ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳಲ್ಲಿ ಮರಣ ಹೊಂದಿದ ಕುಟುಂಬಗಳಿಗೆ ಪರಿಹಾರ ಧನ ವಿತರಣೆ
ಹಂಚಿಕೊಳ್ಳಿ

ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳಲ್ಲಿ ಮರಣ ಹೊಂದಿದ ಕುಟುಂಬಗಳಿಗೆ ಪರಿಹಾರ ಧನ ವಿತರಣೆ

ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳಲ್ಲಿ ಮರಣ ಹೊಂದಿದ ಕುಟುಂಬಗಳಿಗೆ ಪರಿಹಾರ ಧನ ವಿತರಣೆ

ಗುತ್ತಿಗೆದಾರರ ಸೂಚನೆಯಂತೆ ಅಪಾಯದ ಮ್ಯಾನ್ ಹೋಲ್ ಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡು ಮೃತಪಟ್ಟ ಸಫಾಯಿ ಕರ್ಮಚಾರಿ ಗಳ ಕುಟುಂಬದವರಿಗೆ ಕೆಳಕಂಡಂತೆ ಸವಲತ್ತುಗಳನ್ನು/ಪರಿಹಾರವನ್ನು ವಿತರಿಸಬೇಕಾಗಿರುತ್ತದೆ.

  • ಸರ್ವೋಚ್ಚ ನ್ಯಾಯಾಲಯದ ದಿನಾಂಕ : 27-03-2014ರ ಆದೇಶದ ಪ್ರಕಾರ ಮೇಲ್ಕಂಡ ಪ್ರಕರಣಗಳಲ್ಲಿ ಮರಣ ಹೊಂದಿರುವಂತಹ ಸಫಾಯಿ ಕರ್ಮಚಾರಿ ಗಳ ಕುಟುಂಬಗಳಿಗೆ ರೂ.10.00 ಲಕ್ಷಗಳವರೆಗೂ ಪರಿಹಾರ ಮೊತ್ತವನ್ನು ನೀಡಬಹುದಾಗಿರುತ್ತದೆ. ಈ ಮೊತ್ತವನ್ನು ರಾಜ್ಯ ಸರ್ಕಾರ ದ ಆದೇಶ ಸಂಖ್ಯೆ/ಸಆಇ10/ಎಂಡಬ್ಲ್ಯೂ/2012 ಬೆಂಗಳೂರು ದಿನಾಂಕ : 19-06-2012 ರನ್ವಯ ರೂ.5.00 ಲಕ್ಷಗಳವರೆಗೂ ಪರಿಹಾರ ಧನವನ್ನು ವಿತರಿಸಬಹುದಾಗಿರುತ್ತದೆ. ನಗರ ಸ್ಥಳೀಯ ಸಂಸ್ಥೆಗಳು ಮುನ್ಸಿಪಲ್ ನಿಧಿ ಅಥವಾ ಎಸ್.ಎಸ್.ಸಿ ನಿಧಿಯಿಂದ ಭರಿಸುವುದು ಹಾಗೂ ಉಳಿದಂತೆ ಮಹಾನಗರ ಪಾಲಿಕೆ, ನಿಗಮ ಮಂಡಳಿಗಳು ತಮ್ಮ ಸ್ವಂತ ನಿಧಿಯಿಂದ ಭರಿಸಿ ಪಾವತಿಸಬಹುದಾಗಿರುತ್ತದೆ.
  • ಮರಣ ಹೊಂದಿದ ಸಫಾಯಿ ಕರ್ಮಚಾರಿ ಗಳ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬಹುದಾಗಿರುತ್ತದೆ.
  • ಆದ್ಯತೆ ಮೇರೆಗೆ ನಿವೇಶನ ಹಾಗೂ ಇತರೇ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
  • ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ , ಏಕಲವ್ಯ , ನವೋದಯ ಮುಂತಾದ ಶಾಲೆಗಳಲ್ಲಿ ಉಚಿತ ಪ್ರವೇಶ ನೀಡಬೇಕಾಗುತ್ತದೆ.
  • ಇಬ್ಬರು ಮಕ್ಕಳಿಗೆ ಉಚಿತ ವಿದ್ಯಾರ್ಥಿ  ವೇತನ ನೀಡಬಹುದಾಗಿರುತ್ತದೆ.

ಈ ಕಾರ್ಯಕ್ರಮಕ್ಕೆ ಯಾವುದೇ ವಾರ್ಷಿಕ ಗುರಿ ಇರುವುದಿಲ್ಲ ಪ್ರಕರಣಗಳನ್ವಯ ಪರಿಹಾರ ಧನ ವಿತರಿಸಲಾಗುವುದು.

ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

3.0
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top