ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಯುವ ಸಬಲೀಕರಣ

ನಮ್ಮ ಸಮಾಜ, ಕನಾðಟಕ, ಭಾರತ ಮತ್ತು ವಿಶ್ವದ ಸವಾðಗೀಣ ಅಭಿವೃದ್ಧಿಗೆ ಪೂರಕವಾಗುವಂತೆ ಯುವ ಜನರನ್ನು ಪ್ರೇರೇಪಿಸಲು ಅನುವು ಮಾಡಲು ಅವರನ್ನು ತಲುಪಿ, ತೊಡಗಿಸಿಕೊಂಡು ಸಬಲೀಕರಣಗೊಳಿಸುವುದು ಸಬಲೀಕರಣಗೊಳಿಸುವುದು.

ದೃಷ್ಟಿಕೋನ

ನಮ್ಮ ಸಮಾಜ, ಕನಾðಟಕ, ಭಾರತ ಮತ್ತು ವಿಶ್ವದ ಸವಾðಗೀಣ ಅಭಿವೃದ್ಧಿಗೆ ಪೂರಕವಾಗುವಂತೆ ಯುವ ಜನರನ್ನು ಪ್ರೇರೇಪಿಸಲು ಅನುವು ಮಾಡಲು ಅವರನ್ನು ತಲುಪಿ, ತೊಡಗಿಸಿಕೊಂಡು ಸಬಲೀಕರಣಗೊಳಿಸುವುದು ಗೊಳಿಸುವುದು

ಕಾರ್ಯ ಬದ್ಧತೆ

ಕನಾðಟಕದ ಯುವಜನರಿಗಾಗಿ ಉತ್ತಮ, ಉಜ್ವಲ, ನ್ಯಾಯಯುತ, ಶೋಭಾಯಮಾನವಾದ ನಾಳೆಗಳನ್ನು ಸೃಷ್ಠಿಸುವುದು.

ಇತಿಹಾಸ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು 1969 ರಲ್ಲಿ ಯುವಜನ ಸೇವಾ ನಿರ್ದೇಶನಾಲಯವನ್ನಾಗಿ ಯುವಜನರ ಕ್ರಿಯಾಶೀಲತೆಯನ್ನು ರಾಷ್ಟ್ರ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಲು ಸ್ಥಾಪಿಸಲಾಯಿತು. ಇಲಾಖೆಯನ್ನು ವಿಭಾಗ ಮಟ್ಟದ ಮತ್ತು ಜಿಲ್ಲಾ ಮಟ್ಟದಲ್ಲಿ ಕಛೇರಿಗಳನ್ನು ತೆರೆಯುವ ಮೂಲಕ 1975 ರಲ್ಲಿ ಮತ್ತು ತಾಲೂಕು ಅಧಿಕಾರಿಗಳನ್ನು 1977 ರಲ್ಲಿ ನೇಮಿಸುವುದರ ಮೂಲಕ ಪುನರ್ರಚಿಸಲಾಯಿತು. ಕರ್ನಾಟಕ ರಾಜ್ಯ ಸ್ಪೋರ್ಟ್ಸ ಕೌನ್ಸಿಲ್ ನ್ನು 1980 ರಲ್ಲಿ ಇಲಾಖೆಯಲ್ಲಿ ವಿಲೀನಗೊಳಿಸಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯ ಯುವನೀತಿಯನ್ನು 2013ರಲ್ಲಿ ಕರ್ನಾಟಕ ಸರ್ಕಾರವು ಅಂಗೀಕರಿಸಿದ ಹಿನ್ನೆಲೆಯಲ್ಲಿ ಯುವನೀತಿಯ ಶಿಫಾರಸ್ಸಿನಂತೆ ಇಲಾಖೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ನಿರ್ದೇಶಕರು/ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಪದನಿಮಿತ್ತ ಮಹಾನಿರ್ದೇಶಕರು, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಹಾಗೂ ಕ್ರಿಡಾಂಗಣ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿಗಳು ಆಗಿರುತ್ತಾರೆ.

ಡಾ|| ಎನ್. ನಾಗಾಂಬಿಕಾ ದೇವಿ, ಭಾ.ಆ.ಸೇ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಹೆಚ್.ಎಸ್. ವೆಂಕಟೇಶ್, ಐ.ಪಿ.ಎಸ್. ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಮಾಜಿ ಕ್ರೀಡಾಪಟುಗಳಿಗೆ ಕುಸ್ತಿ ಮಾಸಾಶನ

ಕಷ್ಟದ ಪರಿಸ್ಥಿಯಲ್ಲಿರುವ ಕುಸ್ತಿ/ಕ್ರೀಡಾ ಪಟುಗಳಿಗೆ ಮಾಸಾಶನ ನೀಡುವ ಯೋಜನೆಯನ್ನು ಜಿಲ್ಲಾ ಪಂಚಾಯತ್ ವಲಯದಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅನುಷ್ಠಾನಗೊಳಿಸುತ್ತಿದೆ. ಸದರಿ ಯೋಜನೆಯಡಿ ಪ್ರಸ್ತುತ ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ ರೂ 750/- ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ರೂ 1000/- ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ರೂ 1500/- ಗಳ ಮಾಸಾಶನವನ್ನು ನೀಡಲಾಗುತ್ತಿದೆ. ಮಾಸಾಶನಕ್ಕಾಗಿ ನಿಗದಿಗೊಳಿಸಲಾದ ಸಾಮಾನ್ಯ ಅರ್ಹತಾ ಷರತ್ತುಗಳು:

 • ಅರ್ಜಿದಾರರು ಕನಿಷ್ಠ 50 ವರ್ಷ ವಯಸ್ಸಿನವರಾಗಿರಬೇಕು. ಈ ಮಿತಿಯನ್ನುಅರ್ಜಿದಾರರು ಕ್ರೀಡೆಯಲ್ಲಿ / ಕುಸ್ತಿಯಲ್ಲಿ ತೊಡಗಿದ್ದಾಗ ಅಂಗವಿಕಲತೆ ಹೊಂದಿದ್ದಲ್ಲಿ ದಾಖಲೆ ಆಧಾರಗಳ ಮೇಲೆ ಸಡಿಲಗೊಳಿಸಲಾಗುವುದು. ವಯಸ್ಸಿನ ದೃಢೀಕರಣವನ್ನು ಸರ್ಕಾರದ ಆರೋಗ್ಯ ಇಲಾಖೆ ಜಿಲ್ಲಾ ಸರ್ಜನ್ರವರು ಪರಿಶೀಲಿಸಿ ನೀಡಿರಬೇಕು.
 • ಧನ ಸಹಾಯವನ್ನು ಕರ್ನಾಟಕದಲ್ಲಿ ಹುಟ್ಟಿದವರಿಗೆ ಮಾತ್ರ ಅಥವಾ ಕರ್ನಾಟಕದಲ್ಲಿ 20 ವರ್ಷ ಮೇಲ್ಪಟ್ಟು ವಾಸಿಸುತ್ತಿರುವವರಿಗೆ ಮಾತ್ರ ನೀಡತಕ್ಕದ್ದು. ವಾಸದ ಬಗ್ಗೆ ಪ್ರಮಾಣ ಪತ್ರ ತತ್ಸಬಂಧ ತಹಶೀಲ್ದಾರರು ನೀಡಿರಬೇಕು.
 • ಅರ್ಜಿದಾರರು ವಾರ್ಷಿಕ ಆದಾಯ ಎಲ್ಲಾ ಮೂಲಗಳು ಸೇರಿ ರೂ 20,000/- ಗಳು ಮೀರಿರಬಾರದು. ಆದಾಯ ಪ್ರಮಾಣ ಪತ್ರ ತತ್ಸಬಂಧ ತಹಶೀಲ್ದಾರರು ನೀಡಿರಬೇಕು.
 • ಮಾಸಾಶನದ ಬೇರೆ ಯಾವುದೇ ಇಂತಹ ಧನ ಸಹಾಯ ಪಡೆಯುತ್ತಿರಬಾರದು. ವೃದ್ದಾಪ್ಯ ವೇತನ ಪಡೆಯುತ್ತಿದ್ದರೆ ಅರ್ಜಿದಾರರ ವಾರ್ಷಿಕ ಆದಾಯಕ್ಕೆ ಇದನ್ನು ಲೆಕ್ಕ ಹಾಕಬೇಕು ಮತ್ತು ಆದಾಯ ಮಿತಿ ರೂ 20,000/- ಮೀರಿರಬಾರದು.
 • ಧನ ಸಹಾಯಕ್ಕಾಗಿ ನಿಗಧಿತ ಅರ್ಜಿಯನ್ನು ತುಂಬಿ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಅರ್ಜಿಗೆ ಲಗತ್ತಿಸಿ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಬೇಕು. ಅರ್ಜಿದಾರರ ಜಿಲ್ಲೆಗೆ ಸಂಬಂಧಪಟ್ಟ ಸಹಾಯಕ ನಿರ್ದೇಶಕರುಗಳ ( ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ) ಮೂಲಕ ಸಲ್ಲಿಸಬೇಕು ಮತ್ತು ಸಹಾಯಕ ನಿರ್ದೇಶಕರುಗಳು(ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ) ತತ್ಸಬಂಧ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸದರಿ ಅರ್ಜಿಗಳ ಅಂಶಗಳನ್ನು ಮತ್ತು ದಾಖಲೆಗಳನ್ನು ಸ್ಥಳೀಯ ವಿಚಾರಣೆಯಿಂದ ದೃಢೀಕರಿಸಿದ ನಂತರ ಸರ್ಕಾರದ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇವರಿಗೆ ಮಾಸಾಶನ ಮಂಜೂರಾತಿಗಾಗಿ ಶಿಫಾರಸ್ಸು ಮಾಡಬೇಕು.
 • ಆಯಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ಅರ್ಜಿಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಲು ಮತ್ತು ಧನ ಸಹಾಯಕ್ಕಾಗಿ (ಮಾಸಾಶನ) ಸರ್ಕಾರಕ್ಕೆ ಅವಶ್ಯಕ ಶಿಫಾರಸ್ಸು ಮಾಡಲು ಅಧಿಕಾರ ಹೊಂದಿರಬೇಕು.
 • ಒಂದು ವೇಳೆ ಅರ್ಜಿದಾರರು ಮಾನ್ಯತೆ ಪಡೆದ ಪಂದ್ಯಾವಳಿಗಳಲ್ಲಿ ಭಾಗವಹಿದ್ದಾಗ ಆಕಸ್ಮಿಕ ಘಟನೆಯಿಂದ ಶಾಶ್ವತವಾಗಿ ಅಸಮರ್ಥರಾದರೆ ಅಂಥವರಿಗೆ ಧನ ಸಹಾಯ ಮಂಜೂರು ಮಾಡಲು ಸರ್ಕಾರದ ಅನುಮೋದನೆಯನ್ನು ಪ್ರತಿಯೊಂದು ಅರ್ಜಿದಾರರ ವಿಷಯದ ಅರ್ಹತೆಗನುಗುಣವಾಗಿ ಪಡೆಯಬೇಕಾಗಿರುತ್ತದೆ.
 • ಅರ್ಜಿದಾರರು ಅವರ ಕ್ರೀಡಾ ಕ್ಷೇತ್ರದಲ್ಲಿ ನಿಜವಾಗಿಯೂ ನಿಪುಣರಾಗಿರಬೇಕು. ಅದಕ್ಕೆ ಆಧಾರವಾಗಿ ಕ್ರೀಡಾ ಪ್ರಮಾಣ ಪತ್ರಗಳನ್ನು ಮತ್ತು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬಡತನದಲ್ಲಿದ್ದಾರೆ ಎಂಬುದನ್ನು ವಿಚಾರಣೆ ಸಂದರ್ಭದಲ್ಲಿ ಪರಿಶೀಲನಾ ಅಧಿಕಾರಿ ದೃಢೀಕರಿಸಿಕೊಳ್ಳಬೇಕು.
 • ಅರ್ಜಿದಾರರು ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿಯನ್ನು ಬಹಿರಂಗಗೊಳಿಸಬೇಕು.
 • ಶಿಫಾರಸ್ಸು ಆಗಿರುವ ಅರ್ಜಿಗಳನ್ನುಸ್ವೀಕರಿಸಿದ ನಂತರ ಸರ್ಕಾರದ ಪರಿಶೇಲನೆ ನಂತರ ಧನ ಸಹಾಯವನ್ನು ಮಂಜೂರು ಮಾಡಲಾಗುತ್ತದೆ.
 • ಅರ್ಜಿದಾರರು ಸತ್ಯಾಂಶಗಳನ್ನು ನೀಡುವಲ್ಲಿ ಮರೆಮಾಚಿರುವುದು ಅನಂತರ ಕಂಡು ಬಂದಲ್ಲಿ/ಗೊತ್ತಾದಲ್ಲಿ ಅಂಥವರ ಮಾಸಾಶನವನ್ನು ರದ್ದುಗೊಳಿಸುವುದರ ಜೊತೆಗೆ ಅವರಿಗೆ ಕೊಟ್ಟ ಧನ ಸಹಾಯ(ಮಾಸಾಶನ) ವನ್ನು ವಸೂಲು ಮಾಡುವ ಅಧಿಕಾರ ಹೊಂದಿರುತ್ತದೆ.

ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆ

ರಾಜ್ಯದಲ್ಲಿಕ್ರೀಡೆಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕ್ರೀಡಾಪಟುಗಳ ಅಪಘಾತ, ಆರೋಗ್ಯಭದ್ರತೆಹಾಗೂ ಸುರಕ್ಷತೆಗಾಗಿ ವಿಶೇಷವಾದ ಅಲ್ಲದೆಅತಿವಿನೂತನ “ಯುವ ಕ್ರೀಡಾ ಅಂಜೀವಿನಿವಿಮಾ ಯೋಜನೆ” ಯನ್ನು ಪ್ರಾರಂಭಿಸಿದೆ. ಕರ್ನಾಟಕವನ್ನು ಅಂತರ್ರಾಜ್ಯ, ಅಂತರ್ರಾಷ್ಟ್ರಹಾಗೂರಾಷ್ಟ್ರಮಟ್ಟದಲ್ಲಿಪ್ರತಿನಿಧಿಸಿ ಭಾಗವಹಿಸುವ ಎಲ್ಲಾ ಕ್ರೀಡಾ ಪಟುಗಳಿಗಾಗಿ ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

ಅರ್ಹ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆಯಾ ಜಿಲ್ಲೆಗಳ ಸಹಾಯಕ ನಿರ್ದೇಶಕರ ಕಛೇರಿಗಳನ್ನು ಸಂಪರ್ಕಿಸಲು ಕೋರಿದೆ.

ವೈಶಿಷ್ಟತೆ

 • ಅಪಘಾತ, ಆರೋಗ್ಯ, ಭದ್ರತೆಹಾಗೂಸುರಕ್ಷತೆಯಕಾಳಜಿ ಸುಮಾರು 10,000 ಕ್ರೀಡಾ ಪಟುಗಳಿಗೆವಿಮಾಪಾಲಿಸಿಲಭ್ಯ.
 • ಅಂತರ್ರಾಜ್ಯ, ಅಂತರ್ರಾಷ್ಟ್ರಹಾಗೂರಾಷ್ಟ್ರೀಯ ಕ್ರೀಡಾ ಪಟುಗಳಿಗೆ ಮತ್ತು ತರಬೇತುದಾರರಿಗೆ ಇದೊಂದು ವರದಾನ.
 • ಕ್ರೀಡಾ ಸಾಮಗ್ರಿ / ವಸ್ತುಗಳನಷ್ಟಪರಿಹಾರ.
 • ಕ್ರೀಡಾಪಟುಗಳ ಸನಿಹದ ಸಂಬಂಧಿಗಳಿಗೆ ಹಾಗೂ ಜೋತೆಗಿದ್ದ 3ನೇ ವ್ಯಕ್ತಿಗಳಿಗೆ ಅಪಘಾತದ ನಷ್ಟಪರಿಹಾರ.
 • ಕ್ರೀಡಾಪಟುಗಳಿಗೆ ಅವಲಂಬಿತರಿಗೆ ಆಶ್ರಯ.
 • ಸರಳವಾರ್ಷಿಕ ನವೀಕರಣ ಸೌಲಭ್ಯ

ಅರ್ಹತೆ ಹಾಗೂ ನಿಬಂಧನೆ:

ಅರ್ಹತೆ:

ರಾಜ್ಯ, ಅಂತರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧೀಸುವ ಎಲ್ಲಾ ಕ್ರೀಡಾಪಟುಗಳು ಹಾಗೂ ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕ್ರೀಡಾ ವಿದ್ಯಾರ್ಥೀಗಳು, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಮಾನ್ಯತೆ ಪಡೆದ ಕ್ರೀಡಾ ಸಂಸ್ಥೇಗಳ ತರಬೇತುದಾರರು ಅರ್ಹರು.

ವಯೋಮಿತಿ :

ಕನಿಷ್ಠ 07 ವರ್ಷ ಹಾಗೂ ಗರಿಷ್ಠ 35 ವರ್ಷ, ತರಬೇತುದಾರರಿಗೆ 18-35 ವರ್ಷ. ಅವಧಿ: ವಿಮೆ ಅಳವಡಿಕೆಯ ದಿನದ ಒಂಧು ವರ್ಷದಿದವರೆಗೆ ವಿಮೆ ಚಾಲ್ತಿಯಲ್ಲಿರುತ್ತದೆ.

ಪ್ರೀಮಿಯಂ:

ಕ್ರೀಡಾಪಟುಗಳಿಗೆ ವಿಮಾಯೋಜನೆಯ ಸಂಪೂರ್ಣ ಉಚಿತ (ಯಾವುದೇ ಮೊತ್ತ ಪಾವತಿಸಬೇಕಾಗಿಲ್ಲ). ಯುವ ಕ್ರೀಡಾ ಸಂಜೀವನಿ ಯೋಜನೆಯನ್ನು ರಾಜ್ಯದ ಸುಮಾರು 10,000 ಕ್ರೀಡಾಪಟುಗಳಿಗೆ ಅಳವಡಿಸಲು ಉದ್ದೇಶಿಸಲಾಗಿದ್ದು, ರಾಜ್ಯ, ಅಂತರ್ ರಾಷ್ಟ್ರ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ಹಾಗೂ ಕ್ರೀಡಾ ಶಾಲೆ ಮತ್ತು ನಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಮಾನ್ಯತೆ ಪಡೆದ ಕ್ರೀಡೆ ಸಂಸ್ಥೇಗಳು ನಡೆಸುವ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾ ವಿದ್ಯಾರ್ಥಿಗಳು ಇದರ ಸುಪಯೋಗ ಪಡೆಯಬಹುದು.

ಕ್ರ.ಸಂ

ವಿವರ

ಪ್ರೀಮಿಯಂದರ(ಇಲಾಖೆಯಿಂದ ಪಾವತಿಸಲಾಗುವುದು)

ಕ್ರೀಡಾ ಗಂಟುಕಳೆದುಹೋದಲ್ಲಿ /ನಷ್ಟವಾದಲ್ಲಿ ಹೆಚ್ಚುವರಿ

ಮರಣವಿಮಾಮೊತ್ತ

ವೈದ್ಯಕೀಯವಿಮಾಮೊತ್ತ

1

ಅಂತರ್ರಾಷ್ಟದ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ

801/-

5000/-

5,00,000/-

3,00,000/-

2

ತರಬೇತುದಾರರಿಗೆ

912/-

5000/-

5,00,000/-

1,50,000/-

3

ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಘವಹಿಸುವ ಕ್ರೀಡಾಪಟುಗಳಿಗೆ

489/-

3000/-

2,00,000/-

1,50,000/-

4

ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಕರ್ನಾಟಕದ ಕ್ರೀಡಾಪಟುಗಳಿಗೆ

372/-

1,00,000/-

75,000/-

ಇತರೆ ಸೌಲಭ್ಯಗಳು

 • ವೈಯಕ್ತಿಕ ಅಪಘಾತ ವಿಮಾ ಸುರಕ್ಷತೆ ( ಕನಿಷ್ಠ ರೂ 25,000 ದಿಂದ ಗರಿಷ್ಠ ರೂ 1,00,000 ತನಕ)
 • ವಿಕಲಾಂಗ ವಿಮಾ ಸುರಕ್ಷತೆ
 • ಕ್ರೀಡಾ ಸಾಮಗ್ರಿ / ವಸ್ತು ಕಳವು ಅಥವಾ ನಷ್ಟ ಪರಿಹಾತ ಆಸ್ಪತ್ರೆ ಶುಶ್ರೂಷೆ ವೆಚ್ಚ.
 • ಆಸ್ಪತ್ರೆ-ಔಷಧೀಯ ವೆಚ್ಚಗಳಿಗಾಗಿ ನಗದುರಹಿತ ಸೇವೆ(ಕ್ಯಾಶ್ ಲೆಸ್ ಸರ್ವಿಸ್)ಲಭ್ಯ
 • ಅಂತ್ಯ ಸಂಸ್ಕಾರ, ಮಕ್ಕಳ ವಿಧ್ಯಾಭ್ಯಾಸ ಅಥವಾ ಉದ್ಯೋಗ ನಷ್ಟದ ಪರಿಹಾರ
 • ಇತರೆಲ್ಲಾ ಸೌಲಭ್ಯಗಳ ವಿವರಗಳನ್ನು, ಯುವ ಕ್ರೀಡಾ ಸಂಜೀವಿನಿ ವಿಮಾಯೋಜನೆಯ ವಿವರವಾದ ರೂಪರೇಷೆಗಳನ್ನು ಕ್ರೀಡಾಪಟುಗಳಿಗೆ ವಿಮಾ ಪಾಲಿಸಿ ಮಾಡುವ ಸಂದರ್ಭದಲ್ಲಿ ಒದಗಿಸಲಾಗುವುದು.

ಸರ್ಕಾರದ ಆದೇಶ ಸಂ:ಯುಸೇಇ/278/ಯುಸೇಕ್ರೀ/2013 ದಿನಾಂಕ: 30.11.2013 ಮತ್ತು ಸರ್ಕಾರದ ಆದೇಶ ಸಂ: ಯುಸೇಇ/450/ಯುಸೇಕ್ರೀ/2014 ದಿನಾಂಕ:15.10.2014 ನಗದು ಪುರಸ್ಕಾರ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳು ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿತಂದ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವತಿಯಿಂದ ನಗದು ಪ್ರೋತ್ಸಾಹ ಧನವನ್ನು ನೀಡಿ ಗೌರವಿಸುವ ಸಲುವಾಗಿ ಏಕ ರೀತಿಯ ಪುರಸ್ಕಾರ ನೀಡುವ ಮಾದರಿಯಲ್ಲಿಯೇ ಈ ನಗದು ಬಹುಮಾನವನ್ನು ಮಾರ್ಗಸೂಚಿಗಳನ್ವಯ ನಿಗಧಿಪಡಿಸಲಾಗಿದೆ.

ಕ್ರ.ಸಂ ವಿವರ ಚಿನ್ನ(ರೂ.ಲಕ್ಷಗಳಲ್ಲಿ) ಬೆಳ್ಳಿ(ರೂ.ಲಕ್ಷಗಳಲ್ಲಿ) ಕಂಚು(ರೂ.ಲಕ್ಷಗಳಲ್ಲಿ)
1 ಒಲಂಪಿಕ್ 100.00 50.00 25.00
2 ವರ್ಲ್ಡ್ ಕಪ್ 50.00 25.00 10.00
3 ವಿಶ್ವ ಚಾಪಿಯನ್ ಷಿಪ್ ಕ್ರೀಡಾಕೂಟಗಳು(ವರ್ಲ್ಡ್ ಚಾಂಪಿಯನ್ ಷಿಪ್) ಏಷಿಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳು 25.00 15.00 8.00
4 ಏಷ್ಯನ್ ಚಾಂಪಿಯನ್ ಷಿಪ್ 10.00 7.00 5.00
5 ಕಿರಿಯರ ಕಾಮನ್ ವೆಲ್ತ್ 15.00 10.00 5.00
6 ಎಸ್.ಎ.ಎ.ಆರ್.ಸಿ/ಎಸ್ ಎಎಎಪ್ 4.00 2.00 1.00
7 ನ್ಯಾಷನಲ್ ಚಾಂಪಿಯನ್ ಷಿಪ್ ಇಂಟರ್ ಸ್ಟೇಟ್, ಇಂಟರ್ ಜೋನಲ್ ಮತ್ತು  ಫೆಡರೇಷನ್ ಕಪ್ 2.00 1.00 0.50
8 ಜೂನಿಯರ್ ನ್ಯಾಷನಲ್ 0.50 0.25 0.15
9 ಸಬ್ ಜೂನಿಯರ್ ನ್ಯಾಷನಲ್ 0.25 0.15 0.10
 • ಈ ವಿಶೇಷ ನಗದು ಪುರಸ್ಕಾರವನ್ನು (ವಿಶೇಷ ನಗದು ಪ್ರೋತ್ಸಾಹ) ಕರ್ನಾಟಕ ಕ್ರೀಡಾಪಟುಗಳಿಗೆ ಮಾತ್ರ ನೀಡತಕ್ಕದ್ದು.
 • ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾರತ ಸರ್ಕಾರದಿಂದ ಅಂಗೀಕೃತವಾದಂತಹ ರಾಷ್ಟ್ರೀಯ ಕ್ರೀಡಾ ತಂಡಗಳಿಗೆ ಆಯ್ಕೆಯಾಗಿ ಅಂತರರಾಷ್ಟ್ರೀಯ ಕ್ರೀಡಾಕೂಟ/ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ಮಾತ್ರ ನೀಡತಕ್ಕದ್ದು
 • ಕ್ರೀಡಾಪಟುಗಳು ಕರ್ನಾಟಕದ ಮೂಲದವರಾಗಿದ್ದು, ರಾಜ್ಯದ ಹೊರಗಡೆ ವಾಸಿಸುತ್ತಿರುವ ಬೇರೆ ರಾಜ್ಯ ಅಥಾವಾ ಕ್ರೀಡಾ ತಂಡಗಳನ್ನು(Services, Airlines, Railways Invitation Tournament)ಪ್ರತಿನಿಧಿಸುವ ಕ್ರೀಡಾಪಟುಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 • ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಕ್ರೀಡಾಪಟು ಯಾವ ರಾಜ್ಯವನ್ನು ಅಥಾವಾ ಯಾವ ಸಂಸ್ಥೆಯನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದಾರೆ ಎಂಬುದರ ಬಗ್ಗೆ ಭಾರತ ಸರ್ಕಾರದ  ಮಾನ್ಯತೆ ಪಡೆದ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಪೇಡರೇಷನನ್/ಭಾರತೀಯ ಕ್ರೀಡಾ ಪ್ರಾಧಿಕಾರ ಇವರಿಂದ ದೃಢೀಕರಣ ಪತ್ರ ಒದಗಿಸಬೇಕು.
 • ಅಂತರರಾಷ್ಟ್ರೀಯ ಆಹ್ವಾನ ಕ್ರೀಡಾಕೂಟಗಳಲ್ಲಿ() ಭಾಗವಹಿಸಿದ ಕ್ರೀಡಾಪಟುಗಳು ಈ ವಿಶೇಷ ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 • ಯಾವುದೇ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ದೆಯಲ್ಲಿ ನೇರ ಪ್ರವೇಶ ಪಡೆದಂತಹ ಕ್ರೀಡಾಪಟುಗಳಿಗೆ ಈ ಪುರಸ್ಕಾರಕ್ಕೆ ಅವಕಾಶವಿರುವುದಿಲ್ಲ.
 • ಅಂತರರಾಷ್ಟ್ರೀಯ ಸಂಸ್ಥೆ ಮತ್ತು ಇತರೆ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ನಡೆಸುವ ಅಧಿಕೃತ ಚಾಪಿಯನ್ ಷಿಪ್ ಗಳಿಗೆ ಮಾತ್ರ ನಗದು ಪುರಸ್ಕಾರ ನೀಡಲಾಗುವುದು.(ಅಂತರರಾಷ್ಟ್ರೀಯ ಒಲಂಪಿಕ್ ಸಂಸ್ಥೆಯ ಮಾನ್ಯತೆ ಪಡೆಯದೇ ಇರುವ ಯಾವುದೇ ಫಡೆರೇಶನ್ ನಡೆಸುವ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ವಿಶೇಷ ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.)
 • ಈ ವಿಶೇಷ ನಗದು ಪುರಸ್ಕಾರರವನ್ನು ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ ನೆಡೆದ ಪಂದ್ಯಾವಳಿಗಳ ಸಾಧನೆಯನ್ನು ಪರಿಶೀಲಿಸಿ ಮಾರ್ಚ್ ಮಾಹೆಯಲ್ಲಿ ಪುರಸ್ಕಾರಿಸಲಾಗುವುದು.
 • ಆ ರೀತಿ ಭಾಗವಹಿಸಿದ ಕ್ರೀಡಾಪಟುಗಳು ರಾಜ್ಯ ಕ್ರೀಡಾ ಸಂಸ್ಥೆಯ ಮುಖಾಂತರ ದೃಢೀಕರಣದೊಂದಿಗೆ ದಾಖಲಾತಿಯನ್ನು ಸಲ್ಲಿಸಬೇಕಾಗುತ್ತದೆ.
 • ಅಂತರರಾಷ್ಟ್ರೀಯ ವೆಟರನ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ವಿಶೇಷ ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 • ವಿಶೇಷ ಪರಿಗಣಿಸಬೇಕಾದ ನಗದು ಪುರಸ್ಕಾರಕ್ಕೆ ಕ್ರೀಡಾ ಚಾಂಪಿಯನ್ಷಿಪ್ಗಳು:
 • ಒಲಂಪಿಕ್
 • ವರ್ಲ್ಡ್ ಕಪ್
 • ಕಾಮನ್ ವೆಲ್ತ್
 • ಏಷ್ಯನ್ ಚಾಂಪಿಯನ್ ಷಿಪ್/ ಏಷ್ಯನ್ ಗೇಮ್ಸ್
 • ಕಿರಿಯರ ಕಾಮನ್ ವೆಲ್ತ್
 • ಸಾರ್ಕ್/ಸಾಪ್

ರಾಜ್ಯದ ಕ್ರೀಡಾಪಟುಗಳು ಅಧಿಕೃತವಾಗಿ ಭಾರತವನ್ನು ಪ್ರತಿನಿಧಿಸಿ ಅಂತರ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ರೂ.50,000/- ಗಳ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ. ಸಾಮಾನ್ಯ ಕ್ರೀಡಾಕೂಟಗಳ ತುಲನೆಯಲ್ಲಿ ಪ್ರತಿವರ್ಷ ಆಯೋಜಿಸಲಾಗುವ ವಿಕಲಚೇತನ ಕ್ರೀಡಾಕೂಟಗಳ ಸಂಖ್ಯೆ ಮತ್ತು ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗಿದ್ದು, ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ವಿಕಲಚೇತನ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವತಿಯಿಂದ ನಗದು ಪ್ರೋತ್ಸಾಹ ಧನವನ್ನು ನೀಡಿ ಗೌರವಿಸುವ ಸಲುವಾಗಿ ಈ ಕೆಳಗಿನಂತೆ ನಗದು ಬಹುಮಾನವನ್ನು ಅನುಬಂಧದಲ್ಲಿ ನಮೂದಿಸಿರುವ ಮಾರ್ಗಸೂಚಿಗಳನ್ವಯ ನಿಗಧೀಪಡಿಸಲಾಗಿದೆ.

ಕ್ರ.ಸಂ ವಿವರ ಚಿನ್ನ(ರೂ.ಲಕ್ಷಗಳಲ್ಲಿ) ಬೆಳ್ಳಿ(ರೂ.ಲಕ್ಷಗಳಲ್ಲಿ) ಕಂಚು(ರೂ.ಲಕ್ಷಗಳಲ್ಲಿ)
1 ಪ್ಯಾರಾ ಒಲಂಪಿಕ್/ಕಾಮನ್ ವೆಲ್ತ್ 25.00 15.00 10.00
2 ಐವಾಸ್/ವಿಕಲಚೇತನರ/ಕುಬ್ಜರ ವರ್ಲ್ಡ್ ಕಪ್-ವರ್ಲ್ಡ್ ಗೇಮ್ಸ್ 10.00 7.00 5.00
3 ಪ್ಯಾರಾ ಏಷ್ಯನ್ ಗೇಮ್ಸ್/ಏಷ್ಯನ್ ಚಾಪಿಯನ್ ಷಿಪ್ಸ್ 5.00 3.00 1.50
4 ಅಂತರ್ ರಾಷ್ಟ್ರೀಯ ಅಂಗವಿಕಲರ ಚಾಂಪಿಯನ್ ಷಿಪ್ಸ್ 4.00 2.00 1.00
5 ನ್ಯಾಷನಲ್ ಗೇಮ್ಸ್ ಫಾರ್ ಡಿಸೇಬಲ್ಡ್ 2.00 1.00 0.50
6 ರಾಷ್ಟ್ರೀಯ ಅಂಗವಿಕಲರ ಚಾಂಪಿಯನ್ ಷಿಪ್ಸ್ 1.00 0.50 0.25
ಸರ್ಕಾರದ ಆದೇಶ ಸಂ:ಯುಸೇಇ/278/ಯುಸೇಕ್ರೀ/2013 ದಿನಾಂಕ 30.11.2013ರ ಮಾರ್ಗಸೂಚಿಗಳು:
 • ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿಕಲಚೇತನ ಕ್ರೀಡಾಪಟುಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ.
 • ಭಾರತ ಸರ್ಕಾರದಿಂದ ಅಂಗೀಕೃತವಾದಂತಹ ರಾಷ್ಟ್ರೀಯ ಕ್ರೀಡಾ ತಂಡಗಳಿಗೆ ಆಯ್ಕೆಯಾಗಿ ಅಂತರ್ ರಾಷ್ಟ್ರೀಯ ಕ್ರೀಡಾಕೂಟ/ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ ಕರ್ನಾಟಕದ ವಿಕಲಚೇತನ ಕ್ರೀಡಾಪಟುಗಳಿಗೆ ಮಾತ್ರ ನೀಡತಕ್ಕದ್ದು
 • ಕ್ರೀಡಾಪಟುಗಳು ಕರ್ಮಾಟದ ಮೂಲದವರಾಗಿದ್ದು, ಬೇರೆ ರಾಜ್ಯ ಅಥಾವಾ ಕ್ರೀಡಾ ತಂಡಗಳನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 • ಅಂತರ್ ರಾಷ್ಟ್ರೀಯ ಆಹ್ವಾನ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ವಿಕಲಚೇತನ ಕ್ರೀಡಾಪಟುಗಳು ಈ ವಿಶೇಷ ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 • ಅಂತರ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ವಿಕಲಚೇತನ ಕ್ರೀಡಾಪಟು ಯಾವ ರಾಜ್ಯವನ್ನು ಅಥಾವಾ ಯಾವ ಸಂಸ್ಥೆಯನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದಾರೆ ಎಂಬುದರರ ಬಗ್ಗೆ ಭಾರತ ಸರ್ಕಾರದ ಮಾನ್ಯತೆ ಪಡೆದ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್/ಭಾರತೀಯ ಕ್ರೀಡಾ ಪ್ರಾಧಿಕಾರ ಇವರಿಂದ ದೃಢೀಕರಣ ಪತ್ರ ಒದಗಿಸಬೇಕು.
 • ಯಾವುದೇ ಅಂತರ್ ರಾಷ್ಟ್ರೀಯ/ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ನೇರ ಪ್ರವೇಶ ಪಡೆದಂತಹ ವಿಕಲಚೇತನ ಕ್ರೀಡಾಪಟುಗಳಿಗೆ ಈ ಪುರಸ್ಕಾರಕ್ಕೆ ಅವಕಾಶವಿರುವುದಿಲ್ಲ.
 • ಅಂತರ್ ರಾಷ್ಟ್ರೀಯ ಸಂಸ್ಥೆ ಮತ್ತು ಇತರೆ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ನಡೆಸುವ ಅಧಿಕೃತ ಚಾಂಪಿಯನ್ ಷಿಪ್ ಗಳಿಗೆ ಮಾತ್ರ ನಗದು ಪುರಸ್ಕಾರ ನೀಡಲಾಗುವುದು. ಕರ್ನಾಟಕ ರಾಜ್ಯ ಹಾಗೂ ಭಾರತ ಸರ್ಕಾರದ ಮಾನ್ಯತೆ ಪಡೆಯದೇ ಇರುವ ಯಾವುದೇ ಪೇಡರೇಷನ್ ನಡೆಸುವ ಕ್ರೀಡೆಗಳಲ್ಲಿ ಭಾಗವಹಿಸಿದ ವಿಕಲಚೇತನ ಕ್ರೀಡಾಪಟುಗಳು ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 • ನಗದು ಪುರಸ್ಕಾರ ನೀಡುವ ಷರ್ಷದ ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ ನಡೆದ ಪಂದ್ಯಾವಳಿಗಳ ಸಾಧನೆಯನ್ನು ಪರಿಶೀಲೀಸಿ ಪುರಸ್ಕರಿಸಲಾಗುವುದು.
 • ಅಂಗವಿಕಲ, ಬುದ್ದಿಮಾಂದ್ಯ, ಕುಬ್ಜ ಕ್ರೀಡಾಪಟುಗಳು ವಿಕಲಚೇತನರಿಗೆ ನೀಡಲಾಗುವ ನಗದು ಪುರಸ್ಕಾರಕ್ಕೆ ಅರ್ಹರಿರುತ್ತಾರೆ.

ಶೈಕ್ಷಣಿಕ ಶುಲ್ಕ ಮರುಪಾವತಿ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿ ಮಾಡುವ ಯೋಜನೆ 2013-14ನೇ ಸಾಲಿನ ನೂತನ ಯೋಜನೆಯಾಗಿದ್ದು, ಪ್ರತಿ ವರ್ಷ ಜುಲೈ ಮಾಹಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಪ್ರಥಮ ಪಿ.ಯು.ಸಿ. ಯಿಂದ (ಈಜು ಮತ್ತು ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿ 5ನೇ  ತರಗತಿಯಿಂದ) ಸ್ನಾತಕೋತ್ತರ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ಕ್ರೀಡಾ ವಿದ್ಯಾರ್ಥೀಗಳಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಯೋಜನೆಯ ಮಾರ್ಗಸೂಚಿಗಳು

 • ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಘವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕವನ್ನು ಇಲಾಖೆಯಿಂಧ ಮರುಪಾವತಿ ಮಾಡುವ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
 • ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳ ಅಧಿಕೃತ ಶುಲ್ಕಗಳನ್ನು (ಸರ್ಕಾರದಿಂದ ನಿಗಧೀಪಡಿಸಿದ ಪ್ರವೇಶ ಶುಲ್ಕ, ಭೋಧನಾ ಶುಲ್ಕ) ಮಾತ್ರ ಮರುಪಾವತಿ ಮಾಡಲಾಗುವುದು. ಇದರಲ್ಲಿ ಕಟ್ಟಡ ಶುಲ್ಕ, ಡೋನೇಷನ್, ಇನ್ನಿತರೆ ಶುಲ್ಕಗಳನ್ನು ಪಾವತಿಸಲು ಅವಕಾಶವಿರುವುದಿಲ್ಲ.
 • ಆಯಾ ವರ್ಷದ ಶೈಕ್ಷಣಿಕ ಶೂಲ್ಕ ಮರುಪಾವತಿಯನ್ನು ಹಿಂಧಿನ ಶೈಕ್ಷಣಿಕ ವರ್ಷದ ಸಾಧನೆಯನ್ನು ಪರಿಗಣಿಸಿ ನೀಡಲಾಗುವುದು. (ಪ್ರತಿ ವರ್ಷ ಸಾಧನೆ ಮಾಡಿದಲ್ಲಿ ಮಾತ್ರ ಈ ಸೌಲಭ್ಯವನ್ನು ಮುಂದುವರಿಸಲಾಗುವುದು).
 • ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಪ್ರಥಮ ಪಿ.ಯು.ಸಿ ಯಿಂದ ಸ್ನಾತಕೋತ್ತರ ಪದವಿ (ವೃತ್ತಿಪರ ಕೋರ್ಸ್ ಗಳನ್ನೊಳಗೊಂಡಂತೆ) ವ್ಯಾಸಂಗ ಮಾಡುತ್ತಿರುವ ಕೇಂಧ್ರ, ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಕ್ರೀಡಾ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ, (ಜಿಮ್ನಾಸ್ಟಿಕ್ ಮತ್ತು ಈಜು ಕ್ರೀಢಾ ಪಟುಗಳಿಗೆ 5ನೇ ತರಗತಿಯಿಂಧ ಸ್ನಾತಕ್ಕೋತ್ತರ ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ಕ್ರೀಡಾಪಟುಗಳು ಅರ್ಹರಿರುತ್ತಾರೆ).
 • ಶೈಕ್ಷಣಿಕ ವರ್ಷದ ಪ್ರವೇಶ ಶೂಲ್ಕ, ಭೋದನಾ ಶುಲ್ಕ ಪಾವತಿಸಿದ ರಶೀದಿಗಳೋಂದಿಗೆ ಶಾಲಾ ಮುಖ್ಯೋಧ್ಯಾರು/ಕಾಲೇಜು ಪ್ರಾಂಶುಪಾಲರ ಮೂಲಕ ದೃಢೀಕರಿಸಿ ಸಂಬಂಧಪಟ್ಟ ಜಿಲ್ಲೆಯ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಶೀಫಾರಿಸ್ಸಿನೊಂದಿಗೆ ಸಲ್ಲಿಸತಕ್ಕದ್ದು.
 • ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಘವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಜೇತರಾದ ಕ್ರೀಡಾಪಟುಗಳು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾಋಎ. ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಘವಹಿಸುವಿಕೆ, ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಜೇತರ ಸಾಧನೆಯನ್ನು ಪರಿಗಣಿಸಲಾಗುವುದು.
 • ವಿಕಲಚೇತನ ಕ್ರೀಡಾಪಟುಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆ. ವಿಕಲಚೇತನ ಕ್ರೀಡಾಪಟುಗಳು ಕಡ್ಡಾಯವಾಗಿ ಸರ್ಕಾಋಇ ವೈದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
 • ಕರ್ನಾಟಕದ ನಿವಾಸಿಗಳಲ್ಲದ ಹಾಗೂ ರಾಜ್ಯವನ್ನು ಪ್ರತಿನಿಧೀಸದೇ ಇರುವ ಕ್ರೀಡಾಪಟುಗಳು, ರಾಜ್ಯದಲ್ಲಿ ವ್ಆಸಂಗ ಮಾಡುತ್ತಿಲ್ಲದ ಕ್ರೀಡಾ ವಿದ್ಯಾರ್ಥಿಗಳು ಶೈಕ್ಷಣಿಕ ಶೂಲ್ಕ ಮರುಪಾವತಿ ಯೋಜನೆಗೆ ಅರ್ಹರಾಗಿರುವುದಿಲ್ಲ.
 • ಕ್ರೀಡಾ ಸಾಧನೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು/ಫೆಡರೇಷನ್ ಗಳು ಆಯೋಜಿಸಿರುವ ಕ್ರೀಡಾ ಕೂಟದಲ್ಲಿ ಭಾಘವಹಿಸಿರುವ ಬಗ್ಗೆ ದಾಖಲಾಗಿರಬೇಕು.
 • ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ಆಹ್ವಾನ ಕ್ರೀಡಾಕೂಟಗಳಲ್ಲಿ ಭಾಘವಹಿಸಿರುವ ಕ್ರೀಡಾಪಟುಗಳು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.
 • ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಯಾವ ಕ್ರೀಡಾ ಸಂಸ್ಥೇಯ ಮೂಲಕ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ ಎಂಬುದರ ಬಗ್ಗೆ ಭಾರತ ಸರ್ಕಾರದ ಮಾನ್ಯತೆ ಪಡೆದ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫಡರೇಷನ್/ಭಾರತೀಯ ಕ್ರೀಡಾ ಪ್ರಾಧಿಕಾರ ಇವರಿಂದ ಪ್ರಮಾಣಿಕರಿಸಿದ ಮೂಲ ಪ್ರಮಾಣ ಪತ್ರಗಳನ್ನು ಪರಿಗಣಿಸಿ ಶೈಕ್ಷಣಿಕ ಶುಲ್ಕ ಮರುಪಾವತಿ ಪಡೆಯಲು ದೃಢೀಕರಣ ಪತ್ರದೊಂಧಿಗೆ ಅರ್ಜಿಯ ಜೊತೆಗೆ ಒದಗಿಸಬೇಕು.
 • ಯಾವುದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ಕ್ರೀಡಾ ಸ್ಪರ್ಧೆಯಲ್ಲಿ ನೇರ ಪ್ರವೇಶ ಪಡೆದಂತಹ ಕ್ರಿಡಾಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿ ಸೌಲಭ್ಯ ಪಡೆಯಲು ಅವಕಾಶವಿರುವುದಿಲ್ಲ.
 • ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದಿಂಧ ಅಧಿಕೃತ ಕ್ರೀಡಾ ಸಂಸ್ಥೆಗಳಿಂದ , ಸಂಘಟಿಸಲಾದ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ವಜೇತರಾದ ಕರ್ನಾಟಕ ರಾಜ್ಯದ ಕ್ರೀಡಾಪಟುಗಳು ಈ ಯೋಜನೆಗೆ ಅರ್ಹರಿರುತ್ತಾರೆ.
 • ಈ ಕೆಳಕಂಡ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಈ ಯೋಜನೆಯನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸಬಹುದು.
 • ಒಲಂಪಿಕ್ ಗೇಮ್ಸ್
 • ವರ್ಲ್ಡ್ ಚಾಂಪಿಯನ್ ಷಿಪ್
 • ಏಷಿಯನ್ ಚಾಂಪಿಯನ್ ಷಿಪ್
 • ಏಷಿಯನ್  ಗೇಮ್ಸ್
 • ಕಾಮನ್ ವೆಲ್ತ್ ಗೇಮ್ಸ್
 • ಕಾಮನ್ ವೆಲ್ತ್ ಚಾಂಪಿಯನ್ ಷಿಪ್
 • ಆಫ್ರೋ-ಎಷಿಯನ್ ಗೇಮ್ಸ್
 • ಎಸ್.ಎ.ಎಫ್. ಗೇಮ್ಸ್
 • ಇಂಟರ್ ನ್ಯಾಷನಲ್ ಮೀಟ್ಸ್
 • ನ್ಯಾಷನಲ್ ಗೇಮ್ಸ್
 • ನ್ಯಾಷನಲ್ ಚಾಂಪಿಯನ್ ಷಿಪ್
 • ಆಲ್ ಇಂಡಿಯಾ ಇಂಟರ್ ಜೋನಲ್ ಮೀಟ್ಸ್
 • ಎಸ್.ಜಿ.ಎಫ್.ಐ, ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಮೀಟ್ಸ್, ಆಲ್ ಇಂಡಿಯಾ ಪ್ರೀ ಯೂನಿವರ್ಸಿಟಿ ಮೀಟ್ಸ್.
 • ಭಾಋತ ಸರ್ಕಾರದ ಅಂಗೀಕೃತ ಕ್ರೀಡಾ ಫೆಡರೇಷನ್ ನಿಂದ ಸಂಘಟಿಸಲಾದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ/ಶಾಲಾ ಮಟ್ಟದ ಚಾಂಪಿಯನ್ ಷಿಪ್ / ಪಂಛಛಾಯತ್ ರಾಜ್ಯ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ ಕ್ರೀಡಾಕೂಟಗಳು.
 • ಭಾರತ ಕ್ರೀಡಾ ಪ್ರಾಧೀಕಾರದಿಂದ ಆಯೋಜಿಸಲಾದ ಅಖಿಲ ಭಾರತ ಗ್ರಾಮೀಣ ಕ್ರೀಡಾಕೂಟ.
 • ಭಾರತ ಕ್ರೀಡಾ ಪ್ರಾಧೀಕಾರದಿಂದ ಆಯೋಜಿಸಲಾದ ಅಖಿಲ ಭಾರತ ಮಹಿಳಾ ಕ್ರೀಡಾಕೂಟ.
 • ಪ್ಯಾರಾ ಒಲಂಪಿಕ್
 • ಪ್ಯಾರಾ ಏಷಿಯನ್ ಗೇಮ್ಸ್
 • IWAS / ವಿಕಲಚೇತನರ/ಕುಬ್ಬರ ವರ್ಲ್ಡ್ ಕಪ್
 • ಅಂಗವಿಕಲರ ವರ್ಲ್ಡ್ ಗೇಮ್ಸ್
 • ನ್ಯಾಷನಲ್ ಗೇಮ್ಸ್ ಫಾಋ್ ಡಿಸೇಬಲ್ಡ್
 • ಅಂತರಾಷ್ಟ್ರೀಯ / ರಾಷ್ಟ್ರೀಯ ಅಂಗವಿಕಲರ ಚಾಂಪಿಯನ್ ಷಿಪ್ಸ್

ವಿದ್ಯಾರ್ಥಿವೇತನ

2014-15 ನೇ ಸಾಲಿನಲ್ಲಿ ಪ್ರತಿಭಾವಂತ ಮಾಧ್ಯಮಿಕ/ಫೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.1000/-ರಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥವೇತನ ರಾಜ್ಯ ಸರ್ಕಾರದ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ ಪ್ರೌಢಶಾಲೆ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ವಾರ್ಷಿಕ ರೂ.10,000/- ರಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಇಲಾಖೆಯಲ್ಲಿ ಜಾರಿಯಲ್ಲಿದ್ದು. ಈ ಯೋಜನೆಯನ್ವಯ ಪ್ರಸ್ತುತ ಮಾಧ್ಯಮಿಕ ಅಥವಾ ಪ್ರೌಢಶಾಲೆಯಲ್ಲಿ ಓದುತ್ತಿರುವ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಸದರಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಕ್ರಿಡಾಪಟು ಈ ಕೆಳಗಿನ ಅರ್ಹತೆಗಳನ್ನು ಹೋಂದಿರಬೇಕಾಗಿರುತ್ತದೆ. ಅರ್ಜಿಯನ್ನು ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಮೂಲಕ ಸಲ್ಲಿಸಲು ಕೋರಲಾಗಿದೆ.

 • ಅರ್ಜಿದಾರರು 2014-15 ನೇ ಸಾಲಿನಲ್ಲಿ ವಿದ್ಯಾರ್ಥಿಯಾಗಿದ್ದು, ಮಾಧ್ಯಮಿಕ ಅಥವಾ ಪ್ರೌಢಶಾಲೆಯಲ್ಲಿ ಓದುತ್ತಿರಬೇಕು.
 • ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೋಂದಾಯಿತವಾದ ಕ್ರೀಡಾ ಸಂಸ್ಥೆಗಳು ದಿನಾಂಕ 01.01.2014 ರ ನಂತರ ನಡೆಸಿದ ರಾಜ್ಯ ಮಟ್ಟದ ಸ್ಪರ್ದೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿರಬೇಕು ಅಂದರೆ ಕ್ರೀಡಾ ಪಂದ್ಯಾವಳಿಗಳಲ್ಲಿನ ದಿನಾಂಕ 01.01.2014 ರಿಂದ 31.012.2014 ರ ಸಾಧನೆಯನ್ನು ಮಾತ್ರ ಪರಿಗಣಿಸಲಾಗುವುದು.
 • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನಡೆಸಿದ ರಾಜ್ಯ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ ಹಾಗೂ ಮಹಿಳಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಲ್ಲಿ ಅಥವಾ ರಾಷ್ಟ್ರೀಯ ಗ್ರಾಮೀಣ/ ಮಹಿಳಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾ ಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ.
 • ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಸ್ಕೂಲ್ ಗೇಮ್ಸ ಫೆಡರೇಷನ್ ಆಪ್ ಇಂಡಿಯಾ ಯೋಜನೆಯಡಿಯಲ್ಲಿ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಲ್ಲಿ ಅಥವಾ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ.
 • ಒಬ್ಬ ಕ್ರೀಡಾಪಟು ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕ ಒಂದೇ ಸ್ಕಾಲರ್ ಷಿಪ್ ಮೊತ್ತಕ್ಕೆ ಮಾತ್ರ ಅರ್ಹರಿರುತ್ತಾರೆ.
 • ವಿದ್ಯಾರ್ಥಿ ವೇತನದ ಮೊತ್ತವನ್ನು ವಾರ್ಷಿಕ ರೂ,10,000.00ಗಳನ್ನು ಮಾತ್ರ ಮಂಜೂರು ಮಾಡಲಾಗುವುದು.
 • ಅರ್ಜಿಗಳನ್ನು ದಿನಾಂಕ 31.01.2011ರ ಒಳಗೆ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಇವರ ಕಛೇರಿಗೆ ತಲುಪುವಂತೆ ಕಳುಹಿಸಬೇಕು. ತಡವಾಗಿ ಬಂದ  ಅರ್ಜಿಗಳನ್ನು ಯಾವುದೇ  ಕಾರಣ ನೀಡದೇ ತಿರಸ್ಕರಿಸಲಾಗುವುದು ಮತ್ತು ಈ ಬಗ್ಗೆ ಪತ್ರ ವ್ಯವಹಾರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
 • ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರುಗಳು ಮೇಲೆ ವಿವರಿಸಿದ ಅಂಶಗಳನ್ನು ಗಮನದಲ್ಲಿಟ್ಟು ವೈಯುಕ್ತಿಕ  ಆಸಕ್ತಿ ವಹಿಸಿ ಅರ್ಹ ವಿದ್ಯಾರ್ಥಿಗಳ ಅರ್ಜಿಯನ್ನು ಪರಿಶೀಲಿಸಿ ಅರ್ಹ ಅರ್ಜಿಗಳನ್ನು ಮಾತ್ರ ಶಿಫಾರಸ್ಸು ಮಾಡಲು ಹಾಗೂ ಶಿಫಾರಸ್ಸು ಮಾಡಲಾದ ಕ್ರೀಡಾಪಟುಗಳಿಂದ ರೂ.10,000/- ಗಳಿಗೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಮುಖಾಂತರ ಮುಂಗಡ ರಸೀದಿಯನ್ನು ತಪ್ಪದೇ ಪಡೆದು ಕಳುಹಿಸಿಕೊಡುವಂತೆ ಸೂಚಿಸಲಾಗಿದೆ.

ಯುವ ತರಬೇತಿ

ಯುವಜನರಿಗಾಗಿ ಜೀವನದ ವಿವಿಧ ಆಯಾಮಗಳಲ್ಲಿ ಯಶಸ್ವಿಯಾಗಲು ತರಬೇತಿ ಶಿಬಿರಗಳನ್ನು ನಡೆಸಲಾಗುವುದು. ಯುವ ಚೇತನ : ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯ, ನಾಯಕತ್ವ ಗುಣಗಳ ಬಗ್ಗೆ ಅರಿವು ಮೂಡಿಸುವ ತರಭೆತಿ ಕಾರ್ಯಕ್ರಮ. ಯುವ ಪ್ರೇರಣ: ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವ ತರಬೇಥಿ ಕಾರ್ಯಕ್ರಮ. ಯುವ ಸಂವಹನ: ಯುವಜನತೆಗೆ ಇತರರೊಂದಿಗೆ ವ್ಯವಹರಿಸಲು ಮತ್ತು ಭಾವನೆಗಳ ಅಭಿವ್ಯಕ್ತಿಗೆ ಹಾಗೂ ಯಶಸ್ವಿ ನಾಯಕತ್ವಕ್ಕಾಗಿ ಸಂವಹನ ಬಹುಮುಖ್ಯ ಮಾಧ್ಯಮವಾಗಿದ್ದು, ಅದಕ್ಕಾಗಿ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ತರಬೇತಿ ಶಿಬಿರ. ಈ ತರಬೇತಿಗಳನ್ನು ಆಯಾ ರಂಗಗಳಲ್ಲಿ ಅನುಭವ ಪಡೆದಿರುವ ಸಂಪನ್ಮೂಲ ವ್ಯಕ್ತಿಗಳಿಂದ ವೈಜ್ಞಾನಿಕ ಕ್ರಮದಲ್ಲಿ ನಡೆಸಲಾಗುವುದು. 16 ರಿಂದ 30 ವರ್ಷಗಳ ವಯೋಮಿತಿಯಲ್ಲಿನ ಎಲ್ಲಾ ಸ್ತರಗಳ ಯುವಜನರು (ಯುವಕ/ಯುವತಿ) ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು. ಯುವತಿಯರಿಗೆ  ಮತ್ತು ಯುವಕರಿಗೆ ಪ್ರತ್ಯೇಕವಾಗಿ 7 ರಿಂದ 10 ದಿನಗಳ ಅವಧಿಯ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗಿರುತ್ತದೆ. ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಜೊತೆಗೆ ತರಬೇತಿ ಬಂದು ಹೋಗುವ ಸಾಂನ್ಯ ಬಸ್ ದರವನ್ನು ಪ್ರಯಾಣಭತ್ಯೆಯಾಗಿ ನೀಡಲಾಗುವುದು. ತರಬೇತಿ ಸ್ಥಳ: ಯುವಜನ ತರಬೇಥಿ ಕೇಂದ್ರ, ಕುಂಬಳಘೋಡು, ಕೆಂಗೇರಿ, ಬೆಂಗಳೂರು ಮತ್ತು ಜನಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇಥಿ ಕೇಂದ್ರ, ವಿದ್ಯಾನಗರ, ಬೆಂಗಳೂರು. ಯುವಜನರಿಗೆ ಇಂದಿನ ಕಾಲಮಾನಕ್ಕೆ ತಕ್ಕಂತಹ ಆಧುನಿಕ ತಂತ್ರಜ್ಞಾನಗಳಲ್ಲಿ ಮತ್ತು ಕೌಶಲ್ಯಗಳಲ್ಲಿ ಪರಿಣತಿ ಪಡೆಯಲು ವಿಷಯತಜ್ಞರಿಂದ ತರಬೇತಿ ಶಿಬಿರಗಳನ್ನು ಬೆಂಗಳೂರಿನ ರಾಜ್ಯ ಯುವ ಕೇಂದ್ರದಲ್ಲಿ ನಡೆಸಲಾಗುತ್ತದೆ. ಛಾಯಾಚಿತ್ರಣ ತರಬೇತಿ, ವೀಡಿಯೋ ಚಿತ್ರಣ ತರಬೇತಿ, ಬ್ಯೂಟೀಷಿಯನ್ ತರಬೇತಿ, ಅಭಿನಯ ತರಬೇತಿ, ನಿರೂಪಣೆ ಮತ್ತು ವಾರ್ತಾ ವಾಚಕರ ತರಬೇತಿ, ಕರಕುಶಲ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ತರಬೇತಿಯ ಅವಧಿಯಲ್ಲಿ  ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ನೀಡಲಾಗುತ್ತದೆ. 16 ರಿಂದ 30 ವರ್ಷದ ಯುವಕ/ಯುವತಿಯರಿಗೆ ಈ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದಾಗಿದ್ದು, ತರಬೇತಿ ಪಡೆದವಗರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಅಳಿವಿನ ಅಂಚಿನಲ್ಲಿರುವ ಜಾನಪದ ನೃತ್ಯ ರೂಪಕ ಮತ್ತು ಶಾಸ್ತ್ರೀಯ ನೃತ್ಯ ರೂಪಕ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು.

ಯುವಜನ ಮೇಳಾ ಮತ್ತು ಯುವಜನೋತ್ಸವ

ಯುವಜನರಲ್ಲಿ ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಪ್ರತಿ ವರ್ಷ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಯುವ ಉತ್ಸವಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಯುವಜನರಿಗಾಗಿ ಶಾಸ್ತ್ರೀಯ ಸಂಗೀತ (ಕನರ್ಾಟಕ ಮತ್ತು ಹಿಂದುಸ್ತಾನಿ) ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಲಘು ವಾದ್ಯ, ಲಘು ವಾದ್ಯ, ಜಾನಪದ ಗೀತೆ, ಜಾನಪದ ನೃತ್ಯ, ಏಕಾಂಕ ನಾಟಕ ಹಾಗೂ ಚಚರ್ಾ ಸ್ಪಧರ್ೆಗಳನ್ನು ಏರ್ಪಡಿಸಲಾಗುವುದು.

ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ಕೇಂದ್ರ ಸಕರ್ಾರವು ಪ್ರತಿ ವರ್ಷ ಜನವರಿ ಮಾಹೆಯಲ್ಲಿ ರಾಷ್ಟ್ರ ಮಟ್ಟದ ಯುವಜನೋತ್ಸವವನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ರಾಜ್ಯಗಳ ಪ್ರತಿಭಾನ್ವಿತ ಯುವಜನರು 18 ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸುತ್ತಾರೆ. ಈ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಕನರ್ಾಟಕ ರಾಜ್ಯದಿಂದ ಯುವ ತಂಡವನ್ನು ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದ ಯುವಜನೋತ್ಸವಗಳಲ್ಲಿ ಸ್ಪಧರ್ೆಗಳನ್ನು ಆಯೋಜಿಸಿ ಆಯ್ಕೆ ಮಾಡಿ ನಿಯೋಜಿಸಲಾಗುವುದು.

ಭಾರತದ ಘನತೆವೆತ್ತ ಮಾಜಿ ರಾಷ್ಟ್ರಪತಿಗಳಾದ ಶ್ರೀ.ಎ.ಪಿ.ಜೆ. ಅಬ್ದುಲ್ ಕಲಾಂ ಇವರ ಕನಸಿನ ಭಾರತ ಸಂದೇಶವನ್ನು ರಾಜ್ಯದ ಪ್ರತಿ ಗ್ರಾಮಕ್ಕೂ ತಲುಪಿಸುವ ಉದ್ದೇಶದಿಂದ ಮತ್ತು ಯುವಜನರನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸುವ ದೃಷ್ಟಿಯಿಂದ ಪ್ರತಿ ಜಿಲ್ಲೆಯಲ್ಲಿಯೂ ಯುವಜನ ಸಮ್ಮೇಳನಗಳು, ಕಾಯರ್ಾಗಾರಗಳು ಮತ್ತು ಯುವ ತರಬೇತಿ ಶಿಬಿರಗಳನ್ನು ನಡೆಸಲು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಯುವಜನರನ್ನು ಹೆಚ್ಚು ಕ್ರೀಯಾಶೀಲರನ್ನಾಗಿಸುವ ದೃಷ್ಠಿಯಿಂದ ಪ್ರತಿ ಜಿಲ್ಲೆಯಲ್ಲಿಯೂ ಯುವಜನ ಸಮ್ಮೇಳನಗಳು, ಕಾಯರ್ಾಗಾರಗಳು, ಯುವ ತರಬೇತಿ ಶಿಬಿರಗಳನ್ನು ಹಾಗೂ ಜಿಲ್ಲಾ ಯುವ ಪ್ರಶಸ್ತಿಗಳನ್ನು ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ 15 ರಿಂದ 35 ವರ್ಷದೊಳಗಿನ ಪ್ರತಿಭಾನ್ವಿತ ಯುವಜನರಿಗಾಗಿ ಸಮ್ಮೇಳನ, ಕಾಯರ್ಾಗಾರ, ಹಾಗೂ ತರಬೇತಿ ಶಿಬಿರಗಳನ್ನು ನಡೆಸಲಾಗುವುದು.

ರಾಜ್ಯ ಯುವ ಪ್ರಶಸ್ತಿಗಳು

ಸಮಾಜದ ವಿವಿಧ ಕ್ಷೇತ್ರಗಳಾದ ಸಮಾಜ ಸೇವೆ: ರಾಷ್ಟ್ರೀಯ ಭಾವೈಕ್ಯತೆ: ಕ್ರೀಡೆ: ಸಾಕ್ಷರತೆ: ಆರೋಗ್ಯ: ತರಬೇತಿ: ಪರಿಸರ: ಶ್ರಮದಾನ ಶಿಬಿರ: ಸಾಂಸ್ಕೃತಿಕ: ಇತರೆ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಯುವಕ/ಯುವತಿಯರನ್ನು ಮತ್ತು ಯುವಕ/ಯುವತಿ ಸಂಘಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ರಾಜ್ಯ ಮಟ್ಟದಲ್ಲಿ 10 ವೈಯಕ್ತಿಕ ಪ್ರಶಸ್ತಿಗಳಿಗೆ ತಲಾ ರೂ.10,000/-ಗಳಂತೆ ಹಾಗೂ 2 ಸಾಂಘಿಕ ಪ್ರಶಸ್ತಿಗಳಿಗೆ ತಲಾ ರೂ.25,000/-ಗಳಂತೆ ನೀಡಿ ಗೌರವಿಸಲಾಗುವುದು.

ಯುವ ಸ್ಪಂದನ

ಯುವಜನರ ಅಭಿವೃದ್ಧಿ ಮತ್ತು ಸಬಲೀಕರಣದೊಂದಿಗೆ ಆಪ್ತ ಸಮಾಲೋಚನೆಯಂತಹ ಬೆಂಬಲ ಸೇವೆಗಳು

ಭಾರತೀಯ ಯುವಜನರ ಜನಸಂಖ್ಯೆಯು 30% ರಷ್ಟಿದ್ದು ಕರ್ನಾಟಕ ರಾಜ್ಯದ ಯುವಜನರ ಜನಸಂಖ್ಯೆ (2011 ರ ಸಮೀಕ್ಷೆಯ) ಯು 1.86 ಕೋಟಿ (ಒಟ್ಟು ಜನಸಂಖ್ಯೆ 34.6% ರಷ್ಟು 15-30 ರ ವಯಸ್ಸಿನವರು) ಮಾನವ ಅಭಿವೃದ್ಧಿ ವರದಿಯ 2012ರ ಪ್ರಕಾರ ಪ್ರಸ್ತುತ ಈಗಿನ ಯುವಜನರ ಜನಸಂಖ್ಯೆಯನ್ನು ಗಮನಿಸಲಾಗಿ ಮುಂದೆ 2050 ರಷ್ಟರಲ್ಲಿ  ವಯಸ್ಸಾದವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರಿರುತ್ತಾರೆಂದು ಹೇಳಿದರೆ ತಪ್ಪಾಗಲಾರದು. ಪ್ರಥಮ ಬಾರಿಗೆ ಮನಕುಲದ ಇತಿಹಾಸದಲ್ಲೇ ಹೆಚ್ಚಿನ ಯುವಜನರನ್ನು ಹೊಂದಿದಲ್ಲಿ ಗೌರವಯುತವಾದ ಜೀರುವುದಕ್ಕೆ ನಾಂದಿಯಾಗುತ್ತದೆ. ಇಂದಿನ ಯುವಜನರ ಹಾಗೂ ಮುಂದೆ ಹುಟ್ಟಲಿರುವ ಯುವ ಪೀಳಿಗೆಯ ಅಭಿವೃದ್ಧಿಯನ್ನು ಆಧಾರವಾಗಿಟ್ಟುಕೊಂಡು ಈ ಯೋಜನೆಯು ಯುವಜನರನ್ನು ಬಲಪಡಿಸಲು ಹಾಗೂ ಯುವಜನರ ವಿಷಯಗಳಿಗೆ ಸಂಬಂಧಿಸಿದಂತೆ ಪೂರಕ ಸೇವೆಗಳನ್ನು ಒದಗಿಸಿ ದಾರಿ ದೀಪವಾಗಲಿದೆ.

ಇಂದಿನ ಪರಿಸ್ಥಿತಿಯಲ್ಲಿ ಯುವಜನರು ಸಮಾಜಿಕ, ಮನೋಸಮಾಜಿಕ, ವರ್ತನೆಯ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಸಮಾಜದಲ್ಲಿ ಗೌರವಯುತವಾದ ಜೀವನವನ್ನು ನಡೆಸಲು ಪ್ರಮುಖವಾಗಿ ಸಮಾಜಿಕ ಸಂಸ್ಥೆಗಳಾದ ಕುಟುಂಬ ಸಂಬಂಧಿಗಳು, ಗೆಳೆಯರು, ಶಿಕ್ಷಕರು, ಉದ್ಯೋಗಸ್ಥರು ಮುಂತಾದವರಂದಿಗೆ ಸಮಾಜಿಕ ಸವಾಲುಗಳನ್ನು ಎದುರಿಸಬೇಕಾದಲ್ಲಿ ದೈಹಿಕ ಆಕಾರದ ಗ್ರಹಿಕ ಹಾಗೂ ಪರಸ್ಪರ ಸಮಾಜಿಕ ಸಂಬಂಧಗಳು ಮತ್ತು ಸಮಾಜಿಕ ಸಂಸ್ಥೆಗಳು ವ್ಯಾಪಕವಾಗುತ್ತವೆ. ಮಾನಸಿಕ ಮತ್ತು ಮನೋಸಮಾಜಿಕ ಸವಾಲುಗಳನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಅದು ಆತಂಕ, ಖಿನ್ನತೆಯಂತಹ ಹಾಗೂ ಸಂಬಂಧಾತ್ಮಕ ಸಮಸ್ಯೆಗಳಿಗೆ ಕಾರವಾಗಿ ಇಂತಹ ಮಾನಸಿಕ ಒತ್ತಡಗಳನ್ನು ನಿಭಾಯಿಸಲು ಯುವಜನರು ಮಾದಕ ವ್ಯಸನಿಗಳಂತಹ ಸಮಾಜಿಕ ಒತ್ತಡಗಳನ್ನು ನಿಭಾಯಿಸಲು ಯುವಜನರು ಮಾದಕ ವ್ಯಸನಿಗಂತಹ ಸಮಾಜಿಕ ಸಮಸ್ಯೆಗಳಿಗೆ ಬಲಿಯಾಗುವುದೆ, ದೈಹಿಕ ಮತ್ತು ಲೈಂಗಿಕ ಹಿಂಸೆಯ ಕೃತ್ಯಗಳಂತಹ ಚಟುವಟಿಕೆಗಳಲ್ಲಿ ತೊಡಗುವರು ಒಟ್ಟಾರೆ ಯುವಜನರ ಶಿಕ್ಷಣ ಅಥವಾ ವೃತ್ತಿ, ವ್ಯಕ್ತಿತ್ವ ಅಭಿವೃದ್ಧಿ ಹಾಗೂ ಮಾನಸಿಕ ಸ್ಥಿತಿಯ ಮೇಲೆ ತುಂಬಾ ಪರಿಣಾಮಬೀರುತ್ತದೆ.

ಇಂದಿನ ಭಾರತಿಯ ಯುವಜನರು ಬದಲಾಗುತ್ತಿರುವ ಜಾಗತೀಕರಣ ಹಾಗೂ ಸಂವಹನದಂತಹ ಸಮೂಹ ಮಾಧ್ಯಮಗಳಿಂದ ಭಾರತೀಯ ಸಂಸ್ಕೃತಿಯ ದೃಷ್ಟಿಕೋನವು ನಿಧಾನವಾಗಿ ಪರಿವರ್ತನೆಗೊಳ್ಳುತ್ತಿದೆ. ಇವೆಲ್ಲವು ಯುವಜನರ ಗೃಹಿಕೆ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮತ್ತು ಜೀವನದ ಮೇಲೆ ಪರಿಣಾಮವನ್ನು ಹೊಂದಿವೆ. ಈ ಸಂಸ್ಕೃತಿಯ ಪರಿವರ್ತನೆಯು ಸವಾಲಾಗಿದ್ದು ಕುಟುಂಬದೊಂದಿಗೆ ಯುವಜನರನ್ನು ಸಂಘರ್ಷಕ್ಕಿಡುಮಾತ್ತಿವೆ. ಸಂಸ್ಕ್ಋತಿಯ ಪರಿವರ್ತನೆಯ ಪರಿಣಾಮ ಕುಟುಂಬ ಹಾಗೂ ಯುವಜನರಲ್ಲಿಯೂ ಸಂಬಂಧದಲ್ಲಿಯ ತ್ವರಿತಗತಿಯ ಬದಲಾವಣೆಯೊಂದಿಗೆ ಭಾರವಜನತೀಯ ಆರ್ಥಿಕ ಸ್ಥಿತಿಯನ್ನು ಬದಲಾಯಿಸಿ ಬೇಕಾದರೆ ಯುವಜನರನ್ನು ಸೂಕ್ಷ್ಮವಾಗಿ ಸಜ್ಜುಗೊಳಿಸಬೇಕಾಗಿದೆ. ಕುಟುಂಬ ಹಾಗೂ ಯುವಜನರ ಮದ್ಯ ಬೆಳವಣಿಗೆ ಅಡ್ಡಿಯನ್ನುಂಟುಮಾಡುವ, ಹಾಗೂ ಯುವಜನರ ಅವಶ್ಯಕತೆಗಳನ್ನುರಿತು ಅದಕ್ಕಾಗಿ ಪೋಷಕರು ತಮ್ಮ ಬಾಲ್ಯಾವಸ್ಥೆಯ ಜೀವನ, ಅನುಭವ, ಸಮಾಜಿಕ ಸಂಸ್ಕೃತಿಗಳ ಬಗ್ಗೆ ತಿಳಿಸಿ ಯುವಜನರನ್ನು ಪ್ರಭಾವಿತಗೊಳಿಸಬೇಕಾಗಿದೆ. ಕೆಲವು ಕುಟುಂಬಗಳು ಇಂತಹ ಸವಾಲುಗಳನ್ನು ಚೆನ್ನಾಗಿ ನಿಭಾಯಿಸುತ್ತವೆ ಆದರೆ ಕುಟುಂಬಗಳು ಯುವಜನರ ಇಂತಹ ಪರಿಸ್ಥಿಗಳಲ್ಲಿ ಮತ್ತು ಸಂಘರ್ಷಗಳಲ್ಲಿ ಭಿನ್ನಾಭಿಪ್ರಾಯ ನಿರ್ವಹಿಸಲು ಸವಾಲೇನಿಸಬಹುದು ಸಾಮಾನ್ಯವಾಗಿ ಯುವಜನರ ಮತ್ತು ಅವರ ಕುಟುಂಬದ ನಡುವಿನ ಸಂಬಂಧದ ಸಮಸ್ಯಗಳಿಗೆ ಕಾರಣವಾಗುತ್ತದೆ. ಇಂತಹ ದೀರ್ಘ ಸಂಘರ್ಷಗಳಿಂದ ಯುವಜನರು ಸಮಾಜ ವಿರೋಧಿಯಾಗುವ ಸಾಧ್ಯತೆಯಿದೆ. ಯುವಜನರ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ಅರ್ಥಮಾಡಿಕೊಂಡಾಗ ಸಂದಿಗ್ದ ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಸುಲಭವಾಗುವುದು.

ಭಾರತ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿ ಬೆಂಬಲ ಸೇವೆಗಳನ್ನು ಸ್ಥಾಪಿಸುತಂತಹ ಪ್ರಯತ್ನಗಳು ನಡೆದಿವೆ. ಆದಾಗ್ಯೂ ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗಿಡದ ಬದಲಾಗಿ ಸಮಾಜಿಕ, ಮಾನಸಿಕ, ವರ್ತನೆ ಮತ್ತು ಆರೋಗ್ಯಕ್ಕೆ ಕೇಂದ್ರೀಕರಿಸುವುದಲ್ಲದೆ ಅಸ್ವಸ್ಥೆಯನ್ನು ತಡೆಗಟ್ಟುವಲ್ಲಿ ಕೇಂದ್ರೀಕರಿಸುವುದಾಗಿದೆ. ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರಿಕರಿಸದೆ ಯುವಜನರ ಮಾರ್ಗದರ್ಶನ ಕೇಂದ್ರಗಳಂತಹ ಬೆಂಬಲ ಸೇವೆಗಳ ಅಭಿವೃದ್ಧಿಗೆ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಯುವಜನರನ್ನು ಕೇಂದ್ರಿತವಾಗಿಟ್ಟುಕೊಂಡು ಯುವಜನರ ಸಮಾಜಿಕ, ಮಾನಸಿಕ, ವರ್ತನೆ ಮತ್ತು ಆರೋಗ್ಯ ಅಭಿವೃದ್ಧಿಗಾಗಿ ಬೆಂಬಲ ಸೇವೆಗಳನ್ನು ಉತ್ತೇಜಿಸುವುದರೊಂದಿಗೆ ಕುಟುಂಬಳ ಸುರಕ್ಷಿತ ಅಭಿವೃದ್ಧಿಗೆ ಪ್ರೋತ್ಸಾಹಿಸುವುದಾಗಿದೆ.

ಈ ಬೆಂಬಲ ಸೇವೆಗಳಿಂದ ಯುವಜನರು ಎದುರುತ್ತಿಸುತ್ತಿರುವ ಪ್ರಮುಖ ಸಮಸ್ಯಗಳಲ್ಲಿ ಆತ್ಮಹತ್ಯೆಯಾಗಿದ್ದು, ಎಕಾಗ್ರತೆಯಂತಹ ಸಣ್ಣ ಸಮಸ್ಯೆಗಳನ್ನು ಸುಲಭವಾಗಿ ಕೈಗೆತ್ತಿಕೊಳ್ಳಬಹುದು. ಬೆಂಬಲ ಸೇವೆಗಳಿಂದ ಯುವಜನರ ಮಾನಸಿಕ ಆರೋಗ್ಯದ ಬದಲಿಗೆ ಹದಿಹರೆಯದ ಸಮಸ್ಯಗಳ ಅಧ್ಯಯನ ಒಳಗೊಂಡಂತೆ ಎಲ್ಲಾ ಸಮಸ್ಯಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿ ಅವರ ಯಶಸ್ಸು ಏಳಿಗಾಗಿ ಸೌಲಭ್ಯಗಳನ್ನು ಒದಗಿಸಿ ಯುವಜನರನ್ನು ಸ್ವಾಲಂಬಿಯಾಗಿ ಮಾಡುವುದು. ಯುವಜನರಿಗೆ ಬೆಂಬಲ ಸೇವೆಗಳನ್ನು ನೀಡಿ ಅವರಲ್ಲಿರುವ ಸ್ವ ಸಾಮಥ್ಯವನ್ನು ಪ್ರೋತ್ಸಹಿಸಿ ತಮ್ಮನ್ನು ಮತ್ತು ತಮ್ಮ ಸುತ್ತಮುತ್ತಲಿರುವ ಯುವಜನರಿಗೆ ಸಹಾಯ ನೀಡುವುದು. ಯುವಜನರು ಸಮಸ್ಯಗಳ ಒತ್ತಡದಿಂದ ಹೊರಬಂದು, ವಿಶಾಲ ಮನೋಭಾವನೆಯುಳ್ಳವರಾಗಿ ಸಂದಿಗ್ಧ ಪರಿಸ್ಥಿತಿಗೆ ವೃತ್ತಿ ನೆರವು ನೀಡುವುದು.

ಇಂದು ಯುವಜನರು ಸಂದಿಗ್ಧ ಪರಿಸ್ಥಿಯಲ್ಲಿ ಬಳಲುವುದು ಗಮನಾರ್ಹ ಸಮಸ್ಯೆಯಾಗಿದ್ದು, ಅವರ ವ್ಯಕ್ತಿತ್ವ ಅಭಿವೃದ್ಧಿ, ವೃತ್ತಿ ಮಾರ್ಗದರ್ಶನ ನೀಡಲು ಸಹಾಯಕವಾಗುವ ದೃಷ್ಟಿ ಕೋನವನ್ನಿಟ್ಟುಕೊಂಡು ಮನೋವಿಜ್ಞಾನ ತಜ್ಞರಿಂದ ಕೌಶಲ್ಯ ಚಟುವಟಿಕೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.

ಮಾರ್ಗದರ್ಶನ ಕೇಂದ್ರಗಳಲ್ಲಿ ನಡೆಯುವುದೇನು ?

ಮಾರ್ಗರ್ದರ್ಶನ ಕೇಂದ್ರಗಳನ್ನು ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಮೂಲಭೂತ ಸೌಕರ್ಯಗಳನ್ನೊಳಗೊಂಡಂತೆ ಸ್ಥಾಪಿಸಲಾಗುತ್ತವೆ. ಆರಂಭದಲ್ಲಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ 5-10 ಜನ ಶಿಕ್ಷಕ ತರಬೇತುದಾರರನ್ನು ಆಯಾ ಜಿಲ್ಲೆಯ ಶಾಲೆ ಅಥವಾ ಕ್ರೀಡಾಂಗಣದಲ್ಲಿ ಯುವಜನರ ವಿಷಯಗಳಿಗೆ ತರಬೇತಿಗೊಳೊಸುವುದು, ಪ್ರತಿ ವರ್ಷ ಶಿಕ್ಷಕ ತರಬೇತುದಾರರೊಂದಿಗೆ 20 ಜನ ಸಮಾಜ ವಯಸ್ಕ ಸಮೀಪವರ್ತಿಗಳಿಗೆ ಅರ್ಹತಾ ಮಾನದಂಡಗಳಿಗನುಗುಣವಾಗಿ ತರಬೇತಿಯನ್ನು ನೀಡುವುದು. ಈ ಶಿಕ್ಷಕ ತರಬೇತುದಾರರು ಹಾಗೂ ಸಮಾನ್ಯ ವಯಸ್ಕ ಸಮೀಪರ್ವತಿಗಳು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಯುವಜನರ ವಿಷಯಗಳನ್ನು ನಿಭಾಯಿಸುವುದು. ಮಾರ್ಗದರ್ಶನ ಕೇಂಧ್ರದ ಚಟುವಟಿಕೆಗಳನ್ನು ಸಮುದಾಯದಲ್ಲಿ ವಿಸ್ತರಿಸುವುದು, ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಂಪನ್ಮೂಲ ಕ್ರೂಡೀಕರಣ ಮಾಡುವುದರೊಂದಿಗೆ ಸಂಪರ್ಕ ಸಂಸ್ಥೆಗಳನ್ನು  ಗುರುತಿಸುವುದು, ಬೆಂಬಲ ಸೇವೆಗಳನ್ನು ಯುವಜನರಿಗೆ ಒದಗಿಸುವುದು.

ಮಾರ್ಗದರ್ಶನ ಕೇಂಧ್ರದೊಳಗೆ ಕೆಲಸ ಮಾಡುತ್ತಿರುವ ಶಿಕ್ಷಕ ತರಬೇತುದಾರರು ಯೋಜನೆಯ ಉಲ್ಲೇಖಿತ ವಿಧಾನದ ಕ್ರಮಾವಳಿಗಳಂತೆ ಬೆಂಬಲ ಸೇವೆಗಳನ್ನು ಆಯೋಜಿಸುತ್ತಿರಬೇಕು.

ಮಾರ್ಗದರ್ಶನ ಕೇಂದ್ರದಲ್ಲಿ ನಡೆಯುವ ಚಟುವಟಿಕೆಯ ಗತಿ ನಕ್ಷೆ ಈ ಕೆಳಗಿನಂತಿದೆ.

 • ಯೋಜನೆಯ ಆಯವ್ಯಯದಲ್ಲಿ ಐದು ವರ್ಷಗಳ ನಂತರ ಕನಿಷ್ಠ 3750 ಶಿಕ್ಷಕ ತರಬೇತುದಾರಿರುತ್ತಾರೆ.
 • 5 ವರ್ಷಗಳ ಕಾಲಾವಧಿಯಲ್ಲಿ 75000 ತರಬೇತಿ ಹೊಂದಿದ ಯುವ ಮಿತ್ರರು ಕರ್ನಾಟಕ ರಾಜ್ಯದಲ್ಲಿ ಇರುತ್ತಾರೆ.

ನಮ್ಮೂರ ಶಾಲೆಗೆ ನಮ್ಮ ಯುವಜನರುಪರಿಕಲ್ಪನೆಯ ಸೂಚನೆ

 1. ಪೀಠಿಕೆ
ಶೇ. 63ರಷ್ಟು ಯುವಜನರು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದಾರೆ: ಶೇ.24ರಷ್ಟು ಯುವಜನರು ಅನಕ್ಷರಸ್ಥರು: ಇದರಲ್ಲಿ ಶೇ. 65ರಷ್ಟುಜನರು ಯುವ ಮಹಿಳೆಯರಯ ಶೇ54.3ರಷ್ಟು ಯುವಜನರು ಎಸ್.ಎಸ್.ಎಲ್.ಸಿ. ನಂತರದ ಔಪಚಾರಿಕ ಶಿಕ್ಷಣವಿಲ್ಲದವರು ಕರ್ನಾಟಕದಲ್ಲಿ ಒಟ್ಟು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಯುವಜನರ ಅನುಪಾತ (ಗ್ರಾಸ್ ಎನ್ರೋಲ್ಮೆಂಟ್ ರೇಷಿಯೋ)ಕೆವಲ ಶೇ. 13ರಷ್ಟಿದೆ. ತಾಲ್ಲೂಕನ್ನು ಘಟಕವನ್ನಾಗಿಸಿಕೋಂಡು, ಉತ್ತಮ ರೀತಿಯಲ್ಲಿ ತಮ್ಮ ಪ್ರತಿಭೆ, ದೂರದೃಷ್ಟಿ, ಸೇವಾನಿಷ್ಠೆ ಮತ್ತು ಜನಸಾಮಾಣ್ಯರ ಸಬಲೀಕರಣಕ್ಕಾಗಿ ಅದರಲ್ಲೂ ಶಾಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಸಾಧನೆ ತೋರುವ ಮತ್ತು ಈ ನಿಟ್ಟಿನಲ್ಲಿ ಅಪಾರವಾಗಿ ಶ್ರಮೀಸುವಯುವಜನರನ್ನು ಪ್ರೋತ್ಸಾಹಿಸಲಾಗುವುದು. ಯುವಜನರು ತಮ್ಮ ಶಿಕ್ಷಣವನ್ನು ಮುಂದುವರೆಸುವ ಮತ್ತು ಅದನ್ನೇ ಸೃಜನಶೀಲ ರೀತಿಯಲ್ಲಿ ಮಾಡುವ ಅವಶ್ಯಕತೆ ತುಂಬಾ ಇದೆ ಎಂಬುದನ್ನು ಈ ಮೇಲಿನ ಅಂಕಿ-ಅಂಶಗಳು ಸೂಚಿಸುತ್ತವೆ, ಈ ಹಿನ್ನೆಲೆಯಲ್ಲಿ ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಎಂಬ ಯೋಜನೆಯನ್ನು ರೂಪಿಸಲಾಗಿದೆ.
 • ಗುರಿ ಮತ್ತು ಉದ್ದೇಶಗಳು
 • ವಿದ್ಯಾರ್ಥಿಯೇತರ ಯುವಜನರು ಕಾರ್ಯ ನಿರ್ವಹಿಸುವಷ್ಟು ಸಾಕ್ಷರತೆಯನ್ನು ಪಡೆದುಕೋಳ್ಲೂವುದಕ್ಕೆ ಅವಕಾಶ ಒದಗಿಸುವುದು
 • ಊರಿನ ಶಾಲೆ ಮತ್ತು ಸಾಲೆಯ ಪರಿಸರದ ನೈರ್ಮಲ್ಯ ಕಾಪಾಡುವುದು
 • ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆಯು ಪ್ರತಿಶತ ನೂರರಷ್ಟಾಗುವಂತೆ ಮಾಡುವುದು.
 • ಆಟದ ಮೈದಾನವನ್ನು ವರ್ಷಪೂರ್ತಿ ಉತ್ತಮ ಸ್ಥಿತಿಯಲ್ಲಿರುವ ಹಾಗೆ ಮತ್ತು ಮಕ್ಕಳು ಮೈದಾನವನ್ನು ಉಫಯೋಗಿಸುವಂತೆ ಪೇರೇಪಿಸುವುದು.
 • ಶಾಲಾ ಮಕ್ಕಳ ಪರಿಕ್ಷೆಯ ಸಾಧನೆಯು ಆರ್ಥಪೂರ್ಣವಾಗಿ ಹೆಚ್ಚುವಂತೆ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಗಾಗಿ ತರಬೇತಿಗಳನ್ನು ಹಮ್ಮಿಕೊಳ್ಳುವುದು.
 • ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ/ಯುವಜನರು ಪ್ರವೇಶ ಪಡೆಯುವ ಅವಶ್ಯಕತೆಯನ್ನು ಮನಗಾಣಿಸಿ ಕೋಡಲು ಕೋರ್ಸ ಪ್ರಾರಂಭದ ಕಾಲದಲ್ಲಿ ವಿಶೇಷ ಪ್ರಚಾರಾಂದೋಲನಗಳನ್ನು ಹಮ್ಮಿಕೊಳ್ಳುವುದು.
 • ಯುವಜನರು ತಮ್ಮ ಸ್ಥಳೀಯ ಕಲೆ,ಸಾಹಿತ್ಯ,ಸಂಸ್ಕೃತಿ,ಕ್ರೀಡೆ,ಸಾಹಸ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳಲು ಪ್ರೇರಣೆ ನೀಡುವುದು.
 • ವಿಧಾನ
ಗ್ರಾಮ/ಹೋಬಳಿ/ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಯು ಈ ಕೆಳಕಾಣಿಸಿದ ಕಾರ್ಯಚಟುವಟಿಕೆಗಳಲ್ಲಿ ಮಾಪನ ಮಾಡುಬಹುದಾದ ಸಾಧನೆಯನ್ನು ಸಾಧಿಸಿ ರುವುದನ್ನು ಗಮನಿಸಿ,ಪ್ರತಿ ತಾಲ್ಲೂಕಿನ ಒಂದು ಯುವ ಸಂಘಟನೆಗೆ ಪ್ರತಿ ವರ್ಷ ಗರಿಷ್ಠ ರೂ.1.00 ಲಕ್ಷದಂತೆ ಪ್ರೋತ್ಸಾಹ ಧನ ನೀಡಲಾಗುವುದು. ಎ) ಊರಿನ ಶಾಲೆ/ಶಾಲೆಗಳ ಸರ್ವಾಂಗೀಣ ಅಭಿವೃದ್ಧಿ:ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಳ,ಅವರ ವ್ಯಕ್ತಿತ್ವ ವಿಕಸನ,ಶಾಲಾ ಆವರಣದ ಶುಚಿತ್ವ, ಅಗತ್ಯ ಸೌಲಭ್ಯಗಳ ಪೂರೈಕೆ. ಬಿ) ಶಿಕ್ಷಣದ ಮಹತ್ವ ಶಾಲೆಗೆ ದಾಖಲುಗೋಳ್ಳುವ ತುರ್ತು, ಶಾಲೆಯಿಂದ ಯಾವ ಮಕ್ಕಳೂ ಹೊರಗೆ ಉಳಿಯದಂತೆ ಜಾಗೃತಿ ಸಿ) ಶಾಲೆಗೆ ಮತ್ತು ಗ್ರಾಮಕ್ಕೆ ಅಗತ್ಯವಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಳ್ಳುವ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸುವುದು ಡಿ) ಸರ್ಕಾರಿ ಇಲಾಖೆಗಳಿಂದ ಶಾಲೆಗೆ ಮತ್ತು ಗ್ರಾಮಕ್ಕೆ ಒದಗುವ ಹತ್ತು ಹಲವು ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರಿ ಇಲಾಖೆಗಳ ಕಾರ್ಯಕ್ರಮ/ಯೋಜನೆಗಳ ಅನುಷ್ಠಾನದಲ್ಲಿ ಸೇತುವೆಯಾಗಿ ಕಾರ್ಯ ನಿರ್ವಹಿಸುವುದು. ಇ) ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ: ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳಲ್ಲಿ ಕಲೆ,ಸಾಹಿತ್ಯ,ಸಂಸ್ಕೃತಿ ಕ್ಷೇತ್ರಗಳನ್ನು ಸಮಗ್ರಗೊಳಿಸಿ ಯುವಜನರು ಅಭಿವ್ಯಕ್ತಿಗೆ ವೇದಿಕೆ ನಿರ್ಮಿಸಲಾಗುವುದು. ಈ) ಯುವಜನರಿಗೆ ಕ್ರೀಡೆ,ಸಾಹಸ ಮತ್ತು ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಉತ್ತೇಜನ:ಪ್ರಸ್ತುತ ಚಾಲ್ತಿಯಲ್ಲಿರುವ ಕ್ರೀಡೆ,ಸಾಹಸ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯನ್ನು ಯುವಜನರಿಗೆ ನೀಡಿ ಕಾರ್ಯಕ್ರಮದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವುದು. ಹಿಂದಿನ ಶೈಕ್ಷಣಿಕ ವರ್ಷದಲ್ಲಿಯುವಸಂಘಟನೆಯು ಮಾಡಿದ ಸಾಧನೆಯನ್ನು ಗುರುತಿಸುವ ಕಾರ್ಯವು ಈ ವರ್ಷದ ಜುನ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಬಿದ್ದ ಬಳಿಕ ಪ್ರೋತ್ಸಾಹ ಧನವನ್ನು ಪಡೆಯುವ ಆಸಕ್ತಿ ಹೊಂದಿದ ಯುವ ಸಂಘಟನೆಗಳು ತಮ್ಮ ಕಾರ್ಯಸಾಧನೆ ಕುರಿತು ಒಂದು ಬೇಸ್ ಲೈನ್(ಸಂಕ್ಷಿಪ್ತ ಕಾರ್ಯಸಾಧನಾ ಪಟ್ಟಿ) ಯನ್ನು ಇಲಾಖೆಯ ಜಿಲ್ಲಾ ಕಚೇರಿಗೆ ಕಳುಹಿಸಿ ಕೊಡಬೇಕು. ಬೇಸ್ ಲೈನ್ ಗಳನ್ನು ಆಧರಿಸಿ, ರಾಜ್ಯ ಮಟ್ಟದ ಆಯ್ಕೆ ಸಮಿತಿಯು ಯುವಸಂಘಟನೆಯ ಆಯ್ಕೆಯನ್ನು ಈ ಕೆಳಗಿನ ಮಾನದಂಡಗಳ ಆಧಾರದ ಮಾಡಲಾಗುವುದು.
 • ವ್ಯಾಪ್ತಿ ಮತ್ತು ಅವಧಿ
  • ಜುಲೈನಿಂದ ಜೂನ್ ವರೆಗೆ.
  • ತಾಲ್ಲೂಕಿನ ಕನಿಷ್ಠ ಒಂದು ಊರು ಮತ್ತು ಶಾಲೆ.
 • ಘಟಕ ವೆಚ್ಚ
 • ಪ್ರತಿ ತಾಲ್ಲೂಕಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮತ್ತು ಅಲ್ಲಿನ ಯುವಜನರನ್ನು ಸಬಲಗೊಳಿಸುವ ಕಾರ್ಯದಲ್ಲಿ ಗಮನಾರ್ಹ ಸಾಧನೆಯನ್ನು ಮಾಡುವ ಯುವ ಸಂಘಕ್ಕೆ/ಯುವ ಗುಂಪಿಗೆ ಪ್ರೋತ್ಸಾಹ ಧನವಾಗಿ ಗರಿಷ್ಠ ರೂ.1.00 ಲಕ್ಷ
 • ಆಡಳಿತ ವೆಚ್ಚ ರೂ.1.76 ಲಕ್ಷ.
 • ಫಲಶೃತಿ
 • ಯಾವುದೇ ಪ್ರಯೋಜನಗಳನ್ನು ಪಡೆಯಲು ಅಸಮರ್ಥರಾಗಿರುವ ತಮ್ಮ ಸಮವಯಸ್ಕರಿಗೆ, ವಿದ್ಯಾರ್ಥಿಯೇತರ ಯುವಜನರಿಗೆ ಬೆಂಬಲ ದೊರಕುತ್ತದೆ.ಶಾಲೆ ಮತ್ತು ಗ್ರಾಮೀಣ ಪರಿಸರ ಶುಚಿಯಾಗುತ್ತದೆ. ಗ್ರಾಮದ ಶಾಲೆಗೆ ಶೌಚಾಲಯ ಒದಗುತ್ತದೆ.ಶಾಲೆಯ ಎಲ್ಲಾ ಮಕ್ಕಳಲ್ಲಿ ಮಳೆಕೊಯ್ಲು ಬಗ್ಗೆ ತಿಳುವಳಿಕೆ ಮೂಡುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ದೊರಕುವ ಫಲಾನುಭವವನ್ನು ಗ್ರಾಮೀಣರಿಗೆ ಒದಗುತ್ತದೆ. ಸ್ವಯಂ ಸೇವಾ ಭಾವನೆಯ ಯುವಜನರು ಸಂಖ್ಯೆ ಹೆಚ್ಚುತ್ತದೆ.
 • ಕಲಿಯಲು ಮಂದೆ ಬಂದ ವಿದ್ಯಾರ್ಥಿಯೇತರ ಯುವಜನರು ಸಂಖ್ಯೆ
 • ಕಾಲೇಜ್ /ವಿಶ್ವವಿದ್ಯಾಲಯಗಳಲ್ಲಿ ನೋಂದಾವಣೆಗೋಂಡವರ ಸಂಖ್ಯೆಯಲ್ಲಿ ಆದ ಹೆಚ್ಚಳ
ಈ ಮೂಲಭೂತ ಯೊಜನೆ ಮಾರ್ಗಸೂಚಿಗಳಲ್ಲಿದೆ ವಿವರವಾದ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಹಾಗೂ ಇದನ್ನು ಸರ್ಕಾರಕ್ಕೆ ಕೂಡಲೇ ಸಮರ್ಪಿಸಲಾಗುವ್ಯದು.
 1. ನಿಯಮ ನಿಬಂಧನೆಗಳು
 • ಈ ಸ್ಪರ್ದೆಯಲ್ಲಿ ಬಾಗವಹಿಸುವ ಯುವ ಸಂಘವು ಸಂಬಂಧಿತ ಇಲಾಖೆಗಳಿಗೆ ನೋಂದಣಿ ಮತ್ತು ಮಾನ್ಯತೆ ಪಡೆದಿರುವುದು ಕಡ್ಡಾಯ
 • ಇದು ಸ್ವರ್ಧೆ ಮಾತ್ರ ಆಗಿರುವುದರಿಂದ ಸ್ಪರ್ದೆಯ ಅವಧಿಯಲ್ಲಿ ಯಾವುದೇ ರೀತಿಯ ಧನ ಸಹಾಯವನ್ನು ನಿರೀಕ್ಷಿಸುವಂತಿಲ್ಲ.
 • ಒಂದು ತಾಲೂಕಿನಿಂದ ಒಂದು ಯುವ ಸಂಘವನ್ನು ಆಯ್ಕೆ ಮಾಡಬಹುದಾಗಿದೆ.
 • ಒಂದು ವರ್ಷ ಒಂದು ಯುವ ಸಂಘವು ಸ್ಪರ್ಧೆ ಗೆದ್ದಲ್ಲಿ ಆ ಯುವ ಸಂಘವು ಮುಂದಿನ ವರ್ಷ ಈ ಸ್ಪರ್ಧೆಯಲ್ಲಿ ಬಾಗವಹಿಸಲು ಅವಕಾಶವಿರುವುದಿಲ್ಲ.
 • ಮುಂದಿನ ವರ್ಷದಲ್ಲಿ ಈ ಯುವ ಸಂಘಗಳು ಮೆಂಟರ್ ಯುವ ಸಂಘವಾಗಿ ಆಯ್ಕೆಯಾಗುವ ಅವಕಾಶವಿರುವುದು. ಮೆಂಟರ್ ಯುವ ಸಂಘಗಳಿಗೆ ಇಲಾಖೆಯ ಬೇರೆ ಕಾರ್ಯಕ್ರಮ,ಇತ್ಯಾದಿ
 • ಪ್ರೋತ್ಸಾಹ ಧನವನ್ನು ಸಕಾರಾತ್ಮಕವಾಗಿ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೋಡಗಿಸಿಕೊಂಡಲ್ಲಿ ಈ ಕೆಲಸಗಳನ್ನು ಪ್ರಸ್ತುತಗೊಳಿಸಲು ವೇದಿಕೆಗಳನ್ನು ನಿರ್ಮಿಸಲಾಗುವುದು.
 1. ಈ ಯೋಜನೆ ಅಡಿಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆ ಪ್ರಕಾರಗಳು ಹೀಗಿವೆ:
ವಿಭಾಗ 1: ಭೌತಿಕ ವಿಭಾಗ 1: ಭೌದ್ಧಿಕ
1.ಅ ಶಾಲಾ ಆವರಣವನ್ನು ಹಸಿರೀಕರಣ ಮಾಡುವುದು ಮತ್ತು ನಿರ್ವಹಿಸುವುದು ಶಾಲಾ ಆವರಣದಲ್ಲಿ ಪೌಷ್ಟಿಕ ಆಹಾರ ಕೈತೋಟ ನಿರ್ಮಾಣ 2.ಅ ವೈಜ್ಞಾನಿಕ ವಿಷಯಗಳಲ್ಲಿ ಅರಿವು ಮೂಡಿಸುವುದು ಮತ್ತು ಸರಳ ಬೋಧನೆ
1.ಆ ಶಾಲಾ ಆವರಣದಲ್ಲಿ ಆಟದ ಮೈದಾನ ಅಭಿವೃದ್ದಿ/ಉನ್ನತೀಕರಣ 2.ಆ ಮಕ್ಕಳ ಪಠ್ಯ ಜ್ಞಾನದ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ
1.ಇ ಶಾಲಾಗೆ ಅಗತ್ಯವಾದ ಸೈಕ್ಷಣಿಕ ಸಾಮಗ್ರಿಗಳ ಪೂರೈಕೆ-ಪುಸ್ತಕ, ಚಾರ್ಟ ಇತ್ಯಾದಿ 2.ಇ ನವೀನ ರೀತಿಯ ಬೋಧನೆಗೆ ಶಿಕ್ಷಕರಿಗೆ ಸಹಕರಿಸುವಿಕೆ
1.ಈ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ 2.ಈ ಜೀವನ ಕೌಶಲ್ಯ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ತರಭೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
1.ಉ ಶಾಲಾ ಆವರಣದಲ್ಲಿ ಮಳೆ ನೀರುಕೋಯ್ಲು ನಿರ್ಮಾಣ 2.ಉ ಅಧ್ಯಯನ ಅಥವಾ ಸರಳ ಕಲಿಕಾ ತಂತ್ರಗಳ ತರಬೇತಿ
1.ಊ ಶಾಲಾಯಲ್ಲಿ ಸೌರ ಶಕ್ತಿ ಘಟಕ ನಿರ್ಮಾಣ ಮತ್ತು ಬಳಕೆಗೆ ಉತ್ತೇಜನ 2.ಊ ವಿಶೇಷ ಮಕ್ಕಳ ಆರೈಕೆ(ಬುದ್ಧಿಮಾಂದ್ಯ ಶಾಲೆ,ಇನ್ನಿತರೆ ಕಡೆಗಳಲ್ಲಿ)
1.ಋ ಶಾಲಾ ಅವರಣದಲದಲ್ಲಿ ವಿಜ್ಞಾನ ಪ್ರಾತ್ಯಕ್ಷಿಕೆಗಳ ಸ್ಥಾಪನೆ 2.ಋ ವಿಶೇಷ ಮಕ್ಕಳಿಗೆ ಪರಿಹಾರ ಬೋಧನೆ
1.ಎ ಶಾಲಾ ಆವರಣದಲ್ಲಿ ಸ್ಥಳೀಯ ಮಟ್ಟದ ವಸ್ತು ಸಂಗ್ರಹಾಲಯದ ನಿರ್ಮಾಣ ಮತ್ತು ಬಳಕೆಗೆ ಉತ್ತೇಜನ 2.ಎ ಮಕ್ಕಳಲ್ಲಿ ಪರಿಸರ ಮತ್ತು ಜೀವ ವೈವಿಧ್ಯತೆ ಬಗ್ಗೆ ಆಸಕ್ತಿಯನ್ನು ಉತ್ತೇಜಿಸುವ ಕಾರ್ಯಕ್ಮಗಳನ್ನು ಆಯೋಜಿಸುವುದು
1.ಏ ಅತ್ಯಾಧುನಿಕ ಕಲಿಕಾ ಸಾಮಗ್ರಿಗಳ ವಿತರಣೆ ಮತ್ತು ನಿರ್ವಹಣೆ 2.ಏ ಮಕ್ಕಳಿಗೆ ಮಾನಸಿಕ  ಆಪ್ತ ಸಮಾಲೋಚನಾ ಸೇವೆಗಳನ್ನು ಒದಗಿಸುವಿಕೆ
1.ಐ ಮಕ್ಕಳ ಸ್ನೇಹಿ ಗ್ರಂಥಾಲಯ ಸ್ಥಾಪನೆ ಮತ್ತು ಉತ್ತೇಜನ 2.ಐ ಮಕ್ಕಳಿಗೆ ಪೌರ ಶಿಕ್ಷಣ ಒದಗಿಸುವಿಕೆ
2.ಒ ಮಕ್ಕಳ ಗ್ರಾಮ ಸಭೆಗಳ ಆಯೋಜನೆಗೆ ಉತ್ತೇಜನ
2.ಓ ಅಲೆಮಾರಿ ಮಕ್ಕಳಿಗೆ ಶೈಕ್ಷಣಿಕ ಸಹಕಾರ
2.ಔ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ(ಆರ್ಥೀಕ ಕೋರತೆ,ವಸತಿ ಸೌಲಭ್ಯಗಳ ಕೊರತೆ ಇತ್ಯಾದಿಯಿಂದ) ಮಕ್ಕಳನ್ನು ಪುನಃ ಶಾಲೆಗೆ ಕರೆಯಲು ಸಹಕಾರ
2.ಅಂ ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಪರಿಹಾರ ಮಾರ್ಗೋಪಾಯದ ಅನುಷ್ಠಾನ(ರಾಜ್ಯದ ಶೇ 30 ರಷ್ಟು ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಲ್ಲ)

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಯುವ ಸಂಘಗಳು ಮೇಲೆ ಉಲ್ಲೇಖಿಸಿರುವ ಪ್ರತಿ ವಿಭಾಗದಿಂದ ಕನಿಷ್ಠ ೆರಡು ಕಾರ್ಯಗಳನ್ನು ಆಯ್ಕೆ ಮಾಡಬೇಕು.ಅಂದರೆ,ಭಾಗವಹಿಸುವ ಪ್ರತಿ ಯುವ ಸಂಘವು ಒಟ್ಟು ನಾಲ್ಕು ಕಾರ್ಯಗಳನ್ನು (ವಿಭಾಗ ಒಂದರಿಂದ -2,ವಿಭಾಗ ಎರಡರಿಂದ-2)ಕೈಗೊಳ್ಳಬೇಕು. ಇದಕಿಂತ ಹೆಚ್ಚು ಆಯ್ಕೆ ಮಾಡಿದ ಕಾರಣಕ್ಕೆ ಹೆಚ್ಚು ಅಂಕಗಳು ಬರುವುದಿಲ್ಲ ಎಲ್ಲಾ ಕಾರ್ಯಗಳ ಪರಿಣಾಮಕಾರಿ ಫಲಶೃತಿಯನ್ನು ಅಂಕಗಳ ನೀಡುವಿಕೆಗೆ ಪರಿಗಣೀಸಲಾಗುವುದು.

ಯುವ ಶಕ್ತಿ ಕೇಂದ್ರ’ ಯೋಜನೆಯ ಮಾರ್ಗಸೂಚಿಗಳು: 1.ಪ್ರಸ್ತಾವನೆ: ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ವಲಯದಲ್ಲಿ ಉಂಟಾದ ಅಭಿವೃದ್ಧಿಯ ಪ್ರಭಾವದಿಂದಾಗಿ ಕರ್ನಾಟಕದ ಅರ್ಥಿಕ ಪ್ರಗತಿ ಉನ್ನತ ಮಟ್ಟಕ್ಕೆರಿದ್ದು ಯುವ ಕನ್ನಡಿಗರ ವೃತ್ತಿ ರಂಗದಲ್ಲಿ ಸಾಗರೋಪಾದಿಯಲ್ಲಿ ಬದಲಾವಣೆಗಳು ಆಗಿದೆ ಶೈಕ್ಷಣಿಕ ರಂಗವು ಸಹ ಸ್ಪರ್ಧಾತ್ಮಕವಾಗಿದ್ದು, ಯುವ ವಿದ್ಯಾರ್ಥಿ/ ವಿದ್ಯಾರ್ಥಿನಿಲಯರು ಪರಿಕ್ಷೇಯಲ್ಲಿ  ಗಳಿಸುವ ಅಂಕಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದು ಪಠ್ಯೇತರ ಚಟುವಟಿಗಳಲ್ಲಿ ಪ್ರಮುಖವಾಗಿ ಮನೋ-ದೈಹಿಕ ಅರೋಗ್ಯಕ್ಕೆ ಪೂರಕವಾದ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಕ್ಷೀಣಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವೃತ್ತಿ/ಶಿಕ್ಷಣ ಆಧಾರಿತ ಆರೋಗ್ಯ ದುಷ್ಟರಿಣಾಮಗಳಾದ ಬೊಜ್ಜು, ಒತ್ತಡ ಸಂಬಂಧಿ ಸಮಸ್ಯೆಗಳು, ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಗಳಲ್ಲಿ ಕೂಡ ಹೊಚ್ಚಳವಾಗಿದೆ. ಬಹಳಷ್ಟು ವೃತ್ತಿಗಳಲ್ಲಿ ದೈಹಿಕ ವ್ಯಾಯಾಮ ಚಟುವಟಿಕೆಗಳಲ್ಲಿ ಪಾಲ್ಗೊಳಲು ಫಿಟ್ನೆಸ್ ಕೇಂದ್ರಗಳು ಇಲ್ಲಿದಿರುವುದರಿಂದ ಈ ಸಮಸ್ಯೆ ಗಂಭೀರವಾಗುತ್ತಿದೆ. ಈ ಹಿಂದೆ ಪ್ರತಿ ನಗರ/ಗ್ರಾಮದಲ್ಲಿ ಒಂದಕ್ಕಿತ ಹೆಚ್ಚು ಗರಡಿ ಮನೆಗಳಿದ್ದು, ಅಲ್ಲಿ ಮಕ್ಕಳು, ಯುವಜನರು ಮತ್ತು ವಯಸ್ಕರು ದೈಹಿಕ ವ್ಯಾಯಾಮ ಚಟುವಟಿಕೆಗಳಲ್ಲಿ ನಿರತರಾಗುವುದು ಜೀವನ ಶೈಲಿಯಾಗಿತ್ತು. ಆರ್ಥಿಕ  ಬೆಳೆವಣಿಗೆಯಿಂದಾಗಿ ಮಹಿಳೆಯರೂ ಸಹ ವಿವಿಧ ವೃತ್ತಿಗಳಲ್ಲಿ ಭಾಗಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೌಟುಂಬಿಕ ಆದಾಯ ಗಳಿಕೆಯಲ್ಲಿ ಬೆಂಬಲ ನೀಡುವುದರ ಜೋತೆಗೆ ವ್ಯಾಪಾರ ಕ್ಷೇತ್ರ,  ಔದ್ಯಮಿಕ ಕ್ಷೇತ್ರಗಳಲ್ಲೂ ಸಹ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಯುವ ವಿಸ್ಯಾರ್ಥಿನಿ/ ಮಹಿಳೆಯರಲ್ಲೂ ಸಹ ದೈಹಿಕ ಾರೋಗ್ಯದ ಬಗ್ಗೆ ಅರಿವು ಮೂಡಿಸಿ ಪ್ರಾರಂಭದಿಂದಲೇ ದೈಹಿಕ ಸಾಮರ್ಥ್ಯವನ್ನು ಬೆಳೆಸಿ ಸಶಕ್ತರನ್ನಾಗಿಸಲು ತರಬೇತಿ ಅವಕಾಶ ಕಲ್ಪಿಸುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ 2014-15 ನೇ ಸಾಲಿನಿಂದ ‘ಯುವಶಕ್ತಿ ಕೇಂದ್ರ’ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

 • ಉದ್ದೇಶಗ

ಯುವಜನರು ಅದರಲ್ಲೂ ಯುವ ಮಹಿಳೆಯರು ಮನೋ-ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಅನುವಾಗುವಂತೆ ಮೂಲ ಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯಡಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಒಂದು ‘ಯುವಶಕ್ತಿ ಕೇಂದ್ರ’- ಜಿಮ್, ಭಾರ ಎತ್ತುವ ಉಪಕರಣಗಳು, ಕ್ರಾಸ್ ಟ್ರೇನರ್ಸ್, ಸೈಕಲ್ಸ್ ಇತ್ಯಾದಿ ದೇಹದಾರ್ಢ್ಯ ಸಾಮಗ್ರಿಗಳನ್ನೊಳಗೊಂಡ ಮೂಲ ಸೌಕರ್ಯವನ್ನು ಹೋಂದಿದ ಕೇಂದ್ರವನ್ನು ಸ್ಥಾಪಿಸುವುದು. ಯುವಶಕ್ತಿ ಕೇಂದ್ರವನ್ನು ಈ ಕೆಳಕಾಣಿಸಿದ ನಿಬಂಧನೆಗಳನ್ನು ಪೂರೈಸುವ ಸ್ಥಳದಲ್ಲಿ ಸ್ಥಾಪಿಸಲಾಗುವುದು.

 • ಜಿಲ್ಲಾ ಕೇಂದ್ರದಲ್ಲಿರುವ ಪ್ರಥಮ ದರ್ಜೆ ಸರ್ಕಾರಿ ಕಾಲೇಜನ್ನು ಆಯ್ಕೆ ಮಾಡುವುದು.
 • ಕಾಲ್ಲೇಜಿ/ಶಿಕ್ಷಣ ಸಂಸ್ಥೆಯಲ್ಲಿ Co-education ಸೌಲಭ್ಯವಿರಬೇಕು.
 • ಕಾಲೇಜಿನಲ್ಲಿ 1000 ಕ್ಕೂ ಹೆಚ್ಚು ಯುವಕ/ಯುವತಿಯರು  ವ್ಯಾಸಂಗ ಮಾಡುತ್ತಿರಬೇಕು
 • ಸದರಿ ಕಾಲೇಜಿನಲ್ಲಿ ಓರ್ವ ದೈಹಿಕ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿರಬೇಕು.
 • ಯುವ/ಯುವತಿಯರಿಗೆ ಪ್ರತ್ಯೇಕ ವೇಳೆಗಳಲ್ಲಿ ಕೇಂದ್ರದ ಸೌಲಭ್ಯ ಪಡೆಯಲು ಅವಕಾಶ ಮುಕ್ತವಾಗಿರಿಸಬೇಕು.
 • ಯುವಶಕ್ತಿ ಕೇಂದ್ರಕ್ಕೆ ಆರಂಭಿಸಲು 25 ಅಡಿ X 25 ಅಡಿ ಅಳತೆಯ ಕೊಠಡಿ ಇರಬೇಕು.
 • ಸದದರಿ ಕೊಠಡಿಯನ್ನು ಕೇಂದ್ರಕ್ಕೆ ಅನುಕೂಲವಾಗುವಂತೆ ಒಳ ವಿನ್ಯಾಸ ಮಾಡಲು ಮುಕ್ತ ಅವಕಾಶ ನೀಡಬೇಕು.
 • ಕೇಂದ್ರದ ಹೊರಗಡೆ ಕರ್ನಾಟಕ ಸರ್ಕಾರದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವಶಕ್ತಿ ಕೇಂದ್ರ ಎಂದು ಫಲಕ ಹಾಕಲು ಅನುಮತಿ ನೀಡಬೇಕು.
 • ಸದರಿ ಕೇಂದ್ರ ನಿರ್ವಹಣೆಗೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳನ್ನು ಕಾಲೇಜು ಭರಿಸಲು ಸಿದ್ಧವಾಗಿರಬೇಕು.
 • ಪ್ರಾಯೋಗಿಕವಾಗಿ ಪ್ರಥಮ ಹಂತದಲ್ಲಿ 15 ಜಿಲ್ಲೆಗಳಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಆರಂಭಿಸಲಾಗುವುದು ಮುಂಬರುವ ಸಾಲುಗಳಲ್ಲಿ ಹಂತ ಹಂತವಾಗಿ ಎಲ್ಲೆಡೆ ಯುವಶಕ್ತಿ ಕೇಂದ್ರಗಳನ್ನು ಆರಂಭಿಸಲಾಗುದು.
 • ಯುವ ಶಕ್ತಿ ಕೇಂದ್ರದ ದೈನಂದಿನ ನಿರ್ವಹಣೆಯ ಮೇಲುಸ್ತುವಾರಿಗಾಗಿ ಕೆಳಕಾಣಿಸಿದ ಸದಸ್ಯರನ್ನೊಳಗೊಂಡ ಸಮಿತಿಯು ಕಾರ್ಯನಿರ್ವಹಿಸುವುದು.
ಪ್ರಾಂಶುಪಾಲರು  – ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಉಪ/ಸಹಾಯಕ ನಿರ್ದೇಶಕರು – ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ದೈಹಿಕ ನಿರ್ದೇಶಕರು   -ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
 • ಘಟಕ ವೆಚ್ಚ:
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಯುವ ಶಕ್ತಿ  ಕೇಂದ್ರವನ್ನು ರೂ. 15.00 ಲಕ್ಷಗಳ ವೆಚ್ಚದಲ್ಲಿ ಆರಂಭಿಸಲಾಗುವುದು.
 • ಫಲಿತಾಂಶಗಳು
 • ಯುವಜನರಲ್ಲಿ ಆರೋಗ್ಯದ ಕುರಿತು ಹೆಚ್ಚಿನ ಅರಿವು.
 • ಯುವಜನರು ಮನೋ-ದೈಹಿಕ ಆರೋಗ್ಯದಲ್ಲಿ ವೃದ್ಧಿ.
 • ಯುವ ಮಹಿಲೆಯರ ಆತ್ಮವಿಶ್ವಾಸದಲ್ಲಿ ಹೆಚ್ಚಳ
 • ಬಿಡುವಿನ ವೇಳೆಯಲ್ಲಿ ಯುವಜನರು ಒಂದೆಡೆ ಸೇರಿ ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಅವಕಾಶ
 • ಯುವಜನರಿಂದ ದೈಹಿಕ ಚಟುವಟಿಕೆ ಮತ್ತು ಆಟೋಟಗಳಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆ.
 • ಯುವಜನರನ್ನು ಮಾದಕ ವ್ಯಸನಗಳಿಂದ ಮತ್ತು ಸಮಾಜ-ವಿರೋಧಿ ಚಟುವಟಿಕೆಗಳಿಂದ ದೂರವಿರಿಸಲು ಸಹಾಕರಿ.
 • ಯುವಜನರು ಕಾರ್ಯಕ್ಷಮತೆಯಲ್ಲಿ ಗಣನೀಯ ವೃದ್ಧಿ.
 • ಆರೋಗ್ಯವಂತ ಕುಟುಂಬ/ಸಮಾಜ ನಿರ್ಮಾಣದಲ್ಲಿ ಯುವಜನರು ಹೆಚ್ಚಿನ ಪಾಲ್ಗೊಳ್ಳುವಿಕೆ.

ವೃತ್ತಿ ಕೌಶಲ್ಯ

ಪರಿಚಯ

2011 ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ 6.133 ಕೋಟಿ. 16-30 ವಯೋಮಿತಿಯ ಯುವಜನರು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 30 (1.86 ಕೋಟಿ) ರಷ್ಟಿದ್ದಾರೆ. 16-30 ವರ್ಷದೊಳಗಿನ ಯುವಜನರನ್ನು ಒಳಗೊಂಡ ಕಾರ್ಯಪಡೆಯನ್ನು ಹೊಂದಿದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ.ಸರಿಸುಮಾರು 128 ಲಕ್ಷ ಯುವ ಉದ್ಯೋಗಿಗಳು ವಾರ್ಷಿಕವಾಗಿ ರಾಷ್ಟ್ರದ ಉದ್ಯೋಗ ಪಡೆಯನ್ನು ಪ್ರವೇಶಿಸುತ್ತಿದ್ದಾರೆ. ಆದರೆ ಯುವಜನರಿಗೆ ಭಾರತದಲ್ಲಿ ತರಬೇತಿ ನೀಡಬಲ್ಲ ಸಾಮಥ್ರ್ಯ ಇರುವುದು ಕೇವಲ 31 ಲಕ್ಷ ಯುವಜನರಿಗೆ ಮಾತ್ರ. ಒಟ್ಟು ಜನಸಂಖ್ಯೆಯ ಪ್ರಮುಖ ಭಾಗವಾದ ಈ ಯುವಜನಾಂಗಕ್ಕೆ ಸರ್ಕಾರವು ಆಪ್ತಸಮಾಲೋಚನೆ, ಮಾರ್ಗದರ್ಶನ, ಸಾಮಾರ್ಥ್ಯಾಭಿವೃದ್ಧಿ, ಆರೋಗ್ಯ, ಉದ್ಯೋಗ, ಶಿಕ್ಷಣ ಮತ್ತು ಪೌಷ್ಟಿಕತೆ ಇತ್ಯಾದಿ ವಿಷಯಗಳ ಕುರಿತು ಸರಿಯಾದ ಮತ್ತು ಸೂಕ್ತವಾದ ತರಬೇತಿ ನೀಡುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಯುವಜನರ ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತುರ್ತು ಸಬಲೀಕರಣದ ಅಗತ್ಯಗಳನ್ನು ಹಾಗೂ ರಾಜ್ಯದ ಮತ್ತು ಯುವಜನರ ಸಮಗ್ರ ಅಭಿವೃದ್ಧಿಯ ಅಗತ್ಯವನ್ನು ಸೂಚಿಸುತ್ತಿವೆ. ಒಂದು ವೇಳೆ ಸರ್ಕಾರವು ಈ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡದಿದ್ದಲ್ಲಿ ರಾಜ್ಯವು ಹೊಂದಿರುವ ಸೀಮಿತ ಸಂಪನ್ಮೂಲಗಳ ಹಾಗೂ ಸಮಾಜದ ಮೇಲೆ ದೊಡ್ಡ ಹೊರೆ ಬೀಳಲಿದೆ. ಈ ಅಂಶವನ್ನು ಕೆಳಗಿನಂತೆ ಸಾಂಕೇತಿಕವಾಗಿ ವಿವರಿಸಬಹುದಾಗಿದೆ.

ಅವಕಾಶ ವಂಚಿತತೆ >

ನಿರುದ್ಯೋಗಿ ಯುವಜನರು >

ಅನುತ್ಪಾದಕ ಉದ್ಯೋಗಪಡೆ ಮತ್ತು ಸಮಾಜದ ಮೇಲೆ ಹೊರೆ >

ಸಮಾಜವಿರೋಧಿ ಮತ್ತು ಅಪರಾಧ ಚಟುವಟಿಕೆಯಲ್ಲಿ ಯುವಜನರು ಭಾಗಿ >

ಕಲ್ಯಾಣ ಕಾರ್ಯಕ್ರಮಗಳಿಗೆ ಮತ್ತು ಅಪರಾದ ತಡೆಯಲು ಸಕರ್ಾರಕ್ಕೆ ಹೆಚ್ಚಿನ ವೆಚ್ಚ (ಪೋಲೀಸರ ಹೆಚ್ಚಳ ಮತ್ತು ಪೋಲಿಸ್ ಠಾಣೆಗಳ ಸ್ಥಾಪನೆ, ಪುನರ್ವಸತಿ ಕೇಂದ್ರಗಳ ಸ್ಥಾಪನೆ, ಪಿಂಚಣಿಯಂತ ಯೋಗಕ್ಷೇಮ ಕಾರ್ಯಕ್ರಮಗಳು ಇತ್ಯಾದಿ)

ಈ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ಚಟುವಟಿಕೆಗಳ ಮೇಲೆ ಹೆಚ್ಚಿನ ಒತ್ತು ನೀಡುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಆದ್ದರಿಂದ ಯುವನೀತಿಯು, ಯುವಜನರ >ಸಬಲೀಕರಣಕ್ಕೆ ಜೀವನ ಕೌಶಲ್ಯಗಳು, ವೃತ್ತಿ ಕೌಶಲ್ಯಗಳು ಮತ್ತು ಉದ್ಯಮಶೀಲತಾ ಕೌಶಲ್ಯ ತರಬೇತಿಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದೆ.

ಉದ್ದೇಶಗಳು

 • ಸ್ವ-ಉದ್ಯೋಗಿಗಳಾಗಿ, ಉದ್ಯೋಗಕ್ಕೆ ಅನುಗುಣವಾದ ಕೌಶಲ್ಯಗಳಲ್ಲಿ ಸಮರ್ಥರಾಗಿ, ಉದ್ಯಮಿಗಳಾಗಿ ಗರಿಷ್ಟ ಸಂಖ್ಯೆಯ ಯುವಜನರನ್ನು ಸಬಲೀಕರಿಸುವುದು ಮತ್ತು ಸಕ್ರಿಯಗೊಳಿಸುವುದು.
 • ಯುವಜನರು ತಮ್ಮ ಅಂತರ್ಗತ ಮತ್ತು ಅನನ್ಯ ಸಾಮಥ್ರ್ಯಗಳನ್ನು ಅನ್ವೇಷಿಸಲು ಮತ್ತು ಸಕಾರಾತ್ಮಕವಾಗಿ ಸಮಾಜಕ್ಕೆ ಕೊಡುಗೆ ನೀಡುವಂತೆ ಉತ್ತೇಜಿಸುವುದು.
 • ಸ್ಥಳೀಯ ಪ್ರತಿಭೆಗಳನ್ನು ಆರ್ಥಿಕವಾಗಿ ಸಬಲೀಕರಿಸುವುದು (ಮತ್ತು ಇತರರಿಗೆ ಉದ್ಯೋಗ ಅವಕಾಶವನ್ನು ಸೃಷ್ಟಿಕರ್ತರಾಗಲು)

ವೃತ್ತಿ ಆಧಾರಿತ ತರಬೇತಿ ಕಾರ್ಯಕ್ರಮ<

 • ಯೋಜನೆಯ ಭಾಗವಾಗಿ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾರ್ಮಿಕರ ಇಲಾಖೆ ಮತ್ತು ಎನ್.ಆರ್.ಎಲ್.ಎಂ. (ರಾಷ್ಟ್ರೀಯ ಗ್ರಾಮೀಣ ಲೈವ್ಲಿಹುಡ್ ಮಿಷನ್) ಹಾಗೂ ಪ್ರಸ್ತುತ ಸಕರ್ಾರದ ಇತರೆ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳ ಮಾಹಿತಿಯನ್ನು ಸಂಯೋಜಿತ ರೀತಿಯಲ್ಲಿ ಯುವಜನರಿಗೆ ನೀಡಲಾಗುವುದು.
 • ಉದ್ಯಮಶೀಲತಾ ಪ್ರಚೋದನೆ ಪ್ರಾರಂಭಿಸುವುದು- ಉದ್ಯಮಶೀಲತೆಯಲ್ಲಿ ಆಸಕ್ತಿ ಇರುವ ಮತ್ತು ಹೊಸ ಆಲೋಚನೆಗಳುಳ್ಳ ಯುವಜನರಿಗೆ ಮಾರ್ಗದರ್ಶನ ನೀಡುವುದು, ಅವರು ತಮ್ಮ ಉದ್ಯಮವನ್ನು ಪ್ರಾರಂಭಿಸಲು ಯೋಜನೆಯ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಮತ್ತು ಪ್ರಾರಂಭದಲ್ಲಿ ಅಗತ್ಯವಾದ ಸಂಭವನೀಯ ಬಂಡವಾಳ ಹೂಡಿಕೆದಾರರನ್ನು/ಸಂಸ್ಥೆಗಳ ಮಾಹಿತಿ ನೀಡುವುದು.
 • ಯುವ ಉದ್ಯಮಿಗಳ ಪ್ರೋತ್ಸಾಹಕ್ಕಾಗಿ ಮತ್ತು ತಜ್ಞರೊಂದಿಗೆ ಮತ್ತು ಸಮಾನ ಮನಸ್ಕರೊಂದಿಗೆ ಚರ್ಚಿಸಲು ವೇದಿಕೆ ಕಲ್ಪಿಸುವುದು.
 • ಉದಯೋನ್ಮುಖ ಯುವ ಉದ್ದಿಮೆದಾರರನ್ನು ಗುರುತಿಸಲು ಒಂದು ಸಂಶೋಧನಾ ತಂಡವನ್ನು ರಚಿಸುವುದು ಮತ್ತು ಈ ತಂಡವು ನೀಡಿದ ವರದಿಯನ್ನು ಆಧರಿಸಿ ಸಬ್ಸಿಡಿ ರೂಪದಲ್ಲಿ ಆರ್ಥಿಕ ನೆರವನ್ನು ನೀಡುವುದು. ಈ ಸಂಶೋಧನೆಯ ವರದಿಯ ಆಧಾರದ ಮೇಲೆ ನವೀನ ಯೋಜನೆಗಳನ್ನು ಸಹ ಕೈಗೊಳ್ಳಲಾಗುವುದು

ಬುನಾದಿ ತರಬೇತಿ ಮತ್ತು ಪುನರಾವಲೋಕನ ತರಬೇತಿಗಳು

 • ಸಮರ್ಥ ತರಬೇತುದಾರರನ್ನು ನಿರಂತರವಾಗಿ ತರಬೇತಿ ನೀಡಲು ಹಿರಿಯ/ತಜ್ಞ ತರಬೇತುದಾರರನ್ನು ನಿಯಮಾನುಸಾರ ಗುರುತಿಸುವುದು ಮತ್ತು ಪಟ್ಟಿಮಾಡುವುದು.
 • ತರಬೇತಿ ಶಿಬಿರಗಳು – ಸಮರ್ಥ ಯುವಜನರನ್ನು ತರಬೇತುದಾರರಾಗಲು ತರಬೇತಿ ನೀಡುವುದು.

ಸಮರ್ಥ ತರಬೇತುದಾರರ ನಿರ್ವಹಣೆಯ ವಿಮರ್ಶೆ, ಮೌಲ್ಯಮಾಪನ ಮತ್ತು ಪ್ರಮಾಣೀಕರಣ

 • ನಿರಂತರ ತರಬೇತಿ ಮತ್ತು ಓರಿಂಯಟೇಷನ್ಗಾಗಿ ವೇಳಾಪಟ್ಟಿ ಸಿದ್ದಪಡಿಸುವುದು, ಈ ಕಲಿಕೆಯ ಅವಕಾಶವನ್ನು ವರ್ಷಾದ್ಯಂತ ನೀಡುವುದು.
 • ಒಟ್ಟಾರೆ ಸಾಧನೆಯನ್ನು ಪರಿಶೀಲಿಸಿ ಶ್ರೇಣಿಯನ್ನು ನೀಡುವುದು.
 • ದೃಢವಾದ ದತ್ತಾಂಶಕೋಷ ರಚಿಸುವುದು:

ಫಲಶೃತಿ

 • ಆತ್ಮವಿಶ್ವಾಸ ತುಂಬಿದ ಯುವಜನರು- ಅಪರಾಧ ಚಟುವಟಿಕೆಗಳಲ್ಲಿ, ಆತ್ಮಹತ್ಯೆ ಮತ್ತು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಯುವಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.
 • ಅಪಾಯದ ಅಂಚಿನಲ್ಲಿರುವ ಯುವಜನರ ಮನೋಭಾವ ಮತ್ತು ವರ್ತನೆಯಲ್ಲಿ ದೀರ್ಘಕಾಲಿಕವಾದ ಸಕಾರಾತ್ಮಕವಾದ ಬದಲಾವಣೆಯನ್ನು ಕಾಣುತ್ತದೆ.
 • ಯುವಜನರು ಮತ್ತು ಅವರ ಕುಟುಂಬಗಳ ಜೀವನ ಗುಣಮಟ್ಟ ಹೆಚ್ಚಳವಾಗುತ್ತದೆ.
 • ಕೌಶಲ್ಯ ತರಬೇತುದಾರರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ.
 • >ಯುವ ಮಹಿಳೆಯರನ್ನು ತಲುಪುವ ಮತ್ತು ಅವರು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯಲ್ಲಿ ಹೆಚ್ಚಳವಾಗುತ್ತದೆ.
 • ಉದಯೋನ್ಮುಖ ಯುವ ಉದ್ಯಮಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ.
 • ಯುವಜನರಲ್ಲಿ ಉದ್ಯೋಗ ಪಡೆ ಸಾಮಥ್ರ್ಯದಲ್ಲಿ ಹೆಚ್ಚಳ
ಛಾಯಾಚಿತ್ರಣ ತರಬೇತಿ Photography Training
ವೀಡಿಯೋ ಚಿತ್ರಣ ತರಬೇತಿ Videography Training
ಬ್ಯೂಟೀಷಿಯನ್ ತರಬೇತಿ Beautician Training
ಅಭಿನಯ ತರಬೇತಿ Acting Course
ನಿರೂಪಣೆ ಮತ್ತು ವಾರ್ತಾ ವಾಚಕರ ತರಬೇತಿ Anchoring and News Reading
ಕರಕುಶಲ ತರಬೇತಿ
ಡಿ.ಟಿ.ಪಿ ತರಬೇತಿ DTP Training
ಫೈನಾನ್ಸ್ ಮತ್ತು ಅಕೌಂಟಿಂಗ್ ತರಬೇತಿ Finance and accounting
ಮಾಹಿತಿ ಭದ್ರತೆ ಮತ್ತು ಸುರಕ್ಷಿತ ಕೋಡಿಂಗ್ ತರಬೇತಿ Information Security and Secure Coding
ಮೊಬೈಲ್ ದುರಸ್ತಿ ತರಬೇತಿ Mobile Repair Training

ಜೇತನಾ

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯನ್ನು ಕರ್ನಾಟಕ ಸಕಾðರವು 1989ರಲ್ಲಿ >ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಸ್ಥಾಪಿಸಲಾಗಿದೆ. ರಾಜ್ಯಾದಂತ ಸಾಹಸ ಚಟುವಟಿಕೆಗಳನ್ನು ನಡೆಸಲು ಇಲಾಖೆಯಿಂದ ಅನುದಾನ ನೀಡಲಾಹುತ್ತದೆ. ಯುವಜನರಿಗೆ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಒದಗಿಸುವ ಮೂಲಕ ಅವರಲ್ಲಿ ಸಾಹಸ ಪ್ರಿಯತೆ ಬೆಳೆಸುವುದು ಮತ್ತು ಅವರ ಆತ್ಮವುಶ್ವಾಸವನ್ನು ಹೆಚ್ಚಿಸುವುದು ಅಕಾಡೆಮಿಯ ಮುಖ್ಯ ಧ್ಯೇಯೋದ್ದೇಶವಾಗಿದೆ. ಆನರಲ್ ತಿಮ್ಮಯ ರಾಷ್ಟೀಯ ಸಾಹಸ ಅಕಾಡೆಮಿಯ ವತಿಯಿಂದ 2013-14ನೇ ಸಾಲ್ಲಿನಲ್ಲಿ ಸಾಹಸ ಕ್ರೀಡಾ ಕಾರ್ಯಕ್ರಮಾಗಳಾದ ಭೂ, ಜಲ, ಹಾಗೂ ವಾಯುಸಾಹಸ ಶಿಬಿರಗಳನ್ನು ಏರ್ಪಡಿಸಲಾಗಿದೆ. ರಾಕ್ ಕ್ಲೈಂಬಿಂಗ್ ತರಬೇತಿ- ಓರಿಯೇಂಟೇಷನ್, ಬೇಸಿಕ್ ಹಾಗೂ ಅಡ್ವಾನ್ಸ್, ಕೃತಕಗೋಡೆ ತರಬೇತಿ ಹಾಗೂ ಸ್ಪಧೆðಗಳು, ವಾರಾಂತ್ಯ ಶಿಬಿರಹಳು, ಟ್ರೆಕ್ಕಿಂಗ್, ರ್ಯಾಪ್ಲಿಂಗ್, ಪ್ಯಾರಾಸೈಲಿಂಗ್, ಕಯಾಕಿಂಗ್, ವಿಂಡ್ ಸಫಿಂಗ್, ಜೆಟ್ಸ್ಕಿ, ಮೋಟಾರ್ ಬೋಟ್ ಮತ್ತು ಪ್ರಕೃತಿ ಅಧ್ಯಯನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು ಅವುಗಳ ವಿವರಗಳು ಕೆಳಕಂಡಂತಿವೆ.

2013 ಏಕಲವ್ಯ ಪ್ರಶಸ್ತಿ ವಿಜೇತರು

ಕ್ರ.ಸಂಖ್ಯೆ

ಹೆಸರು

ಕ್ರೀಡೆ

ಸ್ಥಳ

1

ಅರ್ಶದ್ ಎಂ.

ಅಥ್ಲೆಟಿಕ್ಸ್

ಬೆಂಗಳೂರು

2

ಡಿ.ಗುರುಪ್ರಸಾದ್

ಷಟಲ್ ಬ್ಯಾಡ್ಮ್ಂಟನ್

ಬೆಂಗಳೂರು

3

ನವನೀತ ಪಿ.ಯು

ಬಾಸ್ಕೆಟ್ ಬಾಲ್

ಕೊಡಗು

4

ಶೇಧನ್ ಕುಮಾರ್ ರೈ

ದೇಹದಾರ್ಢ್ಯ

ಬೆಂಗಳೂರು

5

ಯಶಸ್.ಡಿ

ಚೆಸ್

ಬೆಂಗಳೂರು

6

ಲೋಕೇಶ್. ಎನ್

ಸೈಕ್ಲಿಂಗ್

ಕೆ.ಆರ್.ನಗರ

7

ವಿಶಾಲ್ ಕುಮಾರ್. ಆರ್.

ಫುಟ್ ಬಾಲ್

ಬೆಂಗಳೂರು

8

ಸೋಮಣ್ಣ.ಕೆ.ಎಂ

ಹಾಕಿ

ಬೆಂಗಳೂರು

9

ನಿಕ್ಷೇಪ್ ಬಿ.ಆರ್.

ಟೆನ್ನಿಸ್

ಬೆಂಗಳೂರು

10

ಆನಂದ್ ಕುಮಾರ್.ಬಿ

ಬ್ಯಾಡ್ಮ್ಂಟನ್

ಬೆಂಗಳೂರು

11

ಅಕ್ಷತ ಪೂಜಾರ್ತಿ

ಪವರ್ ಲಿಫ್ಟಿಂಗ್

ಉಡುಪಿ

12

ಪ್ರಕಾಶ್ ಪಿ.ಎನ್.

ರೈಫಲ್ ಶೂಟಿಂಗ್

ಬೆಂಗಳೂರು

13

ಅಶ್ವಿನ್ ಮೆನನ್

ಈಜು

ಬೆಂಗಳೂರು

14

ಸನೋಜ್ ವಿ.ಆರ್

ವಾಲಿಬಾಲ್

ಬೆಂಗಳೂರು

15

ಪ್ರೇಮ ಹುಚ್ಚಣ್ಣವರ್

ಕುಸ್ತಿ

ಗದಗ

2013 ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತರು

ಕ್ರ.ಸಂಖ್ಯೆ

ಹೆಸರು

ಕ್ರೀಡೆ

ಸ್ಥಳ

1

ಸಂತೋಶ್ ನಾಯಕ್

ಆಟ್ಯಾ-ಪಾಟ್ಯಾ

ಗದಗ

2

ಶೃತಿ ಎ.ಆರ್.

ಬಾಲ್ ಬ್ಯಾಡ್ಮ್ಂಟನ್

ಬೆಂಗಳೂರು

3

ಕುಮಾರ್ ಎಸ್. ಜಗದೇವ

ಗುಂಡು ಎತ್ತುವುದು

ಬೆಳಗಾವಿ

4

ವಿನಯ್ ಕುಮಾರ್ ಕೆ.ಹೆಚ್.

ಖೋ-ಖೋ

ಬೆಂಗಳೂರು

5

ಮಾರುತಿ ವೈ ಬರಕೇರ್

ಮಲ್ಲಕಂಬ

ಬಾಗಲಕೋಟೆ

6

ಐಶ್ವರ್ಯ ಎಂ. ದಳವಿ

ಜಂಗಿ ಕುಸ್ತಿ

ಬೆಳಗಾವಿ

7

ಮೊಹಮದ್ ಆಕೀಬ್

ಥ್ರೋಬಾಲ್

ಚಿಕ್ಕಬಳ್ಳಾಪುರ

8

ಪಲಿಮಾರು ದೇವೇಂದ್ರ ಕೊಟ್ಯಾನ್

ಕಂಬಳ

ಉಡುಪಿ

9

ಗೋಪಾಲ್ ಖಾರ್ವಿ

ಈಜು

ಉಡುಪಿ

10

ನಾಗೇಂದ್ರ ಸ್ವಾಮಿ ಎಸ್.ಸಿ

ಈಜು

ತುಮಕೂರು

2013ರ ಜೀವಮಾನ ಸಾಧನೆ ಪ್ರಶಸ್ತಿ ವಿಜೇತರು

ಕ್ರ.ಸಂಖ್ಯೆ

ಹೆಸರು

ಕ್ರೀಡೆ

ಸ್ಥಳ

1

ಗಣಪತಿ ಮನೋಹರನ್

ಬಾಕ್ಸಿಂಗ್

ಬೆಂಗಳೂರು

2

ಮೊಹಮ್ಮದ್ ದಾದಾಪೀರ್

ಫುಟ್ ಬಾಲ್

ಬೆಂಗಳೂರು

3

ಸುಮಿತ್ರ ಕುಮಾರ್. ಎಂ.

ದೇಹದಾರ್ಢ್ಯ

ಮಂಗಳೂರು

4

ಮಣಿ

ಕಬಡ್ಡಿ

ಬೆಂಗಳೂರು

ಸಹಾಯವಾಣಿ

ಕರ್ನಾಟಕದ ಯುವಜನರಿಗೆ ಮತ್ತು ಕ್ರೀಡಾ ಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅತೀ ಶೀಗ್ರರದಲ್ಲಿ 24*7 ಸ್ವಯಂಚಾಲಿತ ಸಹಾಯವಣಿಯನ್ನು ಸಿದ್ದಪಡಿಸಲಾಗುತ್ತಿದೆ.

‘ತಂತ್ರಜ್ಷಾನವನ್ನು ಕರ್ನಾಟಕದ ಯುವಜನರ ಮನೆಯ ಬಾಗಿಲಿಗೆ ತರಲಾಗುವುದು‘

ಕರ್ನಾಟಕದ ಯುವಜನರಿಗೆ ಮತ್ತು ಕ್ರೀಡಾ ಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನುಪಡೆಯಲು ಕೇಂದ್ರ ಕಛೇರಿಯ ಕೆಳಕಾಣಿಸಿದ  ವಿಳಾಸವನ್ನು ಅಥವಾ ಜಿಲ್ಲಾ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯ 
ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, 
ಬೆಂಗಳೂರು – 560001 ದೂರವಾಣಿ: 080-22213009 / 22215601

ಮೂಲ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

3.03333333333
ಪೂರ್ಣಿಮಾ Jun 09, 2017 06:54 PM

ಸರ್ , ನಾನು ಕ್ರಿಕೆಟ್ ಪ್ಲೇಯೆರ್ ಆಗಬೇಕು , ಅಕಾಡೆಮಿಗೆ ಸೇರಲು 30000 ಸಾವಿರರೂಪಾಯಿಗಳು ಕೇಳುತಿಧಾರೆ ಧಯಮಾಡಿ ಸಹಾಯ ಮಾಡಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top