ಸಂಬಂಧ ಪ್ರಯೋಜನಗಳು/ಸೌಲಭ್ಯಗಳು ರಾಷ್ಟ್ರೀಯ ಸಾಮಾಜಿಕ ಸಹಾಚಿi ಕಾರ್ಯಕ್ರಮ (ಎನ್.ಎಸ್.ಎ.ಪಿ)ಯು ೧೫ ಆಗಸ್ಟ್ ೧೯೯೫ ರಿಂದ ಜಾರಿಗೆ ಬಂದಿದೆ. ಈ ಕಾರ್ಯಕ್ರಮವು ರಾಷ್ಟ್ರೀಯ ಸಾಮಾಜಿಕ ರಾಜ್ಯ ನೀತಿಯು ವೃದ್ಧರಿರುವ ಬಡಕುಟುಂಬಗಳು, ಕುಟುಂಬ ಪೋಷಣೆಗೆ ದುಡಿಯುವ ಸದಸ್ಯರ ಮತ್ತು ಮಾತೃಗಳು ಇರುವಂತಹ ಕುಟುಂಬಗಳಿಗೆ ಅನ್ವಯವಾಗುತ್ತದೆ. ಈ ಕಾರ್ಯಕ್ರಮವು ಮೂರು ಉಪಾಂಗಗಳನ್ನು ಹೊಂದಿದೆ. ಇವು ಯಾವುವೆಚಿದರೆ ೧) ರಾಷ್ಟ್ರೀಯ ವೃದ್ಧಾಪ್ಯ ವೇತನ ಕಾರ್ಯಕ್ರಮ (ಓಔಂPS-ಎನ್.ಒ.ಎ.ಪಿ.ಎಸ್) ೨) ರಾಷ್ಟ್ರೀಯ ಕುಟುಂಬ ಪ್ರಯೋಜನ ಕಾರ್ಯಕ್ರಮ (ಓಈಃS-ಎನ್.ಎಫ್.ಬಿ.ಎಸ್.)೩) ರಾಷ್ಟ್ರೀಯ ಮಾತೃತ್ವ/ತಾಯ್ತನ ಪ್ರಯೋಜನ ಕಾರ್ಯಕ್ರಮ (ಓಒಃS-ಎನ್.ಎಮ್.ಬಿ.ಎಸ್.) ಭಾರತದ ಸಂವಿಧಾನ ಅನುಚ್ಛೇದ - ಕೆಲಸಮಾಡುವ ಹಕ್ಕು, ಶಿಕ್ಷಣ ಮತ್ತು ಕೆಲವು ಸಚಿದರ್ಭಗಳಲ್ಲಿ ಸಾರ್ವಜನಿಕ ಒತ್ತಾಸೆಯನ್ನು ಹೊಂದುವ ಹಕ್ಕು. ರಾಜ್ಯಗಳು ತಮಗೆ ಇರುವ ಆರ್ಥಿಕ ಸಾಮರ್ಥ್ಯಕ್ಕೆ ಮತ್ತು ಅಭಿವೃದ್ಧಿಗೆ ಅನುಸಾರವಾಗಿ ಕೆಲಸದ ಹಕ್ಕು, ಶಿಕ್ಷಣ ಮತ್ತು ಸಂಧರ್ಭೋಚಿತ ಎಂದರೆ ನಿರುದ್ಯೋಗ, ವೃದ್ಧಾಪ್ಯ, ಖಾಯಿಲೆ, ಅಂಗವಿಕಲತೆ, ಮತ್ತು ಇತರೆ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಸಚಿರಕ್ಷಿಸಲು ಮುಂದಾಗಿರುತ್ತವೆ. ಅನುಚ್ಛೇದ-೪೨ ಕೆಲಸದ ಪರಿಸ್ಥಿತಿಗಳಲ್ಲಿ ಮತ್ತು ತಾಯ್ತನಕ್ಕೆ ಸಂಬಂಧಿಸಿದ ಪರಿಹಾರ ಕಾರ್ಯಕ್ರಮಗಳಲ್ಲಿ ನ್ಯಾಯಯುತವಾದ ಮತ್ತು ಮಾನವೀಯತೆಯಿಂದ ಕೂಡಿದ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು. ರಾಷ್ಟ್ರೀಯ ವೃದ್ಧಾಪ್ಯ ಪಿಂಚಣೆ ಯೋಜನೆ (ಎನ್.ಒ.ಎ.ಪಿ.ಎಸ್.) ಈ ಕಾರ್ಯಕ್ರಮವನ್ನು ರಾಜ್ಯಗಳಲ್ಲಿ ಜಾರಿಗೊಳಿಸಲು ಕೇಂದ್ರದ ನೆರವು ಕೆಳಕಂಡ ಅರ್ಹತೆಗಳಿಗೆ ಅನುಗುಣವಾಗಿ ದೊರಕುತ್ತದೆ. ಅರ್ಜಿದಾರನ/ಳ (ಪುರುಷ/ಮಹಿಳೆ)ಯ ವಯಸ್ಸು ೬೫ ಅಥವಾ ಇದಕ್ಕಿಂತ ಹೆಚ್ಚಾಗಿರಬೇಕು. ಅರ್ಜಿದಾರನಿ/ಳಿಗೆ(ನಿUತಿಕರು) ಜೀವನಾದಾರಕ್ಕಾಗಿ ಯಾವುದೇ ವಿಧವಾದ ಸತತವಾದ ಆದಾಯವು ತನ್ನದೇ ಹಣಕಾಸಿನ ಮೂಲ ಅಥವಾ ಕುಟುಂಬದ ಸದಸ್ಯರು ಅಥವಾ ಇನ್ನಾವುದೇ ಮೂಲಗಳಿಂದ ಇರುವುದಿಲ್ಲ. ವೃದ್ಧಾಪ್ಯ ವೇತನವು ರೂ ೭೫/- ಗಳಿಗೆ ನಿಗದಿಪಡಿಸಲಾಗಿದ್ದು ಇದಕ್ಕಾಗಿ ಕೇಂದ್ರ ಸರ್ಕಾರದ ಹಕ್ಕು ಭಾಧ್ಯತೆ ಇದೆ. ರಾಷ್ಟ್ರೀಯ ಕುಟುಂಬ ಸೌಲಭ್ಯ ಪ್ರಯೋಜನ ಕಾರ್ಯಕ್ರಮ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ ಜೀವನಾಧಾರಕ್ಕೆ ಇದ್ದ ವ್ಯಕ್ತಿಯು ಮರಣ ಹೊಂದಿದರೆ ಅಂತಹ ಕುಟುಂಬಗಳಿಗೆ ನೀಡಲಾಗುತ್ತದೆ. ಕೇಂದ್ರದಿಂದ ಬೆಂಬಲ/ನೆರವು ಕೆಳಕಂಡ ಅರ್ಹತೆಗಳಿಗೆ ಅನುಗುಣವಾಗಿ ದೊರೆಯುತ್ತದೆ. ಕುಟುಂಬದ ಜೀವನಾಧಾರಕ್ಕೆ ಪ್ರಧಾನವಾದ ವ್ಯಕ್ತಿ ಪುರುಷ ಯಾ ಮಃಇಳೆ ಆಗಿದ್ದು ಕುಟುಂಬದ ಒಟ್ಟು ಆದಾಯಕ್ಕೆ ಅವರ ಕೊಡುಗೆಯು ಪ್ರಧಾನವಾಗಿರಬೇಕು. ಮರಣ ಹೊಂದಿದ ಪ್ರಧಾನ ವ್ಯಕ್ತಿಯು ಗಂಡಾಗಲೀ, ಹೆಣ್ಣಾಗಲೀ ಅವರ ವಯಸ್ಸು ೧೮ ರಿಂದ ಹೆಚ್ಚು ಮತ್ತು ೬೫ ಕ್ಕಿಂತ ಕಡಿಮೆ ಇರಬೇಕು. ಹೀಗೆ ನಿUತಿಕವಾದಂತಹ ಕುಟುಂಬವು ಕೇಂದ್ರ ಸರ್ಕಾರವು ನಿಗದಿಗೊಳಿಸಿದ ಬಡತನರೇಖೆಗಿಂತ ಕಡಿಮೆ ಇರುವ ಅಂಶಗಳನ್ನೊಳಗೊಂಡ ಅರ್ಹತೆ ಪಡೆದಿರಬೇಕು. ಕುಟುಂಬದ ಪ್ರಧಾನ ವ್ಯಕ್ತಿಯು ಮರಣ ಹೊಂದಿದ ಸಂದರ್ಭದಲ್ಲಿ ನಯಸರ್ಗಿಕ/ಅಪಘಾತ ಯಾವುದೇ ಕಾರಣವಾಗಿರಲಿ ಇಚಿತಹ ಕುಟುಂಬಗಳಿಗೆ ರೂ. ೧೦,೦೦೦/- ಗಳ ಉಪಕಾರವನ್ನು ಧನಸಹಾಯದ ಮೂಲಕ ನೀಡಲಾಗುತ್ತದೆ. ಸ್ಥಳೀಯ ವಿZರಣೆಯ ಬಳಿಕ ಕುಟುಂಬದಲ್ಲಿ ಬದುಕಿರುವ ವ್ಯಕ್ತಿಗೆ ಈ ಹಣವನ್ನು ಕೊಡಲಾಗುತ್ತದೆ. ರಾಷ್ಟ್ರೀಯ ತಾಯ್ತನ ಯೋಜನೆ (ಎನ್.ಎಮ್.ಬಿ.ಎಸ್.) ಈ ಯೋಜನೆಯಡಿ, ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬದ ಗರ್ಭಿಣಿ ಮಹಿಳೆಗೆ ಒಟ್ಟು ಹಣದ ಸಹಾಯವನ್ನು ನೀಡಲಾಗುತ್ತದೆ. ಈ ಪ್ರಯೋಜನವನ್ನು ೧೯ ರಿಂದ ಮೇಲ್ಪಟ್ಟ ವಯಸ್ಸಿನ ಗರ್ಭಿಣಿ ಮಹಿಳೆಗೆ ಮೊದಲ ಎರಡು ಮಕ್ಕಳ ಜನನಕ್ಕೆ ಮಾತ್ರ ನೀಡಲಾಗುತ್ತದೆ. ಕೇಂದ್ರ ಸರ್ಕಾರವು ಬಡತನಕ್ಕೆ ಗುರುತಿಸಿರುವ ಆಧಾರಾಂಶಗಳನ್ನು ಗುರುತಿಸಿರುವ ಅರ್ಹತೆಗಳನ್ನು ಪರಿಗಣಿಸಿ ಅಂತಹ ಕುಟುಂಬಗಳಿಗೆ ನೀಡಲಾಗುತ್ತದೆ. ಈ ಪ್ರಯೋಜನದ ಭತ್ಯೆಯ ಮೊತ್ತ ರೂ. ೫೦೦/- ಮಾತೃತ್ವದ ಭತ್ಯೆಯನ್ನು ೧೨-೮ ವಾರಗಳ ಪ್ರಸವಕ್ಕೆ ಮುನ್ನ ಗರ್ಭಿಣಿಗೆ ಒಂದೇ ಕಂತಿನಲ್ಲಿ ನೀಡಲಾಗುತ್ತದೆ. ತಾಯ್ತನದ ಭತ್ಯೆಯನ್ನು ಸರಿಯಾದ ನಿಗದಿತ ಸಮಯಕ್ಕೆ ಸಿಗುವ ಹಾಗೆ ನೋಡಿಕೊಳ್ಳಬೇಕು. ತಡ ಆದ ಸಂದರ್ಭಗಳಲ್ಲಿ ಮಗುವಿನ ಜನನ ಆದ ನಂತರ ಕೂಡ ಫಲಾನುಭವಿಗೆ ಕೊಡಬಹುದಾಗಿದೆ. ಉದ್ದೇಶಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೆ ಜಾರಿಗೊಳಿಸಿರುವ ಅಥವಾ ಭವಿಷ್ಯದಲ್ಲಿ ಕೊಡಬೇಕೆಂದುಕೊಂಡಿರುವ ಯೋಜನೆಗಳಲ್ಲದೆ ಎನ್.ಎಸ್.ಎ.ಪಿ.ಯು ಶೇ ೧೦೦/- ರಷ್ಟು ಕೇಂದ್ರಸರ್ಕಾರದ ಅನುದಾನ ಯೋಜನೆಯಾಗಿದ್ದು, ನಿರ್ದಿಷ್ಟ ಪ್ರಮಾಣದ ಕನಿಷ್ಠ ಸಾಮಾಜಿಕ ನೆರವನ್ನು ನೀಡುತ್ತದೆ. ದೇಶದಾದ್ಯಂತ ಫಲಾನುಭವಿಗಳಿಗೆ ಯಾವುದೇ ತಡೆಯಿಲ್ಲದೆ, ಸಾಮಾಜಿಕ ನೆರವನ್ನು ನೀಡುವುದಕ್ಕಾಗಿ ಕೇಂದ್ರ ಸರ್ಕಾರವು ಶೇ ೧೦೦% ರಷ್ಟು ನೆರವನ್ನು ನೀಡುತ್ತದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಯಾವುದೇ ಸಾಮಾಜಿಕ ನೆರವಿನ ಯೋಜನೆಯ ವೆಚ್ಚವನ್ನು ಅಡ್ಡಿಪಡಿಸುವುದಿಲ್ಲ ಮತ್ತು ರಾಜ್ಯಸರ್ಕಾರ/ಕೇಂದ್ರಾಡಳಿತ ಪ್ರದೇಶಗಳು ಸಾಮಾಜಿಕ ನೆರವಿನ ಯೋಜನೆಗಳನ್ನು ಎಷ್ಟು ವ್ಯಾಪಕವಾಗಿ ಬೇಕಾದರೂ ಕೈಗೊಳ್ಳಬಹುದಾಗಿದೆ. ಬಡತನ ನಿವಾರಣೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಗಳೊಂದಿಗೆ ಸಂಯೋಜಿಸಲು ಎನ್.ಎಸ್.ಎ.ಪಿ.ಯು ಅವಕಾಶ ಕಲ್ಪಿಸಿದೆ. ಉದಾ: ತಾಯ್ತನ ನೆರವು ಯೋಜನೆಯನ್ನು ತಾಯ್ತನ ಮತ್ತು ಶಿಶು ಸಂರಕ್ಷಣೆ ಯೋಜನೆಯೊಂದಿಗೆ ಸಂಯೋಜಿಸಬಹುದಾಗಿದೆ. ಯೋಜನೆಯ ಅನುಷ್ಟಾನಗೊಳಿಸುವಿಕೆ ಎನ್.ಎಸ್.ಎ.ಪಿ. ಯಡಿ ಬರುವ ಯೋಜನೆಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಂಚಾಯತ್ ಮತ್ತು ಪೌರಸಭೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎನ್.ಎಸ್.ಎ.ಪಿ.ಯ ಮಾರ್ಗದರ್ಶಿಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಂದೊಂದು ನೋಡಲ್ ಇಲಾಖೆಗಳನ್ನು ಗುರುತಿಸಿ ವಹಿಸುತ್ತದೆ. ನೋಡಲ್ ಇಲಾಖೆಯ ಕಾರ್ಯದರ್ಶಿಯನ್ನು ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಎಸ್.ಎಸ್.ಎಪಿಯ ನೋಡಲ್ ಕಾರ್ಯದರ್ಶಿಯಾಗಿರುತ್ತಾರೆ. ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿರುತ್ತದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಆಯಾ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಜಿಲ್ಲಾ ನ್ಯಾಯಾಧೀಶ/ಜಿಲ್ಲಾಧಿಕಾರಿಯವರಿಗೆ, ಜಿಲ್ಲಾ ಮಟ್ಟದಲ್ಲಿ ಜಾರಿಗೊಳಿಸುವ ಅಧಿಕಾರವನ್ನು ರಚಿಸುವಂತೆ, ಸಭಾಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಜಿಲ್ಲಾಧಿಕಾರಿ ಅಥವಾ ಅಧಿಕಾರ ವಹಿಸಿಕೊಂಡಿರುವ ಯಾವುದೇ ನೋಡಲ್ ಅಧಿಕಾರಿಯು ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ, ಪ್ರಯೋಜನವನ್ನು ವಿತರಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ವಿತರಣಾ ಅಧಿಕಾರಿಗಳು ಪ್ರಯೋಜನವನ್ನು ನೀಡುವ ವಿವಿಧ ವಿಧಾನಗಳನ್ನು ಅಂದರೆ ನೇರವಾಗಿ ಹಣವನ್ನೇ ಪಾವತಿಸುವ ಹಾಗೆ ಮಾರ್ಗದರ್ಶಿಯಲ್ಲಿ ಸೂಚಿಸಿರುವಂತೆ ಅನುಸರಿಸಬಹುದಾಗಿದೆ. ಗ್ರಾಮ ಪಂಚಾಯಿತಿ/ಪೌರಸಭೆಗಳು ಎನ್.ಐ.ಎ.ಪಿ ಯೋಜನೆಯಲ್ಲಿ ಫಲಾನುಭವಿಗಳ ಗುರುತಿಸುವಿಕೆಯಲ್ಲಿ ಪ್ರಮುಖವಾದ ಹಾಗೂ ಪರಿಣಾಮಕಾರಿ ಪಾತ್ರವನ್ನು ವಹಿಸಬೇಕಾಗುತ್ತದೆ. ರಾಜ್ಯ ಸರ್ಕಾರಗಳು ಎನ್.ಬಿ.ಎ.ಪಿ.ಎಸ್. ಎನ್.ಎಫ್.ಬಿ.ಎಸ್. ಎನ್.ಎಮ್.ಬಿ.ಎಸ್. ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಪಂಚಾಯಿತಿ/ಪುರಸಭೆಗಳು ಸೂಕ್ತವಾದ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ, ಗ್ರಾಮಪಂಚಾಯ್ತಿ, ನೆರೆಹೊರೆ ಸಮಿತಿ, ಮೊಹಲ್ಲಾ ಸಮಿತಿಯ ನೆರವನ್ನು ಪಡೆಯಬಹುದಾಗಿದೆ. ಕೇಂದ್ರದ ನೆರವಿನ ಎನ್.ಬಿ.ಎ.ಪಿ.ಎಸ್. ಎನ್.ಎಫ್.ಬಿ.ಎಸ್. ಮತ್ತು ಎನ್.ಎಮ್.ಬಿ.ಎಸ್.ಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಯೋಜನ ಭತ್ಯೆಗಳನ್ನು ಸಾರ್ವಜನಿಕ ಸಭೆಗಳು ಎಂದರೆ; ಹಳ್ಳಿಗಳಲ್ಲಿ ಗ್ರಾಮ ಸಭೆ, ನೆರೆಹೊರೆಸಮಿತಿಸಭೆ ಪಟ್ಟಣ ಪ್ರದೇಶಗಳಲ್ಲಿ ಮೊಹಲ್ಲಾ ಸಮಿತಿ ಸಭೆಗಳಲ್ಲಿ ವಿತರಿಸಬಹುದಾಗಿದೆ. ಎನ್.ಎಸ್.ಎ.ಪಿ ಯನ್ನು ಪಡೆಯುವ ವಿಧಾನವನ್ನು ಜನರಿಗೆ ತಿಳಿಯಪಡಿಸುವ ಜವಾಬ್ದಾರಿಯನ್ನು ಪಂಚಾಯ್ತಿ/ಪುರಸಭೆಗಳಿಗೆ ವಹಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳನ್ನು ಜನರನ್ನು ಪ್ರೋತ್ಸಾಹಗೊಳಿಸುವಂತೆ ಬಳಸಿಕೊಳ್ಳಬಹುದಾಗಿದೆ. ಮೂಲ: ಪೋರ್ಟಲ್ ತಂಡ