ಮಕ್ಕಳ ಪಾಲನೆ ಪೋಷಣೆ ಆಗತ್ಯವಿರುವಮಕ್ಕಳ ಕಲ್ಯಾಣ ಯೋಜನೆ (ನಿರ್ಗತಿಕ ಮಕ್ಕಳ ಕುಟೀರ)
ಸದರಿ ಯೋಜನೆಯಡಿ ಕನಿಷ್ಠ ಮೂರು ವರ್ಷ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿರುವ ನೊಂದಾಯಿತ ಸ್ವಯಂ ಸೇವಾ ಸಂಸ್ಥೆಗಳಿಗೆ 25 ಮಕ್ಕಳ ಒಂದು ಘಟಕದಂತೆ ಪಾಲನೆ ಹಾಗೂ ಪೋಷಣೆಗೆ ನಿರ್ಗತಿಕ ಮಕ್ಕಳ ಕುಟೀರವನ್ನು ತೆರೆಯಲು ಅನುಮತಿಯೊಂದಿಗೆ ಧನ ಸಹಾಯವನ್ನು ನೀಡಲಾಗುವುದು. ಈ ಯೋಜನೆಯ ರೂಪು ರೇಷೆಗಳ ಪ್ರಕಾರ ಅನುಮೋದಿತ ವೆಚ್ಚದ ಶೇಕಡಾ 90 ರಷ್ಟನ್ನು ಸರ್ಕಾರದಿಂದ ಅನುದಾನದ ರೂಪದಲ್ಲಿ ನೀಡಲಾಗುತ್ತಿದೆ. ಉಳಿದ ಶೇಕಡಾ 10 ರಷ್ಟನ್ನು ಸಂಸ್ಥೆಯು ಭರಿಸಬೇಕಾಗುವುದು. ಈ ಯೋಜನೆಯಡಿ ಪ್ರತಿ ಮಗುವಿನ ನಿರ್ವಹಣೆಗಾಗಿ ಮಾಸಿಕ 400 ರೂಪಾಯಿಗಳ (ಅನುಮೋದಿತ ಸಿಬ್ಬಂದಿಯ ವೇತನ ಸೇರಿ) ಅನುದಾನವನ್ನು ಮತ್ತು ಪ್ರತಿ ಮಗುವಿಗೆ ಮಾಸಿಕ 50/- ರೂಪಾಯಿಯಂತೆ ಬಾಡಿಗೆಯನ್ನು ಕೊಡಲಾಗುತ್ತದೆ.
ಈ ಯೋಜನೆಯಡಿ 402.60 ಲಕ್ಷ ರೂಪಾಯಿಗಳ ಅನುದಾನವನ್ನು ಹಂಚಿಕೆ ಮಾಡಲಾಗಿದ್ದು 355 ಕುಟೀರಗಳು (8875 ಮಕ್ಕಳಿಗೆ) 120.00 ಲಕ್ಷ ರೂಪಾಯಿಗಳನ್ನು ಜನವರಿ ಅಂತ್ಯಕ್ಕೆ ವೆಚ್ಚ ಮಾಡಲಾಗಿದೆ.
ಕೊನೆಯ ಮಾರ್ಪಾಟು : 10/17/2019