অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಂತ್ಯಸಂಸ್ಕಾರ ಯೋಜನೆ, ಜನಶ್ರೀ ಬೀಮಾ ಯೋಜನೆ, ದೇವದಾಸಿಯರಿಗೆ ಮಾಸಾಶನ ಯೋಜನೆ

ಅಂತ್ಯಸಂಸ್ಕಾರ ಯೋಜನೆ, ಜನಶ್ರೀ ಬೀಮಾ ಯೋಜನೆ, ದೇವದಾಸಿಯರಿಗೆ ಮಾಸಾಶನ ಯೋಜನೆ

ಅಂತ್ಯಸಂಸ್ಕಾರ ಯೋಜನೆ

ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಕುಟುಂಬದ ಸದಸ್ಯರು ಮೃತ ಪಟ್ಟಲ್ಲಿ ಅವರ ಅಂತಿಮ ಕ್ರಿಯೆಗಾಗಿ ನೆರವು ನೀಡುವ ಬಗ್ಗೆ ಸರ್ಕಾರದ ಮಾರ್ಗಸೂಚಿಗಳನ್ನು ಸಂಖ್ಯೆ ಆರ್.ಡಿ 20 ಎಂಎಸ್ ಟಿ 2006 ದಿನಾಂಕ: 08-06-2006 ರಲ್ಲಿ ಹೊರಡಿಸಲಾಗಿದೆ. ಈ ಯೋಜನೆಯನ್ನು ಅಂತ್ಯ ಸಂಸ್ಕಾರ ಸಹಾಯ ನಿಧಿ ಎಂದು ಕರೆಯಲಾಗಿದೆ.

ಈ ನೆರವನ್ನು ಜೀವಂತ ವಾರಸುದಾರರಿಗೆ ಅಥವಾ ಕುಟುಂಬದ ಅವಲಂಬಿತ ಸದಸ್ಯರಿಗೆ ಅಥವಾ ಅವರ ಅಂತ್ಯ ಕ್ರಿಯೆ ನೆರವೇರಿಸುವ ಜವಾಬ್ದಾರಿ ಇರುವ ಸದಸ್ಯರಿಗೆ ಅಂತ್ಯ ಕ್ರಿಯೆ ನೆರವೇರಿಸುತ್ತಾರೆಂದು ಖಚಿತಪಡಿಸಿಕೊಂಡು ತಾಲ್ಲೂಕು ತಹಸೀಲ್ದಾರರು ರೂ.1000/-ಗಳನ್ನು ಬಿಡುಗಡೆ ಮಾಡಬಹುದು.

ಈ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.

  • ಮರಣ ಪ್ರಮಾಣ ಪತ್ರ
  • ಜವಬ್ದಾರಿಯುತ ಸ್ಥಾನದಲ್ಲಿರುವ ಇಬ್ಬರು ಸಾಕ್ಷಿದಾರರ ಸಹಿ

ಜನಶ್ರೀ ಬೀಮಾ ಯೋಜನೆ


ಜನಶ್ರೀ ಬೀಮಾ ಯೋಜನೆಯನ್ನು ಸರ್ಕಾರಿ ಆದೇಶ ಸಂಖ್ಯೆ: ಕಂ.ಇ.25 ಡಿಎಸ್ಪಿ 2008ದಿನಾಂಕ: 31-03-2008 ರಂತೆ ರಾಜ್ಯದಲ್ಲಿ ಜಾರಿಗೆ ತಂದಿದ್ದು, ಇದರ ವಿವರಗಳನ್ನು ಕೆಳಕಂಡಂತೆ ತಿಳಿಸಲಾಗಿದೆ.

  • ಅರ್ಹತೆ : ಗ್ರಾಮೀಂ ಭೂರಹಿತ ಕುಟುಂಬಗಳು.
  • ವಯೋಮಿತಿ : 18ರಿಂದ 59ವರ್ಷ.
  • ಕಾರ್ಯನಿರ್ವಹಣೆ: ರಾಜ್ಯ ಸರ್ಕಾರ.
  • ವಿಮಾ ಕಂತು
ರೂ.200-00 ಪ್ರತಿ ಕುಟುಂಬದ 
ೂ. 100-00 ಕೇಂದ್ರ ಸರ್ಕಾರ ಮತ್ತು ಉಳಿದ 
ರೂ. 100-00 ಕೇಂದ್ರ ಸರ್ಕಾರ ಭರಿಸುತ್ತದೆ

  • ಲಾಭಗಳು
  • ನೈಸರ್ಗಿಕ ಸಾವು ರೂ. 30,000-00
  • ಆಕಸ್ಮಿಕ ಸಾವು ರೂ.75,000-00
  • ಶಾಶ್ವತ ಅಂಗವಿಕಲತೆ ರೂ. 75,000-00
  • ಭಾಗಶಃ ಅಂಗವಿಕಲತೆ ರೂ. 37,500-00
  • ವಿದ್ಯಾರ್ಥಿ ವೇತನ ಎರಡು ಮಕ್ಕಳಿಗೆ ಸೀಮಿತ 9 ರಿಂದ 12ನೇ ತರಗತಿವರೆಗೆ ಮಾತ್ರ
  • ಪ್ರತಿ ತ್ರೈಮಾಸಿಕಕ್ಕೆ ರು.300-00 ಪ್ರತಿ ವಿದ್ಯಾರ್ಥಿಗೆ. (10) ದೇವದಾಸಿಯರಿಗೆ ಮಾಸಾಶನ ಯೋಜನೆ


1993-94 ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಗುಲ್ಬರ್ಗ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹಾಗೂ ಪುನರ್ ಖಾತರೀಕರಣದಲ್ಲಿ ಗುರುತಿಸಲ್ಪಟ್ಟ ದೇವದಾಸಿಯರು ಮಾತ್ರ ಮಾಸಾಶನಕ್ಕೆ ಅರ್ಹರಿರುತ್ತಾರೆ.

ನಿಬಂಧನೆಗಳು

  • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರತಕ್ಕದ್ದು.
  • ಅರ್ಜಿದಾರರ ವಯಸ್ಸು 45 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
  • ಮಾಸಾಶನದ ಮೊಬಲಗು ರೂ.400/- ಗಳಾಗಿರುತ್ತದೆ.
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿಗಳು ಈ ಮಾಸಾಶನದ ಮಂಜೂರಾತಿ ಅಧಿಕಾರಿಯಾಗಿರುತ್ತಾರೆ.
  • ತಾಲೂಕಿನ ತಹಸೀಲ್ದಾರರು ಈ ಕಾರ್ಯಕ್ರಮದ ಉಸ್ತುವಾರಿ ಅಧಿಕಾರಿಯಾಗಿರುತ್ತಾರೆ.
  • ಭಾರತದ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿದೆ.

ಮೂಲ : ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate