অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಮ್ಮ ಗ್ರಾಮ ನಮ್ಮ ಯೋಜನೆ

ಯೋಜನಾ ಪ್ರಕ್ರಿಯೆಯ ಪರಿಕಲ್ಪನೆ ಮತ್ತು ವಿಧಾನಗಳು


ಸಂವಿಧಾನಾತ್ಮಕ ಉಲ್ಲೇಖ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಗಳ ಮೂಲಕ ಜಾರಿಯಾದ ಪಂಚಾಯತ್ ರಾಜ್ ಅಧಿನಿಯಮಗಳಲ್ಲಿ, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಲು ಅವಕಾಶ ಮಾಡಿಕೊಟ್ಟಿದೆ. ಈ ರೀತಿ ತಯಾರಾದ ಯೋಜನೆಗಳನ್ನು ಆಯಾಯಾ ಜಿಲ್ಲೆಗಳಲ್ಲಿ ಜಿಲ್ಲಾ ಯೋಜನೆಯನ್ನಾಗಿ ಕ್ರೋಢೀಕರಿಸುವಂತೆ ಸೂಚಿಸಲಾಗಿದೆ. ಜಿಲ್ಲಾ ಯೋಜನೆಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ಪ್ರಕರಣ 310ರ ಪ್ರಕಾರ ಜಿಲ್ಲಾ ಯೋಜನಾ ಸಮಿತಿಗೆ ವಹಿಸಲಾಗಿದೆ. ಜಿಲ್ಲಾ ಯೋಜನಾ ಸಮಿತಿಯು ನಿರ್ವಹಿಸಬೇಕಾಗಿರುವ ಪಾತ್ರ ಮತ್ತು  ಪ್ರ್ರಕಾರ್ಯಗಳ ಮಾರ್ಗಸೂಚಿಯನ್ನು ಸುತ್ತೋಲೆ ಸಂಖ್ಯೆ ಆರ್.ಡಿ.ಪಿ. 229 ಜಡ್‍ಪಿಎಸ್ 2000 ದಿನಾಂಕ: 12.04.2001ರಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಯೋಜನೆಯ ಪ್ರಕ್ರಿಯೆ

ಪ್ರಸ್ತುತ ಯೋಜನೆಯ ಪ್ರಕ್ರಿಯೆ   ಕರ್ನಾಟಕದಲ್ಲಿ ಜಿಲ್ಲಾ ಯೋಜನೆಯನ್ನು ಪ್ರತಿ ವರ್ಷ ತಯಾರಿಸಲಾಗುತ್ತಿದ್ದು, ಆಯಾ ವರ್ಷದ ಆಯವ್ಯಯದ ನಂತರ ಜಿಲ್ಲಾ ವಲಯದಡಿ  ಅನುದಾನವನ್ನು ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಪ್ರತ್ಯೇಕವಾಗಿ ಯೋಜನೆಗಳನ್ನು ಸಿದ್ದಪಡಿಸುತ್ತಿದ್ದು, ಇದರಲ್ಲಿ ಸಮುದಾಯ ಸಹಭಾಗಿತ್ವದ ಕೊರತೆ ಕಂಡುಬಂದಿದೆ. ಹಾಗೂ ಈ ಕಾರ್ಯವು ಜಿಲ್ಲೆಯ ದೀರ್ಘಕಾಲೀನ ದೂರದೃಷ್ಟಿ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಡೆಯುತ್ತಿಲ್ಲ. ದೀರ್ಘಕಾಲಾವಧಿಯಲ್ಲಿ ಯೋಜನಾ ಪ್ರಕ್ರಿಯೆಯು ಸುಸ್ಥಿರ ಸ್ಥಳೀಯ ಆರ್ಥಿಕಾಭಿವೃದ್ಧಿಯನ್ನು ಕೇಂದ್ರಿಕರಿಸುತ್ತದೆ ಹಾಗೂ ಈ ಪ್ರಕ್ರಿಯೆಯ ಗುರಿಯು ಮಾನವ ಅಭಿವೃದ್ಧಿಯ ಬೆಳವಣಿಗೆ, ಸಾರ್ವಜನಿಕ ಸೇವೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಮೇಲ್ಮಟ್ಟಕ್ಕೇರಿಸುವ ಆಶಯವನ್ನು ಹೊಂದಿದೆ. ಈ ಕಾರಣದಿಂದ ಸಣ್ಣ ಮತ್ತು ಅನುಪಯುಕ್ತ ಯೋಜನೆಗಳನ್ನು ನಿರ್ಲಕ್ಷಿಸಿ ಸಂಪನ್ಮೂಲಗಳ ಸೂಕ್ಷ್ಮ ಹಂಚಿಕೆ ಹಾಗೂ ಬೃಹತ್ ಜನಸಂಖ್ಯೆ ಮತ್ತು ವಿಸ್ತಾರವಾದ ಪ್ರದೇಶಗಳ ಮೇಲೆ ಮಹತ್ತರವಾದ ಅಭಿವೃದ್ಧಿಯನ್ನುಂಟು ಮಾಡುವ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಸಿದ್ಧಗೊಳಿಸುವುದಾಗಿದೆ. ಈ ಕೆಲಸವನ್ನು ವಿವಿಧ ವಲಯಗಳು, ಸ್ಥಳೀಯ ಸರ್ಕಾರಗಳು ಹಾಗೂ ಒಗ್ಗೂಡಿಸುವ ಪ್ರಕ್ರಿಯೆಯ ಮೂಲಕ ಮಾಡಲು ಎಚ್ಚರ ವಹಿಸಬೇಕಾಗುತ್ತದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಪ್ರಾಯೋಜಿತ, ಸ್ಥಳೀಯ ಸರ್ಕಾರಗಳ ಮೂಲಕ ಅನುಷ್ಠಾನಗೊಳ್ಳುವ ಎಲ್ಲಾ ಅನುದಾನ ಹಾಗೂ ಯೋಜನೆಗಳಿಗೆ ಸಾಮಾನ್ಯ ಯೋಜನಾ ಸಿದ್ಧತಾ ಪ್ರಕ್ರಿಯೆಯನ್ನು ಒಳಗೊಂಡಿದೆ. ಇದು ಪುನರಾವರ್ತಿತ ಪ್ರಕ್ರಿಯೆಯಾಗಿದ್ದು, ಜಿಲ್ಲಾ ಮಟ್ಟದ ಎಲ್ಲಾ ಸಂಬಂಧಿತ ಸಹಭಾಗಿಗಳು ಹಾಗೂ ಅಧಿಕಾರಿವರ್ಗಗಳನ್ನೂ ಒಳಗೊಂಡಿದೆ.  

ಯೋಜನಾ ಪ್ರಕ್ರಿಯೆಯು ಸುಸ್ಥಿರ ಆರ್ಥಿಕಾಭಿವೃದ್ಧಿಯನ್ನು ಕೇಂದ್ರೀಕರಿಸುತ್ತದೆ. ದೀರ್ಘಕಾಲಾವಧಿಯಲ್ಲಿ ಈ ಪ್ರಕ್ರಿಯೆಯ ಗುರಿಯು, ಸಕಾಲಿಕ ಮಧ್ಯಸ್ಥಿಕೆಗಳ ಮೂಲಕ ಸಾಧ್ಯವಾಗುವ ಮಾನವ ಅಭಿವೃದ್ಧಿಯ ಬೆಳವಣಿಗೆ, ಸಾರ್ವಜನಿಕ ಸೇವೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಉನ್ನತೀಕರಿಸುತ್ತದೆ. ಇವುಗಳನ್ನು ವಿವಿಧ ಹಂತಗಳಲ್ಲಿ ಒಗ್ಗೂಡಿಸುವಿಕೆ, ಮೂಲಭೂತ ಸೌಕರ್ಯಗಳ ಪ್ರಮುಖ ಆಯಾಮಗಳ ಮೇಲಿನ ಕೇಂದ್ರೀಕರಣ ಹಾಗೂ ಜೀವನೋಪಾಯಗಳ ಸಂರಕ್ಷಣೆಯಿಂದ ಸಾಧಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ :

ನಮ್ಮ ಗ್ರಾಮ ನಮ್ಮ ಯೋಜನೆ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate