ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರಾಷ್ಟ್ರೀಯ ಮಹಿಳಾ ಆಯೋಗ

ರಾಷ್ಟ್ರೀಯ ಮಹಿಳಾ ಆಯೋಗವನ್ನು ಕಾಯ್ದೆ ಬದ್ಧ ಸಂಸ್ಥೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ 1990 ಅಡಿಯಲ್ಲಿ ಜನವರಿ 1992 ರಲ್ಲಿ ಸ್ಥಾಪಿಸಲಾಯಿತು.

ರಾಷ್ಟ್ರೀಯ ಮಹಿಳಾ ಆಯೋಗವನ್ನು ಕಾಯ್ದೆ ಬದ್ಧ ಸಂಸ್ಥೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ 1990 ( ಭಾರತ ಸರ್ಕಾರದ ಕಾಯ್ದೆ ಸಂಖ್ಯೆ 1990 ರ 20 ) ರ ಅಡಿಯಲ್ಲಿ ಜನವರಿ 1992 ರಲ್ಲಿ ಸ್ಥಾಪಿಸಲಾಯಿತು. ಇದನ್ನು ಸ್ಥಾಪಿಸಿದ ಉದ್ದೇಶವೆನೆಂದರೆ:

 • ಮಹಿಳೆಯರ ಸಂವಿಧಾನಿಕ ಮತ್ತು ನ್ಯಾಯಬದ್ಧ ರಕ್ಷಣೆಗಳ ಪರಿಶೀಲನೆ
 • ಪರಿಹಾರಿಕ ನ್ಯಾಯ ಕ್ರಮಗಳನ್ನು ಶಿಫಾರಸ್ಸು ಮಾಡುವುದು;
 • ಕುಂದುಕೊರತೆಗಳ ಪರಿಹಾರವನ್ನು ಸುಗಮಗೊಳಿಸುವುದು ಮತ್ತು
 • ಮಹಿಳೆಯರ ಮೇಲೆ ಪರಿಣಾಮ ಬೀರುವ ಎಲ್ಲಾ ನೀತಿ ಸಂಬಂಧಿತ ವಿಷಯಗಳನ್ನು ಕುರಿತು ಸರ್ಕಾರಕ್ಕೆ ಸಲಹೆ ನೀಡುವುದು.
 • ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರ ಸ್ಥಿತಿಯನ್ನು ಉತ್ತಮಪಡಿಸಲು ಆಯೋಗವು ಹಲವು ಕ್ರಮಗಳನ್ನು ತೆಗೆದುಕೊಂಡಿದೆಯಲ್ಲದೆ ವರದಿಯಲ್ಲಿರುವ ಈ ವರ್ಷದಲ್ಲಿ ಅವರ ಆರ್ಥಿಕ ಸಶಕ್ತತೆಗಾಗಿ ಹಲವು ಕೆಲಸಗಳನ್ನು ಮಾಡಿದೆ. ಆಯೋಗವು ಲಕ್ಷದ್ವೀಪವನ್ನು ಹೊರತುಪಡಿಸಿ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ತನ್ನ ಬೇಟಿಗಳನ್ನು ಮುಗಿಸಿದೆ ಮತ್ತು ಮಹಿಳೆಯರ ಸ್ಥಿತಿಗತಿ ಹಾಗೂ ಅವರ ಸಶಕ್ತತೆಯನ್ನು ಅಳೆಯಲು ಲಿಂಗತ್ವದ ಪ್ರೋಪೈಲ್ಸ್ ನ್ನು ತಯಾರಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ದೂರುಗಳನ್ನು ಸ್ವೀಕರಿಸಿದಲ್ಲದೆ ಹಲವು ಪ್ರಕರಣದಲ್ಲಿ ವೇಗವಾಗಿ ನ್ಯಾಯ ನೀಡಲು ಕ್ರಮಗಳನ್ನು ಜರುಗಿಸಿದೆ. ಬಾಲ್ಯ ವಿವಾಹಗಳಂತಹ ವಿಷಯಗಳನ್ನು ತೆಗೆದುಕೊಂಡು ಜನಜಾಗೃತಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ. ಪರಿವಾರಿಕ್ ಮಹಿಳಾ ಲೋಕ್ ಅದಾಲತ್ ನ್ನು ನಡೆಸಿದೆ ಮತ್ತು  ವದಕ್ಷಿಣೆ ತಡೆಗಟ್ಟುವಿಕೆ ಕಾಯ್ದೆ, 1961, ಪಿ.ಎನ್.ಡಿ.ಟಿ ಕಾಯ್ದೆ, 1994 , ಭಾರತೀಯ ನೀತಿ ಸಂಹಿತೆ, 1860 , ಮತ್ತು ರಾಷ್ಟ್ರೀಯ ಮಹಿಳಾ ಕಾಯ್ದೆ, 1990, ಯನ್ನು ಪರೀಶೀಲಿಸಿ, ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಠಿಣ ಹಾಗೂ ಪರಿಣಾಮಾಕಾರಿಯಾಗಿಸಿದೆ. ಮಹಿಳೆಯರ ಆರ್ಥಿಕ ಸಶಕ್ತತೆ ಕುರಿತು ಕಾರ್ಯಗಾರ/ಸಮಾಲೋಚನೆ  ಗಳನ್ನು ನಡೆಸಿ, ತಜ್ಞಸಮಿತಿಗಳನ್ನು ರಚಿಸಲಾಗಿದೆ. ಲಿಂಗಾಧಾರಿತ ಅರಿವು ಮೂಡಿಸಲು ಕಾರ್ಯಾಗಾರ/ಸೆಮಿನಾರ್ ಗಳನ್ನು ನಡೆಸಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ಮಹಿಳೆಯರ ವಿರುದ್ದ ದೌರ್ಜನ್ಯ, ಇತ್ಯಾದಿ, ಕುರಿತು ಜನಜಾಗೃತಿ ಅಂದೋಲನವನ್ನು ನಡೆಸಿದೆ. ಈ ಕೆಲಸ ಕಾರ್ಯಗಾರಗಳಿಂದ ಇಂತಹ ಸಾಮಾಜಿಕ ಪಿಡುಗುಗಳ ವಿರುದ್ದ ಸಮಾಜದಲ್ಲಿ ಅರಿವು ಮೂಡಿಸಲಾಯಿತು.ಕಿರು ಪರಿಚಯ/ ಹಿನ್ನಲೆ

  ರಾಷ್ಟ್ರೀಯ ಮಹಿಳಾ ಆಯೋಗವನ್ನು ಕಾಯ್ದೆಬದ್ಧ ಸಂಸ್ಥೆಯಾಗಿ ರಾಷ್ಟ್ರೀಯ ಮಹಿಳಾ ಕಾಯ್ದೆ, 1990 ( ಭಾರತ ಸರ್ಕಾರದ ಕಾಯ್ದೆ ಸಂಖ್ಯೆ 1990 ರ 20 ) ಅಡಿಯಲ್ಲಿ ಜನವರಿ 1992 ರಲ್ಲಿ ಸ್ಥಾಪಿಸಲಾಯಿತು.ಇದನ್ನು ಸ್ಥಾಪಿಸಿದ ಉದ್ದೇಶವೇನೆಂದರೆ ಮಹಿಳೆಯರ ಸಂವಿಧಾನಿಕ ಮತ್ತು ನ್ಯಾಯಬದ್ದ ರಕ್ಷಣೆಗಳ ಪರಿಶೀಲನೆ; ಪರಿಹಾರಿಕ ನ್ಯಾಯ ಕ್ರಮಗಳನ್ನು ಶಿಫಾರಸ್ಸು ಮಾಡುವುದು ಕೊಂದುಕೊರತೆಗಳ ಪರಿಹಾರವನ್ನು ಸುಗಮಗೊಳಿಸುವುದು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುವ ಎಲ್ಲಾ ನೀತಿ ಸಂಬಂಧಿತ ವಿಷಯಗಳನ್ನು ಕುರಿತು ಸರ್ಕಾರಕ್ಕೆ ಸಲಹೆ ನೀಡುವುದು.

  ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತು ಸಮಿತಿಯು ( ಸಿ.ಎಸ್.ಡಬ್ಲ್ಯೂ.ಐ ) ಕುಂದುಕೊರತೆಗಳ ನಿವಾರಣೆಗಾಗಿ ಮತ್ತು ಮಹಿಳೆಯರ ಸಮಾಜೋ-ಆರ್ಥಿಕ ಅಭಿವೃದ್ದಿಯನ್ನು ತೀವ್ರಗೊಳಿಸಲು ಸುಮಾರು ಎರಡು ದಶಕಗಳ ಹಿಂದೆಯೇ ರಾಷ್ಟ್ರೀಯ ಮಹಿಳಾ  ಆಯೋಗವನ್ನು ರಚಿಸಲು ಶಿಫಾರಸ್ಸು ಮಾಡಿತ್ತು.

  ನಂತರದ ಸಮಿತಿಗಳು/ಆಯೋಗಗಳು/ಮಹಿಳೆಯರಿಗಾಗಿ ರಾಷ್ಟ್ರೀಯ ದೃಷ್ಠಿಕೋನ   ಯೋಜನೆ (1988 - 2000 ) ಒಳಗೊಂಡಂತೆ ಯೋಜನೆಗಳು ಮಹಿಳೆಯರಿಗಾಗಿ ಒಂದು ಉನ್ನತ ಅಂಗವನ್ನು ರಚಿಸಲು ಶಿಫಾರಸ್ಸು ಮಾಡಿತು. 1990 ರ ನಡುವೆ ಕೇಂದ್ರ ಸರ್ಕಾರವು ಸರ್ಕಾರೇತರ ಸಂಸ್ಥೆಗಳೊಂದಿಗೆ, ಸಾಮಾಜಿಕ ಕಾರ್ಯಕರ್ತರೊಂದಿಗೆ ನಡೆಸಿ, ಆಯೋಗದ ರಚನೆಯನ್ನು ಪ್ರಸ್ತಾಪಿಸಿತು.ಮೇ 1990 ರಲ್ಲಿ ಮಸೂದೆಯನ್ನು ಲೋಕ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

  ಜುಲೈ 1990ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವು ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಿದ ಮಸೂದೆ ಕುರಿತು ಸಲಹೆಗಳನ್ನು ಶೇಖರಿಸಿತು. ಆಗಸ್ಟ್ 1990 ರಲ್ಲಿ ಸರ್ಕಾರವು ಹಲವು ತಿದ್ದುಪಡಿಗಳನ್ನು ಮಾಡಿ, ಆಯೋಗಕ್ಕೆ ಸಿವಿಲ್ ನ್ಯಾಯಾಲಯದ ಅಧಿಕಾರ ನೀಡಲು ಹೊಸ ಅಂಶಗಳನ್ನು ಪರಿಚಯಿಸಿತು.

  ಆಗಸ್ಟ್ 30 1990ರಲ್ಲಿ ಮೊದಲ ಆಯೋಗ ರಚಿಸಲಾಗಿದ್ದು, ಶ್ರೀಮತಿ. ಜಯಂತಿ ಪಟ್ನಾಯಕ್ ಇದರ ಮೂಖ್ಯಸ್ಥರಾದರು.ಜುಲೈ 1995

  ರಲ್ಲಿ ಎರಡನೆ ಅಯೂಜವನ್ನು ರಚಿಸಲಾಗಿದ್ದು, ಡಾ ಮೋಹಿನಿ ಗಿರಿ ಅಧ್ಯಕ್ಷರಾದರು. ಜನವರಿ 1999 ರಲ್ಲಿ ಮೂರನೆ ಆಯೋಗದ ರಚನೆಯಾಗಿ ಶ್ರೀಮತಿ. ವಿಭಾ ಪಾರ್ಥಸಾರಥಿ ಮುಖ್ಯಸ್ಥರಾದರು. ಜನವರಿ 2002 ರಲ್ಲಿ ನಾಲ್ಕನೇಯಾ ಆಯೋಗದ ರಚನೆಯಾಗಿ ಡಾ ಪೂರ್ಣಿಮಾ ಅಡ್ವಾಣಿಯವರನ್ನು ಅಧ್ಯಕ್ಷರಾಗಿ ಸರ್ಕಾರ ನೀಮಿಸಿತು. ಐದನೆಯ ಆಯೋಗವನ್ನು ಫೆಬ್ರವರಿ 2005 ರಲ್ಲಿ ರಚಿಸಲಾಗಿದ್ದು, ಡಾ ಗಿರಿಜಾ ವ್ಯಾಸ್ ರವರನ್ನು ಮುಖ್ಯಸ್ಥರಾಗಿ ಸರ್ಕಾರ ನೇಮಿಸಿದೆ.ಆಯೋಗದ ಸಂರಚನೆ

  ರಾಷ್ಟ್ರೀಯ ಮಹಿಳಾ ಆಯೋಗದ ಕಾಯ್ದೆ, 1990 ( <ಭಾರತ ಸರ್ಕಾರದ 1990 ರ ಕಾಯ್ದೆ ಸಂಖ್ಯೆ 20 ) ರ ಪರಿಚ್ಛೇದ .

  1 . ಕೇಂದ್ರಸರ್ಕಾರವು ರಾಷ್ಟ್ರೀಯ ಮಹಿಳಾ ಆಯೋಗವೆಂದು ಕರೆಯಲ್ಪಡುವ ಒಂದು ಅಂಗವನ್ನು ಸ್ಥಾಪಿಸಿ ಈ ಕಾಯ್ದೆಯಡಿಯಲ್ಲಿ ಸೂಚಿಸಿರುವ ಅಧಿಕಾರಿಗಳನ್ನು ನೀಡಿ ಕಾಯ್ದೆಗನುಗುಣವಾಗಿ ಕಾರ್ಯನಿರ್ವಹಿಸಲು ಸೂಚಿಸುತ್ತದೆ.

  2 . ಈ ಅಕ಼್ಯೋಗವು ಈ ಕೆಳಕಂಡಂತೆ ಒಳಗೊಂಡಿರುತ್ತದೆ.

  ಮಹಿಳೆಯರ ವಿಷಯದಲ್ಲಿ ಬದ್ಧರಾಗಿ ಕಾರ್ಯನಿರ್ವಹಿಸುವ ಅಧ್ಯಕ್ಷ, ಇವರನ್ನು ಕೇಂದ್ರ ಸರ್ಕಾರವು ನೇಮಿಸುತ್ತದೆ.

  ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುವ ಐದು ಸದಸ್ಯರು. ಈ ಸದಸ್ಯರುಗಳು ಸೂಕ್ತ ವ್ಯಕ್ಥಿಗಳಾಗಿದ್ದು, ಬದ್ಧತೆಯುಳ್ಳವರಾಗಿ ಕಾನೂನು ಕ್ಷೇತ್ರಗಳಲ್ಲಿ ಅನುಭವ ಪರಿಣಿಸಲಾಗುವುದು - ಕಾರ್ಮಿಕ ಸಂಘಟನೆ, ಮಹಿಳೆಯರ ಅಭಿವೃದ್ದಿ ಪ್ರೋತ್ಸಾಹಿಸುವ ಕಾರ್ಖಾನೆಯಾ ನಿರ್ವಹಣೆ, ಮಹಿಳೆಯರ ಸ್ವಯಂ ಸೇವ ಸಂಸ್ಥೆಗಳು ( ಮಹಿಳ ವಾದಿಗಳು ಸೇರಿದಂತೆ ), ಆಡಳಿತ, ಆರ್ಥಿಕ ಅಭಿವೃದ್ದಿ, ಅರೋಗ್ಯ ಶಿಕ್ಷಣ ಅಥವಾ ಸಮಾಜ ಕಲ್ಯಾಣ. ಕನಿಷ್ಠ ಒಬ್ಬ ಸದಸ್ಯ ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಸೇರಿದವರಾಗಿರಬೇಕು. ಕೇಂದ್ರ ಸರ್ಕಾರದಿಂದ ನೇಮಿಸಲಾಗುವ ಒಬ್ಬ ಸದಸ್ಯಕಾರ್ಯದರ್ಶಿ . ಇವರು

  1 . ನಿರ್ವಹಣೆ, ಸ್ವರೂಪ ಅಥವಾ ಸಾಮಾಜಿಕ ಚಳುವಳಿಯ ತಜ್ಞರಾಗಿರಬೇಕು ಅಥವಾ

  2 . ಕೇಂದ್ರ ಸಾರ್ವಜನಿಕ ಸೇವೆಯ ಅಥವಾ ಭಾರತದ ಸರ್ಕಾರ ಸೇವೆಯ ಸದಸ್ಯ ಅಥವಾ ಕೇಂದ್ರದಲ್ಲಿ ಸಾರ್ವಜನಿಕ ಹುದ್ದೆಯಲ್ಲಿರುವ ಅನುಭವವುಳ್ಳ ಅಧಿಕಾರಿ.

  ಆಯೋಗದ ಜವಾಬ್ದಾರಿಗಳು

  ಆಯೋಗದ ಸಂರಚನೆ

  1 . ಆಯೋಗವು ಈ ಕೆಳಕಂಡಂತೆ ಎಲ್ಲಾ ಅಥವಾ ಯಾವುದಾದರು ಕಾರ್ಯಚಟುವಟಿಕೆಗಳನ್ನು ನಿರ್ವಹಿಸಬಹುದಾಗಿದೆ :-

  ಸಂವಿಧಾನದಲ್ಲಿ ಮತ್ತು ಇತರೆ ಕಾನೂನುಗಳಲ್ಲಿ ಮಹಿಳೆಯರಿಗೆ ನೀಡಲಾಗಿರುವ ಸಂರಕ್ಷಣೆಗಳನ್ನೂ ಕುರಿತಂತೆ ತನಿಖೆ ಹಾಗೂ ಪರೀಕ್ಷೆ ನಡೆಸುವುದು; ಈ ಸಂರಕ್ಷಣೆ ಕುರಿತು ಆಯೋಗವು ನಿರ್ವಹಿಸಿದ ಕಾರ್ಯಚಟುವಟಿಕೆಗಳ ಬಗ್ಗೆ ವಾರ್ಷಿಕ ಮತ್ತು ಆಯೋಗಕ್ಕೆ ಸೂಕ್ತವೆನಿಸಿದ ಕಾಲಾವಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವಿಕೆ;

  ಕೇಂದ್ರದಿಂದ ಅಥವಾ ಯಾವುದೇ ರಾಜ್ಯದಿಂದ ಮಹಿಳೆಯರ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಸಂರಕ್ಷಣೆಗಳ ಪರಿಣಾಮಾಕಾರಿ ಅನುಷ್ಠಾನವನ್ನು ಶಿಫಾರಸ್ಸು ಮಾಡುವ ವರದಿಗಳನ್ನು ಮಾಡುವುದು;

  ಮಹಿಳೆಯರ ಮೇಲೆ ಪರಿಣಾಮ ಬೀರುವ ಪ್ರಸ್ತುತ ಸಾಂವಿಧಾನಿಕ ಅಂಶಗಳನ್ನು ಮತ್ತು ಇಲಾಖೆ ಕಾನೂನುಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ, ಕಾನೂನಿನಲ್ಲಿರುವ ಲೋಪದೋಶಗಳನ್ನು ನೀಗಿಸಲು ತಿದ್ದ್ದುಪಡಿಗಳನ್ನು ಶಿಫಾರಸ್ಸು ಮಾಡುವುದು;

  ಮಹಿಳೆಯರಿಗೆ ಸಂಬಂಧಿಸಿದ ಸಾಂವಿಧಾನಿಕ ಹಾಗೂ ಇತರೆ ಕಾನೂನುಗಳಲ್ಲಿನ ಅವಕಾಶಗಳ ಉಲ್ಲಂಘನೆಯ ಪ್ರಕರಣಗಳನ್ನು ಸಮರ್ಪಕ ಅಧಿಕಾರಿಗಳೊಂದಿಗೆ ತೆಗೆದುಕೊಳ್ಳುವುದು;

  ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು:-

  1 . ಮಹಿಳಾ ಹಕ್ಕುಗಳನ್ನು ಕಿತ್ತುಕೊಳ್ಳುವುದು.

  2 . ಮಹಿಳೆಯರ ಸಂರಕ್ಷಣೆಗಾಗಿ ರಚಿಸಲಾಗಿರುವ <ಕಾನೂನುಗಳನ್ನು ಅನುಷ್ಠಾನಗೊಳಿಸದಿದ್ದಲ್ಲಿ ಹಾಗೂ ಸಮಾನತೆ ಮತ್ತು ಅಭಿವೃದ್ದಿ ಉದ್ದೇಶಗಳನ್ನು ಈಡೇರಿಸಲು;

  3 . ಮಹಿಳೆಯರಿಗೆ ಸಾಂತ್ವಾನ ನೀಡಿ, ಅವರ ಕಷ್ಟಗಳನ್ನು ನಿವಾರಿಸಿ, ಅವರ  ಕಲ್ಯಾಣ ಖಾತ್ರಿ ಪಡಿಸುವ ನೀತಿ ನಿರ್ಧಾರ, ಮಾರ್ಗದರ್ಶನ ಅಥವಾ ಸೂಚನೆಗಳನ್ನು ಅನುಸರಿಸದಿದ್ದಲ್ಲಿ, ಇಂತಹ ವಿಷಯಗಳಿಂದ ಉದ್ಭವಿಸುವ ಸಮಸ್ಯೆಗಳನ್ನು ಸಮರ್ಪಕ ಅಧಿಕಾರಿಗಳೊಂದಿಗೆ ತೆಗೆದುಕೊಳ್ಳುವುದು;

  ಮಹಿಳೆಯರ ವಿರುದ್ದ ತಾರತಮ್ಯ ಮತ್ತು ಕ್ರೂರತ್ವದಿಂದಾಗುವ ಸನ್ನಿವೇಶ ಅಥವಾ ಸ್ಪಷ್ಟ ಸಮಸ್ಯೆಗಳನ್ನು ಕುರಿತು ವಿಷೇಶ ಸಂಶೋಧನೆ ಅಥವಾ ತನಿಖೆಗಳನ್ನು ನಡೆಸಿ, ನಿರ್ಬಂದಗಳನ್ನು ಗುರುತಿಸಿ, ಅವುಗಳನ್ನು ನಿರ್ಮೂಲನೆ ಮಾಡಲು ಕಾರ್ಯತಂತ್ರಗಳನ್ನು ಶಿಫಾರಸ್ಸು ಮಾಡುವುದು;

  ಅಭಿವೃದ್ದಿ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾನಿಧ್ಯವನ್ನು ಖಾತ್ರಿ ಪಡಿಸಲು ಶೈಕ್ಷಣಿಕ  ಹಾಗೂ ಇತರೆ ಸಂಶೋಧನೆಗಳನ್ನು ನಡೆಸಿ, ಮಹಿಳೆಯರ ಅಭಿವೃದ್ದಿಯಲ್ಲಿ ಅಡ್ಡಿಯಾಗಿರುವ ಅಂಶಗಳಾದಂತಹ ಆಶ್ರಯ ಮತ್ತು ಇತರ ಮೂಲ ಸೇವೆಗಳ ಲಭ್ಯತೆಯಾ ಕೊರತೆ, ಗುಲಾಮಗಿರಿ ಹಾಗೂ ವೃತ್ತಿಪರ ಅರೋಗ್ಯ ತೊಂದರೆಗಳನ್ನು ನೀಗಿಸಲು ಅಸಮರ್ಪಕ ಬೆಂಬಲ ಸೇವೆಗಳು ಮತ್ತು ತಂತ್ರಜ್ಞಾನಗಳನ್ನು ಗುರುತಿಸುವುದು ಮತ್ತು ಅವರ ಉತ್ಪಾದಕತೆಯನ್ನು ವೃದ್ದಿಸಲು ಕ್ರಮಗಳನ್ನು ಸೂಚಿಸುವುದು .

  ಮಹಿಳೆಯರ ಸಮಾಜೋ-ಆರ್ಥಿಕ ಅಭಿವೃದ್ದಿಗಾಗಿ ಯೋಜನಾ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡುವುದು;

  ಯಾವುದೇ ರಾಜ್ಯ ಹಾಗೂ ಕೇಂದ್ರದಡಿಯಲ್ಲಿ ನಡೆಯುತ್ತಿರುವ ಮಹಿಳೆಯರ ಅಭಿವೃದ್ದಿ ಪ್ರಕ್ರಿಯೆಯನ್ನು ಮೌಲ್ಯಮಾಪನ ಮಾಡುವುದು.

  ಮಹಿಳೆಯರಿಗೆ ಬಂಧಿಯಾಗಿಸುವ ಜಾಗಗಳಾದ ಜೈಲು,ರಿಮ್ಯಾಂಡ್ ಹೋಮ್, ಮಹಿಳಾ ಸಂಸ್ಥೆಗಳು ಅಥವಾ ಇತರೆ ಜಾಗಗಳ ಪರಿವೀಕ್ಷಣೆ ನಡೆಸಿ ಅವಶ್ಯಕತೆಯಿದ್ದಲ್ಲಿ ಸಮರ್ಪಕ ಅಧಿಕಾರಿಯೊಂದಿಗೆ ವಿಷಯವನ್ನು ತೆಗೆದುಕೊಳ್ಳುವುದು.

  ವಿಶಾಲ ಮಹಿಳೆಯರ ಸಮೂಹಕ್ಕೆ ಪರಿಣಾಮ ಬೀರುವ ವಿಷಯಗಳ ನ್ಯಾಯಾಲಯದ ವ್ಯವಹಾರಗಳ ವೆಚ್ಚವನ್ನು ಭರಿಸುವುದು;

  ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ವಿಷಯ, ಮುಖ್ಯವಾಗಿ ಮಹಿಳೆರು ಪಡುತ್ತಿರುವ ಕಷ್ಟಪಾಡುಗಳ ಕುರಿತು ಸರ್ಕಾರಕ್ಕೆ ಕಾಲಕಾಲಕ್ಕೆ ವರದಿಯನ್ನು ಸಲ್ಲಿಸುವುದು;

  ಕೇಂದ್ರ ಸರ್ಕಾರದಿಂದ ವಹಿಸಲಾಗಿರುವ ಇತರೆ ಯಾವುದೇ ವಿಷಯವನ್ನು ತೆಗೆದುಕೊಳ್ಳುವುದು.

  2. ಕೇಂದ್ರ ಸರ್ಕಾರವು ಉಪ-ವಿಭಾಗ ( 1) ರ ವ್ಯಾಕಾಂಗ(b) ರಲ್ಲಿ ನಮೂದಿಸಲಾಗಿರುವ ಎಲ್ಲಾ ವರದಿಗಳನ್ನು ಸಂಸತ್ತಿನ ಮೇಲ್ಮನೆಯಲ್ಲಿ ಪ್ರಸ್ತುತಪಡಿಸಿ ರಾಜ್ಯಕ್ಕೆ ನೀಡಿ, ಅದನ್ನು ರಾಜ್ಯದ ವಿಧಾನ ಸಭೆಯಲ್ಲಿ ಮಂಡಿಸಲು ತಿಳಿಸುವುದು. ರಾಜ್ಯದ ಸಲಹೆಗಳನ್ನು ನಿರಾಕರಿಸಿದ ಕಾರಣಗಳನ್ನು ವಿವರಿಸಿ, ತೆಗೆದುಕೊಂಡು ಅಥವಾ ತೆಗೆದುಕೊಳ್ಳಲು ಬಯಸುವ ಕ್ರಮಗಳ ವಿವರಣೆ ನೀಡುವುದು.

  ವ್ಯಾಕಾಂಗ (a ) ಅಥವಾ ಉಪ ಪರಿಚ್ಛೇದ (1 ) ದ ವ್ಯಾಕಾಂಗ (f ) ದ ಉಪವ್ಯಾಕಾಂಗ (i) ರಲ್ಲಿ ತಿಳಿಸಲಾಗಿರುವ ಯಾವುದೇ ಪ್ರಕರಣದ ತನಿಖೆ ಮಾಡುವಾಗ ಆಯೋಗಕ್ಕೆ ಒಂದು ಸಿವಿಲ್ ನ್ಯಾಯಾಲಯದ ಅಧಿಕಾರಗಳಿರುತ್ತವೆ. ಮುಖ್ಯವಾಗಿ ಈ ಕೆಳೆಗೆತಿಳಿಸಲಾಗಿರುವ ವಿಚಾರಗಳ ತನಿಖೆಯಲ್ಲಿ;-

  ದೇಶದ ಯಾವುದೇ ಭಾಗದಿಂದ ಒಬ್ಬ ವ್ಯಕ್ತಿಯನ್ನು ಕರೆಸಿ ಆತನ/ಆಕೆಯ ಹಾಜರಿ ಕಡ್ಡಾಯಗೊಳಿಸಿ ಶಪಥ ಮಾಡಿಸಿ ತನಿಖೆಗೆ ಒಳಪಡಿಸುವುದು;

  ಯಾವುದೇ ದಾಖಲೆಯ ಶೋಧನೆ ಮತ್ತು ಪ್ರಸ್ತುತಪಡಿಸುವಿಕೆ;

  ಅಫಿಡವಿಟ್ ಗಳ ಮೇಲೆ ಸಾಕ್ಷ್ಯಗಳನ್ನು ಪಡೆಯುವುದು;

  ಯಾವುದೇ ಕಛೇರಿ ಅಥವಾ ನ್ಯಾಯಲಯದಿಂದ ಸಾರ್ವಜನಿಕ ದಾಖಲೆ ಅಥವಾ ಪ್ರತಿಯನ್ನು ಪಡೆಯಲು;

  ಸಾಕ್ಷಿಗಳನ್ನು ಮತ್ತು ದಾಖಲೆಗಳನ್ನು ಪರೀಕ್ಷಿಸಲು ಕಮೀಷನ್ ಗಳನ್ನು ಜಾರಿಗೊಳಿಸುವುದು; ಮತ್ತು

  ವಹಿಸಲಾಗುವ/ ಸೂಚಿಸಲಾಗುವ ಇತರೆ ಯಾವುದೇ ವಿಷಯಗಳು.

ಮೂಲ: ಪೋರ್ಟಲ್ ತಂಡ

3.06593406593
ರೇಣುಕಾ Apr 18, 2015 12:28 PM

ಮಹಿಳೆಯರಿಗಾಗಿ ಸಾಕಷ್ಟು ಕಾಯ್ದೆ ಕಾನೂನುಗಳಿದ್ದರು ಅವು ಕಾಗದದಲ್ಲಿ ಮಾತ್ರ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top