অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅನುಷ್ಟಾನ ಕಾರ್ಯತಂತ್ರ

ಅನುಷ್ಟಾನ ಕಾರ್ಯತಂತ್ರ

ಅನುಷ್ಟಾನ ಕಾರ್ಯತಂತ್ರ

ರಾಜ್ಯ ಮಟ್ಟದಲ್ಲಿ :

          ಸಂಜೀವಿನಿ ಯೋಜನಾ ತಂಡಕ್ಕೆ ರಾಜೀವ್ ಗಾಂಧಿ ಚೈತನ್ಯ ಯೋಜನೆ ಬಗ್ಗೆ ಒಂದು ದಿನದ ಪರಿಚಯಾತ್ಮಕ ಕಾರ್ಯಗಾರ ಏರ್ಪಡಿಸಲಾಗುವುದು.

          ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳು ಮತ್ತು ಭಾಗೀದಾರರ ಪಾತ್ರದ ಬಗ್ಗೆ ಮಾಹಿತಿ ನೀಡುವುದು. ಅನುಷ್ಟಾನದ ಹಂತದಲ್ಲಿ ಎದುರಾಗಬಹುದಾದ ಸಮಸ್ಯೆ / ಸವಾಲುಗಳ ಬಗ್ಗೆ ಅರಿವು ಮೂಡಿಸಲಾಗುವುದು.

          ಗ್ರಾಮೀಣಾಭಿವೃಧ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ರಾಜ್ಯ ಮಟ್ಟದ ಬ್ಯಾಂಕರುಗಳ ಉನ್ನತ ಸಮಿತಿಯ ಸಭೆ ಕರೆದು ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿಯಲ್ಲಿ ಸ್ವಂತ ಉದ್ಯಮ ಸೇವಾ/ವ್ಯಾಪಾರ ಸ್ಥಾಪಿಸಲು ಆಸಕ್ತ ಯುವಜನತೆಗೆ ಸಾಲ ಸೌಲಭ್ಯ ಒದಗಿಸಲು ಒಪ್ಪಿಗೆ ಪಡೆಯಲಾಗುವುದು.

          ಬ್ಯಾಂಕುಗಳು ನಿರ್ದಿಷ್ಟ ಸೂಚನೆಗಳನ್ನು ತಮ್ಮ ಬ್ಯಾಂಕಿನ ವಿಭಾಗಿಂiÀi / ಶಾಖಾ ಕಛೇರಿಗಳಿಗೆ ನೀಡುವಂತೆ ಕ್ರಮವಹಿಸಲಾಗುವುದು.

ಜಿಲ್ಲಾ ಮಟ್ಟದಲ್ಲಿ :

          ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ರಾಜೀವ್ ಗಾಂಧಿ ಚೈತನ್ಯ ಯೋಜನೆ ಬಗ್ಗೆ ಪರಿಚಯಾತ್ಮಕ ಕಾರ್ಯಾಗಾರವನ್ನು ಏರ್ಪಡಿಸುವುದು.

          ಕಾರ್ಯಗಾರದಲ್ಲಿ ಕಾರ್ಯಕ್ರಮದ ಪರಿಕಲ್ಪನೆ ಮತ್ತು ಅನುಷ್ಠಾನದ ಬಗ್ಗೆ ಮಾಹಿತಿ ಒದಗಿಸುವುದು.

          ಚರ್ಚೆಗಳ ಮೂಲಕ ಅನುಷ್ಟಾನದ ಹಂತದಲ್ಲಿ ಎದುರಾಗಬಹುದಾದ ಸವಾಲುಗಳಿಗೆ ಸೂಕ್ತ ಪರಿಹಾರೋಪಾಯದ ಮಾಹಿತಿ ನೀಡುವುದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 7/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate