ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ
1973ರ ಅಧಿನಿಯಮ 26.- ರಾಜ್ಯದ ಮುಂಬಯಿ ಮತ್ತು ಹೈದರಾಬಾದ್ ಪ್ರದೇಶಗಳಲ್ಲಿ ಹೊರತು, ಧಾರ್ಮಿಕ
ಮತ್ತು ಧರ್ಮಾರ್ಥ ಇನಾಮುಗಳ ರದ್ದಿಯಾತಿಗಾಗಿ ಉಪಬಂಧ ಕಲ್ಪಿಸಿರುವ ಕಾನೂನುಗಳು ರಾಜ್ಯದಲ್ಲಿ ಈಗಾಗಲೇ
ಜಾರಿಯಲ್ಲಿರುತ್ತವೆ. ಈ ಪ್ರದೇಶಗಳಲ್ಲಿಯೂ ಸಹ ಅಂಥ ಇನಾಮುಗಳನ್ನು ರದ್ದುಪಡಿಸಿ, ಇನಾಮುದಾರನ ಎಲ್ಲ ಅಧಿಕಾರಗಳು,
ಹಕ್ಕುಗಳು ಮತ್ತು ಹಿತಾಸಕ್ತಿಯನ್ನು ಪಡೆದುಕೊಂಡು ಮತ್ತು ಗೇಣಿದಾರರಿಗೆ ಅಧಿಭೋಗದ ಹಕ್ಕುಗಳನ್ನು ಪ್ರದಾನ ಮಾಡುವುದು
ಅವಶ್ಯವಾಗಿರುವುದಾಗಿ ಪರಿಗಣಿಸಲಾಗಿದೆ. ಹೀಗೆ ಪಡೆದುಕೊಳ್ಳುವುದಕ್ಕಾಗಿ ಇನಾಮಿನ ಒಂದು ವರ್ಷದ ನಿವ್ವಳ ಆದಾಯಕ್ಕೆ
ಸಮನಾದ ಮೊಬಲಗನ್ನು ಮಾತ್ರ ಧಾರ್ಮಿಕ ಮತ್ತು ಧರ್ಮಾರ್ಥ ಸಂಸ್ಥೆಯು ಅಸ್ತಿತ್ವದಲ್ಲಿರುವವರೆಗೂ ವಾರ್ಷಿಕವಾಗಿ
ಸಂದಾಯ ಮಾಡಲು ಪ್ರಸ್ತಾಪಿಸಲಾಗಿದೆ.
(ಕರ್ನಾಟಕ ರಾಜ್ಯಪತ್ರ (ವಿಶೇಷ) ಭಾಗ Iಗಿ 2ಎ ದಿನಾಂಕ 15.6.1972ರಲ್ಲಿ ಸಂಖ್ಯೆ 235 ಎಂಬುದಾಗಿ ಪುಟ
ಸಂಖ್ಯೆ 27ರಲ್ಲಿ ಪ್ರಕಟಿಸಲಾಗಿದೆ.)
II
1976ರ ತಿದ್ದುಪಡಿ ಮಾಡುವ ಅಧಿನಿಯಮ 53.- ಮೈಸೂರು (ಮುಂಬಯಿ ಮತ್ತು ಹೈದರಾಬಾದ್ ಪ್ರದೇಶಗಳ)
ಧಾರ್ಮಿಕ ಮತ್ತು ಧರ್ಮಾರ್ಥ ಇನಾಮುಗಳ ರದ್ದಿಯಾತಿ ಅಧಿನಿಯಮ, 1973ರ 16ನೇ ಪ್ರಕರಣದಲ್ಲಿ ವರ್ಷಾಶನವಾಗಿ
ಸಂದಾಯ ಮಾಡಬೇಕಾದ ಪರಿಹಾರದ ಅಗತ್ಯ ಪ್ರಮಾಣವನ್ನು ಭೂ ಕಂದಾಯದ ಇಪ್ಪತ್ತೈದು ಪಟ್ಟು ನೀಡಲು ಉಪಬಂಧ
ಕಲ್ಪಿಸಲಾಗಿದೆ. ಈ ಅಗತ್ಯ ಪ್ರಮಾಣವನ್ನು ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1973ರ ಮೇರೆಗೆ ಅನುಮತಿಸಿದ
ಗೇಣಿಗೆ ಸಮನಾಗಿರುವಂತೆ ಪರಿಷ್ಕರಿಸಲು ಮತ್ತು ರಾಜ್ಯಗಳ ಹೆಸರಿನ ಮಾರ್ಪಾಡಿನ ಪರಿಣಾಮವಾಗಿ ಕೆಲವು ಪ್ರಾಸಂಗಿಕ
ವಿಷಯಗಳಿಗೆ ಸಂಬಂಧಿಸಿದಂತೆ ಸಹ ಬದಲಾವಣೆಗಳನ್ನು ಮಾಡಲು ಪ್ರಸ್ತಾಪಿಸಲಾಗಿದೆ.
(ವಿ.ಸ. ವಿಧೇಯಕ ಸಂಖ್ಯೆ 74ರ 35ರಿಂದ ಪಡೆಯಲಾಗಿದೆ.)
1973ರ [ಕರ್ನಾಟಕ] ಅಧಿನಿಯಮ ಸಂಖ್ಯೆ 26
(ಇದನ್ನು ಮೊದಲು ಹದಿಮೂರನೇ ಡಿಸೆಂಬರ್, 1973ರ 1[ಕರ್ನಾಟಕ]1 ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.)
[ಕರ್ನಾಟಕ] [(ಬೆಳಗಾವಿ ಮತ್ತು ಗುಲ್ಬರ್ಗಾ ಪ್ರದೇಶಗಳ)] ಧಾರ್ಮಿಕ ಮತ್ತು ಧರ್ಮಾರ್ಥ ಇನಾಮುಗಳ ರದ್ದಿಯಾತಿ ಅಧಿನಿಯಮ, 1973
(1973ರ ನವೆಂಬರ್ ಇಪ್ಪತ್ತಾರನೇ ದಿವಸದಂದು ರಾಷ್ಟ್ರಪತಿಯ ಸಮ್ಮತಿಯನ್ನು ಪಡೆಯಲಾಗಿದೆ.)
(1976ರ ಅಧಿನಿಯಮ 53ರ ಮೂಲಕ ತಿದ್ದುಪಡಿಯಾದಂತೆ)
[ಕರ್ನಾಟಕ] ರಾಜ್ಯದ [ಬೆಳಗಾವಿ ಮತ್ತು ಗುಲ್ಬರ್ಗಾ ಪ್ರದೇಶ] ಗಳಲ್ಲಿನ ಧಾರ್ಮಿಕ ಮತ್ತು ಧರ್ಮಾರ್ಥ ಇನಾಮುಗಳ ರದ್ದಿಯಾತಿಗಾಗಿ ಉಪಬಂಧ ಕಲ್ಪಿಸುವ ಒಂದು ಅಧಿನಿಯಮ.
1
[ಕರ್ನಾಟಕ] ರಾಜ್ಯದ [ಬೆಳಗಾವಿ ಮತ್ತು ಗುಲ್ಬರ್ಗಾ ಪ್ರದೇಶ] ಗಳಲ್ಲಿನ ಧಾರ್ಮಿಕ ಮತ್ತು ಧರ್ಮಾರ್ಥ
ಇನಾಮುಗಳ ರದ್ದಿಯಾತಿಗಾಗಿ ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಷಯಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಉಪಬಂಧ ಕಲ್ಪಿಸುವುದು ವಿಹಿತವಾಗಿರುವುದರಿಂದ;
ಇದು ಭಾರತ ಗಣರಾಜ್ಯದ ಇಪ್ಪತ್ನಾಲ್ಕನೇ ವರ್ಷದಲ್ಲಿ [ಕರ್ನಾಟಕ] ರಾಜ್ಯ ವಿಧಾನ ಮಂಡಲದಿಂದ ಈ
ಕೆಳಕಂಡಂತೆ ಅಧಿನಿಯಮಿತವಾಗತಕ್ಕದ್ದು:-
(1) ಈ ಅಧಿನಿಯಮವನ್ನು [ಕರ್ನಾಟಕ] [(ಬೆಳಗಾವಿ ಮತ್ತು ಗುಲ್ಬರ್ಗಾ ಪ್ರದೇಶಗಳ)] ಧಾರ್ಮಿಕ ಮತ್ತು ಧರ್ಮಾರ್ಥ ಇನಾಮುಗಳ ರದ್ದಿಯಾತಿ ಅಧಿನಿಯಮ, 1973 ಎಂದು ಕರೆಯತಕ್ಕದ್ದು.
(2) ಇದು, [ಕರ್ನಾಟಕ] ರಾಜ್ಯದ [ಬೆಳಗಾವಿ ಮತ್ತು ಗುಲ್ಬರ್ಗಾ ಪ್ರದೇಶ] ಗಳಿಗೆ ವ್ಯಾಪ್ತವಾಗುತ್ತದೆ.
(3) ಇದು, [ಕರ್ನಾಟಕ] ರಾಜ್ಯದ [ಬೆಳಗಾವಿ ಮತ್ತು ಗುಲ್ಬರ್ಗಾ ಪ್ರದೇಶ]1 ಗಳಲ್ಲಿರುವ ಧಾರ್ಮಿಕ ಮತ್ತು
ಧರ್ಮಾರ್ಥ ಸಂಸ್ಥೆಗಳು ಹೊಂದಿರುವ ಇನಾಮುಗಳಿಗೆ ಅಥವಾ ಅವುಗಳ ಪ್ರಯೋಜನಕ್ಕೆ ಅನ್ವಯಿಸುತ್ತದೆ. ಆದರೆ, ಶಾಲೆಗಳು,
ಕಾಲೇಜುಗಳು, ಆಸ್ಪತ್ರೆಗಳು, ಔಷಧಾಲಯಗಳು, ಧಾರ್ಮಿಕ ಮತ್ತು ಧರ್ಮಾರ್ಥ ಸಂಸ್ಥೆಗಳು ಅಥವಾ ಯಾವುವೇ ಲಾಭಗಳನ್ನು ಪಡೆಯಲು ಉದ್ದೇಶಿಸಿರದ ಇತರ ಸಾರ್ವಜನಿಕ ಕಾಮಗಾರಿಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು ಮಂಜೂರು ಮಾಡಿದ ಉಚಿತ ಕಂದಾಯ ನಿವೇಶನಗಳಿಗೆ ಅನ್ವಯಿಸುವುದಿಲ್ಲ.
(4) ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸ ಬಹುದಾದಂಥ [ದಿನಾಂಕ]2
ದಂದು ಇದು ಜಾರಿಗೆ ಬರತಕ್ಕದ್ದು.
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. ಅಧಿನಿಯಮವನ್ನು ಜಾರಿಗೊಳಿಸಿರುವ ಅಧಿಸೂಚನೆಯು ಲಭ್ಯವಿರುವುದಿಲ್ಲ.
(1) ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ``ಅಧಿನಿಯಮ'' ಎಂದರೆ [ಕರ್ನಾಟಕ] ಭೂ ಕಂದಾಯ ಅಧಿನಿಯಮ, 1964 (1964ರ ಕರ್ನಾಟಕ
ಅಧಿನಿಯಮ 12) ಎಂದು ಅರ್ಥ;
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(ಬಿ) ``ಗೊತ್ತುಪಡಿಸಿದ ದಿನಾಂಕ'' ಎಂದರೆ 1ನೇ ಪ್ರಕರಣದ (4)ನೇ ಉಪಪ್ರಕರಣದ ಮೇರೆಗೆ ಗೊತ್ತುಪಡಿಸಿದ
ದಿನಾಂಕ ಎಂದು ಅರ್ಥ;
(ಸಿ) ``ಬೆಳಗಾವಿ ಮತ್ತು ಗುಲ್ಬರ್ಗಾ ಪ್ರದೇಶಗಳು'' ಎಂದರೆ ರಾಜ್ಯಗಳ ಪುನಾರಚನೆ ಅಧಿನಿಯಮ, 1956 (1956ರ
ಕೇಂದ್ರಾಧಿನಿಯಮ 37)ರ 7ನೇ ಪ್ರಕರಣದ (1)ನೇ ಉಪಪ್ರಕರಣದ (ಬಿ) ಮತ್ತು (ಸಿ) ಖಂಡಗಳಲ್ಲಿ ಉಲ್ಲೇಖಿಸಿದ
ಪ್ರದೇಶಗಳು ಎಂದು ಅರ್ಥ;
(ಡಿ) ``ಜಿಲ್ಲಾಧಿಕಾರಿ'' ಎಂಬುದರಲ್ಲಿ ಈ ಅಧಿನಿಯಮದ ಮೇರೆಗೆ ಜಿಲ್ಲಾಧಿಕಾರಿಯ ಅಧಿಕಾರಗಳನ್ನು ಚಲಾಯಿಸಲು,
ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆಯ ಮೂಲಕ ಅಧಿಕೃತಗೊಳಿಸಿದ ಉಪವಿಭಾಗಾಧಿಕಾರಿ
ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಯಾರೇ ಅಧಿಕಾರಿಯನ್ನು ಒಳಗೊಳ್ಳುತ್ತದೆ;
(ಇ) ``ಇನಾಮು'' ಎಂಬುದು ಒಂದು ಇನಾಮು ಗ್ರಾಮ ಮತ್ತು ಅದು ಒಂದು ಸಣ್ಣ ಇನಾಮನ್ನು ಒಳಗೊಳ್ಳುತ್ತದೆ;
(ಎಫ್) ``ಇನಾಮುದಾರ'' ಎಂದರೆ ಇನಾಮಿನ ಒಡೆತನ ಹೊಂದಿರುವ ಧಾರ್ಮಿಕ ಮತ್ತು ಧರ್ಮಾರ್ಥ ಸಂಸ್ಥೆ
ಎಂದು ಅರ್ಥ;
(ಜಿ) ``ಇನಾಮು ಭೂಮಿ'' ಎಂದರೆ ಧಾರ್ಮಿಕ ಮತ್ತು ಧರ್ಮಾರ್ಥ ಸಂಸ್ಥೆ ಅಥವಾ ಅದರ ಪರವಾಗಿ ಇನಾಮಾಗಿ
ಹೊಂದಿರುವ ಭೂಮಿ ಎಂದು ಅರ್ಥ ಮತ್ತು ಇದರಲ್ಲಿ ಮಷ್‍ರತ್ -ಉಲ್ - ಕಿದ್ಮತ್ ಮದತ್-ಎ-ಮಷ್ ಎಂಬಂತೆ
ಹೊಂದಿರುವ ಭೂಮಿ ಮತ್ತು ವಕ್ಫ್-ಎ-ತಮಲ್ ಮತ್ತು ವಕ್ಫ್-ಇ-ನಾಮಾ ಎಂಬುದಾಗಿ ದತ್ತಿ ನೀಡಿದ ಭೂಮಿಗಳನ್ನು ಸಹ
ಒಳಗೊಳ್ಳುತ್ತವೆ;
(ಎಚ್) ``ಇನಾಮು ಗ್ರಾಮ'' ಎಂದರೆ ಧಾರ್ಮಿಕ ಅಥವಾ ಧರ್ಮಾರ್ಥ ಸಂಸ್ಥೆಗಳು ಅಥವಾ ಇವುಗಳ ಪರವಾಗಿ
ಒಂದು ಇನಾಮು ಆಗಿ ಹೊಂದಿರುವ ಒಂದು ಗ್ರಾಮ ಅಥವಾ ಗ್ರಾಮದ ಭಾಗ ಅಥವಾ ಸಣ್ಣ ಹಳ್ಳಿ ಅಥವಾ ಖಂದ್ರಿಗ ಎಂದು
ಅರ್ಥ;
(ಐ) ``ಭೂ ದಾಖಲೆಗಳು'' ಎಂದರೆ ಅಧಿನಿಯಮದ ಅಥವಾ ಈ ಅಧಿನಿಯಮದ ಉದ್ದೇಶಗಳಿಗಾಗಿ
ಸುಸಂಗತವಾಗಿರುವ ಯಾವುದೇ ಇತರ ಕಾನೂನಿನ ಉಪಬಂಧಗಳಡಿ ಅಥವಾ ಉದ್ದೇಶಗಳಿಗಾಗಿ ಇಟ್ಟುಕೊಂಡು ಬಂದಿರುವ
ದಾಖಲೆಗಳು;
(ಜೆ) ``ಸಣ್ಣ ಇನಾಮು'' ಎಂದರೆ ಒಂದು ಇನಾಮು ಗ್ರಾಮವನ್ನು ಹೊರತುಪಡಿಸಿ, ಪರಭಾರೆ ಮಾಡಿದ ಅಥವಾ
ಪರಭಾರೆ ಮಾಡದ ಒಂದು ಗ್ರಾಮದಲ್ಲಿ ಇರುವ, ಒಂದು ಪರಭಾರೆ ಮಾಡಿದ ಹಿಡುವಳಿ ಎಂದು ಅರ್ಥ;
(ಕೆ) ``ಖಾಯಂ ಗೇಣಿದಾರ'' ಎಂದರೆ ಈ ಅಧಿನಿಯಮದ ಮೇರೆಗೆ ಕೃಷಿಯ ಉದ್ದೇಶಗಳಿಗಾಗಿ ಬಳಸಿದ
ಯಾವುದೇ ಭೂಮಿಯ ಸಂಬಂಧದಲ್ಲಿ ಗೇಣಿದಾರಿಕೆಗೆ ಹಕ್ಕುಳ್ಳವನಾಗಿರುವ ವ್ಯಕ್ತಿಯಾಗಿದ್ದು, ಆತನ ಗೇಣಿ ಅವಧಿಯು
ಇನಾಮುದಾರನ ಕಾಲಾವಧಿಯೊಂದಿಗೆ ಸಹವ್ಯಾಪ್ತವಾಗಿರುತ್ತದೆ, ಆದರೆ, ಇನಾಮುದಾರನು ಧಾರ್ಮಿಕ ಆರಾಧನೆಯ
ಸಂಸ್ಥೆಯಾಗಿರುವಲ್ಲಿ, ಪೂಜಾರಿ, ಅರ್ಚಕ, ಮುಲ್ಲಾ, ಖಾಜಿ, ಮುತಾವಲ್ಲಿ, ಮುತ್ಸದ್ದಿ, ಪಾದ್ರಿಯಾಗಿ ಆ ಸಂಸ್ಥೆಯಲ್ಲಿ ಧಾರ್ಮಿಕ
ಸೇವೆ ಸಲ್ಲಿಸುತ್ತಿರುವ ಅಥವಾ ಅದನ್ನು ನಿರ್ವಹಿಸಿಕೊಂಡು ಬರುತ್ತಿರುವ ವ್ಯಕ್ತಿ ಅಥವಾ ಯಾವುದೇ ಹೆಸರಿನಿಂದ ಕರೆಯಲ್ಪಡುವ
ಅದೇ ರೀತಿಯ ಅಧಿಕಾರ ಸ್ಥಾನ ಹೊಂದಿರುವ ಅಥವಾ ಯಾವುದೇ ಅಂಥ ಸಂಸ್ಥೆಯಲ್ಲಿ ಯಾವುದೇ ಸೇವೆಯನ್ನು
ಸಲ್ಲಿಸುತ್ತಿದ್ದು ಅಂಥ ಜಮೀನಿನ ಸಂಬಂಧದಲ್ಲಿ ಆ ಸಂಸ್ಥೆಗೆ ಅಂಥ ಹಣದ ರೂಪದಲ್ಲಿ ಅಥವಾ ಯಾವುದೇ ವಿಧದಲ್ಲಿ
ಗೇಣಿಯನ್ನು ಸಂದಾಯ ಮಾಡದೆಯೇ ಅಂಥ ಸಂಸ್ಥೆಯ ಇನಾಮಿನಲ್ಲಿ ಒಳಗೊಂಡಿರುವ ಯಾವುದೇ ಜಮೀನಿನ
ಪ್ರಯೋಜನವನ್ನು ಅನುಭವಿಸುತ್ತಿರುವ ವ್ಯಕ್ತಿಯನ್ನು ಒಳಗೊಳ್ಳತಕ್ಕದ್ದಲ್ಲ;
(ಎಲ್) ``ಸಂರಕ್ಷಿತ ಗೇಣಿದಾರ'' ಎಂದರೆ ಒಂದು ಇನಾಮಿನಲ್ಲಿ ಒಳಗೊಂಡಿರುವ ಯಾವುದೇ ಭೂಮಿಯನ್ನು
ಗೊತ್ತುಪಡಿಸಿದ ದಿನಾಂಕಕ್ಕೆ ಮುಂಚೆ ಹನ್ನೆರಡು ವರ್ಷಗಳಿಗಿಂತ ಕಡಿಮೆಯಲ್ಲದ ಅವಧಿಯವರೆಗೆ ನಿರಂತರವಾಗಿ ಹೊಂದಿದ್ದು
ಮತ್ತು ಖುದ್ದಾಗಿ ಸಾಗುವಳಿ ಮಾಡಿದ್ದರೆ, ಅಂಥ ಗೇಣಿದಾರ ಎಂದು ಅರ್ಥ; ಮತ್ತು
[ಕರ್ನಾಟಕ] ಭೂ ಸುಧಾರಣಾ ಅಧಿನಿಯಮ, 1961 (1962ರ [ಕರ್ನಾಟಕ] ಅಧಿನಿಯಮ 10) ಜಾರಿಗೆ
ಬರುವುದಕ್ಕೂ ಮುಂಚೆ,-
(i) [ಬೆಳಗಾವಿ ಪ್ರದೇಶದಲ್ಲಿ], ಆ ಪ್ರದೇಶದಲ್ಲಿ ಜಾರಿಯಲ್ಲಿದ್ದಂತೆ ಮುಂಬಯಿ ಗೇಣಿದಾರಿಕೆ ಮತ್ತು ಕೃಷಿ
ಜಮೀನುಗಳ ಅಧಿನಿಯಮ, 1948ರ ಮೇರೆಗೆ ಸಂರಕ್ಷಿತ ಗೇಣಿದಾರನೆಂಬುದಾಗಿ ಮಾನ್ಯ ಮಾಡಲಾದ ಒಬ್ಬ ವ್ಯಕ್ತಿಯನ್ನು;
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(ii) [ಗುಲ್ಬರ್ಗಾ ಪ್ರದೇಶದಲ್ಲಿ], ಆ ಪ್ರದೇಶದಲ್ಲಿ ಜಾರಿಯಲ್ಲಿದ್ದಂತೆ ಹೈದರಾಬಾದ್ ಗೇಣಿದಾರಿಕೆ ಮತ್ತು ಕೃಷಿ
ಜಮೀನುಗಳ ಅಧಿನಿಯಮ, 1950ರ ಮೇರೆಗೆ ಸಂರಕ್ಷಿತ ಗೇಣಿದಾರನೆಂಬುದಾಗಿ ಭಾವಿಸಲಾಗಿದ್ದ ಒಬ್ಬ ವ್ಯಕ್ತಿಯನ್ನು
- ಒಳಗೊಳ್ಳುತ್ತದೆ.
ಆದರೆ, ಇನಾಮುದಾರನು, ಧಾರ್ಮಿಕ ಆರಾಧನೆಯ ಸಂಸ್ಥೆಯವನಾಗಿರುವಲ್ಲಿ, ಪೂಜಾರಿ, ಅರ್ಚಕ, ಮುಲ್ಲಾ, ಖಾಜಿ,
ಮುತಾವಲ್ಲಿ, ಮುತ್ಸದ್ದಿ, ಪಾದ್ರಿಯಾಗಿ ಆ ಸಂಸ್ಥೆಯಲ್ಲಿ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ ಅಥವಾ ಅದನ್ನು ನಿರ್ವಹಿಸಿಕೊಂಡು
ಬರುತ್ತಿರುವ ವ್ಯಕ್ತಿ ಅಥವಾ ಯಾವುದೇ ಹೆಸರಿನಿಂದ ಕರೆಯಲ್ಪಡುವ ಅದೇ ರೀತಿಯ ಅಧಿಕಾರ ಸ್ಥಾನ ಹೊಂದಿರುವ ಅಥವಾ
ಯಾವುದೇ ಅಂಥ ಸಂಸ್ಥೆಯಲ್ಲಿ ಯಾವುದೇ ಸೇವೆಯನ್ನು ಸಲ್ಲಿಸುತ್ತಿದ್ದ ಅಂಥ ಜಮೀನಿನ ಸಂಬಂಧದಲ್ಲಿ ಆ ಸಂಸ್ಥೆಗೆ ಹಣದ
ರೂಪದಲ್ಲಿ ಅಥವಾ ಯಾವುದೇ ಅಂಥ ವಿಧದಲ್ಲಿ ಗೇಣಿಯನ್ನು ಸಂದಾಯ ಮಾಡದೆಯೇ, ಅಂಥ ಸಂಸ್ಥೆಯ ಇನಾಮಿನಲ್ಲಿ
ಒಳಗೊಂಡಿರುವ ಯಾವುದೇ ಜಮೀನಿನ ಪ್ರಯೋಜನವನ್ನು ಅನುಭವಿಸುತ್ತಿರುವ ವ್ಯಕ್ತಿಯನ್ನು ಒಳಗೊಳ್ಳತಕ್ಕದ್ದಲ್ಲ.
1. 1976ರ ಅಧಿನಿಯಮ ಸಂಖ್ಯೆ 53ರ ಮೇರೆಗೆ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
ವಿವರಣೆ.- (1) ಈ ಖಂಡದ ಮೇರೆಗೆ ಹನ್ನೆರಡು ವರ್ಷಗಳ ಅವಧಿಯನ್ನು ಲೆಕ್ಕ ಮಾಡುವಲ್ಲಿ ಗೇಣಿದಾರನು
ವಾರಸುದಾರನಾಗಿ ಅಥವಾ ಅವನ ಉತ್ತರಾಧಿಕಾರಿಯಾಗಿ ಬೇರೊಬ್ಬ ವ್ಯಕ್ತಿಯಿಂದ ಜಮೀನನ್ನು ಹೊಂದಿದವನಾಗಿದ್ದರೆ ಅಥವಾ
ಆತನು ಗೇಣಿದಾರನಾಗಿ ಅಂಥ ಜಮೀನನ್ನು ಹೊಂದಿದ್ದು ಮತ್ತು ಅಂಥ ವ್ಯಕ್ತಿಗೆ ವಾರಸುದಾರನಾಗಿದ್ದರೆ, ಅಂಥ ಇತರ
ವ್ಯಕ್ತಿಯು ಗೇಣಿದಾರನಾಗಿ ಅಂಥ ಜಮೀನನ್ನು ಹೊಂದಿದ ಕಾಲಾವಧಿಯನ್ನು ಸೇರಿಸತಕ್ಕದ್ದು.
(2) ಈ ಖಂಡದ ಮೇರೆಗೆ ಹನ್ನೆರಡು ವರ್ಷಗಳ ಅವಧಿಯನ್ನು ಲೆಕ್ಕ ಮಾಡುವಲಿ,್ಲ ಜಮೀನನ್ನು ಹೊಂದಿರುವ
ಗೇಣಿದಾರನು ತಾನು ಖುದ್ದಾಗಿ ಸಾಗುವಳಿ ಮಾಡುತ್ತಿದ್ದ ಅದೇ ಗ್ರಾಮದಲ್ಲಿನ ಯಾವುದೇ ಇತರ ಜಮೀನನ್ನು ಅದೇ ಭೂ
ಮಾಲೀಕನಿಂದ ಗೊತ್ತುಪಡಿಸಿದ ದಿನಾಂಕಕ್ಕೆ ಮುಂಚಿನ ಹನ್ನೆರಡು ವರ್ಷಗಳೊಳಗಿನ ಯಾವುದೇ ಕಾಲದಲ್ಲಿ ಗೇಣಿದಾರನಾಗಿ
ಅದನ್ನು ಹೊಂದಿದ್ದರೆ, ಆತನು ಅಂಥ ಇತರ ಜಮೀನನ್ನು ಹೊಂದಿದ್ದ ಕಾಲಾವಧಿಯನ್ನು ಸೇರಿಸತಕ್ಕದ್ದು;
(3) ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ಜಂಟಿಯಾಗಿ ಯಾವುದೇ ಜಮೀನನ್ನು ಗೇಣಿದಾರರಾಗಿ ಹೊಂದಿರುವಲ್ಲಿ,
ಅಂಥ ಎಲ್ಲ ವ್ಯಕ್ತಿಗಳನ್ನು, ಅವರಲ್ಲಿ ಯಾರಾದರೊಬ್ಬನು ಸ್ವತಃ ಅಂಥ ಜಮೀನನ್ನು ಸಾಗುವಳಿ ಮಾಡುತ್ತಿದ್ದು ಮತ್ತು ಸಾಗುವಳಿ
ಮಾಡುವುದನ್ನು ಮುಂದುವರಿಸಿದ್ದರೆ, ಅಂಥ ಜಮೀನಿನ ಸಂಬಂಧದಲ್ಲಿ ಸಂರಕ್ಷಿತ ಗೇಣಿದಾರರು ಎಂಬುದಾಗಿ ಭಾವಿಸತಕ್ಕದ್ದು;
(4) ಗೇಣಿದಾರನು, ಯಾವುದೇ ತಾತ್ಕಾಲಿಕ ಅಸಮರ್ಥತೆಯ ಕಾರಣದಿಂದ ಜಮೀನನ್ನು ಒಳ ಗೇಣಿಗೆ ನೀಡಿದ್ದರೆ,
ಸಂರಕ್ಷಿತ ಗೇಣಿದಾರನ ಹಕ್ಕುಗಳನ್ನು ಅವನು ಪಡೆದುಕೊಳ್ಳುವ ಉದ್ದೇಶಕ್ಕಾಗಿ, ಒಳಗೇಣಿಯ ಅವಧಿಯಲ್ಲಿ ಅದರ ಸ್ವಾಧೀನದಲ್ಲಿ
ಮುಂದುವರೆದಿರುವವನಾಗಿ ಮತ್ತು ಸ್ವತಃ ಸಾಗುವಳಿ ಮಾಡುತ್ತಿರುವುದಾಗಿ ಭಾವಿಸತಕ್ಕದ್ದು;
(ಎಂ) ``ಗೊತ್ತುಪಡಿಸಲಾದುದು'' ಎಂದರೆ ಈ ಅಧಿನಿಯಮದ ಮೇರೆಗೆ ರಚಿಸಿದ ನಿಯಮಗಳ ಮೂಲಕ
ಗೊತ್ತುಪಡಿಸಲಾದುದು ಎಂದು ಅರ್ಥ;
(ಎನ್) ``ಧಾರ್ಮಿಕ ಅಥವಾ ಧರ್ಮಾರ್ಥ ಇನಾಮು'' ಎಂದರೆ ಧಾರ್ಮಿಕ ಅಥವಾ ಧರ್ಮಾರ್ಥ ಸಂಸ್ಥೆಗೆ
ಅಥವಾ ಅದರ ಪ್ರಯೋಜನಕ್ಕಾಗಿ ನೀಡಿರುವ ಗ್ರಾಮ, ಗ್ರಾಮದ ಭಾಗ ಅಥವಾ ಭೂ ಕಂದಾಯದ ಸಂದಾಯದಿಂದ ಪೂರ್ಣ
ಅಥವಾ ಭಾಗಶಃ ವಿನಾಯಿತಿ ಪಡೆದ ಭೂಮಿ, ಮತ್ತು,-
(i) ಭೂ ಕಂದಾಯಕ್ಕೆ ಸಂಬಂಧಿಸಿದಂತೆ [ಬೆಳಗಾವಿ ಪ್ರದೇಶದಲ್ಲಿ] ಕಾನೂನಿನ ಮೇರೆಗೆ ಇಟ್ಟುಕೊಂಡು
ಬಂದಿರುವ ಪರಭಾರೆ ರಿಜಿಸ್ಟರಿನಲ್ಲಿ ಅಥವಾ ಇನಾಮು ರಿಜಿಸ್ಟರಿನಲ್ಲಿ; ಮತ್ತು
(ii) ಹೈದರಾಬಾದ್ ದತ್ತಿ ವಿನಿಯಮನ, 1958ರ ಫಸಲಿ ಮೇರೆಗೆ [ಗುಲ್ಬರ್ಗಾ ಪ್ರದೇಶದಲ್ಲಿ] ಇಟ್ಟುಕೊಂಡು
ಬಂದಿರುವ ದತ್ತಿಗಳ ಪುಸ್ತಕದಲ್ಲಿ ಅಥವಾ ಭೂ ದಾಖಲೆಗಳಲ್ಲಿ ಧಾರ್ಮಿಕ ಅಥವಾ ಧಮಾರ್ಥ
ಇನಾಮುಗಳೆಂದು (ಯಾವುದೇ ಹೆಸರಿನಿಂದ ಕರೆಯಲಾಗುತ್ತಿದ್ದಾಗ್ಯೂ) ದಾಖಲಾಗಿರುವಂಥವು.
1.1976ರ ಅಧಿನಿಯಮ ಸಂಖ್ಯೆ 53ರ ಮೇರೆಗೆ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
ವಿವರಣೆ.- ಯಾವುದೇ ಅನುದಾನವು ಧಾರ್ಮಿಕ ಅಥವಾ ಧರ್ಮಾರ್ಥ ಇನಾಮು ಆಗಿದೆಯೆ ಎಂಬ ಯಾವುದೇ
ಪ್ರಶ್ನೆಯು ಉದ್ಭವಿಸಿದರೆ, ಅದನ್ನು ರಾಜ್ಯಸರ್ಕಾರಕ್ಕೆ ಕಳುಹಿಸತಕ್ಕದ್ದು ಮತ್ತು ರಾಜ್ಯ ಸರ್ಕಾರದ ತೀರ್ಮಾನವೇ
ಅಂತಿಮವಾಗಿರತಕ್ಕದ್ದು.
(2) ಈ ಅಧಿನಿಯಮದಲ್ಲಿ ಬಳಸಿರುವ ಆದರೆ, ಪರಿಭಾಷಿಸಿರದ, ಪದಗಳು ಮತ್ತು ಅಭಿವ್ಯಕ್ತಿಗಳು, ಅಧಿನಿಯಮದಲ್ಲಿ
ಅಥವಾ [ಕರ್ನಾಟಕ] ಭೂ ಸುಧಾರಣಾ ಅಧಿನಿಯಮ, 1961 (1962ರ [ಕರ್ನಾಟಕ] ಅಧಿನಿಯಮ 10) ರಲ್ಲಿ ಅವುಗಳಿಗೆ
ನೀಡಿರುವ ಅರ್ಥಗಳನ್ನೇ ಹೊಂದಿರತಕ್ಕದ್ದು.
1. 1976ರ ಅಧಿನಿಯಮ ಸಂಖ್ಯೆ 53ರ ಮೇರೆಗೆ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(1) ಯಾವುದೇ ಕರಾರು, ಅನುದಾನ ಅಥವಾ ಇತರ ಲಿಖಿತದಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ರಾಜ್ಯದ 1
[ಬೆಳಗಾವಿ ಮತ್ತು ಗುಲ್ಬರ್ಗಾಪ್ರದೇಶ] ಗಳಲ್ಲಿರುವ ಎಲ್ಲಾ ಧಾರ್ಮಿಕ ಅಥವಾ ಧರ್ಮಾರ್ಥ ಇನಾಮುಗಳು ರದ್ದುಗೊಳ್ಳತಕ್ಕದ್ದು.
1. 1976ರ ಅಧಿನಿಯಮ ಸಂಖ್ಯೆ 53ರ ಮೇರೆಗೆ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(2) ಈ ಅಧಿನಿಯಮದಲ್ಲಿ ಅನ್ಯಥಾ ವ್ಯಕ್ತವಾಗಿ ಉಪಬಂಧಿಸಿದುದನ್ನು ಹೊರತುಪಡಿಸಿ, ಗೊತ್ತುಪಡಿಸಿದ
ದಿನಾಂಕದಿಂದ ಮತ್ತು ದಿನಾಂಕದಂದು, ಈ ಮುಂದಿನ ಪರಿಣಾಮಗಳು ಅನಂತರ ಉಂಟಾಗತಕ್ಕದ್ದು, ಅಂದರೆ:-
(ಎ) ಇನಾಮುಗಳಿಗೆ ಅಥವಾ ಪರಭಾರೆ ಮಾಡಿದ ಹಿಡುವಳಿಗೆ ಸಂಬಂಧಿಸಿದಂತೆ, ಅಧಿನಿಯಮದ
ಉಪಬಂಧಗಳನ್ನು, ಇನಾಮು ಅಥವಾ ಪರಭಾರೆ ಮಾಡಿದ ಹಿಡುವಳಿಗೆ ಅವು ಅನ್ವಯಿಸುವುದನ್ನು ನಿರಸಿತಗೊಳಿಸಲಾಗಿದೆ
ಎಂದು ಭಾವಿಸತಕ್ಕದ್ದು ಮತ್ತು ಪರಭಾರೆ ಮಾಡದ ಗ್ರಾಮಗಳಿಗೆ ಅಥವಾ ಜಮೀನುಗಳಿಗೆ ಈ ಅಧಿನಿಯಮದ ಉಪಬಂಧಗಳು
ಮತ್ತು ಎಲ್ಲ ಇತರ ಅಧಿನಿಯಮಿತಿಗಳು ಸದರಿ ಇನಾಮಿಗೆ ಅಥವಾ ಪರಭಾರೆ ಮಾಡಿದ ಹಿಡುವಳಿಗೆ ಅನ್ವಯವಾಗತಕ್ಕದ್ದು;
(ಬಿ) ಮೌಲ್ಯಮಾಪನ ಮಾಡಿದ ಅಥವಾ ಮಾಡಿರದ ಎಲ್ಲ ಅಂತಹ ಸಮುದಾಯ ಜಮೀನುಗಳು, ಸಾಗುವಳಿ
ಮಾಡಿದ ಜಮೀನುಗಳು, ಸಾಗುವಳಿ ಮಾಡದ ಜಮೀನುಗಳು ಸೇರಿದಂತೆ ಬಂಜರು ಭೂಮಿಗಳು, ಗೋಮಾಳ ಜಮೀನುಗಳು,
ಅರಣ್ಯಗಳು, ಗಣಿಗಳು ಮತ್ತು ಖನಿಜಗಳು, ಕಲ್ಲುಗಣಿಗಳು, ನದಿಗಳು ಮತ್ತು ಹಳ್ಳಗಳು, ಕೆರೆಗಳು ಮತ್ತು ನೀರಾವರಿ
ಕಾಮಗಾರಿಗಳು, ಮೀನುಗಾರಿಕೆಗಳು ಮತ್ತು ಹಾಯಿದೋಣಿಗಳಿಗೆ ಸಂಬಂಧಿಸಿದಂತೆ ಇನಾಮುದಾರನಲ್ಲಿ ನಿಹಿತವಾಗಿರುವ ಎಲ್ಲ ಅಧಿಕಾರಗಳು, ಹಕ್ಕು ಮತ್ತು ಹಿತಾಸಕ್ತಿಯು ನಿಂತುಹೋಗತಕ್ಕದ್ದು ಮತ್ತು ಎಲ್ಲ ಋಣಭಾರಗಳಿಂದ ಮುಕ್ತವಾಗಿ
ರಾಜ್ಯಸರ್ಕಾರದಲ್ಲಿ ಸಂಪೂರ್ಣವಾಗಿ ನಿಹಿತವಾಗತಕ್ಕದ್ದು;
(ಸಿ) ಈ ಅಧಿನಿಯಮದ ಉಪಬಂಧಗಳ ಮೂಲಕ ಅಥವಾ ಅದರ ಮೇರೆಗೆ ಸ್ಪಷ್ಟವಾಗಿ ಉಳಿಸಿರುವ ಹಿತಾಸಕ್ತಿಗಳ
ಹೊರತು ಇನಾಮಿನಲ್ಲಿ ಯಾವುದೇ ಹಿತಾಸಕ್ತಿಯನ್ನು ಇನಾಮುದಾರನು ಹೊಂದಿರುವುದು ನಿಂತುಹೋಗತಕ್ಕದ್ದು;
(ಡಿ) ಗೊತ್ತುಪಡಿಸಿದ ದಿನಾಂಕದಂದು ಅಥವಾ ತರುವಾಯ ಅಂಥ ಇನಾಮಿನಲ್ಲಿ ಒಳಗೊಂಡ ಜಮೀನುಗಳಿಗೆ
ಸಂಬಂಧಿಸಿದಂತೆ ಪ್ರಾಪ್ತವಾಗುವ ಉಪಕರಗಳು ಮತ್ತು ರಾಜಧನವೂ ಸೇರಿದಂತೆ ಎಲ್ಲ ಗೇಣಿಗಳನ್ನು ಮತ್ತು ಭೂ
ಕಂದಾಯವನ್ನು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು. ಆದರೆ, ಇನಾಮುದಾರನಿಗೆ ಸಂದಾಯವಾಗತಕ್ಕದ್ದಲ್ಲ ಮತ್ತು
ಈ ಖಂಡವನ್ನು ಉಲ್ಲಂಘಿಸಿ ಮಾಡಿದ ಯಾವುದೇ ಸಂದಾಯವು ಸಿಂಧುವಾಗಿರತಕ್ಕದ್ದಲ್ಲ;
(ಇ) ಅಂಥ ಯಾವುದೇ ಇನಾಮಿನ ಸಂಬಂಧದಲ್ಲಿ ಗೊತ್ತುಪಡಿಸಿದ ದಿನಾಂಕದಂದು ನ್ಯಾಯ ಸಮ್ಮತವಾಗಿ ಬಾಕಿ
ಉಳಿದಿರುವ ಜೂಡಿ ಅಥವಾ ಜೂಡಿ ಕಂದಾಯವಾಗಿರಲಿ ಮತ್ತು ಉಪಕರಗಳಿರಲಿ, ಆ ಭೂ ಕಂದಾಯದ ಎಲ್ಲ ಬಾಕಿಗಳು
ಅಂಥ ದಿನಾಂಕದ ತರುವಾಯ, ಯಾರಿಂದ ಅವು ಸಂದಾಯವಾಗಬೇಕಾಗಿತ್ತೋ ಆ ಇನಾಮುದಾರನಿಂದ
ವಸೂಲೀಯವಾಗಿರುವುದು ಮುಂದುವರಿಯತಕ್ಕದ್ದು ಮತ್ತು ಈ ವಸೂಲಿಯ ಯಾವುದೇ ಇತರ ವಿಧಾನಕ್ಕೆ ಬಾಧಕವಾಗದಂತೆ,
ಈ ಅಧಿನಿಯಮದ ಮೇರೆಗೆ ಅಂಥ ಇನಾಮುದಾರನಿಗೆ ಸಂದಾಯವಾಗಬೇಕಾದ ಮೊಬಲಗಿನಿಂದ ಅಂಥ ಬಾಕಿಗಳು ಮತ್ತು
ಉಪಕರಗಳ ಮೊಬಲಗನ್ನು ಕಡಿತ ಮಾಡುವ ಮೂಲಕ ಪಡೆದುಕೊಳ್ಳಬಹುದು;
(ಎಫ್) ಅಂಥ ಯಾವುದೇ ಇನಾಮು, ಯಾವುದೇ ನ್ಯಾಯಾಲಯದ ಯಾವುದೇ ಡಿಕ್ರಿಯನ್ನು ಅಥವಾ ಇತರ
ಪ್ರಕ್ರಿಯೆಯನ್ನು ಅಮಲ್ಜಾರಿ ಮಾಡುವಲ್ಲಿ ಜಫ್ತಿಗೆ ಗುರಿಯಾಗತಕ್ಕದ್ದಲ್ಲ ಮತ್ತು ಅಂಥ ಇನಾಮುಗಳ ಸಂಬಂಧದಲ್ಲಿ
ನಿಹಿತವಾಗುವ ದಿನಾಂಕದಂದು ಅಸ್ತಿತ್ವದಲ್ಲಿರುವ ಯಾವುದೇ ಜಪ್ತಿ ಅಥವಾ ಅಂಥ ದಿನಾಂಕಕ್ಕೆ ಮುಂಚೆ ಹೊರಡಿಸಿದ ಜಫ್ತಿಯ
ಯಾವುದೇ ಆದೇಶವು ಜಾರಿಯಲ್ಲಿರುವುದು ನಿಂತುಹೋಗತಕ್ಕದ್ದು;
(ಜಿ) ರಾಜ್ಯ ಸರ್ಕಾರವು, ಉಂಟಾಗಬಹುದಾದ ಯಾವುದೇ ಅಡ್ಡಿಯನ್ನು ನಿವಾರಣೆ ಮಾಡಿದ ತರುವಾಯ, ರಾಜ್ಯ
ಸರ್ಕಾರವು ಇನಾಮನ್ನು ಮತ್ತು ಅದರ ಆಡಳಿತಕ್ಕಾಗಿ ಅಗತ್ಯವಾಗಿರಬಹುದಾದ ಇನಾಮಿಗೆ ಸಂಬಂಧಿಸಿದ ಎಲ್ಲ
ಲೆಕ್ಕಪತ್ರಗಳನ್ನು, ವಹಿಗಳನ್ನು, ಪಟ್ಟಾಗಳನ್ನು, ಮುಚ್ಚಳಿಕೆಗಳನ್ನು, ನಕ್ಷೆಗಳನ್ನು, ನಕಾಶೆಗಳನ್ನು ಮತ್ತು ಇತರ ದಸ್ತಾವೇಜುಗಳನ್ನು ಕೂಡಲೇ ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು:
ಪರಂತು, ರಾಜ್ಯ ಸರ್ಕಾರವು, ಜಿಲ್ಲಾಧಿಕಾರಿಯು ಅಥವಾ ಕಂದಾಯ ಅಪೀಲು ನ್ಯಾಯಮಂಡಲಿಯು
ತನ್ನ ಮುಂದಿರುವ ಅಪೀಲು ಯಾವುದಾದರೂ ಇದ್ದರೆ, ಆ ಅಪೀಲಿನಲ್ಲಿ ಈ ಅಧಿನಿಯಮದ ಉಪಬಂಧಗಳ ಮೇರೆಗೆ ಅಂಥ
ವ್ಯಕ್ತಿಯು ಅಧಿಭೋಗದಾರನೆಂದು ನೋಂದಾಯಿಸಿಕೊಳ್ಳಲು ಅಥವಾ ಗೇಣಿದಾರನಾಗಿ ಮುಂದುವರಿಯಲು ವಾಸ್ತವವಾಗಿ
ಹಕ್ಕುಳ್ಳವನಾಗಿರುವುದಿಲ್ಲವೆಂದು ತೀರ್ಮಾನಿಸುವವರೆಗೂ, ಆ ಇನಾಮಿನಲ್ಲಿನ ಜಮೀನನ್ನು ಸ್ವತಃ ಸಾಗುವಳಿ ಮಾಡುತ್ತಿರುವ
ಯಾರೇ ವ್ಯಕ್ತಿಯ ಸ್ವಾಧೀನವನ್ನು ತಪ್ಪಿಸತಕ್ಕದ್ದಲ್ಲ.
1. 1976ರ ಅಧಿನಿಯಮ ಸಂಖ್ಯೆ 53ರ ಮೇರೆಗೆ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
ವಿವರಣೆ.- ಈ ಪರಂತುಕದ ಉದ್ದೇಶಕ್ಕಾಗಿ, ಯಾರೇ ವ್ಯಕ್ತಿಯು ತನ್ನ ದೈಹಿಕ ಶ್ರಮದಿಂದ ಅಥವಾ ಹಾಗೆಯೇ ತನ್ನ
ಕುಟುಂಬದ ಸದಸ್ಯರ ದೈಹಿಕ ಶ್ರಮದಿಂದ ಆ ಜಮೀನನ್ನು ಸಾಗುವಳಿ ಮಾಡಿರುವಾಗ ಆ ಯಾವುದೇ ಜಮೀನನ್ನು ಸ್ವತಃ
ಸಾಗುವಳಿ ಮಾಡುತ್ತಿರುವುದಾಗಿ ಭಾವಿಸತಕ್ಕದ್ದು;
(ಎಚ್) ಯಾವ ಇನಾಮುದಾರನ ಹಕ್ಕುಗಳು (ಬಿ) ಖಂಡದ ಮೇರೆಗೆ ರಾಜ್ಯ ಸರ್ಕಾರದಲ್ಲಿ ನಿಹಿತವಾಗಿರುವವೋ ಆ
ಇನಾಮುದಾರನು ಈ ಅಧಿನಿಯಮದಲ್ಲಿ ಉಪಬಂಧಿಸಿರುವಂತೆ ರಾಜ್ಯ ಸರ್ಕಾರದಿಂದ ಬರುವಂಥ ಮೊಬಲಗಿಗೆ ಮಾತ್ರ
ಹಕ್ಕುಳ್ಳವನಾಗಿರತಕ್ಕದ್ದು;
(ಐ) ಭೂ ಮಾಲೀಕ ಮತ್ತು ಗೇಣಿದಾರನ ನಡುವಿನ ಸಂಬಂಧವು ಅದು ಖಾಯಂ ಆಗಿರಲಿ, ಸಂರಕ್ಷಿತವಾಗಿರಲಿ
ಅಥವಾ ಅನ್ಯಥಾ ಆಗಿರಲಿ ಇನಾಮುದಾರ ಮತ್ತು ಗೇಣಿದಾರನ ನಡುವಿನ ಆ ಸಂಬಂಧವು ಅಂತ್ಯಗೊಳ್ಳತಕ್ಕದ್ದು;
(ಜೆ) ಮೇಲ್ದರ್ಜೆಯ ಹಿಡುವಳಿದಾರನ ಮತ್ತು ಕೆಳದರ್ಜೆಯ ಹಿಡುವಳಿದಾರನ ಸಂಬಂಧವು, ಇನಾಮುದಾರನ
ಮತ್ತು ಸಣ್ಣ ಇನಾಮಿನ ಹಿಡುವಳಿದಾರರ ನಡುವಿನ ಸಂಬಂಧದಂತೆಯೇ ಅಂತ್ಯಗೊಳ್ಳತಕ್ಕದ್ದು;
(ಕೆ) ಇನಾಮಿನಲ್ಲಿ ಖಾಯಂ ಗೇಣಿದಾರರು ಮತ್ತು ಸಂರಕ್ಷಿತ ಗೇಣಿದಾರರು ಮತ್ತು ಇತರ ಗೇಣಿದಾರರು ಮತ್ತು
ಅವರ ಅಧೀನದಲ್ಲಿ ಹಿಡುವಳಿದಾರರಾಗಿರುವ ವ್ಯಕ್ತಿಗಳು ಮತ್ತು ಸಣ್ಣ ಇನಾಮುಗಳ ಹಿಡುವಳಿದಾರರು, ರಾಜ್ಯ ಸರ್ಕಾರದ
ಎದುರಾಗಿ, ಈ ಅಧಿನಿಯಮದ ಮೂಲಕ ಅಥವಾ ಮೇರೆಗೆ ಉಪಬಂಧಿಸಲಾದಂಥ ಹಕ್ಕುಗಳು ಮತ್ತು ವಿಶೇಷಾಧಿಕಾರಗಳಿಗೆ
ಮಾತ್ರ ಹಕ್ಕುಳ್ಳವರಾಗಿರತಕ್ಕದ್ದು ಮತ್ತು ಅಂಥ ಷರತ್ತುಗಳಿಗೊಳಪಟ್ಟಿರತಕ್ಕದ್ದು ಮತ್ತು ಅವರಿಗೆ ಪ್ರಾಪ್ತವಾಗಬಹುದಾಗಿರುವಂಥ
ಯಾವುವೇ ಇತರ ಹಕ್ಕುಗಳು ಮತ್ತು ವಿಶೇಷಾಧಿಕಾರಗಳು ನಿಂತುಹೋಗತಕ್ಕದ್ದು ಮತ್ತು ಕೊನೆಗೊಳ್ಳತಕ್ಕದ್ದು ಮತ್ತು ರಾಜ್ಯ
ಸರ್ಕಾರದ ಅಥವಾ ಅಂಥ ಇನಾಮುದಾರನ ವಿರುದ್ಧ ಅವು ಜಾರಿಯಾಗತಕ್ಕದ್ದಲ್ಲ.
(3) ಇನಾಮುದಾರನಾಗಿ ತನ್ನ ಹಕ್ಕುಗಳ ಬಲದಿಂದಾಗಿ ನಿಹಿತವಾದ ದಿನಾಂಕಕ್ಕೆ ಮುಂಚೆ ಅವನಿಗೆ ಬರಬೇಕಾದ
ಯಾವುದೇ ಬಾಕಿ ಮೊತ್ತವನ್ನು ವಸೂಲು ಮಾಡಲು (1) ಮತ್ತು (2)ನೇ ಉಪಪ್ರಕರಣಗಳಲ್ಲಿ ಇರುವುದಾವುದೂ,
ಅಡ್ಡಿಯಾಗತಕ್ಕದ್ದಲ್ಲ ಮತ್ತು ಅಂಥ ಮೊತ್ತವನ್ನು ಈ ಅಧಿನಿಯಮ ಇಲ್ಲದಿದ್ದರೆ ಹೇಗೋ ಹಾಗೆ ಆತನಿಗೆ
ಲಭ್ಯವಾಗಬಹುದಾಗಿರುವ ಕಾನೂನಿನ ಯಾವುದೇ ಪ್ರಕ್ರಿಯೆಯ ಮೂಲಕ ಅವನು ವಸೂಲಿ ಮಾಡಿಕೊಳ್ಳಬಹುದು.
(1)10ನೇ ಪ್ರಕರಣದ (2)ನೇ ಉಪಪ್ರಕರಣದ ಉಪಬಂಧಗಳಿಗೊಳಪಟ್ಟು, ಇನಾಮುದಾರನ ಪ್ರತಿಯೊಬ್ಬ ಖಾಯಂ ಗೇಣಿದಾರನು, ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ, ಗೊತ್ತುಪಡಿಸಿದ ದಿನಾಂಕಕ್ಕೆ ನಿಕಟಪೂರ್ವದಲ್ಲಿ ಆತನು ಖಾಯಂ ಗೇಣಿದಾರನಾಗಿದ್ದ ಎಲ್ಲ ಜಮೀನುಗಳ ಸಂಬಂಧದಲ್ಲಿ ಒಬ್ಬ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು.
(2) ಜಮೀನಿನ ಸಂಬಂಧದಲ್ಲಿ ಸಂದಾಯ ಮಾಡಬೇಕಾದ ವಾರ್ಷಿಕ ಭೂ ಕಂದಾಯದ ಜೊತೆಗೆ, (1)ನೇ ಉಪ-
ಪ್ರಕರಣದಡಿ ಯಾವುದೇ ಜಮೀನಿನ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾದ ಖಾಯಂ ಗೇಣಿದಾರನು,
ಆ ಜಮೀನಿನ ಮಾಲೀಕತ್ವವನ್ನು ಪಡೆದುಕೊಳ್ಳಲು ಕಂತಿನ ರೂಪದಲ್ಲಿ, ಅಂಥ ಜಮೀನಿನ ಭೂ ಕಂದಾಯದ ಇಪ್ಪತ್ತುಪಟ್ಟಿಗೆ
ಸಮನಾದ ಮೊಬಲಗನ್ನು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು ಮತ್ತು ಆ ಕಂತಿನ
ಮೊಬಲಗನ್ನು ವಾರ್ಷಿಕ ಭೂ ಕಂದಾಯದ ಜೊತೆಗೆ ಹತ್ತಕ್ಕಿಂತಲೂ ಹೆಚ್ಚಿಲ್ಲದ ವಾರ್ಷಿಕ ಕಂತುಗಳಲ್ಲಿ ಸಂದಾಯ
ಮಾಡತಕ್ಕದ್ದು ಮತ್ತು ಹಾಗೆ ಸಂದಾಯ ಮಾಡಲು ತಪ್ಪಿದಲ್ಲಿ, ಬಾಕಿಯಿರುವ ಮೊಬಲಗನ್ನು ಯಾವ ಜಮೀನಿನ ಸಂಬಂಧದಲ್ಲಿ
ಅದನ್ನು ಸಂದಾಯ ಮಾಡಬೇಕಾಗಿದೆಯೋ ಆ ಜಮೀನಿನ ಮೇಲೆ ಬಾಕಿಯಿರುವ ಭೂ ಕಂದಾಯದ ಬಾಕಿಗಳಂತೆ ವಸೂಲು
ಮಾಡತಕ್ಕದ್ದು:
ಪರಂತು, ಅಂಥ ಜಮೀನಿನ ಅಧಿಕ ಮೌಲ್ಯವು ಇನಾಮುದಾರನಿಗೆ ಖಾಯಂ ಗೇಣಿದಾರನ ಮೂಲಕ ಗೊತ್ತುಪಡಿಸಿದ
ದಿನಾಂಕದ ನಿಕಟಪೂರ್ವದಲ್ಲಿ ಸಂದಾಯ ಮಾಡಬೇಕಾದ ಗೇಣಿ ಮತ್ತು ಭೂ ಕಂದಾಯದ ನಡುವಿನ ವ್ಯತ್ಯಾಸದ ಹದಿನೈದು
ಪಟ್ಟನ್ನು ಮೀರತಕ್ಕದ್ದಲ್ಲ:
ಮತ್ತೂ ಪರಂತು, (1)ನೇ ಉಪಪ್ರಕರಣದಡಿ ಜಮೀನಿನ ಒಬ್ಬ ಗೇಣಿದಾರನಾಗಿ ನೋಂದಾಯಿಸಿಕೊಳ್ಳಲು
ಹಕ್ಕುಳ್ಳವನಾಗಿರುವ ಖಾಯಂ ಗೇಣಿದಾರನನ್ನು, ಅಧಿನಿಯಮದ ಅಡಿಯಲ್ಲಿ ಸಿದ್ಧಪಡಿಸಿದ ಭೂ ಕಂದಾಯ ವ್ಯವಸ್ಥೆ
ರಿಜಿಸ್ಟರಿನಲ್ಲಿ ಮತ್ತು ಇತರ ದಾಖಲೆಗಳಲ್ಲಿ ಒಬ್ಬ ಅಧಿಭೋಗದಾರನೆಂಬುದಾಗಿ ತೋರಿಸಲಾಗಿರುವಲ್ಲಿ ಅಥವಾ (1)ನೇ
ಉಪಪ್ರಕರಣದ ಅಡಿಯಲ್ಲಿ ಒಬ್ಬ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳ ಖಾಯಂ ಗೇಣಿದಾರನು
ಸಂದಾಯ ಮಾಡಿದ ಗೇಣಿಯು ಭೂ ಕಂದಾಯಕ್ಕೆ ಸಮನಾಗಿರುವಲ್ಲಿ, ಈ ಉಪಪ್ರಕರಣದಡಿ ಯಾವುದೇ ಅಧಿಕ ಮೌಲ್ಯವನ್ನು
ಸಂದಾಯ ಮಾಡತಕ್ಕದ್ದಲ್ಲ.
(1) (2)ನೇ ಉಪಪ್ರಕರಣದ ಮತ್ತು 10ನೇ ಪ್ರಕರಣದ ಉಪಬಂಧಕ್ಕೊಳಪಟ್ಟು, ಇನಾಮುದಾರನ ಪ್ರತಿಯೊಬ್ಬ ಸಂರಕ್ಷಿತ
ಗೇಣಿದಾರನು, ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ, ಗೊತ್ತುಪಡಿಸಿದ ದಿನಾಂಕಕ್ಕೆ
ನಿಕಟಪೂರ್ವದಲ್ಲಿ ಆತನು ಸಂರಕ್ಷಿತ ಗೇಣಿದಾರನಾಗಿದ್ದ ಜಮೀನುಗಳ ಸಂಬಂಧದಲ್ಲಿ ಒಬ್ಬ ಅಧಿಭೋಗದಾರನಾಗಿ
ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು.
(2) ಆ ಜಮೀನಿನ ಸಂಬಂಧದಲ್ಲಿ ಸಂದಾಯ ಮಾಡಬೇಕಾದ ವಾರ್ಷಿಕ ಭೂ ಕಂದಾಯದ ಜೊತೆಗೆ, (1)ನೇ
ಉಪಪ್ರಕರಣದ ಅಡಿಯಲ್ಲಿ ಯಾವುದೇ ಜಮೀನಿನ ಅನುಭೋಗದಾರನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾದ ಸಂರಕ್ಷಿತ
ಗೇಣಿದಾರನು, ಆ ಜಮೀನಿನ ಮಾಲೀಕತ್ವವನ್ನು ಪಡೆಯಲು ಅಂಥ ಜಮೀನಿನ ಭೂ ಕಂದಾಯದ ಐವತ್ತುಪಟ್ಟಿಗೆ ಸಮನಾದ
ಮೊಬಲಗನ್ನು ಅಧಿಕ ಮೌಲ್ಯದಂತೆ ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಲು ಹೊಣೆಗಾರನಾಗತಕ್ಕದ್ದು. ಅಧಿಕ ಮೌಲ್ಯದ
ಮೊಬಲಗನ್ನು ವಾರ್ಷಿಕ ಭೂ ಕಂದಾಯದ ಜೊತೆಗೆ ಹತ್ತಕ್ಕಿಂತಲೂ ಹೆಚ್ಚಿಲ್ಲದ ಕಂತುಗಳಲ್ಲಿ ಸಂದಾಯ ಮಾಡತಕ್ಕದ್ದು ಮತ್ತು
ಹಾಗೆ ಸಂದಾಯ ಮಾಡಲು ತಪ್ಪಿದಲ್ಲಿ, ಬಾಕಿಯಿರುವ ಮೊಬಲಗನ್ನು ಯಾವ ಜಮೀನಿನ ಸಂಬಂಧದಲ್ಲಿ ಅದನ್ನು
ಸಂದಾಯ ಮಾಡಬೇಕಾಗಿದೆಯೋ ಆ ಜಮೀನಿಗೆ ಸಂಬಂಧಿಸಿದಂತೆ ಜಮೀನಿನ ಮೇಲೆ ಬಾಕಿಯಿರುವ ಭೂ ಕಂದಾಯದ
ಬಾಕಿಯಂತೆ ವಸೂಲು ಮಾಡತಕ್ಕದ್ದು.
ಖಾಯಂ ಗೇಣಿದಾರನಲ್ಲದ ಅಥವಾ ಸಂರಕ್ಷಿತ ಗೇಣಿದಾರನಲ್ಲದ, ಇನಾಮುದಾರನ ಪ್ರತಿಯೊಬ್ಬ ಗೇಣಿದಾರನು, ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ ಮತ್ತು ಅಧ್ಯಾಯ Iಗಿರ ಉಪಬಂಧಗಳಿಗೊಳಪಟ್ಟು, ನಿಹಿತಗೊಳ್ಳುವ ದಿನಾಂಕದ
ನಿಕಟಪೂರ್ವದಲ್ಲಿ ಆತನು ಇನಾಮುದಾರನಡಿ ಗೇಣಿದಾರನಾಗಿದ್ದ ಜಮೀನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಡಿಯಲ್ಲಿ
ಗೇಣಿದಾರನಾಗಿ ಮುಂದುವರಿಯಲು ಹಕ್ಕುಳ್ಳವನಾಗಿರತಕ್ಕದ್ದು.
(1) ಇನಾಮುದಾರನು ಒಂದು ಧಾರ್ಮಿಕ ಆರಾಧನೆಯ ಸಂಸ್ಥೆಯಾಗಿರುವಲ್ಲಿ, ಒಬ್ಬ ವ್ಯಕ್ತಿಯು,-
(i) ಪೂಜಾರಿ, ಅರ್ಚಕ, ಮುಲ್ಲಾ, ಖಾಜಿ, ಮುತಾವಲ್ಲಿ, ಮುತ್ಸದ್ಧಿ, ಪಾದ್ರಿ ಅಥವಾ ಯಾವುದೇ ಹೆಸರಿನಿಂದ
ಕರೆಯಲ್ಪಡುವ ಅದೇ ರೀತಿಯ ಹುದ್ದೆಯನ್ನು ಹೊಂದಿದ ಸಂಸ್ಥೆಯಲ್ಲಿ ಧಾರ್ಮಿಕ ಸೇವೆಯನ್ನು
ಸಲ್ಲಿಸುತ್ತಿರುವಲ್ಲಿ ಅಥವಾ ಸಂಸ್ಥೆಯನ್ನು ನಿರ್ವಹಿಸಿಕೊಂಡು ಬರುತ್ತಿರುವಲ್ಲಿ; ಅಥವಾ
(ii) ಅಂಥ ಸಂಸ್ಥೆಯಲ್ಲಿ ಯಾವುದೇ ಸೇವೆಯನ್ನು ಸಲ್ಲಿಸುತ್ತಿರುವಲ್ಲಿ, ಮತ್ತು ಅಂಥ ಜಮೀನಿಗೆ ಸಂಬಂಧಿಸಿದಂತೆ
ಆ ಸಂಸ್ಥೆಗೆ ಹಣದ ರೂಪದಲ್ಲಿ ಅಥವಾ ವಸ್ತುರೂಪದಲ್ಲಿ ಬಾಡಿಗೆಯನ್ನು ಸಂದಾಯ ಮಾಡದೆಯೇ ಅಂಥ
ಸಂಸ್ಥೆಯ ಜಮೀನಿನಲ್ಲಿ ಒಳಗೊಂಡಿರುವ ಯಾವುದೇ ಜಮೀನನ್ನು ತನ್ನ ಸ್ವಂತ ದೈಹಿಕ ಶ್ರಮವನ್ನು ಅಥವಾ
ತನ್ನ ಕುಟುಂಬದ ಸದಸ್ಯರ ದೈಹಿಕ ಶ್ರಮ ವಹಿಸುವ ಮೂಲಕ ಗೊತ್ತುಪಡಿಸಿದ ದಿನಾಂಕಕ್ಕೆ ಮುಂಚಿನ
ಮೂರು ವರ್ಷಗಳಿಗಿಂತಲೂ ಕಡಿಮೆಯಲ್ಲದ ನಿರಂತರವಾದ ಅವಧಿಯವರೆಗೆ ಸ್ವತಃ ಸಾಗುವಳಿ
ಮಾಡುತ್ತಿರುವ ಮತ್ತು ಅದರ ಪ್ರಯೋಜನಗಳನ್ನು ಅನುಭವಿಸುತ್ತಿರುವ
- ಆ ವ್ಯಕ್ತಿಯು, ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ ಮತ್ತು (2)ನೇ
ಉಪಪ್ರಕರಣದ ಮತ್ತು 25ನೇ ಪ್ರಕರಣದ ಉಪಬಂಧಗಳಿಗೊಳಪಟ್ಟು, ಅಂಥ ಜಮೀನಿನ ಅಧಿಭೋಗದಾರನಾಗಿ
ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು.
(2) ಜಮೀನಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ವಾರ್ಷಿಕ ಭೂ ಕಂದಾಯದ ಜೊತೆಗೆ, (1)ನೇ
ಉಪಪ್ರಕರಣದ ಅಡಿಯಲ್ಲಿ ಯಾವುದೇ ಜಮೀನಿನ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾದ ವ್ಯಕ್ತಿಯು,
ಆ ಜಮೀನಿನ ಮಾಲೀಕತ್ವವನ್ನು ಪಡೆಯಲು ಅಂಥ ಜಮೀನಿನ ಭೂ ಕಂದಾಯದ ನೂರುಪಟ್ಟಿಗೆ ಸಮನಾದ ಮೊಬಲಗನ್ನು
ಅಧಿಕ ಮೌಲ್ಯವಾಗಿ ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು. ಈ ಅಧಿಕ ಮೌಲ್ಯದ ಮೊಬಲಗನ್ನು
ವಾರ್ಷಿಕ ಭೂ ಕಂದಾಯದ ಜೊತೆಯಲ್ಲಿ ಹತ್ತಕ್ಕಿಂತಲೂ ಹೆಚ್ಚಲ್ಲದ ಕಂತುಗಳಲ್ಲಿ ಸಂದಾಯ ಮಾಡತಕ್ಕದ್ದು ಮತ್ತು ಹಾಗೆ
ಸಂದಾಯಮಾಡಲು ತಪ್ಪಿದಲ್ಲಿ, ಬಾಕಿಯಿರುವ ಮೊಬಲಗನ್ನು ಯಾವ ಜಮೀನಿನ ಸಂಬಂಧದಲ್ಲಿ ಇದನ್ನು
ಸಂದಾಯಮಾಡಬೇಕಾಗಿದೆಯೋ ಆ ಜಮೀನಿನ ಮೇಲೆ ಬಾಕಿಯಿರುವ ಭೂ ಕಂದಾಯದ ಬಾಕಿಗಳಂತೆ ವಸೂಲಿ
ಮಾಡತಕ್ಕದ್ದು.
(1)(3)ನೇ ಉಪಪ್ರಕರಣದ ಉಪಬಂಧಗಳಿಗೊಳಪಟ್ಟು, ಸಣ್ಣ ಇನಾಮಿನ ಪ್ರತಿಯೊಬ್ಬ ಹಿಡುವಳಿದಾರನು ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ, ಈ ಕೆಳಕಂಡವುಗಳ ಹೊರತು, ಗೊತ್ತುಪಡಿಸಿದ ದಿನಾಂಕದ ನಿಕಟಪೂರ್ವದಲ್ಲಿ ಆತನ ಹಿಡುವಳಿಯಲ್ಲಿ ಒಳಗೊಂಡಿರುವ ಎಲ್ಲ ಜಮೀನುಗಳ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು.-
(i) ಸಾಮುದಾಯಿಕ ಜಮೀನುಗಳು, ಸಾಗುವಳಿ ಮಾಡದ ಜಮೀನುಗಳು, ಬಂಜರು ಭೂಮಿಗಳು, ಗೋಮಾಳ
ಜಮೀನುಗಳು, ಅರಣ್ಯ ಭೂಮಿಗಳು, ಕೆರೆಅಂಗಳಗಳು, ಗಣಿಗಳು, ಕಲ್ಲು ಗಣಿಗಳು, ನದಿಗಳು, ತೊರೆಗಳು, ಕೆರೆಗಳು ಮತ್ತು
ನೀರಾವರಿ ಕಾಮಗಾರಿಗಳು;
(ii) ಯಾವನೇ ವ್ಯಕ್ತಿಯು, ಪ್ರಕರಣ 4 ಅಥವಾ ಪ್ರಕರಣ 5 ಅಥವಾ ಪ್ರಕರಣ 7ರಡಿ ನೋಂದಾಯಿಸಿಕೊಳ್ಳಲು
ಹಕ್ಕುಳ್ಳವನಾಗಿರುವ ಅಥವಾ 6ನೇ ಪ್ರಕರಣದ ಅಡಿಯಲ್ಲಿ ಗೇಣಿದಾರನಾಗಿ ಮುಂದುವರಿಯಲು ಹಕ್ಕುಳ್ಳವನಾಗಿರುವುದಕ್ಕೆ
ಸಂಬಂಧಿಸಿದ ಜಮೀನುಗಳು ಮತ್ತು ಸದರಿ ವ್ಯಕ್ತಿಯು ಸಂದರ್ಭಾನುಸಾರ 10 ಅಥವಾ 25ನೇ ಪ್ರಕರಣಗಳಲ್ಲಿನ
ನಿರ್ಬಂಧಗಳಿಂದಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿಲ್ಲದಿರುವುದಕ್ಕೆ ಸಂಬಂಧಿಸಿದ ಜಮೀನಿನ ವ್ಯಾಪ್ತಿ; ಮತ್ತು
(iii) ಸಣ್ಣ ಇನಾಮಿನ ಹಿಡುವಳಿದಾರನನ್ನು ಹೊರತುಪಡಿಸಿ, ಯಾವನೇ ವ್ಯಕ್ತಿಯು ಒಡೆತನ ಹೊಂದಿರುವ
ಯಾವ ಜಮೀನುಗಳ ಮೇಲೆ ಕಟ್ಟಡಗಳನ್ನು ನಿರ್ಮಿಸಿರುವನೋ ಆ ಜಮೀನುಗಳು.
(2) (3)ನೇ ಉಪಪ್ರಕರಣದ ಉಪಬಂಧಗಳಿಗೊಳಪಟ್ಟು, ಗೊತ್ತುಪಡಿಸಿದ ದಿನಾಂಕದ ನಿಕಟಪೂರ್ವದಲ್ಲಿ ಸಣ್ಣ
ಇನಾಮಿನ ಪರಿಮಿತಿಗಳೊಳಗೆ ಇರುವ ಮತ್ತು ಸಣ್ಣ ಇನಾಮಿನ ಹಿಡುವಳಿದಾರನು ಒಡೆತನ ಹೊಂದಿರುವ ಪ್ರತಿಯೊಂದು
ಕಟ್ಟಡವು ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ ಸಣ್ಣ ಇನಾಮಿನ ಹಿಡುವಳಿದಾರನಲ್ಲಿ
ನಿಹಿತವಾಗತಕ್ಕದ್ದು.
(3) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ಸಣ್ಣ ಇನಾಮಿನ
ಹಿಡುವಳಿದಾರನು (1)ನೇ ಉಪ ಪ್ರಕರಣ ಅಥವಾ (2)ನೇ ಉಪ ಪ್ರಕರಣದಡಿ ತನ್ನಲ್ಲಿ ನಿಹಿತವಾಗಿರುವ ಜಮೀನುಗಳು
ಅಥವಾ ಕಟ್ಟಡವನ್ನು [ಕರ್ನಾಟಕ] ಸಹಕಾರ ಸಂಘಗಳ ಅಧಿನಿಯಮ, 1959 (1959ರ [ಕರ್ನಾಟಕ] ಅಧಿನಿಯಮ 11) ರ
ಅಡಿಯಲ್ಲಿ ನೋಂದಾಯಿಸಲ್ಪಟ್ಟ ಸಂಘಕ್ಕೆ ಅಥವಾ ಬ್ಯಾಂಕ್‍ಗೆ ಅಥವಾ ಭಾರತೀಯ ಸ್ಟೇಟ್ ಬ್ಯಾಂಕಿಗೆ ಅಥವಾ ಅದರ
ಅಂಗಸಂಸ್ಥೆಗಳಿಗೆ ಬ್ಯಾಂಕಿಂಗ್ ಕಂಪನಿಗಳ (ಉದ್ಯಮಗಳ ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1970 (1970ರ
ಕೇಂದ್ರ ಅಧಿನಿಯಮ 5)ರ ಮೊದಲನೇ ಅನುಸೂಚಿಯ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಒಂದು ಬ್ಯಾಂಕಿಗೆ ಅಥವಾ
ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಕ್ಕೆ ಅಥವಾ ಭಾಗಶಃ ರಾಜ್ಯ ಸರ್ಕಾರ ಅಥವಾ ಭಾಗಶಃ ಕೇಂದ್ರ ಸರ್ಕಾರಕ್ಕೆ ಸೇರಿದ
ಅಥವಾ ಶೇಕಡಾ ಐವತ್ತಕ್ಕಿಂತಲೂ ಕಡಿಮೆಯಲ್ಲದಿರುವ ಷೇರು ಬಂಡವಾಳವನ್ನು ಹೊಂದಿರುವ ಹಾಗೂ ಸಾಗುವಳಿದಾರರಿಗೆ
ಕೃಷಿ ಸಾಲವನ್ನು ನೀಡುವ ದೃಷ್ಟಿಯಿಂದ ಸ್ಥಾಪಿಸಿರುವ ಕಂಪನಿಗೆ ಅಥವಾ ಒಂದು ನಿಗಮಕ್ಕೆ ಸರಳ ಅಡಮಾನ ಮೂಲಕವಾಗಿ
ಹೊರತು ಪರಭಾರೆ ಮಾಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ:
ಪರಂತು, ಈ ಉಪಪ್ರಕರಣದಲ್ಲಿನ ಯಾವುದೂ, ಗೊತ್ತುಪಡಿಸಿದ ಪ್ರಾಧಿಕಾರದ ಪೂರ್ವ ಮಂಜೂರಾತಿಯೊಂದಿಗೆ
ಮಾಡಿದ ಯಾವುದೇ ಪರಭಾರೆಗೆ ಅನ್ವಯವಾಗತಕ್ಕದ್ದಲ್ಲ.
1. 1976ರ ಅಧಿನಿಯಮ ಸಂಖ್ಯೆ. 53ರ ಮೂಲಕ 18.08.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(1) (3)ನೇ ಉಪ ಪ್ರಕರಣದಉಪಬಂಧಗಳಿಗೊಳಪಟ್ಟು, ಪ್ರತಿಯೊಬ್ಬ ಇನಾಮುದಾರನು, ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ,-
(i) ಸಾಮುದಾಯಿಕ ಜಮೀನುಗಳು, ಸಾಗುವಳಿ ಮಾಡದ ಜಮೀನುಗಳು, ಬಂಜರು ಭೂಮಿಗಳು, ಗೋಮಾಳ
ಜಮೀನುಗಳು, ಅರಣ್ಯ ಭೂಮಿಗಳು, ಕೆರೆ ಅಂಗಳಗಳು, ಗಣಿಗಳು, ಕಲ್ಲುಗಣಿಗಳು, ನದಿಗಳು, ತೊರೆಗಳು, ಕೆರೆಗಳು ಮತ್ತು
ನೀರಾವರಿ ಕಾಮಗಾರಿಗಳು;
(ii) ಯಾವನೇ ವ್ಯಕ್ತಿಯು, ಪ್ರಕರಣ 4, ಪ್ರಕರಣ 5, ಪ್ರಕರಣ 7 ಅಥವಾ 8ನೇ ಪ್ರಕರಣಗಳ ಅಡಿಯಲ್ಲಿ
ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರುವ ಅಥವಾ 6ನೇ ಪ್ರಕರಣದ ಅಡಿಯಲ್ಲಿ ಗೇಣಿದಾರನಾಗಿ ಮುಂದುವರಿಯಲು
ಹಕ್ಕುಳ್ಳವನಾಗಿರುವುದಕ್ಕೆ ಸಂಬಂಧಿಸಿದ ಜಮೀನುಗಳು ಮತ್ತು ಹಾಗೆಯೇ ಸದರಿ ವ್ಯಕ್ತಿಯು ಸಂದರ್ಭಾನುಸಾರ 10 ಅಥವಾ
25ನೇ ಪ್ರಕರಣಗಳಲ್ಲಿನ ನಿರ್ಬಂಧಗಳಿಂದಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರದಿರುವುದಕ್ಕೆ ಸಂಬಂಧಿಸಿದ ಜಮೀನಿನ
ವ್ಯಾಪ್ತಿ; ಮತ್ತು
(iii) ನಿರ್ಮಿಸಲಾದ ಕಟ್ಟಡಗಳ ಒಡೆತನ ಹೊಂದಿರುವ ಸಣ್ಣ ಇನಾಮುದಾರನನ್ನು ಹೊರತುಪಡಿಸಿ, ಯಾವನೇ
ವ್ಯಕ್ತಿಯು ಒಡೆತನ ಹೊಂದಿರುವ ಯಾವ ಜಮೀನುಗಳ ಮೇಲೆ ಕಟ್ಟಡಗಳನ್ನು ನಿರ್ಮಿಸಿರುವನೋ ಆ ಜಮೀನುಗಳು
- ಇವುಗಳ ಹೊರತಾಗಿ ಇತರ ಎಲ್ಲಾ ಜಮೀನುಗಳ ಅನುಭೋಗದಾರನಾಗಿ ನೋಂದಾಯಿಸಿಕೊಳ್ಳಲು
ಹಕ್ಕುಳ್ಳವನಾಗಿರತಕ್ಕದ್ದು.
(2) (3)ನೇ ಉಪ ಪ್ರಕರಣದ ಉಪಬಂಧಗಳಿಗೊಳಪಟ್ಟು ಗೊತ್ತುಪಡಿಸಿದ ದಿನಾಂಕದ ನಿಕಟ ಪೂರ್ವದಲ್ಲಿ
ಇನಾಮುದಾರನು ಹೊಂದಿರುವ ಇನಾಮಿನ ಪರಿಮಿತಿಗಳೊಳಗೆ ಇರುವ ಪ್ರತಿಯೊಂದು ಕಟ್ಟಡವು ಗೊತ್ತುಪಡಿಸಿದ
ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ ಇನಾಮುದಾರನಲ್ಲಿ ನಿಹಿತವಾಗತಕ್ಕದ್ದು.
(3) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ಇನಾಮುದಾರನು, 1ನೇ
ಉಪಪ್ರಕರಣ ಅಥವಾ (2)ನೇ ಉಪಪ್ರಕರಣದಡಿ ತನ್ನಲ್ಲಿ ನಿಹಿತವಾಗಿರುವ ಜಮೀನುಗಳು ಅಥವಾ ಕಟ್ಟಡವನ್ನು [ಕರ್ನಾಟಕ]ಸಹಕಾರ ಸಂಘಗಳ ಅಧಿನಿಯಮ, 1959 (1959ರ [ಕರ್ನಾಟಕ] ಅಧಿನಿಯಮ 11) ರಡಿ ನೋಂದಾಯಿಸಲ್ಪಟ್ಟ ಸಂಘಕ್ಕೆಅಥವಾ ಬ್ಯಾಂಕ್‍ಗೆ ಅಥವಾ ಭಾರತೀಯ ಸ್ಟೇಟ್ ಬ್ಯಾಂಕ್‍ಗೆ ಮತ್ತು ಅದರ ಅಂಗಸಂಸ್ಥೆಗಳಿಗೆ ಅಥವಾ ಬ್ಯಾಂಕಿಂಗ್ ಕಂಪನಿಗಳ (ಉದ್ಯಮಗಳ ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1970 (1970ರ ಕೇಂದ್ರ ಅಧಿನಿಯಮ 5)ರ ಮೊದಲನೇ ಅನುಸೂಚಿಯ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಬ್ಯಾಂಕ್‍ಗೆ ಅಥವಾ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಅಥವಾ ಭಾಗಶಃ ರಾಜ್ಯ ಸರ್ಕಾರ ಅಥವಾ ಭಾಗಶಃ ಕೇಂದ್ರ ಸರ್ಕಾರಕ್ಕೆ ಸೇರಿದ ಅಥವಾ ಶೇಕಡಾ 50ಕ್ಕಿಂತ ಕಡಿಮೆಯಿಲ್ಲದಿರುವ ಷೇರು ಬಂಡವಾಳವನ್ನು ಹೊಂದಿರುವ ಮತ್ತು ಸಾಗುವಳಿದಾರರಿಗೆ ಕೃಷಿ ಸಾಲವನ್ನು ಒದಗಿಸುವ ದೃಷ್ಟಿಯಿಂದ ಸ್ಥಾಪಿಸಿರುವ ಹಾಗೂ ಕಂಪನಿಗೆ ಅಥವಾ ಒಂದು ನಿಗಮಕ್ಕೆ ಸರಳ ಅಡಮಾನ ಮೂಲಕವಾಗಿಯಲ್ಲದೆ ಪರಭಾರೆ ಮಾಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ:
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
ಪರಂತು, ಈ ಉಪ ಪ್ರಕರಣದಲ್ಲಿ ಒಳಗೊಂಡಿರುವ ಯಾವುದೂ, ಗೊತ್ತುಪಡಿಸಿದ ಪ್ರಾಧಿಕಾರದ ಪೂರ್ವ
ಮಂಜೂರಾತಿಯೊಂದಿಗೆ ಮಾಡಿದ ಯಾವುದೇ ಪರಭಾರೆಗೆ ಅನ್ವಯವಾಗತಕ್ಕದ್ದಲ್ಲ.
ವಿವರಣೆ.- ಈ ಉಪ ಪ್ರಕರಣದಲ್ಲಿ ``ಇನಾಮುದಾರ'' ಎಂದರೆ 8ನೇ ಪ್ರಕರಣದಲ್ಲಿ ಉಲ್ಲೇಖಿಸಿದ ಸಣ್ಣ ಇನಾಮಿನ
ಹಿಡುವಳಿದಾರನ ಹೊರತು ಒಬ್ಬ ಇನಾಮುದಾರ ಎಂದು ಅರ್ಥ.
(1) ಪ್ರಕರಣ 4 ಅಥವಾ ಪ್ರಕರಣ 5 ಅಥವಾ ಪ್ರಕರಣ 7 ಅಥವಾ ಪ್ರಕರಣ 8 ಅಥವಾ ಪ್ರಕರಣ 9ರ ಮೇರೆಗೆ ಒಬ್ಬ
ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಅಥವಾ 6ನೇ ಪ್ರಕರಣದಡಿ ಒಬ್ಬ ಗೇಣಿದಾರನಾಗಿ ಮುಂದುವರಿಯಲು
ಹಕ್ಕುಳ್ಳವನಾದ ವ್ಯಕ್ತಿಯು, ಗೊತ್ತುಪಡಿಸಬಹುದಾದಂಥ ನಮೂನೆಯಲ್ಲಿ ಅಥವಾ ವಿಧಾನದಲ್ಲಿ ಗೊತ್ತುಪಡಿಸಿದ ದಿನಾಂಕದಿಂದ
ಹನ್ನೆರಡು ತಿಂಗಳುಗಳೊಳಗಾಗಿ ಜಿಲ್ಲಾಧಿಕಾರಿಗೆ ಒಂದು ಅರ್ಜಿಯನ್ನು ಸಲ್ಲಿಸಬಹುದು:
ಪರಂತು, ಅರ್ಜಿದಾರನು ಯುಕ್ತ ಕಾರಣವನ್ನು ತೋರಿಸಿದಾಗ ಹನ್ನೆರಡು ತಿಂಗಳ ಮುಕ್ತಾಯದ ತರುವಾಯವೂ
ಜಿಲ್ಲಾಧಿಕಾರಿಯು, ಅಂಥ ಅರ್ಜಿಯನ್ನು ಅಂಗೀಕರಿಸಬಹುದು, ಆದರೆ, ಯಾವುದೇ ಸಂದರ್ಭದಲ್ಲಿ ಆತನು ಮೂರು
ವರ್ಷಗಳ ಮುಕ್ತಾಯದ ತರುವಾಯ ಯಾವುದೇ ಅರ್ಜಿಯನ್ನು ಅಂಗೀಕರಿಸತಕ್ಕದ್ದಲ್ಲ:
ಮತ್ತೂ ಪರಂತು, ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಬೇಕಾದ ಯಾವನೇ ವ್ಯಕ್ತಿಯ ಹಕ್ಕು, ಸದರಿ ಮೂರು
ವರ್ಷಗಳ ಅವಧಿಯು ಮುಕ್ತಾಯವಾದ ತರುವಾಯ ಕೊನೆಗಾಣತಕ್ಕದ್ದು ಮತ್ತು ಜಮೀನು ಸಂಪೂರ್ಣವಾಗಿ ಸರ್ಕಾರದಲ್ಲಿ
ನಿಹಿತವಾಗತಕ್ಕದ್ದು.
(2) (1)ನೇ ಉಪಪ್ರಕರಣದ ಅಡಿಯಲ್ಲಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ಅಥವಾ ತಾನಾಗಿಯೇ
ಜಿಲ್ಲಾಧಿಕಾರಿಯು, ಖಾಯಂ ಗೇಣಿದಾರ, ಸಂರಕ್ಷಿತ ಗೇಣೆದಾರ, 7ನೇ ಪ್ರಕರಣದಲ್ಲಿ ಉಲ್ಲೇಖಿಸಿದ ವ್ಯಕ್ತಿ, ಪ್ರಕರಣ 4 ಅಥವಾ
ಪ್ರಕರಣ 5 ಅಥವಾ ಪ್ರಕರಣ 7 ಅಥವಾ ಪ್ರಕರಣ 8 ಅಥವಾ ಸಂದರ್ಭಾನುಸಾರ ಪ್ರಕರಣ 9ರ ಅಡಿಯಲ್ಲಿ
ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಕ್ಲೇಮು ಮಾಡಿರುವ ಸಣ್ಣ ಇನಾಮಿನ ಹಿಡುವಳಿದಾರನ ಅಥವಾ
ಇನಾಮುದಾರನ ಸಂಬಂಧದಲ್ಲಿನ ಅಥವಾ 6ನೇ ಪ್ರಕರಣದ ಅಡಿಯಲ್ಲಿ ಗೇಣಿದಾರನಾಗಿ ಮುಂದುವರಿಯಲು ಕ್ಲೇಮು
ಮಾಡಿರುವ ಯಾವನೇ ವ್ಯಕ್ತಿಯ ಸಂಬಂಧದಲ್ಲಿನ ಎಲ್ಲ ಜಮೀನುಗಳ ಸ್ವರೂಪ ಮತ್ತು ಅವುಗಳ ಹಿಂದಿನ ದಾಖಲೆಗಳನ್ನು
ಪರಿಶೀಲಿಸತಕ್ಕದ್ದು ಮತ್ತು ಆತನು ಅಗತ್ಯವೆಂದು ಪರಿಗಣಿಸಬಹುದಾದಂಥ ಇತರ ಮಾಹಿತಿಯನ್ನು ತರಿಸಿಕೊಳ್ಳತಕ್ಕದ್ದು ಮತ್ತು
ಯಾವ ಜಮೀನಿನ ಬಗ್ಗೆ ಕ್ಲೇಮನ್ನು ಅಂಗೀಕರಿಸಬಹುದೋ ಆ ಜಮೀನಿನ ಬಗ್ಗೆ ನಿರ್ಧರಿಸತಕ್ಕದ್ದು.
(3) 4ನೇ ಪ್ರಕರಣ ಅಥವಾ 5ನೇ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಜಿಲ್ಲಾಧಿಕಾರಿಯು, ತತ್ಕಾಲದಲ್ಲಿ
ಜಾರಿಯಲ್ಲಿರುವ [ಕರ್ನಾಟಕ] ಭೂ ಸುಧಾರಣಾ ಅಧಿನಿಯಮ, 1961 (1962ರ [ಕರ್ನಾಟಕ]ಅಧಿನಿಯಮ 10) ರಡಿಯಲ್ಲಿ
ನಿಗದಿಪಡಿಸಿದ ಕ್ಷೇತ್ರದ ಮಿತಿಯನ್ನು ಮೀರಿರುವ ಯಾವುದೇ ಜಮೀನಿನ ಬಗ್ಗೆ ಮಾಡಿರುವ ಯಾವನೇ ವ್ಯಕ್ತಿಯ ಕ್ಲೇಮನ್ನು
ಅಂಗೀಕರಿಸತಕ್ಕದ್ದಲ್ಲ.
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(1) 10ನೇ ಪ್ರಕರಣದ ಅಡಿಯಲ್ಲಿ ಕ್ಲೇಮುಗಳನ್ನು ನಿರ್ಧರಿಸಿದ ತರುವಾಯ ಜಿಲ್ಲಾಧಿಕಾರಿಯು ಗೊತ್ತುಪಡಿಸಲಾದ ಅಂಥ ತೀರ್ಮಾನದಲ್ಲಿನ ವಿವರಗಳನ್ನು ಅಧಿನಿಯಮದ ಅಡಿಯಲ್ಲಿ ಹಕ್ಕುಗಳ ದಾಖಲೆಯನ್ನು ನಿರ್ವಹಿಸುವ ಅಧಿಕಾರಿಗೆ ಕಳುಹಿಸತಕ್ಕದ್ದು.
(2) (1)ನೇ ಉಪಪ್ರಕರಣದಡಿಯ ವಿವರಗಳನ್ನು ಸ್ವೀಕರಿಸಿದ ತರುವಾಯ ಮತ್ತು ಅಧಿನಿಯಮದಲ್ಲಿ ಏನೇ
ಒಳಗೊಂಡಿದ್ದರೂ, ಸಂಬಂಧಪಟ್ಟ ಅಧಿಕಾರಿಯು ಅಂಥ ವಿವರಗಳನ್ನು ರಿಜಿಸ್ಟರ್‍ನಲ್ಲಿ ನಮೂದಿಸತಕ್ಕದ್ದು.
(1) ಯಾವುದೇ ಜಮೀನಿನ ಸಂಬಂಧದಲ್ಲಿ, ಪ್ರಕರಣ 4 ಅಥವಾ ಪ್ರಕರಣ 5 ಅಥವಾ ಪ್ರಕರಣ 7 ಅಥವಾ ಪ್ರಕರಣ 8 ಅಥವಾ ಪ್ರಕರಣ 9ರ ಅಡಿಯಲ್ಲಿ ಒಬ್ಬ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರುವ ಪ್ರತಿಯೊಬ್ಬ ವ್ಯಕ್ತಿಯು, ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ ರಾಜ್ಯ ಸರ್ಕಾರಕ್ಕೆ ಭೂ ಕಂದಾಯದಂತೆ,-
(ಎ) ಈ ಅಧಿನಿಯಮದಡಿ ಭೂ ಮಾಪನ ಮತ್ತು ಭೂ ಕಂದಾಯ ವ್ಯವಸ್ಥೆಗೆ ಒಳಪಡಿಸಿರುವ ಒಂದು ಇನಾಮಿನ
ಸಂದರ್ಭದಲ್ಲಿ, ಅಂಥ ಭೂ ಮಾಪನ ಮತ್ತು ಭೂ ಕಂದಾಯ ವ್ಯವಸ್ಥೆಯ ಅವಧಿಯಲ್ಲಿ ಅಂಥ ಜಮೀನಿಗೆ ನಿಗದಿಪಡಿಸಿದ
ಭೂ ಕಂದಾಯ ನಿರ್ಧರಣೆಗೆ ಸಮನಾದ ಒಂದು ಮೊಬಲಗನ್ನು; ಮತ್ತು
(ಬಿ) ಈ ಅಧಿನಿಯಮದಡಿ ಭೂಮಾಪನ ಮತ್ತು ಭೂ ಕಂದಾಯ ವ್ಯವಸ್ಥೆಗೆ ಒಳಪಡಿಸದಿರುವ ಒಂದು
ಇನಾಮಿನ ಸಂದರ್ಭದಲ್ಲಿ, ಪಕ್ಕದ ಗ್ರಾಮದ ಪರಭಾರೆ ಮಾಡದ ಅಂತಹುದೇ ಜಮೀನಿನ ಅಷ್ಟೇ ವಿಸ್ತೀರ್ಣಕ್ಕೆ ವಿಧಿಸಿರುವ
ಭೂ ಕಂದಾಯ ನಿರ್ಧರಣೆಗೆ ಸಮನಾದ ಒಂದು ಮೊಬಲಗನ್ನು
- ಸಂದಾಯ ಮಾಡಲು ಹೊಣೆಯಾಗಿರತಕ್ಕದ್ದು.
(2) ಜಿಲ್ಲಾಧಿಕಾರಿಯು, ತಾನು ಯೋಗ್ಯವೆಂದು ಭಾವಿಸಬಹುದಾದಂಥ ವಿಚಾರಣೆಯನ್ನು ಮಾಡಿದ ತರುವಾಯ,
(1)ನೇ ಉಪ ಪ್ರಕರಣದ (ಬಿ) ಖಂಡದಡಿ ಸಂದಾಯ ಮಾಡಬೇಕಾದ ಭೂ ಕಂದಾಯವನ್ನು ನಿರ್ಧರಣೆ ಮಾಡತಕ್ಕದ್ದು.
8 ಮತ್ತು 9ನೇ ಪ್ರಕರಣಗಳಡಿ ನಿಹಿತವಾಗಿದ್ದು ಒಂದು ಇನಾಮಿನ ಪರಿಮಿತಿಗಳೊಳಗೆ ಇರುವ ಕಟ್ಟಡಗಳ ಹೊರತು ಪ್ರತಿಯೊಂದು ಖಾಸಗಿ ಕಟ್ಟಡವು, ಗೊತ್ತುಪಡಿಸಿದ ದಿನಾಂಕದಿಂದ ಮತ್ತು ದಿನಾಂಕದಂದು ಜಾರಿಗೆ ಬರುವಂತೆ, ಆ ದಿನಾಂಕದ ನಿಕಟಪೂರ್ವದಲ್ಲಿ ಒಡೆತನ ಹೊಂದಿರುವ ವ್ಯಕ್ತಿಯಲ್ಲಿ ನಿಹಿತವಾಗತಕ್ಕದ್ದು.
ಕೃಷಿಯ ಉದ್ದೇಶಗಳಿಗಾಗಿ ಬಳಸಿದ ಯಾವುದೇ ಜಮೀನನ್ನು ಕೃಷಿಗೆ ಸಂಬಂಧಿಸದ ಯಾವುದೇ ಉದ್ದೇಶಗಳಿಗಾಗಿ ಪರಿವರ್ತಿಸಿರುವಲ್ಲಿ, ಅಂಥ ಜಮೀನಿನ ಹಿಡುವಳಿದಾರನು, ಅಂಥ ಜಮೀನನ್ನು ಇಟ್ಟುಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು: ಆದರೆ, ಅಂಥ ಪರಿವರ್ತನೆಯು ಆ ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಡಿ ಶೂನ್ಯವಾದುದು ಅಥವಾ ಕಾನೂನುಬಾಹಿರವಾದುದು ಆಗಿರತಕ್ಕದ್ದಲ್ಲ.
(1) ಗೊತ್ತುಪಡಿಸಿದ ದಿನಾಂಕಕ್ಕೆ ಮುಂಚೆ ಒಬ್ಬ ಇನಾಮುದಾರನು
ಯಾವುದೇ ಗಣಿಗಳು ಅಥವಾ ಖನಿಜಗಳು, ಕಲ್ಲುಗಣಿಗಳು, ಮೀನುಗಾರಿಕೆ, ಅರಣ್ಯಗಳು ಅಥವಾ ಹಾಯಿದೋಣಿಗಳು
ಇವುಗಳಲ್ಲಿನ ಹಕ್ಕುಗಳೂ ಸೇರಿದಂತೆ, 8 ಅಥವಾ 9ನೇ ಪ್ರಕರಣಗಳಡಿ (ಗೇಣಿಯ ಮೂಲಕ ಅಥವಾ ಅನ್ಯಥಾ)
ನೋಂದಾಯಿಸಲ್ಪಟ್ಟ ಜಮೀನನ್ನು ಹೊರತುಪಡಿಸಿ ರಾಜ್ಯ ಸರ್ಕಾರದಲ್ಲಿ ನಿಹಿತವಾಗಿರುವ ಯಾವುದೇ ಜಮೀನಿನಲ್ಲಿ ಯಾವುದೇ
ಹಕ್ಕನ್ನು ಸೃಜಿಸಿರುವಲ್ಲಿ ವ್ಯವಹಾರವು ಸಿಂಧುವಾಗಿರುವುದಾಗಿ ಭಾವಿಸತಕ್ಕದ್ದು ಮತ್ತು ಗೊತ್ತುಪಡಿಸಿದ ದಿನಾಂಕದಂದು
ಅಥವಾ ತರುವಾಯ ಅದರಡಿ ಉದ್ಭವಿಸುವ ಎಲ್ಲ ಹಕ್ಕುಗಳು ಮತ್ತು ಹೊಣೆಗಾರಿಕೆಗಳು ರಾಜ್ಯ ಸರ್ಕಾರದ ಮೂಲಕ ಅಥವಾ
ವಿರುದ್ಧವಾಗಿ ಜಾರಿಗೊಳಿಸಬಹುದಾಗಿರತಕ್ಕದ್ದು:
ಪರಂತು, ಆ ವ್ಯವಹಾರವು ಆ ಕಾಲದಲ್ಲಿ ಜಾರಿಯಲ್ಲಿದ್ದ ಯಾವುದೇ ಕಾನೂನಿನಡಿ ಶೂನ್ಯವಾದುದು ಅಥವಾ
ಕಾನೂನು ಬಾಹಿರವಾವಾದುದು ಆಗಿರತಕ್ಕದ್ದಲ್ಲ:
ಮತ್ತೂ ಪರಂತು, ಅಂಥ ಹಕ್ಕನ್ನು ಯಾವುದೇ ಜಮೀನಿನಲ್ಲಿ ಸೃಜಿಸಲಾಗಿರುವಲ್ಲಿ, ಇದು 8 ಅಥವಾ 9ನೇ ಪ್ರಕರಣದ
ಅಡಿಯಲ್ಲಿ ನೋಂದಾಯಿಸಲ್ಪಟ್ಟ ಜಮೀನಿಗೆ ಸಂಬಂಧಿಸಿದ ಹೊರತು, ರಾಜ್ಯ ಸರ್ಕಾರವು ತನ್ನ ಅಭಿಪ್ರಾಯದಲ್ಲಿ ಹಾಗೆ
ಮಾಡಲು ಅದು ಸಾರ್ವಜನಿಕ ಹಿತಾಸಕ್ತಿಯುಳ್ಳದ್ದಾಗಿದ್ದರೆ, ಸಂಬಂಧಪಟ್ಟ ವ್ಯಕ್ತಿಗೆ ನೋಟೀಸನ್ನು ನೀಡುವ ಮೂಲಕ,
ನೋಟೀಸಿನ ದಿನಾಂಕದಿಂದ ಮೂರು ತಿಂಗಳುಗಳಿಗಿಂತ ಮುಂಚೆಯಲ್ಲದಂತೆ, ನೋಟೀಸಿನಲ್ಲಿ ನಿರ್ದಿಷ್ಟಪಡಿಸಬಹುದಾದಂಥ
ದಿನಾಂಕದಿಂದ ಜಾರಿಗೆ ಬರುವಂತೆ ಹಕ್ಕನ್ನು ಕೊನೆಗೊಳಿಸಬಹುದು.
(2) (1)ನೇ ಉಪಪ್ರಕರಣದ ಎರಡನೇ ಪರಂತುಕದಡಿ ರಾಜ್ಯ ಸರ್ಕಾರವು ಯಾರ ಹಕ್ಕನ್ನು ಕೊನೆಗೊಳಿಸಿದೆಯೋ ಆ
ವ್ಯಕ್ತಿಯು, ವಿಷಯದ ಎಲ್ಲ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಳ್ಳುವ ಮೂಲಕ ಯಾವ ಅವಧಿಗಾಗಿ ಹಕ್ಕನ್ನು
ಸೃಜಿಸಲಾಗಿದೆಯೋ ಆ ಅವಧಿಯ ಮುಕ್ತಾಯವಾಗದ ಭಾಗಕ್ಕಾಗಿ ಜಮೀನಿನಿಂದ ಅಂಥ ವ್ಯಕ್ತಿಯು ಅಂದಾಜು ಮಾಡಿದ
ನಿವ್ವಳ ಆದಾಯಕ್ಕೆ ಸಮನಾದ ಮೊಬಲಗನ್ನು ರಾಜ್ಯ ಸರ್ಕಾರದಿಂದ ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದು.
ಈ ಅಧಿನಿಯಮದಡಿ, ರಾಜ್ಯ ಸರ್ಕಾರದಲ್ಲಿ ನಿಹಿತವಾಗಿರುವ ಒಂದು
ಇನಾಮಿನ ಸಂಬಂಧದಲ್ಲಿ, ರಾಜ್ಯ ಸರ್ಕಾರವು, ಧಾರ್ಮಿಕ ಅಥವಾ ಧರ್ಮಾರ್ಥ ಸಂಸ್ಥೆಗಳು ಅಸ್ತಿತ್ವದಲ್ಲಿರುವವರೆಗೂ
ಇನಾಮುದಾರನಿಗೆ, ಪ್ರತಿ ವರ್ಷವೂ ಅಂಥ ಇನಾಮಿನಲ್ಲಿ ಒಳಗೊಂಡಿರುವ ಜಮಿನುಗಳಿಗೆ ಸಂದಾಯಮಾಡಬೇಕಾದ ಭೂ
ಕಂದಾಯದ 1
[ಹತ್ತು]1
ಪಟ್ಟು ಸಮನಾದ ಮೊಬಲಗನ್ನು ಸಂದಾಯ ಮಾಡತಕ್ಕದ್ದು. ಒಣ ಭೂಮಿ ಎಂಬುದಾಗಿ
ವರ್ಗೀಕರಿಸಿದ್ದು, ಆದರೆ, ರಾಜ್ಯ ಸರ್ಕಾರದ ಸ್ವತ್ತಾಗಿರುವ ನೀರಿನ ಯಾವುದೇ ಮೂಲದಿಂದ ನೀರಾವರಿಗಾಗಿ ಸೌಲಭ್ಯಗಳನ್ನು
ಹೊಂದಿರುವ ಅಂಥ ಇನಾಮುಗಳಲ್ಲಿ ಒಳಗೊಂಡಿರುವ ಜಮೀನುಗಳ ಸಂದರ್ಭದಲ್ಲಿ, ರಾಜ್ಯ ಸರ್ಕಾರವು, ವಾರ್ಷಿಕವಾಗಿ
ಅಂಥ ಇನಾಮುದಾರನಿಗೆ ಈ ಕೆಳಗೆ ನಿರ್ದಿಷ್ಟಪಡಿಸಿರುವಂತೆ ಹೆಚ್ಚುವರಿ ಮೊಬಲಗನ್ನು ಸಂದಾಯ ಮಾಡತಕ್ಕದ್ದು.-
(i) ವರ್ಷದಲ್ಲಿ ಭತ್ತದ ಎರಡು ಬೆಳೆಗಳನ್ನು ಪ್ರತಿ ಎಕರೆಗೆ ಅರವತ್ತಾರು
ಬೆಳೆಯುವಂತಿರುವಲ್ಲಿ ಅಥವಾ ಕಬ್ಬಿನ ರೂಪಾಯಿಗಳು.
ಬೆಳೆಯನ್ನು ಬೆಳೆಯುವಂತಿರುವಲ್ಲಿ
(ii) ವರ್ಷದಲ್ಲಿ ಭತ್ತದ ಒಂದೇ ಬೆಳೆಯನ್ನು ಪ್ರತಿ ಎಕರೆಗೆ ನಲವತ್ತನಾಲ್ಕು
ಬೆಳೆಯುವಂತಿರುವಲ್ಲಿ ರೂಪಾಯಿಗಳು.
(iii) ಅರೆ ಒಣ ಭೂಮಿಯಲ್ಲಿ ಬೆಳೆಗಳನ್ನು ಪ್ರತಿ ಎಕರೆಗೆ ಇಪ್ಪತ್ತೆರಡು
ಬೆಳೆಯುವಂತಿರುವಲ್ಲಿ ರೂಪಾಯಿಗಳು.
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(1) ಜಿಲ್ಲಾಧಿಕಾರಿಯು, ಆದೇಶದ ಮೂಲಕ 16ನೇ ಪ್ರಕರಣದ ಅಡಿಯಲ್ಲಿ ಇನಾಮುದಾರನಿಗೆ ಸಂದಾಯ ಮಾಡಬೇಕಾದ ಮೊಬಲಗನ್ನು ನಿರ್ಧರಣೆ ಮಾಡತಕ್ಕದ್ದು.
(2) (1)ನೇ ಉಪಪ್ರಕರಣದ ಅಡಿಯಲ್ಲಿ ಹೊರಡಿಸಿದ ಪ್ರತಿಯೊಂದು ಆದೇಶದ ಪ್ರತಿಯನ್ನು ಸಂಬಂಧಪಟ್ಟ
ಇನಾಮುದಾರನಿಗೆ ಒದಗಿಸತಕ್ಕದ್ದು.
ಈ ಅಧ್ಯಾಯದ ಉಪಬಂಧಗಳನ್ನು 6ನೇ ಪ್ರಕರಣದಡಿ ಮುಂದುವರಿಯುತ್ತಿರುವ ಗೇಣಿದಾರರಿಗೆ ಅನ್ವಯಿಸತಕ್ಕದ್ದು.
ಪ್ರತಿಯೊಬ್ಬ ಗೇಣಿದಾರನು ಗೊತ್ತುಪಡಿಸಿದ ದಿನಾಂಕದ ನಿಕಟಪೂರ್ವದಲ್ಲಿ ಇನಾಮು ದಾರನಿಗೆ ತಾನು
ಸಂದಾಯ ಮಾಡುತ್ತಿದ್ದಂತಹ ಗೇಣಿಯನ್ನು ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ ಸಂದಾಯ ಮಾಡತಕ್ಕದ್ದು:
ಪರಂತು, ಅಂಥ ಗೇಣಿಯು, ಒಣ ಭೂಮಿ ಎಂಬುದಾಗಿ ವರ್ಗೀಕರಿಸಿರುವ ಆದರೆ ರಾಜ್ಯ ಸರ್ಕಾರದ ಸ್ವತ್ತಾಗಿರುವ
ನೀರಿನ ಯಾವುದೇ ಮೂಲದಿಂದ ನೀರಾವರಿ ಸೌಲಭ್ಯಗಳನ್ನು ಹೊಂದಿರುವ ಜಮೀನುಗಳ ಸಂದರ್ಭದಲ್ಲಿ ಮತ್ತು ಅಂಥ
ಜಮೀನಿನ ಸಂಬಂಧದಲ್ಲಿ ಕೆಳಕಂಡಂತೆ ಸಂದಾಯ ಮಾಡಬೇಕಾದ ಭೂ ಕಂದಾಯದ ಹತ್ತುಪಟ್ಟನ್ನು ಯಾವುದೇ
ಸಂದರ್ಭದಲ್ಲಿ ಮೀರತಕ್ಕದ್ದಲ್ಲ, ಎಂದರೆ,-
(i) ವರ್ಷದಲ್ಲಿ ಭತ್ತದ ಎರಡು ಬೆಳೆಗಳನ್ನು ಪ್ರತಿ ಎಕರೆಗೆ ಅರವತ್ತಾರು
ಬೆಳೆಯುವಂತಿರುವಲ್ಲಿ ಅಥವಾ ಕಬ್ಬಿನ ರೂಪಾಯಿಗಳು
ಬೆಳೆಯನ್ನು ಬೆಳೆಯುವಂತಿರುವಲ್ಲಿ
(ii) ವರ್ಷದಲ್ಲಿ ಭತ್ತದ ಒಂದು ಬೆಳೆಯನ್ನು ಪ್ರತಿ ಎಕರೆಗೆ ನಲವತ್ತನಾಲ್ಕು
ಬೆಳೆಯುವಂತಿರುವಲ್ಲಿ ರೂಪಾಯಿಗಳು.
(iii) ಅರೆ ಒಣಭೂಮಿ ಬೆಳೆಗಳನ್ನು ಪ್ರತಿ ಎಕರೆಗೆ ಇಪ್ಪತ್ತೆರಡು
ಬೆಳೆಯುವಂತಿರುವಲ್ಲಿ ರೂಪಾಯಿಗಳು:
ಮತ್ತೂ ಪರಂತು, ಮಲೆನಾಡು ಪ್ರದೇಶವೆಂದು ರಾಜ್ಯ ಸರ್ಕಾರವು ಅಧಿಸೂಚಿಸಿದ ಪ್ರದೇಶದಲ್ಲಿ ಒಣ
ಭೂಮಿಯೆಂದು ನಿರ್ದಿಷ್ಟಪಡಿಸಿದ್ದು, ಆದರೆ, ಜಾನುವಾರುಗಳನ್ನು ಮೇಯಿಸುವುದಕ್ಕಾಗಿ ಅಥವಾ ಎಲೆಗಳನ್ನು ಎತ್ತಿಕೊಂಡು
ಹೋಗುವುದಕ್ಕಾಗಿ ಮಾತ್ರವೇ ಬಳಸುತ್ತಿರುವ ಜಮೀನುಗಳ ಸಂಬಂಧದಲ್ಲಿನ ಗೇಣಿಯು ಅಂಥ ಜಮೀನುಗಳಿಗಾಗಿ ಸಂದಾಯ
ಮಾಡಬೇಕಾದ ಭೂ ಕಂದಾಯಕ್ಕೆ ಸಮನಾಗಿರತಕ್ಕದ್ದು.
ಈ ಅಧಿನಿಯಮದ ಉಪಬಂಧಗಳಿ ಗೊಳಪಟ್ಟು, ಗೇಣಿದಾರನು, 6ನೇ ಪ್ರಕರಣದಡಿ ಗೇಣಿದಾರನಾಗಿ ಈತನು ಮುಂದುವರಿಯುವುದರ ಸಂಬಂಧದಲ್ಲಿನ ಜಮೀನನ್ನು [ಕರ್ನಾಟಕ]ಸಹಕಾರ ಸಂಘಗಳ ಅಧಿನಿಯಮ, 1959 (1959ರ [ಕರ್ನಾಟಕ] ಅಧಿನಿಯಮ 11) ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಒಂದು ಸಹಕಾರ ಸಂಘಕ್ಕೆ ಅಥವಾ ಬ್ಯಾಂಕಿಗೆ ಅಥವಾ ಭಾರತೀಯ ಸ್ಟೇಟ್ ಬ್ಯಾಂಕಿಗೆ ಅಥವಾ ಅದರ ಅಂಗಸಂಸ್ಥೆಗಳಿಗೆ ಬ್ಯಾಂಕಿಂಗ್ ಕಂಪನಿಗಳ (ಉದ್ಯಮಗಳ ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1970 (1970ರ ಕೇಂದ್ರ ಅಧಿನಿಯಮ 5) ರ ಮೊದಲನೇ ಅನುಸೂಚಿಯ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಅಥವಾ ಒಂದು ಬ್ಯಾಂಕಿಗೆ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಕ್ಕೆ ಅಥವಾ ಭಾಗಶಃ ರಾಜ್ಯ ಸರ್ಕಾರ ಅಥವಾ ಭಾಗಶಃ ಕೇಂದ್ರ ಸರ್ಕಾರಕ್ಕೆ ಸೇರಿದ ಅಥವಾ ಐವತ್ತಕ್ಕಿಂತಲೂ ಕಡಿಮೆಯಲ್ಲದಿರುವ ಷೇರು ಬಂಡವಾಳವನ್ನು ಹೊಂದಿರುವ ಹಾಗೂ ಸಾಗುವಳಿದಾರರಿಗೆ ಕೃಷಿ ಸಾಲವನ್ನು ನೀಡುವ ದೃಷ್ಟಿಯಿಂದ ಸ್ಥಾಪಿಸಲಾಗಿರುವ ಕಂಪನಿಗೆ ಅಥವಾ ಒಂದು ನಿಗಮಕ್ಕೆ ಸರಳ ಅಡಮಾನ ಮೂಲಕವಾಗಿ ಹೊರತು ಪರಭಾರೆ ಮಾಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ.
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
ಗೇಣಿದಾರನು ಮೃತನಾದಾಗ, ಆತನ ಮರಣದ ಕಾಲದಲ್ಲಿ ಗೇಣಿದಾರನು ಜಮೀನಿನ ಹಿಡುವಳಿಯನ್ನು ಹೊಂದಿದ್ದಂಥ ಅದೇ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಅಂಥ ಗೇಣಿದಾರನ ವಾರಸುದಾರರಿಗೆ ಗೇಣಿದಾರಿಕೆಯನ್ನು ರಾಜ್ಯ ಸರ್ಕಾರವು ಮುಂದುವರಿಸಿದೆಯೆಂದು ಭಾವಿಸತಕ್ಕದ್ದು.
ಗೇಣಿದಾರನು ಹೊಂದಿರುವ ಯಾವುದೇ ಜಮೀನಿನ ಗೇಣಿದಾರಿಕೆಯನ್ನು ಅಂಥ ಗೇಣಿದಾರನು,-
(ಎ) ಜಮೀನನ್ನು ನಾಶಮಾಡುವ ಅಥವಾ ಅದಕ್ಕೆ ಖಾಯಂ ಹಾನಿಯುಂಟುಮಾಡುವ ಯಾವುದೇ ಕಾರ್ಯವನ್ನು
ಎಸಗಿರುವ; ಅಥವಾ
(ಬಿ) ಅಂಥ ಜಮೀನನ್ನು ಕೃಷಿಯ ಹೊರತು ಇತರ ಉದ್ದೇಶಗಳಿಗಾಗಿ ಬಳಸಿರುವ; ಅಥವಾ
(ಸಿ) ಜಮೀನನ್ನು ಒಳಗೇಣಿಗೆ ನೀಡಿರುವ ಅಥವಾ 20ನೇ ಪ್ರಕರಣದಲ್ಲಿ ಉಪಬಂಧಿಸಿದ ವ್ಯಾಪ್ತಿ ಹೊರತು
ಅದರಲ್ಲಿನ ಯಾವುದೇ ಹಿತಾಸಕ್ತಿಯನ್ನು ಬೇರೊಬ್ಬರಿಗೆ ವಹಿಸಿಕೊಟ್ಟಿರುವ
- ಹೊರತು ಮುಕ್ತಾಯಗೊಳಿಸತಕ್ಕದ್ದಲ್ಲ:
ಪರಂತು, (ಸಿ) ಖಂಡದಲ್ಲಿರುವುದಾವುದೂ, ವಿಧವೆ ಅಥವಾ ಅಪ್ರಾಪ್ತ ವಯಸ್ಕರಾಗಿರುವ ಅಥವಾ ದೈಹಿಕ ಅಥವಾ
ಮನೋವಿಕಲ ಗೇಣಿದಾರನು ಹೊಂದಿರುವ ಯಾವುದೇ ಜಮೀನಿನ ಒಳಗೇಣಿಗೆ ಅನ್ವಯಿಸತಕ್ಕದ್ದಲ್ಲ.
(1) ಗೇಣಿದಾರಿಕೆಯು, 22ನೇ ಪ್ರಕರಣದ ಉಪಬಂಧದಡಿ ಕೊನೆಗೊಳಿಸಲು ಹೊಣೆಯಾಗಿರುವಲ್ಲಿ ಉಪವಿಭಾಗಾಧಿಕಾರಿಯು, ಗೇಣಿದಾರನಿಗೆ ಏಕೆ ಆತನ ಗೇಣಿದಾರಿಕೆಯನ್ನು ಕೊನೆಗೊಳಿಸಬಾರದು ಎಂಬ ಬಗ್ಗೆ ಕಾರಣ ತೋರಿಸುವಂತೆ ಒಂದು ಅವಕಾಶವನ್ನು ನೀಡಿದ ತರುವಾಯ, ಗೇಣಿದಾರನಿಗೆ ಒಂದು ಲಿಖಿತ ಆದೇಶವನ್ನು ನೀಡುವ ಮೂಲಕ ಗೇಣಿದಾರಿಕೆಯನ್ನು ಕೊನೆಗೊಳಿಸತಕ್ಕದ್ದು ಮತ್ತು ಗೇಣಿದಾರನು ಆದೇಶದ ಜಾರಿ ದಿನಾಂಕದಿಂದ ಅರವತ್ತು ದಿವಸಗಳೊಳಗೆ ಜಮೀನನ್ನು ಬಿಟ್ಟುಕೊಡುವಂತೆ ನಿರ್ದೇಶಿಸತಕ್ಕದ್ದು.
(2) ಯಾವನೇ ವ್ಯಕ್ತಿಯು, (1)ನೇ ಉಪ ಪ್ರಕರಣದಡಿಯ ಆದೇಶವನ್ನು ತಿರಸ್ಕರಿಸಿದರೆ ಅಥವಾ ಪಾಲಿಸಲು
ವಿಫಲನಾದರೆ, ತಹಶೀಲ್ದಾರನು, ಆ ವ್ಯಕ್ತಿಯನ್ನು ಆ ಜಮೀನಿನಿಂದ ಹೊರಹಾಕಬಹುದು ಮತ್ತು ಆ ಜಮೀನಿನ
ಸ್ವಾಧೀನವನ್ನು ತೆಗೆದುಕೊಳ್ಳಬಹುದು ಮತ್ತು ಆ ಉದ್ದೇಶಕ್ಕಾಗಿ ಅಗತ್ಯ ಬಲವನ್ನು ಪ್ರಯೋಗಿಸಬಹುದು.
(3) (1)ನೇ ಉಪಪ್ರಕರಣದ ಮೇರೆಗಿನ ಆದೇಶದಿಂದ ಬಾಧಿತನಾದ ಯಾವನೇ ವ್ಯಕ್ತಿಯು, ಆ ಆದೇಶದ ಜಾರಿಯ
ದಿನಾಂಕದಿಂದ ಅರವತ್ತು ದಿವಸಗಳೊಳಗೆ, ಜಿಲ್ಲಾಧಿಕಾರಿಗೆ ಲಿಖಿತದಲ್ಲಿ ಅಪೀಲನ್ನು ಸಲ್ಲಿಸಬಹುದು ಮತ್ತು ಉಪ-
ವಿಭಾಗಾಧಿಕಾರಿಯಿಂದ ವರದಿಯನ್ನು ತರಿಸಿಕೊಂಡ ತರುವಾಯ ಮತ್ತು ಅಪೀಲುದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು
ಸೂಕ್ತ ಅವಕಾಶವನ್ನು ನೀಡಿದ ನಂತರ, ತಾನು ಯುಕ್ತವೆಂದು ಭಾವಿಸಬಹುದಾದಂಥ ಆದೇಶಗಳನ್ನು ಹೊರಡಿಸಬಹುದು.
(4) ಗೇಣಿದಾರನು ಸಂದಾಯ ಮಾಡಬೇಕಾಗಿದ್ದ ಗೇಣಿಯ ಯಾವುವೇ ಬಾಕಿಗಳನ್ನು ಭೂ ಕಂದಾಯದ ಬಾಕಿ
ಎಂಬಂತೆ ವಸೂಲಿ ಮಾಡತಕ್ಕದ್ದು.
(1) ಗೇಣಿದಾರನು ಈ ಅಧಿನಿಯಮದ ಪ್ರಾರಂಭದ ತರುವಾಯ ಯಾವುದೇ ಕಾಲದಲ್ಲಿ, ತಾನು ಗೇಣಿದಾರನಾಗಿರುವ ಜಮೀನಿನ ಸಂಬಂಧದಲ್ಲಿ ಒಬ್ಬ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳುವುದಕ್ಕಾಗಿ ಗೊತ್ತುಪಡಿಸಲಾದ ವಿಧಾನದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿಯನ್ನು ಸಲ್ಲಿಸಬಹುದು.
(2) ಗೇಣಿದಾರನು, ರಾಜ್ಯ ಸರ್ಕಾರಕ್ಕೆ ಒಬ್ಬ ಅಧಿಭೋಗದಾರನಾಗಿ ನೋಂದಾಯಿಸಿ ಕೊಳ್ಳುವುದಕ್ಕಾಗಿ ಆ ಜಮೀನಿಗೆ
ಸಂದಾಯ ಮಾಡಬೇಕಾದ ಭೂ ಕಂದಾಯದ ನೂರುಪಟ್ಟುಗಳಿಗೆ ಸಮನಾದ ಮೊಬಲಗನ್ನು ಪ್ರೀಮಿಯಂ ಆಗಿ ಸಂದಾಯ
ಮಾಡಲು ಹೊಣೆಗಾರನಾಗಿರತಕ್ಕದ್ದು. ಅಂಥ ಮೊಬಲಗನ್ನು, ಗೊತ್ತುಪಡಿಸಿದ ಪ್ರಾಧಿಕಾರವು ನಿಗದಿಪಡಿಸಬಹುದಾದಂಥ
ದಿನಾಂಕದಂದು ಅಥವಾ ಮುಂಚೆ ಹತ್ತನ್ನು ಮೀರದಿರುವಂಥ ಸಂಖ್ಯೆಯ ವಾರ್ಷಿಕ ಕಂತುಗಳಲ್ಲಿ ಸಂದಾಯ ಮಾಡತಕ್ಕದ್ದು.
(3) ಅಂಥ ಮೊಬಲಗನ್ನು ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಿದ ನಂತರ ಗೇಣಿದಾರನು, 25ನೇ ಪ್ರಕರಣದ
ಉಪಬಂಧಗಳಿಗೊಳಪಟ್ಟು, ಅಂಥಜಮೀನಿನ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳತಕ್ಕದ್ದು.
(4) ಹಿಂದಿನ ಉಪಪ್ರಕರಣಗಳಲ್ಲಿ ಏನೇ ಒಳಗೊಂಡಿದ್ದರೂ, ಗೇಣಿದಾರನು, 25ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ
ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣದ ಜಮೀನಿನ ಸ್ವಾಧೀನದಲ್ಲಿರುವಲ್ಲಿ ಆತನು, ಅಂಥ ಹೆಚ್ಚಿನ ವಿಸ್ತೀರ್ಣವನ್ನು ನಿಯಮಿಸಲಾದ
ಪ್ರಾಧಿಕಾರಕ್ಕೆ ಒಪ್ಪಿಸಿದ ಹೊರತು ಅಧಿಭೋಗದಾರನಾಗಿ ನೊಂದಾಯಿಸಿಕೊಳ್ಳತಕ್ಕದ್ದಲ್ಲ.
(5) ಗೇಣಿದಾರನು, ಈ ಪ್ರಕರಣದಡಿ ಅಧಿಭೋಗದಾರನಾಗಿ ನೋಂದಾಯಿಸಿ ಕೊಂಡಿರುವ ಜಮೀನಿನ
ಸಂಬಂಧದಲ್ಲಿ ಆತನು ಭೂ ಕಂದಾಯವನ್ನು ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು ಮತ್ತು 12ನೇ ಪ್ರಕರಣದ
ಉಪಬಂಧವು ಈ ಉದ್ದೇಶಕ್ಕಾಗಿ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯಿಸತಕ್ಕದ್ದು.
7,8,9 ಅಥವಾ 24ನೇ ಪ್ರಕರಣದಲ್ಲಿ ಉಲ್ಲೇಖಿಸಿರುವ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾದ ವ್ಯಕ್ತಿಯ ಸಂಬಂಧದಲ್ಲಿನ ಜಮೀನಿನ ವಿಸ್ತೀರ್ಣವು ಆತನು ಹೊಂದಿರುವ ಯಾವುದೇ ಜಮೀನನ್ನು ಒಟ್ಟಿಗೆ ಸೇರಿಸಿದಾಗ
ಗೊತ್ತುಪಡಿಸಬಹುದಾದಂಥ ವಿಸ್ತೀರ್ಣವನ್ನು ಮೀರತಕ್ಕದ್ದಲ್ಲ.
ರಾಜ್ಯ ಸರ್ಕಾರದಲ್ಲಿ ನಿಹಿತವಾಗುವ ಮತ್ತು ಈ ಅಧಿನಿಯಮದಡಿ ಅಧಿಭೋಗದಾರನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿಲ್ಲದಿರುವ ಯಾವನೇ ವ್ಯಕ್ತಿಯ ಸಂಬಂಧದಲ್ಲಿ ಆ ಜಮೀನುಗಳನ್ನು [ಕರ್ನಾಟಕ] ಭೂ ಸುಧಾರಣಾ ಅಧಿನಿಯಮ, 1961ರ 77ನೇ ಪ್ರಕರಣದ ಉಪಬಂಧಗಳ ಅನುಸಾರವಾಗಿ ವಿಲೇ ಮಾಡತಕ್ಕದ್ದು.
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
ವಿಭಾಗಾಧಿಕಾರಿಯು, ಯಾವುದೇ ಕಾಲದಲ್ಲಿ, 17ನೇ ಪ್ರಕರಣದಡಿ
ಜಿಲ್ಲಾಧಿಕಾರಿಯು ಮಾಡಿರುವ ಯಾವುದೇ ಆದೇಶದ ದಾಖಲೆಯನ್ನು ತರಿಸಿಕೊಳ್ಳಬಹುದು, ಅದನ್ನು ಪರೀಕ್ಷಿಸಬಹುದು ಮತ್ತು
ಅವರು, ಅಂಥ ಆದೇಶವು ರಾಜ್ಯದ ರಾಜಸ್ವದ ಹಿತಾಸಕ್ತಿಗಳಿಗೆ ಬಾಧಕವಾಗಿರುವಷ್ಟರ ಮಟ್ಟಿಗೆ ದೋಷಯುಕ್ತವಾಗಿದೆ
ಎಂಬುದಾಗಿ ಪರಿಗಣಿಸಿದರೆ, ಆತನು ಅವಶ್ಯವಾಗಿರುವುದಾಗಿ ಭಾವಿಸಬಹುದಾದಂಥ ವಿಚಾರಣೆಯನ್ನು ಮಾಡಿದ ಅಥವಾ
ಮಾಡಿಸಿದ ತರುವಾಯ ಮತ್ತು ಅದರಿಂದ ಬಾಧಿತರಾದ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಅಹವಾಲನ್ನು ಹೇಳಿಕೊಳ್ಳಲು ಸೂಕ್ತ
ಅವಕಾಶವನ್ನು ನೀಡಿದ ನಂತರ, ಸಂದಾಯ ಮಾಡಬೇಕಾದ ಮೊಬಲಗನ್ನು ಕಡಿಮೆ ಮಾಡುವ ಅಥವಾ ಜಿಲ್ಲಾಧಿಕಾರಿಯು
ಹೊಸ ನಿರ್ಧರಣೆ ಮಾಡುವಂತೆ ನಿರ್ದೇಶಿಸುವ ಆದೇಶವೂ ಸೇರಿದಂತೆ, ಪ್ರಕರಣದ ಸಂದರ್ಭಗಳು ಸಮರ್ಥಿಸುವಂಥ
ಆದೇಶವನ್ನು ಮಾಡಬಹುದು:
ಪರಂತು, ಯಾವುದೇ ಅಂಥ ಆದೇಶವನ್ನು,-
(1) 30ನೇ ಪ್ರಕರಣದ ಅಡಿಯಲ್ಲಿ ಅಪೀಲನ್ನು ಸಲ್ಲಿಸಿರುವಲ್ಲಿ; ಅಥವಾ
(2) ಪುನರೀಕ್ಷಣೆ ಮಾಡುವಂತೆ ಕೋರಿದ ಆದೇಶದ ದಿನಾಂಕದಿಂದ ನಾಲ್ಕು ವರ್ಷಗಳು ಮುಕ್ತಾಯವಾದ
ತರುವಾಯ
- ಮಾಡತಕ್ಕದ್ದಲ್ಲ.
ವಿವರಣೆ.- ಈ ಪ್ರಕರಣದ ಉದ್ದೇಶಗಳಿಗಾಗಿ ಅವಧಿ ಮಿತಿಯನ್ನು ಲೆಕ್ಕಹಾಕುವಾಗ, ಈ ಪ್ರಕರಣದಡಿಯ ಯಾವುವೇ
ವ್ಯವಹರಣೆಗಳಿಗೆ ಯಾವುದೇ ನ್ಯಾಯಾಲಯವು ಆಜ್ಞೆಯ ಮೂಲಕ ಅಥವಾ ಪ್ರತಿಬಂಧಕಾಜ್ಞೆಯ ಮೂಲಕ ತಡೆ ನೀಡಿರುವ
ಯಾವುದೇ ಅವಧಿಯನ್ನು ಬಿಟ್ಟುಬಿಡತಕ್ಕದ್ದು.
ವಿಭಾಗಾಧಿಕಾರಿಯು, ತನ್ನ ಅಧಿಕಾರ ವ್ಯಾಪ್ತಿಯೊಳಗೆ,-
(ಎ) ಇನಾಮುಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೇಲ್ವಿಚಾರಣೆಯನ್ನು ಮಾಡಲು ಮತ್ತು ಅದರ ಆಡಳಿತಕ್ಕಾಗಿ ಸೂಕ್ತ
ವ್ಯವಸ್ಥೆಗಳನ್ನು ಮಾಡಲು;
(ಬಿ) ಜಿಲ್ಲಾಧಿಕಾರಿಯ ಮಾರ್ಗದರ್ಶನಕ್ಕಾಗಿ ಸೂಚನೆಗಳನ್ನು ನೀಡಲು;
(ಸಿ) ಒಂದು ನಿರ್ದಿಷ್ಟ ಕ್ಷೇತ್ರವು ಒಂದು ಇನಾಮಿನ ಭಾಗವಾಗಿದೆಯೇ ಅಥವಾ ಇಲ್ಲವೇ ಎಂಬುದಾಗಿ ಘೋಷಿಸುವ
ಜಿಲ್ಲಾಧಿಕಾರಿಯ ಯಾವುದೇ ಆದೇಶವನ್ನು ರದ್ದುಗೊಳಿಸಲು ಅಥವಾ ಪುನರೀಕ್ಷಿಸಲು
- ಅಧಿಕಾರವನ್ನು ಹೊಂದಿರತಕ್ಕದ್ದು.
ರಾಜ್ಯ ಸರ್ಕಾರವು, 28ನೇ ಪ್ರಕರಣದಡಿ ವಿಭಾಗಾಧಿಕಾರಿಯು ಮಾಡಿರುವ ಯಾವುದೇ ಆದೇಶವನ್ನು ರದ್ದುಗೊಳಿಸಬಹುದು ಅಥವಾ ಪುನರೀಕ್ಷಿಸಬಹುದು.
10, 12, 17 ಮತ್ತು 23ನೇ ಪ್ರಕರಣಗಳಡಿ ಮಾಡಿದ ಜಿಲ್ಲಾಧಿಕಾರಿಯ ಯಾವುದೇ ನಿರ್ಣಯದ ವಿರುದ್ಧ, ರಾಜ್ಯ ಸರ್ಕಾರವು, ನಿರ್ಣಯದ ದಿನಾಂಕದಿಂದ ಆರು ತಿಂಗಳುಗಳೊಳಗೆ ಮತ್ತು ಅಂಥ ನಿರ್ಣಯದಿಂದ ಬಾಧಿತನಾದ ಯಾವನೇ ವ್ಯಕ್ತಿಯು, ನಿರ್ಣಯದ ದಿನಾಂಕದಿಂದ ತೊಂಬತ್ತು ದಿನಗಳೊಳಗೆ [ಕರ್ನಾಟಕ] ರೆವಿನ್ಯೂ ಅಪೀಲು ನ್ಯಾಯಾಧಿಕರಣಕ್ಕೆ ಅಪೀಲು ಸಲ್ಲಿಸಬಹುದು ಹಾಗೂ ಅದರ ತೀರ್ಮಾನವೇ ಅಂತಿಮವಾಗಿರತಕ್ಕದ್ದು.
(2) ಯಾವುದೇ ಕಟ್ಟಡವು, 8ನೇ ಪ್ರಕರಣದ (2)ನೇ ಉಪ ಪ್ರಕರಣ ಅಥವಾ 9ನೇ ಪ್ರಕರಣದ (2)ನೇ
ಉಪಪ್ರಕರಣದ ಅಥವಾ 13ನೇ ಪ್ರಕರಣದ ವ್ಯಾಪ್ತಿಯೊಳಗೆ ಬರುತ್ತದೆಯೇ ಎಂಬ ಬಗ್ಗೆ ಯಾವುದೇ ಪ್ರಶ್ನೆಯು ಉದ್ಭವಿಸಿದರೆ,
ಅದನ್ನು [ಕರ್ನಾಟಕ]ರೆವಿನ್ಯೂ ಅಪೀಲು ನ್ಯಾಯಾಧಿಕರಣಕ್ಕೆ ಒಪ್ಪಿಸತಕ್ಕದ್ದು, ಅದರ ತೀರ್ಮಾನವೇ ಅಂತಿಮವಾಗಿರತಕ್ಕದ್ದು.
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(1) 27ನೇ ಪ್ರಕರಣದಡಿ ವಿಭಾಗಾಧಿಕಾರಿಯು ಮಾಡಿದ ಆದೇಶದಿಂದ ಬಾಧಿತನಾದ ಯಾವನೇ ವ್ಯಕ್ತಿಯು ಆ ಬಗ್ಗೆ ಅವನಿಗೆ ತಿಳಿಯಪಡಿಸಿದ ದಿನಾಂಕದಿಂದ ತೊಂಬತ್ತು ದಿವಸಗಳೊಳಗೆ ಉಚ್ಚ ನ್ಯಾಯಾಲಯಕ್ಕೆ ಅಪೀಲನ್ನು ಸಲ್ಲಿಸಬಹುದು.
(2) ಉಚ್ಚ ನ್ಯಾಯಾಲಯವು ಅಪೀಲಿನ ಉಭಯ ಪಕ್ಷಕಾರರಿಗೆ ತಮ್ಮ ಅಹವಾಲನ್ನು ಹೇಳಿಕೊಳ್ಳುವ ಸೂಕ್ತ
ಅವಕಾಶವನ್ನು ನೀಡಿದ ತರುವಾಯ ಅದರ ಬಗ್ಗೆ ತಾನು ಯೋಗ್ಯವೆಂದು ಭಾವಿಸಬಹುದಾದಂಥ ಆದೇಶವನ್ನು ಮಾಡತಕ್ಕದ್ದು.
ಯಾವನೇ ವ್ಯಕ್ತಿಗೆ ಮಾಡಿದ ಯಾವುದೇ ಸಂದಾಯವು ಈ ಅಧಿನಿಯಮದಡಿ ಅಥವಾ ಅನ್ಯಥಾ ಮಾಡಿದ ಯಾವುದೇ ಆದೇಶದ
ಆಧಾರದ ಮೇಲೆ ಆತನಿಗೆ ಬಾಕಿ ಇರಲಿಲ್ಲವೆಂದು ಅಥವಾ ಆತನಿಗೆ ಬಾಕಿಯಿರುವ ಮೊಬಲಗಿಗಿಂತ ಹೆಚ್ಚಾಗಿದೆ ಎಂಬುದಾಗಿ
ತರುವಾಯ ಕಂಡುಬಂದಿರುವಲ್ಲಿ, ಸಂದರ್ಭಾನುಸಾರ, ಬಾಕಿ ಇರಲಿಲ್ಲವೆಂದು ಅಥವಾ ಹೆಚ್ಚಿನದಾಗಿದೆಯೆಂದು
ಕಂಡುಬಂದಿರುವಲ್ಲಿ, ಅಂಥ ವ್ಯಕ್ತಿಗೆ ಬಾಕಿಯಿರುವ ಯಾವುದೇ ಮೊಬಲಗಿನಿಂದ ಕಡಿತ ಮಾಡುವ ಮೂಲಕ ಅನ್ಯಥಾ
ಹೊಂದಾಣಿಕೆ ಮಾಡುವಂತಿಲ್ಲದಿರುವ ಮೊಬಲಗನ್ನು, ಅದು ಭೂ ಕಂದಾಯದ ಬಾಕಿಯಾಗಿದ್ದರೆ ಹೇಗೋ ಹಾಗೆ ವಸೂಲಿ
ಮಾಡತಕ್ಕದ್ದು.
(1) ಜಿಲ್ಲಾಧಿಕಾರಿಯು, ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ
ತನಗೆ ಅಧೀನನಾಗಿರುವ ತಹಶೀಲ್ದಾರ್‍ನ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಯಾವನೇ ಅಧಿಕಾರಿಗೆ ಈ
ಅಧಿನಿಯಮದಡಿ ತನ್ನ ಪರವಾಗಿ ವಿಚಾರಣೆಗಳನ್ನು ನಡೆಸಲು ಅಧಿಕಾರ ನೀಡಬಹುದು:
ಪರಂತು, ಜಿಲ್ಲಾಧಿಕಾರಿಯು, ಯಾವನೇ ಅಂಥ ಅಧಿಕಾರಿಯು ನಡೆಸಿದ ಯಾವುದೇ ವಿಚಾರಣೆಯ ಸಂಬಂಧದಲ್ಲಿ
ಅಂಥ ಅಧಿಕಾರಿಯು ಆತನ ಅಭಿಪ್ರಾಯದಲ್ಲಿ ಹೊಸ ಅಥವಾ ಹೆಚ್ಚಿನ ವಿಚಾರಣೆಯ ಅವಶ್ಯವಿದ್ದರೆ ಹೊಸ ಅಥವಾ ಹೆಚ್ಚಿನ
ವಿಚಾರಣೆಯನ್ನು ನಡೆಸುವಂತೆ ನಿರ್ದೇಶಿಸಬಹುದು ಅಥವಾ ಸ್ವತಃ ತಾನೇ ಹೊಸ ಅಥವಾ ಹೆಚ್ಚಿನ ವಿಚಾರಣೆಯನ್ನು
ನಡೆಸಬಹುದು.
(2) ಜಿಲ್ಲಾಧಿಕಾರಿ ಅಥವಾ (1)ನೇ ಉಪಪ್ರಕರಣದಡಿ ಅಧಿಕಾರ ನೀಡಿದ ಯಾವನೇ ಅಧಿಕಾರಿಯು ನಡೆಸುವ ಈ
ಅಧಿನಿಯಮದಡಿಯ ಪ್ರತಿಯೊಂದು ವಿಚಾರಣೆಯ ಸಂಬಂಧದಲ್ಲಿ, ವಿಧ್ಯುಕ್ತ ವಿಚಾರಣೆಗೆ ಸಂಬಂಧಿಸಿದ ಅಧಿನಿಯಮದ
ಉಪಬಂಧಗಳನ್ನು ಅಂಥ ವಿಚಾರಣೆಯು, ಅಧಿನಿಯಮದಡಿಯ ವಿಧ್ಯಕ್ತ ವಿಚಾರಣೆಯಾಗಿದ್ದರೆ ಹೇಗೋ ಹಾಗೆ
ಅನ್ವಯಿಸತಕ್ಕದ್ದು.
[ಕರ್ನಾಟಕ]ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿಗದಿ ಅಧಿನಿಯಮ, 1958 (1958ರ [ಕರ್ನಾಟಕ] ಅಧಿನಿಯಮ 16)ರಲ್ಲಿ ಏನೇ ಒಳಗೊಂಡಿದ್ದರೂ, ಈ ಅಧಿನಿಯಮದ ಅಥವಾ ಇದರಡಿ ರಚಿಸಿದ ನಿಯಮಗಳಡಿಯ
ಯಾವುದೇ ಮನವಿ, ಜ್ಞಾಪನಪತ್ರ ಅಥವಾ ಅಪೀಲು ಅಥವಾ ಅರ್ಜಿಗೆ ಸಂದಾಯ ಮಾಡಬೇಕಾದ ಶುಲ್ಕಗಳು ಹಾಗೆ
ಗೊತ್ತುಪಡಿಸಬಹುದಾದಂತೆ ಇರತಕ್ಕದ್ದು.
1. 1976ರ ಅಧಿನಿಯಮ ಸಂಖ್ಯೆ 53ರ ಮೂಲಕ 18.8.1976 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(1) ಯಾವುದೇ ದಾವೆ, ಪ್ರಾಸಿಕ್ಯೂಷನ್ ಅಥವಾ ಇತರ ಕಾನೂನು ವ್ಯವಹರಣೆಯನ್ನು ಈ ಅಧಿನಿಯಮದ ಅಥವಾ ಇದರ ಮೇರೆಗೆ ರಚಿಸಿದ ಯಾವುದೇ ನಿಯಮಗಳಡಿ ಮಾಡಿದ ಅಥವಾ ಮಾಡಿರುವುದಾಗಿ ತಾತ್ಪರ್ಯವಾಗುವ ಯಾವುದೇ ಕಾರ್ಯಕ್ಕಾಗಿ, ರಾಜ್ಯ ಸರ್ಕಾರದ ವಿರುದ್ಧ ಹೂಡತಕ್ಕದ್ದಲ್ಲ.
(2) ರಾಜ್ಯ ಸರ್ಕಾರದ ಯಾವನೇ ಅಧಿಕಾರಿ ಅಥವಾ ನೌಕರನು, ಈ ಅಧಿನಿಯಮ ಅಥವಾ ಅದರ ಮೇರೆಗೆ
ರಚಿಸಿದ ಯಾವುದೇ ನಿಯಮದಡಿ ಮಾಡಿದ ಅಥವಾ ಮಾಡಿರುವುದಾಗಿ ತಾತ್ಪರ್ಯವಾಗುವ ಯಾವುದೇ ಕಾರ್ಯದ
ಸಂಬಂಧದಲ್ಲಿ ಆ ಕಾರ್ಯವನ್ನು ಈ ಅಧಿನಿಯಮದ ಮೂಲಕ ಅಥವಾ ಅದರಡಿ ವಿಧಿಸಿದ ಕರ್ತವ್ಯಗಳನ್ನು ನೆರವೇರಿಸುವಲ್ಲಿ
ಅಥವಾ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ಸದ್ಭಾವನೆಯಿಂದ ಮಾಡಿದ್ದರೆ, ಯಾವುದೇ ಸಿವಿಲ್ ಅಥವಾ ಕ್ರಿಮಿನಲ್
ವ್ಯವಹರಣೆಗಳಿಗೆ ಅವನು ಹೊಣೆಯಾಗತಕ್ಕದ್ದಲ್ಲ.
(3) ಯಾವುದೇ ಅಂಥ ಕರ್ತವ್ಯ ಅಥವಾ ಪ್ರಕಾರ್ಯದ ನೆಪದಲ್ಲಿ ಅಥವಾ ಅದನ್ನು ಮೀರಿ ರಾಜ್ಯ ಸರ್ಕಾರದ
ಯಾವನೇ ಅಧಿಕಾರಿ ಅಥವಾ ನೌಕರನು ಮಾಡಿದ ಯಾವುದೇ ಕಾರ್ಯದ ಸಂಬಂಧದಲ್ಲಿ ಯಾವುದೇ ದಾವೆ, ಪ್ರಾಸಿಕ್ಯೂಷನ್
ಅಥವಾ ಇತರ ಕಾನೂನು ವ್ಯವಹರಣೆಗಳನ್ನು ಅಂಥ ಅಧಿಕಾರಿ ಅಥವಾ ನೌಕರನ ವಿರುದ್ಧ ರಾಜ್ಯ ಸರ್ಕಾರದ
ಪೂರ್ವಾನುಮೋದನೆ ಇಲ್ಲದೆ ಹೂಡತಕ್ಕದ್ದಲ್ಲ ಮತ್ತು ಅಂಥ ದಾವೆ, ಪ್ರಾಸಿಕ್ಯೂಷನ್ ಅಥವಾ ಇತರ ಕಾನೂನು
ವ್ಯವಹರಣೆಗಳನ್ನು ಆರೋಪಿಸಿದ ಕಾರ್ಯದ ದಿನಾಂಕದಿಂದ ಒಂದು ವರ್ಷದ ಮುಕ್ತಾಯದ ತರುವಾಯ ಹೂಡತಕ್ಕದ್ದಲ್ಲ.
(4) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ಸಿವಿಲ್ ನ್ಯಾಯಾಲಯವು,-
(i) ಈ ಅಧಿನಿಯಮದ 10,12,17 ಮತ್ತು 23ನೇ ಪ್ರಕರಣಗಳಡಿ ಜಿಲ್ಲಾಧಿಕಾರಿಯು ನಿರ್ಧರಿಸಬೇಕಾಗಿರುವ
ಯಾವುದೇ ವಿಷಯಕ್ಕೆ ಸಂಬಂಧಪಟ್ಟ; ಅಥವಾ
(ii) 27ನೇ ಪ್ರಕರಣದಡಿ ವಿಭಾಗಾಧಿಕಾರಿಯು ಮಾಡಿರುವ ಒಂದು ಆದೇಶಕ್ಕೆ ಸಂಬಂಧಿಸಿದ ಮತ್ತು 30 ಅಥವಾ
31ನೇ ಪ್ರಕರಣದ ಮೂಲಕ ಪ್ರದಾನ ಮಾಡಿದ ಅಪೀಲಿನ ಹಕ್ಕಿಗೆ ಸಂಬಂಧಿಸಿದಂತೆ
- ಯಾವುದೇ ಮನವಿ ಅಥವಾ ದಾವೆಯನ್ನು ಅಂಗೀಕರಿಸತಕ್ಕದ್ದಲ್ಲ.
(1) ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ ಮತ್ತು ಪೂರ್ವ ಪ್ರಕಟಣೆಯ ಷರತ್ತಿಗೊಳಪಟ್ಟು, ಈ ಅಧಿನಿಯಮದ ಉದ್ದೇಶಗಳನ್ನು ಪಾಲಿಸಲು ನಿಯಮಗಳನ್ನು ರಚಿಸಬಹುದು.
(2) ವಿಶೇಷವಾಗಿ ಮತ್ತು ಈ ಹಿಂದೆ ಹೇಳಿದ ಉಪಬಂಧದ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ ಅಂಥ
ನಿಯಮಗಳಲ್ಲಿ,-
(ಎ) ಗೊತ್ತುಪಡಿಸಲು ಈ ಅಧಿನಿಯಮದ ಮೂಲಕ ಸ್ಪಷ್ಟವಾಗಿ ಅಗತ್ಯಪಡಿಸಿದ ಅಥವಾ ಅನುಮತಿಸಿದ ಎಲ್ಲ
ವಿಷಯಗಳಿಗಾಗಿ;
(ಬಿ) ಜಿಲ್ಲಾಧಿಕಾರಿ ಮತ್ತು ಈ ಅಧಿನಿಯಮದಡಿ ನೇಮಕಗೊಂಡ ಅಥವಾ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ
ಅಧಿಕಾರಿಗಳು ಅಥವಾ ಪ್ರಾಧಿಕಾರಗಳು ಅನುಸರಿಸಬೇಕಾದ ಕಾರ್ಯವಿಧಾನಕ್ಕಾಗಿ;
(ಸಿ) ಇದರಲ್ಲಿ ಆ ಬಗ್ಗೆ ಯಾವುದೇ ನಿರ್ದಿಷ್ಟ ಉಪಬಂಧವನ್ನು ಮಾಡಿಲ್ಲದಿರುವ ಸಂದರ್ಭಗಳಲ್ಲಿ, ಈ
ಅಧಿನಿಯಮದಡಿ ಯಾವ ಅವಧಿಯೊಳಗೆ ಅರ್ಜಿಗಳನ್ನು ಮತ್ತು ಅಪೀಲುಗಳನ್ನು ಸಲ್ಲಿಸಬಹುದಾಗಿರುವ ಅವಧಿಗಾಗಿ;
(ಡಿ) ಈ ಅಧಿನಿಯಮದಡಿ, ಅರ್ಜಿಗಳು, ಅಪೀಲುಗಳು ಮತ್ತು ವ್ಯವಹರಣೆಗಳಿಗೆ ಸಿವಿಲ್ ಪ್ರಕ್ರಿಯಾ ಸಂಹಿತೆ,
1908 ಮತ್ತು ಕಾಲ ಪರಿಮಿತಿ ಅಧಿನಿಯಮ, 1963ರ ಉಪಬಂಧಗಳ ಅನ್ವಯಕ್ಕಾಗಿ
- ಉಪಬಂಧವನ್ನು ಕಲ್ಪಿಸಬಹುದು.
(1) ಯಾರೇ ವ್ಯಕ್ತಿಯು,-
(ಎ) ಈ ಅಧಿನಿಯಮದಡಿ ಮಾಡಿದ ಯಾವುದೇ ಕಾನೂನುಬದ್ಧ ಆದೇಶವನ್ನು ಪಾಲಿಸಲು
ಉದ್ದೇಶಪೂರ್ವಕವಾಗಿ ವಿಫಲನಾದರೆ ಅಥವಾ ಉಪೇಕ್ಷಿಸಿದರೆ ಅಥವಾ ಯಾವುದೇ ಆದೇಶವನ್ನು ಉಲ್ಲಂಘಿಸಿದರೆ; ಅಥವಾ
(ಬಿ) ಈ ಅಧಿನಿಯಮದಡಿ ರಾಜ್ಯ ಸರ್ಕಾರದಲ್ಲಿ ನಿಹಿತವಾಗಿರುವ ಯಾವುದೇ ಸ್ವತ್ತಿನ ಪ್ರಭಾರ ಅಥವಾ
ಸ್ವಾಧೀನವನ್ನು ತೆಗೆದುಕೊಳ್ಳುವ ಜಿಲ್ಲಾಧಿಕಾರಿಗೆ ಪ್ರತಿರೋಧ ಅಥವಾ ಅಡ್ಡಿ ಉಂಟುಮಾಡಿದರೆ; ಅಥವಾ
(ಸಿ) ಆತನಿಗೆ ಸುಳ್ಳು ಎಂದು ಗೊತ್ತಿರುವ ಅಥವಾ ಸುಳ್ಳು ಎಂದು ನಂಬಲು ಅಥವಾ ನಿಜವೆಂದು ನಂಬದಿರಲು
ಕಾರಣವನ್ನು ಹೊಂದಿರುವ ಮಾಹಿತಿಯನ್ನು ಒದಗಿಸಿದರೆ
- ಆತನು ದಂಡಾಧಿಕಾರಿಯಿಂದ ಅಪರಾಧ ನಿರ್ಣಯವಾದ ಮೇಲೆ ಮೂರು ತಿಂಗಳುಗಳವರೆಗೆ ವಿಸ್ತರಿಸಬಹುದಾದ
ಕಾರಾವಾಸದಿಂದ ಅಥವಾ ಎರಡು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ
ಇವೆರಡರಿಂದಲೂ ದಂಡಿತನಾಗತಕ್ಕದ್ದು.
(2) (1)ನೇ ಉಪಪ್ರಕರಣದಡಿಯ ಯಾವುದೇ ಪ್ರಾಸಿಕ್ಯೂಷನ್‍ನ್ನು ಜಿಲ್ಲಾಧಿಕಾರಿಯ ಪೂರ್ವಾನುಮೋದನೆಯ
ಹೊರತು ಹೂಡತಕ್ಕದ್ದಲ್ಲ.
ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ತೊಂದರೆಯು ಉದ್ಭವಿಸಿದರೆ ರಾಜ್ಯ ಸರ್ಕಾರವು, ತೊಂದರೆಯನ್ನು ನಿವಾರಿಸುವ ಉದ್ದೇಶಕ್ಕಾಗಿ ಅದಕ್ಕೆ ಅವಶ್ಯವೆಂದು ಕಂಡುಬರಬಹುದಾದ, ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಾಗಿರದಂಥ ಆದೇಶವನ್ನು ಮಾಡಬಹುದು:
ಪರಂತು, ಯಾವುದೇ ಅಂಥ ಅಧಿಕಾರವನ್ನು ಈ ಅಧಿನಿಯಮದ ಪ್ರಾರಂಭದಿಂದ ಎರಡು ವರ್ಷಗಳ ಅವಧಿಯು
ಮುಕ್ತಾಯವಾದ ತರುವಾಯ ಚಲಾಯಿಸತಕ್ಕದ್ದಲ್ಲ.
36ನೇ ಪ್ರಕರಣದ ಅಡಿಯಲ್ಲಿ ರಚಿಸಿದ ಪ್ರತಿಯೊಂದು ನಿಯಮವನ್ನು ಮತ್ತು 38ನೇ ಪ್ರಕರಣದ ಅಡಿಯಲ್ಲಿ ಹೊರಡಿಸಿದ ಪ್ರತಿಯೊಂದು ಆದೇಶವನ್ನು, ಅದನ್ನು ರಚಿಸಿದ ಅಥವಾ ಹೊರಡಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲದ
ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿದಲ್ಲಿರುವಾಗ ಅದರ ಒಂದು ಅಧಿವೇಶನದಲ್ಲಿ ಅಥವಾ ಒಂದಾದ
ಮೇಲೊಂದರಂತೆ ಅನುಕ್ರಮವಾಗಿ ಬರುವ ಎರಡು ಅಥವಾ ಹೆಚ್ಚು ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತು
ದಿವಸಗಳ ಅವಧಿಯವರೆಗೆ ಇಡತಕ್ಕದ್ದು, ಮತ್ತು ಹಾಗೆ ಇಡಲಾದ ಅಧಿವೇಶನದ ನಿಕಟೋತ್ತರದ ಅಧಿವೇಶನವು ಅಥವಾ
ಅನುಕ್ರಮ ಅಧಿವೇಶನವು ಮುಕ್ತಾಯವಾಗುವುದಕ್ಕೆ ಮುಂಚೆ, ಆ ನಿಯಮ ಅಥವಾ ಆದೇಶದಲ್ಲಿ ಯಾವುದೇ ಮಾರ್ಪಾಟನ್ನು
ಮಾಡಬೇಕೆಂದು ಎರಡೂ ಸದನಗಳು ಒಪ್ಪಿದರೆ ಅಥವಾ ಆ ನಿಯಮವನ್ನು ಅಥವಾ ಆದೇಶವನ್ನು ಮಾಡಕೂಡದೆಂದು
ಎರಡೂ ಸದನಗಳು ಒಪ್ಪಿದರೆ, ಆ ನಿಯಮವು ಅಥವಾ ಆದೇಶವು, ಆ ಮಾರ್ಪಾಟನ್ನು ಅಥವಾ ರದ್ದಿಯಾತಿಯನ್ನು ರಾಜ್ಯ
ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚಿಸಿದ ದಿನಾಂಕದಿಂದ, ಸಂದರ್ಭಾನುಸಾರ ಹಾಗೆ ಮಾರ್ಪಾಟಾದ ರೂಪದಲ್ಲಿ
ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ಕದ್ದಲ್ಲ; ಆದಾಗ್ಯೂ, ಅಂಥ ಯಾವುದೇ ಮಾರ್ಪಾಟು
ಅಥವಾ ರದ್ದಿಯಾತಿಯು ಆ ನಿಯಮ ಅಥವಾ ಆದೇಶದ ಅಡಿಯಲ್ಲಿ ಈ ಹಿಂದೆ ಮಾಡಿದ ಯಾವುದೇ ಕಾರ್ಯದ
ಸಿಂಧುತ್ವಕ್ಕೆ ಬಾಧಕವನ್ನುಂಟುಮಾಡತಕ್ಕದ್ದಲ್ಲ.
ಅಧಿಸೂಚನೆ
ಅಧಿನಿಯಮವನ್ನು ಜಾರಿಗೊಳಿಸಿರುವ ಅಧಿಸೂಚನೆಯು ಲಭ್ಯವಿರುವುದಿಲ್ಲ.
The above translation of the Karnataka (Belgaum and Gulbarga Areas) Religious
and Charitable Inams Abolition Act, 1973 (26 of 1973) shall be authoritative text in the
Kannada Language under section 5A of the Karnataka Official Language Act, 1963.
Governor of Karnataka
ಭಾರತದ ರಾಷ್ಟ್ರಪತಿಯವರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ.ಕೆ. ಬೋರೇಗೌಡ
ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ.
ಕೊನೆಯ ಮಾರ್ಪಾಟು : 7/24/2020