অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಾಲ್ಯ ವಿವಾಹ ನಿಷೇಧ ಕಾಯ್ದೆ

ಬಾಲ್ಯ ವಿವಾಹ ನಿಷೇಧ ಕಾಯ್ದೆ

ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು:-

ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಎಲ್ಲಾ ಮಕ್ಕಳಿಗೆ ಆರೈಕೆ ಮತ್ತು ಸುರಕ್ಷೆ:-
ಒಬ್ಬ ಪರಿಪೂರ್ಣ ಹಾಗೂ ಸಮಗ್ರ ವ್ಯಕ್ತಿಯಾಗಿ ಬೆಳೆಯುವ ಹಕ್ಕು ಇದೆ. ಬಾಲ್ಯ ವಿವಾಹ ಈ ಎಲ್ಲಾ ಹಕ್ಕುಗಳನ್ನು ಅಸಹನೀಯವಾಗಿ ಉಲ್ಲಂಘಿಸುತ್ತದೆ.

ದೈಹಿಕ ಮತ್ತು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು:-

  1. ವಯಸ್ಸಿಗೆ ಮೀರಿದ ಜವಾಬ್ದಾರಿ ಹೇರಿಸಿದಂತಾಗುತ್ತದೆ.
  2. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ.
  3. ವಿಕಲಾಂಗ ಮಕ್ಕಳ ಜನನವುಂಟಾಗುತ್ತದೆ.
  4. ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಹಾಗೂ ಬಲತ್ಕಾರಕ್ಕೆ ಒಳಗಾಗುತ್ತಾರೆ.
  5. ಲೈಂಗಿಕ ಖಾಯಿಲೆಗಳಿಂದ ಹೆಚ್.ಐ,ವಿ./ಏಡ್ಸ್ ಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.
  6. ರಕ್ತ ಹೀನತೆ ಉಂಟಾಗುತ್ತದೆ ಹಾಗೂ ಕಡಿಮೆ ತೂಕದ ಮಗುವಿನ ಜನನದ ಸಾಧ್ಯತೆ ಇರುತ್ತದೆ.
  7. ಶಿಶು ಮರಣ ಹಾಗೂ ಮಕ್ಕಳ ಮರಣ ಹೆಚ್ಚಾಗುತ್ತದೆ.
  8. ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ.
  9. ಗರ್ಭಪಾತ ಹೆಚ್ಚಾಗುತ್ತದೆ.
  10. . ಗರ್ಭ ಚೀಲಕ್ಕೆ ಪೆಟ್ಟು ಬೀಳುತ್ತದೆ.

ಮಾನಸಿಕ ದುಷ್ಪರಿಣಾಮಗಳು:-

  1. ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ.
  2. ಖಿನ್ನತೆ ಕಂಡು ಬರುತ್ತದೆ.
  3. ಭಯಭೀತ ವಾತಾವರಣ ಕಲ್ಪಸಿದಂತಾಗುತ್ತದೆ.
  4. ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವುದು.

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಮತ್ತು ನಿಯಾಮವಳಿಗಳು 2008 ಅನುಷ್ಠಾನ:-

  1. ಈ ಕಾಯ್ದೆಯು ಜಮ್ಮು-ಕಾಶ್ಮೀರ ಮತ್ತು ಪಾಂಡಿಚೇರಿ ಹೊರತು ಪಡಿಸಿ ಭಾರತದ ಎಲ್ಲಾ ನಾಗರೀಕರಿಗೆ ಅನ್ವಯಿಸುತ್ತದೆ.
  2. ಈ ಕಾಯ್ದೆಯಡಿ ಬಾಲ್ಯ ವಿವಾಹವು ಜಾಮೀನು ರಹಿತ ಹಾಗೂ ವಿಚಾರಣಾರ್ಹ ಅಪರಾಧವಾಗಿರುತ್ತದೆ.

ಬಾಲ್ಯ ವಿವಾಹದಲ್ಲಿ ಈ ಕೆಳಗಿನವರು ತಪ್ಪಿತಸ್ಥರಾಗಿರುತ್ತಾರೆ.

  1. ಮಕ್ಕಳನ್ನು ಮದುವೆಯಾಗುವ ಯಾವುದೇ ವಯಸ್ಕ ವ್ಯಕ್ತಿ.
  2. ಬಾಲ್ಯ ವಿವಾಹವನ್ನು ಏರ್ಪಡಿಸುವ, ನಿರ್ದೇಶಿಸುವ, ನೆರವೇರಿಸುವ ಮತ್ತು ಕುಮ್ಮಕ್ಕು ನೀಡುವ ಯಾವುದೇ ವ್ಯಕ್ತಿ/ಸಂಸ್ಥೆ.
  3. ಮಗುವನ್ನು ಹೆತ್ತವರು/ಪೋಷಕರು/ಸಂರಕ್ಷಕರು.
  4. ಮಗುವಿನ ಜವಾಬ್ದಾರಿಯನ್ನು ಹೊತ್ತ ಯಾವುದೇ ವ್ಯಕ್ತಿ/ಸಂಸ್ಥೆಯ ನಿರ್ಲಕ್ಷ್ಯತೆಯಿಂದ ಬಾಲ್ಯ ವಿವಾಹವನ್ನು ತಡೆಯಲು ವಿಫಲರಾದವರು
  5. ಬಾಲ್ಯ ವಿವಾಹದಲ್ಲಿ ಭಾಗವಹಿಸುವವರು/ಭಾಗವಹಿಸಿದವರು/ ಕಾಯ್ದೆಯಡಿ ನೀಡಿದ ತಡೆಯಾಜ್ಞೆಯನ್ನು ಉಲ್ಲಂಘಿಸಿದವರು.
  • ಬಾಲ್ಯ ವಿವಾಹ ಅಪರಾಧಕ್ಕೆ ನಿಗದಿಪಡಿಸಿದ ಶಿಕ್ಷೆ:-
  • ಎರಡು ವರ್ಷಗಳವರೆಗೆ ಕಠಿಣ ಜೈಲುವಾಸ ಅಥವಾ 1 ಲಕ್ಷ ರೂ. ವರೆಗೆ ದಂಡ ಅಥವಾ ಎರಡೂ
  • ಅಪರಾಧಿ ಮಹಿಳೆಯಾದಲ್ಲಿ ಜೈಲು ಶಿಕ್ಷೆ ವಿಧಿಸುವಂತಿಲ್ಲ

ಬಾಲ್ಯ ವಿವಾಹ ಅನೂರ್ಜಿತ/ಅಸಿಂಧು/ಶೂನ್ಯವಾಗುವ ಸಂದರ್ಭಗಳು:-

  1. ವಿವಾಹ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕರಾಗಿದ್ದ ಯಾವುದೇ ಕರಾರು ಪಕ್ಷವು ಜಿಲ್ಲಾ ನ್ಯಾಯಾಲಯವನ್ನು ಅಸಿಂಧು ಆಜ್ಞೆಯ ಮೂಲಕ ರದ್ದುಪಡಿಸಬೇಕೆಂದು ಮನವಿ ಮಾಡಿಕೊಂಡಾಗ,(ಅಸಿಂಧು)    ಸೆಕ್ಷನ್-3.
  2. ಕಾನೂನು ಬದ್ದ ಪೋಷಕರ ಬಳಿಯಿಂದ ಬಲವಂತವಾಗಿ ಒಯ್ಯಲ್ಪಟ್ಟಿರುತ್ತಾರೋ,
  3. ಬಲವಂತದಿಂದ ಅಥವಾ ವಂಚನೆಯಿಂದ ಪ್ರೇರೇಪಿಸಲ್ಪಟ್ಟಿರುತ್ತಾರೋ,
  4. ವಿವಾಹ ಉದ್ದೇಶದಿಂದ ಮಾರಾಟ, ವಿವಾಹದ ನಂತರ ಮಾರಾಟ (ಶೂನ್ಯ ಮತ್ತು ಅಸಿಂಧು)ಸೆಕ್ಷನ್-12.

ಸೆಕ್ಷನ್-13 ರಡಿಯಲ್ಲಿ ಹೊರಡಿಸಿದ ತಡೆಯಾಜ್ಞೆ ಉಲ್ಲಂಘಿಸಿ ನಡೆಸುವ ಬಾಲ್ಯ ವಿವಾಹ (ಪ್ರಾರಂಬದಿಂದಲೇ ಶೂನ್ಯ)ಸೆಕ್ಷನ್-

ಬಾಲ್ಯ ವಿವಾಹದಲ್ಲಿ ಹೆಣ್ಣು ಮಗುವಿಗಿರುವ ಅವಕಾಶಗಳು:-

  1. ಮದುವೆ ಸಮಯದಲ್ಲಿ ನೀಡಲಾದ ಹಣ, ಒಡವೆ ಮತ್ತಿತರ ಮೌಲ್ಯದ ವಸ್ತುಗಳನ್ನು ಪರಸ್ಪರ ಹಿಂದಿರುಗಿಸಲು ಜಿಲ್ಲಾ ನ್ಯಾಯಾಲಯವು ಆದೇಶಿಸಬಹುದು. (ಸೆಕ್ಷನ್-3(4)).
  2. ಹುಡುಗಿ ಮರುಮದುವೆಯಾಗುವತನಕ ನಿರ್ವಹಣಾ ವೆಚ್ಚವನ್ನು ಗಂಡಿನ ಕಡೆಯವರು ನೀಡುವಂತೆ ಜಿಲ್ಲಾ ನ್ಯಾಯಾಲಯವು ಆದೇಶಿಸಬಹುದು. (ಸೆಕ್ಷನ್-4(1)).
  3. ಒಂದು ಪಕ್ಷ ಹೆಣ್ಣು ಮಕ್ಕಳು ಪ್ರಕರಣವನ್ನು ದಾಖಲಿಸಿದ್ದರೆ, ಮರು ಮದುವೆಯಾಗುವ ತನಕ ಆಕೆಯ ವಾಸ್ತವ್ಯದ ಕುರಿತಂತೆ ಜಿಲ್ಲಾ ನ್ಯಾಯಾಲಯವು ಆದೇಶಿಸಬಹುದು. (ಸೆಕ್ಷನ್-4(4)).
  4. ಬಾಲ್ಯ ವಿವಾಹದಿಂದ ಜನಿಸುವ ಮಗುವಿನ ನಿರ್ವಹಣಾ ವೆಚ್ಚ ನೀಡಲು ಆದೇಶ. (ಸೆಕ್ಷನ್-5(4)).

ಬಾಲ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ಇರುವ ಅವಕಾಶಗಳು:-

  1. ಬಾಲ್ಯ ವಿವಾಹಿತರಿಗೆ ಜನಿಸಿದ ಮಗು ನ್ಯಾಯಸಮ್ಮತ(ಔರಸ) ಎಂದು ಎಲ್ಲಾ ಸಂದರ್ಭಗಳಲ್ಲೂ ಪರಿಗಣಿಸಲ್ಪಡುತ್ತದೆ.ಸೆಕ್ಷನ್-(6)
  2. ಜಿಲ್ಲಾ ನ್ಯಾಯಾಲಯವು ಮಗುವಿನ ಜವಾಬ್ದಾರಿ ಕುರಿತು ಆದೇಶ ಹೊರಡಿಸುವಾಗ ಮಗುವಿನ ಹಿತರಕ್ಷಣೆ ಮತ್ತು ಒಳಿತು ಪ್ರಧಾನ ಆಧ್ಯತೆಯಾಗಿರಬೇಕು. ಸೆಕ್ಷನ್-5(2).
  3. ಮಗುವಿನ ಸುಪರ್ದಿ ಆಜ್ಞೆಯಲ್ಲಿ ಇನ್ನೊಂದು ಕಡೆಯವರು ಮಗುವನ್ನು ಭೆಟಿಯಾಗುವ ಅವಕಾಶ ನೀಡುವಂತಹ ನಿರ್ದೇಶನ ಒಳಗೊಂಡಿರಬೇಕು. ಸೆಕ್ಷನ್-5(3).
  4. ಮದುವೆಯಾದ ವ್ಯಕ್ತಿ ಅಥವಾ ಆ ವ್ಯಕ್ತಿಯು ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಅವರ ಪೋಷಕರು ಮಗುವಿನ ನಿರ್ವಹಣೆಯನ್ನು ಭರಿಸುವಂತೆ ಆದೇಶಿಸಬಹುದು. ಸೆಕ್ಷನ್-5(4).

ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-


ಈ ಅಧಿನಿಯಮದ ಸೆಕ್ಷನ್ -16(1) ರನ್ವಯ ನೇಮಕವಾದ ಅಧಿಕಾರಿಗಳು:-
ರಾಜ್ಯ ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-

  1. ನಿರ್ದೇಶಕರು, ಯೋಜನಾ ನಿರ್ದೇಶಕರು, ಐಸಿಪಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
  2. ಡೈರಕ್ಟರ್ ಜನರಲ್ ಆಫ್ ಪೋಲೀಸ್, ಇನ್ ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್.
  3. ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.
  4. ಸರ್ಕಾರದ ಕಾರ್ಯದರ್ಶಿಗಳು, ಕಂದಾಯ ಇಲಾಖೆ.
  5. ನಿರ್ದೇಶಕರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ.
  6. ಆಯುಕ್ತರು, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
  7. ಆಯುಕ್ತರು, ಕಾರ್ಮಿಕ ಇಲಾಖೆ.
  8. ಆಯುಕ್ತರು,  ಸಮಾಜ ಕಲ್ಯಾಣ ಇಲಾಖೆ.
  9. ನಿರ್ದೇಶಕರು, ಟ್ರೈಬಲ್ ವೆಲ್ ಫೇರ್ ಡಿಪಾರ್ಟಮೆಂಟ್.

ಜಿಲ್ಲಾ ಮಟ್ಟದ  ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-

  1. ಜಿಲ್ಲಾಧಿಕಾರಿಗಳು.
  2. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು.
  3. ಹಿರಿಯ ಮಕ್ಕಳ ಅಭಿವೃದ್ಧಿ  ಅಧಿಕಾರಿ, ಸ್ಪೆಷಲ್ ಜುವೆನೈಲ್ ಪೋಲೀಸ್ ಯೂನಿಟ್, ಪೋಲೀಸ್ ಇಲಾಖೆ.
  4. ಉಪ ನಿರ್ದೇಶಕರು, ನಿರೂಪಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
  5. ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ.
  6. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ.
  7. ಜಿಲ್ಲಾ ಅಧಿಕಾರಿ, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
  8. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ.
  9. ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ.
  10. ಪ್ರಾಜೆಕ್ಟ್ ಡೆವಲಪ್ ಮೆಂಟ್ ಆಫೀಸರ್ ಟ್ರೈಬಲ್ ವೆಲ್ ಫೇರ್ ಡಿಪಾರ್ಟ ಮೆಂಟ್.
  11. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ಐಸಿಪಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-

  1. ತಹಶಿಲ್ದಾರರು.
  2. ಕಾರ್ಮಿಕಾಧಿಕಾರಿಗಳು, ಕಾರ್ಮಿಕ ಇಲಾಖೆ
  3. ಕ್ಷೇತ್ರ ಶಿಕ್ಷಣಾಧಿಕಾರಿಗಳು
  4. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಂರಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
  5. ತಾಲ್ಲೂಕು ವೈದ್ಯಾಧಿಕಾರಿ,  ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
  6. ಸರ್ಕಲ್ ಇನ್ ಸ್ಪೆಕ್ಟರ್, ಪೋಲೀಸ್ ಇಲಾಖೆ.
  7. ಕಾರ್ಯ ನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ.
  8. ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ,
  9. ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ.

ಗ್ರಾಮ ಪಂಚಾಯಿತಿ ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-

  1. ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಪೋಲೀಸ್ ಸಬ್ ಇನ್ ಸ್ಪೆಕ್ಟರ್.

ಗ್ರಾಮ ಪಂಚಾಯಿತಿ ಮಟ್ಟದ/ನಗರ ಸಭೆ/ಪುರ ಸಭೆ  ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-

  1. ಶಾಲಾ ಮುಖ್ಯೋಪಾಧ್ಯಾಯರು, ಕಂದಾಯ ನಿರೀಕ್ಷಕರು(ರೆವೆನ್ಯೂ ಇನ್ ಸ್ಪೆಕ್ಟರ್), ಹೆಲ್ತ್ ಇನ್ ಸ್ಪೆಕ್ಟರ್, ಕಾರ್ಮಿಕಾಧಿಕಾರಿ, ಗ್ರಾಮ ಲೆಕ್ಕಿಗರ, ಕಂದಾಯಾಧಿಕಾರಿಗಳು.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಪಾತ್ರ:-

  1. ಬಾಲ್ಯ ವಿವಾಹದ ಮುನ್ನ ಪಾಲಕರಿಗೆ ಕಾಯ್ದೆ ಬಗ್ಗೆ ತಿಳುವಳಿಕೆ ನೀಡುವುದು.
  2. ಸಾಮೂಹಿಕ ಮದುವೆ ಏರ್ಪಡಿಸುವವರು. ವಿವಾಹಕ್ಕೆ ಒಳಪಟ್ಟವರ ಅಗತ್ಯ ಮಾಹಿತಿಯುಳ್ಳ ವಹಿ ನಿರ್ವಹಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
  3. ವಿವಿಧ ಕಾಯ್ದೆಯಡಿ ನೋಂದಣಿಯಾಗಿರುವ ಸಂಘ-ಸಂಸ್ಥೆಗಳ ಡೈರಿಕ್ಟರಿ ಹೊಂದಿರಬೇಕು.
  4. ಬಾಲ್ಯ ವಿವಾಹ ನಡೆದ ಬಗ್ಗೆ ಪ್ರತಿ ತ್ರೈಮಾಸಿಕಕ್ಕೊಮ್ಮೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡುವುದು.
  5. ಬಾಲ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ನ್ಯಾಯಾಲಯದಿಂದ ಸೂಕ್ತ ಆದೇಶ  ಪಡೆಯಲು ಸಹಕರಿಸಬೇಕು.
  6. ಬಾಲ್ಯ ವಿವಾಹವು ನಡೆಯಬಹುದೆಂದು ತಿಳಿದ ಸಮಯದಲ್ಲಿ ಅದನ್ನು ತಡೆಯಲು ಎಲ್ಲಾ ರೀತಿಯ ನೆರವನ್ನು ಒದಗಿಸುವುದು.
  7. ಸಮುದಾಯಕ್ಕೆ ಬಾಲ್ಯ ವಿವಾಹ ಕಾಯ್ದೆಯಡಿ ಇರುವ ಅವಕಾಶಗಳ ಬಗ್ಗೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು.
  8. ಕುಟುಂಬದ ಘನತೆ-ಗೌರವಕ್ಕೆ ಧಕ್ಕೆ ಬಾರದಂತೆ ಬಹಳ ಎಚ್ಚರಿಕೆಯಿಂದ ಕರ್ತವ್ಯವನ್ನು ನಿಭಾಯಿಸುವುದು.
  9. ಬಾಲ್ಯ ವಿವಾಹವನ್ನು ತಡೆಗಟ್ಟುವುದು ಪ್ರಥಮ ಗುರಿಯಾಗಿರಬೇಕು. ಬೇರಾವುದೆ ದಾರಿ ಇಲ್ಲದಿದ್ದಾಗ ಮಾತ್ರ ಪ್ರಾಸಿಕ್ಯೂಷನ್ ಗೆ ಪ್ರಯತ್ನಿಸಬೇಕು.
  10. ಬಾಲ್ಯ ವಿವಾಹ ನಿಷೇಧ ಅಧಿಕಾರಿಯು ಬಾಲ್ಯ ವಿವಾಹವನ್ನು ತಡೆಗಟ್ಟುವ ಸಲುವಾಗಿ ಸಮಾಜ ಸೇವಾ ದೃಷ್ಠಿಯಿಂದ ತನಗೆ ಸರಿ ಎನಿಸಿದ ಕ್ರಮವನ್ನು ವಹಿಸಬಹುದು. ಹೀಗೆ ಮಾಡುವಾಗ     ಸಮುದಾಯದ     ಗೌರವಾನ್ವಿತ ಸದಸ್ಯರ ಸಹಾಯವನ್ನು ಪಡೆಯಬಹುದು.
  11. ಇದಲ್ಲದೆ ಸೆಕ್ಷನ್ 3, 4, 5 ಹಾಗೂ 13 ರ ಅಡಿಯಲ್ಲಿ ಆಜ್ಞೆ ಹೊರಡಿಸಲು ನ್ಯಾಯಾಲಯಕ್ಕೆ ಸಂವೇದನೆಯನ್ನು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. (ಸೆಕ್ಷನ್-16(5)).
  12. ಈ ಅಧಿನಿಯಮವನ್ನು ಅಥವಾ ಅದರಡಿಯಲ್ಲಿ ಮಾಡಿರುವ ನಿಯಮ/ಆದೇಶಗಳನ್ನು ಪಾಲಿಸುವ ಸದುದ್ದೇಶದಿಂದ ಮಾಡಿದ ಕೆಲಸಗಳನ್ನು ಆಧರಿಸಿ, ಬಾಲ್ಯ ವಿವಾಹ ನಿಷೇಧಾಧಿಕಾರಿಯ ಮೇಲೆ  ಯಾವುದೇ ಮೊಕದ್ದಮೆಯಾಗಲೀ/ಕಟ್ಟಳೆಯಾಗಲೀ/ಕಾನೂನು ಕ್ರಮವನ್ನಾಗಲೀ ಜರುಗಿಸುವಂತಿಲ್ಲ. (ಸೆಕ್ಷನ್-18).

ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಉಚ್ಛನ್ಯಾಯಲಯವು ರಿಟ್ ಅರ್ಜಿ ಸಂಖ್ಯೆ:1154/2006 ರಲ್ಲಿ ನೀಡಿದ ನಿರ್ದೇಶನದಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಸರ್ಕಾರವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿಗಳಾದ ಜಸ್ಟೀಸ್ ಶಿವರಾಜ್ .ವಿ.ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಿದ್ದು, ಸದರಿ ಕೋರ್ ಕಮಿಟಿಯು ದಿನಾಂಕ:30-06-2011 ರಂದು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ, ಸದರಿ ವರದಿಯಲ್ಲಿನ ಶಿಫಾರಸ್ಸುಗಳನ್ವಯ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ.

  1. ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ:ಮಮಇ 501 ಎಸ್ ಜೆಡಿ 2011 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ    ನಿರ್ದೇಶನಾಲಯದಲ್ಲಿ 1 ಉಪ    ನಿರ್ದೇಶಕರು, 1 ಸಹಾಯಕ ನಿರ್ದೇಶಕರು, 02 ಪ್ರಥಮ ದರ್ಜೆ ಸಹಾಯಕರು, 02 ಗಣಕ ಯಂತ್ರ ಸಹಾಯಕರು ಮತ್ತು 1 ಸೇವಕರನ್ನೊಳಗೊಂಡಂತೆ ಉಸ್ತುವಾರಿ    ಕೋಶವನ್ನು ಸ್ಥಾಪಿಸಲಾಗಿದೆ.
  2. ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅನುಷ್ಠಾನಕ್ಕಾಗಿ 2012-13ನೇ ಸಾಲಿನಲ್ಲಿ ರೂ.150.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರೂ.110.62 ಲಕ್ಷಗಳನ್ನು ಇದುವರೆಗೆ ವಿವಿಧ    ಕಾರ್ಯಕ್ರಮಗಳಿಗಾಗಿ ವೆಚ್ಚ    ಮಾಡಲಾಗಿದೆ.
  3. ಬಾಲ್ಯ ವಿವಾಹ ನಿಷೇಧ ಕುರಿತಂತೆ ಆಕಾಶವಾಣಿಯಲ್ಲಿ "ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ" ಎಂಬ ಸರಣಿ ಕಾರ್ಯಕ್ರಮವನ್ನು ಪ್ರತಿ ಶುಕ್ರವಾರ ಬೆಳಿಗ್ಗೆ 7-15 ನಿಮಿಷದಿಂದ 7-30 ರವರೆಗೆ ಹಾಗೂ    ಎಫ್.ಎಂ.ರೈನ್    ಬೋದಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 8-45 ರಿಂದ 9-00 ರವರೆಗೆ ಪ್ರಸಾರ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರೂ.10,80,517/- ಗಳನ್ನು ಬಿಡುಗಡೆ ಮಾಡಲಾಗಿದೆ.
  4. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವ ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ ಕಾರ್ಯಕ್ರಮದಲ್ಲಿ ಪ್ರತಿವಾರ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶೋತೃಗಳಿಗೆ ರೂ.500/- ರಂತೆ ಬಹುಮಾನ  ನೀಡಲಾಗುತ್ತಿದೆ.
  5. 01-04-2012 ರಿಂದ 31-03-2013 ರವರೆಗೆ 147 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ.
  6. 17 ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಬೀದಿ ನಾಟಕ, ಕಲಾ ಜಾಥಾ ಮತ್ತು ಸೈಕಲ್  ಜಾಥಾಗಳ ಮೂಲಕ ಹಮ್ಮಿಕೊಂಡು ಯಶಸ್ವಿಯಾಗಿ  ನಡೆಸಲಾಗಿದೆ. ಈ    ಕಾರ್ಯಕ್ರಮಕ್ಕಾಗಿ ರೂ.7,14,000/- ಗಳನ್ನು ಬಿಡುಗಡೆ ಮಾಡಲಾಗಿದೆ.
  7. ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ  ಬಾಲ್ಯ ವಿವಾಹದ ದುಷ್ಪರಿಣಾಮಗಳು ಮತ್ತು ಶಿಕ್ಷೆಗಳು ಕುರಿತು ಗೋಡೆ ಬರಹಗಳನ್ನು ರಾಜ್ಯಾದ್ಯಂತ ಬರೆಯಿಸಲಾಗಿದೆ. ಅನುದಾನ ರೂ.10,75,000/- ಬಿಡುಗಡೆ    ಮಾಡಲಾಗಿದೆ.
  8. ಕೋರ್ ಕಮಿಟಿಯ ವರದಿಯನ್ನು ಕನ್ನಡದಲ್ಲಿ ಭಾಷಾಂತರಿಸಲು ರೂ. 1,15,000/- ವೆಚ್ಚ ಮಾಡಲಾಗಿದೆ. 10,000 ಪ್ರತಿಗಳನ್ನು ಮುದ್ರಿಸಲಾಗಿದೆ. ರೂ. 7,94,885/- ಗಳನ್ನು ವೆಚ್ಚ ಮಾಡಲಾಗಿದೆ.
  9. ಶಾಲಾ/ಕಾಲೇಜುಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲೆಗಳಲ್ಲಿ ಮತ್ತು  ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ರೂ.17,04,900/- ಬಿಡುಗಡೆ        ಮಾಡಲಾಗಿದೆ.
  10. ಬಾಲ್ಯ ವಿವಾಹ ನಿಷೇಧ ಕುರಿತು ಬ್ರೋಷರ್ಗಳು, ಏಫ್ಎಕ್ಯೂಗಳನ್ನು ಮುದ್ರಿಸಿ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.
  11. ಬಾಲ್ಯ ವಿವಾಹ ನಿಷೇಧ ಕುರಿತು ಸ್ಟಿಕ್ಕರ್ ಗಳ ಮುದ್ರಣಕ್ಕಾಗಿ ರೂ.30,29,920/-ಗಳನ್ನು ಬಿಡುಗಡೆ ಮಾಡಲಾಗಿದೆ.
  12. 30 ಜಿಲ್ಲೆಗಳ  ಜಿಲ್ಲಾ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿದೆ.
  13. ಯೂನಿಸೆಫ್ ವತಿಯಿಂದ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸಲು 5 ಬಗೆಯ ಪೋಸ್ಟರ್ ಗಳನ್ನು ಮುದ್ರಸಿ, ಜಿಲ್ಲೆಗಳಿಗೆ ವಿತರಿಸಲಾಗಿದೆ.
  14. ಜಿಲ್ಲೆಗಳ ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ತರಬೇತಿಗಳನ್ನು ನಡೆಸಲು ರೂ.2.69 ಲಕ್ಷ ವೆಚ್ಚ ಮಾಡಲಾಗಿದೆ. ಉಳಿದ  ಜಿಲ್ಲೆಗಳಿಗೆ ತರಬೇತಿ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
  15. ಬಾಲ್ಯ ವಿವಾಹ ನಿಷೇಧ ಕುರಿತು ಕಮಲಿ ಎಂಬ ಸಾಕ್ಷ್ಯಚಿತ್ರ ತಯಾರಿಸಿದ್ದು, ಇದಕ್ಕಾಗಿ ರೂ.1.50 ಲಕ್ಷ ವೆಚ್ಚ ಮಾಡಲಾಗಿದೆ.
  16. ರಾಜ್ಯದ ವಾರ್ತಾ ಇಲಾಖೆಯ ವಿವಿಧ ಸ್ಥಳಗಳಲ್ಲಿ 300 ಫಲಕಗಳಲ್ಲಿ (ಹೋರ್ಡಿಂಗ್ಸ್) ಬಾಲ್ಯವಿವಾಹದ ವಿರುದ್ಧ  ಜಾಹೀರಾತು ಪ್ರದರ್ಶಿಸಲಾಗಿದೆ. ಇದಕ್ಕಾಗಿ ರೂ.21,15,000/- ವೆಚ್ಚ ಮಾಡಲಾಗಿದೆ.

ಮೂಲ : ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate