অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಉದ್ಯೋಗ ಕಲ್ಪಿಸುವಿಕೆ

ಉದ್ಯೋಗ ಕಲ್ಪಿಸುವಿಕೆ

1.        ವೃತ್ತಿಪರ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಒದಗಿಸುವ ಸಂಸ್ಥೆಗಳ (ಯೋಜನಾ ಅನುಷ್ಠಾನ ಸಂಸ್ಥೆ-ಪಿ.ಐ.ಎ.) ಆಯ್ಕೆ:

          ಕೆ.ಎಸ್.ಆರ್.ಎಲ್.ಪಿ.ಎಸ್ ಸಂಸ್ಥೆಯು, ಪ್ರಸ್ತುತ ಬೇಡಿಕೆ ಇರುವ ಕೌಶಲ್ಯಗಳಲ್ಲಿ ವೃತ್ತಿ ತರಬೇತಿ ನೀಡಿ ಉದ್ಯೋಗ ಒದಗಿಸುತ್ತಿರುವ ಅನುಭವ ಹೊಂದಿದ ಪಿ.ಐ.ಎ.ಯನ್ನು ಆಯ್ಕೆ ಮಾಡುವುದು.

          ಆಯ್ಕೆ ಹೊಂದಿದ ಯೋಜನಾ ಅನುಷ್ಠಾನ ಸಂಸ್ಥೆಯು 3 ವರ್ಷಗಳ ಕಾಲ ವೃತ್ತಿ ತರಬೇತಿ ಮತ್ತು ಉದ್ಯೋಗ ಒದಗಿಸುವ ಸಂಸ್ಥೆಗಳಾಗಿ ಕೆಲಸ ನಿರ್ವಹಿಸಿರುವ ಅನುಭವ ಹೊಂದಿರುವುದು.

          ಯೋಜನಾ ಅನುಷ್ಠಾನ ಸಂಸ್ಥೆಗಳು ಆಯಾಯ ಜಿಲ್ಲೆಗಳಲ್ಲಿರುವ ಕರ್ನಾಟಕ ವೃತ್ತಿಪರ ಶಿಕ್ಷಣ ತರಬೇತಿ ಸಂಸ್ಥೆಗಳಡಿಯ ವಿ.ಟಿ.ಪಿ. / ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆಯಂತೆ ವಿವಿಧ ಇಲಾಖೆಗಳಲ್ಲಿ ಕೌಶಲ್ಯ ತರಬೇತಿ ನೀಡಲು ನೊಂದಣಿಯಾಗಿರಬೇಕು.

          ಯೋಜನಾ ಅನುಷ್ಠಾನ ಸಂಸ್ಥೆಯು ಆಸಕ್ತ ನಿರುದ್ಯೋಗಿ ಯುವಜನರಿಗೆ ಹಾಗೂ ಪೋಷಕರಿಗೆ ಸಮಾಲೋಚನೆ ಮತ್ತು ಮಾರ್ಗದರ್ಶನ ಕೊಟ್ಟು ಕೌಶಲ್ಯ ತರಬೇತಿಗೆ ಸಿದ್ದಗೊಳಿಸುವುದು.

          ಆಸಕ್ತ ನಿರುದ್ಯೋಗಿ ಯುವಜನರಿಗೆ ಯೋಜನಾ ಅನುಷ್ಠಾನ ಸಂಸ್ಥೆಯು (ಪಿ.ಐ.ಎ) ಕೌಶಲ್ಯ ತರಬೇತಿ ನೀಡಿ ಕೈಗಾರಿಕೆ / ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವುದು.

          ಯೋಜನಾ ಅನುಷ್ಠಾನ ಸಂಸ್ಥೆಯು ಕೌಶಲ್ಯ ತರಬೇತಿ ಪಡೆದ ಯುವಜನರಿಗೆ ಶೇ.75% ಉದ್ಯೋಗ ಕಲ್ಪಿಸುವುದು.

          ಯೋಜನಾ ಅನುಷ್ಠಾನ ಸಂಸ್ಥೆಯು (ಪಿ.ಐ.ಎ) ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಒದಗಿಸುವುದು ಹಾಗೂ ನಂತರ ಅನುಸರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುವುದು.

          ಕೌಶಲ್ಯ ತರಬೇತಿಯ ಅವಧಿಯು ವ್ಯಕ್ತಿತ್ವ ವಿಕಸನದ ವಿಷಯಗಳನ್ನೊಳಗೊಂಡು ವಿವಿಧ ಕೋರ್ಸ್‍ಗಳ ಆಧಾರದ ಮೇಲೆ ಅವಲಂಭಿತವಾಗಿರುತ್ತದೆ.

          ವೃತ್ತಿಪರ ಕೌಶಲ್ಯ ತರಬೇತಿಗಳು ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆಗಳ (ವಿ.ಟಿ.ಪಿ). / ಕೇಂದ್ರ ಹಾಗೂ ರಾಜ್ಯಗಳಿಂದ ಅನುಮೋದಿತ ತರಬೇತಿ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ.

          ಪ್ರಸ್ತುತ ಉದ್ಯೋಗ ಬೇಡಿಕೆಗನುಗುಣವಾಗಿ ವಿವಿಧ ಕಂಪನಿ / ಸಂಸ್ಥೆಗಳ ಉದ್ಯೋಗದಾತರುಗಳನ್ನು ಗುರುತಿಸಿ ಸೂಕ್ತ ಉದ್ಯೋಗಗಳನ್ನು ಕಲ್ಪಿಸುವುದು.

          ಯೋಜನಾ ಅನುಷ್ಠಾನ ಸಂಸ್ಥೆಗಳು ವೃತ್ತಿಪರ ಕೌಶಲ್ಯ ತರಬೇತಿಯ ನಂತರ ಪ್ರತಿ ಅಭ್ಯರ್ಥಿಗಳ ವೈಯಕ್ತಿಕ ವಿವರಗಳನ್ನು ನಿಗದಿತ ಅರ್ಜಿ ನಮೂನೆಯ ಮೂಲಕ ಉದ್ಯೋಗÀ ಕಲ್ಪಿಸುವ ವ್ಯವಸ್ಥೆ ಮಾಡುವುದು.

          ಪ್ರತಿ ಫಲಾನುಭವಿಗಳ ವೃತ್ತಿಪರ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಕಲ್ಪಿಸಲು, ಗರಿಷ್ಟ ಅನುದಾನ ರೂ 15,000/- ವೆಚ್ಚ ಮಾಡುವುದು. (ತರಬೇತಿ ವೆಚ್ಚ, ವಸತಿ ಮತ್ತು ಊಟೋಪಚಾರ, ನಿರ್ಧರಣ ಮತ್ತು ಪ್ರಮಾಣೀಕರಣ, ಉದ್ಯೋಗಾವಕಾಶ ಕಲ್ಪಿಸಲು, ಮಾಹಿತಿ ನಿರ್ವಹಣಾ ವ್ಯವಸ್ಥೆ, ಸಂಸ್ಥೆಯ ಆಡಳಿತ ವೆಚ್ಚ, ಉದ್ಯೋಗಾವಕಾಶದ ನಂತರ ಅನುಸರಣೆ ಇತ್ಯಾದಿ)

ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಕಲ್ಪಿಸುವಿಕೆ

ಅ) ವಸತಿ ಸಹಿತ 45 ದಿನಗಳ ತರಬೇತಿಗೆ

1. ಕೌಶಲ್ಯ ತರಬೇತಿಗೆ      6,000

2) ವಸತಿ ಮತ್ತು ಉಟೋಪಚಾರ ಹಾಗೂ ಒಂದು ಬಾರಿ ಪ್ರಯಾಣ ವೆಚ್ಚ      4,500

3) ಪ್ರಮಾಣೀಕರಣ ಮತ್ತು ಉದ್ಯೋಗಾವಕಾಶ ಕಲ್ಪಿಸಲು 1,800

4) ಯೋಜನಾ ಅನುಷ್ಠಾನ ಸಂಸ್ಥೆಯ ಆಡಳಿತ  ಹಾಗೂ ಇತರೆ ವೆಚ್ಚ          700

5) ಉದ್ಯೋಗದಲ್ಲಿ ಮುಂದುವರಿಯುತ್ತಿರುವ ಬಗ್ಗೆ ಅನುಸರಣಾ ವೆಚ್ಚ (3 ವರ್ಷ) 2,000

ಒಟ್ಟು ರೂ.        15,000

 

ಆ) ವಸತಿ ರಹಿತ 45 ದಿನಗಳ ತರಬೇತಿಗೆ

1)ಕೌಶಲ್ಯ ತರಬೇತಿಗೆ       6,000

2) ಉಟೋಪಚಾರ ಹಾಗೂ ಪ್ರಯಾಣ ವೆಚ್ಚ ಪೂರ್ಣ ತರಬೇತಿ ಅವಧಿಗೆ      4,500

3) ಪ್ರಮಾಣೀಕರಣ ಮತ್ತು ಉದ್ಯೋಗಾವಕಾಶ ಕಲ್ಪಿಸಲು 1,800

4) ಯೋಜನಾ ಅನುಷ್ಠಾನ ಸಂಸ್ಥೆಯ ಆಡಳಿತ  ಹಾಗೂ ಇತರೆ ವೆಚ್ಚ          700

5) ಉದ್ಯೋಗದಲ್ಲಿ ಮುಂದುವರಿಯುತ್ತಿರುವ ಬಗ್ಗೆ ಅನುಸರಣಾ ವೆಚ್ಚ (3 ವರ್ಷ) 2,000

ಒಟ್ಟು ರೂ.        15,000

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 1/31/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate