿನಿಯಮ 44ರ ಮೂಲಕ 29.10.1986 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 1995ರ ಅಧಿನಿಯಮ 32ರ ಮೂಲಕ 22.11.1995

ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ. [(ಸಿಸಿ) ಸಂಬಂಧಪಟ್ಟ ಜಿಲ್ಲಾ ಪರಿಷತ್ತುಗಳ ಮುಖ್ಯ ಕಾರ್ಯದರ್ಶಿಗಳು;]

1.1987ರ ಅಧಿನಿಯಮ 33ರ ಮೂಲಕ 13.11.1987 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(ಡಿ) ಕøಷಿ ನಿರ್ದೇಶಕ [ಅಥವಾ ಕøಷಿ ಇಲಾಖೆಯ ಜಂಟಿ ನಿರ್ದೇಶಕನ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಆತನ ನಾಮನಿರ್ದೇಶಿತ;]

1. 1986ರ ಅಧಿನಿಯಮ 44ರ ಮೂಲಕ 29.10.1986 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ ಮತ್ತು 1995ರ ಅಧಿನಿಯಮ 32ರ ಮೂಲಕ 22.11.1995 ರಿಂದ ಜಾರಿಗೆ ಬರುವಂತೆ ಪುನಃ ಪ್ರತಿಯೋಜಿಸಲಾಗಿದೆ.

(ಇ) [ಇಂಜಿನಿಯರ್-ಇನ್-ಚೀಫ್ ಮತ್ತು] ಸಂಬಂಧಪಟ್ಟ ನೀರಾವರಿ ಯೋಜನೆ ಅಥವಾ ಯೋಜನೆಗಳ ಮುಖ್ಯ ಇಂಜಿನಿಯರುಗಳು;

1.1995ರ ಅಧಿನಿಯಮ 32ರ ಮೂಲಕ 22.11.1995 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. (ಎಫ್) ಸಹಕಾರ ಸಂಘಗಳ ರಿಜಿಸ್ಟ್ರಾರ್ [ಅಥವಾ ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರನ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಆತನ ನಾಮ ನಿರ್ದೇಶಿತ;]

1.1995ರ ಅಧಿನಿಯಮ 32ರ ಮೂಲಕ 22.11.1995 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.

(ಜಿ) ಪಟ್ಟಣ ಯೋಜನೆಯ ನಿರ್ದೇಶಕ;

(ಎಚ್) ಆಯುಕ್ತ ಮತ್ತು ಸರ್ಕಾರದ ಕಾರ್ಯದರ್ಶಿ, ಹಣಕಾಸು ಇಲಾಖೆ;

(ಐ) ಕøಷಿ ವಿಜ್ಞಾನ ವಿಶ್ವ ವಿದ್ಯಾನಿಲಯದ ಕುಲಪತಿ;

(ಜೆ) ಸಂಬಂಧಪಟ್ಟ ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು;

(ಕೆ) 11ನೇ ಪ್ರಕರಣದ ಅಡಿಯಲ್ಲಿ ನೇಮಕ ಮಾಡಲಾದ ಆಡಳಿತಗಾರ.

(2) ರಾಜ್ಯ ಸರ್ಕಾರವು,-

(i) ಸದಸ್ಯರಲ್ಲಿ ಒಬ್ಬನನ್ನು ಅಧ್ಯಕ್ಷನನ್ನಾಗಿ; ಮತ್ತು

(ii) ಸದಸ್ಯರಲ್ಲಿ ಒಬ್ಬನನ್ನು ಅಥವಾ ಪ್ರಾಧಿಕಾರದ ಯಾರೇ ಅಧಿಕಾರಿಯನ್ನು ಪ್ರಾಧಿಕಾರದ ಕಾರ್ಯದರ್ಶಿಯನ್ನಾಗಿ - ನೇಮಕಮಾಡತಕ್ಕದ್ದು.

ಪ್ರಾಧಿಕಾರದ ಸದಸ್ಯತ್ವಕ್ಕೆ ಅನರ್ಹತೆ.-

(1) ಒಬ್ಬ ವ್ಯಕ್ತಿಯು,-

(ಎ) ರಾಜ್ಯ ಸರ್ಕಾರದ ಅಭಿಪ್ರಾಯದಲ್ಲಿ, ಅವನು ನೈತಿಕ ಅಧಃಪತನವನ್ನು ಒಳಗೊಂಡ ಒಂದು ಅಪರಾಧದ ಅಪರಾಧಿಯೆಂದು ನಿರ್ಣೀತನಾಗಿದ್ದರೆ ಮತ್ತು ಕಾರಾಗøಹ ವಾಸದ ಶಿಕ್ಷೆಗೆ ಗುರಿಯಾಗಿದ್ದರೆ ; ಅಥವಾ

(ಬಿ) ಅವನು ಅಸ್ವಸ್ತಚಿತ್ತನಾಗಿದ್ದು ಒಂದು ಸಕ್ಷಮ ನ್ಯಾಯಾಲಯವು ಹಾಗೆಂದು ಘೋಷಿಸಿದ್ದರೆ; ಅಥವಾ (ಸಿ) ಅವನು ಒಂದು ಅವಿಮುಕ್ತ ದಿವಾಳಿಯಾಗಿದ್ದರೆ; ಅಥವಾ

(ಡಿ) ಅವನನ್ನು ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಒಡೆತನದಲ್ಲಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಒಂದು ನಿಗಮದ ಸೇವೆಯಿಂದ ಅಥವಾ ಪ್ರಾಧಿಕಾರದ ಸದಸ್ಯತ್ವದಿಂದ ತೆಗೆದುಹಾಕಲಾಗಿದ್ದರೆ ಅಥವಾ ವಜಾ ಮಾಡಲಾಗಿದ್ದರೆ; ಅಥವಾ

(ಇ) ಪ್ರಾಧಿಕಾರದ ಆದೇಶದಿಂದ ಮಾಡಲಾದ ಯಾವುದೇ ಕಾಮಗಾರಿಯಲ್ಲಿ ಅಥವಾ ಪ್ರಾಧಿಕಾರದೊಂದಿಗೆ ಅಥವಾ ಅದರ ಅಡಿಯಲ್ಲಿ ಅಥವಾ ಅದರಿಂದ ಅಥವಾ ಅದರ ಪರವಾಗಿ ಯಾವುದೇ ಕರಾರಿನಲ್ಲಿ ಅಥವಾ ನಿಯೋಜನೆಯಲ್ಲಿ ಅವನು, ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ, ಅವನಾಗಲಿ ಅಥವಾ ಅವನ ಪಾಲುದಾರನ ಮೂಲಕವಾಗಲಿ ಯಾವುದೇ ಷೇರನ್ನು ಅಥವಾ ಹಿತಾಸಕ್ತಿಯನ್ನು ಹೊಂದಿದ್ದರೆ; ಅಥವಾ

(ಎಫ್) ಅವನು ಪ್ರಾಧಿಕಾರದ ಪರವಾಗಿ ಒಬ್ಬ ನ್ಯಾಯವಾದಿಯಾಗಿ ನಿಯೋಜಿತನಾಗಿದ್ದರೆ ಅಥವಾ ಪ್ರಾಧಿಕಾರದ ವಿರುದ್ಧ ನ್ಯಾಯವಾದಿಯಾಗಿ ಉದ್ಯೋಗವನ್ನು ಅಂಗೀಕರಿಸಿದ್ದರೆ - ಸದಸ್ಯನಾಗಿ ನಾಮ ನಿರ್ದೇಶಿತನಾಗಲು ಮತ್ತು ಸದಸ್ಯನಾಗಲು ಅನರ್ಹನಾಗಿರತಕ್ಕದ್ದು.

(2) ಒಬ್ಬ ವ್ಯಕ್ತಿಯು, ಪ್ರಾಧಿಕಾರದ ವ್ಯವಹಾರಗಳಿಗೆ ಸಂಬಂಧಿಸಿದ ಯಾವುದೇ ಜಾಹಿರಾತನ್ನು ಸೇರಿಸಲಾಗಿರುವ ಯಾವುದೇ ವಾರ್ತಾ ಪತ್ರಿಕೆಯಲ್ಲಿ ಷೇರನ್ನು ಅಥವಾ ಹಿತಾಸಕ್ತಿಯನ್ನು ಹೊಂದಿದ್ದಾನೆ ಎಂಬ ಕಾರಣ ಮಾತ್ರದಿಂದಲೇ, ಸದರಿ ಖಂಡದ ಅರ್ಥವ್ಯಾಪ್ತಿಯೊಳಗೆ ಅವನನ್ನು, (1)ನೇ ಉಪಪ್ರಕರಣದ (ಇ) ಖಂಡದ ಅಡಿಯಲ್ಲಿ ಅನರ್ಹಗೊಳಿಸತಕ್ಕದ್ದಲ್ಲ ಅಥವಾ ಯಾವುದೇ ಕರಾರಿನಲ್ಲಿ ಅಥವಾ ನಿಯೋಜನೆಯಲ್ಲಿ ಅವನು ಯಾವುದೇ ಪಾಲನ್ನು ಅಥವಾ ಹಿತಾಸಕ್ತಿಯನ್ನು ಹೊಂದಿದ್ದಾನೆಂಬುದಾಗಿ ಭಾವಿಸತಕ್ಕದ್ದಲ್ಲ.

ಪದಾವಧಿ ಮತ್ತು ಸೇವಾ ಷರತ್ತುಗಳು.-

(1) 7ನೇ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಅಧ್ಯಕ್ಷ ಮತ್ತು ಇತರ ಪ್ರತಿಯೊಬ್ಬ ನಾಮ ನಿರ್ದೇಶಿತ ಸದಸ್ಯನು, ರಾಜ್ಯ ಸರ್ಕಾರದ ಇಷ್ಟಪರ್ಯಂತ ಪದವನ್ನು ಹೊಂದಿರತಕ್ಕದ್ದು ಮತ್ತು ಅವರ ಸೇವಾ ಷರತ್ತುಗಳು ನಿಯಮಿಸಬಹುದಾದಂತೆ ಇರತಕ್ಕದ್ದು.

(2) (1)ನೇ ಉಪ ಪ್ರಕರಣದ ಉಪಬಂಧಗಳಿಗೊಳಪಟ್ಟು, ಅಧ್ಯಕ್ಷನು ಹಾಗೂ ಇತರ ಪ್ರತಿಯೊಬ್ಬ ನಾಮನಿರ್ದೇಶಿತ ಸದಸ್ಯನು, ನಾಮ ನಿರ್ದೇಶನದ ದಿನಾಂಕದಿಂದ ಮೂರು ವರ್ಷಗಳವರೆಗೆ ಪದವನ್ನು ಹೊಂದಿರತಕ್ಕದ್ದು. ಆದರೆ ಪುನರ್ ನಾಮನಿರ್ದೇಶನಕ್ಕೆ ಅವರು ಅರ್ಹರಾಗಿರತಕ್ಕದ್ದು.

(3) ಅಧ್ಯಕ್ಷನು ಅಥವಾ ಯಾರೇ ಇತರ ನಾಮ ನಿರ್ದೇಶಿತ ಸದಸ್ಯನು, ರಾಜ್ಯ ಸರ್ಕಾರವನ್ನು ಸಂಬೋಧಿಸಿ ರಾಜೀನಾಮೆ ಪತ್ರ ನೀಡುವ ಮೂಲಕ ಯಾವುದೇ ಸಮಯದಲ್ಲಿ ತನ್ನ ಪದಕ್ಕೆ ರಾಜೀನಾಮೆ ನೀಡಬಹುದು : ಪರಂತು, ರಾಜೀನಾಮೆಯನ್ನು ಅಂಗೀಕರಿಸುವವರೆಗೆ ಅದು ಜಾರಿಗೆ ಬರತಕ್ಕದ್ದಲ್ಲ.

ಸದಸ್ಯನನ್ನು ತೆಗೆದು ಹಾಕುವುದು.-

(1) ಅಧ್ಯಕ್ಷನು ಅಥವಾ ಒಬ್ಬ ನಾಮನಿರ್ದೇಶಿತ ಸದಸ್ಯನು,-

(ಎ) 5ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಅನರ್ಹತೆಗೊಳಗಾದರೆ; ಅಥವಾ

(ಬಿ) ಕಾರ್ಯನಿರ್ವಹಿಸಲು ನಿರಾಕರಿಸಿದರೆ ಅಥವಾ ಕಾರ್ಯ ನಿರ್ವಹಿಸಲು ಅಸಮರ್ಥನಾದರೆ; ಅಥವಾ

(ಸಿ) ಗೈರು ಹಾಜರಾಗಲು ಪ್ರಾಧಿಕಾರದಿಂದ ಅನುಮತಿ ಪಡೆಯದೆ ಪ್ರಾಧಿಕಾರದ ಮೂರು ನಿರಂತರ ಸಭೆಗಳಿಗೆ ಗೈರು ಹಾಜರಾದರೆ; ಅಥವಾ

(ಡಿ) ರಾಜ್ಯ ಸರ್ಕಾರದ ಅಭಿಪ್ರಾಯದಲ್ಲಿ ಆ ಸ್ಥಾನದಲ್ಲಿ ಅವನನ್ನು ಮುಂದುವರಿಸುವುದು ಪ್ರಾಧಿಕಾರದ ಹಿತಾಸಕ್ತಿಗೆ ಹಾನಿಕಾರಕವೆನಿಸುವಷ್ಟು ಮಟ್ಟಿಗೆ ತನ್ನ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದ್ದರೆ - ರಾಜ್ಯ ಸರ್ಕಾರವು ಅವನನ್ನು ತೆಗೆದುಹಾಕತಕ್ಕದ್ದು.

(2) (1)ನೇ ಉಪಪ್ರಕರಣದ ಅಡಿಯಲ್ಲಿ ಆ ಅಧ್ಯಕ್ಷನನ್ನು ಅಥವಾ ನಾಮನಿರ್ದೇಶಿತ ಸದಸ್ಯನನ್ನು ತೆಗೆದುಹಾಕುವ ಯಾವುದೇ ಆದೇಶವನ್ನು, ಅಂಥ ಸದಸ್ಯನಿಗೆ ತನ್ನ ನಿವೇದನೆಯನ್ನು ಮಾಡಿಕೊಳ್ಳಲು ಒಂದು ಅವಕಾಶ ನೀಡಿದ ಹೊರತು ಮಾಡತಕ್ಕದ್ದಲ್ಲ.

ಆಕಸ್ಮಿಕ ಖಾಲಿ ಸ್ಥಾನಗಳು.-

(1) ಒಬ್ಬ ಸದಸ್ಯನ ರಾಜೀನಾಮೆಯಿಂದ ಅಥವಾ ಇತರ ಯಾವುದೇ ಕಾರಣದಿಂದ ಉಂಟಾದ ಯಾವುದೇ ಆಕಸ್ಮಿಕ ಖಾಲಿ ಸ್ಥಾನವನ್ನು ರಾಜ್ಯ ಸರ್ಕಾರವು ನಾಮ ನಿರ್ದೇಶನದ ಮೂಲಕ ಭರ್ತಿ ಮಾಡಬಹುದು ಮತ್ತು ಹಾಗೆ ನಾಮ ನಿರ್ದೇಶಿತನಾದ ವ್ಯಕ್ತಿಯು, ಅವನು ಯಾರ ಸ್ಥಾನಕ್ಕೆ ನಾಮನಿರ್ದೇಶಿತನಾಗಿರುವನೋ ಆ ವ್ಯಕ್ತಿಯು ಎಲ್ಲಿಯವರೆಗೆ ಪದಧಾರಣ ಮಾಡಬಹುದಾಗಿತ್ತೋ ಆ ಅವಧಿಯವರೆಗೆ ಪದವನ್ನು ಹೊಂದಿರತಕ್ಕದ್ದು.

(2) ಪ್ರಾಧಿಕಾರದಲ್ಲಿ ಯಾವುದೇ ಖಾಲಿಸ್ಥಾನವಿದೆ ಆಥವಾ ಅದರ ರಚನೆಯಲ್ಲಿ ಯಾವುದೇ ದೋಷವಿದೆ ಅಥವಾ ಪ್ರಾಧಿಕಾರದ ಕಾರ್ಯವಿಧಾನದಲ್ಲಿ ಪ್ರಕರಣದ ಗುಣಾವಗುಣಗಳಿಗೆ ಬಾಧಕವಾಗದಿರುವ ಯಾವುದೇ ಕ್ರಮದೋಷವಿದೆ ಎಂಬ ಕಾರಣ ಮಾತ್ರದಿಂದಲೇ ಪ್ರಾಧಿಕಾರದ ಯಾವುದೇ ಕಾರ್ಯವನ್ನು ಅಥವಾ ವ್ಯವಹರಣೆಯನ್ನು ಅಸಿಂಧುಗೊಳಿಸತಕ್ಕದ್ದಲ್ಲ.

ಪ್ರಾಧಿಕಾರದ ಸಭೆಗಳು.-

(1) ಪ್ರಾಧಿಕಾರವು, ಸಾಮಾನ್ಯವಾಗಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಪ್ರಾಧಿಕಾರದ ಕಚೇರಿಯಲ್ಲಿ, ಅಥವಾ ಅಧ್ಯಕ್ಷನು ನಿರ್ಧರಿಸಬಹುದಾದಂಥ ನೀರು ಪೂರೈಕೆ ಪ್ರದೇಶದೊಳಗಿನ ಇತರ ಸ್ಥಳದಲ್ಲಿ ಸಭೆ ಸೇರತಕ್ಕದ್ದು ಮತ್ತು (2), (3) ಮತ್ತು (4)ನೇ ಉಪಪ್ರಕರಣಗಳ ಉಪಬಂಧಗಳಿಗೊಳಪಟ್ಟು, ಅದರ ಸಭೆಯಲ್ಲಿ ವ್ಯವಹಾರ ನಡೆಸುವ ಸಂಬಂಧದಲ್ಲಿ ವಿನಿಯಮಗಳ ಮೂಲಕ ಉಪಬಂಧಿಸಬಹುದಾದಂಥ ಕಾರ್ಯವಿಧಾನ ನಿಯಮಗಳನ್ನು ಪಾಲಿಸತಕ್ಕದ್ದು.

(2) ಅಧ್ಯಕ್ಷನು ಅಥವಾ ಆತನ ಗೈರುಹಾಜರಿಯಲ್ಲಿ, ಹಾಜರಿರುವ ಸದಸ್ಯರು ತಮ್ಮೊಳಗಿಂದ ಆಯ್ಕೆ ಮಾಡುವ ಯಾರೇ ಸದಸ್ಯನು ಪ್ರಾಧಿಕಾರದ ಸಭೆಯ ಉಪ-ಅಧ್ಯಕ್ಷತೆ ವಹಿಸತಕ್ಕದ್ದು.

(3) ಕøಷಿ ವಿಶ್ವ ವಿದ್ಯಾನಿಲಯದ ಉಪಕುಲಪತಿಯಾಗಿರುವ ಅಥವಾ ರಾಜ್ಯ ಸರ್ಕಾರದ ಒಬ್ಬ ಅಧಿಕಾರಿಯಾಗಿರುವ ಯಾರೇ ಸದಸ್ಯನು, ಪ್ರಾಧಿಕಾರದ ಯಾವುದೇ ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಅಧ್ಯಕ್ಷರಿಗೆ ತಿಳಿಸಿ, ತನ್ನ ನಿಕಟ ಅಧೀನ ಅಧಿಕಾರಿಯನ್ನು ಹಾಗೆ ಹಾಜರಾಗಲು ಲಿಖಿತದಲ್ಲಿ ಪ್ರಾಧಿಕøತಗೊಳಿಸಬಹುದು.

(4) ಪ್ರಾಧಿಕಾರದ ಸಭೆಯಲ್ಲಿ ಎಲ್ಲ ಪ್ರಶ್ನೆಗಳನ್ನು ಹಾಜರಿದ್ದು ಮತ ನೀಡುವ ಸದಸ್ಯರ ಬಹುಮತದಿಂದ ತೀರ್ಮಾನಿಸತಕ್ಕದ್ದು ಮತ್ತು ಸಮಾನ ಮತಗಳು ಬಂದ ಸಂದರ್ಭದಲ್ಲಿ ಅಧ್ಯಕ್ಷನ ಅಥವಾ ಅವನ ಗೈರುಹಾಜರಿಯಲ್ಲಿ ಅಧ್ಯಕ್ಷತೆ ವಹಿಸಿದ ಸದಸ್ಯನು ಎರಡನೇ ಅಥವಾ ನಿರ್ಣಾಯಕ ಮತವನ್ನು ಹೊಂದಿರತಕ್ಕದ್ದು.

(5) ಪ್ರಾಧಿಕಾರದ ಸಭೆಗೆ ಕೋರಂ ಐದು ಆಗಿರತಕ್ಕದ್ದು.

(6) ಪ್ರಾಧಿಕಾರವು, ಅಧಿನಿಯಮದ ಅಡಿಯಲ್ಲಿ ತನ್ನ ಯಾವುವೇ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ಯಾರ ನೆರವು ಅಥವಾ ಸಲಹೆಯನ್ನು ಪಡೆಯಲು ಇಚ್ಫಿಸುವುದೋ ಆ ಯಾರೇ ವ್ಯಕ್ತಿಯೊಂದಿಗೆ ವಿನಿಯಮಗಳ ಮೂಲ ಉಪಬಂಧಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಉದ್ದೇಶಗಳಿಗಾಗಿ ಸಹವರ್ತಿಸಬಹುದು ಹಾಗೆ ಸಹವರ್ತಿಸುವ ವ್ಯಕ್ತಿಯು ಆ ಉದ್ದೇಶಕ್ಕೆ ಸಂಬಂಧಪಟ್ಟಂತೆ ಪ್ರಾಧಿಕಾರದ ಸಭೆಗಳಲ್ಲಿ ಭಾಗವಹಿಸುವ ಹಕ್ಕು ಹೊಂದಿರತಕ್ಕದ್ದು ಆದರೆ, ಮತ ನೀಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ.

ಪ್ರಾಧಿಕಾರದ ಪ್ರಕಾರ್ಯಗಳು.-

ಈ ಮುಂದಿನವುಗಳು ಪ್ರಾಧಿಕಾರದ ಪ್ರಕಾರ್ಯಗಳಾಗಿರತಕ್ಕದ್ದು, ಎಂದರೆ: -

(1) ನೀರು ಪೂರೈಕೆ ಪ್ರದೇಶದ ವ್ಯಾಪಕ ಅಭಿವøದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು;

(2) ಭೂ ಸವೆತ ಮತ್ತು ನೀರು ನಿಲ್ಲುವುದನ್ನು ತಡೆಗಟ್ಟುವುದು;

(3) ಮಣ್ಣಿನ ಫಲವತ್ತತೆಯನ್ನು ಸುಧಾರಿಸುವುದು ಮತ್ತು ಬೆಳೆ ಪದ್ಧತಿಯನ್ನು ವಿನಿಯಮಿಸುವುದು;

(4) ನೀರು ಪೂರೈಕೆ ಪ್ರದೇಶದೊಳಗಿರುವ ರೈತರು ಕ್ಷೇತ್ರ ಕಾಲುವೆಗಳು ಮತ್ತು ಕ್ಷೇತ್ರ ಬಸಿ ಕಾಲುವೆಗಳನ್ನು ಸಮರ್ಥವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು;

(5) ವಿವಿಧ ಬೆಳೆಗಳಿಗಾಗಿ ಜಮೀನುಗಳ ಸ್ಥಳೀಕರಣ ಮತ್ತು ವಿಕೇಂದ್ರೀಕರಣಗೊಳಿಸುವುದು;

(6) ಎಲ್ಲ ಹೂಡುವಳಿಗಳು ಮತ್ತು ಸೇವೆಗಳ ಸರಬರಾಜನ್ನು ಸುನಿಶ್ಚಿತಗೊಳಿಸುವುದು;

(7) ನೀರು ಪೂರೈಕೆ ಪ್ರದೇಶದ ಸಮಗ್ರ ಅಭಿವøದ್ಧಿಗಾಗಿ ಗ್ರಾಮೀಣ ಅಭಿವøದ್ಧಿ ಕೇಂದ್ರಗಳ ಸಂವರ್ಧನೆ ಮತ್ತು ಸ್ಥಾಪನೆ;

(8) ಮಾರುಕಟ್ಟೆ, ಸಂಸ್ಕರಣೆ ಮತ್ತು ದಾಸ್ತಾನು ಸೌಲಭ್ಯಗಳನ್ನು ಮತ್ತು ಸಂಪೂರ್ಣ ಸಂಪರ್ಕ ವ್ಯವಸ್ಥೆಗಳನ್ನು ಅಭಿವøದ್ಧಿಪಡಿಸುವುದು ;

(9) ರೈತರಿಗೆ ಮತ್ತು ಕುಶಲಕರ್ಮಿಗಳಿಗೆ ಸಾಲದ ಸೌಲಭ್ಯಗಳ ವ್ಯವಸ್ಥೆ ಮಾಡುವುದು;

(10) ಕøಷಿ ಸಹಕಾರಿ ಸಂಸ್ಧೆಗಳು ಮತ್ತು ಸಂಘಗಳನ್ನು ಸಂಘಟಿಸುವುದು;

(11) ಕ್ಷೇತ್ರ ಕಾಲುವೆಗಳು ಮತ್ತು ಸಂಬಂಧಿತ ಬಸಿಕಾಲುವೆಗಳನ್ನು ನಿರ್ಮಿಸುವುದು;

(12) ಪ್ರಾಧಿಕಾರದ ಪ್ರಕಾರ್ಯಗಳ ನಿರ್ವಹಣೆಗಾಗಿ ಅವಶ್ಯವಿರುವ ಹಣವನ್ನು ಸಾಲ ತೆಗೆದುಕೊಳ್ಳುವುದು ಮತ್ತು ಸಾಲ ಕೊಡುವುದು;

(13) ಮೇಲ್ಮೈ ಜಲದ ಮತ್ತು ಅಂತರ್ಜಲದ ಸಂಯೋಜಕ ಬಳಕೆ;

(14) 12ನೇ ಪ್ರಕರಣದ (4)ನೇ ಉಪಪ್ರಕರಣದಲ್ಲಿ ಉಪಬಂಧಿಸಲಾದಂತೆ ಪರಿಹಾರ ಹಣದ ಸಂದಾಯವನ್ನು ನಿರ್ಧರಿಸುವುದು;

(15) ಕøಷಿ ಪ್ರಾತ್ಯಕ್ಷಿಕೆ ಕ್ಷೇತ್ರಗಳನ್ನು ಸ್ಥಾಪಿಸುವುದು ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಉತ್ತೇಜಿಸುವುದು; ಮತ್ತು

(16) ನಿಯಮಿಸಬಹುದಾದಂತೆ, ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಾಗಿರದಂಥ ಇತರ ಕಾರ್ಯಗಳನ್ನು ಮಾಡುವುದು.

ಆಡಳಿತಗಾರ ಮತ್ತು ಇತರ ಅಧಿಕಾರಿಗಳು.-

(1) ರಾಜ್ಯ ಸರ್ಕಾರವು, ಒಂದು ಪ್ರಾಧಿಕಾರಕ್ಕೆ ಅಧಿಸೂಚನೆಯ ಮೂಲಕ ಈ ಮುಂದಿನವರನ್ನು ನೇಮಕ ಮಾಡತಕ್ಕದ್ದು,-

(ಎ) ಸರ್ಕಾರದ ಕಾರ್ಯದರ್ಶಿಯ ದರ್ಜೆಯ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯ ರಾಜ್ಯ ಸರ್ಕಾರದ ಒಬ್ಬ ಅಧಿಕಾರಿಯನ್ನು ಪ್ರಾಧಿಕಾರದ ಆಡಳಿತಗಾರನನ್ನಾಗಿ ನೇಮಕ ಮಾಡತಕ್ಕದ್ದು. ಅವನು, ಪ್ರಾಧಿಕಾರದ ಸಾಮಾನ್ಯ ಅಧೀಕ್ಷಣೆ ಮತ್ತು ನಿಯಂತ್ರಣಕ್ಕೊಳಪಟ್ಟು, ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿರತಕ್ಕದ್ದು ಮತ್ತು ಅವನು ತನಗೆ ಪ್ರಾಧಿಕಾರವು ನಿಯಮಿಸಬಹುದಾದಂಥ ಅಥವಾ ಪ್ರತ್ಯಾಯೋಜಿಸಬಹುದಾದಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು;

(ಬಿ) ಕøಷಿ ಇಲಾಖೆಯ ಜಂಟಿ ನಿರ್ದೇಶಕನ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಕøಷಿ ಇಲಾಖೆಯ ಒಬ್ಬ ಅಧಿಕಾರಿಯನ್ನು ಭೂ ಅಭಿವøದ್ಧಿ ಅಧಿಕಾರಿಯಾಗಿ (ಕøಷಿ) ನೇಮಕ ಮಾಡತಕ್ಕದ್ದು;

(ಸಿ) ಒಬ್ಬ ಸೂಪರಿಂಟೆಂಡಿಂಗ್ ಇಂಜಿನಿಯರ್ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ನೀರಾವರಿ ಇಲಾಖೆಯ ಒಬ್ಬ ಅಧಿಕಾರಿಯನ್ನು ಭೂ ಅಭಿವøದ್ಧಿ ಅಧಿಕಾರಿಯಾಗಿ (ಇಂಜಿನಿಯರಿಂಗ್) ನೇಮಕ ಮಾಡತಕ್ಕದ್ದು ;

(ಡಿ) ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರನ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಸಹಕಾರ ಇಲಾಖೆಯ ಒಬ್ಬ ಅಧಿಕಾರಿಯನ್ನು ಭೂ ಅಭಿವøದ್ಧಿ ಅಧಿಕಾರಿಯಾಗಿ (ಸಹಕಾರ) ನೇಮಕ ಮಾಡತಕ್ಕದ್ದು; ಮತ್ತು

(ಇ) ರಾಜ್ಯ ಲೆಕ್ಕ ಪತ್ರಗಳ ಇಲಾಖೆಯ ಉಪ ನಿಯಂತ್ರಕನ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಸರ್ಕಾರದ ರಾಜ್ಯ ಲೆಕ್ಕಪತ್ರಗಳ ಇಲಾಖೆಯ ಒಬ್ಬ ಅಧಿಕಾರಿಯನ್ನು ಪ್ರಾಧಿಕಾರದ ಮುಖ್ಯ ಲೆಕ್ಕಪತ್ರಾಧಿಕಾರಿಯಾಗಿ ನೇಮಕ ಮಾಡತಕ್ಕದ್ದು.

(2) ಭೂ ಅಭಿವøದ್ಧಿ ಅಧಿಕಾರಿಗಳು ಮತ್ತು ಮುಖ್ಯ ಲೆಕ್ಕಪತ್ರಾಧಿಕಾರಿಯು, ಆಡಳಿತಗಾರನಿಗೆ ಅಧೀನರಾಗಿರತಕ್ಕದ್ದು ಮತ್ತು ಆಡಳಿತಗಾರನು ಅವರಿಗೆ ವಹಿಸಬಹುದಾದಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂಥ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.

(3) ನಿಯಮಿಸಬಹುದಾದಂಥ ನಿಯಮಗಳಿಗೊಳಪಟ್ಟು, ಪ್ರಾಧಿಕಾರವು, ತನ್ನ ಪ್ರಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಅವಶ್ಯವೆಂದು ಭಾವಿಸಬಹುದಾದಂಥ ಇತರ ಅಧಿಕಾರಿಗಳನ್ನು ಮತ್ತು ನೌಕರರನ್ನು ನೇಮಕ ಮಾಡಬಹುದು.

(4) (1)ನೇ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅಧಿಕಾರಿಗಳ ಮತ್ತು (3)ನೇ ಉಪ ಪ್ರಕರಣದ ಅಡಿಯಲ್ಲಿ ನೇಮಕಗೊಂಡ ಅಧಿಕಾರಿಗಳ ಮತ್ತು ನೌಕರರ ಸೇವಾ ನಿಬಂಧನೆಗಳು ಮತ್ತು ಷರತ್ತುಗಳು ನಿಯಮಿಸಬಹುದಾದಂತೆ ಇರತಕ್ಕದ್ದು.

ಯೋಜನೆಗಳನ್ನು ಸಿದ್ಧಪಡಿಸುವುದು.-

(1) ಪ್ರತಿಯೊಂದು ಪ್ರಾಧಿಕಾರವು ನೀರು ಪೂರೈಕೆ ಪ್ರದೇಶದ ಅಥವಾ ಅದರ ಯಾವುದೇ ಹಂತದ ವ್ಯಾಪಕ ಅಭಿವøದ್ಧಿಗಾಗಿ, ನಿಯಮಿಸಬಹುದಾದಂಥ ವಿಧಾನದಲ್ಲಿ ಯೋಜನೆಯನ್ನು ಸಿದ್ಧಪಡಿಸತಕ್ಕದ್ದು.

(2) ಹಾಗೆ ಸಿದ್ಧಪಡಿಸಲಾದ ಯಾವುದೇ ಯೋಜನೆಯು ಇತರ ವಿಷಯಗಳ ಜೊತೆಗೆ ಈ ಮುಂದಿನವುಗಳನ್ನು ನಿರೂಪಿಸತಕ್ಕದ್ದು, ಎಂದರೆ:-

(ಎ) ಯೋಜನೆಯ ವ್ಯಾಪ್ತಿಯೊಳಗೆ ತರಲು ಉದ್ದೇಶಿಸಲಾದ ಪ್ರದೇಶ;

(ಬಿ) ನಿರ್ವಹಿಸಬೇಕಾದ ಕಾಮಗಾರಿ ಅಥವಾ ಕಾಮಗಾರಿಗಳು;

(ಸಿ) ಪ್ರದೇಶವಾರು ಮತ್ತು ಕೆಲಸವಾರುಗಳೆರಡರ ಯೋಜನೆಯನ್ನು ಹಂತವಾಗಿಸುವುದು;

(ಡಿ) ಯೋಜನೆಯ ಅಡಿಯಲ್ಲಿ ತರಲು ಪ್ರಸ್ತಾವಿಸಲಾದ ಪ್ರದೇಶದ ಕರಡು ನಕ್ಷೆ;

(ಇ) ಒಂದು ಕೊಳವೆ ಹೊರಗಂಡಿ ವ್ಯವಸ್ಥೆಯ ಅಥವಾ ಈಗಿರುವ ನೀರಾವರಿ ವ್ಯವಸ್ಥೆಯ ಮರು ವಿನಿಯೋಜನೆ ಅಥವಾ ಮರು ಪಂಕ್ತೀಕರಣ ಯಾವುದಾದರೂ ಇದ್ದರೆ ಅದು;

(ಎಫ್) ವ್ಯಾಪ್ತಿಯೊಳಗೆ ಬರುವ ಸರ್ವೆ ಸಂಖ್ಯೆಗಳು;

(ಜಿ) ಪ್ರಸ್ತುತ ಇರುವ ಹಾಗೂ ಪ್ರಸ್ತಾವಿಸಲಾದ ಕ್ಷೇತ್ರದ ಎಲ್ಲೆಗಳು;

(ಎಚ್) ಭೂ ಹಿಡುವಳಿದಾರರಿಗೆ ನೀಡಬೇಕಾದ ಅಥವಾ ಅವರಿಂದ ವಸೂಲು ಮಾಡಬೇಕಾದ ನಷ್ಟ ಪರಿಹಾರ;

(ಐ) ಯೋಜನೆಯಲ್ಲಿ ಹಾಗೂ ಅದರ ಪ್ರತಿಯೊಂದು ಹಂತದಲ್ಲಿ ಒಳಗೊಳ್ಳುವ ವೆಚ್ಚ;

(ಜೆ) ಫಲಾನುಭವಿಗಳ ಮೇಲೆ ವಿಧಿಸಬೇಕಾದ ಚಾರ್ಜುಗಳು ಅಥವಾ ಬಾಕಿಗಳು; ಮತ್ತು

(ಕೆ) ನಿಯಮಿಸಬಹುದಾದಂಥ ಇತರ ವಿಷಯಗಳು ಮತ್ತು ವಿವರಗಳು.

(3) ಪ್ರಾಧಿಕಾರವು ಕಾಲಕಾಲಕ್ಕೆ ನೀರು ಪೂರೈಕೆ ಪ್ರದೇಶದಲ್ಲಿ ಯಾವುವೇ ಹೊಸ ಅಥವಾ ಹೆಚ್ಚುವರಿ ಯೋಜನೆಗಳನ್ನು ಸಹ ರೂಪಿಸಬಹುದು ಮತ್ತು ಕೈಗೆತ್ತಿಕೊಳ್ಳಬಹುದು.

(4) ಮೇಲಿನ ಯೋಜನೆಯ ಅಡಿಯಲ್ಲಿ ಯಾರೇ ಭೂ ಹಿಡುವಳಿದಾರನ ಹಿಡುವಳಿಯ ವಿಸ್ತೀರ್ಣವು ಕಡಿಮೆಯಾದುದರಿಂದ ಬಾಧಿತನಾದ ಭೂ ಹಿಡುವಳಿದಾರನಿಗೆ ನಷ್ಟಪರಿಹಾರವನ್ನು ಸಂದಾಯ ಮಾಡುವುದಕ್ಕಾಗಿ ಮತ್ತು ಯೋಜನೆಯ ಅಡಿಯಲ್ಲಿ ಹೆಚ್ಚು ವಿಸ್ತೀರ್ಣದ ಭೂಮಿಯ ಪ್ರಯೋಜನ ಪಡೆದ ಯಾರೇ ಇತರ ಭೂ ಹಿಡುವಳಿದಾರನಿಂದ ಪರಿಹಾರದ ವಸೂಲಿಗಾಗಿ ಉಪಬಂಧ ಕಲ್ಪಿಸತಕ್ಕದ್ದು. ಪರಿಹಾರದ ಮೊತ್ತವನ್ನು ಕಾರ್ಯಸಾಧ್ಯವಾಗುವಷ್ಟು ಮಟ್ಟಿಗೆ ಭೂ ಸ್ವಾಧೀನ ಅಧಿನಿಯಮ, 1894ರ ಉಪಬಂಧಗಳಿಗೆ ಅನುಸಾರವಾಗಿ ನಿರ್ಧರಿಸತಕ್ಕದ್ದು: ಪರಂತು,

(5 )ನೇ ಉಪಪ್ರಕರಣದಲ್ಲಿರುವುದು ಯಾವುದೂ, ಪ್ರಯೋಜನ ಪಡೆದ ಮತ್ತು ಬಾಧಿತರಾದ ಭೂ ಹಿಡುವಳಿದಾರರೊಂದಿಗೆ ಒಪ್ಪಂದದ ಮೂಲಕ ನಷ್ಟ ಪರಿಹಾರದ ಮೊತ್ತವನ್ನು ನಿರ್ಧರಿಸುವುದಕ್ಕೆ ಅಡ್ಡಿಯುಂಟು ಮಾಡತಕ್ಕದ್ದಲ್ಲ ಮತ್ತು ಆ ತರುವಾಯ ಹಾಗೆ ನಿರ್ಧರಿಸಲಾದ ಮೊತ್ತವು, ಹಾಗೆ ಬಾಧಿತನಾದ ಭೂ ಹಿಡುವಳಿದಾರನಿಗೆ ಸಂದಾಯ ಮಾಡತಕ್ಕ ಮೊತ್ತವಾಗಿರತಕ್ಕದ್ದು.

ಯೋಜನೆಯು ಪೂರ್ಣಗೊಂಡ ನಂತರದ ಕಾರ್ಯವಿಧಾನ.-

(1) ಒಂದು ಅಭಿವøದ್ಧಿ ಯೋಜನೆಯನ್ನು ಸಿದ್ದಪಡಿಸಿದಾಗ, ಅದನ್ನು ಪ್ರಾಧಿಕಾರವು, ಅಧಿಸೂಚನೆಯ ಮೂಲಕ, ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲ ವ್ಯಕ್ತಿಗಳಿಂದ ಅಂಥ ಪ್ರಕಟಣೆಯ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳು ಮತ್ತು ಸಲಹೆಗಳೇನಾದರೂ ಇದ್ದರೆ, ಅವುಗಳನ್ನು ಆಹ್ವಾನಿಸಿ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು.

(2) ಸದರಿ ಅಧಿಸೂಚನೆಯನ್ನು ಗ್ರಾಮ ಚಾವಡಿಗಳಲ್ಲಿ, ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಕಚೇರಿಯ ಸೂಚನಾ ಫಲಕಗಳಲ್ಲಿ, ಸಂಬಂಧಪಟ್ಟ ತಾಲ್ಲೂಕು ಕಚೇರಿಗಳ ಸೂಚನಾ ಫಲಕಗಳಲ್ಲಿ ಮತ್ತು ಯೋಜನೆಯಲ್ಲಿ ಸೇರಿಸಲು ಪ್ರಸ್ತಾವಿಸಲಾದ ಭೂಮಿಯು ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಸಹ ಪ್ರಕಟಿಸತಕ್ಕದ್ದು.

ಯೋಜನೆಯ ಮಂಜೂರಾತಿ.-

(1) ಮೇಲೆ ಹೇಳಿದಂಥ ಯೋಜನೆಯನ್ನು ಪ್ರಕಟಿಸಿದ ತರುವಾಯ ಮತ್ತು ಅದರ ಸಂಬಂಧದಲ್ಲಿ ಸ್ವೀಕರಿಸಿದ ಆಕ್ಷೇಪಣೆಗಳು ಯಾವುವಾದರೂ ಇದ್ದರೆ, ಅವುಗಳನ್ನು ಪರಿಗಣಿಸಿದ ನಂತರ, ಪ್ರಾಧಿಕಾರವು ತಾನು ಅವಶ್ಯವೆಂದು ಭಾವಿಸಬಹುದಾದಂಥ ಮಾರ್ಪಾಟುಗಳನ್ನು ಅದರಲ್ಲಿ ಮಾಡಿದ ತರುವಾಯ, ಯೋಜನೆಗೆ

ಮಂಜೂರಾತಿ ನೀಡಬಹುದು.

(2) (1)ನೇ ಉಪಪ್ರಕರಣದ ಅಡಿಯಲ್ಲಿ ಮಂಜೂರು ಮಾಡಿದಂಥ ಯೋಜನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚಿಸತಕ್ಕದ್ದು ಮತ್ತು 13ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಲಾದ ರೀತಿಯಲ್ಲಿ ಪ್ರಕಟಿಸತಕ್ಕದ್ದು.

ಅಧಿಸೂಚನೆಯ ಪರಿಣಾಮಗಳು.-

ಪ್ರಾಧಿಕಾರವು 14ನೇ ಪ್ರಕರಣದ ಅಡಿಯಲ್ಲಿ ಯೋಜನೆಗೆ ಅಥವಾ ಅದರ ಯಾವುದೇ ಹಂತಕ್ಕೆ ಮಂಜೂರಾತಿ ನೀಡಿದ ತರುವಾಯ (ಇಲ್ಲಿ ಇನ್ನು ಮುಂದೆ ಅನುಮೋದಿತ ಯೋಜನೆ ಎಂದು ಕರೆಯಲಾಗಿದೆ) ಈ ಮುಂದಿನ ಪರಿಣಾಮಗಳು ಉಂಟಾಗತಕ್ಕದ್ದು, ಎಂದರೆ:-

(1) ಪ್ರಾಧಿಕಾರವು, ರಾಜ್ಯ ಸಕಾರದ ಯಾವುದೇ ಇಲಾಖೆಯನ್ನು, ಅನುಮೋದಿತ ಯೋಜನೆಯ ಪ್ರವರ್ತನೆಯ ಪ್ರದೇಶದೊಳಗೆ ಕಾರ್ಯನಿರ್ವಹಿಸುತ್ತಿರುವ, ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಯಾವುದೇ ಶಾಸನಬದ್ಧ ಅಥವಾ ನಿಗಮಿತ ನಿಕಾಯವನ್ನು, ಅನುಮೋದಿತ ಯೋಜನೆಯಲ್ಲಿ ನಿರ್ದಿಷ್ಟಪಡಿಸಿರುವ ವಿಷಯಗಳ ಸಂಬಂಧದಲ್ಲಿ ಅಂಥ ನಿರ್ದೇಶನಗಳನ್ನು ಅನುಸರಿಸಲು ಅಗತ್ಯಪಡಿಸಬಹುದು.

(2) ರಾಜ್ಯ ಸರ್ಕಾರದ ಯಾವುದೇ ಇಲಾಖೆಯು ಅಥವಾ ಯಾವುದೇ ಸ್ಥಳೀಯ ಅಥವಾ ಶಾಸನಬದ್ದ ಪ್ರಾಧಿಕಾರವು ಅಥವಾ ನಿಕಾಯವು, ಅಥವಾ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಯಾವುದೇ ನಿಗಮವು ಭೂ ಅಭಿವøದ್ಧಿಗೆ ಸಂಬಂಧಿಸಿದಂತೆ ರೂಪಿಸಿದ ಎಲ್ಲ ಅಭಿವøದ್ಧಿ ಯೋಜನೆಗಳ ಬಗ್ಗೆ ಪ್ರಾಧಿಕಾರಕ್ಕೆ ತಿಳಿಸತಕ್ಕದ್ದು ಮತ್ತು ಅದರ ಅನುಮೋದನೆ ಪಡೆದು ಮತ್ತು ಪ್ರಾಧಿಕಾರವು ನೀಡಬಹುದಾದ ಸಲಹೆಗಳು ಮತ್ತು ಮಾಡಬಹುದಾದ ಮಾರ್ಪಾಟುಗಳು ಅಥವಾ ಬದಲಾವಣೆಗಳು ಯಾವುವಾದರೂ ಇದ್ದರೆ, ಅವುಗಳಿಗೆ ಒಳಪಟ್ಟು ಮತ್ತು ಪ್ರಾಧಿಕಾರವು ನೀಡಬಹುದಾದಂಥ ನಿರ್ದೇಶನಗಳಿಗೆ ಸಹ ಒಳಪಟ್ಟು ಕಾರ್ಯಗತಗೊಳಿಸತಕ್ಕದ್ದು.

(3) ಪ್ರಾಧಿಕಾರವು, ಕಾಮಗಾರಿಗಳ ವೆಚ್ಚ ಮತ್ತು ಇತರ ಚಾರ್ಜುಗಳನ್ನು ವಿಧಿಸುವುದೂ ಒಳಗೊಂಡಂತೆ ಅನುಮೋದಿತ ಯೋಜನೆಯ ಅನುಷ್ಠಾನಕ್ಕಾಗಿ ಮತ್ತು ಈ ಮುಂದಿನ ವಿಷಯಗಳ ಬಗ್ಗೆ ಭೂ ಹಿಡುವಳಿದಾರರಿಗೆ ನಿರ್ದೇಶನಗಳನ್ನು ನೀಡಲು ಎಲ್ಲ ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರ ಹೊಂದಿರುವುದಾಗಿ ಭಾವಿಸತಕ್ಕದ್ದು,

ಎಂದರೆ:-

(ಎ) ಬೆಳೆಯಬೇಕಾದ ಬೆಳೆಗಳು ಮತ್ತು ಅಂಥ ಬೆಳೆಗಳ ಸರದಿ ಸಾಗುವಳಿ;

(ಬಿ) ಕ್ಷೇತ್ರದಲ್ಲಿ ಬಸಿಕಾಲುವೆ ವ್ಯವಸ್ಧೆ ;

(ಸಿ) ವಿತರಣಾ ವ್ಯವಸ್ಥೆಯಿಂದ ಬಾವಿಗಳು, ಕೊಳವೆ ಬಾವಿಗಳು, ಪಂಪುಗಳು ಮತ್ತು ನೀರಾವರಿಯ ಇತರ ಮೂಲಗಳಿಗೆ ಇರುವ ದೂರ;

(ಡಿ) ಜಮೀನುಗಳಿಗೆ ಬೇಲಿ ಹಾಕುವುದು ಮತ್ತು ತೆಗೆಯುವುದು ;

(ಇ) ಈ ಮುಂದಿನ ವಿಷಯಗಳ ಬಗ್ಗೆ ಸತ್ಯವಾದ ಮತ್ತು ನಿಖರವಾದ ಒಂದು ಹೇಳಿಕೆಯನ್ನು ಒಳಗೊಂಡಿರುವಂಥ, ವಿನಿಯಮಗಳ ಮೂಲಕ ಉಪಬಂಧಿಸಿರಬಹುದಾದ ಅಂಥ ಸಮಯದೊಳಗೆ ಮತ್ತು

ಅಂಥ ರೀತಿಯಲ್ಲಿ ವಿವರಪಟ್ಟಿಕೆಗಳನ್ನು ಸಲ್ಲಿಸುವುದು, ಎಂದರೆ:-

(i) ಅವನು ಸಾಗುವಳಿ ಮಾಡುವ ಭೂಮಿಯ ವಿಸ್ತೀರ್ಣ, ಅಂಥ ಭೂಮಿಯ ವರ್ಗೀಕರಣ, ಅದರಲ್ಲಿ ಅವನ ಹಿತಾಸಕ್ತಿ ಮತ್ತು ಅಂಥ ಭೂಮಿಯ ಮೇಲೆ ಪೂರ್ವಾಧಿಗಳೇನಾದರೂ ಇದ್ದರೆ ಅವು;

(ii) ಅವನು ಬೆಳೆದ ಕøಷಿ ಉತ್ಪನ್ನದ ಸ್ವರೂಪ ಮತ್ತು ಪರಿಮಾಣ ; (ಎಫ್) ವಿನಿಯಮಗಳ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ಇತರ ವಿಷಯಗಳು.

ಯೋಜನೆಯನ್ನು ಕಾರ್ಯಗತಗೊಳಿಸುವುದು.-

(1) ಯೋಜನೆಯ ಮಂಜೂರಾತಿಯ ತರುವಾಯ, ಪ್ರಾಧಿಕಾರವು, ಅದನ್ನು ತಾನು ಸೂಕ್ತವೆಂದು ಭಾವಿಸುವಂಥ ಏಜೆನ್ಸಿಯ ಮೂಲಕ ಕಾರ್ಯಗತಗೊಳಿಸಬಹುದು: ಪರಂತು, ಅನುಮೋದಿತ ಯೋಜನೆಯಲ್ಲಿ ನಿರ್ದಿಷ್ಟಪಡಿಸಿರುವಂತೆ, ಭೂ ಅಭಿವøದ್ಧಿ ಕಾಮಗಾರಿಯ ಸಂದರ್ಭದಲ್ಲಿ, 14ನೇ ಪ್ರಕರಣದ ಅಡಿಯಲ್ಲಿ ಯೋಜನೆಯ ಅಧಿಸೂಚನೆಯನ್ನು ಹೊರಡಿಸಿದ ಒಂದು ತಿಂಗಳೊಳಗಾಗಿ, ಭೂ ಹಿಡುವಳಿದಾರನು ಅನುಮೋದಿತ ಯೋಜನೆಗೆ ಅನುಸಾರವಾಗಿ, ಕಾಮಗಾರಿಯನ್ನು ಸ್ವತಃ ತಾನೇ ಕಾರ್ಯಗತಗೊಳಿಸಲು ತೀರ್ಮಾನಿಸಿದ್ದಾನೆಯೇ, ಹಾಗಿದ್ದರೆ, ಅವನು ಪ್ರಾಧಿಕಾರವು ನಿಗದಿಪಡಿಸಬಹುದಾದಂಥ ಕಾಲದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ತನ್ನ ಒಪ್ಪಿಗೆಯನ್ನು ಪ್ರಾಧಿಕಾರಕ್ಕೆ ತಿಳಿಸುವಂತೆ ಸಂಬಂಧಪಟ್ಟ ಭೂಹಿಡುವಳಿದಾರನನ್ನು ಅದು ಅಗತ್ಯಪಡಿಸಬಹುದು ಮತ್ತು ಅವನು ಮೋಜಣಿ, ಮೇಲ್ವಿಚಾರಣೆಗೆ ಸಂಬಂಧಪಟ್ಟ ಪ್ರಮಾಣಾನುಸಾರ ವೆಚ್ಚವನ್ನು ಮತ್ತು ಪ್ರಾಧಿಕಾರವು ನಿರ್ಧರಿಸಬಹುದಾದ ಯಾವುದೇ ಇತರ ಮೊತ್ತವನ್ನು ಸಂದಾಯ ಮಾಡಲು ಸಹ ಬದ್ಧನಾಗಿರತಕ್ಕದ್ದು.

(2) ಭೂ ಹಿಡುವಳಿದಾರನು, (1)ನೇ ಉಪಪ್ರಕರಣದ ಪರಂತುಕದಲ್ಲಿ ಉಪಬಂಧಿಸಲಾದಂತೆ, ಕಾಮಗಾರಿಯನ್ನು ಕಾರ್ಯಗತಗೊಳಿಸಲು ವಿಫಲನಾದಲ್ಲಿ, ಪ್ರಾಧಿಕಾರವು, ಭೂ ಅಭಿವøದ್ಧಿ ಕಾಮಗಾರಿಯನ್ನು ಕಾರ್ಯಗತಗೊಳಿಸತಕ್ಕದ್ದು ಅಥವಾ ಕಾರ್ಯಗತಗೊಳಿಸುವಂತೆ ಮಾಡತಕ್ಕದ್ದು ; ಮತ್ತು,-

(ಎ) ಹಾಗೆ ಕಾರ್ಯಗತಗೊಳಿಸಲಾದ ಭೂ ಅಭಿವøದ್ದಿಯನ್ನು ಯಾವ ಭೂ ಹಿಡುವಳಿದಾರನ ಪ್ರಯೋಜನಕ್ಕಾಗಿ ಅದನ್ನು ಉದ್ದೇಶಿಸಲಾಗಿದೆಯೋ ಅವನ ಸಹಮತಿಯೊಂದಿಗೆ ಮಾಡಲಾಗಿದೆ ಎಂದು ಭಾವಿಸತಕ್ಕದ್ದು;

(ಬಿ) ನಿಯಮಿಸಬಹುದಾದಂಥ ನಿಯಮಗಳಿಗೊಳಪಟ್ಟು, ಮೋಜಣಿ, ಮೇಲ್ವಿಚಾರಣೆಯೂ ಸೇರಿದಂತೆ, ಕಾಮಗಾರಿಗಳ ಪ್ರಮಾಣಾನುಸಾರ ವೆಚ್ಚ ಮತ್ತು ಪ್ರಾಧಿಕಾರವು ಪ್ರಮಾಣೀಕರಿಸ ಬಹುದಾದಂಥ ಯಾವುದೇ ಇತರ ಮೊತ್ತವು ಭೂಮಿಯ ಮೇಲಿನ ಋಣಭಾರವಾಗಿರತಕ್ಕದ್ದು ಮತ್ತು 20ನೇ ಪ್ರಕರಣದ

3)ನೇ ಉಪಪ್ರಕರಣದ ಉಪಬಂಧಗಳು ಯಥೋಚಿತ ವ್ಯತ್ಯಾಸಗಳೊಂದಿಗೆ ಅದರ ವಸೂಲಿಗೆ ಅನ್ವಯವಾಗತಕ್ಕದ್ದು.

ಭೌತಿಕ ಯೋಜನೆಗಾಗಿ ಉಪಬಂಧ ಕಲ್ಪಿಸುವ ದøಷ್ಟಿಯಿಂದ, ಭೂ ಅಭಿವøದ್ದಿ (ಇಂಜಿನಿಯರಿಂಗ್) ಅಧಿಕಾರಿಯು, ಕ್ಷೇತ್ರದ ಗಡಿಗಳ ಪುನರ್ ಪಂಕ್ತೀಕರಣ ಜಾರಿಗೆ ತರಲು ಮತ್ತು ಈ ಪ್ರಕ್ರಿಯೆಯಲ್ಲಿ, ನೀರು ಪೂರೈಕೆ ಪ್ರದೇಶದಲ್ಲಿ ಅಥವಾ ಯಾವುದೇ ಇತರ ಪಕ್ಕದ ಜಮೀನಿನಲ್ಲಿ ಭೂ ಹಿಡುವಳಿದಾರರು ಹೊಂದಿರುವ ಜಮೀನಿನ ವಿಸ್ತೀರ್ಣವನ್ನು ಬದಲಿಸಲು ಅಧಿಕಾರ ಹೊಂದಿರತಕ್ಕದ್ದು.

(4) ಹಾಗೆ ಭೂ ಹಿಡುವಳಿಗಳಲ್ಲಿ ಮಾಡಲಾದ ಪುನರ್ ಪಂಕ್ತೀಕರಣ ಮತ್ತು ಬದಲಾವಣೆಗಳು, ಯಾವುದೇ ಇತರ ಅಧಿನಿಯಮಿತಿಯಲ್ಲಿ ಒಳಗೊಂಡಿರುವುದಕ್ಕೆ ಅಸಂಗತವಾದುದೇನನ್ನೇ ಒಳಗೊಂಡಿದ್ದರೆ, ಅದು ಪರಿಣಾಮಕಾರಿಯಾಗತಕ್ಕದ್ದು ಮತ್ತು ಆ ಬದಲಾವಣೆಯನ್ನು ಹಕ್ಕುಗಳ ದಾಖಲೆಯಲ್ಲಿ ಯಥೋಚಿತವಾಗಿ ದಾಖಲಿಸತಕ್ಕದ್ದು.

(5) ಸಮಗ್ರ ಭೂ ಅಭಿವøದ್ಧಿಯ ಅನುಮೋದಿತ ಯೋಜನೆಯಲ್ಲಿ ಸೇರಿಸಲಾದ ಯಾವುದೇ ಭೂಮಿಯ ಹಿಡುವಳಿದಾರನು, ಪ್ರಾಧಿಕಾರವು ನಿರ್ಧರಿಸಿದ ಭೂ ಅಭಿವøದ್ಧಿಗಾಗಿ ಅಗತ್ಯವಿರುವಂಥ ಮೊತ್ತವನ್ನು ಪ್ರಾಧಿಕಾರದಲ್ಲಿ ಠೇವಣ ಇಡಬಹುದು ಮತ್ತು ಪ್ರಾಧಿಕಾರವು ಯೋಜನೆಯ ಅಡಿಯಲ್ಲಿ ಭೂ ಅಭಿವøದ್ಧಿಯನ್ನು ಸ್ವತಃ ತಾನೇ ಅಥವಾ ಪ್ರಾಧಿಕಾರವು ನಿರ್ಧರಿಸುವ ಏಜೆನ್ಸಿಯ ಮೂಲಕ ಕಾರ್ಯಗತಗೊಳಿಸತಕ್ಕದ್ದು.

ಸ್ಥಳೀಕರಣದ ತತ್ವಗಳನ್ನು ನಿರ್ದಿಷ್ಟಪಡಿಸಲು ಅಧಿಕಾರ.-

(1) ರಾಜ್ಯ ಸರ್ಕಾರವು, ನೆಲ ಮತ್ತು ಜಲದ ಸಂಪನ್ಮೂಲಗಳು, ಮಣ್ಣಿನ ಸ್ವರೂಪ, ಹವಾಗುಣ ಮತ್ತು ಇತರ ತಾಂತ್ರಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ನೀರು ಪೂರೈಕೆ ಪ್ರದೇಶಕ್ಕೆ ನೀರಾವರಿ ಉದ್ದೇಶಕ್ಕಾಗಿ ಸ್ಥಳೀಕರಣದ ತತ್ವಗಳನ್ನು ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದು.

(2) ರಾಜ್ಯ ಸರ್ಕಾರವು, ನೆಲ ಮತ್ತು ಜಲ ನಿರ್ವಹಣೆಯ ಮತ್ತು ಇತರ ಕøಷಿ ಪದ್ಧತಿಗಳ ತಂತ್ರಜ್ಞಾನದಲ್ಲಿ ಆಗಿರುವ ಮುನ್ನಡೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ನೀರು ಪೂರೈಕೆ ಪ್ರದೇಶಕ್ಕೆ ಹಾಗೆ ನಿರ್ದಿಷ್ಟಪಡಿಸಿದ ಸ್ಥಳೀಕರಣದ ತತ್ವಗಳನ್ನು ಆದೇಶದ ಮೂಲಕ, ಕಾಲಕಾಲಕ್ಕೆ ಬದಲಿಸಬಹುದು.

ನೀರಿನ ಲಭ್ಯತೆಗೆ ಅನುಸಾರವಾಗಿ ಬೇರೆ ಬೇರೆ ಬೆಳೆಗಳನ್ನು ಬೆಳೆಯಲು, ಭೂಮಿಯ ವರ್ಗೀಕರಣ.-

(1) ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸಬಹುದಾದಂಥ ನಿರ್ದೇಶನಗಳಿಗೊಳಪಟ್ಟು, ಪ್ರಾಧಿಕಾರ ಅಥವಾ ಪ್ರಾಧಿಕಾರವು ಪ್ರಾಧಿಕøತಗೊಳಿಸಿದ ಅಧಿಕಾರಿಯು, ಯಾವುದೇ ವರ್ಷದಲ್ಲಿ, ತನ್ನ ಅಧಿಕಾರ ವ್ಯಾಪ್ತಿಯೊಳಗಿನ ಯಾವುದೇ ನೀರಾವರಿ ವ್ಯವಸ್ಥೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಕೊಳವೆ ಹೊರಗಂಡಿಯ ಕೆಳಗಿನ ನೀರಾವರಿ ವ್ಯವಸ್ಥೆಯಲ್ಲಿ ಸೇರಿಸಲಾದ ಜಮೀನುಗಳನ್ನು, ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಕೊಳವೆ ಹೊರಗಂಡಿ ವ್ಯವಸ್ಥೆಯ ಅಡಿಯಲ್ಲಿ, ಬೆಳೆಗಳನ್ನು ಬೆಳೆಯುವ ಉದ್ದೇಶಕ್ಕಾಗಿ, ನೀರಾವರಿಗಾಗಿ ನೀರು ಸರಬರಾಜನ್ನು ನಿಯಂತ್ರಿಸಲು, ನಿಯಮಿಸಬಹುದಾದಂಥ ವೇಳೆ ಮತ್ತು ಅಂಥ ವಿಧಾನದಲ್ಲಿ ಆದೇಶದ ಮೂಲಕ ವರ್ಗೀಕರಿಸಬಹುದು.

(2) ಪ್ರಾಧಿಕಾರವು, ಭೂಮಿಯ ಉತ್ತಮ ಸಾಗುವಳಿಗಾಗಿ ಮತ್ತು ಕೊಳವೆ ಹೊರಗಂಡಿಯ ಕೆಳಗಿನ ನೀರಾವರಿ ವ್ಯವಸ್ಥೆಯ ಜಲಸಂಪನ್ಮೂಲದ ಗರಿಷ್ಠ ಬಳಕೆಗಾಗಿ ಅಥವಾ ತ್ವರಿತ ಭೂ ಅಭಿವøದ್ಧಿಗಾಗಿ ಅಥವಾ ಯಾವುದೇ ಇತರ ಕಾರಣಗಳಿಗಾಗಿ ಸಾರ್ವಜನಿಕ ಹಿತದøಷ್ಟಿಯಿಂದ ಯುಕ್ತವೆಂದು ಅಭಿಪ್ರಾಯಪಟ್ಟಾಗಲೆಲ್ಲ, ಪ್ರಾಧಿಕಾರವು ಅದು ಅಧಿಸೂಚನೆಯ ಮೂಲಕ, ಬೆಳೆ ಬೆಳೆಸುವ ಪದ್ಧತಿಯನ್ನು, ಬಿತ್ತನೆ ಮಾಡುವ ಅವಧಿಯನ್ನು, ಬೆಳೆಯ ಅವಧಿಯನ್ನು, ಮತ್ತು ಕೊಳವೆ ಹೊರಗಂಡಿಯ ಅಂಥ ನೀರಾವರಿ ವ್ಯವಸ್ಥೆಯಡಿಯಲ್ಲಿನ ಯಾವುದೇ ಭೂಮಿಯಲ್ಲಿ ಬೆಳೆಯತಕ್ಕದ್ದಲ್ಲದ ಪ್ರಭೇದಗಳನ್ನು ನಿರ್ದಿಷ್ಟಪಡಿಸಬಹುದು.

(3) (2)ನೇ ಉಪಪ್ರಕರಣದ ಅಡಿಯಲ್ಲಿ ಒಂದು ಅಧಿಸೂಚನೆಯನ್ನು ಪ್ರಕಟಿಸಿದ ಮೇಲೆ, ಯಾರೇ ವ್ಯಕ್ತಿಯು, ಕೊಳವೆ ಹೊರಗಂಡಿಯ ನೀರಾವರಿ ವ್ಯವಸ್ಥೆಯಲ್ಲಿ ಯಾವುದೇ ಜಮೀನಿನಲ್ಲಿ ಯಾವುದೇ ನಿಷೇಧಿತ ಬೆಳೆಯನ್ನು ಬೆಳೆಯತಕ್ಕದ್ದಲ್ಲ ಅಥವಾ ಬೆಳೆಯಲು ಅವಕಾಶ ನೀಡತಕ್ಕದ್ದಲ್ಲ ಮತ್ತು ಯಾರೇ ವ್ಯಕ್ತಿಯು ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಅವಧಿಯ ಹೊರತಾದ ಯಾವುದೇ ಸಮಯದಲ್ಲಿ ಬಿತ್ತನೆ ಮಾಡತಕ್ಕದ್ದಲ್ಲ ಅಥವಾ ನಾಟಿ ಮಾಡತಕ್ಕದ್ದಲ್ಲ ಅಥವಾ ಬಿತ್ತನೆ ಮಾಡಲು ಅಥವಾ ನಾಟಿ ಮಾಡಲು ಅವಕಾಶ ನೀಡತಕ್ಕದ್ದಲ್ಲ, ಅಥವಾ ಅವಧಿ ಮೀರಿ ಅಂಥ ಬೆಳೆ ಇರಲು ಅವಕಾಶ ನೀಡತಕ್ಕದ್ದಲ್ಲ.

ನೀರು ಸರಬರಾಜನ್ನು ನಿಲ್ಲಿಸುವುದು.-

17 ಅಥವಾ 18ನೇ ಪ್ರಕರಣದ ಅಡಿಯಲ್ಲಿ ನೀರು ಸರಬರಾಜಿಗೆ ಹಕ್ಕು ಹೊಂದಿರುವ ಯಾವುದೇ ಜಮೀನಿಗೆ ನೀರು ಸರಬರಾಜು ಮಾಡುವುದನ್ನು ಈ ಮುಂದಿನ ಸಂದರ್ಭಗಳ ಹೊರತು ನಿಲ್ಲಿಸತಕ್ಕದ್ದಲ್ಲ:-

(ಎ) ಪ್ರಾಧಿಕಾರವು ಆದೇಶಿಸಿದ ಯಾವುದೇ ಕಾಮಗಾರಿಯನ್ನು ಕಾರ್ಯಗತಗೊಳಿಸುವ ಉದ್ದೇಶಕ್ಕಾಗಿ ಅಂಥ ಸರಬರಾಜನ್ನು ನಿಲ್ಲಿಸುವುದು ಅವಶ್ಯವಿರುವಾಗ ಮತ್ತು ಎಲ್ಲಿಯವರೆಗೆ ಅವಶ್ಯವಿರುವುದೋ ಅಲ್ಲಿಯವರೆಗೆ;

(ಬಿ) ಅಂಥ ನೀರು ಸರಬರಾಜು ಪಡೆಯುವ ಯಾವುದೇ ಕ್ಷೇತ್ರ ಕಾಲುವೆಯನ್ನು ಅದರಿಂದ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆಗಟ್ಟಲು ದುರಸ್ತಿ ಮಾಡಿಸದಿರುವಾಗ ಮತ್ತು ಎಲ್ಲಿಯವರೆಗೆ ಮಾಡುವುದಿಲ್ಲವೋ ಅಲ್ಲಿಯವರೆಗೆ;

(ಸಿ) ನೀರಿಗೆ ಹಕ್ಕುಳ್ಳವರಾದ ಭೂಹಿಡುವಳಿದಾರರ ನ್ಯಾಯಯುತ ಬೇಡಿಕೆಗಳನ್ನು ಪೂರೈಸಲು ಸರದಿ ಕ್ರಮದಲ್ಲಿ ಸರಬರಾಜು ಮಾಡುವುದು ಅವಶ್ಯವಿರುವಾಗ ಮತ್ತು ಎಲ್ಲಿಯವರೆಗೆ ಅವಶ್ಯವಿರುವುದೋ ಅಲ್ಲಿಯವರೆಗೆ;

(ಡಿ) ನೀರು ಪೆÇೀಲಾಗುವುದನ್ನು ಅಥವಾ ನೀರಿನ ದುರ್ಬಳಕೆಯನ್ನು ತಡೆಯುವುದು ಅವಶ್ಯವಿರುವಾಗ ಮತ್ತು ಎಲ್ಲಿಯವರೆಗೆ ಅವಶ್ಯವಿರುವುದೋ ಅಲ್ಲಿಯವರೆಗೆ;

(ಇ) ಯುಕ್ತ ನೋಟೀಸನ್ನು ನೀಡಿ ಪ್ರಾಧಿಕಾರವು ಕಾಲಕಾಲಕ್ಕೆ ಗೊತ್ತುಪಡಿಸಿದ ಅವಧಿಯೊಳಗೆ; ಮತ್ತು

(ಎಫ್) ಯಾವುದೇ ನೈಸರ್ಗಿಕ ಅಥವಾ ಋತುಮಾನದ ಕಾರಣಗಳಿಂದಾಗಿ ನೀರಾವರಿ ಕಾಮಗಾರಿಯಲ್ಲಿ ನೀರಿನ ಸರಬರಾಜು ಕಡಿಮೆಯಾಗಿರುವಾಗ ಮತ್ತು ಹಾಗೆ ಮಾಡುವುದು ಎಲ್ಲಿಯವರೆಗೆ ಅವಶ್ಯವೆನಿಸಿರುವುದೋ ಅಲ್ಲಿಯವರೆಗೆ.

ಅರ್ಹರಲ್ಲದ ವ್ಯಕ್ತಿಗಳಿಗೆ ಭೂ ಅಭಿವøದ್ಧಿಗಾಗಿ ಸಾಲದ ಸೌಲಭ್ಯಗಳು.-

(1) ಅರ್ಹರಲ್ಲದ ವ್ಯಕ್ತಿಗಳ ಸ್ವಾಧೀನದಲ್ಲಿರುವ ಭೂಮಿಯಲ್ಲಿ ಭೂ ಅಭಿವøದ್ಧಿಯನ್ನು ಕೈಗೊಳ್ಳಲು, ಪ್ರಾಧಿಕಾರವು, ಅನುಮೋದಿತ ಯೋಜನೆಯಲ್ಲಿ ಉಪಬಂಧಿಸಬಹುದಾಗಿರುವಂಥ ಅಭಿವøದ್ಧಿ ಕಾರ್ಯವನ್ನು ಕೈಗೊಳ್ಳುವುದರ ವೆಚ್ಚವನ್ನು ಭರಿಸುವ ಉದ್ದೇಶಕ್ಕಾಗಿ, ಪ್ರಾಧಿಕಾರದ ಹಾಗೂ ಸಂಬಂಧಪಟ್ಟ ಸಾಲ ಏಜೆನ್ಸಿಯ ನಡುವೆ ಪರಸ್ಪರ ಒಪ್ಪಿಗೆಯಾಗಬಹುದಾದಂಥ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ, ಅವರ ಪರವಾಗಿ ಒಂದು ಸಾಲದ ಏಜೆನ್ಸಿಯಿಂದ ಸಾಲಗಳನ್ನು ಪಡೆಯಬಹುದು:

ಪರಂತು, ಹಾಗೆ ಪಡೆಯಲಾದ ಸಾಲಗಳನ್ನು ಸಂಬಂಧಪಟ್ಟ ಅರ್ಹರಲ್ಲದ ವ್ಯಕ್ತಿಗಳ ಸಮ್ಮತಿಯೊಂದಿಗೆ ಪಡೆಯಲಾಗಿದೆ ಎಂದು ಭಾವಿಸತಕ್ಕದ್ದು.

ವಿವರಣೆ.- (1) ಈ ಪ್ರಕರಣದ ಉದ್ದೇಶಗಳಿಗಾಗಿ, ನಿಯಮಿಸಬಹುದಾದಂಥ ನಿಯಮಗಳಿಗೊಳಪಟ್ಟು, ಭೂ ಅಭಿವøದ್ಧಿ ವೆಚ್ಚವು ಸರ್ವೆ, ಮೇಲ್ವಿಚಾರಣೆ ಮತ್ತು ಪ್ರಾಧಿಕಾರವು ನಿರ್ಧರಿಸಬಹುದಾದಂಥ ಇತರ ಯಾವುದೇ ಮೊತ್ತವನ್ನು ಒಳಗೊಳ್ಳುತ್ತದೆ.

(2) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ ಸಾಲವು, ಸಂಬಂಧಪಟ್ಟ ಅರ್ಹರಲ್ಲದ ವ್ಯಕ್ತಿಗಳ ಸ್ವಾಧೀನದಲ್ಲಿರುವ ಭೂಮಿಯ ಮೇಲಿನ ಮೊದಲನೆಯ ಋಣಭಾರವಾಗಿರತಕ್ಕದ್ದು.

(3) ಪ್ರತಿಯೊಬ್ಬ ಅರ್ಹನಲ್ಲದ ವ್ಯಕ್ತಿಯಿಂದ ವಸೂಲಿ ಮಾಡಬೇಕಾದ ಮೊತ್ತವು, (1)ನೇ ಉಪಪ್ರಕರಣದ ಅಡಿಯಲ್ಲಿ ನಿರ್ಧರಿಸಲಾದ ಇಡೀ ಕಾಮಗಾರಿಯ ವೆಚ್ಚವಾಗಿರತಕ್ಕದ್ದು ಮತ್ತು ಅದನ್ನು ಪ್ರಾಧಿಕಾರವು ನಿಗದಿಪಡಿಸಬಹುದಾದಂಥ ದರದಲ್ಲಿ ಬಡ್ಡಿ ಸಹಿತವಾಗಿ ಮತ್ತು ಅಂಥ ವಾರ್ಷಿಕ ಕಂತುಗಳಲ್ಲಿ ವಸೂಲಿ ಮಾಡತಕ್ಕದ್ದು ಮತ್ತು ಸಾಮಾನ್ಯ ಕ್ರಮದಲ್ಲಿ ವಸೂಲಿ ಮಾಡಿರದಿದ್ದರೆ ಭೂ ಕಂದಾಯದ ಬಾಕಿಯಂತೆ ವಸೂಲಿ ಮಾಡತಕ್ಕದ್ದು.

(4) ಪ್ರಾಧಿಕಾರವು, ಸಾಲ ಪಡೆಯುವ ಸಮಯದಲ್ಲಿ ಒಪ್ಪಿಕೊಂಡಂತೆ, ಮರುಸಂದಾಯದ ನಿಬಂಧನೆಗಳುಮತ್ತು ಷರತ್ತುಗಳ ಅನುಸಾರ, (1)ನೇ ಉಪಪ್ರಕರಣದ ಅಡಿಯಲ್ಲಿ ಸಾಲದ ಏಜೆನ್ಸಿಯಿಂದ ಪಡೆದ ಸಾಲದ ಹಣವನ್ನು ಮರುಸಂದಾಯ ಮಾಡಲು ಬದ್ಧವಾಗಿರತಕ್ಕದ್ದು.

ಭೂ ಅಭಿವøದ್ಧಿಗಾಗಿ ಇರುವ ಅನುಮೋದಿತ ಯೋಜನೆಯ ಅಡಿಯಲ್ಲಿ ಅಡಮಾನ ಮಾಡಿದ ಭೂಮಿಯ ವಿಸ್ತೀರ್ಣ ಅಥವಾ ಚಕ್ಕುಬಂದಿಗಳ ಬದಲಾವಣೆ.-

ಸಮಗ್ರ ಭೂ ಅಭಿವøದ್ಧಿಗಾಗಿ ಇರುವ ಅನುಮೋದಿತ ಯೋಜನೆಯನ್ನು ಅನುಷ್ಠಾನಗೊಳಿಸಿದ ಮೇಲೆ, ಅಡಮಾನ ಮಾಡಿದ ಭೂಮಿಯ ವಿಸ್ತೀರ್ಣ ಅಥವಾ ಚಕ್ಕುಬಂದಿಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿರುವಲ್ಲಿ ಅಂಥ ಬದಲಾವಣೆ ಹೊಂದಿದ ಭೂಮಿಯು, ಸಾಲಕ್ಕೆ ಏಕಮಾತ್ರ ಬದಲಿ ಭದ್ರತೆಯಾಗಿರತಕ್ಕದ್ದು.

ಪ್ರಾಧಿಕಾರದ ನಿಧಿಗಳು.-

(1) ಪ್ರಾಧಿಕಾರವು, ಒಂದು ಪ್ರತ್ಯೇಕ ನಿಧಿಯನ್ನು ಹೊಂದಿರಕ್ಕದ್ದು ಮತ್ತು ನಿರ್ವಹಿಸತಕ್ಕದ್ದು, ಅದಕ್ಕೆ ಈ ಮುಂದಿನ ಬಾಬುಗಳನ್ನು ಜಮೆ ಮಾಡತಕ್ಕದ್ದು:-

(ಎ) ಪ್ರಾಧಿಕಾರವು ರಾಜ್ಯ ಸರ್ಕಾರದಿಂದ ಅನುದಾನಗಳ, ಸಾಲಗಳ, ಮುಂಗಡಗಳ ರೂಪದಲ್ಲಿ ಅಥವಾ ಅನ್ಯಥಾ ಸ್ವೀಕರಿಸಿದ ಎಲ್ಲ ಹಣ;

(ಬಿ) ನೀರು ಪೂರೈಕೆ ಪ್ರದೇಶದಲ್ಲಿ ಅಭಿವøದ್ಧಿ ಕಾರ್ಯಚಟುವಟಿಕೆಗಳಿಗಾಗಿ, ಕೇಂದ್ರ ವಲಯ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ದೊರೆತ ಸಹಾಯಾನುದಾನಗಳು ಮತ್ತು ಸಾಲಗಳು;

(ಸಿ) ನಿರ್ದಿಷ್ಟಪಡಿಸಲಾದ ಕಾಮಗಾರಿಗಳಿಗಾಗಿ, ಯಾವುದೇ ವಿವಿಧ ಅಭಿವøದ್ಧಿ ಕಾರ್ಯಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಒದಗಿಸಲಾದ ಯಾವುವೇ ಇತರ ನಿಧಿಗಳು ;

(ಡಿ) ಹಣಕಾಸು ಏಜೆನ್ಸಿಗಳಿಂದ ಪ್ರಾಧಿಕಾರವು ಪಡೆದ ಸಾಲಗಳು; ಮತ್ತು (ಇ) ಇತರ ಯಾವುದೇ ಮೂಲದಿಂದ ಪ್ರಾಧಿಕಾರವು ಸ್ವೀಕರಿಸಿದ ಇತರ ಎಲ್ಲಾ ನಿಧಿಗಳು.

(2) ನಿಧಿಯನ್ನು ಅಧಿನಿಯಮದ ಉದ್ದೇಶಕ್ಕಾಗಿ ನಿಯಮಿಸಬಹುದಾದಂಥ ರೀತಿಯಲ್ಲಿ ವಿನಿಯೋಗಿಸತಕ್ಕದ್ದು.

ಪ್ರಾಧಿಕಾರದ ಬಜೆಟ್.-

ಪ್ರಾಧಿಕಾರವು ಅಧಿನಿಯಮದ ಆಡಳಿತದ ಸಂಬಂಧದಲ್ಲಿ, ಪ್ರಾಧಿಕಾರದ ಮುಂದಿನ ಹಣಕಾಸು ವರ್ಷದ ಅಂದಾಜು ಸ್ವೀಕøತಿಗಳನ್ನು ಮತ್ತು ವೆಚ್ಚವನ್ನು ತೋರಿಸುವ ಒಂದು ಬಜೆಟ್ಟನ್ನು ಪ್ರತಿವರ್ಷ ನಿಯಮಿಸಬಹುದಾದ ನಮೂನೆಯಲ್ಲಿ ಮತ್ತು ಅಂಥ ಸಮಯದಲ್ಲಿ ತಯಾರಿಸತಕ್ಕದ್ದು, ಮತ್ತು ನಿಯಮಿಸಬಹುದಾದಷ್ಟು ಸಂಖ್ಯೆಯಲ್ಲಿ ಅದರ ಪ್ರತಿಗಳನ್ನು ರಾಜ್ಯ ಸರ್ಕಾರಕ್ಕೆ ಅಥವಾ ಅಂಥ ಇತರ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.

ಲೆಕ್ಕಪತ್ರಗಳು ಮತ್ತು ಲೆಕ್ಕ ಪರಿಶೋಧನೆ.-

(1) ಪ್ರಾಧಿಕಾರವು, ಸತ್ಯವಾದ ಮತ್ತು ಸರಿಯಾದ ಲೆಕ್ಕಪತ್ರಗಳನ್ನು ಮತ್ತು ಇತರ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸತಕ್ಕದ್ದು ಮತ್ತು ನಿಯಮಿಸಬಹುದಾದಂಥ ನಮೂನೆಯಲ್ಲಿ ಜಮಾ ಖರ್ಚು ಪಟ್ಟಿಯೂ ಸೇರಿದಂತೆ ವಾರ್ಷಿಕ ಲೆಕ್ಕಪತ್ರಗಳ ಒಂದು ವಿವರ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.

(2) ಪ್ರಾಧಿಕಾರದ ಲೆಕ್ಕಪತ್ರಗಳು, ರಾಜ್ಯ ಲೆಕ್ಕಪತ್ರಗಳ ನಿಯಂತ್ರಕರಿಂದ ವಾರ್ಷಿಕವಾಗಿ ಲೆಕ್ಕಪರಿಶೋಧನೆಗೆ ಒಳಗಾಗತಕ್ಕದ್ದು ಮತ್ತು ರಾಜ್ಯ ಲೆಕ್ಕ ಪತ್ರಗಳ ನಿಯಂತ್ರಕರು ಪ್ರಮಾಣೀಕರಿಸಿದ ಲೆಕ್ಕ ಪತ್ರಗಳನ್ನು, ಅದರ ಲೆಕ್ಕಪರಿಶೋಧನಾ ವರದಿಯ ಜೊತೆಗೆ ವಾರ್ಷಿಕವಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.

[ಪರಿಶೋಧಿತವಾದ ಲೆಕ್ಕಪತ್ರಗಳನ್ನು ಮತ್ತು ವರದಿಯನ್ನು ರಾಜ್ಯ ಸರ್ಕಾರವು ಸ್ವೀಕರಿಸಿದ ತರುವಾಯ ಆದಷ್ಟು ಬೇಗನೆ, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸತಕ್ಕದ್ದು.]

ವಾರ್ಷಿಕ ವರದಿಗಳು.-

ಪ್ರಾಧಿಕಾರವು, ಪ್ರತಿವರ್ಷ ಈ ಅಧಿನಿಯಮದ ಅಡಿಯಲ್ಲಿನ ತನ್ನ ಕಾರ್ಯಚಟುವಟಿಕೆಗಳ ಬಗ್ಗೆ ಆ ವರ್ಷದಲ್ಲಿ ಒಂದು ವರದಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಆ ವರದಿಯನ್ನು ನಿಯಮಿಸಬಹುದಾದಂಥ ನಮೂನೆಯಲ್ಲಿ ಅಂಥ ದಿನಾಂಕದಂದು ಅಥವಾ ಅದಕ್ಕೂ ಮುಂಚೆ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಮತ್ತು ರಾಜ್ಯ ಸರ್ಕಾರವು ಅದನ್ನು ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸುವಂತೆ ಮಾಡತಕ್ಕದ್ದು.

ದಂಡಗಳು.-

(1) ಯಾರೇ ಆಗಲಿ, ಸ್ವಯಿಚ್ಫೆಯಿಂದ ಅಥವಾ ಯುಕ್ತ ಅಧಿಕಾರವಿಲ್ಲದೆ,-

(ಎ) ಕೊಳವೆ ಹೊರಗಂಡಿಯ ಯಾವುದೇ ನೀರಾವರಿ ವ್ಯವಸ್ಥೆಗೆ ಹಾನಿಯುಂಟು ಮಾಡಿದರೆ, ಅದನ್ನು ಬದಲಾಯಿಸಿದರೆ, ವಿಸ್ತರಿಸಿದರೆ ಅಥವಾ ಅದಕ್ಕೆ ಅಡಚಣೆ ಉಂಟುಮಾಡಿದರೆ;

(ಬಿ) ಯಾವುದೇ ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆ ನೀರು ಸರಬರಾಜಿಗೆ ಅಥವಾ ಅದರಿಂದ, ಅದರ ಮೂಲಕ, ಅದರ ಮೇಲೆ ಅಥವಾ ಅದರ ಕೆಳಗೆ ಹರಿಯುವ ನೀರಿಗೆ ಅಡ್ಡಿಪಡಿಸಿದಲ್ಲಿ, ಅದನ್ನು ಹೆಚ್ಚಿಸಿದಲ್ಲಿ ಅಥವಾ ಕಡಿಮೆ ಮಾಡಿದಲ್ಲಿ;

(ಸಿ) ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆಯ ನಿರ್ವಹಣೆಗೆ ಹೊಣೆಗಾರರಾಗಿದ್ದು, ಅದರಲ್ಲಿನ ನೀರು ಪೆÇೀಲಾಗುವುದನ್ನು ತಡೆಯಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಲಕ್ಷಿಸಿದರೆ ಅಥವಾ  ಅದರಿಂದ ನೀರಿನ ಅಧಿಕøತ ವಿತರಣೆಗೆ ಅಡ್ಡಿಪಡಿಸಿದರೆ ಅಥವಾ ನೀರನ್ನು ಅನಧಿಕøತ ರೀತಿಯಲ್ಲಿ ಅಥವಾ ಪಕ್ಕದ ಭೂ ಹಿಡುವಳಿಗೆ ಹಾನಿಯುಂಟಾಗುವಂಥ ರೀತಿಯಲ್ಲಿ ಬಳಸಿದರೆ;

(ಡಿ) ಯಾವುದೇ ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆಯ ನೀರನ್ನು ಸಾಮಾನ್ಯವಾಗಿ ಯಾವ ಉದ್ದೇಶಕ್ಕೆ ಬಳಸಲಾಗುವುದೋ ಆ ಉದ್ದೇಶಕ್ಕಿಂತ ಕಡಿಮೆ ಯೋಗ್ಯವಾಗುವ ಹಾಗೆ ಆ ನೀರನ್ನು ಕಲುಷಿತಗೊಳಿಸಿದರೆ ಅಥವಾ ಮಲಿನಗೊಳಿಸಿದರೆ ;

(ಇ) ಪ್ರಾಧಿಕಾರವು ಅಥವಾ ಒಬ್ಬ ಲೋಕನೌಕರನು ಅಳವಡಿಸಿರುವ ಯಾವುದೇ ಸಮತಲ ಗುರುತುಗಳನ್ನು ಅಥವಾ ಜಲ ಮಾಪಕವನ್ನು ಅಥವಾ ಇತರ ಯಾವುದೇ ಕಾಮಗಾರಿಯನ್ನು ಅಥವಾ ಚಿಹ್ನೆಯನ್ನು ನಾಶಪಡಿಸಿದರೆ, ವಿರೂಪಗೊಳಿಸಿದರೆ ಅಥವಾ ತೆಗೆದು ಹಾಕಿದರೆ; (ಎಫ್) ಕೊಳವೆ ಹೊರಗಂಡಿಯ ಅಥವಾ ಕಾಲುವೆ ವ್ಯವಸ್ಥೆಯಡಿಯಲ್ಲಿನ ಯಾವುದೇ ನೀರಾವರಿ ವ್ಯವಸ್ಥೆಯಲ್ಲಿ ಯಾವುದೇ ತೂಬನ್ನು ಅಥವಾ ಹೊರ ಗಂಡಿಯನ್ನು ಅಥವಾ ಅದೇ ರೀತಿಯ ಯಾವುದೇ ಇತರ ಸಾಧನವನ್ನು ತೆರೆದರೆ, ಮುಚ್ಚಿದರೆ ಅಥವಾ ಅದಕ್ಕೆ ಅಡಚಣೆ ಮಾಡಿದರೆ ಅಥವಾ ತೆರೆಯುವುದಕ್ಕೆ , ಮುಚ್ಚುವುದಕ್ಕೆ ಅಥವಾ ಅಡಚಣೆ ಮಾಡುವುದಕ್ಕೆ ಪ್ರಯತ್ನಿಸಿದರೆ ;

(ಜಿ) ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ಅಧಿಸೂಚನೆಯನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಅಥವಾ ಅನಧಿಕøತವಾಗಿ ನೀರನ್ನು ಬಳಸಿದರೆ ಅಥವಾ ಯಾವುದೇ ಬೆಳೆಯನ್ನು ಬೆಳೆಯಲು ಒಪ್ಪಿದರೆ ಅಥವಾ ಬೆಳೆಯಲು ಅವಕಾಶ ನೀಡಿದರೆ

- ಅಪರಾಧ ನಿರ್ಣಯವಾದ ತರುವಾಯ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಒಂದು ಸಾವಿರ ರೂಪಾಯಿಗಳಿಗೆ ಕಡಿಮೆ ಇಲ್ಲದ, ಆದರೆ ಐದು ಸಾವಿರ ರೂಪಾಯಿವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು: ಪರಂತು, ಅಪರಾಧವು ಮುಂದುವರಿದ ಸಂದರ್ಭದಲ್ಲಿ, ಅಪರಾಧ ಮುಂದುವರಿದ ಅವಧಿಯಲ್ಲಿ ದಿನ ಒಂದಕ್ಕೆ ನೂರು ರೂಪಾಯಿಗಳನ್ನು ಮೀರದ ಜುಲ್ಮಾನೆಯನ್ನು ಸಹ ವಿಧಿಸತಕ್ಕದ್ದು.

(2) (1)ನೇ ಉಪಪ್ರಕರಣದ ಅಡಿಯಲ್ಲಿ ಯಾರೇ ವ್ಯಕ್ತಿಯನ್ನು ಅಪರಾಧಿ ಎಂದು ನಿರ್ಣಯಿಸುವಾಗ, ಮ್ಯಾಜಿಸ್ಟ್ರೇಟನು, ಸದರಿ ವ್ಯಕ್ತಿಯು, ಆದೇಶದಲ್ಲಿ ನಿರ್ದಿಷ್ಟಪಡಿಸಬೇಕಾದ ಅವಧಿಯೊಳಗೆ ಯಾವ ಮಟ್ಟದ ಗುರುತು, ಜಲಮಾಪಕ ಅಥವಾ ಇತರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಪರಾಧ ನಿರ್ಣಯವಾಗಿದೆಯೋ ಅವುಗಳ ಅಪರಾಧದ ಸಂಬಂಧದಲ್ಲಿ ಅಡಚಣೆಯನ್ನು ನಿವಾರಿಸಲು ಅಥವಾ ಹಾನಿಗೊಳಗಾಗಿರುವ ತೂಬನ್ನು ಅಥವಾ ಹೊರಗಂಡಿಯನ್ನು ದುರಸ್ತಿ ಮಾಡಲು ಅಥವಾ ಮಟ್ಟದ ಗುರುತು, ಜಲಮಾಪಕ ಅಥವಾ ಇತರ ಕಾಮಗಾರಿಯನ್ನು ಪುನರ್ ಸ್ಥಾಪಿಸುವಂತೆ ಆದೇಶಿಸಬಹುದು. ಅಂಥ ವ್ಯಕ್ತಿಯು ಹಾಗೆ ನಿಗದಿಪಡಿಸಿದ ಅವಧಿಯೊಳಗೆ ಅಂಥ ಆದೇಶವನ್ನು ಪಾಲಿಸಲು ನಿರ್ಲಕ್ಷಿಸಿದರೆ ಅಥವಾ ನಿರಾಕರಿಸಿದರೆ, ಪ್ರಾಧಿಕಾರವು, ಅಂಥ ಆದೇಶದ ಅನುಸಾರ ಕಾಮಗಾರಿಯನ್ನು ಕಾರ್ಯಗತಗೊಳಿಸಬಹುದು ಮತ್ತು ಅದರ ವೆಚ್ಚವನ್ನು ಅಂಥ ವ್ಯಕ್ತಿಯಿಂದ ಭೂಕಂದಾಯದ ಬಾಕಿಯಂತೆ ವಸೂಲಿ ಮಾಡತಕ್ಕದ್ದು.

ಅನಧಿಕøತವಾಗಿ ನೀರನ್ನು ಬಳಸುತ್ತಿರುವ ವ್ಯಕ್ತಿಯನ್ನು ಕಂಡುಹಿಡಿಯಲಾಗದಿದ್ದಾಗ ಹೊಣೆಗಾರಿಕೆ.-

(1) ಒಂದು ಕ್ಷೇತ್ರ - ಕಾಲುವೆಯ ಮೂಲಕ ಸರಬರಾಜು ಮಾಡಿದ ನೀರನ್ನು ಯಾವುದೇ ಅನಧಿಕøತ ರೀತಿಯಲ್ಲಿ ಬಳಸಿದರೆ, ಮತ್ತು ಯಾರ ಕøತ್ಯ ಅಥವಾ ನಿರ್ಲಕ್ಷ ್ಯದಿಂದ ಅಂಥ ಬಳಕೆಯು ಆಗಿದೆಯೋ ಅವನನ್ನು ಪ್ರಾಧಿಕಾರವು ಪರ್ಯಾಪ್ತವೆಂದು ಭಾವಿಸಬಹುದಾದಂಥ ವಿಚಾರಣೆಯನ್ನು ನಡೆಸಿದ ನಂತರ ಕಂಡುಹಿಡಿಯಲಾಗದಿದ್ದಲ್ಲಿ, ಪ್ರಾಧಿಕಾರವು, ಅದರಿಂದ ಪ್ರಯೋಜನ ಪಡೆದ ಎಲ್ಲ ಭೂಮಿಯ ಹಿಡುವಳಿದಾರರಿಗೆ ಮತ್ತು ಅಧಿಭೋಗದಾರರಿಗೆ ಒಂದು ತಿಂಗಳಿಗೆ ಕಡಿಮೆಯಿಲ್ಲದ ನೋಟೀಸನ್ನು ನೀಡಿದ ತರುವಾಯ ಮತ್ತು ಅವರ ಮನವಿಗಳೇನಾದರೂ ಇದ್ದರೆ, ಅವುಗಳನ್ನು ವಿಚಾರಣೆ ಮಾಡಿದ ನಂತರ ಅಂಥ ಬಳಕೆಗಾಗಿ ನಿಯಮಿಸಬಹುದಾದಷ್ಟು ವೆಚ್ಚವನ್ನು ಅದು ಸೂಕ್ತವೆಂದು ಭಾವಿಸುವಷ್ಟು ಪ್ರಮಾಣದಲ್ಲಿ ಅಂಥ ಹಿಡುವಳಿದಾರರಿಂದ ಮತ್ತು ಅಧಿಭೋಗದಾರರಿಂದ ವಸೂಲಿ ಮಾಡಲು ಒಂದು ಆದೇಶವನ್ನು ಮಾಡಬಹುದು.

(2) (1)ನೇ ಉಪಪ್ರಕರಣದ ಅಡಿಯಲ್ಲಿ ನಿರ್ಧರಿಸಲಾದ ಅನಧಿಕøತ ನೀರಿನ ಬಳಕೆಯ ಎಲ್ಲ ವೆಚ್ಚಗಳನ್ನು ಭೂಕಂದಾಯದ ಬಾಕಿಯಂತೆ ವಸೂಲು ಮಾಡಲು ಅವಕಾಶವಿರತಕ್ಕದ್ದು.

ಅಪರಾಧಗಳಿಗೆ ದುಷ್ಪ್ರೇರಣೆ.-

ಈ ಅಧಿನಿಯಮದ ಮೂಲಕ ಅಥವಾ ಅದರ ಅಡಿಯಲ್ಲಿ ದಂಡನೀಯವಾದ ಯಾವುದೇ ಅಪರಾಧವನ್ನು ಎಸಗುವಂತೆ ಯಾರೇ ವ್ಯಕ್ತಿಯು ದುಷ್ಪ್ರೇರಣೆ ನೀಡಿದಲ್ಲಿ ಅಥವಾ ಅಂಥ ಯಾವುದೇ ಅಪರಾಧ ಮಾಡಲು ಪ್ರಯತ್ನಿಸಿದಲ್ಲಿ, ಅವನನ್ನು ಅಂಥ ಅಪರಾಧಕ್ಕಾಗಿ ಈ ಅಧಿನಿಯಮದ ಮೂಲಕ ಅಥವಾ ಅದರ ಅಡಿಯಲ್ಲಿ ಉಪಬಂಧಿಸಿದ ಶಿಕ್ಷೆಯಿಂದ ದಂಡಿಸತಕ್ಕದ್ದು.

ಇತರ ಕಾನೂನುಗಳ ಅಡಿಯಲ್ಲಿ ಶಿಕ್ಷೆಯನ್ನು ಪ್ರತಿಷೇಧಿಸದಿರುವುದು.-

ಈ ಅಧಿನಿಯಮದಲ್ಲಿ ಇರುವುದು ಯಾವುದೂ, ಯಾರೇ ವ್ಯಕ್ತಿಯ ಮೇಲೆ ಈ ಅಧಿನಿಯಮದ ಮೂಲಕ ಅಥವಾ ಅಡಿಯಲ್ಲಿ ಶಿಕ್ಷಾರ್ಹವಾದ ಯಾವುದೇ ಕøತ್ಯ ಅಥವಾ ಲೋಪಕ್ಕಾಗಿ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಕಾನೂನು ಕ್ರಮ ಜರುಗಿಸದಂತೆ ಮತ್ತು ಶಿಕ್ಷಿಸದಂತೆ ತಡೆಯತಕ್ಕದ್ದಲ್ಲ:  ಪರಂತು, ಒಂದೇ ಅಪರಾಧಕ್ಕಾಗಿ ಯಾರೇ ವ್ಯಕ್ತಿಯ ಮೇಲೆ ಒಂದಕ್ಕಿಂತ ಹೆಚ್ಚು ಬಾರಿ ಕಾನೂನು ಕ್ರಮ ಜರುಗಿಸತಕ್ಕದ್ದಲ್ಲ ಮತ್ತು ದಂಡಿಸತಕ್ಕದ್ದಲ್ಲ.

ಈ ಅಧಿನಿಯಮದ ಅಡಿಯಲ್ಲಿನ ಅಪರಾಧಗಳು ಸಂಜ್ಞೆಯವಾಗಿರುವುದು.-

ಈ ಅಧಿನಿಯಮದ ಅಡಿಯಲ್ಲಿನ ಎಲ್ಲ ಅಪರಾಧಗಳು ಸಂಜ್ಞೇಯವಾಗಿರತಕ್ಕದ್ದು.

ಅಡ್ಡಿಪಡಿಸುವ ವ್ಯಕ್ತಿಯನ್ನು ಹೊರಹಾಕುವ ಮತ್ತು ವಶಕ್ಕೆ ತೆಗೆದುಕೊಳ್ಳುವ ಅಧಿಕಾರ.-

ಯಾವುದೇ ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆ ಪ್ರಭಾರದಲ್ಲಿರುವ ಅಥವಾ ಅದಕ್ಕೆ ನಿಯೋಜಿತನಾಗಿರುವ ಯಾರೇ ಅಧಿಕಾರಿ ಅಥವಾ ಪ್ರಾಧಿಕಾರಿಯ ಅಭಿಪ್ರಾಯದಲ್ಲಿ, ಯಾರೇ ವ್ಯಕ್ತಿಯು,-

(ಎ) ಯಾವುದೇ ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸುತ್ತಾನೆಂದು, ಬದಲಿಸುತ್ತಾನೆಂದು, ವಿಸ್ತರಿಸುತ್ತಾನೆಂದು ಅಥವಾ ಅಡ್ಡಿಪಡಿಸುತ್ತಾನೆಂದು; ಅಥವಾ

(ಬಿ) ಯಾವುದೇ ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆಯಲ್ಲಿ ಅಥವಾ ಅದರಿಂದ ಆಗುವ ನೀರು ಪೂರೈಕೆಯಲ್ಲಿ ಅಥವಾ ಅದರ ಹರಿಯುವಿಕೆಯಲ್ಲಿ ಯುಕ್ತ ಅಧಿಕಾರವಿಲ್ಲದೆ ಅಂಥ ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆಗೆ ಅಡಚಣೆ ಉಂಟುಮಾಡಿದ್ದಾನೆ ಅಥವಾ ಹಾನಿಗೊಳಿಸಿದ್ದಾನೆ ಅಥವಾ ಅದು ಕಡಿಮೆ ಉಪಯುಕ್ತವಾಗುವಂತೆ ಮಾಡಿದ್ದಾನೆಂದು ಅಭಿಪ್ರಾಯ ಪಟ್ಟರೆ - ಅವನನ್ನು ಆ ಜಮೀನಿನಿಂದ ಅಥವಾ ಅದರ ಮೇಲಿನ ಯಾವುದೇ ಕಟ್ಟಡದಿಂದ ಹೊರಹಾಕಬಹುದು ಅಥವಾ ಒಂದು ವಾರಂಟ್ ಇಲ್ಲದೆ ಅವನನ್ನು ವಶಕ್ಕೆ ತೆಗೆದುಕೊಳ್ಳಬಹುದು ಮತ್ತು ಕೂಡಲೇ ತೀರಾ ಹತ್ತಿರದ ಪೆÇಲೀಸ್ ಠಾಣೆಯ ಪ್ರಭಾರದಲ್ಲಿರುವ ಒಬ್ಬ ಪೆÇಲೀಸ್ ಅಧಿಕಾರಿಗೆ ಒಪ್ಪಿಸಬಹುದು: ಪರಂತು, ಹಾಗೆ ವಶಕ್ಕೆ ತೆಗೆದುಕೊಳ್ಳಲಾದ ಪ್ರತಿಯೊಬ್ಬ ವ್ಯಕ್ತಿಯನ್ನು ದಸ್ತಗಿರಿ ಮಾಡಿದ ಸ್ಥಳದಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪ್ರಯಾಣ ಮಾಡಲು ಅಗತ್ಯವಾದ ಅವಧಿಯನ್ನುಳಿದು, ಹಾಗೆ ವಶಕ್ಕೆ ತೆಗೆದುಕೊಂಡ ಇಪ್ಪತ್ನಾಲ್ಕು ಗಂಟೆಗಳ ಅವಧಿಯೊಳಗೆ ತೀರಾ ಹತ್ತಿರದ ಮ್ಯಾಜಿಸ್ಟ್ರೇಟ್‍ನ ಮುಂದೆ ಹಾಜರುಪಡಿಸತಕ್ಕದ್ದು ಮತ್ತು ಅಂಥ ಯಾರೇ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟನ ಅಧಿಕಾರ ನೀಡಿಕೆಯಿಲ್ಲದೆ ಸದರಿ ಅವಧಿಯನ್ನು ಮೀರಿ ಅಭಿರಕ್ಷೆಯಲ್ಲಿ ಇರಿಸಿಕೊಳ್ಳತಕ್ಕದ್ದಲ್ಲ.

ಜುಲ್ಮಾನೆಯನ್ನು ಮಾಹಿತಿದಾರನಿಗೆ ಬಹುಮಾನವಾಗಿ ಕೊಡುವುದು.-

(1) ಈ ಅಧಿನಿಯಮದ ಅಡಿಯಲ್ಲಿ ಯಾರೇ ವ್ಯಕ್ತಿಗೆ ಜುಲ್ಮಾನೆ ವಿಧಿಸಿದಾಗಲೆಲ್ಲ, ಅಂಥ ಜುಲ್ಮಾನೆಯನ್ನು ವಿಧಿಸುವ ಅಥವಾ ಅಪೀಲಿನಲ್ಲಿ ಅಥವಾ ಪುನರೀಕ್ಷಣೆಯಲ್ಲಿ ಅಂಥ ಜುಲ್ಮಾನೆಯ ಶಿಕ್ಷೆಯನ್ನು ಅಥವಾ ಅಂಥ ಜುಲ್ಮಾನೆಯು ಶಿಕ್ಷೆಯ ಒಂದು ಭಾಗವಾಗಿರುವ ಒಂದು ಶಿಕ್ಷೆಯನ್ನು ಸ್ಥಿರೀಕರಿಸುವ ನ್ಯಾಯಾಲಯವು, ಅಂಥ ಅಪರಾಧವನ್ನು ಪತ್ತೆಹಚ್ಚಲು ಅಥವಾ ಅಪರಾಧಿಯ ಅಪರಾಧ ನಿರ್ಣಯಕ್ಕೆ ಎಡೆಮಾಡಿಕೊಡುವ ಮಾಹಿತಿಯನ್ನು ಕೊಟ್ಟ ಯಾರೇ ವ್ಯಕ್ತಿಗೆ ಅಂಥ ಇಡೀ ಜುಲ್ಮಾನೆಯನ್ನು ಅಥವಾ ಅದರ ಒಂದು ಭಾಗವನ್ನು ಬಹುಮಾನದ ರೂಪದಲ್ಲಿ ಸಂದಾಯ ಮಾಡಬಹುದೆಂದು ನಿರ್ದೇಶಿಸಬಹುದು.

(2) ಅಂಥ ಯಾವುದೇ ಜುಲ್ಮಾನೆಯನ್ನು ಬಹುಮಾನವಾಗಿ ಸಂದಾಯ ಮಾಡಬೇಕೆಂದು ಆದೇಶಿಸಿದ ಯಾವುದೇ ನ್ಯಾಯಾಲಯದ ತೀರ್ಮಾನವು ಅಪೀಲಿಗೆ ಒಳಪಟ್ಟಿದ್ದಲ್ಲಿ, ಹಾಗೆ ಸಂದಾಯ ಮಾಡಬೇಕೆಂದು ಆದೇಶಿಸಲಾದ ಆ ಮೊಬಲಗನ್ನು, ಅಪೀಲನ್ನು ಸಲ್ಲಿಸಲು ಗೊತ್ತುಪಡಿಸಲಾದ ಅವಧಿಯು ಕೊನೆಗೊಳ್ಳುವವರೆಗೆ ಅಥವಾ ಒಂದು ಅಪೀಲನ್ನು ಸಲ್ಲಿಸಿದ್ದರೆ ಅದು ವಿಲೇವಾರಿಯಾಗುವ ತನಕ ಸಂದಾಯ ಮಾಡತಕ್ಕದ್ದಲ್ಲ.

ಅಪರಾಧಗಳ ಬಗೆಗಿನ ರಾಜಿ.-

(1) ಪ್ರಾಧಿಕಾರದಿಂದ ಅಧಿಕಾರ ಹೊಂದಿದ ಯಾರೇ ಅಧಿಕಾರಿಯು, ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ರಚಿಸಿದ ನಿಯಮಗಳ ಅಡಿಯಲ್ಲಿ ದಂಡನೀಯವಾದ ಒಂದು ಅಪರಾಧವನ್ನು ಎಸಗಿರುವ ಅಥವಾ ಎಸಗಿದ್ದಾನೆಂದು ಸಂದೇಹ ಪಡಲು ಸೂಕ್ತ ಕಾರಣವಿರುವ ಯಾರೇ ವ್ಯಕ್ತಿಯಿಂದ, ಅಂಥ ಅಪರಾಧಗಳ ಬಗ್ಗೆ ರಾಜಿ ಮಾಡಿಕೊಳ್ಳುವ ಸಲುವಾಗಿ ಎರಡು ನೂರು ರೂಪಾಯಿಗಳನ್ನು ಮೀರದ ಹಣವನ್ನು ಅಂಗೀಕರಿಸಬಹುದು.

(2) ಅಂಥ ಹಣದ ಮೊತ್ತವನ್ನು ಸಂದಾಯ ಮಾಡಿದ ತರುವಾಯ, ಸದರಿ ವ್ಯಕ್ತಿಯು ಅಭಿರಕ್ಷೆಯಲ್ಲಿದ್ದರೆ ಬಿಡುಗಡೆ ಮಾಡತಕ್ಕದ್ದು ಮತ್ತು ಹಾಗೆ ರಾಜಿ ಮಾಡಿಕೊಂಡ ಅಪರಾಧಕ್ಕೆ ಸಂಬಂಧಿಸಿದಂತೆ ಅವನ ವಿರುದ್ಧ ಯಾವುವೇ ಮುಂದಿನ ವ್ಯವಹರಣೆಗಳನ್ನು ಕೈಗೊಳ್ಳತಕ್ಕದ್ದಲ್ಲ.

ನೀರು ಪೂರೈಕೆ ಪ್ರದೇಶಗಳಿಗೆ ಹೊಂದಿಕೊಂಡಿರುವ ಜಮೀನಿನ ಭೂ ಹಿಡುವಳಿದಾರರ ಹೊಣೆಗಾರಿಕೆ.-

ಒಂದು ನೀರು ಪೂರೈಕೆ ಪ್ರದೇಶದಲ್ಲಿನ ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆಯ ಸುರಕ್ಷತೆಗಾಗಿ ಮತ್ತು ಇತರ ತಾಂತ್ರಿಕ ಕಾರಣಗಳಿಗಾಗಿ, ನೀರು ಪೂರೈಕೆ ಪ್ರದೇಶದ ವ್ಯಾಪ್ತಿಯಲ್ಲಿರುವ ಜಮೀನುಗಳ ಪಕ್ಕದಲ್ಲಿರುವ ಭೂಮಿಯಲ್ಲಿ ಸಮಮಟ್ಟ, ಎಲ್ಲೆ ಕಟ್ಟುವಿಕೆ, ಬಸಿಗಾಲುವೆ ಮತ್ತು ಕಂದಕ ತೋಡುವಿಕೆಯಂಥ ಯಾವುವೇ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವೆಂದು ಪರಿಗಣಿಸಿರುವಲ್ಲಿ, ಪ್ರಾಧಿಕಾರವು, ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961 (1962ರ ಕರ್ನಾಟಕ ಅಧಿನಿಯಮ

ಮತ್ತು ಅದರ ಅಡಿಯಲ್ಲಿ ರಚಿಸಿದ ನಿಯಮಗಳ ಅಡಿಯಲ್ಲಿ ಕೈಗೊಳ್ಳಬೇಕೆಂದು ಅಗತ್ಯಪಡಿಸಿದ ಮಣ್ಣು ಸಂರಕ್ಷಣಾ ಕ್ರಮಗಳ ಸಂಬಂಧದಲ್ಲಿ ಎಲ್ಲ ಅಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಚಲಾಯಿಸತಕ್ಕದ್ದು.

ಘಟಕಗಳ ರಚನೆ.-

ಕೊಳವೆ ಹೊರಗಂಡಿ ನೀರು ಪೂರೈಕೆ ಪ್ರದೇಶದಲ್ಲಿ ಇರುವ ಎಲ್ಲ ಜಮೀನುಗಳು,-

(i) ಸಮಗ್ರ ಭೂ ಅಭಿವøದ್ಧಿ; ಮತ್ತು

(ii) ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆಯ ನಿರ್ವಹಣೆಯ ಮತ್ತು ಸುಸ್ಥಿತಿಯ - ಉದ್ದೇಶಗಳಿಗಾಗಿ ಒಂದು ಏಕೈಕ ಘಟಕವಾಗಿರತಕ್ಕದ್ದು.

ಪ್ರವೇಶಿಸುವುದು, ಸರ್ವೆ ಮಾಡುವುದು ಮುಂತಾದ ಅಧಿಕಾರ.-

ಯಾರೇ ಭೂ ಅಭಿವøದ್ಧಿ ಅಧಿಕಾರಿಯು ಅಥವಾ ಈ ಸಂಬಂಧವಾಗಿ ಪ್ರಾಧಿಕಾರವು ಅಧಿಕಾರ ನೀಡಿದ ಯಾರೇ ಇತರ ಅಧಿಕಾರಿಯು, ಸಹಾಯಕರೊಡನೆ ಅಥವಾ ಕೆಲಸಗಾರರೊಡನೆ ಅಥವಾ ಅವರಿಲ್ಲದೆ,-

(ಎ) ವ್ಯವಸ್ಥಿತ ಭೂ ಅಭಿವøದ್ಧಿಗಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಲು ಕೊಳವೆ ಹೊರಗಂಡಿ ನೀರಾವರಿ ವ್ಯವಸ್ಥೆಯ ನೀರು ಪೂರೈಕೆ ಪ್ರದೇಶದಲ್ಲಿರುವ ಯಾವುದೇ ಜಮೀನನ್ನು ಅಥವಾ ಅದರ ಪಕ್ಕದ ಜಮೀನನ್ನು ಪ್ರವೇಶಿಸಬಹುದು ಮತ್ತು ಸರ್ವೆಯನ್ನು ಕೈಗೊಳ್ಳಬಹುದು ಅಥವಾ ಅದರ ಮೇಲೆ ಮಟ್ಟಗಳನ್ನು ತೆಗೆದುಕೊಳ್ಳಬಹುದು;

(ಬಿ) ತಾಂತ್ರಿಕ ಪರಿಶೋಧನೆಗಾಗಿ ಮೇಲ್ಮಣ್ಣನ್ನು ಅಥವಾ ಕೆಳಮಣ್ಣನ್ನು ತೋಡಬಹುದು ಮತ್ತು ಕೊರೆಯಬಹುದು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಬಹುದು;

(ಸಿ) ಸದರಿ ಉದ್ದೇಶಕ್ಕಾಗಿ ಸೂಕ್ತವಾದ ಭೂ ಗುರುತುಗಳನ್ನು ಮತ್ತು ಮಟ್ಟದ ಗುರುತುಗಳನ್ನು ಮಾಡಬಹುದು ಮತ್ತು ಸ್ಥಾಪಿಸಬಹುದು;

(ಡಿ) ಸಮಗ್ರ ಭೂ ಅಭಿವøದ್ಧಿಗಾಗಿ ಈಗಿರುವ ಅಥವಾ ಪ್ರಸ್ತಾವಿಸಿರುವ ಯಾವುದೇ ಯೋಜನೆಗೆ ಸಂಬಂಧಿಸಿದ ಯಾವುದೇ ವಿಚಾರಣೆ ಅಥವಾ ತನಿಖೆಯನ್ನು ಯುಕ್ತವಾಗಿ ನಡೆಸಲು ಅಗತ್ಯವಿರುವ ಎಲ್ಲ ಕಾರ್ಯಗಳನ್ನು ಕೈಗೊಳ್ಳಬಹುದು: ಪರಂತು, ಭೂ ಅಭಿವøದ್ಧಿ ಅಧಿಕಾರಿಯು ಯಾವುದೇ ಕಟ್ಟಡದೊಳಕ್ಕೆ ಅಥವಾ ಒಂದು ವಾಸದ ಮನೆಗೆ ಹೊಂದಿಕೊಂಡಿರುವ ಯಾವುದೇ ಆವøತ ಅಂಗಳದೊಳಕ್ಕೆ ಪ್ರವೇಶಿಸಲು ಉದ್ದೇಶಿಸಿದರೆ, ಅಧಿಭೋಗದಾರನು ಮೌಖಿಕ

ಕೋರಿಕೆಯ ಮೇಲೆ ಪ್ರವೇಶ ನೀಡಲು ನಿರಾಕರಿಸಿದರೆ, ಅವನು, ಅಂಥ ಕಟ್ಟಡದ ಅಥವಾ ಅಂಗಳದ ಅಧಿಭೋಗದಾರನಿಗೆ ತಾನು ಹಾಗೆ ಪ್ರವೇಶಿಸುವ ತನ್ನ ಉದ್ದೇಶದ ಬಗ್ಗೆ ಲಿಖಿತದಲ್ಲಿ ತಿಳಿಸುವ ಕನಿಷ್ಠ ಒಂದು ದಿನದ ನೋಟೀಸನ್ನು ನೀಡತಕ್ಕದ್ದು.

ವಿಧಿಸಬಹುದಾದ ಚಾರ್ಜು.-

ಪ್ರಾಧಿಕಾರವು, ನೀರಾವರಿ ಕಾಲುವೆಗಳನ್ನು ನಿರ್ವಹಿಸುತ್ತಿರುವಲ್ಲಿ ಅಂಥ ನೀರಾವರಿ ಕಾಲುವೆಗಳನ್ನು ಅಥವಾ ಬಸಿ ಕಾಲುವೆಗಳನ್ನು ನಿರ್ವಹಿಸುವುದಕ್ಕಾಗಿ ಮತ್ತು ದುರಸ್ತಿಗೊಳಿಸುವುದಕ್ಕಾಗಿ, ಫಲಾನುಭವಿಗಳಿಗೆ ಚಾರ್ಜುಗಳನ್ನು ವಿಧಿಸಬಹುದು ಮತ್ತು ಅವರಿಂದ ವಸೂಲಿ ಮಾಡಬಹುದು.

ಸೇವೆಗಾಗಿ ಫೀಜುಗಳು.-

ಪ್ರಾಧಿಕಾರವು, ಯಾರೇ ವ್ಯಕ್ತಿಗೆ ಯಾವುದೇ ಸೇವೆಯನ್ನು ಸಲ್ಲಿಸುವುದಕ್ಕಾಗಿ, ಈ ಅಧಿನಿಯಮದ ಅಡಿಯಲ್ಲಿ ರಚಿಸಿದ ನಿಯಮಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಫೀಜುಗಳನ್ನು ವಿಧಿಸಬಹುದು.

ಪ್ರಾಧಿಕಾರದ ಸದಸ್ಯರು ಮತ್ತು ಪ್ರಾಧಿಕಾರದ ಸಿಬ್ಬಂದಿ ಸದಸ್ಯರು ಲೋಕ ನೌಕರರಾಗಿರುವುದು.-

ಪ್ರಾಧಿಕಾರದ ಸದಸ್ಯರು ಮತ್ತು ಪ್ರಾಧಿಕಾರದ ಸಿಬ್ಬಂದಿ ವರ್ಗದವರು, ಈ ಅಧಿನಿಯಮದ ಯಾವುವೇ ಉಪಬಂಧಗಳ ಅನುಸಾರವಾಗಿ ಕಾರ್ಯನಿರ್ವಹಿಸುವಾಗ ಅಥವಾ ಕಾರ್ಯ ನಿರ್ವಹಿಸುವರೆಂದು ತಾತ್ಪರ್ಯವಾಗುವಾಗ, ಅವರನ್ನು ಭಾರತ ದಂಡ ಸಂಹಿತೆ, 1860ರ (1860ರ ಕೇಂದ್ರ ಅಧಿನಿಯಮ 45) 21ನೇ ಪ್ರಕರಣದ ಅರ್ಥವ್ಯಾಪ್ತಿಯೊಳಗೆ ಲೋಕ ನೌಕರರೆಂದು ಭಾವಿಸತಕ್ಕದ್ದು.

ಸದ್ಭಾವನೆಯಿಂದ ಕೈಗೊಂಡ ಕ್ರಮಕ್ಕೆ ರಕ್ಷಣೆ.-

ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ರಚಿಸಿದ ಯಾವುದೇ ನಿಯಮದ ಅನುಸಾರವಾಗಿ ಸದ್ಭಾವನೆಯಿಂದ ಮಾಡಿದ ಅಥವಾ ಹಾಗೆ ತಾತ್ಪರ್ಯವಾಗುವ ಅಥವಾ ಹಾಗೆ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯಕ್ಕಾಗಿ ರಾಜ್ಯ ಸರ್ಕಾರದ, ಪ್ರಾಧಿಕಾರದ ಅಥವಾ ಪ್ರಾಧಿಕಾರದ ಅಧ್ಯಕ್ಷರ ಅಥವಾ ಇತರ ಸದಸ್ಯರ ಅಥವಾ ರಾಜ್ಯ ಸರ್ಕಾರದ ಅಥವಾ ಪ್ರಾಧಿಕಾರದ ಯಾರೇ ಅಧಿಕಾರಿಯ ಅಥವಾ ನೌಕರನ ವಿರುದ್ಧ ಯಾವುದೇ ದಾವೆ, ಪ್ರಾಸಿಕ್ಯೂಷನ್ ಅಥವಾ ಇತರ ಕಾನೂನು ವ್ಯವಹರಣೆಗಳನ್ನು ಹೂಡತಕ್ಕದ್ದಲ್ಲ.

ಭೂ ಕಂದಾಯದ ಬಾಕಿಯಂತೆ ಬಾಕಿಗಳ ವಸೂಲಿ.-

16ನೇ ಪ್ರಕರಣದ (2)ನೇ ಉಪ ಪ್ರಕರಣದ ಅಡಿಯಲ್ಲಿ ಯಾರೇ ಭೂ ಹಿಡುವಳಿದಾರನು, ಸಂದಾಯ ಮಾಡಬೇಕಾದ ಯಾವುದೇ ಮೊತ್ತವು ಬಾಕಿಯಿದ್ದು, ಅಂಥ ಸಂದಾಯಕ್ಕಾಗಿ ಗೊತ್ತುಪಡಿಸಿದ ಸಮಯದೊಳಗೆ ಸಂದಾಯ ಮಾಡದಿದ್ದಾಗ, ಅದನ್ನು, ಭೂ ಕಂದಾಯದ ಬಾಕಿಯನ್ನು ವಸೂಲು ಮಾಡುವ ರೀತಿಯಲ್ಲಿ, ನಿಗದಿಮಾಡಬಹುದಾದಂಥ ದರಗಳಲ್ಲಿ ಬಡ್ಡಿಯೊಂದಿಗೆ ವಸೂಲಿ ಮಾಡತಕ್ಕದ್ದು.

ಕಂಪನಿಗಳಿಂದ ಅಪರಾಧಗಳು.-

(1) ಈ ಅಧಿನಿಯಮದ ಅಡಿಯಲ್ಲಿ ಅಪರಾಧವನ್ನು ಮಾಡುವ ವ್ಯಕ್ತಿಯು ಒಂದು ಕಂಪನಿಯಾಗಿರುವಲ್ಲಿ, ಆ ಅಪರಾಧ ನಡೆದ ಸಮಯದಲ್ಲಿ ಕಂಪನಿಯ ಆಡಳಿತವನ್ನು ಹೊಂದಿದ್ದ ಮತ್ತು ಕಂಪನಿಯ ವ್ಯವಹಾರ ನಡೆಸಲು ಕಂಪನಿಗೆ ಜವಾಬ್ದಾರನಾಗಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನು ಹಾಗೂ ಕಂಪನಿಯನ್ನು ಅಪರಾಧದ ತಪ್ಪಿತಸ್ಥನೆಂದು ಭಾವಿಸತಕ್ಕದ್ದು ಮತ್ತು ತದನುಸಾರವಾಗಿ ಅವನು ತನ್ನ ವಿರುದ್ಧದ ವ್ಯವಹರಣೆಗೆ ಮತ್ತು ದಂಡನೆಗೆ ಗುರಿಯಾಗತಕ್ಕದ್ದು: ಪರಂತು, ಈ ಉಪಪ್ರಕರಣದಲ್ಲಿ ಇರುವುದು ಯಾವುದೂ, ಅಂಥ ಯಾರೇ ವ್ಯಕ್ತಿಯು ಆ ಅಪರಾಧವು ತನಗೆ ತಿಳಿಯದ ಹಾಗೆ ನಡೆಯಿತೆಂದು ಅಥವಾ ಅಂಥ ಅಪರಾಧ ನಡೆಯುವುದನ್ನು ತಪ್ಪಿಸಲು ತಾನು ಎಲ್ಲ ಯುಕ್ತ ಜಾಗರೂಕತೆಯನ್ನು ವಹಿಸಿದ್ದೆನೆಂದು ರುಜುವಾತುಪಡಿಸಿದರೆ ಅವನನ್ನು ಯಾವುದೇ ದಂಡನೆಗೆ ಗುರಿಪಡಿಸತಕ್ಕದ್ದಲ್ಲ.

(2) (1)ನೇ ಉಪಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಈ ಅಧಿನಿಯಮದ ಅಡಿಯಲ್ಲಿನ ಒಂದು ಅಪರಾಧವನ್ನು ಒಂದು ಕಂಪನಿಯು ಮಾಡಿರುವಲ್ಲಿ ಮತ್ತು ಆ ಅಪರಾಧವು ಕಂಪನಿಯ ಯಾರೇ ನಿರ್ದೇಶಕನ, ವ್ಯವಸ್ಥಾಪಕನ, ಕಾರ್ಯದರ್ಶಿಯ ಅಥವಾ ಇತರ ಅಧಿಕಾರಿಯ ಸಮ್ಮತಿಯಿಂದ ಅಥವಾ ಪರೋಕ್ಷ ಸಮ್ಮತಿಯಿಂದ ನಡೆಯಿತೆಂದು ರುಜುವಾತಾದಲ್ಲಿ ಅಥವಾ ಆ ಅಪರಾಧವು ಅವನ ಯಾವುದೇ ನಿರ್ಲಕ್ಷ ್ಯದಿಂದ ನಡೆದಿದೆಯೆಂದು ಆರೋಪಿಸಬಹುದಾಗಿರುವಲ್ಲಿ, ಅಂಥ ನಿರ್ದೇಶಕ, ವ್ಯವಸ್ಥಾಪಕ, ಕಾರ್ಯದರ್ಶಿ ಅಥವಾ ಇತರ ಅಧಿಕಾರಿಯನ್ನು ಸಹ ಆ ಅಪರಾಧದ ತಪ್ಪಿತಸ್ಧನೆಂದು ಭಾವಿಸತಕ್ಕದ್ದು ಮತ್ತು ತನ್ನ ವಿರುದ್ಧದ ವ್ಯವಹರಣೆಗೆ ಗುರಿಯಾಗತಕ್ಕದ್ದು ಮತ್ತು ತದನುಸಾರವಾಗಿ ದಂಡಿತನಾಗತಕ್ಕದ್ದು. ವಿವರಣೆ.- ಈ ಪ್ರಕರಣದ ಉದ್ದೇಶಗಳಿಗಾಗಿ,-

(ಎ) ``ಕಂಪನಿ'' ಎಂದರೆ ಯಾವುದೇ ನಿಗಮಿತ ನಿಕಾಯ ಮತ್ತು ಅದು ಒಂದು ಫರ್ಮನ್ನು ಅಥವಾ ವ್ಯಕ್ತಿಗಳ ಇತರ ಸಂಘವನ್ನು ಒಳಗೊಳ್ಳುತ್ತದೆ; ಮತ್ತು

(ಬಿ) ಫರ್ಮಿನ ಸಂಬಂಧದಲ್ಲಿ ``ನಿರ್ದೇಶಕ'' ಎಂದರೆ ಆ ಫರ್ಮಿನ ಒಬ್ಬ ಪಾಲುದಾರ.

ಸಿವಿಲ್ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಗೆ ಪ್ರತಿಷೇಧ.-

(1) ಈ ಅಧಿನಿಯಮದ ಅಡಿಯಲ್ಲಿ ಒಬ್ಬ ಅಧಿಕಾರಿಯು ಅಥವಾ ಪ್ರಾಧಿಕಾರವು ಹೊರಡಿಸಿದ ಯಾವುದೇ ಆದೇಶವನ್ನು ಅಥವಾ ಕೈಗೊಂಡ ವ್ಯವಹರಣೆಯನ್ನು ಯಾವುದೇ ನ್ಯಾಯಾಲಯದಲ್ಲಿ, ಯಾವುದೇ ದಾವೆಯಲ್ಲಿ ಅಥವಾ ಅರ್ಜಿಯಲ್ಲಿ ಪ್ರಶ್ನಿಸತಕ್ಕದ್ದಲ್ಲ ಮತ್ತು ಈ ಅಧಿನಿಯಮದಿಂದ ಅಥವಾ ಅದರ ಅಡಿಯಲ್ಲಿ ಪ್ರದತ್ತವಾದ ಯಾವುದೇ ಅಧಿಕಾರಕ್ಕೆ ಅನುಸಾರವಾಗಿ ಅಂಥ ಅಧಿಕಾರಿಯು ಅಥವಾ ಪ್ರಾಧಿಕಾರವು ಕೈಗೊಂಡ ಅಥವಾ ಕೈಗೊಳ್ಳಲಿರುವ ಯಾವುದೇ ಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯವು ಯಾವುದೇ ನಿರ್ಬಂಧಕಾಜ್ಞೆ ನೀಡತಕ್ಕದ್ದಲ್ಲ.

(2) ರಾಜ್ಯ ಸರ್ಕಾರದ ಪೂರ್ವಾನುಮೋದನೆಯನ್ನು ಪಡೆಯದೆ, ಈ ಅಧಿನಿಯಮದ ಅಡಿಯಲ್ಲಿ ಮಾಡಿದ ಅಥವಾ ಮಾಡಲಾಗಿದೆಯೆಂದು ತಾತ್ಪರ್ಯವಾಗುವ ಯಾವುದೇ ಕಾರ್ಯಕ್ಕಾಗಿ ರಾಜ್ಯ ಸರ್ಕಾರದ ಯಾರೇ ಅಧಿಕಾರಿ ಅಥವಾ ನೌಕರನ ವಿರುದ್ಧ ಯಾವುದೇ ದಾವೆ, ಪ್ರಾಸಿಕ್ಯೂಷನ್ ಅಥವಾ ಇತರ ವ್ಯವಹರಣೆಯನ್ನು ಹೂಡತಕ್ಕದ್ದಲ್ಲ.

(3) ರಾಜ್ಯ ಸರ್ಕಾರದ ಯಾರೇ ಅಧಿಕಾರಿ ಅಥವಾ ನೌಕರನು, ಈ ಅಧಿನಿಯಮದ ಮೂಲಕ ಅಥವಾ ಅಡಿಯಲ್ಲಿ ವಿಧಿಸಿದ ಕರ್ತವ್ಯಗಳನ್ನು ನಿರ್ವಹಿಸುವ ಅಥವಾ ಪ್ರಕಾರ್ಯಗಳನ್ನು ನೆರವೇರಿಸುವ ಕ್ರಮದಲ್ಲಿ ಸದ್ಭಾವನೆಯಿಂದ ಆ ಕಾರ್ಯವನ್ನು ಕೈಗೊಂಡಿದ್ದರೆ, ಅಂಥ ಯಾವುದೇ ಕಾರ್ಯದ ಸಂಬಂಧದಲ್ಲಿ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವ್ಯವಹರಣೆಯಲ್ಲಿ ಹೊಣೆಯಾಗತಕ್ಕದ್ದಲ್ಲ.

(4) ಈ ಅಧಿನಿಯಮದಲ್ಲಿ ಅನ್ಯಥಾ ಉಪಬಂಧಿಸಿದುದನ್ನುಳಿದು, ಯಾವುದೇ ಕಾರ್ಯದ ಬಗ್ಗೆ ದೂರು ನೀಡಿದ ದಿನಾಂಕದಿಂದ ಆರು ತಿಂಗಳೊಳಗೆ ದಾವೆಯನ್ನು ಹೂಡಿದ್ದ ಹೊರತು, ಕೈಗೊಂಡ ಆ ಯಾವುದೇ ಕಾರ್ಯದ ಸಂಬಂಧದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ದಾವೆಯನ್ನು ಹೂಡತಕ್ಕದ್ದಲ್ಲ.

(5) ರಾಜ್ಯ ಸರ್ಕಾರದ ಯಾರೇ ಅಧಿಕಾರಿಯ ಅಥವಾ ನೌಕರನ ವಿರುದ್ಧ (1)ನೇ ಉಪ ಪ್ರಕರಣದ ಅಡಿಯಲ್ಲಿ ದಾವೆಯನ್ನು ಹೂಡುವ ಸಂದರ್ಭದಲ್ಲಿ, ದಾವೆ ಹೂಡಲು ಉದ್ದೇಶಿಸುವ ವ್ಯಕ್ತಿಯು, ಅಧಿಕಾರಿಗೆ ಅಥವಾ ಸಂದರ್ಭಾನುಸಾರ, ನೌಕರನಿಗೆ ವ್ಯಾಜ್ಯ ಕಾರಣದ ಸಾಕಷ್ಟು ವಿವರಗಳೊಂದಿಗೆ ಉದ್ದೇಶಿತ ದಾವೆಯ ಬಗ್ಗೆ ಕೊನೆ ಪಕ್ಷ ಒಂದು ತಿಂಗಳ ನೋಟೀಸನ್ನು ನೀಡಲು ಬದ್ಧನಾಗಿರತಕ್ಕದ್ದು. ಇದಕ್ಕೆ ತಪ್ಪಿದಲ್ಲಿ, ಅಂಥ ದಾವೆಯು ವಜಾ ಆಗತಕ್ಕದ್ದು.

ಸಾಕ್ಷಿದಾರರನ್ನು ಸಮನು ಮಾಡುವ ಮತ್ತು ವಿಚಾರಣೆ ಮಾಡುವ ಅಧಿಕಾರ.-

ಯಾವುದೇ ವಿಚಾರಣೆ ನಡೆಸಲು ಈ ಅಧಿನಿಯಮದ ಅಡಿಯಲ್ಲಿ ಅಧಿಕಾರ ಪಡೆದ ಯಾರೇ ಅಧಿಕಾರಿಯು, ಸಾಕ್ಷಿದಾರರಿಗೆ ಸಮನು ನೀಡುವುದಕ್ಕೆ ಮತ್ತು ವಿಚಾರಣೆ ಮಾಡುವುದಕ್ಕೆ ಮತ್ತು ದಸ್ತಾವೇಜುಗಳನ್ನು ಹಾಜರುಪಡಿಸುವುದಕ್ಕೆ ಸಂಬಂಧಿಸಿದಂತೆ, ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ (1908ರ ಕೇಂದ್ರ ಅಧಿನಿಯಮ 5) ಅಡಿಯಲ್ಲಿ ಸಿವಿಲ್ ನ್ಯಾಯಾಲಯಕ್ಕೆ ಪ್ರದತ್ತವಾದಂಥ ಎಲ್ಲ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ಅಂಥ ಯಾವುದೇ ವಿಚಾರಣೆಯನ್ನು ಒಂದು ನ್ಯಾಯಿಕ ವ್ಯವಹರಣೆ ಎಂದು ಭಾವಿಸತಕ್ಕದ್ದು.

ಪುನರೀಕ್ಷಣೆ.-

(1) ರಾಜ್ಯ ಸರ್ಕಾರವು, ಯಾವುದೇ ಸಮಯದಲ್ಲಿ ತಾನಾಗಿಯೇ ಅಥವಾ ಆಸಕ್ತನಾದ ಯಾರೇ ವ್ಯಕ್ತಿಯು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಸಲ್ಲಿಸಿದ ಒಂದು ಅರ್ಜಿಯ ಮೇಲೆ, ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಪ್ರಾಧಿಕಾರ ಅಥವಾ ಅದರ ಅಧೀನ ಅಧಿಕಾರಿಯು ಮಾಡಿದ ಯಾವುದೇ ನಿರ್ಣಯ ಅಥವಾ ಆದೇಶ ಅಥವಾ ವ್ಯವಹರಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು, ಅಂಥ ನಿರ್ಣಯ ಅಥವಾ ಆದೇಶ ಅಥವಾ ವ್ಯವಹರಣೆಗಳ ಕಾನೂನುಬದ್ಧತೆ ಅಥವಾ ಔಚಿತ್ಯ ಅಥವಾ ಕ್ರಮಬದ್ಧತೆಯ ಬಗ್ಗೆ ಸ್ವತಃ ಮನದಟ್ಟು ಮಾಡಿಕೊಳ್ಳುವ ಉದ್ದೇಶಕ್ಕಾಗಿ ತರಿಸಿಕೊಳ್ಳಬಹುದು ಮತ್ತು ಪರೀಕ್ಷಿಸಬಹುದು ಮತ್ತು ಯಾವುದೇ ಸಂದರ್ಭದಲ್ಲಿ, ಅಂಥ ಯಾವುದೇ ನಿರ್ಣಯ, ಆದೇಶ ಅಥವಾ ವ್ಯವಹರಣೆಗಳನ್ನು ಮಾರ್ಪಾಟುಗೊಳಿಸಬೇಕೆಂದು, ರದ್ದುಗೊಳಿಸಬೇಕೆಂದು, ವಿಪರ್ಯಯಗೊಳಿಸಬೇಕೆಂದು ಅಥವಾ ಪುನರ್ ಪರಿಶೀಲನೆಗಾಗಿ ಹಿಂದಿರುಗಿಸಬೇಕೆಂದು ಅದಕ್ಕೆ ಕಂಡುಬಂದರೆ, ಅದು ತದನುಸಾರವಾಗಿ ಆದೇಶಗಳನ್ನು ಹೊರಡಿಸಬಹುದು: ಪರಂತು, ಯಾರೇ ವ್ಯಕ್ತಿಗೆ ಮನವಿ ಸಲ್ಲಿಸಲು ಒಂದು ಅವಕಾಶ ನೀಡಿದ ಹೊರತು, ಈ ಉಪ ಪ್ರಕರಣದ ಅಡಿಯಲ್ಲಿ, ಅಂಥ ವ್ಯಕ್ತಿಗೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಯಾವುವೇ ಆದೇಶಗಳನ್ನು ಹೊರಡಿಸತಕ್ಕದ್ದಲ್ಲ.

(2) ರಾಜ್ಯ ಸರ್ಕಾರವು, (1)ನೇ ಉಪಪ್ರಕರಣದ ಅಡಿಯಲ್ಲಿ ತನ್ನ ಅಧಿಕಾರಗಳ ಚಲಾವಣೆಯು, ಇತ್ಯರ್ಥದಲ್ಲಿರುವಾಗ ಅಂಥ ಯಾವುದೇ ನಿರ್ಣಯ, ಆದೇಶ ಅಥವಾ ವ್ಯವಹರಣೆಯ ಜಾರಿಯನ್ನು ತಡೆಹಿಡಿಯಬಹುದು.

ನಿಯಮ ರಚನಾಧಿಕಾರ.-

(1) ರಾಜ್ಯ ಸರ್ಕಾರವು, ಸರ್ಕಾರಿ ರಾಜ್ಯಪತ್ರದಲ್ಲಿ ಪೂರ್ವ ಪ್ರಕಟಣೆಯ ತರುವಾಯ, ಈ ಅಧಿನಿಯಮದ ಎಲ್ಲ ಉದ್ದೇಶಗಳನ್ನು ಅಥವಾ ಯಾವುದೇ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಅಧಿಸೂಚನೆಯ ಮೂಲಕ ನಿಯಮಗಳನ್ನು ರಚಿಸಬಹುದು.

(2) ಈ ಅಧಿನಿಯಮದ ಅಡಿಯಲ್ಲಿ ಒಂದು ನಿಯಮವನ್ನು ಪೂರ್ವಾನ್ವಯ ಪರಿಣಾಮ ಹೊಂದಿರುವಂತೆ ರಚಿಸಬಹುದು ಮತ್ತು ಅಂಥ ಒಂದು ನಿಯಮವನ್ನು ರಚಿಸಿದಾಗ, ಆ ನಿಯಮ ರಚನೆಯ ಬಗ್ಗೆ ಕಾರಣಗಳನ್ನು ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಮುಂದೆ ಮಂಡಿಸುವ ಒಂದು ಹೇಳಿಕೆಯಲ್ಲಿ ನಿರ್ದಿಷ್ಟಪಡಿಸತಕ್ಕದ್ದು.

(3) ಈ ಅಧಿನಿಯಮದ ಅಡಿಯಲ್ಲಿ ರಚಿಸಿದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ನಿಕಟ ತರುವಾಯ, ರಾಜ್ಯ ವಿಧಾನ ಮಂಡಲವು ಅಧಿವೇಶನದಲ್ಲಿದ್ದರೆ ಅದರ ಪ್ರತಿಯೊಂದು ಸದನದ ಮುಂದೆ ಮತ್ತು ಅದು ಅಧಿವೇಶನದಲ್ಲಿಲ್ಲದಿದ್ದರೆ, ಅದರ ನಿಕಟ ತರುವಾಯದ ಒಂದು ಅಧಿವೇಶನದಲ್ಲಿ ಅಥವಾ ಒಂದಾದಮೇಲೊಂದರಂತೆ ಬರುವ ಎರಡು ಅಥವಾ ಹೆಚ್ಚು ಅಧಿವೇಶನಗಳಲ್ಲಿ ಅಡಕವಾಗಬಹುದಾದ ಮೂವತ್ತು ದಿನಗಳ ಒಟ್ಟು ಅವಧಿಯವರೆಗೆ ಇಡತಕ್ಕದ್ದು ಮತ್ತು ಅದನ್ನು ಹಾಗೆ ಇಡಲಾದ ಅಧಿವೇಶನದ ಅಥವಾ ನಿಕಟ ತರುವಾಯದ ಅಧಿವೇಶನದ ಮುಕ್ತಾಯಕ್ಕೆ ಮುಂಚೆ, ಆ ನಿಯಮದಲ್ಲಿ ಯಾವುದೇ ಮಾರ್ಪಾಟನ್ನು ಮಾಡಬೇಕೆಂದು ಅಥವಾ ಆ ನಿಯಮವನ್ನು ರದ್ದುಗೊಳಿಸಬೇಕೆಂದು ಎರಡೂ ಸದನಗಳು ಒಪ್ಪಿದರೆ, ಆ ನಿಯಮವು ಆ ಮಾರ್ಪಾಟು ಅಥವಾ ರದ್ದಿಯಾತಿಯನ್ನು ಅಧಿಸೂಚಿಸಿದ ದಿನಾಂಕದಿಂದ, ಹಾಗೆ ಮಾರ್ಪಾಟು ಹೊಂದಿದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಸಂದರ್ಭಾನುಸಾರ, ರದ್ದಾಗತಕ್ಕದ್ದುಆದರೂ, ಅಂಥ ಯಾವುದೇ ಮಾರ್ಪಾಟು ಅಥವಾ ರದ್ದಿಯಾತಿಯು ಆ ನಿಯಮದ ಅಡಿಯಲ್ಲಿ ಈ ಹಿಂದೆ ಮಾಡಲಾದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕ ಉಂಟುಮಾಡತಕ್ಕದ್ದಲ್ಲ.

(4) ಈ ಅಧಿನಿಯಮದ ಅಡಿಯಲ್ಲಿ ರಚಿಸಿದ ಯಾವುದೇ ನಿಯಮವನ್ನು ಯಾರೇ ವ್ಯಕ್ತಿ ಉಲ್ಲಂಘಿಸಿದ್ದು, ಆ ಉಲ್ಲಂಘನೆಗಾಗಿ ಯಾವುದೇ ವಿಶೇಷ ದಂಡನೆಯನ್ನು ಉಪಬಂಧಿಸಿಲ್ಲದಿರುವಲ್ಲಿ, ಅವನು ಒಂದು ತಿಂಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸದಿಂದ ಅಥವಾ ಐದು ನೂರು ರೂಪಾಯಿವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು: ಪರಂತು, ಆಡಳಿತಗಾರನ ಪೂರ್ವಾನುಮೋದನೆಯಿಲ್ಲದೆ ಈ ಉಪಪ್ರಕರಣದ ಅಡಿಯಲ್ಲಿ ಯಾವುದೇ ಕಾನೂನು ವ್ಯವಹರಣೆಯನ್ನು ಹೂಡತಕ್ಕದ್ದಲ್ಲ.

ವಿನಿಯಮಗಳು.-

ಪ್ರತಿಯೊಂದು ಪ್ರಾಧಿಕಾರವು, ರಾಜ್ಯ ಸರ್ಕಾರದ ಪೂರ್ವಾನುಮೋದನೆ ಪಡೆದು, ಈ ಅಧಿನಿಯಮದ ಅಡಿಯಲ್ಲಿ ತನ್ನ ಪ್ರಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಮಾಡಲು, ಈ ಅಧಿನಿಯಮಕ್ಕೆ ಅಥವಾ ಅದರ ಅಡಿಯಲ್ಲಿ ರಚಿಸಿದ ನಿಯಮಗಳಿಗೆ ಅಸಂಗತವಲ್ಲದ ವಿನಿಯಮಗಳನ್ನು, ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಪೂರ್ವ ಪ್ರಕಟಣೆಯ ತರುವಾಯ ರಚಿಸಬಹುದು.

ರಾಜ್ಯ ಸರ್ಕಾರದಿಂದ ನಿರ್ದೇಶನಗಳು.-

ಪ್ರತಿಯೊಂದು ಪ್ರಾಧಿಕಾರವು ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ, ರಾಜ್ಯ ಸರ್ಕಾರವು ತನಗೆ ನೀಡಬಹುದಾದಂಥ ನಿರ್ದೇಶನಗಳು ಮತ್ತು ಸೂಚನೆಗಳಿಂದ ಮಾರ್ಗದರ್ಶನ ಪಡೆಯತಕ್ಕದ್ದು.

ಅಧಿನಿಯಮವು ಇತರ ಕಾನೂನುಗಳ ಮೇಲೆ ಅಧ್ಯಾರೋಹಿ ಪರಿಣಾಮ ಹೊಂದಿರುವುದು.-

(1) ಈ ಅಧಿನಿಯಮದ ಮತ್ತು ಅದರ ಅಡಿಯಲ್ಲಿ ರಚಿಸಿದ ನಿಯಮಗಳ ಉಪಬಂಧಗಳು, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಅಥವಾ ನ್ಯಾಯಾಲಯದ ಅಥವಾ ಇತರ ಪ್ರಾಧಿಕಾರದ ಯಾವುದೇ ರೂಢಿ, ಆಚರಣೆ ಅಥವಾ ಕರಾರು ಅಥವಾ ಡಿಕ್ರಿ ಅಥವಾ ಆದೇಶದಲ್ಲಿ ಅದರೊಂದಿಗೆ ಅಸಂಗತವಾದದ್ದೇನನ್ನೇ ಒಳಗೊಂಡಿದ್ದರೂ, ಪರಿಣಾಮ ಹೊಂದಿರತಕ್ಕದ್ದು.

(2) ಸಂದೇಹಗಳ ನಿವಾರಣೆಗಾಗಿ, ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಮತ್ತು ಕರ್ನಾಟಕ ನೀರಾವರಿ ಅಧಿನಿಯಮ, 1965ರ ಮತ್ತು ಅವುಗಳ ಅಡಿಯಲ್ಲಿ ರಚಿಸಿದ ನಿಯಮಗಳ ಉಪಬಂಧಗಳು, ಈ ಅಧಿನಿಯಮದ ಉಪಬಂಧಗಳೊಂದಿಗೆ ಅಸಂಗತವಾಗಿಲ್ಲದಿರುವಷ್ಟರ ಮಟ್ಟಿಗೆ ಅನ್ವಯವಾಗತಕ್ಕದ್ದು ಎಂದು ಈ ಮೂಲಕ ಘೋಷಿಸಲಾಗಿದೆ.

ತೊಂದರೆ ನಿವಾರಣಾಧಿಕಾರ.-

(1) ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ತೊಂದರೆ ಉದ್ಭವಿಸಿದರೆ, ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, ತೊಂದರೆಯನ್ನು ನಿವಾರಿಸುವ ಉದ್ದೇಶಕ್ಕಾಗಿ ತನಗೆ ಅವಶ್ಯವೆಂದು ಅಥವಾ ವಿಹಿತವೆಂದು ಕಂಡುಬರಬಹುದಾದಂಥ, ಈ ಅಧಿನಿಯಮದ ಉಪಬಂಧಗಳೊಂದಿಗೆ ಅಸಂಗತವಲ್ಲದಂಥ ಉಪಬಂಧಗಳನ್ನು ರಚಿಸಬಹುದು: ಪರಂತು, ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳ ಮುಕ್ತಾಯದ ತರುವಾಯ, ಈ ಪ್ರಕರಣದ ಅಡಿಯಲ್ಲಿ ಅಂಥ ಯಾವುದೇ ಅಧಿಸೂಚನೆಯನ್ನು ಹೊರಡಿಸತಕ್ಕದ್ದಲ್ಲ.

(2) ಈ ಪ್ರಕರಣದ ಅಡಿಯಲ್ಲಿ ಹೊರಡಿಸಿದ ಪ್ರತಿಯೊಂದು ಅಧಿಸೂಚನೆಯನ್ನು, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸತಕ್ಕದ್ದು, ಮತ್ತು 46ನೇ ಪ್ರಕರಣದ (2)ನೇ ಉಪ ಪ್ರಕರಣದ ಉಪಬಂಧಗಳು ಈ ಅಧಿನಿಯಮದ ಅಡಿಯಲ್ಲಿ ರಚಿಸಿದ ನಿಯಮದ ಸಂಬಂಧದಲ್ಲಿ ಅನ್ವಯವಾಗತಕ್ಕದ್ದು.

1979ರ ಕರ್ನಾಟಕ ಅಧ್ಯಾದೇಶ ಸಂಖ್ಯೆ 21ರ ನಿರಸನ.-

(1) ಕರ್ನಾಟಕ ನೀರು ಪೂರೈಕೆ ಪ್ರದೇಶಾಭಿವøದ್ಧಿ (ಎರಡನೇ) ಅಧ್ಯಾದೇಶ, 1979ನ್ನು (1979ರ ಕರ್ನಾಟಕ ಅಧ್ಯಾದೇಶ ಸಂಖ್ಯೆ 21) ಈ ಮೂಲಕ ನಿರಸನಗೊಳಿಸಲಾಗಿದೆ.

(2) ಹಾಗೆ ನಿರಸಿತವಾಗಿದ್ದರೂ, ಸದರಿ ಅಧ್ಯಾದೇಶದ ಅಡಿಯಲ್ಲಿ ಕೈಗೊಂಡ ಯಾವುದೇ ಕ್ರಮ ಅಥವಾ ಮಾಡಿದ ಯಾವುದೇ ನೇಮಕಾತಿ, ಹೊರಡಿಸಿದ ಅಧಿಸೂಚನೆ, ಆದೇಶ, ರೂಪಿಸಿದ ಯೋಜನೆ, ರಚಿಸಿದ ನಿಯಮ, ನಮೂನೆ ಅಥವಾ ಉಪವಿಧಿಯನ್ನು ಈ ಅಧಿನಿಯಮದ ಅಡಿಯಲ್ಲಿ ಕೈಗೊಳ್ಳಲಾಗಿದೆ, ರಚಿಸಲಾಗಿದೆ ಅಥವಾ ಹೊರಡಿಸಲಾಗಿದೆ ಎಂದು ಭಾವಿಸತಕ್ಕದ್ದು ಮತ್ತು ಸದರಿ ಅಧ್ಯಾದೇಶಕ್ಕೆ ಅದರಲ್ಲಿ ಮಾಡಲಾದ ಯಾವುದೇ ಉಲ್ಲೇಖವನ್ನು ಈ ಅಧಿನಿಯಮಕ್ಕೆ ಮಾಡಲಾದ ಉಲ್ಲೇಖವೆಂದು ಭಾವಿಸತಕ್ಕದ್ದು ಮತ್ತು ಈ ಅಧಿನಿಯಮದ ಅಡಿಯಲ್ಲಿ ಕೈಗೊಂಡ ಯಾವುದೇ ಕ್ರಮದ ಅಥವಾ

ಮಾಡಿದ ಅಥವಾ ಹೊರಡಿಸಲಾದ ನೇಮಕಾತಿ, ಅಧಿಸೂಚನೆ, ಆದೇಶ, ಯೋಜನೆ, ನಿಯಮ, ನಮೂನೆ ಅಥವಾ ಉಪವಿಧಿಯ ಮೂಲಕ ರದ್ದುಗೊಳಿಸಿದ ಹೊರತು ಮತ್ತು ರದ್ದುಗೊಳಿಸುವವರೆಗೆ ತದನುಸಾರವಾಗಿ ಜಾರಿಯಲ್ಲಿರುವುದು ಮುಂದುವರಿಯತಕ್ಕದ್ದು.

ಕೊನೆಯ ಮಾರ್ಪಾಟು : 6/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate