ಒಟ್ಟು ಜನಸಂಖ್ಯೆಯಲ್ಲಿ 18 ವಯೋಮಿತಿಯ ಒಳಗಿರುವ ಮಕ್ಕಳ ಶೇಕಡಾ ವಾರು ಜನಸಂಖ್ಯೆಯು ಗಣನೀಯ ವಾಗಿರುತ್ತದೆ. ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯು ಈ ಮಕ್ಕಳ ಕಲ್ಯಾಣ ಹಾಗು ಅಬಿವೃದ್ಧಿಯ ಹೊಣೆ ಹೊತ್ತಿದೆ. ಈ ಮಕ್ಕಳಿಗೆ ಶಿಕ್ಷಣಕ್ಕೆ ಅನುವುಮಾಡುವಂತಹ, ಆಥರ್ಿಕ ಮತ್ತು ಲೈಂಗಿಕವಾಗಿ ಶೋಷಿತರಾಗದಂತೆ ರಕ್ಷಿಸುವ ಮತ್ತು ಘನತೆಯಿಂದ ಸುರಕ್ಷಿತರಾಗಿ ಬಾಳುವಂತೆ ಮಾಡುವ ವಾತಾವರಣವನ್ನು ಸೃಷ್ಠಿಸಬೇಕಾಗಿದೆ.
ಮಗು ಹುಟ್ಟಿದ ದಿನದಿಂದ 18 ವರ್ಷ ತುಂಬುವವರೆಗೆ ಆಮಗುವಿನ ಪ್ರಮುಖ ಹಂತಗಳ ಹೆಜ್ಜೆಯನ್ನು ಯಶಸ್ವಿಯಾಗಿ ಅನುಸರಿಸಿ ಗಮಸಿಸುವುದು ಚೈಲ್ಡ್ ಟ್ರ್ಯಾಕಿಂಗ್ ಪದ್ದತಿಯ ಮಹತ್ವವಾಗಿರುತ್ತದೆ.
ಮಗುವಿನ ಶಿಕ್ಷಣ, ಬಾಲ್ಯ ವಿವಾಹ ತಡೆಯುವುದು, ಬೆಳವಣಿಗೆಯನ್ನು ಅನುಸರಣೆ ಮಾಡಲು ಮಗುವಿಗೆ ಸಂಬಂದಿಸಿದ ಮಾಹಿತಿ ಸುಲಭವಾಗಿ ಶೀಘ್ರವಾಗಿ ದೊರಕುವಂತೆ ಮಾಡಲು ಈ ಪದ್ದತಿಯು ಅನುಕೂಲವಾಗುವುದು..
ಈ ಹಿನ್ನೆಲೆಯಲ್ಲಿ ಇಲಾಖೆಯು ಕನರ್ಾಟಕದಲ್ಲಿ ಚೈಲ್ಡ್ ಟ್ರ್ಯಾಕಿಂಗ್ ಪದ್ದತಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಕಾರದೊಂದಿಗೆ ಆರಂಬಿಸಿದೆ. ಇದಕ್ಕಾಗಿ ಅಬಿವೃದ್ಧಿ ಪಡಿಸಿರುವ ಸಾಫ್ಟ್ವೇರ್ನಲ್ಲಿ ನೋಡುಗರಿಗೆ ಫಲಾನುಭವಿಗಳ ಆರೋಗ್ಯ, ಶೈಕ್ಷಣಿಕ, ಇತರ ಮೂಲಗಳಿಂದ ಪಡೆದ ಸೌಲಭ್ಯಗಳು ಹಾಗೂ ಫಲಾನುಭವಿಗೆ ಆಗಿಂದಾಗ್ಗೆ ನೀಡಿರುವ ಆಥರ್ಿಕ ಸಹಾಯ ಮತ್ತು ವಲಸೆಯ ವಾಸ್ತವ ಸ್ಥಿತಿಗತಿಯನ್ನು ನೋಡಲು ಅವಕಾಶವಾಗುತ್ತದೆ.
ಕೊನೆಯ ಮಾರ್ಪಾಟು : 10/17/2019
ಸಾಮಾನ್ಯವಾಗಿ ನಿಪ್ಸೆಡ್ ಎಂದು ಗುರುತಿಸಲಾಗಿರುವ ರಾಷ್ಟ್ರೀಯ...
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯನ್ನು, ಮಹಿಳ ಮತ್ತು...