ಪರಿಶಿಷ್ಟ ಜಾತಿಯ 1 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಮುಂದುವರೆಸುವಂತೆ, ಪ್ರೋತ್ಸಾಹಿಸಲು ಹಾಗೂ ವಿದ್ಯಾಭ್ಯಾಸದ ನಡುವೆ ಶಾಲೆ ಬಿಡುವುದನ್ನು ತಪ್ಪಿಸಲು ಮತ್ತು ಪಾಲಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಉತ್ತೇಜಿಸಲು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಗುತ್ತಿದೆ. ಈ ವಿದ್ಯಾರ್ಥಿವೇತನಕ್ಕೆ ಪೋಷಕರ ವರಮಾನ ರೂ. 2.00 ಲಕ್ಷಗಳನ್ನು ಮೀರಿರಬಾರದು. ಈ ವಿದ್ಯಾರ್ಥಿವೇತನ ಅರ್ಹತೆಗೆ ಈ ಕೆಳಕಂಡ ಷರತ್ತುಗಳಿವೆ.
1. ವಿದ್ಯಾರ್ಥಿನಿಲಯಗಳಲ್ಲಿ ವಾಸವಿರಬಾರದು.
2. ಪ್ರತಿಭಾ ವಿದ್ಯಾರ್ಥಿವೇತನ ಬಿಟ್ಟು ಬೇರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿರಬಾರದು.
3. ವಿದ್ಯಾರ್ಥಿಗಳು ಒಂದು ಬಾರಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಸಹ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
4. ಮಾನ್ಯತೆ ಪಡೆದ ಸರ್ಕಾರಿ/ಅನುದನಿತ/ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರಬೇಕು.
ಶಾಲಾ ವರ್ಷಗಳು ಪ್ರಾರಂಭವಾದ ನಂತರ ಜಿಲ್ಲೆ/ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಪ್ರಕಟಣೆಯ ಮೂಲಕ ಸಂಬಂಧಿಸಿದ ಶಾಲೆಗಳಿಂದ ಆಹ್ವಾನಿಸಿ, ಜುಲೈ 15 ರೊಳಗೆ ಅರ್ಜಿಗಳನ್ನು ಸ್ವೀಕರಿಸುವರು. ಹೀಗೆ ಬಂದ ಅರ್ಜಿಯನ್ನು ಪರಿಶೀಲಿಸಿ ಸೆಪ್ಟೆಂಬರ್ 15ರೊಳಗೆ ಅರ್ಹರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಈ ಕೆಳಕಂಡ ದರದಲ್ಲಿ ಮಂಜೂರು ಮಾಡಲಾಗುವುದು.
ಕ್ರ.ಸಂ |
ತರಗತಿ |
ಬಾಲಕರು |
ಬಾಲಕಿಯರು |
1 |
1 ರಿಂದ 5 |
750.00 |
850.00 |
2 |
6 ರಿಂದ 7 |
900.00 |
1000.00 |
3 |
8 ನೇ ತರಗತಿ |
1000.00 |
1100.00 |
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದ ವಿದ್ಯಾರ್ಥಿ ವೇತನವನ್ನು ಕೆಳಗಿನ ದರಗಳಲ್ಲಿ ನೀಡಲಾಗುತ್ತಿದೆ.
ವಿವರ |
ಡೇ ಸ್ಕಾಲರ್ಸ್ |
ಹಾಸ್ಟೆಲರ್ಸ್ |
ನಿರ್ವಹಣಾ ವೆಚ್ಚ |
ಮಾಹೆಯಾನ ರೂ. 150 ರಂತೆ 10 ತಿಂಗಳಿಗೆ |
ಮಾಹೆಯಾನ ರೂ. 350 ರಂತೆ 10 ತಿಂಗಳಿಗೆ |
ಅಡಾಕ್ ಅನುದಾನ |
ವಾರ್ಷಿಕ ರೂ. 750 |
ವಾರ್ಷಿಕ ರೂ. 1000 |
ಕೊನೆಯ ಮಾರ್ಪಾಟು : 3/25/2020