ಕೇಂದ್ರ ಸರ್ಕಾರವು ದಿನಾಂಕ:01.01.2004 ಮತ್ತು ತದನಂತರ ಸೇವೆಗೆ ಸೇರಿದ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು
ಅನುಷ್ಠಾನಗೊಳಿಸಿದೆ. ಅಂತೆಯೇ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ:01.04.2006 ರಂದು ಹಾಗೂ ತದನಂತರರಾಜ್ಯ ಸರ್ಕಾರಿ ಸೇವೆಗೆ ಸೇರಿದ ತನ್ನ
ಎಲ್ಲಾ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಅನ್ನು ಅನುಷ್ಠಾನಗೊಳಿಸಿದೆ. ಇದಕ್ಕಾಗಿ ಭಾರತ ಸರ್ಕಾರವು ಕೇಂದ್ರ ಮಟ್ಟದಲ್ಲಿ (PFRDA) Pension Fund Regulatory and Development Authority ಯನ್ನು ಸ್ಥಾಪಿಸಿದ್ದು, ಸದರಿಸಂಸ್ಥೆಯು NPS ಗೆ ಸಂಬಂಧಿಸಿದಂತೆ, ಯೋಜನೆಯ ರೂಪುರೇಷೆಗಳು, ಸುತ್ತೋಲೆಗಳು, ಆದೇಶಗಳು,
ಮೇಲ್ವಿಚಾರಣೆ ಇತ್ಯಾದಿ ಎಲ್ಲಾ ಕಾರ್ಯಗಳನ್ನು ನೋಡಿಕೊಳ್ಳುತ್ತದೆ. ಯೋಜನೆಯಲ್ಲಿ ಹಲವು ಪಾಲುದಾರರಿದ್ದು, ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ
ಹಾಗೂ ಅದರಸಂಕ್ಷಿಪ್ತ ವಿವರ ಈ ಕೆಳಕಂಡಂತಿದೆ.
ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ:31.03.2006 ರ ಆದೇಶ ಸಂಖ್ಯೆ: FD(Spl) 04 PET 2005. ಮೂಲಕ ಎನ್.ಪಿ.ಎಸ್ ಯೋಜನೆಯನ್ನು ದಿನಾಂಕ: 01.04.2006 ಮತ್ತು ತದನಂತರ ರಾಜ್ಯ ಸರ್ಕಾರಿ ಸೇವೆಗೆ ಸೇರಿದ ತನ್ನ ಎಲ್ಲಾ ನೌಕರರಿಗೆ ಅನುಷ್ಠಾನಗೊಳಿಸಿದ್ದು, PFRDA ನಿರ್ಮಿತ ಯೋಜನೆಯನ್ನು ಯಥಾವತ್ತಾಗಿ ಅಳವಡಿಸಿಕೊಂಡಿದೆ. ಅದರನ್ವಯ ದಿನಾಂಕ: 19.01.2010 ರಂದು NSDL ಹಾಗೂ NPS Trust ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು ದಿನಾಂಕ:29.03.2010 ರಂದು ಯೋಜನೆಯ ಅನುಷ್ಠಾನದ ವಿವಿಧ ಪ್ರಕ್ರಿಯೆಗಳಸಂಪೂರ್ಣ ವಿವರಗಳನ್ನೊಳಗೊಂಡ ಆದೇಶ ಸಂಖ್ಯೆ: FD (Spl) 28 Pen 2009 ನ್ನು ಹೊರಡಿಸಿದೆ.
ಯೋಜನೆಯ ಅನುಷ್ಠಾನ ಹಾಗೂ ಕಾರ್ಯನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಖಜಾನೆ ನಿರ್ದೇಶನಾಲಯದ್ದಾಗಿದ್ದು ಹಣಕಾಸು ಇಲಾಖೆಯ
ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಇದಕ್ಕಾಗಿ ನಿರ್ದೇಶನಾಲಯದಡಿಯಲ್ಲಿ ಎನ್.ಪಿ.ಎಸ್ ಘಟಕವನ್ನು ಸ್ಥಾಪಿಸಲಾಗಿದ್ದು,ಎನ್.ಪಿ.ಎಸ್ ಘಟಕವು
ರಾಜ್ಯದ್ಯಾಂತ ಯೋಜನೆಯ ಅನುಷ್ಠಾನ ಹಾಗೂ ಕಾರ್ಯನಿರ್ವಹಣೆಯ ಪ್ರಮುಖ ಪಾತ್ರವಹಿಸುತ್ತದೆ. ಈವೆರೆಗೆ ಯೋಜನೆಗೆ ಸಂಬಂಧಿಸಿದಂತೆ
ರಾಜ್ಯ ಸರ್ಕಾರದಿಂದ ಹಲವು ಸುತ್ತೋಲೆ ಹಾಗೂ ಆದೇಶಗಳನ್ನು ಹೊರಡಿಸಲಾಗಿದ್ದು, ಅವುಗಳೆಲ್ಲವು ರಾಜ್ಯಸರ್ಕಾರದ ಅಂತರ್ಜಾಲ
ತಾಣವಾದ www.karnataka.gov.in ದಲ್ಲಿ ಹಣಕಾಸು ಇಲಾಖೆಯಡಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ.
ರಾಜ್ಯದಲ್ಲಿ ಎನ್.ಪಿ.ಎಸ್ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿರ್ದೇಶಕರು, ಖಜಾನೆ ಇಲಾಖೆ ರವರು Pಡಿiಟಿಛಿiಠಿಚಿಟ Principal Nodel officer ಆಗಿ CRA ನಲ್ಲಿ ನೋಂದಾಯಿಸಿಕೊಂಡಿರುತ್ತಾರೆ ಹಾಗೂ 214 ಖಜಾನಾಧಿಕಾರಿಗಳು Nodel officer ಗಳಾಗಿ ನೋಂದಾಯಿಸಿಕೊಂಡಿರುತ್ತಾರೆ. ಅಲ್ಲದೆ ರಾಜ್ಯದಲ್ಲಿ ಕಾರ್ಯನಿರ್ವಹಿಸುವ DDO ಗಳು ಸಹ ಸಂಬಂಧಿಸಿದ ಖಜಾನಾಧಿಕಾರಿಗಳ ಮುಖಾಂತರ CRA ನಲ್ಲಿ ನೋಂದಣಿ ಮಾಡಿಕೊಂಡಿರುತ್ತಾರೆ.
ಈ ಯೋಜನೆಯಲ್ಲಿ, ನೌಕರರು ಸೇವೆಗೆ ಸೇರಿದಾಗಿನಿಂದ ನಿರ್ಗಮಿಸುವ ವರೆಗೆ ಪ್ರಮುಖವಾಗಿ ನಾಲ್ಕು ಹಂತಗಳಿದ್ದು, ಅವುಗಳ ಸಂಕ್ಷಿಪ್ತ ವಿವರ ಈ ಕೆಳಕಂಡಂತಿದೆ.
1. ನೌಕರರ ನೊಂದಣಿ.
2. NPS Regular ವಂತಿಗೆ ಕಟಾವಣೆ.
3. NPS ಹಿಂಬಾಕಿ ವಂತಿಗೆ ಕಟಾವಣೆ.
4. ನಿರ್ಗಮನ: 1. ವಯೋನಿವೃತ್ತಿಯಾದಾಗ , 2. ಸೇವೆಯಲ್ಲಿರುವಾಗಲೇ ನಿಧನ ಹೊಂದಿದಲ್ಲಿ , 3. ರಾಜೀನಾಮೆ/ಸೇವೆಯಿಂದ ವಜಾ ಇತ್ಯಾದಿ ಸಂದರ್ಭಗಳಲ್ಲಿ.
ನೋಂದಣಿ: ಹೊಸದಾಗಿ ಸೇವೆಗೆ ಸೇರಿದ ಕೂಡಲೇ ನೌಕರರ S1 ಅರ್ಜಿಯನ್ನು HRMS ನಲ್ಲಿ Generate ಮಾಡಿ, ಖಜಾನಾಧಿಕಾರಿಗಳ ಮುಖಾಂತರ CRA ಗೆ ಸಲ್ಲಿಸಿ ನೋಂದಣಿ ಮಾಡಿಸುವುದು DDO ಗಳ ಜವಾಬ್ದಾರಿಯಾಗಿರುತ್ತದೆ. ಸದರಿ ಪ್ರಕ್ರಿಯೆಯಲ್ಲಿ ಸಮಸ್ಯೆ/ಸಂದೇಹಗಳೇನಾದರೂ ಇದ್ದಲ್ಲಿ ಸಂಬಂಧಪಟ್ಟ ಖಜಾನಾಧಿಕಾರಿಗಳನ್ನಾಗಲೀ ಅಥವಾ NPS ಘಟಕವನ್ನಾಗಲೀ ಸಂಪರ್ಕಿಸಬಹುದಾಗಿರುತ್ತದೆ.
NPS Regular ವಂತಿಗೆ ಕಟಾವಣೆ: ನೊಂದಣಿಯ ನಂತರ ನೌಕರರಿಗೆ ನೀಡಲಾದ PRAN(Permanent Retirement Account Number ನ್ನು HRMS ನಲ್ಲಿ ಎನ್.ಪಿ.ಎಸ್ ಘಟಕದ ಮೂಲಕ ಅಳವಡಿಸಿದ ನಂತರ, ನೌಕರರ ಪ್ರತಿ ತಿಂಗಳ ವೇತನದಿಂದ, ಮೂಲ ವೇತನ ಹಾಗೂ ತುಟ್ಟಿಭತ್ಯೆಯ ಶೇ.10 ರಷ್ಟು ಮೊತ್ತವನ್ನು NPS Regular ವಂತಿಗೆಯಾಗಿ ಕಟಾಯಿಸಲಾಗುತ್ತದೆ. ಕಟಾವಣೆಯಾದ ನೌಕರರ ಎನ್.ಪಿ.ಎಸ್ ವಂತಿಗೆಯನ್ನು ಸರ್ಕಾರದ ಸರಿಸಮಾನ ಕೊಡುಗೆಯೊಂದಿಗೆ Trustee bank ಗೆ ನಂತರ PFM ಗಳಿಗೆ ನಿಗದಿತ ಪ್ರಕ್ರಿಯೆಯ ಮೂಲಕ ಖಜಾನೆಗಳ ಮುಖಾಂತರ ವರ್ಗಾಯಿಸಲಾಗುತ್ತದೆ.
NPS ಹಿಂಬಾಕಿ ವಂತಿಗೆ: ಯೋಜನೆಯ ದಿನಾಂಕ:01.04.2006 ರಂದು ಹಾಗೂ ತದನಂತರ ಸೇವೆಗೆ ಸೇರಿದ ರಾಜ್ಯ ಸರ್ಕಾರಿ ನೌಕರರಿಗೆ ಅನುಷ್ಠಾನಗೊಂಡಿದ್ದರೂ ಸಹ, ಯೋಜನೆಯ ಕಾರ್ಯಾರಂಭ ಸುಮಾರು 4 ವರ್ಷಗಳ ನಂತರ ಅಂದರೆ ಏಪ್ರಿಲ್ 2010 ರಿಂದ ಆಗಿರುತ್ತದೆ. ಅಲ್ಲದೆ ಕೆಲವು ನೌಕರರಿಗೆ ಕಾರಣಾಂತರಗಳಿಂದ ಸೇವೆಗೆ ಸೇರಿದ ಮಾಹೆಯಿಂದ NPS Regular ವಂತಿಗೆ ಆರಂಭವಾಗದಿರುವ ಸಂಭವವಿರುತ್ತದೆ. ಆದುದರಿಂದ ಇಂತಹ ನೌಕರರಿಗೆ ಹಿಂಬಾಕಿ ವಂತಿಗೆ ಪಾವತಿಗಾಗಿ ಅವಕಾಶ ಕಲ್ಪಿಸಿದೆ. ಅಂತೆಯೇ ಸರಿಸಮಾನವಾದ ಸರ್ಕಾರಿ ಹಿಂಬಾಕಿಯನ್ನು ಶೇ.8 ರ ಚಕ್ರ ಬಡ್ಡಿಯೊಂದಿಗೆ ಒಂದೇ ಕಂತಿನಲ್ಲಿ ಎನ್.ಪಿ.ಎಸ್ ಘಟಕದ ಮೂಲಕ ಪಾವತಿಸುವ ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಸದರಿ ಪ್ರಕ್ರಿಯೆಗಳ ಬಗ್ಗೆ ಸಂಬಂಧಿಸಿದ ಖಜಾನಾಧಿಕಾರಿಗಳಿಂದಾಗಲೀ ಅಥವಾ ಎನ್.ಪಿ.ಎಸ್ ಘಟಕದಿಂದಾಗಲೀ ಮಾಹಿತಿ ಪಡೆಯ ಬಹುದಾಗಿದೆ.
(1) ವಯೋನಿವೃತ್ತಿ: ನೌಕರರು ವಯೋನಿವೃತ್ತಿ ಹೊಂದಿದ ಸಂದರ್ಭದಲ್ಲಿ ಎನ್.ಪಿ.ಎಸ್ ಮೊತ್ತದ ಶೇ.60 ರಷ್ಟನ್ನು ನೌಕರರಿಗೆ ಹಿಂದಿರುಗಿಸಲಾಗುತ್ತದೆ ಹಾಗೂ ಶೇ.40 ರಷ್ಟನ್ನು ಪಿಂಚಣಿ ನೀಡಲು ಕಾಯ್ದಿರಿಸಲಾಗುತ್ತದೆ. ಒಂದು ವೇಳೆ ಎನ್.ಪಿ.ಎಸ್ ಮೊತ್ತವು ರೂ. 2,00,000 ಗಳಿಗಿಂತ ಕಡಿಮೆಯಿದ್ದಲ್ಲಿ ಯಾವುದೇ ಪಿಂಚಣಿ ಸೌಲಭ್ಯವಿರುವುದಿಲ್ಲ ಹಾಗೂ ಶೇ.100 ರಷ್ಟು ಎನ್.ಪಿ.ಎಸ್ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ.
(2) ಸೇವೆಯಲ್ಲಿರುವಾಗಲೇ ನಿಧನ ಹೊಂದಿದಲ್ಲಿ: ಸೇವೆಯಲ್ಲಿರುವವರೆಗೆ ಸಂಗ್ರಹವಾದ ಸಂಪೂರ್ಣ ಎನ್.ಪಿ.ಎಸ್ ಮೊತ್ತವನ್ನು ಸಂಬಂಧಿಸಿದವರಿಗೆ ಹಿಂತಿರುಗಿಸಲಾಗುತ್ತದೆ. ಜೊತೆಗೆ ಸದರಿ ನೌಕರರು ಸೇವೆ ಸಲ್ಲಿಸಿದ ಅವಧಿಯ ಆಧಾರದ ಮೇರೆಗೆ ಸರ್ಕಾರದ ವತಿಯಿಂದ ಇಡಿಗಂಟಿನ ಪರಿಹಾರವನ್ನು ನೀಡಲಾಗುತ್ತದೆ. ಯಾವುದೇ ಪಿಂಚಣಿಯ ಸೌಲಭ್ಯವಿರುವುದಿಲ್ಲ.
(3) ರಾಜೀನಾಮೆ ಹಾಗೂ ಇತರೆ ಸಂದರ್ಭಗಳಲ್ಲಿ: ಎನ್.ಪಿ.ಎಸ್ ಮೊತ್ತದ ಶೇ.20 ರಷ್ಟನ್ನು ನೌಕರರಿಗೆ ಹಿಂದಿರುಗಿಸಲಾಗುತ್ತದೆ ಹಾಗೂ ಶೇ.80 ರಷ್ಟನ್ನು ಪಿಂಚಣಿಗಾಗಿ ಕಾಯ್ದಿರಿಸಲಾಗುತ್ತದೆ.
ನೌಕರರು ತಮ್ಮ ಎನ್.ಪಿ.ಎಸ್ ಖಾತೆಯಲ್ಲಿ ಜಮೆಯಾದ ಎನ್.ಪಿ.ಎಸ್ ವಂತಿಗೆಯ ವಿವರಗಳನ್ನು ಸಿ.ಆರ್.ಎ ವೆಬ್‍ಸೈಟ್‍ನಲ್ಲಿ I-PIN ಬಳಸಿ ನೋಡಬಹುದಾಗಿರುತ್ತದೆ.
Website ವಿಳಾಸ: www.cransdl.com
30.05.2015 ರವರೆಗಿನ ಎನ್.ಪಿ.ಎಸ್ ಯೋಜನೆಯ ಅಂಕಿ ಅಂಶಗಳು ಈ ಕೆಳಕಂಡಂತಿದೆ.
ಮೇ 2015 ರ ಮಾಹೆಯ ಅಂತ್ಯಕ್ಕೆ ಎನ್.ಪಿ.ಎಸ್ ನ ಪ್ರಗತಿಯು ಈ ಕೆಳಕಂಡಂತಿದೆ.:-
ಒಟ್ಟು ಕೊಡುಗೆ ಮತ್ತು ಹೂಡಿಕೆ ಮೊಬಲಗು ರೂ.2575.17 ಕೋಟಿಯ ವಿವರ ಈ ಕೆಳಕಂಡಂತಿದೆ:-
ಯೋಜನೆಯು ಖಜಾನೆ ಮೂಲಕ ವೇತನ ಪಡೆಯುವ ಎಲ್ಲಾ ಎನ್.ಪಿ.ಎಸ್ ನೌಕರರಿಗೆ ಆರಂಭವಾಗಿದ್ದು, ನಿಯೋಜನೆ ಮೇರೆಗೆ ಅನ್ಯ
ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು, ಪ್ರಕ್ರಿಯೆಯ
ಸಂಪೂರ್ಣವಿವರಗಳನ್ನೊಳಗೊಂಡ ಸರ್ಕಾರಿ ಆದೇಶ ಸಂಖ್ಯೆ: FD (Spl) 219 PEN 2012 ದಿನಾಂಕ:30.01.2014 ರಂದು ಹೊರಡಿಸಲಾಗಿದೆ.
ದೆಹಲಿಯ ಕರ್ನಾಟಕ ಭವನದ ರಾಜ್ಯ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಅನುಷ್ಠಾನಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು,
ಪ್ರಕ್ರಿಯೆಯ ವಿವರ ಆದೇಶ ಸಂಖ್ಯೆ: FD (Spl) 35 PEN 2013 ದಿನಾಂಕ:29.01.2014 ರಲ್ಲಿ ಲಭ್ಯವಿರುತ್ತದೆ.
ಯೋಜನೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಖಜಾನಾಧಿಕಾರಿ ಅಥವಾ ಎನ್.ಪಿ.ಎಸ್ ಘಟಕವನ್ನು
ಕೆಳಕಂಡ ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ.
ಫೋನ್ - 080 - 22866405
ಈ -ಮೇಲ್ - npskar@gmail.com
nps-cell@karnataka.gov.in
ಮೂಲ : ಕರುನಾಡು
ಕೊನೆಯ ಮಾರ್ಪಾಟು : 3/5/2020