ಐ.ಸಿ.ಡಿ.ಎಸ್ ಸೇವೆಗಳು
- ಪೂರಕ ಪೌಷ್ಠಿಕ ಆಹಾರ
- ಚುಚ್ಚುಮದ್ದು
- ಆರೋಗ್ಯ ತಪಾಸಣೆ
- ಮಾಹಿತಿ ಸೇವೆ
- ಶಾಲಾಪೂರ್ವ ಶಿಕ್ಷಣ
ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ
ರಾಜ್ಯದ ಎಲ್ಲಾ 175 ತಾಲ್ಲೂಕುಗಳಲ್ಲೂ 181 ಗ್ರಾಮಾಂತರ, 12 ಗುಡ್ಡಗಾಡು ಯೋಜನೆ ಹಾಗು 11 ನಗರ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರ ಗಳ ಮುಖಾಂತರ ಅನುಷ್ಠಾನಗೊಳ್ಳುತ್ತಿದೆ. ರಾಜ್ಯದಲ್ಲಿ ಒಟ್ಟು 61187 ಅಂಗನವಾಡಿ ಕೇಂದ್ರ ಗಳು ಹಾಗೂ 3331 ಮಿನಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 2012-13 ನೇ ಸಾಲಿನಲ್ಲಿ 55.07 ಲಕ್ಷ ಫಲಾನುಭವಿಗಳಿಗೆ ಸೇವೆಗಳನ್ನು ಒದಗಿಸಲಾಗಿರುತ್ತದೆ.
- ಆಡಳಿತ ವೆಚ್ಚ: 2008-09 ರವರೆಗೆ ಐಸಿಡಿಎಸ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಕರ್ಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದು, 2009-10 ನೇ ಸಾಲಿನಿಂದ ಶೇ 90:10 ಅನುಪಾತದಲ್ಲಿ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಭರಿಸುತ್ತವೆ. ಅನುದಾನವನ್ನು ಸಿಬ್ಬಂದಿ ವೇತನ, ಗೌರವಧನ, ಉಸ್ತುವಾರಿ ಮತ್ತು ಮೌಲ್ಯಮಾಪನ, ಶಾಲಾ ಪೂರ್ವ ಶಿಕ್ಷಣ ಹಾಗೂ ಮೆಡಿಸಿನ್ ಕಿಟ್ ಖರೀದಿ ಇತ್ಯಾದಿ ವೆಚ್ಚಗಳಿಗಾಗಿ ಭರಿಸಲಾಗುತ್ತಿದೆ.
- ಅಂಗನವಾಡಿ ಕಾರ್ಯಕತರ್ೆ / ಸಹಾಯಕಿಯರಿಗೆ ಸಮವಸ್ತ್ರ: ಕೇಂದ್ರ ಸಕರ್ಾರದ ಮಾರ್ಗಸೂಚಿಯ ದಿ:22-10-12 ರಂತೆ ಪ್ರತಿ ವರ್ಷ ಅಂಗನವಾಡಿ ಕಾರ್ಯಕತರ್ೆ /ಅಂಗನವಾಡಿ ಸಹಾಯಕಿಯರಿಗೆ ಪ್ರತಿ ಸೀರೆಗೆ ರೂ. 300/- ಗಳಂತೆ ಎರಡು ಸೀರೆಗಳನ್ನು ಒದಗಿಸಬೇಕಾಗಿರುತ್ತದೆ.2012-13 ನೇ ಸಾಲಿನಲ್ಲಿ ವಾಸ್ತಸವಾಗಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 121648 ಅಂ.ಕಾ/ಮಿನಿ.ಕಾ/ ಅಂ.ಸಾ ಯರಿಗೆ ವರ್ಷಕ್ಕೆ 2 ಸೀರೆಯಂತೆ ಮ:ಕೆ.ಎಚ್.ಡಿ.ಸಿ ಸಂಸ್ಥೆಯವರು ಸರಬರಾಜು ಮಾಡುತ್ತಾರೆ.
- ಶಾಲಾ ಪೂರ್ವ ಶಿಕ್ಷಣ ಕಿಟ್: ಸಮಗ್ರ ಶಿಶು ಅಬಿವೃದ್ದಿ ಯೋಜನೆ ಆಡಳಿತ ವೆಚ್ಚದಡಿ ಪ್ರತಿ ಅಂಗನವಾಡಿ ಕೇಂದ್ರ ಹಾಗು ಮಿನಿ ಕೇಂದ್ರಕ್ಕೆ ವಾಷರ್ಿಕ ರೂ 1000 ಹಾಗು ರೂ 500 ಗಳ ಅನುದಾನವನ್ನು ಅನುಕ್ರಮವಾಗಿ ಶಾಲಾ ಪೂರ್ವ ಶಿಕ್ಷಣ ಕಿಟ್ಗಾಗಿ ನಿಗದಿಪಡಿಸಲಾಗಿದೆ. ರಾಜ್ಯದ್ಯಾಂತ ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟ ಹಾಗೂ ಏಕ ರೂಪತೆ ತರುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಒಂದು ಸಮಿತಿಯನ್ನು ರಚಿಸಿ, ನುರಿತ ಶಿಕ್ಷಣ ತಜ್ಞರ ಹಾಗೂ ವಿವಿಧ ಆಯ್ದ ಅಆಖ ಕರ್ಮಚಾರಿಗಳ ಕಾರ್ಯಗಾರ ನಡೆಸಿ, ಮಾದರಿ ಕಿಟ್ ಅಬಿವೃದ್ದಿ ಪಡಿಸಲಾಗಿದೆ. ಹೀಗೆ ಅಬಿವೃದ್ಧಿ ಪಡಿಸಿದ ಮಾದರಿ ಕಿಟ್ ನ್ನು ರಾಜ್ಯದ ಎಲ್ಲಾ 64518 ಅಂಗನವಾಡಿ ಕೇಂದ್ರಗಳಗೆ ಸರಬರಾಜು ಮಾಡಲು ಜಿಲ್ಲಾ ಮಟ್ಟದಲ್ಲಿ ಇ- ಟೆಂಡರ್ ಪ್ರಕ್ರಿಯೆ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ.
- ಮೆಡಿಸಿನ್ ಕಿಟ್: ಸಮಗ್ರ ಶಿಶು ಅಬಿವೃದ್ದಿ ಯೋಜನೆ ಆಡಳಿತ ವೆಚ್ಚದಡಿ 61187 ಅಂ.ಕೇಂದ್ರಗಳು ಹಾಗೂ 3331 ಮಿನಿ ಅಂ.ಕೇಂದ್ರಗಳಿಗೆ ಪ್ರತಿ ಅಂ.ಕೇಂದ್ರಕ್ಕೆ ರೂ 600/- ರಂತೆ ಹಾಗೂ ಪ್ರತಿ ಮಿನಿ ಅಂ.ಕೇಂದ್ರಕ್ಕೆ ರೂ 300/- ರಂತೆ ಮೆಡಿಸಿನ್ ಕಿಟ್ಗಳನ್ನು ಒದಗಿಸಲಾಗಿದೆ.
ಅಠಗನವಾಡಿ ಕಾರ್ಯಕರ್ತಾಯರಿಗೆ ಹಾಗು ಸಹಾಯಕಿಯರಿಗೆ ಹೆಚ್ಚುವರಿ ಗೌರವಧನ:
ಅಠಗನವಾಡಿ ಕಾರ್ಯಕರ್ತಾಯರು ಕ್ಷೇತ್ರಮಟ್ಟದಲ್ಲಿ ತಳಮಟ್ಟದ ಕಾರ್ಯಕತರ್ೆಯರಾಗಿದ್ದರೂ ಗ್ರಾಮ ಮಟ್ಟದಲ್ಲಿ ಹೆಚ್ಚು ಮಹತ್ವ ಹೊಂದಿರುತ್ತಾರೆ. ಸಮಾಜಕ್ಕೆ ಅವರು ನೀಡುತ್ತಿರುವ ಸೇವೆಯನ್ನು ಗುರುತಿಸಿ ರಾಜ್ಯ ಸಕರ್ಾರವು ಕೇಂದ್ರ ಸಕರ್ಾರದ ಗೌರವಧನದೊಡನೆ ಹೆಚ್ಚುವರಿಯಾಗಿ ಅಠಗನವಾಡಿ ಕಾರ್ಯಕತರ್ೆಯರಿಗೆ ಮಾಹೆಯಾನ ರೂ.1500/- ಹಾಗೂ ಸಹಾಯಕಿಯರಿಗೆ ರೂ.750/-ನ್ನು ರಾಜ್ಯದ ಕೊಡುಗೆಯಾಗಿ ನೀಡುತ್ತಿದೆ.
ಕೊನೆಯ ಮಾರ್ಪಾಟು : 7/26/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.