ವಿದ್ಯಾರ್ಥಿಗಳಿಗೆ ತರಗತಿವಾರು ಬೇಕಾಗುವ ಅಗತ್ಯವಾದ ಪಠ್ಯ ಪುಸ್ತಕಗಳ ಪಟ್ಟಿಯನ್ನು ಈ ಕೆಳಗೆ ವಿವರಿಸಿರುವಂತೆ ಪಠ್ಯ ಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಸಂಬಂಧಿಸಿದ ಕಾಲೇಜುಗಳಲ್ಲಿ ಪ್ರತ್ಯೇಕ ಪುಸ್ತಕ ಭಂಡಾರವನ್ನು ಸ್ಥಾಪಿಸಲಾಗುವುದು. ಅ. ಪದವಿ ತರಗತಿಗಳು ಎರಡು ವಿದ್ಯಾರ್ಥಿಗಳಿಗೆ ಒಂದು ಸೆಟ್ 1 ವೈದ್ಯಕೀಯ ರೂ.7500.00 2 ತಾಂತ್ರಿಕ ರೂ.7500.00 3 ಪಶು ವಿಜ್ಞಾನ ರೂ.5000.00 4 ಕೃಷಿ ವಿಜ್ಞಾನ ರೂ.4500.00 5 ಪಾಲಿಟೆಕ್ನಿಕ್ ರೂ.2400.00 ಆ. ಸ್ನಾತಕೋತ್ತರ ಕೋರ್ಸ್ ಗಳು 6 ಮೆಡಿಕಲ್ ತಾಂತ್ರಿಕ, ಪಶು ವಿಜ್ಞಾನ, ಎಲ್.ಎಲ್.ಬಿ. (3 ವರ್ಷ ) /ಎಲ್.ಎಲ್.ಎಂ. (2 ವರ್ಷ ), ಚಾರ್ಟೆಡ್ ಅಕೌಂಟೆಂಟ್, ಎಂ.ಬಿ.ಎ. (2 ವರ್ಷ ) ಸಮಾನಾಂತರ, ಬಯೋಸೈನ್ಸ್ ಇತ್ಯಾದಿ ಸ್ನಾತಕೋತ್ತರ ಕೋರ್ಸ್ ಗಳು ಒಂದು ವಿದ್ಯಾರ್ಥಿಗೆ ಒಂದು ಸೆಟ್ ರೂ.5000.00 ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು