ಇಲಾಖೆಯಲ್ಲಿ ಶ್ರವಣದೋಷವುಳ್ಳ ಮಕ್ಕಳಿಗಾಗಿ ಮೈಸೂರು, ಗುಲ್ಬರ್ಗಾ, ಬಳ್ಳಾರಿ, ಬೆಳಗಾಂ ಜಿಲ್ಲೆಗಳಲ್ಲಿ 4 ಕಿವುಡು ಮಕ್ಕಳ ಶಾಲೆಗಳು ಇವೆ. ಈ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ವಸತಿ, ಊಟ, ಉಡಿಗೆ ತೊಡಿಗೆ ಮತ್ತು ರಕ್ಷಣೆಯನ್ನು ನೀಡಲಾಗುತ್ತಿದೆ. ಬೆಳಗಾಂನಲ್ಲಿರುವ ಕಿವುಡು ಮಕ್ಕಳ ಶಾಲೆಯು ಹೆಣ್ಣು ಮಕ್ಕಳಿಗೆ ಇರುವ ಪ್ರತ್ಯೇಕ ಶಾಲೆಯಾಗಿರುತ್ತದೆ.
ಇಲಾಖೆಯಲ್ಲಿ 4 ಅಂಧ ಮಕ್ಕಳ ಶಾಲೆಗಳು ಗುಲ್ಬರ್ಗಾ, ಮೈಸೂರು, ದಾವಣೆಗೆರೆ ಹಾಗೂ ಹುಬ್ಬಳ್ಳಿಗಳಲ್ಲಿ ನಡೆಯುತ್ತಿವೆ. ಈ ಶಾಲೆಗಳಲ್ಲಿ ದೃಷ್ಟಿದೋಷವುಳ್ಳ ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣವನ್ನು ನೀಡಲಾಗುತ್ತಿದೆ. ದಾವಣಗೆರೆಯಲ್ಲಿರುವ ಶಾಲೆಯು ಹೆಣ್ಣು ಮಕ್ಕಳಿಗೆಇರುವ ಪ್ರತ್ಯೇಕ ಶಾಲೆಯಾಗಿರುತ್ತದೆ.
ಈ ಕಾರ್ಯಕ್ರಮದಡಿ ಒಂದೇ ತರಗತಿಯಿಂದ ವಿಶ್ವವಿದ್ಯಾನಿಲಯದ ಮಟ್ಟದವರೆಗೆ ಓದುತ್ತಿರುವ ಅರ್ಹ ವಿಕಲಚೇತನರ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 2001-02ನೇ ಸಾಲಿನಿಂದ ಈ ಯೋಜನೆಗೆ ಆದಾಯ ಮಿತಿಯಿಂದ ವಿನಾಯಿತಿಗೊಳಿಸಲಾಗದೆ. 2012-13ನೇ ಸಾಲಿನಲ್ಲಿ 247.22ಲಕ್ಷ ರೂ.ಗಳು ವೆಚ್ಚವಾಗಿದ್ದು 24793 ಫಲಾನುಭವಿಗಳು ಪ್ರಯೋಜನ ಪಡೆದಿರುತ್ತಾರೆ.
ವಿಕಲಚೇತನ ವಿದ್ಯಾರ್ಥಿಗಳಿಗೆ ಶಿಷ್ಯವೇತನ |
ಮಾಹೆಯಾನ |
ವಿದ್ಯಾರ್ಥಿ ನಿಲಯದ ಅಭ್ಯರ್ಥಿಗಳಿಗೆ |
ಅಂಧ ವಿದ್ಯಾರ್ಥಿ ಓದುಗರ ಭತ್ಯೆ |
ದೈಹಿಕ ವಿಕಲಚೇತನರು ಸಂಚಾರಿ ಭತ್ಯೆ |
1 ರಿಂದ 5ನೇ ತರಗತಿ |
50 |
- |
25 |
25 |
6 ರಿಂದ 10ನೇ ತರಗತಿ |
100 |
- |
25 |
25 |
ಪಿ.ಯು.ಸಿ |
150 |
- |
75 |
50 |
ಪದವಿ ಶಿಕ್ಷಣ, ಟಿ.ಸಿ.ಹೆಚ್ |
200 |
180 |
75 |
- |
ಬಿ.ಎ : ಎಂ.ಬಿ.ಬಿ.ಎಸ್ : ಎಲ್.ಎಲ್.ಬಿ : ಡಿಪ್ಲೋಮಾ ಇನ್ ಪ್ರೋಫೆಷನ್ ಮತ್ತು ಇಂಜಿನಿಯರಿಂಗ್ ಇನ್ ಪ್ಲಾಂಟ್ ಇಂಜಿನಿಯರಿಂಗ್ |
250 |
240 |
100 |
50 |
ಎಂ.ಎ : ಎಂ.ಎಸ್ಸಿ : ಎಂ.ಕಾಮ್ : ಎಲ್.ಎಲ್.ಎಂ ಹಾಗೂ ತತ್ಸಮಾನ |
300 |
240 |
100 |
- |
1982ನೇ ಇಸವಿಯಿಂದ ಸರ್ಕಾರಿ ಬ್ರೈಲ್ ಮುದ್ರಣಾಲಯವು ಕಾರ್ಯನಿರ್ವಹಿಸುತ್ತಿದ್ದು ಇದರ ಮೂಲ ಉದ್ದೇಶವು ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ / ಅರೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಅಂಧ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ಪಠ್ಯ ಪುಸ್ತಕಗಳನ್ನು ಬ್ರೈಲ್ ಲಿಪಿಯಲ್ಲಿ ಮುದ್ರಿಸಿ ಅಂಧ ಮಕ್ಕಳಿಗೆ ಉಚಿತವಾಗಿ, ಸರಬರಾಜು ಮಾಡಲಾಗುತ್ತಿದೆ. 2002ನೇ ಸಾಲಿನಲ್ಲಿ ಈ ಮುದ್ರಣಾಲಯವು ಗಣಕೀಕೃತವಾಗಿದ್ದು, ಇದರಿಂದಾಗಿ ಪ್ರತಿಯೊಂದು ಅಂಧ ವಿದ್ಯಾರ್ಥಿಗಳಿಗೂ ಪಠ್ಯಪುಸ್ತಕಗಳನ್ನು ಒದಗಿಸುವಂತಾಗಿದೆ. ಈ ಪಠ್ಯಪುಸ್ತಕಗಳ ಜೊತೆಯಲ್ಲಿ ಪ್ರತಿವರ್ಷವೂ ಬ್ರೈಲ್ ಕ್ಯಾಲೆಂಡರ್ ಮತ್ತು ಕಲವು ಪಠ್ಯೇತರ ಪುಸ್ತಕಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ.
ಪಬ್ಲಿಕ್ ಪರೀಕ್ಷೆಗಳಲ್ಲಿ ಶೇಕಡ 60ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿಕಲಚೇತನ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಯೋಜನೆ ಇದಾಗಿದೆ. ಈ ಯೋಜನೆಯನ್ನು 20೦1-೦2ನೇ ಸಾಲಿನಿಂದ ಬಿ.ಎಡ್, ಎಮ್.ಎಡ್, ಮತ್ತು ಟಿ.ಸಿ.ಹೆಚ್ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.2012-13ನೇ ಸಾಲಿಗೆ 247.22ಲಕ್ಷರೂ.ಗಳ ಆಯವ್ಯಯ ನಿಗಧಿ ಪಡಿಸಲಾಗಿದೆ.
ದೃಷ್ಟಿದೋಷವುಳ್ಳ ಮಕ್ಕಳ ಹಾಗೂ ಶ್ರವಣದೋಷವುಳ್ಳ ವಿಕಲಚೇತನ ವಿದ್ಯಾರ್ಥಿಗಳಿಗೆ ಬೋದಿಸುವ ಶಿಕ್ಷಕರಿಗೆ 2ವರ್ಷಗಳ ವಿಶೇಷ ಶಿಕ್ಷಣ ನೀಡಲು ವಿಶೇಷ ಶಿಕ್ಷಕರ ತರಬೇತಿ ಕೇಂದ್ರವನ್ನು 2000-2001ನೇ ಸಾಲಿನಲ್ಲಿ ಮೈಸೂರಿನಲ್ಲಿ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಸುಮಾರು ೨೫ ವಿದ್ಯಾರ್ಥಿಗಳಿಗೆ ಪ್ರತಿ ಬ್ಯಾಚ್ ನಲ್ಲಿ ವೀಶೇಷ ಶಿಕ್ಷಕರ ತರಬೇತಿ ನೀಡಲು ಅವಕಾಶವಿರುತ್ತದೆ
ಅನುದಾನಿತ ವಿಶೇಷ ಶಾಲೆಗಳಿಗೆ ಧನಸಹಾಯ:ಸ್ಚಯಂ ಸೇವಾ ಸಂಸ್ಥೆಗಳು, ವಿವಿಧ ವಿಕಲಚೇತನರಿಗಾಗಿ ವಿಶೇಷ ಶಾಲೆಗಳನ್ನು ನಡೆಸುತ್ತಿದ್ದು ರಾಜ್ಯ ಸರ್ಕಾರವು ಅಂತಹ ಸಂಸ್ಥೆಗಳಿಗೆ ಧನಸಹಾಯವನ್ನು ನೀಡುತ್ತಿದೆ. ಈ ಯೋಜನೆಯಡಿ 35 ವಿಶೇಷ ಶಾಲೆಗಳಿಗೆ/ ತರಬೇತಿ ಕೇಂದ್ರಗಳಿಗೆ ಅನುದಾನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ. ಅನುದಾನ ಪಡೆಯುತ್ತಿರುವಶಾಲೆಗಳ ವಿವರವನ್ನು ಅನುಬಂಧ1 ರಲ್ಲಿ ನೀಡಲಾಗಿದೆ
ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯು ವಿಕಲಚೇತನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತದ್ದು ಈ ಕಾರ್ಯಕ್ರಮಗಳು ಅಂಗವಿಕಲರನ್ನು ಸಾಮಾನ್ಯ ಜನರಂತೆ ಬದುಕಲು ನೆರವು ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಮುಖ ದ್ಯೇಯೋದ್ದೇಶಗಳನ್ನು ಗುರಿಗಳನ್ನು ಇಟ್ಟುಕೊಂಡಿದೆ, ಇಲಾಖೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮವು ಪ್ರಮುಖವಾಗಿದೆ
ಕೊನೆಯ ಮಾರ್ಪಾಟು : 1/28/2020
ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪ...
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ಅಂಗವಿಕಲರ ರಾಜ್ಯ ನೀತಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ ಕುರಿತಾ...