অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಗಳ ಆಯೋಗ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಗಳ ಆಯೋಗ

ಗುರಿ

ಈ ಯೋಜನೆಯಡಿಯಲ್ಲಿ ವಾರ್ಷಿಕವಾಗಿ ನಿಗದಿಪಡಿಸಿದ ಗುರಿ ಇರುವುದಿಲ್ಲ. ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಗುರಿಯು ಇರುತ್ತದೆ. 2015-16ನೇ ಸಾಲಿನಲ್ಲಿ 22 ಪ್ರಕರಣಗಳು ಬಾಕಿ ಇದ್ದು , ಹಂತ ಹಂತವಾಗಿ ವಿಲೇವಾರಿಗೆ ಕ್ರಮವಹಿಸಲಾಗುತ್ತಿದೆ.

ಕಾರ್ಯಕ್ರಮ 1

“Prohibition of Employment as Manual Scavengers Act 2013” Rule 5,6,7,9 ರನ್ವಯ ಮ್ಯಾನುವಲ್ ಸ್ಕ್ಯಾವೆಂಜಿಂಗ್  ಪ್ರಕರಣಗಳಲ್ಲಿ ಭಾಗಿಯಾಗಿರುವ ಇಂತಹ ಪ್ರಕರಣಗಳಲ್ಲಿ ಆಪಾದಿತ ಸಫಾಯಿ ಕರ್ಮಚಾರಿ ಗಳಿಗೆ ಪುನರ್ವಸತಿ ಯನ್ನು ಕಲ್ಪಿಸುವ ಯೋಜನೆ ಇದಾಗಿರುತ್ತದೆ.

ಅರ್ಹತೆ

  1. ಈ ಯೋಜನೆಯಡಿಯಲ್ಲಿ  ಸವಲತ್ತು ಪಡೆಯುವ ಫಲಾನುಭವಿಯು ಸಫಾಯಿ ಕರ್ಮಚಾರಿ ಗಳಾಗಿರತಕ್ಕದ್ದು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಅಥವಾ ಮಾನ್ಯತೆ ಪಡೆದ ಪ್ರಾಧಿಕಾರದಿಂದ ಸಂಖ್ಯೆಯುಳ್ಳ ಗುರುತಿನ ಚೀಟಿ ಹೊಂದಿರತಕ್ಕದ್ದು.
  2. PEMS Act 2013 ರ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪುನರ್ವಸತಿ ಗಾಗಿ ಅರ್ಹತೆ  ಇರತಕ್ಕದ್ದು.
  3. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪುನರ್ವಸತಿ ಗಾಗಿ ಅರ್ಹತೆ  ಇರತಕ್ಕದ್ದು.
  • ಫಲಾನುಭಾವಿಯ ಹೆಸರಿನಲ್ಲಿ ಉಳಿತಾಯ ಖಾತೆ ತೆರೆದು ರೂ. 40,000/- ಗಳ ನಗದನ್ನು ಠೇವಣಿ ಇಡಲಾಗುವುದು. ಈ ಮೊತ್ತವನ್ನು ಸ್ಥಳೀಯ ಸಂಸ್ಥೆಗಳು ಅಥವಾ NSKFDC ನವದೆಹಲಿ ಇವರು ಭರಿಸತಕ್ಕದ್ದು.
  • ಅವಲಂಬಿತರ ಮಕ್ಕಳಿಗೆ ಅನೈರ್ಮಲ್ಯ  ವೃತ್ತಿಯಲ್ಲಿ ತೊಡಗಿರುವವರಿಗೆ ರೂ. 2,150/- ವಿದ್ಯಾರ್ಥಿ ವೇತನ ಮಾಸಿಕವಾಗಿ ಸಮಾಜ ಕಲ್ಯಾಣ ಇಲಾಖೆ ,ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಲೆಕ್ಕ ಶೀರ್ಷಿಕೆ ಯಿಂದ ಪಾವತಿಸತಕ್ಕದ್ದು.
  • ಮನೆ ಅಥವಾ ನಿವೇಶನ ಇಲ್ಲದವರಿಗೆ ಆದ್ಯತೆ ಮೇರೆಗೆ ಸ್ಥಳೀಯ ಪ್ರಾಧಿಕಾರಿಗಳು ಅಥವಾ ಯಾವುದೇ ಅಭಿವೃದ್ಧಿ ಪ್ರಾಧಿಕಾರಿಗಳು ಮನೆ ಅಥವಾ ನಿವೇಶನ ಒದಗಿಸತಕ್ಕದ್ದು.
  • ಡಾ||ಬಿ.ಆರ್. ಅಂಬೇಡ್ಕರ್ ನಿಗಮದಿಂದ “ಸಫಾಯಿ ಕರ್ಮಚಾರಿ ಗಳ ಪುನರ್ವಸತಿ  “(SKRP) ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ  ಕೈಗೊಳ್ಳಲು ಹಾಗೂ ನೇರ ಸಾಲ ಅಡಿಯಲ್ಲಿ ವ್ಯಾಪಾರ ಮತ್ತು ಬಾಡಿಗೆ ಟ್ಯಾಕ್ಸಿ ಓಡಿಸಲು ಸಾಲ ಮತ್ತು ಸಹಾಯ ಧನ ನೆರವು ನೀಡುವುದು.
  • ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು.
  • 5 ರಿಂದ 12ನೇ ತರಗತಿಯವರೆಗಿನ ವ್ಯಾಸಂಗಕ್ಕಾಗಿ ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ ,ಏಕಲವ್ಯ , ನವೋದಯ ಮುಂತಾದ ಪ್ರತಿಷ್ಟಿತ ಶಾಲೆಗಳಲ್ಲಿ ಉಚಿತ ಪ್ರವೇಶ ನೀಡಬೇಕಾಗುತ್ತದೆ.

ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

ಕೊನೆಯ ಮಾರ್ಪಾಟು : 7/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate