অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಹಕಾರ ಸಿಂಧು ಯೋಜನಾ ಕಾರ್ಯಕ್ರಮಗಳು

ಸಹಕಾರ ಸಿಂಧು ಯೋಜನಾ ಕಾರ್ಯಕ್ರಮಗಳು

ನಿರ್ದೇಶನ ಮತ್ತು ಆಡಳಿತ-125-ಆಧುನೀಕರಣ

 

  • ಆಯವ್ಯಯ ಅವಕಾಶ: ರೂ.15.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ: ಸಹಾಯಧನ
  • ಯೋಜನೆಯ ಉದ್ದೇಶ:
  • ಇಲಾಖೆಯ ಕಛೇರಿಗಳ ಆಧುನೀಕರಣ, ತಂತ್ರಾಂಶ ಅಭಿವೃದ್ಧಿ ಗಣಕೀಕರಣ, ಕಡತಗಳಅಂಕೀಕರಣಕ್ಕೆ ಸಂಬಂಧಿಸಿದಂತೆ ಸಹಾಯಧನ ನೀಡುವುದು. ಕಛೇರಿಗಳಿಗೆ ಪೋಟೋಕಾಫಿಯರ್, ಗಣಕಯಂತ್ರ, ಫ್ಯಾಕ್ಷ್ ಯಂತ್ರಗಳ ಖರೀದಿ ಮಾಡುವುದು.
  • ಅಂದಾಜು ಫಲಿತಾಂಶ :
  • ಸಂಪೂರ್ಣ ಗಣಕೀಕೃತ ಕಛೇರಿಗಳ ಮೂಲಕ ತ್ವರಿತ , ಪರಿಣಾಮಕಾರಿಯಾದ ಆಡಳಿತವನ್ನು ನೀಡಲು ಹಾಗೂ ಸಿಬ್ಬಂದಿಯು ಕಾರ್ಯ ನಿಪುಣತೆಯನ್ನು ಹೆಚ್ಚಿಸಲು ಅನುಕೂಲಗಾಗುತ್ತದೆ.

ಬೆಳೆ ಸಾಲಕ್ಕಾಗಿ ಬಡ್ಡಿ ಸಹಾಯಧನ

 

  • ಆಯವ್ಯಯ ಅವಕಾಶ:             ರೂ. 73741.00/- ಲಕ್ಷಗಳು
  • ಆರ್ಥಿಕ ಸಹಾಯದ ವಿಧ:     ಸಹಾಯಧನ
  • ಯೋಜನೆಯ ಉದ್ದೇಶ:
  • ಅಲ್ಪಾವಧಿ ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಶೇಕಡ ಶೂನ್ಯಕ್ಕೆ ಇಳಿಸುವುದು ಹಾಗೂ ಸರ್ಕಾರದ ಬದ್ಧತೆಯಂತೆ ಸಹಕಾರ ಸಂಘಗಳು ವಿತರಿಸಿರುವ ಸಾಲಗಳ ಮೇಲೆ ಬಡ್ಡಿ ಸಹಾಯಧನವನ್ನು ನೀಡುವುದು.
  • ಅಂದಾಜು ಫಲಿತಾಂಶ:
  • ಕೃಷಿ ಸಾಲದ ವ್ಯವಸ್ಥೆಯು ಬಲಗೊಳಿಸಿ , ರೈತರಿಗೆ ಕೃಷಿ ಸಾಲವು ಸುಲಭ ದರದಲ್ಲಿ ದೊರೆಯುವಂತೆ ಮಾಡುವುದು.

ಗಿರಿಜನ ಉಪಯೋಜನೆ

  • ಗಿರಿಜನ ಉಪಯೋಜನೆ- ಲ್ಯಾಂಪ್ಸ್ ಸಂಯುಕ್ತ ಸಂಘಗಳಿಗೆ ಮಾರುಕಟ್ಟೆ ಮೂಲ ಸೌಕರ್ಯಗಳ ಸ್ಥಾಪನೆ.
  • ಆಯವ್ಯಯ ಅವಕಾಶ:             ರೂ.50.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:     ಸಹಾಯಧನ
  • ಯೋಜನೆಯ ಉದ್ದೇಶ:
  • ಲ್ಯಾಂಪ್ಸ್ ಸಹಕಾರ ಮಹಾಮಂಡಳ ಹಾಗೂ ಲ್ಯಾಂಪ್ಸ್ ಸಂಘಗಳಿಗೆ ಮೂಲಭೂತ ಸೌಕರ್ಯಗಳಾದ ಕಂಪ್ಯೂಟರ್ ಗಳು, ಫ್ಯಾಕ್ಸ್, ಟೆಲಿಪೋನ್ ಗಳನ್ನು ಒದಗಿಸುವುದು.
  • ಅಂದಾಜು ಫಲಿತಾಂಶ:
  • ಮೂಲಭೂತ ಸೌಕರ್ಯ ಒದಗಿಸುವುದರಿಂಧ ಲ್ಯಾಂಪ್ಸ್ ಸಹಕಾರ ಸಂಘಗಳ ಸದಸ್ಯರು ಸಂಗ್ರಹಿಸಿದ ಕಿರು ಅರಣ್ಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ದೊರಕಿ ಅವರು ಆರ್ಥಿಕವಾಗಿ ಲಾಭ ಪಡೆಯುತ್ತಾರೆ.

ಯಶಸ್ವಿನಿ

  • ಆಯವ್ಯಯ ಅವಕಾಶ ( ಗ್ರಾಮೀಣ ) :             ರೂ. 9901/- ಲಕ್ಷಗಳು
  • ಆಯವ್ಯಯ ಅವಕಾಶ ( ನಗರ) :             ರೂ.1100/- ಲಕ್ಷಗಳು
  • ಆರ್ಥಿಕ ಸಹಾಯದ ವಿಧ:     ಸಹಾಯಧನ
  • ಯೋಜನೆಯ ಉದ್ದೇಶ:
  • ಸಹಕಾರಿಗಳಲ್ಲಿ ಆರೋಗ್ಯ ನಿಗಾದ ಗುಣಮಟ್ಟವನ್ನು ವೃದ್ಧಿಸುವುದು ಹಾಗೂ ಆ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವುದು, ತನ್ಮೂಲಕ ಸಹಕಾರಿ ಸದಸ್ಯರ ಒಟ್ಟಾರೆ ಆರೋಗ್ಯ ಮತ್ತು ಕ್ಷೇಮ ಇರುವಂತೆ ನೋಡಿಕೊಳ್ಳುವುದು. 2014-15 ನೇ ಸಾಲಿನಲ್ಲಿ ಈ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಲಾಗಿದೆ.
  • ಅಂದಾಜು ಫಲಿತಾಂಶ:
  • ಗ್ರಾಮೀಣ ಸಹಕಾರಿಗಳಿಗೆ 476 ನೆಟ್ ವರ್ಕ್ ಆಸ್ಪತ್ರೆಗಳ ಮೂಲಕ ಸುಮಾರು 823 ವಿವಿಧ ರೀತಿಯ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಉಚಿತವಾಗಿ ದೊರಕಿಸುವುದರಿಂದ ಅವರ ಆರೋಗ್ಯ ಮತ್ತು ಜೀವನ ಮಟ್ಟದಲ್ಲಿ ಸುಧಾರಣೆ ಉಂಟಾಗಲು ಸಹಾಯಕವಾಗುತ್ತದೆ.

ಹಣಕಾಸು ಸಹಾಯ

  • ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಹಣಕಾಸು ಸಹಾಯ,
  • ಆಯವ್ಯಯ ಅವಕಾಶ :                       ರೂ.11.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:                ಸಹಾಯಧನ
  • ಯೋಜನೆಯ ಉದ್ದೇಶ:
  • ಈ ಯೋಜನೆಯಡಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯ ಹೊಂದಲು / ಆಸ್ತಿ ನಿರ್ಮಾಣ ಮಾಡಿಕೊಳ್ಳಲುಹಣಕಾಸು ಸಹಾಯ ನೀಡಲಾಗುವುದು.
  • ಅಂದಾಜು ಫಲಿತಾಂಶ :
  • ಫಲಾನುಭವಿ ಸಹಕಾರ ಸಂಘಗಳಲ್ಲಿ ಮೂಲಭೂತ ಸೌಕರ್ಯ/ಆಸ್ತಿ ನಿರ್ಮಾಣವಾಗುವುದರಿಂಧ ಸಂಘಗಳ ವ್ಯವಹಾರ ಹೆಚ್ಚಿ ಉದ್ದೇಶಗಳು ಈಡೇರಲು ಸಾಧ್ಯವಾಗುತ್ತದೆ.
  • ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಕೊಳವೆ ಬಾವಿಗಳಿಗಾಗಿ ನೀಡಿದ ಸಾಲ ಮನ್ನಾ :
  • ಆಯವ್ಯಯ ಅವಕಾಶ:                       ರೂ.200.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:                ಸಹಾಯಧನ
  • ಯೋಜನೆಯ ಉದ್ದೇಶ:
  • ಪಿಕಾರ್ಡ್ ಬ್ಯಾಂಕ್‍ಗಳಿಂದ ಕೊಳವೆ ಬಾವಿಗಳನ್ನು ತೆರೆಯಲು ಸಾಲ ಪಡೆದು ನಂತರ ಸುಸ್ತಿಯಾದ ರೈತರ ಸಾಲಮನ್ನಾ ಮಾಡಲು ಉದ್ದೇಶಿಸಿಲಾಗಿದೆ.
  • ಅಂದಾಜು ಫಲಿತಾಂಶ:
  • ಸುಸ್ತಿ ಸಾಲವನ್ನು ಮನ್ನಾ ಮಾಡುವುದರಿಂದ ರೈತರು ರಿಯಾಯಿತಿ ದರದಲ್ಲಿ ಹೊಸ ಸಾಲ ಪಡೆಯಲು ಅನುಕೂಲವಾಗುತ್ತದೆ..
  • ಸ್ವಸಹಾಯ ವರ್ಗಗಳಿಗೆ ಸಾಲಗಳ ಮೇಲಣ ಬಡ್ಡಿ ಸಹಾಯಧನ:
  • ಆಯವ್ಯಯ ಅವಕಾಶ:             ರೂ. 8600.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:      ಸಹಾಯಧನ
  • ಯೋಜನೆಯ ಉದ್ದೇಶ:
  • ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಶೇ.4 ಕ್ಕೆ ಇಳಿಸುವುದು ಹಾಗೂ ಸರ್ಕಾರದ ಬದ್ಧತೆಯಂತೆ ಸಹಕಾರ ಸಂಘಗಳಿಂದ ಮಂಜೂರಾಗುವ ಸಾಲದ ಮೇಲೆ ಬಡ್ಡಿ ಸಹಾಯಧನವನ್ನು ಒದಗಿಸುವುದು.
  • ಅಂದಾಜು ಫಲಿತಾಂಶ:
  • ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಹಾಗೂ ಮಹಿಳೆಯರಿಗೆ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ದೊರೆಯಲು ಸಹಾಯವಾಗುತ್ತದೆ.
  • ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಹಣಕಾಸು ಸಹಾಯ,

ಸಹಾಯಧನ

  • ವಿವಿಧ ಸಹಕಾರ ಸಂಸ್ಥೆಗಳಲ್ಲಿ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರನ್ನು ಸದಸ್ಯರನ್ನಾಗಿ ನೋಂದಾಯಿಸುವ ಬಗ್ಗೆ ಸಹಾಯಧನ :
  • ಆಯವ್ಯಯ ಅವಕಾಶ:             ರೂ3200.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:      ಸಹಾಯಧನ
  • ಯೋಜನೆಯ ಉದ್ದೇಶ:
  • ಯೋಜನೆಯ ಪ್ರಮುಖ ಉದ್ದೇಶ ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಿಗೆ ಸದಸ್ಯರನ್ನಾಗಿ ನೋಂದಾಯಿಸಲು ಸಹಾಯಧನ ನೀಡುವುದು ಆ ಮೂಲಕ ಆಯಾ ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯವನ್ನು ಅವರಿಗೆ ಒದಗಿಸುವುದು. ಆಯಾ ಸಂಘದ ಒಂದು ಷೇರಿನ ಮೊತ್ತ ಅಥವಾ ಗರಿಷ್ಠ ರೂ.500/- ಇವುಗಳ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಮಂಜೂರು ಮಾಡುವುದು.
  • ಅಂದಾಜು ಫಲಿತಾಂಶ:
  • ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸುವ ಮೂಲಕ ಆಯಾ ಸಹಕಾರ ಸಂಘಗಳಲ್ಲಿದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುವರು.
  • ವಿವಿಧ ಸಹಕಾರ ಸಂಸ್ಥೆಗಳಲ್ಲಿ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರನ್ನು ಸದಸ್ಯರನ್ನಾಗಿ ನೋಂದಾಯಿಸುವ ಬಗ್ಗೆ ಸಹಾಯಧನ :ಆಯವ್ಯಯ ಅವಕಾಶ:             ರೂ3200.00 ಲಕ್ಷಗಳು ಆರ್ಥಿಕ ಸಹಾಯದ ವಿಧ:      ಸಹಾಯಧನ
  • ಯೋಜನೆಯ ಉದ್ದೇಶ:
  • ಯೋಜನೆಯ ಪ್ರಮುಖ ಉದ್ದೇಶ ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಿಗೆ ಸದಸ್ಯರನ್ನಾಗಿ ನೋಂದಾಯಿಸಲು ಸಹಾಯಧನ ನೀಡುವುದು ಆ ಮೂಲಕ ಆಯಾ ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯವನ್ನು ಅವರಿಗೆ ಒದಗಿಸುವುದು. ಆಯಾ ಸಂಘದ ಒಂದು ಷೇರಿನ ಮೊತ್ತ ಅಥವಾ ಗರಿಷ್ಠ ರೂ.500/- ಇವುಗಳ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಮಂಜೂರು ಮಾಡುವುದು.
  • ಅಂದಾಜು ಫಲಿತಾಂಶ:
  • ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸುವ ಮೂಲಕ ಆಯಾ ಸಹಕಾರ ಸಂಘಗಳಲ್ಲಿದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುವರು.

ಬ್ಯಾಂಕ್ ಗೆ ಸಾಲ

  • ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವ್ಥದ್ಧಿ ಬ್ಯಾಂಕ್ ಗೆ ಸಾಲ
  • ಆಯವ್ಯಯ ಅವಕಾಶ: ರೂ.500.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ: ಸಾಲ
  • ಯೋಜನೆಯ ಉದ್ದೇಶ:
  • ಕಸ್ಕಾರ್ಡ್ ಬ್ಯಾಂಕ್ ಗೆ ಅವಧಿ ಸಾಲವನ್ನು ವಿಸ್ತರಿಸಿ, ಆ ಮೂಲಕ ಪಿಕಾರ್ಡ್ ಬ್ಯಾಂಕ್ಗಳಿಗೆ ಸಾಲ ದೊರೆಯುವಂತಾಗಲು, ರಾಜ್ಯ ಸರ್ಕಾರದ ಶೇ. 4-5ರ ಪಾಲನ್ನು ಭರಿಸುವುದು.
  • ಅಂದಾಜು ಫಲಿತಾಂಶ:
  • ನಬಾರ್ಡ್ ನಿಂದ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪುನರ್ಧನ ಸೌಲಭ್ಯ ಪಡೆಯುತ್ತದೆ. ಇದರಿಂದಾಗಿ ಸಕಾಲದಲ್ಲಿ ರೈತರಿಗೆ ಸುಲಭ ದರದಲ್ಲಿ ದೀರ್ಘಾವಧಿ ಸಾಲ ನೀಡಲು ಅವಕಾಶವಾಗುತ್ತದೆ ಹಾಗೂ ಆ ಮೂಲಕ ರೈತರ ಜೀವನ ಮಟ್ಟ ಸುಧಾರಿಸುತ್ತದೆ.

ಬಂಡವಾಳ ನೆರವು, ಅಲ್ಪಾವಧಿ ಸಾಲ

  • ಆರ್ಥಿಕವಾಗಿ ದುರ್ಬಲವಾಗಿರುವ ಗ್ರಾಹಕರ, ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘಗಳಿಗೆ ಬಂಡವಾಳ ನೆರವು :
  • ಆಯವ್ಯಯ ಅವಕಾಶ:            ರೂ.140.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:     ಷೇರು ಬಂಡವಾಳ
  • ಯೋಜನೆಯ ಉದ್ದೇಶ:
  • ಇದು 2012-13 ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಯೋಜನೆಯಾಗಿರುತ್ತದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಹಕ ರ ಮಾರುಕಟ್ಟೆ ಮತ್ತು ಸಂಸ್ಕರಣ ಸಹಕಾರ ಸಂಘಗಳು ಆರ್ಥಿಕವಾಗಿ ದುರ್ಬಲವಾಗಿದ್ದು, ಅವುಗಳು ಬೈಲಾ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಶಕ್ತವಾಗಿಲ್ಲದ ಕಾರಣಅಂತಹ ಸಹಕಾರ ಸಂಘಗಳಿಗೆ ಆರ್ಥಿಕ ನೆರವನ್ನು ಷೇರು ಬಂಡವಾಳದ ರೂಪದಲ್ಲಿಒದಗಿಸುವುದು.
  • ಅಂದಾಜು ಫಲಿತಾಂಶ:
  • ಆರ್ಥಿಕ ನೆರವು ಪಡೆದ ಸಹಕಾರ ಸಂಘಗಳು ಮೂಲ ಬಂಡವಾಳವನ್ನು ಹೆಚ್ಚಿಸಿಕೊಂಡು ವ್ಯವಹಾರಗಳನ್ನು ಮಾಡಿ, ಆರ್ಥಿಕವಾಗಿ ಸದೃಢವಾಗುತ್ತವೆ.
  • 12. ಒಳನಾಡು ಮೀನುಗಾರಿಕೆಯಲ್ಲಿ -ಸಹಕಾರಿ ಬ್ಯಾಂಕುಗಳ ಮೂಲಕ ಅಲ್ಪಾವಧಿ ಸಾಲ. .
  • ಆಯವ್ಯಯ ಅವಕಾಶ:            ರೂ.240.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:     ಸಹಾಯಧನ
  • ಯೋಜನೆಯ ಉದ್ದೇಶ:
  • ಒಳನಾಡು ಮೀನುಗಾರಿಕೆಯಲ್ಲಿ ನೀಲಿಕ್ರಾಂತಿ ತರಲು ರಾಜ್ಯದ ಒಳನಾಡು ಮೀನು ಕೃಷಿಕರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲ ನೀಡಲಾಗುವುದು.
  • ಅಂದಾಜು ಫಲಿತಾಂಶ:
  • ಸಾಲದ ವ್ಯವಸ್ಥೆಯನ್ನು ಒಳನಾಡು ಮೀನುಗಾರಿಕೆ ಬಲಗೊಳಿಸಿ ಸಾಲವು ಸುಲಭ ದರದಲ್ಲಿ ದೊರೆಯುವಂತೆ ಮಾಡುವುದು.
  • ಆರ್ಥಿಕವಾಗಿ ದುರ್ಬಲವಾಗಿರುವ ಗ್ರಾಹಕರ, ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘಗಳಿಗೆ ಬಂಡವಾಳ ನೆರವು :ಆಯವ್ಯಯ ಅವಕಾಶ:            ರೂ.140.00 ಲಕ್ಷಗಳುಆರ್ಥಿಕ ಸಹಾಯದ ವಿಧ:     ಷೇರು ಬಂಡವಾಳ
  • ಯೋಜನೆಯ ಉದ್ದೇಶ:
  • ಇದು 2012-13 ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಯೋಜನೆಯಾಗಿರುತ್ತದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಹಕ ರ ಮಾರುಕಟ್ಟೆ ಮತ್ತು ಸಂಸ್ಕರಣ ಸಹಕಾರ ಸಂಘಗಳು ಆರ್ಥಿಕವಾಗಿ ದುರ್ಬಲವಾಗಿದ್ದು, ಅವುಗಳು ಬೈಲಾ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಶಕ್ತವಾಗಿಲ್ಲದ ಕಾರಣಅಂತಹ ಸಹಕಾರ ಸಂಘಗಳಿಗೆ ಆರ್ಥಿಕ ನೆರವನ್ನು ಷೇರು ಬಂಡವಾಳದ ರೂಪದಲ್ಲಿಒದಗಿಸುವುದು.
  • ಅಂದಾಜು ಫಲಿತಾಂಶ:
  • ಆರ್ಥಿಕ ನೆರವು ಪಡೆದ ಸಹಕಾರ ಸಂಘಗಳು ಮೂಲ ಬಂಡವಾಳವನ್ನು ಹೆಚ್ಚಿಸಿಕೊಂಡು ವ್ಯವಹಾರಗಳನ್ನು ಮಾಡಿ, ಆರ್ಥಿಕವಾಗಿ ಸದೃಢವಾಗುತ್ತವೆ.
  • ಒಳನಾಡು ಮೀನುಗಾರಿಕೆಯಲ್ಲಿ -ಸಹಕಾರಿ ಬ್ಯಾಂಕುಗಳ ಮೂಲಕ ಅಲ್ಪಾವಧಿ ಸಾಲ. .ಆಯವ್ಯಯ ಅವಕಾಶ:            ರೂ.240.00 ಲಕ್ಷಗಳು ಆರ್ಥಿಕ ಸಹಾಯದ ವಿಧ:     ಸಹಾಯಧನ
  • ಯೋಜನೆಯ ಉದ್ದೇಶ:
  • ಒಳನಾಡು ಮೀನುಗಾರಿಕೆಯಲ್ಲಿ ನೀಲಿಕ್ರಾಂತಿ ತರಲು ರಾಜ್ಯದ ಒಳನಾಡು ಮೀನು ಕೃಷಿಕರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲ ನೀಡಲಾಗುವುದು.
  • ಅಂದಾಜು ಫಲಿತಾಂಶ:
  • ಸಾಲದ ವ್ಯವಸ್ಥೆಯನ್ನು ಒಳನಾಡು ಮೀನುಗಾರಿಕೆ ಬಲಗೊಳಿಸಿ ಸಾಲವು ಸುಲಭ ದರದಲ್ಲಿ ದೊರೆಯುವಂತೆ ಮಾಡುವುದು.

ಪಶು ಭಾಗ್ಯ

  • ಪಶು ಭಾಗ್ಯ” -ಪಶುಸಂಗೋಪನೆ ಇಲಾಖೆ -ಸಹಕಾರಿ ಬ್ಯಾಂಕುಗಳ ಮೂಲಕ ಅಲ್ಪಾವಧಿ ಸಾಲ.
  • ಆಯವ್ಯಯ ಅವಕಾಶ :            ರೂ. 1560.00 ಲಕ್ಷಗಳು
  • ಯೋಜನೆಯ ಉದ್ದೇಶ :
  • “ಪಶು ಭಾಗ್ಯ” ಯೋಜನೆಯಡಿಯಲ್ಲಿ ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೂ. 50,000 ವರೆಗೆ ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲ ಒದಗಿಸಲಾಗುವುದು.
  • ಅಂದಾಜು ಫಲಿತಾಂಶ:
  • ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ದೊರೆಯುವಂತೆ ಮಾಡುವುದು.
  • ಪಶು ಭಾಗ್ಯ” -ಪಶುಸಂಗೋಪನೆ ಇಲಾಖೆ -ಸಹಕಾರಿ ಬ್ಯಾಂಕುಗಳ ಮೂಲಕ ಅಲ್ಪಾವಧಿ ಸಾಲ.ಆಯವ್ಯಯ ಅವಕಾಶ :            ರೂ. 1560.00 ಲಕ್ಷಗಳು ಯೋಜನೆಯ ಉದ್ದೇಶ :
  • “ಪಶು ಭಾಗ್ಯ” ಯೋಜನೆಯಡಿಯಲ್ಲಿ ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೂ. 50,000 ವರೆಗೆ ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲ ಒದಗಿಸಲಾಗುವುದು.
  • ಅಂದಾಜು ಫಲಿತಾಂಶ:
  • ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ದೊರೆಯುವಂತೆ ಮಾಡುವುದು.

ಗೋದಾಮು ನಿರ್ಮಾಣ

  • ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ) ಮಾದರಿಯಲ್ಲಿ ಪ್ತಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗೋದಾಮು ನಿರ್ಮಾಣ :
  • ಆಯವ್ಯಯ ಅವಕಾಶ:            ರೂ.500.00 ಲಕ್ಷಗಳು
  • ಯೋಜನೆಯ ಉದ್ದೇಶ:
  • ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಹಭಾಗಿತ್ವದಲ್ಲಿ ಗೋದಾಮು ಹೊಂದಿಲ್ಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗೋದಾಮು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ.
  • ಅಂದಾಜು ಫಲಿತಾಂಶ:
  • ಗೋದಾಮು ಶೇಖರಣೆ ಸಾಮಥ್ರ್ಯ ಹೆಚ್ಚಿಸುವುದರಿಂದ ರೈತರು ಬೆಳೆದ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಶೇಖರಿಸಲು ಸಹಾಯವಾಗುವುದು.
  • ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ) ಮಾದರಿಯಲ್ಲಿ ಪ್ತಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗೋದಾಮು ನಿರ್ಮಾಣ :ಆಯವ್ಯಯ ಅವಕಾಶ:            ರೂ.500.00 ಲಕ್ಷಗಳು
  • ಯೋಜನೆಯ ಉದ್ದೇಶ:
  • ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಹಭಾಗಿತ್ವದಲ್ಲಿ ಗೋದಾಮು ಹೊಂದಿಲ್ಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗೋದಾಮು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ.
  • ಅಂದಾಜು ಫಲಿತಾಂಶ:
  • ಗೋದಾಮು ಶೇಖರಣೆ ಸಾಮಥ್ರ್ಯ ಹೆಚ್ಚಿಸುವುದರಿಂದ ರೈತರು ಬೆಳೆದ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಶೇಖರಿಸಲು ಸಹಾಯವಾಗುವುದು.

ತರಬೇತಿ ಕೇಂದ್ರಗಳ ಕಟ್ಟಡ ನಿರ್ಮಾಣ

  • ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ತರಬೇತಿ ಕೇಂದ್ರಗಳ ಕಟ್ಟಡ ನಿರ್ಮಾಣ :
  • ಆಯವ್ಯಯ ಅವಕಾಶ:            ರೂ..60.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:     ಷೇರು ಬಂಡವಾಳ
  • ಯೋಜನೆಯ ಉದ್ದೇಶ:
  • ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ರವರ ಆಡಳಿತದಲ್ಲಿ ಮೂರು ತರಬೇತಿ ಕೇಂದ್ರಗಳ ( ಬೆಳಗಾವಿ, ಧಾರವಾಡ, ಬೆಂಗಳೂರು) ಕಟ್ಟಡಗಳನ್ನು ನಿರ್ಮಿಸುವುದು.
  • ಅಂದಾಜು ಫಲಿತಾಂಶ:
  • ತರಬೇತಿ ಕೇಂದ್ರಗಳ ನಿರ್ಮಾಣದಿಂದ ತರಬೇತಿ ಶಿಕ್ಷಣವನ್ನು ಪರಿಣಾಮಕಾರಿಗೊಳಿಸಲು ಸರ್ಕಾರದ ಸಹಾಯಧನ .
  • ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ತರಬೇತಿ ಕೇಂದ್ರಗಳ ಕಟ್ಟಡ ನಿರ್ಮಾಣ :ಆಯವ್ಯಯ ಅವಕಾಶ:            ರೂ..60.00 ಲಕ್ಷಗಳು ಆರ್ಥಿಕ ಸಹಾಯದ ವಿಧ:     ಷೇರು ಬಂಡವಾಳ
  • ಯೋಜನೆಯ ಉದ್ದೇಶ:
  • ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ರವರ ಆಡಳಿತದಲ್ಲಿ ಮೂರು ತರಬೇತಿ ಕೇಂದ್ರಗಳ ( ಬೆಳಗಾವಿ, ಧಾರವಾಡ, ಬೆಂಗಳೂರು) ಕಟ್ಟಡಗಳನ್ನು ನಿರ್ಮಿಸುವುದು.
  • ಅಂದಾಜು ಫಲಿತಾಂಶ:
  • ತರಬೇತಿ ಕೇಂದ್ರಗಳ ನಿರ್ಮಾಣದಿಂದ ತರಬೇತಿ ಶಿಕ್ಷಣವನ್ನು ಪರಿಣಾಮಕಾರಿಗೊಳಿಸಲು ಸರ್ಕಾರದ ಸಹಾಯಧನ

ಗಣೀಕಿಕರಣಗೊಳಿಸಲು ಸಹಾಯಧನ

  • ಸ್ವಸಹಾಯ ಗುಂಪುಗಳಿಗೆ ಗಣಕಯಂತ್ರ ಒದಗಿಸಿ ಗಣೀಕಿಕರಣಗೊಳಿಸಲು ಹಾಗೂ ಪ್ಯಾಕ್ಸ್ಗಳಿಗೆ ತಂತ್ರಾಂಶ ಒದಗಿಸಲು ಸರ್ಕಾರದ ಸಹಾಯಧನ :
  • ಆಯವ್ಯಯ ಅವಕಾಶ:            ರೂ 245.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:     ಷೇರು ಬಂಡವಾಳ
  • ಯೋಜನೆಯ ಉದ್ದೇಶ:
  • ಸ್ವಸಹಾಯ ಗುಂಪುಗಳು ಹಾಗೂ ಪ್ಯಾಕ್ಸ್ಗಳಿಗೆ ಗಣಕೀಕರಣಗೊಳಿಸಲು ಅವಶ್ಯಕವಿರುವ ತಂತ್ರಾಂಶವನ್ನು ಒದಗಿಸಿ ಸಬಲೀಕರಣಗೊಳಿಸುವುದು.
  • ಅಂದಾಜು ಫಲಿತಾಂಶ:
  • ಸ್ವಸಹಾಯ ಗುಂಪುಗಳು ಹಾಗೂ ಪ್ಯಾಕ್ಸ್ಗಳಿಗೆ ಗಣಕೀಕರಣಗೊಳಿಸಿರುವುದರಿಂದ ಬಿಲ್ಲುಗಳನ್ನು ನಿಗಧಿತ ಸಮಯದಲ್ಲಿ ತಯಾರಿಸಲು ಸಾಧ್ಯವಾಗುವುದು ಹಾಗೂ ನಿಖರವಾದ ಮಾಹಿತಿಯನ್ನು ತಯಾರಿಸಲು ಸಾಧ್ಯವಾಗುವುದು.

ಪ್ರಾಥಮಿಕ ಮೌಲ್ಯವರ್ಧನ ಘಟಕ ಯೋಜನೆ 

  • ಆಯವ್ಯಯ ಅವಕಾಶ:            ರೂ.300.00 ಲಕ್ಷಗಳು
  • ಯೋಜನೆಯ ಉದ್ದೇಶ:
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕೃಷಿ ಉತ್ಪನ್ನಗಳ ಪ್ರಾಥಮಿಕ ಮೌಲ್ಯವರ್ಧನೆ, ಮತ್ತು ಶೇಖರಿಣೆ, ಶುದ್ಧೀಕರಣ, ವರ್ಗಿಕರಣ ಮಾಡಲು ಅವಶ್ಯಕವಾದ ಕ್ಲೀನಿಂಗ್ ಮತ್ತು ಗ್ರೇಡಿಂಗ್ ಯಂತ್ರೋಪಕರಣಗಳನ್ನು ಪ್ರಥಮ ಹಂತದಲ್ಲಿ ಒದಗಿಸಿ ರೈತರಿಗೆ ನೆರವಾಗುವ ಉದ್ದೇಶವನ್ನು ಹೊಂದಲಾಗಿದೆ.
  • ಅಂದಾಜು ಫಲಿತಾಂಶ:
  • ಕೃಷಿ ಉತ್ಪನ್ನಗಳ ಗುಣಮಟ್ಟ ಸುಧಾರಿಸಿ, ಉತ್ತಮ ಬೆಲೆ ಪಡೆಯಲು ಅನುವಾಗುವಂತೆ ಇವುಗಳ ಮೌಲ್ಯವರ್ಧನೆಯಾಗಿ ರೈತರಿಗೆ ಉತ್ತಮ ಬೆಲೆ ಲಭ್ಯವಾಗುತ್ತದೆ.ಪ್ರಥಮ ಹಂತದಲ್ಲಿ ತಲಾ ರೂ 10 ಲಕ್ಷದಂತೆ 100 ಸಹಕಾರ ಸಂಘಗಳಿಗೆ ಸೌಲಭ್ಯ ಒದಗಿಸುವುದು.

ಬ್ಯಾಂಕ್‍ಗಳಿಗೆ ಸಾಲ, ಚುನಾವಣಾ ಪ್ರಾಧಿಕಾರ

  • ದುರ್ಬಲ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳಿಗೆ ಸಾಲ
  • ಆಯವ್ಯಯ ಅವಕಾಶ:            ರೂ.500.00 ಲಕ್ಷಗಳು
  • ಯೋಜನೆಯ ಉದ್ದೇಶ:
  • ದುರ್ಬಲ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳಿಗೆ ಸಾಲದ ರೂಪದಲ್ಲಿ ಸಹಾಯಧನ ಒದಗಿಸಿ ಬ್ಯಾಂಕುಗಳ ಪುನಃಶ್ಚೇತನಕ್ಕೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ.
  • ಅಂದಾಜು ಫಲಿತಾಂಶ:
  • ಆಯಾ ಜಿಲ್ಲೆಗಳ ರೈತರ ಸಾಲದ ಅವಶ್ಯಕತೆಯನ್ನು ಪೂರೈಸಲು ಅನುವಾಗುವುದು. .
  • ಕೇಂದ್ರ ಸಹಕಾರ ಬ್ಯಾಂಕ್‍ಗಳಿಗೆ ಸಾಲ
  • ಆಯವ್ಯಯ ಅವಕಾಶ:            ರೂ200.00 ಲಕ್ಷಗಳು
  • ಯೋಜನೆಯ ಉದ್ದೇಶ:
  • 97 ನೇಯ ಸಂವಿಧಾನದ ತಿದ್ದುಪಡಿಯ ಹಿನ್ನಲೆಯಲ್ಲಿ ಸಹಕಾರ ಚುನಾವಣಾ ಆಯೋಗವನ್ನು ರಚಿಸಲಾಗಿದೆ. ರಾಜ್ಯದಲ್ಲಿನ ಸಹಕಾರ ಸಂಗಗಳಿಗೆ ನಡೆಯುವ ಎಲ್ಲಾ ಚುನಾವಣೆಗಳನ್ನು ನಡೆಸುವ ಮತ್ತು ತತ್ಸಂಬಂಧತ ಮತದಾರರ ಪಟ್ಟಿಗಳನ್ನು ತಯಾರಿಸುವ ಕಾರ್ಯದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣವು ಸಹಕಾರ ಚುನಾವಣಾ ಆಯೋಗದಲ್ಲಿ ನಿಹಿತವಾಗಿರುತ್ತದೆ.
  • ಅಂದಾಜು ಫಲಿತಾಂಶ :
  • ರಾಜ್ಯದಲ್ಲಿನ ಸಹಕಾರ ಸಂಘಗಳಿಗೆ ನಡೆಯುವ ಎಲ್ಲಾ ಚುನಾವಣೆಗಳನ್ನು ನಡೆಸುವ ಮತ್ತು ತತ್ಸಂಬಂಧತ ಮತದಾರರ ಪಟ್ಟಿಗಳನ್ನು ತಯಾರಿಸುವ ಕಾರ್ಯದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣವು ಸಹಕಾರ ಚುನಾವಣಾ ಆಯೋಗದಲ್ಲಿ ನಿಹಿತವಾಗಿರುತ್ತದೆ. 2013-14 ನೇ ಸಾಲಿನಲ್ಲಿ 13371 ಪ್ರಾಥಮಿಕ ಸಹಕಾರ ಸಂಘಗಳಿಗೆ ಹಾಗೂ 155 ಮಾಧ್ಯಮಿಕ ಹಾಗೂ ಫೆಡರಲ್ ಸಹಕಾರ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿರುತ್ತದೆ.

ಜಿಲ್ಲಾ ವಲಯ ಯೋಜನೆಗಳು

ಜಿಲ್ಲಾ ವಲಯದಡಿ ಒಟ್ಟು 11 ಯೋಜನಾ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲು ಒಟ್ಟು ರೂ 586.00 ಲಕ್ಷಗಳನ್ನು ಒದಗಿಸಲಾಗಿರುತ್ತದೆ.

  • ವಿವಿಧ ವರ್ಗದ ಸಹಕಾರಿ ಸಂಸ್ಥೆಗಳಿಗೆ ಸಹಾಸಹಾಯಧನ /ಎನ್.ಸಿ.ಡಿ.ಸಿ.ಯೋಜನೆ. (ಸಹಾಯಧನ)
  • ಹಾಲು ಉತ್ಪಾದನಾ ಮಹಿಳಾ ಸಹಕಾರ ಸಂಘಗಳಿಗೆ ಮೂಲಭೂತ ಸಕೌರ್ಯಗಳಿಗಾಗಿ ಆರ್ಥಿಕ ಸಹಾಯ .
  • ಸಣ್ಣ ಶಾಖೆಗಳ ಪ್ರಾರಂಭ ಮತ್ತು ವ್ಯವಹಾರ ಕಟ್ಟಡಗಳ ನಿರ್ಮಾಣ
  • ವಿವಿಧ ವರ್ಗದ ಸಹಕಾರ ಸಂಘಗಳಿಗೆ ಷೇರು ಬಂಡವಾಳದ ಸಹಾಯ ( ಸಾಮಾನ್ಯ / ನಬಾರ್ಡ್ /ಎನ್.ಸಿ.ಡಿ.ಸಿ)
  • ಇತರೆ ಸಹಕಾರ ಸಂಘಗಳ ಷೇರು ಬಂಡವಾಳ
  • ವಿವಿಧ ವರ್ಗದ ಸಹಕಾರ ಸಂಘಗಳಿಗೆ ಸಾಲದ ಸಹಾಯ (ಎನ್.ಸಿ.ಡಿ.ಸಿ)
  • ಸಾರ್ವತ್ರಿಕ ಕಾರ್ಯಗಾರ ನಿರ್ಮಾಣಕ್ಕಾಗಿ ಮಹಿಳಾ ಸಹಕಾರ ಸಂಘಗಳಿಗೆ ಸಾಲಗಳು.
  • ವಿಶೇಷ ಘಟಕ ಯೋಜನೆಯಡಿ - ಆಸ್ತಿಗಳ ಸೃಷ್ಟಿಗಾಗಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿಅಭಿವೃದ್ದಿ ಬ್ಯಾಂಕುಗಳು ಮಂಜೂರು ಮಾಡಿದ ಸಾಲಗಳ ಮೇಲೆ ಶೇಕಡ 60 ರಷ್ಟು ಸಹಾಯಧನ
  • ಮಹಿಳಾ ಸಹಕಾರ ಸಂಘಗಳಲ್ಲಿ ಹೂಡಿಕೆಗಳು
  • ಪರಿಶಿಷ್ಟ ಜಾತಿಯವರಿಗೆ ವಿಶೇಷ ಘಟಕ ಯೋಜನೆ (ಸಾಲ)
  • ವ್ಯವಹಾರ ಕಟ್ಟಡಗಳ ನಿರ್ಮಾಣ ಮತ್ತು ಮಹಿಳಾ ಸಹಕಾರ ಸಂಘಗಳಿಗೆ ಸಾಲಗಳು.

ಮೂಲ : ಸಹಕಾರ ಸಿಂಧು

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate