ವಿಕಲತೆಯುಳ್ಳ ವ್ಯಕ್ತಿಗಳಿಗಾಗಿ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳ ಪ್ರೋತ್ಸಾಹದ ಯೋಜನೆ ವಿಕಲಚೇತನರು ನೀಡುವ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳ ಪ್ರೋತ್ಸಾಹ ನೀಡಿ ಧನ ಸಹಾಯ ನೀಡುವ ಸಲುವಾಗಿ ಸಾಧನೆ ಪ್ರತಿಭೆಎಂಬ ಯೋಜನೆಯಡಿಯಲ್ಲಿ ಹಾಗೂ ವಿಕಲಚೇತನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವಸಲುವಾಗಿ 2012-13ನೇ ಸಾಲಿನಲ್ಲಿ ರೂ. ಲಕ್ಷಗಳನ್ನು ವೆಚ್ಚಮಾಡಲಾಗಿದೆ ಮತ್ತು 144 ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿರುತ್ತಾರೆ . ವಿಕಲಚೇತನ ವ್ಯಕ್ತಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಈ ಯೋಜನೆಯಡಿ ಸರ್ಕಾರವು ವಿಕಲತೆಯುಳ್ಳ ವ್ಯಕ್ತಿಗಳಿಗೆ ರಿಯಾಯಿತಿ ಬಸ್ ಪಾಸ್ ಗಳನ್ನು ನೀಡುತ್ತಿದೆ. ಈವರೆಗೆ ಎಲ್ಲಾ ಅರ್ಹ ಅಂಗವಿಕಲರಿಗೆ ರಿಯಾಯಿತಿ ಬಸ್ ಪಾಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿತರಿಸಿರುತ್ತಾರೆ. ವಿಕಲಚೇತನರು ವಾರ್ಷಿಕವಾಗಿ ರೂ.550/-ಗಳನ್ನು ಪಾವತಿಸಬೇಕಾಗಿರುತ್ತದೆ.ಮತ್ತು 100ಕಿ.ಮೀ.ವರೆಗೆ ಪ್ರಯಾಣಿಸಬಹುದಾಗಿರುತ್ತದೆ. ಮೂಲ : ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಾಬರಿಕಾರಣ ಇಲಾಖೆ