ಮಹಿಳೆಯರ ಮತ್ತು ಮಕ್ಕಳ ಸಾಗಣೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು ಇದು ಆತಂಕಕಾರಿಯಾದ ಬೆಳವಣಿಗೆಯಾಗಿರುತ್ತದೆ. ಈ ಪಿಡುಗನ್ನು ಸ್ಥಳೀಯ ಮಟ್ಟದಲ್ಲಿ ತಡೆಯುವುದು ಅನಿವಾರ್ಯವಾಗಿರುತ್ತದೆ. ಮಾನವ ಸಾಗಾಣಿಕೆಯನ್ನು ತಡೆಗಟ್ಟಲು ಮತ್ತು ಸಾಗಣೆಗೆ ಒಳಪಟ್ಟ ಮಹಿಳೆಯರ ಮತ್ತು ಮಕ್ಕಳ ಪುನರ್ವಸತಿ ಮಾಡುವುದು ನಾಗರೀಕ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಈ ವ್ಯವಸ್ಥಿತ ಪಿಡುಗನ್ನು ನಿಯಂತ್ರಿಸಲು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವುದು ಅಗತ್ಯವೆಂದು ಇಲಾಖೆಯು ಭಾವಿಸಿ ಈ ಮಹಿಳೆಯರ ಮತ್ತು ಮಕ್ಕಳ ಸಾಗಣೆ ನಿವಾರಣೆ ಯೋಜನೆಯನ್ನು 2006-07ರಲ್ಲಿ ಜಾರಿಗೆ ತರಲಾಗಿದೆ.
ರಾಜ್ಯ ಮಟ್ಟದಲ್ಲಿ, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಕೆಳಹಂತದಲ್ಲಿರುವ ಸಮಿತಿಗಳು ಪರಿಣಾಮಕಾರಿಯಗಿ ಕಾರ್ಯನಿರ್ವಹಿಸುವಲ್ಲಿ ಸಮಿತಿಯ ಸದಸ್ಯರಿಗೆ ಮಹಿಳೆಯರ ಮತ್ತು ಮಕ್ಕಳ ಸಾಗಣೆ ಕುರಿತಂತೆ ಅರಿವು ಮೂಡಿಸುವುದು ಅವಶ್ಯವೆಂದು ಅಬಿಪ್ರಾಯ ಪಡಲಾಯಿತು. ಅದರಂತೆ ತಾಲ್ಲೂಕು ಮತ್ತು ಗ್ರಾಮ ಮಟ್ಟದ ಸದಸ್ಯರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಹಾಗೂ ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕರಿಗೂ ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸಲು ಜಾಥಾಗಳನ್ನು, ಮೆರವಣಿಗೆಗಳನ್ನು ಮತ್ತು ಬೀದಿ ನಾಟಕಗಳನ್ನು ಏರ್ಪಡಿಸಲಾಯಿತು.
2009-10ನೇ ಸಾಲಿನಲ್ಲಿ ಸರ್ಕಾರರವು ರೂ.15.00 ಲಕ್ಷಗಳ ಅನುದಾನವನ್ನು ಒದಗಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ತರಬೇತುದಾರರ ತರಬೇತಿಯನ್ನು ಜಿಲ್ಲಾ ತರಬೇತಿ ಸಂಸ್ಥೆಗಳ ಮೂಲಕ ನಡೆಸಲು ಕ್ರಮ ವಹಿಸಲಾಗಿದೆ. ಇದೇ ರೀತಿ ರಾಜ್ಯ ಮಟ್ಟದಲ್ಲಿ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
2008-09ನೇ ಸಾಲಿನಲ್ಲಿ 22.50 ಲಕ್ಷ ಒದಗಿಸಿದ್ದು, 16640 ಗ್ರಾಮ ಪಂಚಾಯಿತಿ ಸದಸ್ಯರಿಗೆ ಜಾಗೃತಿ ಕ್ಯಾಂಪ್ ನಡೆಸಿದದು, ರೂ.14.96 ಲಕ್ಷ ಖರ್ಚಾಗಿರುತ್ತದೆ 2009-10ನೇ ಸಾಲಿನಲ್ಲಿ ಸರ್ಕಾರರವು ರೂ.15.00 ಲಕ್ಷಗಳ ಅನುದಾನವನ್ನು ಒದಗಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ತರಬೇತುದಾರರ ತರಬೇತಿಯನ್ನು ಜಿಲ್ಲಾ ತರಬೇತಿ ಸಂಸ್ಥೆಗಳ ಮೂಲಕ ನಡೆಸಲಾಗಿದೆ. ಇದೇ ರೀತಿ ರಾಜ್ಯ ಮಟ್ಟದಲ್ಲಿ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು ರೂ. 14-99 ಲಕ್ಷ ಖರ್ಚಾಗಿರುತ್ತದೆ .
2010-11ನೇ ಸಾಲಿಗೆ ಸರ್ಕಾರವು 30.00 ಒದಗಿಸಿದ್ದು, ಮೇಲ್ವಿಚಾರಕಿಯರು ಹಾಗೂ ಗ್ರಾಮಪಂಚಾಯಿತಿ ಕಾರ್ಯದರ್ಶಿಗಳಿಗೆ ತರಬೇತಿ ನೀಡಲು ರೂ.22.50 ಲಕ್ಷ ಖರ್ಚಾಗಿರುತ್ತದೆ. 2011-12ನೇ ಸಾಲಿಗೆ ಸರ್ಕಾರರವು ರೂ.50.00 ಲಕ್ಷ ಒದಗಿಸಿದ್ದು ತರಬೇತಿ/ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಮವಹಿಸುತ್ತಿದೆ.
ಕೊನೆಯ ಮಾರ್ಪಾಟು : 10/17/2019