অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ್ಯಲಕ್ಷ್ಮಿ ಯೋಜನೆ

ಭಾಗ್ಯಲಕ್ಷ್ಮಿ ಯೋಜನೆ

ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಭಾಗ್ಯಲಕ್ಷ್ಮಿ ಎಂಬ ಹೊಸ ಯೋಜನೆಯನ್ನು ರೂಪಿಸಿದೆ.

ಈ ಯೋಜನೆಯ ಆಥರ್ಿಕ ಸೌಲಭ್ಯವನ್ನು ಹೆಣ್ಣು ಮಗುವಿಗೆ ಅದರ ತಾಯಿ/ತಂದೆ/ಪೋಷಕರ ಮೂಲಕ ಕೆಲವು ನಿಬಂಧನೆಗಳನ್ನು ಪೂರೈಸಿದಲ್ಲಿ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ 31.3.2006ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಆರ್ಹರಿರುತ್ತಾರೆ. ಮಗು ಜನಿಸಿದ ಒಂದು ವರ್ಷದೊಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ನೋಂದಾಯಿಸಲು ಅವಕಾಶವಿದೆ. ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಫಲಾನುಭವಿ ಹೆಣ್ಣುಮಗುವಿನ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕದ್ದು ಮತ್ತು ಕುಟುಂಬದಲ್ಲಿ ಮಕ್ಕಳ ಸಂಖ್ಯೆ 3ಕ್ಕಿಂತ ಹೆಚ್ಚಿಗೆ ಇರಬಾರದು. ನೋಂದಣಿ ನಂತರ ಹಾಗೂ ಪೂರ್ಣ ಪರಿಶೀಲನೆ ನಂತರ ಪ್ರತಿ ಫಲಾನುಭವಿಗೆ ರೂ.10,000/-ಗಳನ್ನು ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ವಿತ ಠೇವಣಿಯನ್ನು ಇಡಲಾಗುತ್ತದೆ. ಪಾಲುದಾರ ಹಣಕಾಸು ಸಂಸ್ಥೆಯು ಹೆಣ್ಣುಮಗುವಿನ ಹೆಸರಿನಲ್ಲಿ ಇಟ್ಟ ರೂ.10,000/-ಗಳ ಠೇವಣಿಯ ಮೇಲಿನ ಆದಾಯವನ್ನು ಗರಿಷ್ಠಗೊಳಿಸಿ, ಠೇವಣಿ ಹಣವನ್ನು ಬಡ್ಡಿ ಸಮೇತವಾಗಿ ಫಲಾನುಭವಿಗಳಿಗೆ 18 ವರ್ಷಗಳು ಪೂರ್ಣಗೊಂಡನಂತರ ದೊರಕಿಸಿಕೊಡುತ್ತದೆ. ರೂ.34751/-ನ್ನು ಮೊದಲ ಮಗುವಿಗೆ ಮತ್ತು ರೂ.40,918/- ನ್ನು ಎರಡನೇ ಮಗುವಿಗೆ ನೀಡಲಾಗುತ್ತದೆ. ಫಲಾನುಭವಿಗೆ ವಿದ್ಯಾಥರ್ಿ ವೇತನ, ವಿಮೆ ಸೌಲಭ್ಯ ಮುಂತಾದ ಮಧ್ಯಂತರ ಸಂದಾಯಗಳನ್ನು ಯೋಜನೆಯಡಿ ತಿಳಿಸಲಾದ ಅರ್ಹತೆ ಮಾನದಂಡಗಳನ್ನು ಪೂರೈಸುತ್ತಿದ್ದಲ್ಲಿ ನೀಡಲಾಗುವುದು. ಹೆಣ್ಣು ಮಗು ಖಾಯಿಲೆ ಬಿದ್ದಲ್ಲಿ, ಆರೋಗ್ಯ ವಿಮೆ ಸೌಲಭ್ಯವನ್ನು ಗರಿಷ್ಠ ರೂ.25,000 ರವರೆಗೆ ನೀಡಲಾಗುವುದು. ವಿಮಾದಾರರು ಸ್ವಾಭಾವಿಕ ಸಾವು ಹೊಂದಿದಲ್ಲಿ ರೂ.42500/- ವಿಮೆ ಹಣ ಒದಗಿಸಲಾಗುವುದು.ವಿಮಾದಾರರು ಅಪಘಾತದಿಂದ ಸತ್ತರೆ ರೂ.1,00,000/- ವಿಮೆ ಹಣವನ್ನು ಕುಟುಂಬಕ್ಕೆ ನೀಡಲಾಗುವುದು.

ಆರ್ಹತೆ ಅಂಶಗಳು

  • ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು.
  • ಮಗುವಿಗೆ:- ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗನಿರೋಧಕ ಹಾಕಿಸಿರಬೇಕು.
  • ಅಂಗನವಾಡಿ ಕೇಂದ್ರಕ್ಕೆ ನೋಂದಣಿಯಾಗಿರಬೇಕು.
  • ಶಿಕ್ಷಣ ಇಲಾಖೆಯ ನೋಂದಾಯಿತ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿಸಿರಬೇಕು.
  • ಮಗು ಬಾಲಕಾಮರ್ಿಕಳಾಗಿರಬಾರದು.
  • 18 ವರ್ಷ ಪೂರ್ಣಗೊಳ್ಳುವವರೆಗೆ ವಿವಾಹ ಆಗಿರಬಾರದು.

ಈ ಯೋಜನೆಯನ್ನು ಭಾರತೀಯ ಜೀವ ವಿಮೆ ಕಾಪರ್ೊರೇಷನ್. ಭಾರತದ ಸಹಯೋಗದೊಂದಿಗೆ ಅನುಷ್ಠಾನ ಮಾಡಲಾಗುತ್ತಿದೆ.
ಫಲಾನುಭವಿಯು ಕಡ್ಡಾಯವಾಗಿ 8ನೇ ತರಗತಿಯಲ್ಲಿ ಉತ್ತೀರ್ಣವಾಗಿರತಕ್ಕದ್ದು. 18 ವರ್ಷ ತುಂಬುವ ಮುನ್ನ ವಿವಾಹವಾದಲ್ಲಿ ಅಥವಾ 18ನೇ ವರ್ಷದೊಳಗೆ ಮರಣ ಹೊಂದಿದಲ್ಲಿ ಫಲಾನುಭವಿಯ ಹೆಸರಿನಲ್ಲಿ ಹೂಡಲಾದ ಪ್ರಾರಂಭಿಕ ಠೇವಣಿಯನ್ನು ಸಕರ್ಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ವಾಷರ್ಿಕ ವಿದ್ಯಾಥರ್ಿ ವೇತನದ ವಿವರಗಳು ಈ ಕೆಳಗಿನಂತಿರುತ್ತವೆ :

ತರಗತಿವಾರು ವಾಷರ್ಿಕ ವಿದ್ಯಾಥರ್ಿ ವೇತನದ ಮೊತ್ತ   ರೂ.ಗಳಲ್ಲಿ 
  1. 1 ರಿಂದ 3ನೇ ತರಗತಿ ಪ್ರತಿ ತರಗತಿಗೆ     300/-
  2. 4ನೇ ತರಗತಿ        500/-
  3. 5ನೇ ತರಗತಿ        600/-
  4. 6ರಿಂದ 7ನೇ ತರಗತಿ       700/-
  5. 8ನೇ ತರಗತಿ        800/-
  6. 9ರಿಂದ 10ನೇ ತರಗತಿ      1000/-

ಭಾಗ್ಯಲಕ್ಷ್ಮಿ ಯೋಜನೆಯನ್ನು ಆಗಸ್ಟ್ 2008ರಲ್ಲಿ ಭಾಗಶಃ ಮಾರ್ಪಡಿಸಲಾಗಿರುತ್ತದೆ. ಪರಿಷ್ಕರಿಸಲಾದ ಯೋಜನೆಯು ದಿನಾಂಕ:01.08.08 ರಂದು ಹಾಗೂ ನಂತರ ಜನಿಸಿದ ಮಕ್ಕಳಿಗೆ ಅನ್ವಯಿಸುತ್ತದೆ. ಹಾಲಿ ಜಾರಿಯಲ್ಲಿರುವ ಯೋಜನೆಯನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ. ಯೋಜನೆಯಡಿ ನೋಂದಣಿಯಾದ ಕುಟುಂಬದ ಮೊದಲನೇ ಮಗುವಿನ ಹೆಸರಿನಲ್ಲಿ ರೂ.19,300/- ಹಾಗೂ ಎರಡನೇ ಮಗುವಿನ ಹೆಸರಿನಲ್ಲಿ ರೂ.18,350/-ಗಳ ಮೊತ್ತವನ್ನು ಪಾಲುದಾರು ಹಣಕಾಸು ಸಂಸ್ಥೆಯಲ್ಲಿ ಠೇವಣಿಯಲ್ಲಿರಿಸಿ, 18 ವರ್ಷಗಳು ಪೂರ್ಣಗೊಂಡು ನಿಬಂಧನೆಗಳನ್ನು ಪೂರೈಸಿದ  ಕುಟುಂಬದ ಮೊದಲನೇಯ ಫಲಾನುಭವಿಗೆ ರೂ.1,00,097/- ಹಾಗೂ ಎರಡನೇ ಫಲಾನುಭವಿಗೆ ರೂ.1,00,052/- ಪರಿಪಕ್ವ ಮೊತ್ತ ದೊರೆಯುತ್ತದೆ.ಫಲಾನುಭವಿಯು 15 ವರ್ಷ ತಲುಪಿದ ನಂತರ 10ನೇ ತರಗತಿಯಲ್ಲಿ ಉತ್ತೀರ್ಣಳಾಗಿ, ಮುಂದಿನ ವಿದ್ಯಾಭ್ಯಾಸವನ್ನು ಕೈಗೊಳ್ಳಲು ಆಸಕ್ತಿ ಇದ್ದಲ್ಲಿ, ಬಾಂಡ್ನ್ನು ಅಂಗೀಕೃತ ಬ್ಯಾಂಕುಗಳಲ್ಲಿ ಅಡಮಾನವಿರಿಸಿ ಗರಿಷ್ಠ ರೂ.50,000/-ಗಳ ವರೆಗೆ ಸಾಲವನ್ನು ಪಡೆಯಬಹುದಾಗಿರುತ್ತದೆ.ಫಲಾನುಭವಿಯ ತಂದೆ/ತಾಯಿ/ಪೋಷಕರ ಗ್ರಾಮೀಣ ಭೂರಹಿತ ಕುಟುಂಬಕ್ಕೆ ಸೇರಿದ್ದಲ್ಲಿ ಜನಶ್ರೀ ಭೀಮಾ ಯೋಜನೆಯಡಿಯಲ್ಲಿ ವಿಮೆ ಸೌಲಭ್ಯ ಪಡೆಯಲು ಆರ್ಹರಾಗಿರುತ್ತಾರೆ.ವಿದ್ಯಾಥರ್ಿ ವೇತನ ಹಾಗೂ ವೈದ್ಯಕೀಯ ವಿಮಾ ಸೌಲಭ್ಯಗಳನ್ನು ಕೈಬಿಡಲಾಗಿದೆ.

2006-07 ರಿಂದ 2013-14ರ ಫೆಬ್ರವರಿ ಅಂತ್ಯದವರೆಗೆ ರೂ.2908.09 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದ್ದು 1810176  ಫಲಾನುಭವಿಗಳಿಗೆ ಬಾಂಡ್ ನೀಡಲಾಗಿದೆ.

2013-14 ನೇ ಸಾಲಿಗೆ ಫಲಾನುಭವಿಗಳಿಗೆ ಬಾಂಡ್ ವಿತರಿಸಲು396.43ಕೋಟಿಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಇದರಲ್ಲಿ ರೂ.290.27 ಕೋಟಿ ಹಣವನ್ನು ಬಾಂಡ್ ವಿತರಿಸಲು ಎಲ್ಐಸಿಗೆ ಬಿಡುಗಡೆ ಮಾಡಲಾಗಿದೆ. ಈ ಮೊತ್ತವನ್ನು 151870 ಫಲಾನುಭವಿಗಳಿಗೆ ಬಾಂಡ್ ನೀಡಲು ಕ್ರಮಗೊಳ್ಳಲಾಗಿದೆ. ಇದರಲ್ಲಿ 141972 ಫಲಾನುಭವಿಗಳಿಗೆ ಈಗಾಗಲೇ ಬಾಂಡ್ ಗಳನ್ನು ವಿತರಿಸಲಾಗಿದೆ.

ಮೂಲ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate