ಜಿಲ್ಲಾ ಮಟ್ಟದ ಸಮಿತಿ
1 ಜಿಲ್ಲೆಯ ಉಸ್ತುವಾರಿ ಸಚಿವರು ಅಧ್ಯಕ್ಷರು
2 ಜಿಲ್ಲೆಯ ಶಾಸಕರು ಸದಸ್ಯರು
3 ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸದಸ್ಯರು
4 ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಸದಸ್ಯರು
5 ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸದಸ್ಯರು
6 ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು, ನಬಾರ್ಡ್ ಸದಸ್ಯರು
7 ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸದಸ್ಯರು
8 ಜಿಲ್ಲೆಯ ಪ್ರಮುಖ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿದಿ ಸದಸ್ಯರು
9 ಜಿಲ್ಲಾ ರೂಡಸೆಟಿಯ ಪ್ರತಿನಿಧಿ ಸದಸ್ಯರು
10 ಜಿಲ್ಲೆಯ ಕೃಷಿವಿಜ್ಞಾನ ಕೇಂದ್ರದ ಪ್ರತಿನಿಧಿ ಸದಸ್ಯರು
11 ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸದಸ್ಯರು
12 ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳು
ಜಿಲ್ಲಾ ಮಟ್ಟದ ಯೋಜನಾ ಅನುಷ್ಠಾನ ಮತ್ತು ಸಲಹಾ ಸಮಿತಿಯ ಕಾರ್ಯಗಳು
ಈ ಸಮಿತಿಯು ಕನಿಷ್ಠ 3 ತಿಂಗಳಿಗೊಮ್ಮೆ ಸಭೆ ನಡೆಸುವುದು
ಯೋಜನಾ ಕಾರ್ಯ ಅನುಷ್ಠಾನ ಸಮಿತಿಗೆ ಇಬ್ಬರು ತಜ್ಞರನ್ನು ಆಯ್ಕೆ ಮಾಡುವುದು
ತಾಲ್ಲೂಕು ಸಮಿತಿಗಳು ತೆಗೆದುಕೊಂಡಿರುವ ನಿರ್ಣಯಗಳನ್ನು ಪರಿಶೀಲಿಸುವುದು ಹಾಗೂ ಸಲಹೆ ಮತ್ತು ಸೂಚನೆಗಳನ್ನು ನೀಡುವುದು.
ಯೋಜನಾ ಕಾರ್ಯಾನುಷ್ಠಾನ ಸಮಿತಿ ತೆಗೆದುಕೊಂಡಿರುವ ನಿರ್ಣಯಗಳನ್ನು ಪರಿಶೀಲಿಸುವುದು ಹಾಗೂ ಸಲಹೆ ಮತ್ತು ಸೂಚನೆಗಳನ್ನು ನೀಡುವುದು.
ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಅಗತ್ಯವಿರುವ ಸಲಹೆ ಮತ್ತು ಸೂಚನೆಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡಂತೆ ತಜ್ಞರ ಯೋಜನಾ ಕಾರ್ಯಾನುಷ್ಠಾನ ಸಮಿತಿಯನ್ನು ರಚಿಸುವುದು.
ಮೂಲ: ಅರ್.ಜಿ.ಸಿ.ವೈ
ಕೊನೆಯ ಮಾರ್ಪಾಟು : 10/22/2019