অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸ್ವ-ಉದ್ಯೋಗ ಕಾರ್ಯಕ್ರಮ

ಸ್ವ-ಉದ್ಯೋಗ ಕಾರ್ಯಕ್ರಮ

1.        ಆಯ್ಕೆಯಾದ ಯುವಜನರಿಗೆ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ :

•             ಈಗಾಗಲೇ ಸ್ವ-ಉದ್ಯೋಗ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಪರಿಣತಿ ಹೊಂದಿರುವ ಸರ್ಕಾರ / ಸರ್ಕಾರೇತರ ಸಂಸ್ಥೆಗಳನ್ನು (ಯೋಜನಾ ಬೆಂಬಲ ಸಂಸ್ಥೆ) ಗುರುತಿಸಲಾಗುವುದು.

•             ಪ್ರತಿ ಜಿಲ್ಲೆಗೆ ಯೋಜನಾ ಬೆಂಬಲ ಸಂಸ್ಥೆ/ ಸಂಸ್ಥೆಗಳನ್ನು ಆಯ್ಕೆ ಮಾಡಿ ಹಂಚಿಕೆ ಮಾಡಲಾಗುವುದು. ಯೋಜನಾ ಬೆಂಬಲ ಸಂಸ್ಥೆಗಳಿಗಿರುವ ಮೂಲಭೂತ ಸೌಕರ್ಯ, ಕಾರ್ಯಕ್ಷಮತೆ ಹಾಗೂ ಅನುಭವಗಳನ್ನು ಪರಿಗಣಿಸಿ ಫಲಾನುಭವಿಗಳ ಹಂಚಿಕೆ ಮಾಡುವುದು.

•             ಈ ಯೋಜನಾ ಬೆಂಬಲ ಸಂಸ್ಥೆಗಳು ಉದ್ಯಮಶೀಲತಾ ಅಭಿವೃಧ್ಧಿ ಕಾರ್ಯಕ್ರಮದ (ಇಡಿಪಿ) ಕೌಶಲ್ಯಾಧಾರಿತ ಮತ್ತು ಉದ್ಯಮ ಶೀಲತಾ ಕಾರ್ಯಕ್ರಮವನ್ನು ರೂಡ್‍ಸೆಟಿ / ಆರ್‍ಸೆಟಿ / ಸಿಡಾಕ್ / ಜನಶಿಕ್ಷಣ ಸಂಸ್ಥೆ / ಸಮುದಾಯ ಪಾಲಿಟೆಕ್ನಿಕ್ ನಂತಹ ತರಬೇತಿ ಸಂಸ್ಥೆಗಳ ಮೂಲಕ ಮಾಡುವುದು.

•             ಫಲಾನುಭವಿಗಳು ಆಯ್ಕೆ ಮಾಡಿಕೊಂಡ ಚಟುವಟಿಕೆಗಳಿಗೆ ಬ್ಯಾಂಕುಗಳಿಂದ ಸಾಲ ಮಂಜೂರಾತಿ ನಂತರ ಅಗತ್ಯವಾದ ಕೌಶಲ್ಯಾಧಾರಿತ ತರಬೇತಿಯನ್ನು ಯೋಜನಾ ಬೆಂಬಲ ಸಂಸ್ಥೆಗಳು ರೂಡ್‍ಸೆಟಿ/ಆರ್‍ಸೆಟಿ ಕೃಷಿ ವಿಜ್ಞಾನ ಕೇಂದ್ರಗಳಂತಹ ಸಂಸ್ಥೆಗಳ ಮೂಲಕ ಏರ್ಪಡಿಸುವುದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate