অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಎಲ್ಲರಿಗೂ ವಸತಿ - ನಗರ)

  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಯನ್ನು ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ  (MoHUPA) ಬಿಡುಗಡೆ ಮಾಡಿದೆ
  • ಇಸವಿ ೨೦೨೨ ರ ಸುಮಾರಿಗೆ ಎಲ್ಲರಿಗೂ ವಸತಿ ಒದಗಿಸುವ ಉದ್ದೇಶ ಹೊಂದಲಾಗಿದೆ ಅಂದರೆ ೭೫ನೇ ಸ್ವಾತಂತ್ರೋತ್ಸವ ಸಮಯದಲ್ಲಿ. ಮಿಷನ್ ಕೆಳಗಿನ ಕಾರ್ಯಕ್ರಮದ ಮೂಲಕ  ಕೊಳೆಗೇರಿ ನಿವಾಸಿಗಳು ಸೇರಿದಂತೆ ನಗರ ಬಡವರ ವಸತಿ ಅಗತ್ಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ
  • ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭೂಸಂಪನ್ಮೂಲವನ್ನು ಇರಿಸಿಕೊಂಡು ಕೊಳೆಗೇರಿ ವಾಸಿಗಳ ಕೊಳೆಗೇರಿ ಪುನರ್ವಸತಿ
  • ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಮೂಲಕ ಹಿಂದುಳಿದ ವರ್ಗಗಳಿಗೆ ಕೈಗೆಟುಕುವ ವಸತಿ
  • ಸಾರ್ವಜನಿಕ ಮತ್ತು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಕೈಗೆಟುಕುವ ವಸತಿ
  • ಫಲಾನುಭವಿಯ ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣ / ಸುಧಾರಣೆಯು ಸಬ್ಸಿಡಿ

ಫಲಾನುಭವಿಗಳು


ಮಿಷನ್ ಕೊಳೆಗೇರಿ ನಿವಾಸಿಗಳ ಸೇರಿದಂತೆ ನಗರ ಬಡವರ ವಸತಿ ಅಗತ್ಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಸಾಮಾನ್ಯವಾಗಿ ಕನಿಷ್ಠ 300 ಜನರರನ್ನು ಒಳಗೊಂಡ ೬೦ ರಿಂದ ೭೦ ಕುಟುಂಬಗಳು ವಾಸಿಸುವ ಅಸಮರ್ಪಕ ಮೂಲಸೌಕರ್ಯ ಮತ್ತು ಸರಿಯಾದ ನೈರ್ಮಲ್ಯ ಕೊರತೆ ಮತ್ತು  ಕುಡಿಯುವ ನೀರಿನ ಸೌಲಭ್ಯ ಕೊರತೆ ಅನಾರೋಗ್ಯಕರವಾದ ಪರಿಸರದಲ್ಲಿ ಕಳಪೆಯಾಗಿ ನಿರ್ಮಿಸಿದ ಕಿಕ್ಕಿರಿದ ವಠಾರಗಳನ್ನು - ಒಂದು ಕೊಳೆಗೇರಿ ಪ್ರದೇಶ ಎಂದು ವ್ಯಾಖ್ಯಾನಿಸಲಾಗುವುದು .

ಫಲಾನುಭವಿಗಳು ಆರ್ಥಿಕವಾಗಿ ಹಿಂದುಳಿದ ವರ್ಗ (EWS) ಮತ್ತು ಕಡಿಮೆ ಆದಾಯದ ಗುಂಪುಗಳು (LIGs) ಸೇರಿವೆ. ವಾರ್ಷಿಕ ಆದಾಯ ಕ್ಯಾಪ್ ರೂ 3 ಲಕ್ಷ EWS ದವರಿಗೆ ಮತ್ತು LIG ದವರಿಗೆ 3-6 ಲಕ್ಷ ಆಗಿದೆ. EWS ವರ್ಗದವರು ಮಿಷನ್ಸ್ನ ಎಲ್ಲಾ ನಾಲ್ಕು ಸಂಸ್ಥಾ ನೆರವಿಗೆ ಅರ್ಹರಾಗುತ್ತಾರೆ. LIG ವರ್ಗದವರು ಮಿಷನ್ ಕೇವಲ ಕ್ರೆಡಿಟ್ ಲಿಂಕ್ ಸಹಾಯಧನ ಯೋಜನೆ (CLSS) ಅರ್ಹರಾಗುತ್ತಾರೆ.

ಯೋಜನೆಯಡಿಯಲ್ಲಿ EWS ಅಥವಾ LIG ಫಲಾನುಭವಿ ಎಂದು ಗುರುತಿಸಲು, ವ್ಯಕ್ತಿಯು ಅರ್ಜಿಸಮೇತ ಆದಾಯ ಪುರಾವೆ ಸ್ವಯಂ ಪ್ರಮಾಣಪತ್ರ / ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ಫಲಾನುಭವಿ ಕುಟುಂಬ ಗಂಡ, ಹೆಂಡತಿ, ಅವಿವಾಹಿತ ಮಕ್ಕಳು ಮತ್ತು / ಅಥವಾ ಅವಿವಾಹಿತ ಹೆಣ್ಣು ಮಕ್ಕಳನ್ನು ಒಳಗೊಂಡಿವೆ.

ಫಲಾನುಭವಿಯ ಕುಟುಂಬ ಮಿಷನ್ ಅಡಿಯಲ್ಲಿ ಕೇಂದ್ರ ನೆರವು ಪಡೆಯಲು ಅರ್ಹರಾಗಿರುತ್ತಾರೆ ಅವನ / ಅವಳ ಹೆಸರಿನಲ್ಲಿ ಅಥವಾ ಭಾರತದ ಯಾವುದೇ ಭಾಗದಲ್ಲಿ ಅವನ / ಅವಳ ಕುಟುಂಬದ ಯಾವುದೇ ಸದಸ್ಯ ಹೆಸರಿನಲ್ಲಿ ಸ್ವಂತ ಮನೆ ಇರಬಾರದು.

ರಾಜ್ಯಗಳಲ್ಲಿ / ಕೇಂದ್ರಾಡಳಿತ ಪ್ರದೇಶಗಳಲ್ಲಿ, ಫಲಾನುಭವಿಗಳು ಯೋಜನೆಯಡಿಯಲ್ಲಿ ನಗರ ಪ್ರದೇಶದ ನಿವಾಸಿಗಳು ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ

34% ಕೊಳೆಗೇರಿ ದಶಕದ ಬೆಳವಣಿಗೆಯ ದರದಲ್ಲಿ,18 ಮಿಲಿಯನ್ ಕೊಳೆಗೇರಿ ಕುಟುಂಬಗಳ ವರೆಗೆ ಯೋಜಿಸಲಾಗಿದೆ. 2 ಮಿಲಿಯನ್ ಕೊಳೆಗೇರಿ ಅಲ್ಲದ ನಗರ ಬಡಮನೆಗಳನ್ನು ಮಿಷನ್ ಅಡಿಯಲ್ಲಿ ಒಳಗೊಂಡಂತೆ ಪ್ರಸ್ತಾಪಿಸಲಾಗಿದೆ. ಆದ್ದರಿಂದ, ಹೊಸ ಮಿಷನ್ ಮೂಲಕ ಒಟ್ಟು 20 ಮಿಲಿಯನ್ ವಸತಿಯ ತೊಂದರೆ ಸರಿಪಡಿಸಲಾಗುವಂತೆ ರೂಪಿಸಲಾಗಿದೆ.

ವ್ಯಾಪ್ತಿ

"ಎಲ್ಲಾರಿಗೂ ವಸತಿ" ನಗರ ಪ್ರದೇಶಕ್ಕಾಗಿ ಈ ಮಿಷನ್ 2015-2022 ಅವಧಿಯಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ.
ಈ ಮಿಷನ್ ಮೂಲಕ 2022 ಹೊತ್ತಿಗೆ ಎಲ್ಲಾ ಅರ್ಹ ಕುಟುಂಬಗಳು / ಫಲಾನುಭವಿಗಳಿಗೆ ಮನೆಗಳನ್ನು ಒದಗಿಸಲು ಕೇಂದ್ರವು ರಾಜ್ಯ ಮತ್ತು ಕೇಂದ್ರಾಡಳಿತ ಸಂಸ್ಥೆಗಳ ಮೂಲಕ ಅನುಷ್ಠಾನಕ್ಕೆ ಯತ್ನಿಸುತ್ತದೆ.

ಇದು ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಇದನ್ನು  ಕೇಂದ್ರ ವಲಯಗಳಲ್ಲಿ ಯೋಜನೆಯಲ್ಲಿ ಅಳವಡಿಸಲಾಗಿದೆ.

ಈ ಮಿಷನ್ ನ  ಎಲ್ಲಾ ಕಾರ್ಯಗಳನ್ನು ದಿನಾಂಕ 17.06.2015 ರಿಂದ ಜಾರಿಗೆಬರುವಂತೆ  ಮತ್ತು 31.03.2022 ವರೆಗೆ ಅಳವಡಿಸಲಾಗಿದೆ

ವ್ಯಾಪ್ತಿ ಮತ್ತು ಅವಧಿ

ಜನಗಣತಿ 2011 ಪ್ರಕಾರ ಎಲ್ಲಾ  4041 ಕಾನೂನುಸಮ್ಮತ ನಗರಗಳನ್ನು ಗಮನವಾಗಿರಿಸಿ : ಮುಖ್ಯ 500 ನಗರಗಳ ಮೇಲೆ ಕೇಂದ್ರೀಕರಿಸಿ ಈ ಕೆಳಕಂಡ  ಮೂರು ಹಂತ ಗಳನ್ನು  ಮಾಡಲಾಗಿದೆ

ಹಂತ I  :  ರಾಜ್ಯ / ಕೇಂದ್ರಾಡಳಿತ ದ  ಆಯ್ಕೆ ಯಂತೆ 100 ನಗರಗಳು  (ಏಪ್ರಿಲ್ 2015 - ಮಾರ್ಚ್ 2017)

ಹಂತ II :  (ಏಪ್ರಿಲ್ 2017 - ಮಾರ್ಚ್ 2019) ವ್ಯಾಪ್ತಿಗೆ ಹೆಚ್ಚುವರಿ 200 ನಗರಗಳು

ಹಂತ III : (ಏಪ್ರಿಲ್ 2019 - ಮಾರ್ಚ್ 2022) ಎಲ್ಲಾ ಇತರ ಉಳಿದ ನಗರಗಳು ವ್ಯಾಪ್ತಿಗೆ

ಸಚಿವಾಲಯವು ರಾಜ್ಯಗಳು / ಕೇಂದ್ರಾಡಳಿತಕ್ಕೆ ಬೇಡಿಕೆ ಇರುವ ಸಂಧರ್ಭದಲ್ಲಿ ಹಿಂದಿನ ಹಂತಗಳಲ್ಲಿ ಹೆಚ್ಚುವರಿ ನಗರಗಳು ಸೇರಿಸುವುದಕ್ಕೆ ಸಂಬಂಧಿಸಿದಂತೆ ಅವಕಾಶವನ್ನು ನೀಡಿದೆ.

ಈ ಮಿಷನ್ ಮೂಲಭೂತ ನಾಗರಿಕ ಮೂಲಸೌಲಭ್ಯ ಹೊಂದಿರುವ 30 ಚದರ ಮೀಟರ್ ಕಾರ್ಪೆಟ್ ಪ್ರದೇಶದ ವರೆಗೆ ಮನೆಗಳ ನಿರ್ಮಾಣ ಬೆಂಬಲಿಸುತ್ತದೆ. ರಾಜ್ಯ / ಕೇಂದ್ರಾಡಳಿತವು ಕೇಂದ್ರದಿಂದ ಯಾವುದೇ ವರ್ಧಿತ ಹಣಕಾಸಿನ ನೆರವು ಇಲ್ಲದೆ ಸಮಾಲೋಚಿಸಿ ರಾಜ್ಯ ಮಟ್ಟದಲ್ಲಿ ಮನೆ ಮತ್ತು ಇತರ ಸೌಲಭ್ಯಗಳನ್ನು ಗಾತ್ರ ನಿರ್ಧರಿಸುವ ವಿಷಯದಲ್ಲಿ  ಅವಕಾಶ ಪಡೆದಿರುತ್ತದೆ.

ಪ್ರತಿ ಘಟಕದ ಮಿಷನ್ ಅಡಿಯಲ್ಲಿ ನಿರ್ಮಿಸಿದ ಮನೆಗಳ ಕನಿಷ್ಠ ಗಾತ್ರವು ನ್ಯಾಷನಲ್ ಬಿಲ್ಡಿಂಗ್ ಕೋಡ್ (ಎನ್ಬಿಸಿ) ಒದಗಿಸಿದ ಮಾನದಂಡಕ್ಕೆ ಅನುಗುಣವಾಗಿರಬೇಕು.ಆದಾಗ್ಯೂ, ಫಲಾನುಭವಿಗೆ ಅಗತ್ಯವಾದ ಭೂಮಿ ಲಭ್ಯವಿಲ್ಲದಿದ್ದರೆ, ಕಡಿಮೆ ಗಾತ್ರದ ಮನೆಯನ್ನು ನಿರ್ಮಾಣ ಮಾಡಲು SLSMC ಅನುಮೋದನೆ ಯನ್ನು ರಾಜ್ಯ / ಕೇಂದ್ರಾಡಳಿತ ಪಡೆಯಬೇಕು ನಂತರ , ಪ್ರದೇಶದ ಮೇಲೆ ಸೂಕ್ತ ನಿರ್ಧಾರ ಮಾಡಬಹುದು.

ಮಿಷನ್ ಅಡಿಯಲ್ಲಿ ಮನೆ ವಿನ್ಯಾಸ ಮತ್ತು ನ್ಯಾಷನಲ್ ಬಿಲ್ಡಿಂಗ್ ಕೋಡ್ನಲ್ಲಿ ಮತ್ತು ಇತರ ಸಂಬಂಧಿತ ಭಾರತೀಯ ಗುಣಮಟ್ಟ ದಳ (BIS) ಸಂಕೇತಗಳು ಅನುರೂಪವಾಗಿರುವ ರಚನಾತ್ಮಕ ಸುರಕ್ಷತೆ ಅವಶ್ಯಕತೆಗಳನ್ನು ಭೂಕಂಪ, ಪ್ರವಾಹ, ಚಂಡಮಾರುತ, ಭೂಕುಸಿತಗಳು ಇತ್ಯಾದಿ ವಿರುದ್ಧವಾಗಿ ಇರುವ ಗುಣಮಟ್ಟದ ಮನೆ ನಿರ್ಮಿಸಬೇಕು.

ಕೇಂದ್ರ ನೆರವು ಪಡೆದು ಮಿಷನ್ ಅಡಿಯಲ್ಲಿ ನಿರ್ಮಿಸಿದ ಮನೆ ಮನೆಯ ಸ್ತ್ರೀ ಹೆಸರಿನಲ್ಲಿ ಅಥವಾ ಮನೆಯ ಪುರುಷ ಮತ್ತು ಪತ್ನಿ ಜಂಟಿ ಹೆಸರಿನಲ್ಲಿರಬೇಕು, ಮತ್ತು ಯಾವುದೇ ವಯಸ್ಕ ಹೆಣ್ಣು ಸದಸ್ಯ ರಿಲ್ಲದ ಸಂದರ್ಭಗಳಲ್ಲಿ ಮಾತ್ರ ಕುಟುಂಬದ ಮನೆಯ ಪುರುಷ ಸದಸ್ಯ ಹೆಸರಲ್ಲಿರಬಹುದು.

ರಾಜ್ಯ / ಕೇಂದ್ರ ಸರ್ಕಾರ ಮತ್ತು ಅನುಷ್ಠಾನ ಏಜೆನ್ಸಿಗಳು ಮಿಷನ್ ಅಡಿಯಲ್ಲಿ ನಿರ್ಮಿಸಲಾಗುವ ಮನೆಗಳ ನಿರ್ವಹಣೆ ಆರೈಕೆಯನ್ನು ನಿವಾಸಿ ಕಲ್ಯಾಣ ಸಂಘ ಇತ್ಯಾದಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಸಂಘಗಳ ರಚನೆಗೆ ಪ್ರೋತ್ಸಾಹಿಸಬೇಕು.

ಮಿಷನ್ ಅಡಿಯಲ್ಲಿ ನಿರ್ಮಿಸಿದ ಮನೆ ಮನೆಯ ಸ್ತ್ರೀ ಹೆಸರಿನಲ್ಲಿ ಅಥವಾ ಮನೆಯ ಪುರುಷ ಮತ್ತು ಪತ್ನಿ ಜಂಟಿ ಹೆಸರಿನಲ್ಲಿರಬೇಕು, ಮತ್ತು ಯಾವುದೇ ವಯಸ್ಕ ಹೆಣ್ಣು ಸದಸ್ಯ ರಿಲ್ಲದ ಸಂದರ್ಭಗಳಲ್ಲಿ ಮಾತ್ರ ಕುಟುಂಬದ ಮನೆಯ ಪುರುಷ ಸದಸ್ಯ ಹೆಸರಲ್ಲಿರಬಹುದು.

ಅನುಷ್ಠಾನ ವಿಧಾನ

ಮಿಷನ್ ಫಲಾನುಭವಿಗಳ ಆಯ್ಕೆಯನ್ನು ನಗರ ಸ್ಥಳೀಯ ಸಂಸ್ಥೆ ಮತ್ತು ರಾಜ್ಯ ಸರ್ಕಾರಗಳು ನೀಡುವ ನಾಲ್ಕು ಸಂಸ್ಥೆ ಮೂಲಕ ಅಳವಡಿಸಲಾಗಿದೆ. ಈ ನಾಲ್ಕು ಸಂಸ್ಥೆ  ಈ ಕೆಳಗಿನಿಂತಿವೆ.

"ಇನ್ ಸೈತು" ಕೊಳೆಗೇರಿ ಮರು ನಿರ್ಮಾಣ

ಈ ಲಂಬ ಪರಿಕಲ್ಪನೆಯಲ್ಲಿ ಅರ್ಹ ಸ್ಲಂ ನಿವಾಸಿಗಳಿಗೆ ಮನೆಗಳನ್ನು ಒದಗಿಸಲು ಕೇಂದ್ರ ಸರ್ಕಾರ// ರಾಜ್ಯ ಸರ್ಕಾರಗ/ ಯುಎಲ್ಬಿ ಭೂಮಿ, ಖಾಸಗಿ  ವಲಯದ ಸಹ ಭಾಗಿತ್ವದಲ್ಲಿ "ಇನ್-ಸಿಟು"  " ಭೂಮಿ ಒಂದು ಸಂಪನ್ಮೂಲ" ಎಂದು ಪರಿಗಣಿಸಲಾಗಿದೆ. ಆದ್ದರಿಂದ ಕೊಳಚೆ  ಪುನರ್ನಿರ್ಮಾಣ ಕಡ್ಡಾಯವಾಗಿ ಡಿನೋಟಿಫೈ ಮಾಡಬೇಕು. ಎಲ್ಲಾ ಯೋಜನೆಗಳಲ್ಲಿ ಅರ್ಹ ಕೊಳೆಗೇರಿ ನಿವಾಸಿಗಳ ಪ್ರತಿ ಮನೆಗೆ ಸರಾಸರಿ 1 ಲಕ್ಷ ಪುನರ್ವಸತಿ ಅನುದಾನ

ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಮೂಲಕ ಕೈಗೆಟುಕುವ ವಸತಿ

ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಅಡಿಯಲ್ಲಿ, ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಮತ್ತು ಕಡಿಮೆ ವರಮಾನ ಗ್ರೂಪ್ (LIG) ಫಲಾನುಭವಿಗಳು ವಸತಿಗಾಗಿ ಹೊಸ ಮನೆಗಳ ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ ಮನೆಗಳ ನವೀಕರಣಕ್ಕೆ ಬ್ಯಾಂಕುಗಳು, ಹೌಸಿಂಗ್ ಫೈನಾನ್ಸ್ ಕಂಪನಿಗಳು ಮತ್ತು ಇತರ ಸಂಸ್ಥೆಗಳಿಂದ ಗೃಹ ಸಾಲದ ಪಡೆದುಕೊಳ್ಳಬೇಕಾಗುತ್ತದೆ. ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಕೇವಲ ರೂ6 ಲಕ್ಷ ವರೆಗೆ.  ಸಾಲದ ಮೊತ್ತದ  ಸಹಾಯ ಧನ ಸಾಲದ ದರದ   6.5%  15 ವರ್ಷಗಳ ಅವಧಿಗೆ ಅಥವಾ ಸಾಲದ ಅಧಿಕಾರಾವಧಿ ಇದರಲ್ಲಿ ಯಾವುದು  ಕಡಿಮೆ ಸಮಯವೂ  ಅದು. ನಿವ್ವಳ ಪ್ರಸ್ತುತ ಮೌಲ್ಯ (ಎನ್.ಪಿ.ವಿ) ಬಡ್ಡಿ ಸಹಾಯಧನ 9% ರಷ್ಟು ರಿಯಾಯಿತಿ ದರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. ರೂ6 ಲಕ್ಷ ಗೆ  ಮೀರಿದ  ಯಾವುದೇ ಹೆಚ್ಚುವರಿ ಸಾಲ. , ನಾನ್ ಸೂಬ್ಸಿಡೈಸ್ಡ್ (ರಿಯಾಯತಿ ಇಲ್ಲದ) ದರದಲ್ಲಿ ಇರುತ್ತದೆ. ಬಡ್ಡಿ ಸಹಾಯಧನ ಕಡಿಮೆ ಪರಿಣಾಮಕಾರಿ ವಸತಿ ಸಾಲ ಮತ್ತು ಸಮವಾದ ಮಾಸಿಕ ಕಂತಿ ನ ರೂಪದಲ್ಲಿ  (ಇಎಂಐ) ಸಾಲ ಸಂಸ್ಥೆಗಳ ಮೂಲಕ ಫಲಾನುಭವಿಗಳ ಸಾಲ ಖಾತೆಗೆ ಮುಂಗಡವಾಗಿ ಜಮೆ ಮಾಡಲಾಗುವುದು.

ಈ ಘಟಕ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಕಾರ್ಪೆಟ್ ಪ್ರದೇಶ EWS ವರ್ಗದವರಿಗೆ 30 ಚ.ಮಿ. ಸೀಮಿತವಾಗಿದೆ  ಮತ್ತು LIG ವರ್ಗದವರಿಗೆ  60 ಚ.ಮಿ. ನಿಗದಿಪಡಿಸಲಾಗಿದೆ. ಅಂದರೆ ಫಲಾನುಭವಿಗಳು  ನಿಗದಿತ ಈ ಕಾರ್ಪೆಟ್ ಪ್ರದೇಶದ  ಮಿತಿಗಳನ್ನು ಮೀರಿದರೆ, ಈ ಯೋಜನೆಯ ಲಾಭ ಪಡೆಯಲು ಅನರ್ಹರಾಗುತ್ತಾರೆ ಎಂದು ಅರ್ಥ.

ಯೋಜನೆ ಅಡಿಯಲ್ಲಿ ಕೈಪಿಡಿ ತೋಟಿ , ಮಹಿಳೆ (ವಿಧವೆಯರಿಗೆ  ಆದ್ಯತೆ), ಪರಿಶಿಷ್ಟ ಜಾತಿ / ಪರಿಶಿಷ್ಟ / ಇತರೆ ಹಿಂದುಳಿದವರು, ಅಲ್ಪಸಂಖ್ಯಾತರು, EWS / LIG ವಿಭಾಗದವರು,ವಿಕಲಾಂಗ ವ್ಯಕ್ತಿಗಳು ಮತ್ತು ನಪುಂಸಕ ವರ್ಗದವರು ಇವರೆಲ್ಲರಿಗೆ ಆದ್ಯತೆ ನೀಡಲಾಗುವುದು

ಪಾಲುದಾರಿಕೆಯ ಮೂಲಕ ಕೈಗೆಟುಕುವ ವಸತಿ

ಈ ಮಿಷನ್  ರಾಜ್ಯ / ಕೇಂದ್ರಾಡಳಿತ / ನಗರಾಡಳಿತ  ಈ ವಿವಿಧ ಸಹಭಾಗಿತ್ವ ಅಡಿಯಲ್ಲಿ ನಿರ್ಮಿಸಲಾದ  ಪ್ರತಿ  EWS ಮನೆಗೆ  ರೂ1.5 ಲಕ್ಷ ದರದಲ್ಲಿ ಆರ್ಥಿಕ ನೆರವು ಒದಗಿಸುತ್ತದೆ.

ಕೈಗೆಟುಕುವ ವಸತಿ ಯೋಜನೆಯು ವಿವಿಧ ವಿಭಾಗಗಳ (EWS, LIG, ಮತ್ತು Hig ಇತ್ಯಾದಿ) ಮನೆಗಳ ಮಿಶ್ರಣವಾಗಿರಬಹುದು  ಆದರೆ ಯೋಜನೆಯ ಮನೆಗಳು  ಕನಿಷ್ಠ 35% EWS ವರ್ಗದವದಾಗಿರಬೇಕು.  ಕೇಂದ್ರದ ನೆರವೀನ  ಅರ್ಹತೆಯನ್ನು ಪಡೆಯಲು  ಕನಿಷ್ಠ 250 ಮನೆ ಹೊಂದಿರಬೇಕು.

ಫಲಾನುಭವಿಯ ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣಕ್ಕೆ ಸಹಾಯಧನ

ಈ  ಯೋಜನೆಯು ವೈಯಕ್ತಿಕವಾಗಿ ಮನೆ ನಿರ್ಮಿಸವವರ ಸಹಾಯಕ್ಕಾಗಿದೆ ಈ ಮಿಷನ್ನ ಯಾವುದೇ ಅಂಶದ  ಲಾಭ ವನ್ನು ಪಡೆಯದ

EWS ವರ್ಗ ದವರನ್ನು ಗಮನದಲ್ಲಿ ಇರಿಸಿಕೊಂಡು ಅವರು ನಿರ್ಮಿಸುವ  ಹೊಸ ಮನೆ ಅಥವಾ ಸದ್ಯದ ಮನೆಯ ನವೀಕರಣಕ್ಕೆ ಸಹಾಯಧನ ನೀಡಲಾಗುವುದು. ಇಂತಹ ಕುಟುಂಬಗಳು ರೂ1.5 ಲಕ್ಷ ವರೆಗೆ  ಕೇಂದ್ರದಿಂದ  ನೆರವು ಪಡೆಯಬಹುದು  ಮತ್ತುHFA POA ಭಾಗವಾಗಿರಬೇಕು.

ಫಲಾನುಭವಿಯು'ವಸತಿ ನಿರ್ಮಾಣದ ಸಹಾಯಧನದ

'ಮಿಷನ್ ಘಟಕದ  ಲಾಭಂಶ ಪಡೆಯಲು  ಅಸ್ತಿತ್ವದಲ್ಲಿರುವ ವಸತಿ ಮನೆಜೊತೆಗೆ ಕನಿಷ್ಠ ೯ ಚದರ ಅಡಿಯಸ್ಟು ಹೆಚ್ಚುವರಿ  ಕಾರ್ಪೆಟ್ ಹೊಂದಿರುವ ಅವಶ್ಯಕತೆ ಇರುತ್ತದೆ. ಈ ಸಹಾಯವನ್ನು ಪಡೆಯಲು ಇಚ್ಛಿಸುವ ಫಲಾನುಭವಿ

ವ್ಯಕ್ತಿ  ಸ್ವಾಮ್ಯದ ಭೂಮಿ ಲಭ್ಯತೆ ಬಗ್ಗೆ ಸಾಕಷ್ಟು ದಾಖಲಾತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಅನುಸಂಧಾನದಲ್ಲಿ ಒದಗಿಸಬೇಕಾಗುತ್ತದೆ. ಇಂತಹ ಫಲಾನುಭವಿಗಳು ಕೊಳಚೆಪ್ರದೇಶ  ಅಥವಾ ಕೊಳಚೆ ಪ್ರದೇಶ ಹೊರಗೆ ಎರಡೂ. ಪ್ರದೇಶ ದಲ್ಲಿ ವಾಸಿಸಿರಬಹುದು. ಫಲಾನುಭವಿಗಳು ಒಂದು ಕುಚ್ಚಾ ಅಥವಾ ಅರೆ ಪಕ್ಕಾ ಮನೆ ಹೊಂದಿದ್ದರೆ ಅದರ ಪುನರ್ನಿರ್ಮಾಣಕ್ಕೆ ಈ ಘಟಕ ಅಡಿಯಲ್ಲಿ ಒಳಪಡಬಹುದು. ಕೇಂದ್ರವು ರಾಜ್ಯ /ಕೇಂದ್ರಾಡಳಿತ ಶಿಫಾರಸುಗಳ ಪ್ರಕಾರ ಯೋಜನೆಗಳ ನೆರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡುವುದು.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿ ಇಲ್ಲಿ ಕ್ಲಿಕ್ಕಿಸಿ.

ಸಂಭಂದಿತ ಕೊಂಡಿಗಳು

  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಸಂಬಂಧಿಸಿದ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
  • ರಾಜ್ಯ ಮಟ್ಟದ ನೋಡಲ್ ಏಜೆನ್ಸಿಗಳು - ಸಂಪರ್ಕ ವಿವರಗಳು
  • ಮೂಲ : ಭಾರತ ಸರ್ಕಾರ ನಗರ ಬಡತನ ನಿರ್ಮೂಲನೆ ,ವಸತಿ ಸಚಿವಾಲಯ

    ಕೊನೆಯ ಮಾರ್ಪಾಟು : 7/20/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate