অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪುನರ್ವಸತಿ ಯೋಜನೆ

ವಿಕಲಚೇತನರಿಗೆ ಸಾಧನ ಸಲಕರಣೆಗಳ ಪೂರೈಕೆ

ಸಾಧನ ಸಲಕರಣೆಗಳು

ವಿಕಲಚೇತನ ವ್ಯಕ್ತಿಗಳ ಚಾಲನೆಗೆ ಹಾಗೂ ಅವಶ್ಯಕತೆಗಳನ್ನು ಪೂರೈಸಲು ಅಗತ್ಯವಾದಂತಹ ಸಾಧನ ಸಲಕರಣೆಗಳನ್ನು ಇಲಾಖೆಯಿಂದ ನೀಡಲಾಗುವುದು

ಅರ್ಹತೆಗಳು

  • ಕರ್ನಾಟಕ ರಾಜ್ಯದಲ್ಲಿ 10ವರ್ಷಗಳಿಂದ ವಾಸವಾಗಿದ್ದು ತಹಶೀಲ್ದಾರರಿಂದ ದೃಢೀಕ್ರಿಸಲಪಟ್ಟಿರಬೇಕು
  • ವಾರ್ಷಿಕ ಆದಾಯಮಿತಿಯು ಗ್ರಾಮಾಂತರ ಪ್ರದೇಶದಲ್ಲಿ ರೂ.11500 ಮತ್ತು ನಗರ ಪ್ರದೇಶದಲ್ಲಿ ರೂ.24000ಗಳ ಒಳಗಿರಬೇಕು
  • ರೂ1000ಮೊತ್ತದ ಒಳಗಿನ ಸಾಧನ ಸಲಕರಣಗಳನ್ನು ಪಡೆಯಲು ಅದಾಯಮಿತಿಯ ನಿರ್ಬಂಧಿತವಿರುವುದಿಲ್ಲ

ವಿಕಲಚೇತನತೆಯನ್ನು ಶಸ್ತ್ರ ಚಿಕಿತ್ಸೆಯಿಂದ ನಿವಾರಣೆಗೊಳಿಸಲು ಹಾಗೂ ವಿಕಲತೆಯ ಚಿಕಿತ್ಸೆಗಾಗಿ ವೈದ್ಯಕೀಯ ಪರಿಹಾರ ನಿಧಿ ಯೋಜನೆ

ಈ ಯೋಜನೆಯಡಿಯಲ್ಲಿ ಅರ್ಹ ವಿಕಲಚೇತನ ವ್ಯಕ್ತಿಗಳಿಗೆ ವಿಕಲತೆಯನ್ನು ನಿವಾರಿಸಲು ಶಸ್ತ್ರ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ, ಸಂಜಯಗಾಂಧಿ ಆಸ್ಪತ್ರಗಳಲ್ಲಿ ಮತ್ತು ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಗರಿಷ್ಠ ಮೊತ್ತ ರೂ.35000/- ಗಳ ಆರ್ಥೀಕ ನೆರವು ನೀಡಲಾಗುತ್ತಿದೆ.

ಅರ್ಹತೆಗಳು

  • ವಾರ್ಷಿಕ ಆದಾಯಮಿತಿಯು ಗ್ರಾಮಾಂತರ ಪ್ರದೇಶದಲ್ಲಿ ರೂ.20000 ಮತ್ತು ನಗರ ಪ್ರದೇಶದಲ್ಲಿ ರೂ.50000ಗಳ ಒಳಗಿರಬೇಕು
  • ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಸುಸಚ್ಚಿತವಾಗಿ ವಿಶೇಷ ಆಸ್ಪತ್ರೆಗಳಲ್ಲಿ ಮಾಡಿಸಿರಬೇಕು.
  • ಚಿಕಿತ್ಸೆಗಾಗಿ ಭರಿಸಿದ ವೆಚ್ಚಗಳನ್ನು ಅರ್ಜಿಯ ಜೊತೆ ಸಲ್ಲಿಸಬೇಕು
  • ದೃಢೀಕೃತ ಅಂವಿಕಲತೆಯ ಪ್ರಮಾಣ ಪತ್ರವನ್ನು ಲಗತ್ತಿಸಿರಬೇಕು.

ಗ್ರಾಮೀಣ ಪುನರ್ವಸತಿ ಯೋಜನೆ

ವಿಕಲಚೇತನರಿಗೆ ವಿಕಲಚೇತನರಿಂದಲೇ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ದೊರೆಯುವ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿಕೊಡುವುದು ಯೋಜನೆಯ ಉದ್ದೇಶ. ಸದರಿ ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಬ್ಬ ವಿ.ಆರ್.ಡಬ್ಲ್ಯೂ,ತಾಲ್ಲೂಕು ಮಟ್ಟದಲ್ಲಿ ಒಬ್ಬ ಎಂ.ಆರ್.ಡಬ್ಲೂಗಳನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಲಾಗಿರುತ್ತದೆ.ಅದರಂತೆ 2012-13ನೇ ಸಾಲಿನಲ್ಲಿ 4394 ವಿ.ಆರ್.ಡಬ್ಲ್ಯೂ, 150 ಎಂ.ಆರ್.ಡಬ್ಲ್ಯೂಗಳನ್ನು ನೇಮಕ ಮಾಡಿಕೊಂಡಿದ್ದು ಅವರಿಗೆ ಗೌರವಧನ ಪಾವತಿಸಲು ರೂ.499.91 ಲಕ್ಷ ವೆಚ್ಚ ಮಾಡಲಾಗಿದೆ.

ಮಾನಸ ಕೇಂದ್ರ: ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಬೆಂಗಳೂರು , ಬೆಳಗಾಂ ನಲ್ಲಿ ಮಾನಸ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಶಿವಮೊಗ್ಗ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ

  • ಸರ್ಕಾರದ ಆದೇಶದಂತೆ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಗಳ ಅನುಷ್ಠಾನದ ಹೊಣೆಯನ್ನು ಆಯಾ ಜಿಲ್ಲೆಯ ಭಾರತೀಯ ರೆಡ್ ಕ್ರಾಸ್ ಸೊಸೈಟಿಗಳ ಮೂಲಕ ಅನುಷ್ಠಾನಗೊಳಿಸಲಾಗುವುದು
  • ರಾಜ್ಯ ಅನುದಾನದಿಂದ 11 ಜಿಲ್ಲೆಗಳಲ್ಲಿ ( ಬೆಂಗಳೂರು, ಹಾವೇರಿ, ಗದಗ್, ರಾಯಚೂರು, ಮೈಸೂರು) ಗಳಲ್ಲಿ ಅಂಗವಿಕಲರ ಪುನರ್ವಸತಿ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ

ಉದ್ದೇಶ

  • ತಪಾಸಣಾ ಶಿಬಿರಗಳ ಮೂಲಕ ಅಂಗವಿಕಲರ ಸಮೀಕ್ಷೆ ಮತ್ತು ಗುರುತಿಸುವುದು
  • ಅಂಗವಿಕಲತೆಯನ್ನು ತಡೆಗಟ್ಟುವ ಬಗ್ಗೆ ಪ್ರೋತ್ಸಾಹಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು
  • ಅಗತ್ಯವಿರುವ ಸಾಧನ ಸಲಕರಣೆಗಳನ್ನು ಗುರುತಿಸುವುದು, ಹಾಗೂ ಅವುಗಳನ್ನು ತಯಾರಿಸಿ ನೀಡುವುದು ಮತ್ತು ದುರಸ್ತಿ ಕಾರ್ಯಗಳು
  • ದೈಹಿಕ, ಔದ್ಯೋಗಿಕ, ವಾಕ್ ಚಿಕಿತ್ಸೆ ಇತರ ಸೇವೆಗಳನ್ನು ಒದಗಿಸುವುದು
  • ವಿಕಲಚೇತನರಿಗೆ ಅಂಗವಿಕಲರ ಸ್ನೇಹಿ ವಾತಾವರಣ ಕಲ್ಪಿಸುವುದು
  • ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ವಿಕಲಚೇತನರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರನ್ನು ಸೂಕ್ತ ಕೆಲಸಗಳಲ್ಲಿ ತೊಡಗಿಸುವುದರ ಮೂಲಕ ಆರ್ಥಿಕವಾಗಿ ಸಬಲೀಕರಿಸುವುದು ಮುಖ್ಯ ಉದ್ದೇಶಗಳಾಗಿವೆ

ಮೂಲ  : ವಿಕಲ ಚೇತನ ಹಾಗು ಹಿರಿಯ ನಾಗರಿಕರ ಸಬಲೀಕರಣಇಲಾಖೆ

ಕೊನೆಯ ಮಾರ್ಪಾಟು : 12/6/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate